ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-12-2022ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: ಕಲಂ:279, 304(ಎ) ಐಪಿಸಿ : ದಿನಾಂಕ:02/12/2022 ರಂದು ಮೃತನು ಬೆಳಿಗ್ಗೆ ತನ್ನ ಮನೆಯ ಮುಂದಿನ ಹೆಂಡಿಕಸ ಬೊಳೆಯುತ್ತಿದ್ದಾಗ, ಆರೋಪಿತನು ತಾನು ಚಲಾಯಿಸವು  ಮಹಿಂದ್ರಾ ಪಿಕಪ್ ಗಾಡಿ ನಂ: ಕೆಎ-13, ಸಿ-2987 ನೇದ್ದನ್ನು ಚಾಲು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಹಿಂದೆ ಮುಂದೆ ನೋಡದೆ ಒಮ್ಮೆಲೆ ಸದರಿ ಪಿಕಪ್ನ್ನು ಹಿಂದೆ ತೆಗೆದುಕೊಂಡಿದ್ದರಿಂದ ಮೃತನಿಗೆ ಡಿಕ್ಕಿಯಾಗಿದ್ದು, ಮೃತನು ಕೆಳಗೆ ಬಿದ್ದಾಗ ಪಿಕಪ್ ಗಾಲಿಯು ಮೃತನ ಬಲಗಡೆ ಬುಜದ ಮೇಲಿಂದ ಬಲಗಡೆ ದವಡೆ & ತಲೆಯ ಮೇಲೆ ಗಾಲಿ ಹೋಗಿ ಭಾರಿ ರಕ್ತಗಾಯವಾಗಿದ್ದು, ನನ್ನ ಗಂಡನು ಚೀರಾಡಿದಾಗ, ಫಿರ್ಯಾದಿದಾರರು & ಮೃತನ ಮಗ ಹಾಗೂ ಆರೋಪಿತನು ಕೂಡಿ ಮೃತನಿಗೆ ನೋಡಿ, ಮೃತನಿಗೆ ಇಲಾಜು ಕುರಿತು ಒಂದು ಖಾಸಗಿ ವಾಹನದಲ್ಲಿ ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದು ಪ್ರಥಮೋಪಚಾರ ಮಾಡಿಸಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ವಿಜಯಪೂರಕ್ಕೆ 108 ವಾಹನದಲ್ಲಿ ಫಿರ್ಯಾದಿ ಹಾಗೂ ಸಂಬಂದಿಕರು ಕೂಡಿ ಒಯ್ಯವಾಗ ಬಾಗೇವಾಡಿ ದಾಟುವಾಗ ಮೃತನು ಮೃತಪಟ್ಟಿದ್ದನ್ನು ನೊಡಿ ವಾಪಸು ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದು ನಂತರ ಫಿರ್ಯಾದಿದಾರರು ಠಾಣೆಗೆ ಬಂದು ದೂರು ಕೊಟ್ಟಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.   

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 171/2022 ಕಲಂ: 143, 147, 148, 448, 323, 324, 504, 506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ 01.12.2022 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ  ಆರೋಪಿತರು ಮಾಣಿಬಾಯಿಯೊಂದಿಗೆ ಅವಾಚ್ಯ ಶಬ್ದಗಳೀಂದ ಬೈದು ಜೀವದ ಬೆದರಿಕೆ ಹಾಕಿದ್ದು ಆ ನಂತರ ನಿನ್ನೆ ದಿನಾಂಕ 01.12.2022 ರ ರಾತ್ರಿ 10;00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಮನೆಗೆ ಹೋಗಿ ಆತನೊಂದಿಗೆ ಜಗಳ ತೆಗೆದು ಆತನಿಗೆ ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ಆತನ ಮನೆಯ ಮುಂದೆ ಅಂಗಳದಲ್ಲಿ ಕೈಯಿಂದ, ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ಮನೆಯಲ್ಲಿ ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 171/2022 ಕಲಂ: 143, 147, 148, 448, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಯಾದಗಿರಿ ಗ್ರಾಮೀಣ   ಪೊಲೀಸ್ ಠಾಣೆ:-
ಗುನ್ನೆ ನಂ: 166/2022 ಕಲಂ 143, 147, 148, 427, 323, 324, 504, 506 ಸಂ. 149 ಐಪಿಸಿ: ದಿನಾಂಕ: 29-11-2022 ರಂದು ಪಿರ್ಯಾಧಿ ಚಿಕ್ಕಪ್ಪನ ಮಗಳ ಮದುವೆ ಪ್ರಯುಕ್ತ ದಿನಾಂಕ 28-11-2022 ರಂದು ಸಂಜೆ 6-00 ಗಂಟೆ ಸುಮಾರಿಗೆ ವರ್ಕನಳ್ಳಿ ತಾಂಡಕ್ಕೆ ಹೋಗಿ ಮದುವೆ ಮೆರವಣಿಗೆಯಲ್ಲಿದ್ದಾಗ ದಿನಾಂಕ 29-11-2022 ರಂದು 1-30 ಎ.ಎಂ ಸುಮಾರಿಗೆ ಊಟ ಮಾಡುವದಿದೆ ಡಿ.ಜೆ ಬಂದ ಮಾಡಿ ಅಂತಾ ಆರೋಪಿತರ ಪೈಕಿ ಶಂಕರ ಈತನಿಗೆ ಹೇಳಿದಾಗ ಸದರಿಯವನು ನನ್ನ ಸಂಗಡ ಜಗಳ ತೆಗೆದು ಅಲ್ಲೆ ಬಿದ್ದಿದ್ದ ಕಟ್ಟಿಗೆ ಬಡಿಗೆಯಿಂದ ಹೊಡೆದು ತರಚಿದರಕ್ತಗಾಯ ಮಾಡಿ ಮೋಟರ ಸೈಕಲ ನಂ. ಏಂ-33-ಇಂ-4292 ನೆದ್ದು ಜಖಂಗೊಳಿಸಿ ಆರೋಫಿತರೆಲ್ಲರೂ ಸೇರಿ ಕೈಯಿಂದ ಹೊಡೆದು,  ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 204/2022 ಕಲಂ 366 ಐ.ಪಿ.ಸಿ: ಇಂದು ದಿನಾಂಕ: 02/12/2022 ರಂದು 07-30 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಭಾಗಪ್ಪ ತಂದೆ ಗುರಲಿಂಗಪ್ಪ ಜಾಯಿ ವಯಸ್ಸು: 38 ವರ್ಷ ಜಾತಿ: ಗಾಣಿಗ, ಉಃ ಒಕ್ಕಲುತನ ಸಾಃ ಸಗರ(ಬಿ) ತಾಃ ಶಹಾಪೂರ, ಜಿಃ ಯಾದಗಿರಿ ಮೋ.ನಂ: 9008230332 ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ , ನನಗೆ ಮೂರು ಜನ ಹೆಣ್ಣು ಮಕ್ಕಳಿದ್ದು 1) ಭಾಗ್ಯಶ್ರಿ ವಯಸ್ಸು: 17 ವರ್ಷ 6 ತಿಂಗಳು 2) ತನುಜಾ ವಯಾ: 14 ವರ್ಷ 3) ಅಮೃತ ವಯಾ: 8 ವರ್ಷ ವಯಸ್ಸು ಇದ್ದು, ನನ್ನ ಹಿರಿಯ ಮಗಳಾದ ಭಾಗ್ಯಶ್ರೀ ಇವಳು ದ್ವಿತಿಯ ಪಿ.ಯು.ಸಿ ವರ್ಷದಲ್ಲಿ ಜೇವರಗಿ ಕಾಲೇಜಿನಲ್ಲಿ ವಿದ್ಯಾಬ್ಯಾಸ್ ಮಾಡುತ್ತಾ ಲೇಡಿಜ ಹಾಸ್ಟೇಲ್ದಲ್ಲಿ ಇರುತ್ತಾಳೆ. ಆಗಾಗ ನನ್ನ ಮಗಳು ಜೇವರಿಗಿಯಿಂದ ನಮ್ಮ ಊರಿಗೆ ಹೋಗಿ ಬರುವುದು ಮಾಡುತ್ತಿದ್ದಳು. ನಮ್ಮ ತಂಗಿಯಾದ ರೇಣುಕ ಇವಳಿಗೆ ಯಡ್ರಾಮಿ ತಾಲೂಕಿನ ಕೊಣಸಿರಸಗಿ ಗ್ರಾಮದ ರಾಜು ತಂದೆ ಸಿದ್ದಣ್ಣ ಈತನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ತಂಗಿಯ ಗಂಡನ ತಮ್ಮನಾದ ರವಿಕುಮಾರ ತಂದೆ ಸಿದ್ದಣ್ಣ ಚಾಂದಕವಟೆ ಇತನು ಆಗಾಗ ನಮ್ಮ ಊರಿಗೆ ಬಂದು ಹೋಗುವದು ಮಾಡುವುದರಿಂದ ನನ್ನ ಮಗಳಿಗೆ ಮತ್ತು ರವಿ ಈತನಿಗೆ ತುಂಬಾ ಸಲಿಗೆಯಿಂದ ಇರುತ್ತಿದ್ದನು. ಸುಮಾರು 2 ತಿಂಗಳ ಹಿಂದೆ ನಾನು ನನ್ನ ಮಗಳಿಗೆ ಕಾಲೇಜುನಿಂದ ನಮ್ಮೂರಿಗೆ ಕರೆದುಕೊಂಡು ಬಂದಿರುತ್ತೇನೆ.
        ಹೀಗಿರುವಾಗ ದಿನಾಂಕ: 26/11/2022 ರಂದು ಬೆಳಿಗ್ಗೆ ಸಮಾರಿಗೆ ನಾನು ಶಹಾಪೂರಕ್ಕೆ ಖಾಸಗಿ ಕೆಲಸದ ನಿಮಿತ್ಯವಾಗಿ ಬಂದಿದ್ದೇನು. ನನ್ನ ಹೆಂಡತಿಯು ಹೊಲಕ್ಕೆ ಹೋಗಿದ್ದರು ಮನೆಯಲ್ಲಿ ನನ್ನ ಹಿರಿಯ ಮಗಳಾದ ಭಾಗ್ಯಶ್ರೀ ಇವಳು ಮತ್ತು ಅವಳ ಜೋತೆಯಲ್ಲಿ ನನ್ನ ತಾಯಿಯಾದ ಮಲ್ಲಮ್ಮ ಗಂಡ ಗುರಲಿಂಗಪ್ಪ ಇವರಿಬ್ಬರೂ ಮನೆಯಲ್ಲಿ ಇದ್ದರು. ನಂತರ ನಾನು ಶಹಾಪೂರದಿಂದ ವಾಪಸ್ಸು ಸಾಯಾಂಕಾಲ ಸುಮಾರಿಗೆ ಸಗರಗೆ ಹೋದಾಗ ನನ್ನ ತಾಯಿ ಮಲ್ಲಮ್ಮ ಇವಳು ತಿಳಿಸಿದ್ದೆನೆಂದರೆ, ನಾನು ಮನೆಯ ಕಟ್ಟೆಯ ಮೇಲೆ ಕುಳಿತಾಗ ಮೊಮ್ಮಗಳಾದ ಭಾಗ್ಯಶ್ರೀ ಇವಳಿಗೆ ನಮ್ಮ ಸಂಬಂದಿಕರಾದ ರವಿಕುಮಾರ ತಂದೆ ಸಿದ್ದಣ್ಣ ಚಾಂದಕವಟೆ ಸಾ: ಕೊಣಸಿರಸಗಿ ಈತನು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ಕರೆದುಕೊಂಡು ಹೋಗಿರುತ್ತಾನೆ ಇಲ್ಲಿಯವರೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾಳೆ. ನಂತರ ಈ ವಿಷಯವನ್ನು ನನ್ನ ಹೆಂಡತಿಯಾದ ಲಕ್ಷ್ಮೀ ವಯಾ: 32 ವರ್ಷ ಇವಳಿಗೆ ತಿಳಿಸಿರುತ್ತೇನೆ. ನಂತರ ಎಲ್ಲರೂ ಕೂಡಿ ನನ್ನ ಮಗಳ ಬಗ್ಗೆ ನಮ್ಮ ಸಂಬಂದಿಕ ಗ್ರಾಮಗಳಾದ ಕೋಣಸಿರಸಗಿ, ಸಿಂದಗಿ ತಾಲೂಕಿನ ಮಲಘಾಣದಲ್ಲಿ ವಿಚಾರಿಸಲಾಗಿ ಅವರ ಬಗ್ಗೆ ಎಲ್ಲಿಯೂ ಮಾಹಿತಿ ಸಿಕ್ಕಿರುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿರುತ್ತೇನೆ.
       ಕಾರಣ ನನ್ನ ಹಿರಿಯ ಮಗಳಾದ ಭಾಗ್ಯಶ್ರೀ ಇವಳನ್ನು ನಮ್ಮ ಸಂಬಂದಿಕನಾದ ರವಿಕುಮಾರ ತಂದೆ ಸಿದ್ದಣ್ಣ ಚಾಂದಕವಟೆ ಸಾ: ಕೋಣಸಿರಸಗಿ ತಾ: ಯಡ್ರಾಮಿ ಈತನು ನಮ್ಮ ಮನೆಗೆ ಬಂದು ಅಪಹರಣ ಮಾಡಿಕೊಂಡು ಹೋಗಿದ್ದು, ಆತನ ಮೇಲೆ ಸೂಕ್ತ ಕಾನೂನ ಕ್ರಮ ಕೈಗೊಳ್ಳಲು ವಿನಂತಿ.  ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 204/2022 ಕಲಂ 366 ಐ.ಪಿ.ಸಿ ನೇದ್ದರ ಪ್ರಕಾರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ 279, 337, 338 ಐಪಿಸಿ: ದಿನಾಂಕ 01.12.2022 ರಂದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದರಿಂದ ನಾನು ರಾಮಕುಮಾರ ಎ.ಎಸ್.ಐ ಸೈದಾಪೂರ ಠಾಣೆ ವಿಮ್ಸ್ ಆಸ್ಪತ್ರೆಗೆ ಭೆಟಿನೀಡಿ ಗಾಯಾಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಗಾಯಾಳುವಿನ ತಾಯಿಯಾದ ಮರೆಮ್ಮ ಗಂಡ ಲಕ್ಷ್ಮಣ ಮೇತ್ರಿ, ವ|| 50 ವರ್ಷ, ಜಾ|| ಮಾದಿಗ, ಉ|| ಹೊಲಮನೆಕೆಲಸ, ಸಾ|| ಬಳಿಚಕ್ರ ಗ್ರಾಮ ಇವರ ಹೇಳಿಕೆ ಪಡೆದುಕೊಂಡಿರುತ್ತೇನೆ. ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ 30.11.2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿದ್ದೆ. ನಮ್ಮ ಹೊಲ ಬಳಿಚಕ್ರ ತಾಂಡದ ರೋಡಿನ ಪಕ್ಕಕ್ಕಿದೆ. ನಾನು ಹೊಲದಲ್ಲಿರುವಾಗ ಆದಿನ ಮಧ್ಯಾಹ್ನ 3.20 ಗಂಟೆ ಸುಮಾರಿಗೆ ತಾಂಡದ ಕಡೆಗೆ ಹೋಗುವ ಯಾರೋ ಒಬ್ಬ ಹುಡುಗ ಬಳಿಚಕ್ರ ಮತ್ತು ಬಳಿಚಕ್ರ ತಾಂಡದ ನಡುವೆ ಜಲಾಲಪೂರ ಹತ್ತಿರ ರಸ್ತೆಯ ಮೇಲೆ ನನ್ನಮಗನ ಮೋಟಾರ್ ಸೈಕಲ್ಗೆ ಆಟೋ ಗುದ್ದಿದೆ ಅಂತಾ ತಿಳಿಸಿದ್ದ. ಕೂಡಲೇ ನಾನು ಸ್ಥಳಕ್ಕೆ ಹೋದೆ, ಸ್ಥಳದಲ್ಲಿ ನನ್ನಮಗನ ಮೋಟಾರ್ ಸೈಕಲ್ ಸಂಖ್ಯೆ ಕೆಎ-03-ಹೆಚ್.ಕ್ಯೂ-6900 ಮತ್ತು ಆಟೋ ವಾಹನ ಸಂಖ್ಯೆ ಕೆಎ-33-6713 ವಾಹನಗಳು ಜಖಂಗೊಂಡು ಬಿದ್ದಿದ್ದವು. ಸ್ಥಳದಲ್ಲಿ 4-5 ಜನರು ನಿಂತಿದ್ದರು, ಎಕ್ಸಿಡೆಂಟ್ ಯಂಗಾಗ್ಯದ ನನ್ನಮಗ ಎಲ್ಲಿ ಅಂತಾ ಅಲ್ಲಿದ್ದವರಿಗೆ ನಾನು ವಿಚಾರಿಸಿದಾಗ ನನ್ನಮಗ ಮೋಟಾರ್ ಸೈಕಲ್ ಮೇಲೆ ಬಳಿಚಕ್ರದಿಂದ ತಾಂಡದ ಕಡೆಗೆ ಬರುವಾಗ ತಾಂಡದ ಕಡೆಯಿಂದ ನಮ್ಮೂರು ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದವ ಆಟೋ ವೇಗವಾಗಿ ಓಡಿಸಿಕೊಂಡು ರೋಡಿನ ಪೂತರ್ಿ ಬಲಭಾಗಕ್ಕೆ ಒಯ್ದು ನನ್ನಮಗನ ಮೋಟಾರ್ ಸೈಕಲ್ಗೆ ಮಧ್ಯಾಹ್ನ 3.15 ಗಂಟೆ ಸುಮಾರಿಗೆ ಗುದ್ದಿದ್ದರಿಂದ ನನ್ನಮಗನಿಗೆ ಮತ್ತು ಆಟೋ ಚಾಲಕನಿಗೆ ಹಾಗೂ ಆಟೋದಲ್ಲಿದ್ದ ಒಬ್ಬ ಹೆಣ್ಮಗಳಿಗೆ ಗಾಯಗಳಾಗಿದ್ದರಿಂದ ಅವರಿಗೆ ಅಂಬುಲೆನ್ಸ್ನಲ್ಲಿ ಬಳಿಚಕ್ರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ಅಲ್ಲಿಂದ ನಾನು ಬಳಿಚಕ್ರ ಸರಕಾರಿ ಆಸ್ಪತ್ರೆಗೆ ಹೋದೆ. ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದ ನನ್ನಮಗ ಶ್ರಾವಣಕುಮಾರ ಈತನಿಗೆ ನೋಡಿದಾಗ ನನ್ನಮಗನ ಬಲಹಣೆ ಮೆಲಕಿನ ಹತ್ತಿರ ಮತ್ತು ಬಲಗಣ್ಣಿಗೆ ಹಾಗೂ ಬಲಗೈಗೆ ಪೆಟ್ಟುಗಳಾಗಿ ಬೇವಸಾಗಿದ್ದ. ಆಟೋದಲ್ಲಿದ್ದ ಬಳಿಚಕ್ರ ತಾಂಡದ ರಾಮಿಬಾಯಿ ಗಂಡ ರಾಮು ಚವ್ಹಾಣ ಹಾಗೂ ಆಟೋ ಚಾಲಕ ರಾಜು ತಂದೆ ಸೋಮ್ಲಾ ಚವ್ಹಾಣ ಇವರಿಗೂ ಸಹ ಪೆಟ್ಟುಗಳಾಗಿದ್ದವು. ಬಳಿಚಕ್ರ ವೈದ್ಯಾಧಿಕಾರಿಗಳು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಅಂಬುಲೆನ್ಸ್ ವಾಹನದಲ್ಲಿ ನನ್ನಮಗ ಮತ್ತು ಗಾಯಗೊಂಡ ರಾಜು, ರಾಮಿಬಾಯಿಗೆ ಹಾಕಿಕೊಂಡು ನಾನು ಮತ್ತು ಗಾಯಾಳುಗಳ ಸಂಬಂಧಿಕರು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿದ್ದೆವು.
   ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಡಾಕ್ಟರ್ ರವರು ನನ್ನಮಗನಿಗೆ ಸೀರೆಸಿದೆ ರಾಯಚೂರುಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದ ನಾನು, ನನ್ನಮಗಳು ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನಮಗನಿಗೆ ಸೇರಿಕೆ ಮಾಡಿದ್ದೆವು. ಇಂದು ಬೆಳಗಿನಜಾವ ರಾಯಚೂರು ವೈದ್ಯಾಧಿಕಾರಿಗಳು ವಿಮ್ಸ್ ಬಳ್ಳಾರಿಗೆ ಕರೆದ್ಯೋಯುವಂತೆ ಹೇಳಿದ್ದರಿಂದ ನನ್ನಮಗನಿಗೆ ಇಲ್ಲಿಗೆ ಅಂದರೆ ವಿಮ್ಸ್ ಬಳ್ಳಾರಿ ಆಸ್ಪತ್ರೆಗೆ ಇಂದು ಬೆಳಿಗ್ಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದೇವೆ. ನನ್ನಮಗ ಶ್ರಾವಣಕುಮಾರ ತಂದೆ ಲಕ್ಷ್ಮಣ ಮೇತ್ರಿ, ವ|| 28 ವರ್ಷ, ಉ|| ಒಕ್ಕಲುತನ ಈತನು ಇಲ್ಲಿಯವರೆಗೂ ಸಹ ಪ್ರಜ್ಞಾ ಸ್ಥಿತಿಗೆ ಬಂದಿಲ್ಲ. ರಸ್ತೆ ಅಪಘಾತ ನಡೆದೋಗಲು ಕಾರಣಿಭೂತನಾದ ಆಟೋ ಚಾಲಕನಾದ ರಾಜು ತಂದೆ ಸೋಮ್ಲಾ ಚವ್ಹಾಣ, ವ|| 29 ವರ್ಷ, ಜಾ|| ಲಮಾಣಿ, ಉ|| ಆಟೋಚಾಲಕ, ಸಾ|| ಬಳಿಚಕ್ರ ತಾಂಡ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.
 

ಇತ್ತೀಚಿನ ನವೀಕರಣ​ : 09-12-2022 04:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080