Feedback / Suggestions


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/04/2021

ಕೊಡೇಕಲ್ ಪೊಲೀಸ್ ಠಾಣೆ :- 28/2021 ಕಲಂ: 143, 323, 504, 506, 498(ಎ) ಸಂಗಡ 149 ಐ.ಪಿ.ಸಿ : ಇಂದು ದಿನಾಂಕ :21.04.2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿಯರ್ಾದಿ ಶ್ರೀಮತಿ ದೇವಮ್ಮ ಗಂಡ ಯಲ್ಲಪ್ಪ ರಾಯಗೌಡರ ವ||30 ವರ್ಷ ಉ||ಮನೆಗೆಲಸ ಜಾ||ಹಿಂದೂ ಬೇಡರ ಸಾ||ಜುಮ್ಮಲಪೂರ ತಾ||ಹುಣಸಗಿ ಜಿ||ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ಸಾಬವ್ವ, ನಾನು, ರೇಣುಕಾ, ಭೀಮನಗೌಡ, ಸಂಜೀವಗೌಡ ಅಂತ ಹೆಸರಿನ ಐದು ಜನ ಮಕ್ಕಳಿದ್ದು ನನ್ನದು ಮತ್ತು ನನ್ನ ಅಕ್ಕನಾದ ಸಾಬವ್ವ ಇವರದು ಮದುವೆಯಾಗಿದ್ದು, ಉಳಿದವರದು ಇನ್ನೂ ಮದುವೆಯಾಗಿರುವದಿಲ್ಲ. ನಮ್ಮ ತಂದೆ ತಾಯಿಯವರು ನನಗೆ ಈಗ 8-9 ವರ್ಷಗಳ ಹಿಂದೆ ಹುಣಸಗಿ ತಾಲೂಕಿನ ಜುಮ್ಮಲಪೂರ ಗ್ರಾಮದ ಯಲ್ಲಪ್ಪ ತಂದೆ ಹಣಮಂತ್ರಾಯ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಮದುವೆಯು ನಮ್ಮ ಧರ್ಮದ ಸಂಪ್ರದಾಯದಂತೆ ಕೊಡೆಕಲ್ಲ ಗ್ರಾಮದ ಪ್ಯಾಟಿ ಬಸವೇಶ್ವರ ದೇವರ ದೇವಸ್ಥಾನದಲ್ಲಿ ಆಗಿದ್ದು, ಮದುವೆ ಕಾಲಕ್ಕೆ ನಮ್ಮ ತಂದೆ ತಾಯಿ ಹಾಗೂ ನಮ್ಮ ಸಂಬಂಧಿಕರಾದ ದುರಗಣ್ಣ ತಂದೆ ನಿಂಗಪ್ಪ ಬಿರಾದಾರ, ನಾನಾಗೌಡ ತಂದೆ ಬಸನಗೌಡ ಕೋಟೆಗುಡ್ಡ, ಈರನಗೌಡ ತಂದೆ ಸಿದ್ದರಾಯಗೌಡ ಪೊಲೀಸಗೌಡರ, ಬಸಣ್ಣ ತಂದೆ ಕನಕಪ್ಪ ಕಲ್ಲದೇವನಹಳ್ಳಿ, ನಿಂಗಪ್ಪ ತಂದೆ ಭೀಮಶಾ ಹಾಲಬಾವಿ ಇವರು ಹಾಗೂ ಬನ್ನೆಟ್ಟಿ ಗ್ರಾಮದ ಮತ್ತು ಕೋಟೆಗುಡ್ಡ ಗ್ರಾಮದ ಇತರರು ಮತ್ತು ಜುಮ್ಮಲಪೂರ ಗ್ರಾಮದ ನನ್ನ ಅತ್ತೆ ಮಾವ ಹಾಗೂ ಅವರ ಸಂಬಂಧಿಕರ ಸಮಕ್ಷಮದಲ್ಲಿ ಆಗಿದ್ದು, ಮದುವೆಯಾದ ನಂತರ ನಾನು ತವರು ಮನೆಯಿಂದ ಗಂಡನ ಮನೆಗೆ ನಡೆಯಲಿಕ್ಕೆ ಬಂದಿದ್ದು ಎರಡು-ಮೂರು ವರ್ಷಗಳವರೆಗೆ ನನ್ನ ಗಂಡನ ಮನೆಯಲ್ಲಿ ನನಗೆ ನನ್ನ ಗಂಡ ಯಲ್ಲಪ್ಪ, ಅತ್ತೆ ಯಲ್ಲಮ್ಮ, ಮಾವ ಹಣಮಂತ್ರಾಯ ಹಾಗೂ ನನ್ನ ಗಂಡನ ತಮ್ಮಂದಿರಾದ ರಾಯಗೌಡ, ಬಸಣ್ಣ ರವರು ಒಳ್ಳೆಯ ರೀತಿಯಿಂದ ನಡೆಸಿಕೊಂಡಿದ್ದು ನಮ್ಮ ದಾಂಪತ್ಯದಿಂದ ನನಗೆ ಇನ್ನೂ ಮಕ್ಕಳು ಆಗಿರುವದಿಲ್ಲ. ನಂತರ ಈಗ ಸುಮಾರು 6-7 ವರ್ಷಗಳಿಂದ ನನ್ನ ಗಂಡನಾದ ಯಲ್ಲಪ್ಪನು ತನ್ನ ತಂದೆ ಹಣಮಂತ್ರಾಯ, ತಾಯಿ ಯಲ್ಲಮ್ಮ, ಹಾಗೂ ನಾದಿನಿ ಯಲ್ಲಮ್ಮ ಗಂಡ ಬಲವಪ್ಪ ಮತ್ತು ಆಕೆಯ ಗಂಡನಾದ ಬಲವಪ್ಪ ತಂದೆ ಛತ್ರಪ್ಪಗೌಡ ಇವರ ಮಾತನ್ನು ಕೇಳಿ ನನಗೆ ವಿನಾಕಾರಣ ಬೈಯುವದು ಹೊಡೆಬಡೆ ಮಾಡುವದು ಮತ್ತು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ಸೂಳೆ ನೀನು ನನಗೆ ಎಷ್ಟು ದಿವಸಗಳಿಂದ ನನ್ನ ಪಾಲಿಗೆ ಮುಲಾಗಿದ್ದಿ ನೀನು ಬಂಜೆ ಇದ್ದಿ ನಿನಗೆ ಮಕ್ಕಾಳಾಗಿಲ್ಲ ಅಂತ ಬೈಯುವದು ಹೀಯಾಳಿಸುವದು ಮಾಡುತ್ತಾ ಬಂದಿದ್ದು ಆದರೂ ಕೂಡಾ ನಾನು ಇಂದಲ್ಲ ನಾಳೆ ನನ್ನ ಗಂಡನು ಸರಿ ಹೊಂದುತ್ತಾನೆ ನನ್ನ ಸಂಸಾರದಲ್ಲಿ ಒಳ್ಳೆಯದಾಗುತ್ತದೆ ಅಂತ ತಿಳಿದುಕೊಂಡು ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸದೆ ತಾಳಿಕೊಂಡು ಬಂದಿದ್ದು ಇದ್ದು, ಈಗ 7-8 ತಿಂಗಳುಗಳಿಂದ ಮತ್ತೆ ನನಗೆ ನನ್ನ ಗಂಡನು ಅತಿಯಾಗಿ ತನ್ನ ತಂದೆ, ತಾಯಿ, ಅಕ್ಕ ಯಲ್ಲಮ್ಮ, ಭಾವ ಬಲವಪ್ಪ ಮಾತನ್ನು ಕೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡ ಹತ್ತಿದ್ದು ಆಗ ನಾನು ನನ್ನ ತಂದೆ ತಾಯಿಯವರಿಗೆ ಈ ವಿಷಯವನ್ನು ತಿಳಿಸಿದಾಗ ನನ್ನ ತಂದೆ ನಿಂಗನಗೌಡ, ತಾಯಿ ಶಾಂತಮ್ಮ ರವರು ಮದುವೆ ಕಾಲಕ್ಕೆ ಮಾತುಕತೆ ಆಡಿದ ನಮ್ಮ ಸಂಬಂಧಿಕರಾದ ದುರಗಣ್ಣ ತಂದೆ ನಿಂಗಪ್ಪ ಬಿರಾದಾರ, ನಾನಾಗೌಡ ತಂದೆ ಬಸನಗೌಡ ಕೋಟೆಗುಡ್ಡ, ಈರನಗೌಡ ತಂದೆ ಸಿದ್ದರಾಯಗೌಡ ಪೊಲೀಸಗೌಡರ, ಬಸಣ್ಣ ತಂದೆ ಕನಕಪ್ಪ ಕಲ್ಲದೇವನಹಳ್ಳಿ, ನಿಂಗಪ್ಪ ತಂದೆ ಭೀಮಶಾ ಹಾಲಬಾವಿ ರವರಿಗೆ ಕರೆದುಕೊಂಡು ನನ್ನ ಗಂಡನ ಮನೆಗೆ ಬಂದು ಜುಮ್ಮಲಪೂರ ಗ್ರಾಮದ ಬಸವರಾಜ ತಂದೆ ನಿಂಗಣ್ಣ ಹಾಲಭಾವಿ, ಹಾಗೂ ಹಿರಿಯರಿಗೆೆ ಕರೆಯಿಸಿ ಇವರ ಸಮಕ್ಷಮದಲ್ಲಿ ನನ್ನ ಗಂಡನಿಗೆ ನಮ್ಮ ಅತ್ತೆ ಮಾವ ಹಾಗೂ ನನ್ನ ಗಂಡನ ಅಕ್ಕನಾದ ಯಲ್ಲಮ್ಮ ಮತ್ತು ಆಕೆಯ ಗಂಡನಾದ ಬಲವಪ್ಪ ರವರಿಗೆ ಬುದ್ದಿಮಾತು ಹೇಳಿ ನನ್ನೊಂದಿಗೆ ಸರಿಯಾಗಿ ಇರುವಂತೆ ತಿಳುವಳಿಕೆ ನೀಡಿ ಹೋಗಿದ್ದು ನಂತರ 5-6 ತಿಂಗಳುಗಳ ವರೆಗೆ ಎಲ್ಲರೂ ನನಗೆ ಚೆನ್ನಾಗಿ ನೋಡಿಕೊಂಡಿದ್ದು ಮತ್ತೆ ಅವರೆಲ್ಲರೂ ನನಗೆ ಈಗ 15-20 ದಿವಸಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುವದನ್ನು ಮುಂದುವರೆಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ 17.04.2021 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನಾನು ಜುಮ್ಮಲಪೂರ ಗ್ರಾಮದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ ಯಲ್ಲಪ್ಪ ತಂದೆ ಹಣಮಂತ್ರಾಯ ರಾಯಗೌಡರ ವಯ-40 ವರ್ಷ ಇತನು ತನ್ನ ತಂದೆ ಹಣಮಂತ್ರಾಯ ತಾಯಿ ಯಲ್ಲಮ್ಮ ಹಾಗೂ ತನ್ನ ಅಕ್ಕನಾದ ಯಲ್ಲಮ್ಮ ಗಂಡ ಬಲವಪ್ಪ ಮಾಲಿಗೌಡರ ಹಾಗೂ ಆಕೆಯ ಗಂಡನಾದ ಬಲವಪ್ಪ ತಂದೆ ಛತ್ರಪ್ಪಗೌಡ ಮಾಲೀಗೌಡರ ಇವರ ಮಾತನ್ನು ಕೇಳಿ ನನಗೆ ಏ ಸೂಳೆ ರಂಡಿ, ಬಂಜೆ ನಾವು ನಿನಗೆ ಎಷ್ಟು ಬೈದರು ಮತ್ತು ಹೊಡೆಬಡೆ ಮಾಡಿದರೂ ತವರು ಮನೆಗೆ ಹೋಗದೆ ನಾಯಿ ಬಿದ್ದ ಹಾಗೆ ನಮ್ಮ ಮನೆಯಲ್ಲಿಯೇ ಉಳಿದಿದಿ ರಂಡಿ, ಬೊಸಡಿ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಅಂದವರೇ ನನ್ನ ಗಂಡ ಯಲ್ಲಪ್ಪನು ನನಗೆ ಕಾಲಿನಿಂದ ಹೊಟ್ಟೆಯ ಮೇಲೆ ಜಾಡಿಸಿ ಜೋರಾಗಿ ಒದ್ದಿದ್ದು ಹಾಗೂ ನಾನು ನೆಲಕ್ಕೆ ಬಿದ್ದಾಗ ನನ್ನ ಅತ್ತೆ ಯಲ್ಲಮ್ಮಳು ನನ್ನ ಬೆನ್ನಿನ ಮೇಲೆ, ಎದೆಯ ಮೇಲೆ, ಎಡಗೈ ರಟ್ಟೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು ಹಾಗೂ ನಾದಿನಿಯಾದ ಯಲ್ಲಮ್ಮ ಗಂಡ ಬಲವಪ್ಪ ಇವಳು ಕೈಯಿಂದ ನನ್ನ ಎಡಗಣ್ಣಿನ ಮೇಲೆ ಎಡಕಪಾಳದ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನಾನು ಎದ್ದು ಮನೆಯ ಮುಂದೆ ಕುಳಿತಾಗ ನನ್ನ ಮಾವ ಹಣಮಂತ್ರಾಯ ಹಾಗೂ ನನ್ನ ನಾದಿನಿಯ ಗಂಡನಾದ ಬಲವಪ್ಪ ತಂದೆ ಛತ್ರಪ್ಪಗೌಡ ರವರು ನನಗೆ ಈ ಸೂಳಿದು ಸೊಕ್ಕು ಬಾಳ ಆಗಿದೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಾಳೆ ಇವಳು ಇನ್ನೊಮ್ಮೆ ಸಿಕ್ಕಾಗ ಜೀವಂತ ಬಿಡುವದು ಬೇಡ ಅಂತ ಜೀವದ ಬೆದರಿಕೆ ಹಾಕಿ ಬಾಯಿಗೆ ಬಂದ ಹಾಗೆ ಒದರಾಡ ಹತ್ತಿದ್ದು ಆಗ ನಾನು ನನಗೆ ಉಳಿಸಿರಪ್ಪೊ ಅಂತ ಚೀರಾಡಲು ಆಗ ನಮ್ಮ ಮನೆಯ ಪಕ್ಕದ ರಸ್ತೆಯ ಮೇಲಿಂದ ಹೋಗುತ್ತಿದ್ದ ಬಸವರಾಜ ತಂದೆ ನಿಂಗಣ್ಣ ಹಾಲಭಾವಿ, ಲವ ತಂದೆ ಅಮರಪ್ಪ ಗಡ್ಡೆರ, ಕುಶ ತಂದೆ ಅಮರಪ್ಪ ಗಡ್ಡೆರ ರವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ನಂತರ ನನ್ನ ಗಂಡನು ನನಗೆ ಹೊಟ್ಟೆಯ ಮೇಲೆ ಒದ್ದಿದ್ದರಿಂದ ಮತ್ತು ನನ್ನ ಅತ್ತೆಯು ಬೆನ್ನಿನ ಮೇಲೆ ಎದೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದರಿಂದ ನನಗೆ ಬಹಳ ತ್ರಾಸ ಆಗುತ್ತಿದ್ದರಿಂದ ನೋಡಿ ಜಗಳ ಬಿಡಿಸಿದ ಬಸವರಾಜ ತಂದೆ ನಿಂಗಣ್ಣ ಹಾಲಭಾವಿ, ಲವ ತಂದೆ ಅಮರಪ್ಪ ಗಡ್ಡೆರ, ಕುಶ ತಂದೆ ಅಮರಪ್ಪ ಗಡ್ಡೆರ ರವರು ನನ್ನ ಗಂಡನಿಗೆ ನನ್ನನ್ನು ದವಾಖಾನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನನ್ನ ಗಂಡನು ನನಗೆ ಆ ದಿನ ರಾಜನಕೊಳುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಾನು ರಾಜನಕೊಳುರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವವರ ಪೋನನ್ನು ತೆಗೆದುಕೊಂಡು ನನ್ನ ತಂದೆ ಮತ್ತು ತಾಯಿಗೆ ನನಗೆ ನನ್ನ ಗಂಡ ಹಾಗೂ ಅತ್ತೆ ಮಾವ, ನಾದಿನಿ ಹಾಗೂ ನಾದಿನಿಯ ಗಂಡನು ಹೊಡೆಬಡೆ ಮಾಡಿದ ವಿಷಯ ತಿಳಿಸಿದ್ದು, ನನ್ನ ತಂದೆತಾಯಿಯವರು ಆಸ್ಪತ್ರೆಗೆ ಬಂದು ನನಗೆ ನೋಡಿ ಘಟನೆಯ ಬಗ್ಗೆ ವಿಚಾರಿಸಿದ್ದು ನಾನು ಅವರಿಗೆ ಮೇಲಿನಂತೆ ನಡೆದ ಘಟನೆಯನ್ನು ತಿಳಿಸಿದ್ದು ನಾನು ದಿನಾಂಕ 19.04.2021 ರವರೆಗೆ ರಾಜನಕೊಳುರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನನ್ನ ತಂದೆತಾಯಿಯವರು ನನಗೆ ತಮ್ಮ ಮನೆಗೆ ಬನ್ನೆಟ್ಟಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ನಾನು ಅಂದಿನಿಂದ ನನ್ನ ತವರು ಮನೆಯಲ್ಲಿಯೇ ಇದ್ದು ಇಲ್ಲಿಯವರೆಗೂ ನನ್ನ ಗಂಡ ಮತ್ತು ಅತ್ತೆ ಮಾವ ರವರು ಯಾರೂ ನನ್ನ ತವರೂರಿಗೆ ಬಂದು ನನಗೆ ಗಂಡನ ಮನೆಗೆ ಕರೆದುಕೊಂಡು ಹೋಗಿರುವದಿಲ್ಲ. ನಾನು ಇಂದಿನವರೆಗೆ ನನ್ನ ತಂದೆ ತಾಯಿ ಮತ್ತು ಸಂಬಂಧಿಕರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನಾನು ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ಬಂದಿದ್ದು ಈಗ ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ ಆದಕಾರಣ ನನಗೆ ವಿನಾಕಾರಣ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ನನ್ನ ಗಂಡ ಯಲ್ಲಪ್ಪ, ಅತ್ತಿ ಯಲ್ಲಮ್ಮ, ಮಾವ ಹಣಮಂತ್ರಾಯ, ನಾದಿನಿ ಯಲ್ಲಮ್ಮ ಗಂಡ ಬಲವಪ್ಪ ಹಾಗೂ ನಾದಿನಿಯ ಗಂಡನಾದ ಬಲವಪ್ಪ ತಂದೆ ಛತ್ರಪ್ಪಗೌಡ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.28/2021 ಕಲಂ: 143, 323, 504, 506, 498(ಎ) ಸಂಗಡ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ :- 89/2021. ಕಲಂ. 279. 337, 304 (ಎ) ಐ.ಪಿ.ಸಿ. 187 ಐ.ಎಮ್.ವಿ ಆಕ್ಟ : ಮಾನ್ಯರೇ, ಇಂದು ದಿನಾಂಕ: 21-04-2021 ರಂದು 11:30 ಎ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಸಂಗಮ್ಮ ಗಂಡ ಶಿವಪ್ಪ ದೇವಕರ್ ವಯ: 45 ವರ್ಷ ಜಾ: ಕುರುಬ ಉ: ಕೂಲಿಕೆಲಸ ಸಾ: ಹೊರಟೂರ ತಾ: ವಡಗೇರಾ ಜಿ: ಯಾದಗಿರಿ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿ ಏನಂದರೆ ನನ್ನ ಗಂಡನಾದ ಶಿವಪ್ಪ ತಂದೆ ನಿಂಗಪ್ಪ ದೇವಕರ್. ವಯ: 50 ವರ್ಷ ಈತನು ಇಂದು ದಿನಾಂಕ: 21-04-2021 ರಂದು ಮುಂಜಾನೆ 8:30 ಗಂಟೆ ಸುಮಾರಿಗೆ ನಮ್ಮೂರಿನಿಂದ ಎತ್ತು ಖರೀದಿಸುವ ಸಲುವಾಗಿ ನಮ್ಮ ಸಂಬಂಧಿಕರಾದ ಸಾಬಣ್ಣ ತಂದೆ ಮಲ್ಲಪ್ಪ ಸಗರ ವಯ: 30 ವರ್ಷ ಇವರೊಂದಿಗೆ ಸಾಬಣ್ಣನ ಮೊಟಾರ ಸೈಕಲ್ ನಂ. ಕೆ.ಎ. 33-ಎಲ್-5368 ನೇದ್ದರ ಮೇಲೆ ಶಹಾಪುರದ ದಿಗ್ಗಿಗೆ ಹೋಗಿ ಬರುತ್ತೇವೆಂದು ನಮಗೆ ಹೇಳಿ ಹೋದರು. ಸಾಬಣ್ಣನು ಮೊಟಾರ ಸೈಕಲ್ ನ್ನು ಚಲಾಯಿಸುತ್ತಿದ್ದನು. ನಂತರ 10:00 ಗಂಟೆ ಸುಮಾರಿಗೆ ಸಾಬಣ್ಣನು ನನ್ನ ಮಗನಾದ ಕುಮಲಪ್ಪನಿಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಾನು ಮತ್ತು ಮಾವನಾದ ಶಿವಪ್ಪ ಇಬ್ಬರೂ ಕೂಡಿ ಮುಂಜಾನೆ 9:30 ಗಂಟೆ ಸುಮಾರಿಗೆ ಶಹಾಪುರದ ಎಲ್.ಐ.ಸಿ. ಆಫೀಸ ಹತ್ತಿರದ ಪೆಟ್ರೋಲ ಬಂಕ ಮುಂದುಗಡೆ ಹೋಗುತ್ತಿದ್ದಾಗ ಎದುರಿನಿಂದ ಒಂದು ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಾಲಕನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೊಟಾರ ಸೈಕಲ್ ಗೆ ಡಿಕ್ಕಿಪಡಿಸಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದಾನೆ ಅವನನ್ನು ನೋಡಿದರೆ ಗುರುತಿಸುತ್ತೇನೆ ಹೆಸರು ಗೊತ್ತಾಗಿಲ್ಲ ಅದರಿಂದ ನಾನು ಸಿಡಿದು ದೂರ ಬಿದ್ದಿದ್ದು ಮಾವನಾದ ಶಿವಪ್ಪನ ಎದೆಯ ಮೇಲೆ ಟ್ರ್ಯಾಕ್ಟರ ಗಾಲಿ ಹಾಯ್ದು ಹೋಗಿ ಹಿಂದೆಲೆಗೆ ಭಾರೀ ಗುಪ್ತ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ನನಗೆ ಎರಡೂ ಮೊಳಕಾಲುಗಳಿಗೆ ಬೆನ್ನಿಗೆ ತರಚಿದ ಗಾಯಗಳಾಗಿವೆ. ಮಾವ ಶಿವಪ್ಪನ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸುತಿದ್ದೇನೆ. ನೀವು ಬನ್ನಿ ಎಂದು ತಿಳಿಸಿದ್ದು ಆಗ ನಾನು ನನ್ನ ಮಗನಾದ ಕುಮಲಪ್ಪ ಮತ್ತು ಸಾಬಣ್ಣನ ಹೆಂಡತಿ ಸಾವಿತ್ರಿ ಮತ್ತು ನಮ್ಮ ಸಂಬಂಧಿಕರು ಕೂಡಿ ಶಹಾಪುರದ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ನನ್ನ ಗಂಡನ ಮೃತದೇಹವಿದ್ದು ಆತನಿಗೆ ಭಾರೀ ಗಾಯವಾಗಿ ಮೃತನಾಗಿದ್ದು ಇದೆ. ಸಾಬಣ್ಣನಿಗೆ ಎರಡೂ ಮೊಳಕಾಲುಗಳಿಗೆ ಬೆನ್ನಿಗೆ ತರಚಿದ ಗಾಯಗಳಾಗಿವೆ. ದಾರಿಯಲ್ಲಿ ಬರುವಾಗ ಅಪಘಾತವಾದ ಸ್ಥಳದಲ್ಲಿ ನನ್ನ ಗಂಡನಿಗೆ ಡಿಕ್ಕಿಪಡಿಸಿದ ಸ್ಥಳವನ್ನು ನೋಡಿದ್ದು ಅಲ್ಲಿ ಮೊಟಾರ ಸೈಕಲ್ ಮತ್ತು ಟ್ರ್ಯಾಕ್ಟರ ಸ್ಥಳದಲ್ಲೇ ಬಿದ್ದಿವೆ. ನನ್ನ ಮಗನು ಟ್ರ್ಯಾಕ್ಟರನ ನಂಬರ ನೋಡಿದ್ದು ಅದಕ್ಕೆ ನಂಬರ ಇರಲಿಲ್ಲ ಇಂಜಿನ್ ನಂಬರ 431024 ಎಸ್,ಟಿ,ಎಮ್,22207 ಅಂತಾ ಚೆಸ್ಸೀ ನಂಬರ ಡಬ್ಲ್ಯೂ, ಎಕ್ಸ, ಸಿ, ಎನ್,40606010745 ಇದೆ ಅಂತಾ ಮತ್ತು ಅದರ ಟ್ರ್ಯಾಲಿಗೆ ನಂಬರ ಇರುವುದಿಲ್ಲ ಅಂತಾ ಹೇಳಿದನು.ನಂತರ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ಗಂಡ ಮತ್ತು ನಮ್ಮ ಸಂಬಂಧಿಕ ಸಾಬಣ್ಣ ಇಬ್ಬರೂ ಕೂಡಿ ಮೊಟಾರ ಸೈಕಲ್ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನನ್ನ ಗಂಡ ಕುಳಿತು ಹೋಗುತ್ತಿದ್ದ ಮೊಟಾರ ಸೈಕಲ್ ಗೆ ಡಿಕ್ಕಿಪಡಿಸಿ ಭಾರೀ ಗಾಯ ಮಾಡಿದ್ದು ಅದರಿಂದ ನನ್ನ ಗಂಡನು ಸ್ಥಳದಲ್ಲೆ ಮೃತಪಟ್ಟಿದ್ದು ಸಾಬಣ್ಣನಿಗೆ ಮೊಳಕಾಲಿಗೆ ಬೆನ್ನಿಗೆ ತರಚಿದ ಗಾಯವಾಗಿದ್ದು ಟ್ರ್ಯಾಕ್ಟರ ಚಾಲಕನು ಓಡಿ ಹೊಗಿದ್ದು ಆತನ ಮೇಲೆ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 89/2021 ಕಲಂ. 279, 337 304 (ಎ) ಐ.ಪಿ.ಸಿ. ಮತ್ತು ಕಲಂ. 187 ಐ.ಎಮ್.ವ್ಹಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 90/2021 ಕಲಂ 279,337,338,304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ 21/04/2021 ರಂದು ಮುಂಜಾನೆ 13-00 ಪಿ.ಎಂ ಗಂಟೆಗೆ ಫಿಯರ್ಾದಿ ಶ್ರೀ ಸಿದ್ರಾಮಯ್ಯ ತಂದೆ ವೀರಬದ್ರಯ್ಯ ಸ್ವಾಮಿ ವ|| 45 ವರ್ಷ, ಜಾ|| ಜಂಗಮ ಉ|| ಒಕ್ಕಲುತನ ಸಾ|| ಮುನಮುಟಗಿ ತಾ|| ವಡಿಗೇರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 21/04/2021 ರಂದು ಬೆಳಿಗ್ಗೆ 9.30 ಎ.ಎಮ್ಮಕ್ಕೆ ನನ್ನ ಹೆಂಡತಿ ಶರಣಮ್ಮ ಗಣಾಚಾರಿ ಹಾಗೂ ನಮ್ಮೂರ ಇತರೆ ಜನರು ಕೂಡಿಕೊಂಡು ರಸ್ತಾಪೂರ ಗ್ರಾಮದ ಮಲ್ಲಪ್ಪ ತಂ/ ಮಲ್ಲಪ್ಪ ನಾಯ್ಕೋಡಿ ರವರ ಅಟೋ.ನಂ. ಕೆಎ-33 ಎ-6725 ನೇದ್ದರಲ್ಲಿ ಕುಳಿತು ಮೆಣಸಿನ ಕಾಯಿ ಹರಿಯುವ ಕೂಲಿಕೆಲಸಕ್ಕೆಂದು ಜೋಳದಡಗಿಗೆ ಹೋಗಿದ್ದಳು. ಅಂದಾಜು 10.45 ಎ.ಎಂ. ಸುಮಾರಿಗೆ ಅಟೋ ಚಾಲಕ ಮಲ್ಲಪ್ಪ ನಾಯ್ಕೋಡಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ನನ್ನ ಅಟೋದಲ್ಲಿ ನಿಮ್ಮ ಹೆಂಡತಿ ಶರಣಮ್ಮ ಹಾಗೂ ಇತರರಿಗೆ ಕೂಡಿಸಿಕೊಂಡು ಜೋಳದಡಗಿ ಗ್ರಾಮಕ್ಕೆ ಹೊರಟಿದ್ದಾಗ ಅಂದಾಜು 10.30 ಎ.ಎಂ. ಸುಮಾರಿಗೆ ಬೀರನೂರು ಕ್ರಾಸ್ ದಾಟಿ ಹೋಗುತ್ತಿದ್ದಾಗ ಎದರುನಿಂದ ಒಂದು ಟ್ಯಾಂಕರ್ ನೇದ್ದರ ಚಾಲಕನು ತನ್ನ ಟ್ಯಾಂಕರ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರಿನಂದ ನನ್ನ ಅಟೋಕ್ಕೆ ಡಿಕ್ಕಪಡಿಸಿದ ಪರಿಣಾಮ ನನ್ನ ಅಟೋ ರಸ್ತೆಯಿಂದ ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿದ್ದು, ನಾನು ಎದ್ದು ನೋಡಲಾಗಿ ಅಟೋದಲ್ಲಿದ್ದ ನಿಮ್ಮ ಹೆಂಡತಿ ಶರಣಮ್ಮ ಗಣಚಾರಿ ಮತ್ತು ಅಯ್ಯಮ್ಮ ವಗ್ಗಯ್ಯನೋರ, ದೇವಿಂದ್ರಮ್ಮ ಸಾವೂರ, ಉಮಾದೇವಿ ಹಂಪನೋರ ಮತ್ತು ಕಾಸಿಂಬೀ ಪಿಂಜಾರ ಇವರು ಭಾರೀ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಮಲ್ಲಮ್ಮ ಮಸರಕಲ್, ಶರಣಗೌಡ ಪೊಲೀಸ್ ಪಾಟೀಲ್, ಅನ್ನಪೂರ್ಣ@ಹಂಪಮ್ಮ ಸಾವೂರ, ಭಾಗ್ಯಶ್ರೀ ಬಣಕಲ್, ಗಂಗಮ್ಮ ಜೋಳದಡಗಿ ಇವರಿಗೆ ಭಾರೀ/ಸಾದಾ ಸ್ವರೂಪದ ಗಾಯಗಳಾಗಿರುತ್ತದೆ ಅಂತಾ ತಿಳಿಸಿದಾಗ ನಾನು ಮತ್ತು ತಿಪ್ಪಣ್ಣ ಸಾವೂರ ಹಾಗು ನಮ್ಮೂರ ಇತರರು ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಮೇಲ್ಕಾಣಿಸಿದಂತೆ 5 ಜನ ಮೃತಪಟ್ಟಿದ್ದು, ಇನ್ನುಳಿದ 5 ಜನರಿಗೆ ಭಾರೀ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳಿಗೆ ಉಪಚಾರ ಕುರಿತು ಶಹಾಪುರಕ್ಕೆ ಕಳುಹಿಸಿದ್ದು ಇರುತ್ತದೆ. ಅಲ್ಲಿಯೇ ಇದ್ದ ಟ್ಯಾಂಕರ್ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ವಿರೇಶ ತಂ/ ಶಾಂತಗೌಡ ಬಿರೇದಾರ ಸಾ|| ಜಂಬಲದಿನ್ನಿ ಅಂತಾ ಹೇಳಿದ್ದು, ಟ್ಯಾಂಕರ್ ನಂಬರ್ ನೋಡಲಾಗಿ ಕೆಎ-50/9500 ಅಂತಾ ಇದ್ದು, ಜನ ಸೇರುವುದನ್ನು ನೋಡಿ ಚಾಲಕನು ಅಲ್ಲಿಂದ ಓಡಿ ಹೋದನು.ಈ ಅಪಘಾತಕ್ಕೆ ಕಾರಣನಾದ ಟ್ಯಾಂಕರ್ ಚಾಲಕ ವೀರೇಶ ತಂ/ ಶಾಂತಗೌಡ ಬಿರೆದಾರ ವಿರುದ್ದ ಸೂಕ್ತ ಕಾನುನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 90/2021 ಕಲಂ 279, 337, 338, 304(ಎ) ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 65/2021 ಕಲಂ:323, 504, 506, 498(ಎ) ಐಪಿಸಿ : ಇಂದು ದಿನಾಂಕ:21/04/2021 ರಂದು 16:30 ಎ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀಮತಿ ಭಾರತಿ ಗಂಡ ಕಾಶಿನಾಥ ವಾಲಿಕಾರ ವ|| 22 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಇಂಗಳಿಗೇರಿ ತಾ|| ಮುದ್ದೇಬಿಹಾಳ ಜಿ|| ವಿಜಯಪುರ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನನಗೆ ಸುಮಾರು ಒಂದು ವರ್ಷದ ಹಿಂದೆ ನನಗೆ ಇಂಗಳಗೇರಿ ಗ್ರಾಮದ ಮಡಿವಾಳಪ್ಪ ವಾಲಿಕರ ಇವರ ಮಗನಾದ ಕಾಶಿನಾಥ ಇತನೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ನಾನು ನನ್ನ ಗಂಡ ಇಬ್ಬರು ಮದುವೇ ಆದ ಮೂರು ತಿಂಗಳು ಚನ್ನಾಗಿ ಇದ್ದು, ನನಗೆ ಮಕ್ಕಳು ಆಗಿರುವದಿಲ್ಲ. ಸುಮಾರು 8 ತಿಂಗಳಿಂದ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದನು. ನಾನು ಸರಿ ಹೊಗಬಹುದು ಅಂತಾ ತಿಳಿದು ಸುಮ್ಮನಿದ್ದೇನು. ನಾನು ಆಗಾಗ ನನ್ನ ತವರು ಮನೆಯಾದ ಸುರಪುರ ತಾಲ್ಲೂಕಿನ ಸತ್ಯಪೇಟ್ಕ್ಕೆ ಬಂದಾಗ ನನ್ನ ತಂದೆ ಮಲ್ಲಯ್ಯ ನಾಯ್ಕೋಡಿ, ತಾಯಿ ಗಂಗಮ್ಮ ನಾಯ್ಕೋಡಿ ಇವರಿಗೆ ಹೇಳಿದಾಗ ಸಂಸಾರದಲ್ಲಿ ಇದು ಇದ್ದಿದೆ ಹೊಂದಿಕೊಂಡು ಹೊಗ ಬೇಕು ಅಂತಾ ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದಳು. ಈಗ ಸುಮಾರು 3 ತಿಂಗಳ ದಿಂದ ಸತ್ಯಂಪೇಟ್ ಗ್ರಾಮದಲ್ಲಿ ನಾನು ನನ್ನ ತಂದೆ ತಾಯಿಯ ಬಳಿ ಬಂದು ಇದ್ದೇನು. ಹಿಗಿದ್ದು ದಿನಾಂಕ:10/04/2021 ರಂದು ರಾತ್ರಿ ಅಂದಾಜು ಮದ್ಯಾಹ್ನ 2 ಗಂಟೆಗೆ ನನ್ನ ತವರುಮನೆಯಾದ ಸತ್ಯಂಪೇಟ್ ಗ್ರಾಮದಲ್ಲಿ ನಾನು ಮತ್ತು ನನ್ನ ತಂದೆಯಾದ ಮಲ್ಲಯ್ಯ ನಾಯ್ಕೋಡಿ ತಾಯಿಯಾದ ಗಂಗಮ್ಮ ಗಂಡ ಮಲ್ಲಯ್ಯ ನಾಯ್ಕೋಡಿ, ಅಣ್ಣನಾದ ಹಣಮಂತ್ರಾಯ ನಾಯ್ಕೋಡಿ ನಾಲ್ಕು ಜನರು ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ನನ್ನ ಗಂಡ ಕಾಶಿನಾಥ ತಂದೆ ಮಲ್ಲಯ್ಯ ವಾಲಿಕಾರ ಸಾ|| ಇಂಗಳಿಗೇರಿ, ಅತ್ತೆ ಚಂದಮ್ಮ ಗಂಡ ಮಲ್ಲಯ್ಯ ವಾಲಿಕಾರ ಸಾ|| ಇಂಗಳಿಗೇರಿ, ಭಾವನಾದ ಸೋಮನಾಥ ತಂದೆ ಮಲ್ಲಯ್ಯ ವಾಲಿಕಾರ ಸಾ|| ಇಂಗಳಿಗೇರಿ ನಾದನಿಯಾದ ಶಿವಮ್ಮ ಗಂಡ ಹಮಂತ್ರಾಯ ಸೊಂಡೇರ ಸಾ|| ಸೋಮನಾಳ ಎಲ್ಲರು ಮನೆಯ ಮುಂದೆ ಬಂದು ಎನ ಏಲೇ ಸೂಳೆ ನೀನು ತವರು ಮನೆಯಲ್ಲಿ ಬಂದು ಕುಳಿತರೆ ನನ್ನ ಮಗನ ಜೊತೆ ಯಾರು ಇರಬೇಕು ಅಂತಾ ನಮ್ಮ ಅತ್ತೆ ಬೈಯುತ್ತಿರುವಾಗ ನಾನು ಅಲ್ಲೆ ಇರತಿದ್ದೆ ನೀವೇ ನನಗೆ ಸರಿಯಾಗಿ ನನಗೆ ನೊಡಿಕೊಳ್ಳದೆ ಇದ್ದುದರಿಂದ ನಾನು ತವರು ಮನೆಗೆ ಬಂದಿರುತ್ತೇನೆ ಅಂತಾ ಅಂದಿದಕ್ಕೆ ನನ್ನ ಗಂಡನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು, ಅತ್ತೆ ಚಂದಮ್ಮ ಇವಳು ಕುದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನಿಗೆ ಹೊಡೆದಳು, ಭಾವ ಸೋಮಣ್ಣ ಇತನು ಕಾಲಿನಿಂದ ಬೆನ್ನಿಗೆ ಒದ್ದನು, ನಾದನಿ ಶಿವಮ್ಮ ಇವಳು ಕೈಯಿಂದ ಹೊಟ್ಟೆಗೆ ಹೊಡೆದ ಗುಪ್ತಗಾಯ ಮಾಡಿದರು. ಅಲ್ಲೆ ಇದ್ದ ನನ್ನ ತಂದೆ ಮಲ್ಲಯ್ಯ, ತಾಯಿ ಗಂಗಮ್ಮ, ಅಣ್ಣ ಹಣಮಂತ್ರಾಯ ಎಲ್ಲರು ಕೂಡಿ ಬಿಡಿಸಿಕೊಂಡರು. ಇವರು ಬಿಡಿಸಿದ್ದಕ್ಕೆ ಇವತ್ತು ಬಿಟ್ಟಿವಿ ಇಲ್ಲಂದರೆ ನಿನ್ನ ಜೀವ ಹೊಡೆಯದೆ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊದರು. ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದು ಒದ್ದಿದರಿಂದ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಂತರ ನಾನು ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ಅಣ್ಣನ ಜೋತೆ ವಿಚಾರ ಮಾಡಿ ನಮ್ಮ ಮರಿಯಾದಿಗೆ ಅಂಜಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸುಮಾರು 8 ತಿಂಗಳಿಂದ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿದ್ದರಿಂದ ನಾನು ತವರು ಮನೆಗೆ ಬಂದರೂ ಸಹ ಇಲ್ಲಿಗೆ ಬಂದು ಹೊಡೆಬಡೆ ಮಾಡಿರುವ ಗಂಡ ನಾಶಿನಾಥ, ಅತ್ತೆ ಚಂದಮ್ಮ, ಭಾವ ಸೋಮನಾಥ, ನಾದನಿ ಶಿವಮ್ಮ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2021 ಕಲಂ: 323, 504, 506 498(ಎ) ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆೆೆ:- ಗುನ್ನೆ ನಂ:61/2021 ಕಲಂ: 498(ಎ), 323, 504, 506, ಸಂಗಡ 34 ಐಪಿಸಿ: ಸುಮಾರು 8 ವರ್ಷಗಳ ಹಿಂದೆ ಫಿರ್ಯಾದಿಯ ಮದುವೆಯು ಆರೋಪಿತನಾದ ಲಕ್ಷ್ಮಿಕಾಂತನೊಂದಿಗೆ ಮದುವೆಯಾಗಿದ್ದು ಅವರಿಗೆ 7 ವರ್ಷದ ಒಬ್ಬ ಮಗನಿರುತ್ತಾನೆ. ಮದುವೆಯಾದ 2-3 ವರ್ಷಗಳ ವರೆಗೂ ಗಂಡ ಹೆಂಡತಿ ಅನೂನ್ಯವಾಗಿದ್ದು ನಂತರದ ದಿನಗಳಲ್ಲಿ ಆರೋಪಿ ಲಕ್ಷ್ಮಿಕಾಂತನು ತನ್ನ ಹೆಂಡತಿಯ ಮೇಲೆ ವಿನಾಃ ಕಾರಣ ಅನುಮಾನಗೊಂಡು ಕುಡಿತದ ಚಟಕ್ಕೆ ಬಿದ್ದು ದಿನಾಲು ಕುಡಿದು ಬಂದು ಫಿರ್ಯಾದಿಗೆ ಹೊಡೆ-ಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಹಿಂಡೆಯನ್ನು ನೀಡುತ್ತ ಬಂದಿದ್ದು ನಂತರ ದಿನಾಂಕ 07.06.20218 ರಂದು ಫಿರ್ಯಾದಿಗೆ ಅರಾಮ ಇಲ್ಲದೇ ಇದ್ದಾಗ ಆಕೆ ತನ್ನ ತಾಯಿಯೊಂದಿಗೆ ತನ್ನ ತೋರಿಸಿಕೊಂಡು ತನ್ನ ತವರೂರಿಗೆ ಹೋಗಿರುತ್ತಾಳೆ. ನಂತರ ಆರೋಪಿ ಲಕ್ಷ್ಮಿಕಾಂತನು ಆಕೆ ಕರೆದುಕೊಂಡು ಬರುತ್ತೇನೆಂದು ಹೇಳಿ ಕರೆಯಲು ಹೋಗದೇ ಇದ್ದಾಗ ಫಿರ್ಯಾದಿಯು ತನ್ನ ತಂದೆಯನ್ನು ಕರೆದುಕೊಂಡು ಗಂಡನ ಮನೆಗೆ ಹೋಗಾದ ಆರೋಪಿತರೆಲ್ಲಾರು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಆ ವಿಚಾರವಾಗಿ ಫಿರ್ಯಾದಿಯು ತನ್ನ ತಂದೆ-ತಾಯಿಯವರೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ದೂರು ನೀಡಿ ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 61/2021 ಕಲಂ: 498(ಎ), 323, 504, 506, ಸಂಗಡ 34 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ ಠಾಣೆ:- ಗುನ್ನೆ ನಂ 55/2021 ಕಲಂ: 143,147,323,504,506 ಸಂಗಡ 149 ಐಪಿಸಿ: ಇಂದು ದಿನಾಂಕ 21.04.2021 ರಂದು 5.30 ಪಿಎಮಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಲಾಳೆಮಶಾಕ ತಂದೆ ಹುಸೇನಸಾಬ ಸಾಲೋಡಗಿ ವಯಾ|| 50 ಜಾ|| ಮುಸ್ಲೀಂ ಉ|| ಗುತ್ತೆದಾರಿಕೆ ಸಾ|| ಯಾಳಗಿ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ಪುರಸಭೆ ಕೆಂಭಾವಿಯಲ್ಲಿ ಕಂಪೌಂಡ ವಾಲದ ಟೆಂಡರ್ ಇದ್ದ ಅಂಗವಾಗಿ ನಾನು ಸಹ ಸದರಿ ಕೆಲಸಕ್ಕೆ ಟೆಂಡರ ಹಾಕಿದ್ದು ಇರುತ್ತದೆ. ಸುಮಾರು ಒಂದು ತಿಂಗಳ ಹಿಂದೆ ಸದರಿ ಕೆಲಸ ನನಗೆ ಸಿಕ್ಕಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 20/04/2021 ರಂದು ಬೆಳಿಗ್ಗೆ 11.30 ಗಂಟೆಗೆ ನನಗೆ ಸಿಕ್ಕ ಟೆಂಡರ್ ಕೆಲಸದ ನಿಮಿತ್ಯ ಅಗ್ರಿಮೆಂಟ್ ಮಾಡಿಸಲು ಕೆಂಭಾವಿಯ ಪುರಸಭೆಗೆ ಹೋಗುತ್ತಿದ್ದಾಗ ಕೆಂಭಾವಿ ಪಟ್ಟಣದ 1] ಖಾಜಾಪಟೇಲ ತಂದೆ ಸಾಯಪಟೇಲ್ ಕಾಚೂರ 2] ಅಮೀರಪಟೇಲ ತಂದೆ ಖಾಜಾಪಟೇಲ ಕಾಚೂರ 3] ಬಸಣ್ಣ ತಂದೆ ಹಳ್ಳೆಪ್ಪ ಹೆಳವರ ಸಾ|| ಮುದನೂರ 4] ಸೋಫಿ ತಂದೆ ಮಹಿಬೂಬಸಾಬ ನಾಶಿ 5] ಇರಫಾನ ತಂದೆ ಉಸ್ಮಾನ ಕಾಚೂರ 6] ಇಮ್ರಾನ ತಂದೆ ಉಸ್ಮಾನ ಕಾಚೂರ 7] ರಿಜ್ವಾನ್ ತಂದೆ ಉಸ್ಮಾನ ಕಾಚೂರ ಸಾ|| ಎಲ್ಲರೂ ಕೆಂಭಾವಿ ಈ ಎಲ್ಲಾ ಜನರು ಸೇರಿ ಗುಂಪು ಕಟ್ಟಿಕೊಂಡು ಬಂದವರೇ ಪುರಸಭೆ ಮುಂದೆ ಹಾದು ಹೋಗುತ್ತಿದ್ದ ನನ್ನನ್ನು ತಡೆದು ನಿಲ್ಲಿಸಿ ಎಲ್ಲರೂ ಕೂಡಿ ಎಲೇ ಸೂಳೇ ಮಗನೆ ಯಾಳಗಿ ಬಿಟ್ಟು ನಮ್ಮ ಊರಿಗೆ ಬಂದು ನಾವು ಮಾಡುವ ಕೆಲಸ ನೀನು ಯ್ಯಾಕೇ ಟೆಂಡರ ತೆಗೆದುಕೊಂಡಿದ್ದೀಯಾ ಸೂಳೇ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ನನ್ನ ಕಪಾಳಕ್ಕೆ, ಬೆನ್ನಿಗೆ ಹೊಡೆಯುತ್ತಾ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಮೈನುದ್ದೀನ್ ತಂದೆ ಅಬ್ದುಲಸಾಬ ಸಾಸನೂರ, ಉಸ್ಮಾನ ತಂದೆ ಮುತರ್ುಜಾ ಕರನಾಳ, ಮಹಿಬೂಬಸಾಬ ತಂದೆ ಹುಸೇನಸಾಬ ಬಳಗಾನೂರ ಇವರು ಬಂದು ಸದರಿಯವರು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನು ಮುಂದೆ ನಮ್ಮ ಕೆಂಭಾವಿಯಲ್ಲಿ ನೀನು ಹೇಗೆ ಕೆಲಸ ಮಾಡತೀಯಾ ನೋಡುತ್ತೇವೆ, ನಿನ್ನ ಜೀವ ನಮ್ಮ ಕೈಯಲ್ಲಿದೆ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 55/2021 ಕಲಂ 143,147,323,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:- ಗುನ್ನೆ ನಂ: 49/2021 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ; 21/04/2021 ರಂದು 6-45 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.21/04/2021 ರಂದು 5-00 ಪಿಎಮ್ ಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಇಂದು ದಿನಾಂಕ. 21/04/2021 ರಂದು 6-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 6-45 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.49/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ :- 39/2021 ಕಲಂ, 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 21/04/2021 ರಂದು 05.45 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 21/04/2021 ರಂದು ಕರಕಳ್ಳಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಸಿದ್ರಾಮ ತಂದೆ ದೀಪ್ಲೂ ಕಾರಿಬಾರಿ ವಯಾ:40 ವರ್ಷ ಉ: ವ್ಯಾಪಾರ ಜಾ: ಲಂಬಾಣಿ ಸಾ: ಕರಕಳ್ಳಿ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 0.4.25 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1100/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 39/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ:-. 22/2021, 78 (3) ಕೆ.ಪಿ ಯಾಕ್ಟ: ದಿನಾಂಕ:21/04/2021 ರಂದು 14.50 ಪಿ.ಎಮ್ ಕ್ಕೆ, ಶ್ರೀ. ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪಟ್ಟಣದ ಎ.ಪಿ.ಎಮ್.ಸಿ ಗೇಟ್ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಮಟಕಾ ಬರೆದುಕೊಳ್ಳುವನ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:22/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 15.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 17.10/- ರೂ.ಗಳು 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ & ಮುದ್ದೇಮಾಲು ನೀಡಿದ್ದು ಇರುತ್ತದೆ. ಆರೋಪಿತನ ಹೆಸರು ಸರದಾರಪಟೇಲ್ ತಂದೆ ಸಂಗನಗೌಡ ಫಾಟೀಲ ವಯ-68 ವರ್ಷ ಜಾ:ಲಿಂಗಾಯತ (ಹಂಡೆ ವಜೀರ) ಉ: ಮಟಕಾ ಬರೆಯುವದು ಸಾ:ಹುಣಸಗಿ ತಾ:ಹುಣಸಗಿ ಜಿ:ಯಾದಗಿರ ಇರುತ್ತಾರೆ.

ಹುಣಸಗಿ ಪೊಲೀಸ್ ಠಾಣೆ:- 23/2021 ಮಹಿಳೆ ಕಾಣೆಯಾದ ಬಗ್ಗೆ: ದಿನಾಂಕ:21/04/2021 ರಂದು ಸಾಯಂಕಾಲ 18.00 ಗಂಟೆಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಕೊಟ್ಟಿದ್ದರ ಸರಾಂಶವೆನೆಂದರೇ, ಫಿರ್ಯಾದಿಯ ಮಗಳಾದ ಕು.ಮೀನಾಕ್ಷಿ ಇವಳು ದಿನಾಂಕ:18/04/2021 ರಂದು ಮದ್ಯಾಹ್ನ 1.00 ಗಂಟೆಗೆ ತನ್ನ ಅದೇ ಗ್ರಾಮದ (ಕೊಳಿಹಾಳ) ಗೆಳತಿಯರ ಹತ್ತಿರ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ಬರಳಿ ಮನೆ ಬಂದಿರುವದಿಲ್ಲ. ಅವಳ ಗೆಳತಿಯರ ಹತ್ತಿರ ವಿಚಾರಿಸಿದ್ದು, ಅವಳು ತಮ್ಮ ಮನೆಗೆ ಬಂದಿಲ್ಲ ಅಂತಾ ತಿಳಿಸಿದ್ದರಿಂದ ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ತನ್ನ ಮಗಳನ್ನು ಹುಡುಕಿ ಕೊಡಬೇಕು ಅಂತಾ ಇಂದು ಠಾಣೆಗೆ ತಡವಾಗಿ ಬಂದು ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:- 51/2021 ಕಲಂ 279, 338 ಐಪಿಸಿ:ದಿನಾಂಕ 19/04/2021 ರಂದು ಮಧ್ಯಾಹ್ನ 2-30 ಗಂಟೆಗೆ ಫಿರ್ಯಾಧಿ ಮತ್ತು ಇನ್ನೊಬ್ಬಳು ಕೂಡಿಕೊಂಡು ಸಂತೆ ಮಾಡಿಕೊಂಡು ಬರುವ ಕುರಿತು ತಮ್ಮ ತಾಂಡಾದಿಂದ ನಾಲವಾರಕ್ಕೆ ಹೋಗಿ ಅಲ್ಲಿ ಸಂತೆ ಮಾಡಿಕೊಂಡು ಮರಳಿ ತಮ್ಮೂರಿಗೆ ಹೋಗುವ ಕುರಿತು ಟಂ.ಟಂ. ಅಟೋ ನಂ ಕೆ.ಎ-33-ಎ-2436 ನೆದ್ದರಲ್ಲಿ ಕುಳಿತುಕೊಂಡು ಹೋಗುವಾಗ ಮಾರ್ಗಮಧ್ಯ ಯರಗೋಳ-ಯಾಗಾಪೂರ ರೋಡಿನ ಮೇಲೆ ಕೆರೆ ಹತ್ತಿರ ಕರ್ವದಲ್ಲಿ ರೋಡಿನ ಮೇಲೆ ಹೋಗುವಾಗ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುತ್ತಾ ಕಟ್ ಹೊಡೆದಿದ್ದರಿಂದ ಫಿರ್ಯಾಧಿಯು ಟಂ.ಟಂ. ದಿಂದ ಕೆಳಗಡೆ ಬಿದ್ದಾಗ ಟಂ.ಟಂ. ದ ಹಿಂದಿನ ಗಾಲಿಯು ಫಿರ್ಯಾಧಿಯ ಬಲಗಾಲು ಮೇಲೆ ಹಾಯ್ದು ಹೋಗಿದ್ದರಿಂದ ಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

 

Last Updated: 22-04-2021 12:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080