ಅಭಿಪ್ರಾಯ / ಸಲಹೆಗಳು

                                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/02/2021
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 25/2021 ಕಲಂ: 379, 511 ಐಪಿಸಿ : ಇಂದು ದಿನಾಂಕ: 22/02/2021 ರಂದು 7-45 ಎಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 22/02/2021 ರಂದು ಬೆಳಗ್ಗೆ ನಾನು ಮತ್ತು ಸಂಗಡ ಮಹೇಂದ್ರ ಪಿಸಿ 254 ರವರೊಂದಿಗೆ ಸಂಗಮ ಹತ್ತಿರ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದೆನು. ಸದರಿ ಸಂಗಮದ ಕೃಷ್ಣಾ ನದಿ ದಡದಲ್ಲಿ ಯಾರೋ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಮಹೇಂದ್ರ ಪಿಸಿ ಇಬ್ಬರೂ ಬೆಳಗಿನ ಜಾವ 6-30 ಗಂಟೆ ಸುಮಾರಿಗೆ ಸಂಗಮದ ಕೃಷ್ಣಾನದಿ ದಡದ ನೀಲಗಿರಿ ಗಿಡಗಳ ತೋಪಿನ ಹತ್ತಿರ ಹೋದಾಗ ಅಲ್ಲಿ ಕೃಷ್ಣಾ ನದಿ ದಡದಲ್ಲಿ ಒಂದು ಟ್ರ್ಯಾಕ್ಟರ ನಿಂತಿದ್ದು, ಅದರಲ್ಲಿ ಒಬ್ಬನು ಸಲಿಕೆ ಪುಟ್ಟಿಯಿಂದ ಮರಳು ತುಂಬುತ್ತಿರುವುದನ್ನು ನಾವು ನೀಲಗಿರಿ ಗಿಡಗಳ ಮರೆಯಾಗಿ ನಿಂತು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿದಾಗ ಅವನು ಟ್ರ್ಯಾಕ್ಟರ ಬಿಟ್ಟು ಓಡಿ ಹೋದನು. ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 4-5 ಪುಟ್ಟಿ ಮರಳು ತುಂಬಿದ್ದನು. ಟ್ರ್ಯಾಕ್ಟರ ಮತ್ತು ಟ್ರ್ಯಾಲಿಗೆ ನಂಬರ್ ನೋಡಲಾಗಿ ನೋಂದಣಿ ನಂಬರ ಇರುವುದಿಲ್ಲ. ಟ್ರ್ಯಾಕ್ಟರ ಇಂಜನ್ ನಂ. 43.1024/ಖಘಉ11366 ಚಾಸ್ಸಿ ನಂ. ಘಙಅಉ43606144232 ಇರುತ್ತದೆ. ಟ್ರ್ಯಾಲಿಗೆ ನಂಬರ ಇರುವುದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕನು ಕೃಷ್ಣಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಲು ಪ್ರಯತ್ನಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಮರಳು ತುಂಬುವುದು ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಟ್ರ್ಯಾಕ್ಟರನ್ನು ಠಾಣೆಗೆ ತಂದು ಈ ದೂರು ನೀಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2021 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 10/2021 ಕಲಂ: 324, 307, 504, 506 ಐಪಿಸಿ : ಇಂದು ದಿನಾಂಕ:22/02/2021 ರಂದು 2:15 ಪಿಎಮ್ಕ್ಕೆ ಪಿಯರ್ಾದಿ ಲಾಲಬಿ ಗಂಡ ರಾಜೇಸಾಬ ಅರಕೇರಿ ವ|| 30ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ರಾಜನಕೋಳೂರ ತಾ|| ಹುಣಸಗಿ ಜಿ|| ಯಾದಗಿರ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ತನಗೆ ಸುಮಾರು 15ವರ್ಷಗಳ ಹಿಂದೆ ಬಲಶೆಟ್ಟಿಹಾಳ ಗ್ರಾಮದ ರಾಜೇಸಾಬ ತಂದೆ ಬಡೆಸಾಬ ಅರಿಕೇರಿ ಇವರೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ ನಾನು ನನ್ನ ಗಂಡನು ಸಂಸಾರಿಕ ಜೀವನವನ್ನು ಮಾಡಿಕೊಂಡು ಬಂದಿದ್ದು ನಮಗೆ ಇಬ್ಬರೂ ಗಂಡು ಮಕ್ಕಳು ಇದ್ದು ಹಿರಿಯ ಮಗನ ಹೆಸರು ಮಹ್ಮದಪೈಗಂಬರ್, ಕಿರಿಯ ಮಗನ ಹೆಸರು ನಿಯಾಜ ಅಂತಾ ಇರುತ್ತದೆ. ನನ್ನ ಗಂಡನು ನನ್ನೊಂದಿಗೆ ಮದುವೆಯಾದ ಮೂರು ತಿಂಗಳ ನಂತರ ಕೆಂಬಾವಿಯಲ್ಲಿ ಒಂದು ಮೋಟರ್ ಸೈಕಲ್ ಕಳ್ಳತನಮಾಡಿಕೊಂಡು ಹೋಗಿದ್ದು ಇದರಿಂದ ನನ್ನ ಗಂಡನು ಜೈಲಿಗೆ ಹೋದನು ಆಗ ನಮಗೆ ನನ್ನ ಗಂಡನು ಕಳ್ಳತನ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾನೆ ಅಂತಾ ಗೊತ್ತಾಗಿದ್ದು ನಾವು ಇಂದಲ್ಲ ನಾಳೆ ನನ್ನ ಗಂಡನು ಸರಿಯೊಂದುತ್ತಾನೆ ಅಂತಾ ತಿಳಿದು ನನ್ನ ಗಂಡನಿಗೆ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದೆವು ಆದರು ಇಲ್ಲಿಯವರೆಗೆ ನನ್ನ ಗಂಡನು ಕಳ್ಳತನ ಮಾಡುವ ಚಟವನ್ನು ಬಿಟ್ಟಿರುವುದಿಲ್ಲ. ಯಾವಾಗಲೂ ಮೋಟರ್ ಸೈಕಲ್ಗಳನ್ನು, ದೇವಸ್ಥಾನಗಳಲ್ಲಿನ ಹುಂಡಿಯನ್ನು, ಆಭರಣಗಳನ್ನು, ಮತ್ತು ಮನೆಯಲ್ಲಿನ ಹಣ ಒಡವೆಗಳನ್ನು ಕಳ್ಳತನ ಮಾಡುತ್ತಾ ಬಂದಿರುತ್ತಾನೆ ಈ ಬಗ್ಗೆ ನಮ್ಮ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಮತ್ತು ಹೊರ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ಇರುತ್ತವೆ. ಇದರಿಂದ ನಾನು ನನ್ನ ತವರೂ ಮನೆಯಲ್ಲಿ ನನ್ನ ತಾಯಿಯಾದ ಇಮಾಮಬಿ ಗಂಡ ಸೈಯದಸಾಬ ಮೇಲಿನಮನಿ, ತಮ್ಮನಾದ ಖಾಸಿಂಪಾಟೀಲ ಮೇಲಿನಮನಿ ರವರೊಂದಿಗೆ ವಾಸವಿದ್ದು ನನ್ನ ಗಂಡನು ಸಹ ನಮ್ಮೊಂದಿಗೆ ಇರುತ್ತಾನೆ. ನನಗೆ ಯಾವಾಗಲು ನನ್ನ ಗಂಡ ಹೊಡೆಬಡೆ ಮಾಡುತ್ತಾ ನಿನ್ನ ಇಂದಲ್ಲ ನಾಳೆ ಖಲಾಸ್ ಮಾಡುತ್ತೇನೆ ಅಂತಾ ಕೊಲೆ ಬೇದರಿಕೆ ಹಾಕುತ್ತಾ ಬಂದಿದ್ದು ಆದರು ನಾನೆ ಕೂಲಿ ಕೆಲಸ ಮಾಡಿ ದುಡಿದು ಹಾಕುತ್ತಾ ಬಂದಿದ್ದು ಇರುತ್ತದೆ. ನನ್ನ ಗಂಡನಾದ ರಾಜೇಸಾಬ ತಂದೆ ಬಡೆಸಾಬ ಅರಿಕೇರಿ ಈತನು ನನ್ನ ಮತ್ತು ನನ್ನ ತವರು ಮನೆಯವರ ಮೇಲೆ ವಿನಾಃಕಾರಣ ದ್ವೇಷಭಾವನೆಯನ್ನು ಇಟ್ಟುಕೊಂಡಿದ್ದು ನಾವುಗಳು ಅವನಿಗೆ ಕಳ್ಳತನ ಪ್ರಕರಣಗಳಲ್ಲಿ ಜೈಲಿನಿಂದ ಬಿಡಿಸಿಕೊಂಡು ಬಂದರು ಯಾವಾಗಲು ನಮಗೆ ಕೊಲೆ ಮಾಡುತ್ತೇನೆ ಅಂತಾ ಭೇದರಿಕೆ ಹಾಕುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ:20/02/2021 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಇಮಾಮಬಿ ಮೇಲಿನಮನಿ ಕೂಡಿ ಮನೆಯಲ್ಲಿದ್ದಾಗ ಮನೆಗೆ ಬಂದ ನನ್ನ ಗಂಡನಾದ ರಾಜೇಸಾಬ ತಂದೆ ಬಡೆಸಾಬ ಅರಿಕೇರಿ ಈತನು ನನಗೆ ಲೇ ಸೂಳಿ ಇವತ್ತು ನಿನ್ನ ಜೀವಂತ ಬಿಡುವುದಿಲ್ಲ ಚಾಕುವಿನಿಂದ ಕುತ್ತಿಗೆ ಕೊಯ್ದು ಚುಚ್ಚಿ ಕೊಲೆ ಮಾಡುತ್ತೇನೆ ಅಂತಾ ಬೈದು ಜಗಳ ತೆಗೆದು ನನಗೆ ಕೊಲೆ ಮಾಡಲು ಚಾಕು ಹಾಕಲು ಬಂದಾಗ ನಾನು ಕೈ ಅಡ್ಡಮಾಡಿದಾಗ ಚಾಕು ನನ್ನ ಬಲಗೈ ಹೆಬ್ಬರಳಿಗೆ ಬಿದ್ದು ಹರಿದ ರಕ್ತಗಾಯವಾಗಿದ್ದು ಆಗ ನಾನು ಚೀರಾಡಿಕೊಂಡು ನಾನು ಮತ್ತು ನಮ್ಮ ತಾಯಿ ಅವನಿಂದ ತಪ್ಪಿಸಿಕೊಂಡು ಹೊರಗಡೆ ಬಂದಿದ್ದು ಮತ್ತೆ ನನ್ನ ಗಂಡನು ನಮ್ಮ ಹತ್ತಿರ ಬಂದು ಇವತ್ತು ನಿನಗೆ ಬಿಡುವುದಿಲ್ಲ ಅಂತಾ ಮತ್ತೆ ಹೊಡೆಯಲು ಬಂದಾಗ ಜಗಳದ ಗದ್ದಲ ಕೇಳಿ ಬಂದ ನಮ್ಮೂರ ಟಿಪ್ಪು ಸುಲ್ತಾನ ತಂದೆ ಮಹ್ಮದಸಾಬ ತೆಳಗಿನಮನಿ ಇವರು ಬಂದು ಬಿಡಿಸಿದ್ದು ಇರುತ್ತದೆ. ನಾವು ಅಂದು ರಾತ್ರಿಯೇ ಮನೆ ಬಿಟ್ಟು ಬಂದು ಬೇರೆಯವರ ಮನೆಯಲ್ಲಿ ಉಳಿದುಕೊಂಡಿರುತ್ತೇವೆ. ನನ್ನ ಗಂಡನು ಅತ್ಯಂತ ಕ್ರೂರ ಸ್ವಭಾವದವನಾಗಿದ್ದು ಯಾವುದೇ ಸಮಯದಲ್ಲಿ ನನಗೆ, ನನ್ನ ಮಕ್ಕಳಿಗೆ ಮತ್ತು ನನ್ನ ತಾಯಿಗೆ, ನನ್ನ ತಮ್ಮನಿಗೆ ಕೊಲೆ ಮಾಡುತ್ತಾನೆ ಗ್ರಾಮದಲ್ಲಿ ಯಾರಾದರು ನಮ್ಮ ಮನೆಯ ಸಮಸ್ಯಯನ್ನು ಬಗೆಹರಿಸಲು ಬಂದರೆ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಾನೆ ಇದರಿಂದ ನಮ್ಮೂರಿನ ಯಾವ ಕುಟುಂಬದವರು ನನ್ನ ಗಂಡನಿಗೆ ತಿಳಿಹೇಳಲು ಬರುವುದಿಲ್ಲ. ನಮ್ಮ ಓಣಿಯಲ್ಲಿನ ಜನರು ನನ್ನ ಗಂಡ ಬಂದರೆ ತಮ್ಮ ಮನೆಯ ಬಾಗಿಲುಗಳನ್ನು ಹಾಕಿಕೊಳ್ಳುತ್ತಾರೆ ಅಷ್ಟೊಂದು ಭಯಗೊಂಡಿರುತ್ತಾರೆ ಇಲ್ಲದಿದ್ದರೆ ಅವರ ಮನೆಗಳನ್ನು ಕಳ್ಳತನ ಮಾಡುತ್ತಾನೆ ಮತ್ತು ಅವರ ಮೇಲೆ ತಿವ್ರವಾದ ಹಲ್ಲೆ ಮಾಡುತ್ತಾನೆ. ನನಗೆ ನನ್ನ ಗಂಡನು ಎಷ್ಟೇ ಹೊಡೆದರು ಯಾರು ಬಿಡಿಸಲು ಬರುವುದಿಲ್ಲ ಒಂದು ವೇಳೆ ಬಂದರೆ ಅವರಿಗೆ ಹೊಡೆಯುತ್ತಾನೆ. ನನ್ನ ಗಂಡನೇ ನನಗೆ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಕೇಸ್ ಮಾಡಿದರೇ ನಮಗೆ ಎನಾದರು ಮಾಡುತ್ತಾನೆ ಅಂತಾ ಭಯಗೊಂಡು ಈ ಬಗ್ಗೆ ಮನೆಯಲ್ಲಿ ಕೇಸ್ ಮಾಡುವ ಕುರಿತು ನನ್ನ ತಾಯಿ- ತಮ್ಮನೊಂದಿಗೆ ವಿಚಾರಮಾಡಿಕೊಂಡು ತಡವಾಗಿ ಇಂದು ಬಂದು ದೂರು ನೀಡುತ್ತಿದ್ದು ಕಾರಣ ನನಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡನ ವಿರುದ್ಧ ಕೇಸ್ ಮಾಡಿ ನನಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:10/2021 ಕಲಂ: 324, 307, 504, 506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 28/2021 ಕಲಂ 447, 341, 427, 506 ಐಪಿಸಿ : ಇಂದು ದಿನಾಂಕ 22/02/2021 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾಧಿದಾರನಾದ ಬಸಮ್ಮ ಗಂಡ ವೀರುಪಾಕ್ಷಯ್ಯ ಸ್ವಾಮಿ ವಯಾಃ 50 ವರ್ಷ ಜಾಃ ಸ್ವಾಮಿ ಉಃ ಮನೆಕೆಲಸ ಸಾಃ ಎಂ.ಹೊಸಳ್ಳಿ ಇವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಒಂದು ಅಜರ್ಿ ತಂದು ಹಾಜರಪಡಿಸಿದ್ದೆನೆಂದರೆ ನಾನು ಬಸಮ್ಮ ಗಂಡ ವೀರುಪಾಕ್ಷಯ್ಯ ಸ್ವಾಮಿ ವಯಾಃ 50 ವರ್ಷ ಜಾಃ ಸ್ವಾಮಿ ಉಃ ಮನೆಕೆಲಸ ಸಾಃ ಎಂ.ಹೊಸಳ್ಳಿ ಈ ಮೂಲಕ ವಿನಂತಿಸಿಕೊಳ್ಳುವುದೆನೆಂದರೆ ನಮ್ಮೂರ ಎಂ. ಹೊಸಳ್ಳಿ ಗ್ರಾಮದ ಸೀಮೆಯಲ್ಲಿ ನಮ್ಮ ಹಿರಿಯರ ಆಸ್ತಿ ಹೊಲ ಸವರ್ೆ ನಂ 129 ನೆದ್ದರ ಆಕಾರ 12 ಗುಂಟೆ ಹೊಲ ಇದ್ದಿರುತ್ತದೆ, ಈ ಹೊಲವು ತಲೆತಲಾಂತರದಿಂದ ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೆವೆ, ಆ ಹೊಲದಲ್ಲಿ ನಾವು ವಾಸ ಮಾಡುವದಕ್ಕೆ ಅಂತಾ ಒಂದು ಮನೆ ಕಟ್ಟಿಸಿಕೊಂಡು ಇದ್ದಿರುತ್ತೆವೆ, ಹೀಗಿರುವಾಗ ದಿನಾಂಕ 30/01/2021 ರಂದು ಬೆಳಿಗ್ಗೆ 10-45 ಗಂಟೆಗೆ ನಾನು, ನೀಲಮ್ಮ ಗಂಡ ಮಹಾಂತಯ್ಯ ಸ್ವಾಮಿ, ರವಿ ತಂದೆ ವೀರುಪಾಕ್ಷಯ್ಯ ಸ್ವಾಮಿ, ಚಂದ್ರು ತಂದೆ ವೀರುಪಾಕ್ಷಯ್ಯ ಸ್ವಾಮಿ, ವಿಜಯ ತಂದೆ ವೀರುಪಾಕ್ಷಯ್ಯ ಸ್ವಾಮಿ, ಸುರೇಖಾ ಗಂಡ ವಿಜಯ ಸ್ವಾಮಿ, ದೇವಿಂದ್ರಯ್ಯ ತಂದೆ ಮಹಾಂತಯ್ಯ ಸ್ವಾಮಿ, ಪ್ರಭಾವತಿ ಗಂಡ ದೇವಿಂದ್ರಯ್ಯ ಸ್ವಾಮಿ ನಾವೆಲ್ಲರೂ ಮನೆಯಲ್ಲಿದ್ದಾಗ ಸಯ್ಯದಭಾಷಾ ತಂದೆ ಹುಸೇನಸಾಬ ನಾಯಿಕೊಡಿ ಸಾಃ ವಡಗೇರಾ ಇತನು ಒಂದು ಜೆ.ಸಿ.ಬಿ. ಯನ್ನು ತೆಗೆದುಕೊಂಡು ಬಂದು ನಮ್ಮ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಈ ಹೊಲ ನಾನು ಖರೀದಿ ಮಾಡಿರುತ್ತೆನೆ, ಈ ಹೊಲದಲ್ಲಿ ನೀವು ಯಾಕೆ ಮನೆ ಕಟ್ಟಿಕೊಂಡು ಇದ್ದಿರಿ, ಇಲ್ಲಿಂದ ಮನೆ ತೆಗೆಯದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕುತ್ತಿದ್ದನು, ಆಗ ನಾವು ಮನೆಯಿಂದ ಹೊರಗಡೆ ಬಂದು ಈ ಹೊಲ ನಮ್ಮದು ಇದೆ ನಮ್ಮ ಜೋತೆಗೆ ಯಾಕೆ ತಕರಾರು ಮಾಡುತ್ತಿದ್ದಿ ಅಂತಾ ಅವನಿಗೆ ಕೇಳುತ್ತಿದ್ದೆವು, ಆದರೂ ಕೂಡಾ ಅವನು ನಮ್ಮ ಮಾತು ಕೇಳದೇ ಜೆ.ಸಿ.ಬಿ. ಯಿಂದ ನಮ್ಮ ಮನೆ ಕಡೆಗೆ ತೆಗೆದುಕೊಂಡು ಬರುತ್ತಿದ್ದನು, ಆಗ ನಾವು ನಮ್ಮ ಮನೆಗೆ ಕಡೆಗೆ ಹೋಗುವಾಗ ನಮ್ಮನ್ನು ಮನೆ ಕಡೆಗೆ ಹೋಗದಂತೆ ತಡೆದು ನಿಲ್ಲಿಸಿ ನಮ್ಮ ಮನೆಯನ್ನು ಜೆಸಿಬಿ ಇಂದ ಬಿಳಿಸಿ, ಅಲ್ಲೆ ಬಾಜುಯಿದ್ದ ಬಾವಿಯಲ್ಲಿ ಮನೆಯ ಇಟಂಗಿಗಳು, ಮನೆಯ ಶೀಟಗಳು ಮತ್ತು ಮನೆಯಲ್ಲಿದ್ದ ಬೆಲೆ ಬಾಳುವ ಸಾಮಾನುಗಳನ್ನು ಬಾವಿಯಲ್ಲಿ ಹಾಕಿ ಮುಚ್ಚಿಸಿರುತ್ತಾನೆ, ಅಂದಾಜ 5,00,000/ರೂ ಕಿಮ್ಮತ್ತಿನಷ್ಟು ನಮಗೆ ಲೂಕ್ಸಾನ ಮಾಡಿರುತ್ತಾನೆ, ಈ ಘಟನೆಯು ನಮ್ಮೂರಿನ ಭೀಮರೆಡ್ಡಿ ತಂದೆ ಸಿದ್ದಣ್ಣಗೌಡ ರಾಜೋಳ್ಳಿ, ಮಲ್ಲಿಕಾಜರ್ುನ ತಂದೆ ಬಸಣ್ಣಗೌಡ ಪೊಲೀಸ್ ಪಾಟೀಲ, ಮರೆಪ್ಪ ತಂದೆ ಮಲ್ಲಪ್ಪ ಜಿನಕೇರಿ, ಮಲರೆಡ್ಡಿ ತಂದೆ ಮಹಾದೇವಪ್ಪ ಕಾಮರೆಡ್ಡಿ ಇವರು ನೋಡಿರುತ್ತಾರೆ, ಈ ಘಟನೆಯ ಬಗ್ಗೆ ನಾವು ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 22/02/2021 ರಂದು ರಾಣೆಗೆ ಬಂದು ಅಜರ್ಿ ಕೊಟ್ಟಿರುತ್ತೆವೆ, ಆದ್ದರಿಂದ ನಮ್ಮನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಜೀವದ ಭಯ ಹಾಕಿ ಜೆಸಿಬಿಯಿಂದ ನಮ್ಮ ಮನೆ ಬಿಳಿಸಿ ಮತ್ತು ಮನೆಯಲ್ಲಿದ್ದ ಬೆಲೆ ಬಾಳುವ ಸಾಮಾನುಗಳನ್ನು ಹಾಳು ಮಾಡಿ ಲೂಕ್ಸಾನ ಮಾಡಿದ ಸಯ್ಯದಭಾಷಾ ತಂದೆ ಹುಸೇನಸಾಬ ನಾಯಿಕೊಡಿ ಸಾಃ ವಡಗೇರಾ ಇವನ ಮೇಲೆ ಕಾನೂನು ರೀತಿ ಕ್ರಮ ಕೈಕೊಂಡು ನಮ್ಮ ಹೊಲ ನಮಗೆ ಬಿಡಿಸಿಕೊಡಬೇಕು ಅಂತಾ ವಿನಂತಿ ಇರುತ್ತದೆ, ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 28/2021 ಕಲಂ 447, 341, 427, 506 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ :- 10/2021 ಕಲಂ ಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 22/02/2021 ರಂದು 1-30 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ನೀಡಿದ್ದರಿಂದ ಎಮ್.ಎಲ್.ಸಿ./ ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಂಡು ಹಳೆ ಆಸ್ಪತ್ರೆಗೆ ಸ್ಕ್ಯಾನ್ ಮಾಡಿಸಲು ಹೋಗಿದ್ದರಿಂದ ಆಸ್ಪತ್ರೆಯಲ್ಲಿ ಕಾಯ್ದು ನಂತರ ಗಾಯಳುಗಳು ಹೊಸ ಆಸ್ಪತ್ರೆಗೆ ಬಂದ ನಂತರ ಅವರ ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀಮತಿ ಸೌಭಾಗ್ಯಮ್ಮ ಗಂಡ ಬಸವರಾಜ ದೊಡ್ಡಮನಿ ವಯ;38 ವರ್ಷ, ಜಾ;ಕ್ರಿಶ್ಚಿಯನ್, ಉ;ಕೂಲಿ, ಸಾ;ಅಲ್ಲಿಪುರ, ತಾ;ಜಿ;ಯಾದಗಿರಿ ರವರ ಹೇಳಿಕೆಯನ್ನು ಸಮಯ 4 ಪಿ.ಎಂ. ದಿಂದ 5 ಪಿ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ಇಂದು ದಿನಾಂಕ 22/02/2021 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಅತ್ತೆಯಾದ ನೀಲಮ್ಮ ಗಂಡ ರಾಜಪ್ಪ ದೊಡ್ಡಮನಿ ವಯ;64 ವರ್ಷ, ಇವರಿಗೆ ಕರೆದುಕೊಂಡು ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬರಬೇಕೆಂದು ತಯಾರಾಗಿ ನಮ್ಮೂರ ಗೇಟ್ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ಅಲ್ಲಿಪುರ ಸಣ್ಣ ತಾಂಡದ ಆನಂದ ತಂದೆ ಸುರೇಶ ರಾಠೋಡ ಇವರ ಆಟೋ ನಂ. ಕೆಎ-33, ಎ-8590 ನೇದ್ದು ಅಲ್ಲಿಪುರ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದಾಗ ನಾವು ಆಟೋ ನೇದ್ದಕ್ಕೆ ಕೈ ಮಾಡಿ ನಿಲ್ಲಿಸಿ ಅದೇ ಆಟೋದಲ್ಲಿ ಯಾದಗಿರಿಗೆ ಬರಲು ಕುಳಿತು ಕೊಂಡೆವು. ಆಟೋವನ್ನು ಆನಂದ ಈತನು ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಕಂಚಗಾರಹಳ್ಳಿ ಗೇಟ್ ಹತ್ತಿರ ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಒಂದು ಬುಲೆರೋ ಪಿಕಪ್ ಗೂಡ್ಸ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಮ್ಮ ಆಟೋವನ್ನು ಓವರ್ ಟೇಕ್ ಮಾಡುವಾಗ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನೇರವಾಗಿ ನಮ್ಮ ಆಟೋದ ಹಿಂದೆ ಜೋರಾಗಿ ಡಿಕ್ಕಿಕೊಟ್ಟಾಗ ಅಪಘಾತದ ರಭಸಕ್ಕೆ ನಮ್ಮ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆಟೋದಲ್ಲಿದ್ದ ನನಗೆ ಬಲಭುಜಕ್ಕೆ ಭಾರೀ ಗುಪ್ತಗಾಯ, ಬಲಸೊಂಟದ ಮೇಲೆ ಸಾದಾರಕ್ತಗಾಯ, ಬಲಗಣ್ಣಿನ ಮೇಲೆ ಸಾದಾ ಗುಪ್ತಗಾಯವಾಗಿರುತ್ತವೆ ನನ್ನ ಅತ್ತೆಗೆ ನೋಡಲು ಆಕೆಗೆ ಎದೆಗೆ, ಬಲಭುಜಕ್ಕೆ, ಎಡಮೊಣಕಾಲಿಗೆ ಸಾದಾ ಗುಪ್ತಗಾಯಗಳಾಗಿದ್ದು ಇರುತ್ತವೆ. ಆಟೋ ಚಾಲಕ ಆನಂದ ಈತನಿಗೆ ಬಲಭುಜಕ್ಕೆ ಗುಪ್ತಗಾಯವಾಗಿರುತ್ತದೆ. ನಮಗೆ ಅಪಘಾತಪಡಿಸಿದ ಬುಲೆರೋ ಪಿಕಪ್ ಗೂಡ್ಸ್ ವಾಹನವನ್ನು ಘಟನಾ ಸ್ಥಳದಿಂದ ಸ್ವಲ್ಪ ದೂರ ಹೋಗಿ ನಿಲ್ಲಿಸಿದ್ದು ಅದರ ನಂಬರ ನೋಡಲಾಗಿ ಅದರ ನಂಬರ ಕೆಎ-32, ಸಿ-9812 ನೇದ್ದು ಇದ್ದು, ನಮಗೆ ಅಪಘಾತಪಡಿಸಿದ ವಾಹನದ ಚಾಲಕನು ಗಡಿಬಿಡಿ ಮಾಡುತ್ತಾ ವಾಹನದ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ ಆತನನ್ನು ಹಾಗೂ ವಾಹನವನ್ನು ನಾವು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಅದೇ ರಸ್ತೆ ಮಾರ್ಗವಾಗಿ ಹೊರಟಿದ್ದ ಅಲ್ಲಿಪುರ ಸಣ್ಣ ತಾಂಡಾದ ನಮಗೆ ಈ ಮೊದಲೇ ಪರಿಚಯ ಇರುವ ರಾಜು ತಂದೆ ಪೂರ್ಯಾ ರಾಠೋಡ ಹಾಗೂ ಮುದ್ನಾಳ ಸಣ್ಣ ತಾಂಡಾದ ಕಪಿಲ ತಂದೆ ಗೋಮು ರಾಠೋಡ ಇವರುಗಳು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಅವರು ನಮಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಮೊದಲು ಯಾದಗಿರಿಯ ನಾಗಣ್ಣ ಮುದ್ನಾಳ ಡಾಕ್ಟರ್ ಹತ್ತಿರ ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಂತರ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಇರುತ್ತದೆ. ನಾನು ಈ ವಿಷಯವನ್ನು ನನ್ನ ಗಂಡನಿಗೆ ಪೋನ್ ಮಾಡಿ ತಿಳಿಸಿದ್ದು ಅವರು ಯಾದಗಿರಿಗೆ ಆಸ್ಪತ್ರೆಗೆ ಬಂದು ನಮಗೆ ವಿಚಾರಿಸಿ ನಂತರ ಈ ಘಟನೆ ಬಗ್ಗೆ ಕೇಸು ಕೊಡೋಣ ಅಂತಾ ತಿಳಿಸಿದ ಮೇಲೆ ನನ್ನ ಹೇಳಿಕೆಯನ್ನು ತಡವಾಗಿ ನೀಡಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 22/02/2021 ರಂದು 9 ಎ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ಅತ್ತೆ ನೀಲಮ್ಮ ಇಬ್ಬರು ಕೂಡಿಕೊಂಡು ಆಟೋ ನಂಬರ ಕೆಎ-33, ಎ-8590 ನೇದ್ದರಲ್ಲಿ ಯಾದಗಿರಿಗೆ ಬರುವಾಗ ಬುಲೆರೋ ಪಿಕಪ್ ಗೂಡ್ಸ್ ನಂಬರ ಕೆಎ-32, ಸಿ-9812 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಅಪಘಾತ ಮಾಡಿ, ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 5-30 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 10/2021 ಕಲಂ 279, 337, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 23-02-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080