ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-11-2022

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ: 379 ಐಪಿಸಿ : ದಿನಾಂಕ:05/11/2022 ರಂದು 11 ಎಎಮ್ ಕ್ಕೆ ಶ್ರೀ ಬನ್ನಪ್ಪ ತಂದೆ ರಾಚಪ್ಪ ಸೆಕಸಿಂಧಿ, ವ:28, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಮಾಚನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಹೊಲ ಮನೆಗಳಿಗೆ ಹೋಗಿ ಬರಲು ಅಂತಾ ಒಂದು ಬಜಾಜ್ ಪಲ್ಸರ್ ಎನ್.ಎಸ್ 160 ಮೋಟರ್ ಸೈಕಲ್ ನಂ. ಕೆಎ 33 ಡಬ್ಲ್ಯೂ 7572 ನೇದನ್ನು 2018 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತೇನೆ. ಅದರ ಚೆಸ್ಸಿ ನಂ. ಒಆ2ಂ92ಅಙ3ಎಅಏ08312 ಇಂಜನ್ ನಂ. ಎಇಙಅಎಏ09851 ಮೋಟರ್ ಸೈಕಲ್ ನನ್ನ ಹೆಸರಿನಲ್ಲಿ ನೊಂದಣಿ ಆಗಿರುತ್ತದೆ. ನಾನು ಹೊಲಮನೆ ಎಲ್ಲಿಯಾದರೂ ಹೊರಗಡೆ ಹೋಗಿ ಬಂದ ನಂತರ ನನ್ನ ಮೋಟರ್ ಸೈಕಲ್ ಅನ್ನು ನಮ್ಮ ಮನೆ ಸಮೀಪ ಇರುವ ನಮ್ಮೂರ ಸರಕಾರಿ ಶಾಲೆ ಪಕ್ಕದಲ್ಲಿ ನಿಲ್ಲಿಸಿ ಮನೆಗೆ ಹೋಗುತ್ತೇನೆ. ಎಂದಿನಂತೆ ದಿನಾಂಕ:16/10/2022 ರಂದು ನಾನು ನಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ನನ್ನ ಮೋಟರ್ ಸೈಕಲನ್ನು ನಮ್ಮೂರ ಸರಕಾರಿ ಶಾಲೆ ಪಕ್ಕದಲ್ಲಿ ನಿಲ್ಲಿಸಿ, ಹ್ಯಾಂಡಲ್ ಲಾಕ್ ಮಾಡಿಕೊಂಡು ಮನೆಗೆ ಹೋಗಿ ಊಟ ಮಾಡಿ ಮಲಗಿಕೊಂಡೆನು. ಮರು ದಿವಸ ದಿನಾಂಕ:17/10/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎದ್ದು ಸಂಡಾಸಕ್ಕೆ ಬಯಲು ಕಡೆ ಹೋಗುವಾಗ ರಾತ್ರಿ ನಿಲ್ಲಿಸಿದ ಜಾಗದಲ್ಲಿ ನನ್ನ ಬಜಾಜ್ ಪಲ್ಸರ್ ಮೋಟರ್ ಸೈಕಲ್ ಕಾಣಲಿಲ್ಲ ಆಗ ಗಾಭರಿಯಾದ ನಾನು ಅಲ್ಲಿಯೇ ಸುತ್ತಮುತ್ತ ಎಲ್ಲಾ ಕಡೆ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಆಗ ನನ್ನ ಸ್ನೇಹಿತರಾದ ಸಂಗಾರೆಡ್ಡಿ ತಂದೆ ಹಣಮಂತ್ರಾಯ ಪರಸಾಪೂರ ಮತ್ತು ಶಂಕ್ರೆಪ್ಪ ತಂದೆ ಸಿದ್ದಪ್ಪ ಮಡಿವಾಳ ಇವರಿಗೆ ನನ್ನ ಮೋಟರ್ ಸೈಕಲ್ ಕಳುವಾದ ವಿಷಯ ಹೇಳಿದಾಗ ಅವರು ಬಂದರು. ನಂತರ ನಾವೆಲ್ಲರೂ ನಮ್ಮೂರು ಸುತ್ತಮುತ್ತ ಮತ್ತು ಬೂದನಾಳ, ಬೇನಕನಹಳ್ಳಿ, ಬಿಳ್ಹಾರ ಮುಂತಾದ ಗ್ರಾಮಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 16/10/2022 ರಂದು 9 ಪಿಎಮ್ ದಿಂದ ದಿನಾಂಕ:17/10/2022 ರಂದು ಬೆಳಗ್ಗೆ 6 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಬಜಾಜ್ ಪಲ್ಸರ್ ಎನ್.ಎಸ್ 160 ಮೋಟರ್ ಸೈಕಲ್ ನಂ. ಕೆಎ 33 ಡಬ್ಲ್ಯೂ 7572 ಅ:ಕಿ: 50,000/- ನೇದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಬಜಾಜ್ ಪಲ್ಸರ್ ಎನ್.ಎಸ್ 160 ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನನ್ನ ಬಜಾಜ್ ಪಲ್ಸರ್ ಎನ್.ಎಸ್ 160 ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 123/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 124/2022 ಕಲಂ: 379 ಐಪಿಸಿ : ದಿನಾಂಕ:05/11/2022 ರಂದು 5-30 ಪಿಎಮ್ ಕ್ಕೆ ಶ್ರೀ ಪ್ರಸನ್ನಕುಮಾರ ತಂದೆ ಶ್ರೀರಾಮಮೂತರ್ಿ ಸುಂಕವಲ್ಲಿ, ವ:35, ಜಾ:ಕಮ್ಮಾ, ಉ:ಒಕ್ಕಲುತನ ಸಾ:ನಡುಗಡ್ಡಿ ಕ್ಯಾಂಪ ಬಾಗಲವಾಡ ತಾ:ಮಾನವಿ ಜಿ:ರಾಯಚೂರು ಹಾ:ವ:ತುಮಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಾನು ತುಮಕೂರು ಗ್ರಾಮದ ಇಂದ್ರಮ್ಮಗೌಡಸಾನಿ ಇವರ ಹೊಲವನ್ನು ಲೀಜಿಗೆ ಮಾಡುತ್ತಿದ್ದು, ಹೊಲದಲ್ಲಿಯೇ ಶೆಡ್ಡ ಹಾಕಿಕೊಂಡು ನಮ್ಮ ತಂದೆ-ತಾಯಿಯೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ಸದರಿ ನಮ್ಮ ಹೊಲ ಮನೆ ಕೆಲಸಕ್ಕೆ ಅಂತಾ ನಮ್ಮ ತಾಯಿಯವರಾದ ಎಸ್. ಬೇಬಿ ಗಂಡ ಶ್ರೀರಾಮಮೂತರ್ಿ ಇವರ ಹೆಸರಿನಲ್ಲಿ ಒಂದು ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯನ್ನು ಖರೀದಿ ಮಾಡಿರುತ್ತೇವೆ. ಟ್ರ್ಯಾಕ್ಟರ ನಂ. ಕೆಎ 36 ಟಿಸಿ 5438 ಇದ್ದು, ಟ್ರ್ಯಾಲಿ ನಂ. ಕೆಎ 36 ಟಿಸಿ 6156 ಟ್ರ್ಯಾಲಿ ಚೆಸ್ಸಿ ನಂ. ಒಂಇಘಒಔ12016 ಇರುತ್ತದೆ. ಸದರಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯಿಂದ ನಮ್ಮ ಹೊಲದಲ್ಲಿ ಕೆಲಸ ಆದ ನಂತರ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯನ್ನು ನಮ್ಮ ಶೆಡ್ಡ ಹತ್ತಿರ ತಂದು ನಿಲ್ಲಿಸುತ್ತೇವೆ. ಹೀಗಿದ್ದು ದಿನಾಂಕ:14/10/2022 ರಂದು ನಮ್ಮ ಮೇಲ್ಕಂಡ ಟ್ರ್ಯಾಲಿಯನ್ನು ನಮ್ಮ ಶೆಡ್ಡ ಹತ್ತಿರ ನಿಲ್ಲಿಸಿ, ಟ್ರ್ಯಾಕ್ಟರದೊಂದಿಗೆ ಹೊಲದಲ್ಲಿ ಟ್ರ್ಯಾಕ್ಟರದಿಂದ ಉಳುಮೆ ಮಾಡಲು ಹೋಗಿದ್ದು, ಸಾಯಂಕಾಲದ ವರೆಗೆ ಹೊಲ ಉಳುಮೆ ಆದ ನಂತರ ಟ್ರ್ಯಾಕ್ಟರದೊಂದಿಗೆ ಮನೆಗೆ ಬರಬೇಕೆಂದರೆ ಮಳೆ ಬಂದಿದ್ದರಿಂದ ಟ್ರ್ಯಾಕ್ಟರ ಕೆಸರಿನಲ್ಲಿ ಸಿಕ್ಕು ಬಿಳಲಾರಂಭಿಸಿದ್ದರಿಂದ ಟ್ರ್ಯಾಕ್ಟರನ್ನು ಹೊಲದಲ್ಲಿಯೇ ಬಿಟ್ಟು ಬಂದೆವು. ನಮ್ಮ ಟ್ರ್ಯಾಲಿ ಕೆಎ 36 ಟಿಸಿ 6156 ನೇದನ್ನು ನಮ್ಮ ಶೆಡ್ಡ ಹತ್ತಿರ ನಿಂತಿದ್ದು, ರಾತ್ರಿ ನಾನು ಊಟ ಮಾಡಿದ ನಂತರ 7 ಗಂಟೆ ಸುಮಾರಿಗೆ ಟ್ರ್ಯಾಲಿಯನ್ನು ನೋಡಿಕೊಂಡು ಶೆಡ್ಡಿನಲ್ಲಿ ಹೋಗಿ ಮಲಗಿಕೊಂಡೆನು. ಮರು ದಿವಸ ದಿನಾಂಕ:15/10/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎದ್ದು ನಮ್ಮ ಶೆಡ್ಡಿನಿಂದ ಹೊರಗಡೆ ಬಂದೆನು. ನಮ್ಮ ಶೆಡ್ಡ ಮುಂದೆ ನಿಲ್ಲಿಸಿದ ನಮ್ಮ ಟ್ರ್ಯಾಲಿ ಕಾಣಲಿಲ್ಲ. ಆಗ ಗಾಬರಿಯಾದ ನಾನು ನಮ್ಮ ತಂದೆ ಶ್ರೀರಾಮಮೂತರ್ಿ ಮತ್ತು ನಮ್ಮಲ್ಲಿ ಕೆಲಸ ಮಾಡುವ ಆಳು ಹುಸೇನ ಇವರಿಗೆ ನಮ್ಮ ಟ್ರ್ಯಾಲಿ ಕಾಡ್ತಾ ಇಲ್ಲ ಎಂದು ಕೇಳಿದಾಗ ಅವರು ಕೂಡಾ ನಿನ್ನೆ ರಾತ್ರಿ ಇಲ್ಲಿಯೇ ನಿಂತಿತ್ತು ಎಂದು ಹೇಳಿದರು. ನಾವು ಮೂರು ಜನ ಸೇರಿ ನಾವು ಲೀಜಿಗೆ ಮಾಡುವ ಹೊಲದ ಸುತ್ತಮುತ್ತ ನಮ್ಮ ಟ್ರ್ಯಾಲಿಯನ್ನು ಹುಡುಕಾಡಿದರು ನಮ್ಮ ಟ್ರ್ಯಾಲಿ ಸಿಗಲಿಲ್ಲ. ಆಗ ನಾನು ತುಮಕೂರು ಗ್ರಾಮದ ಸಾಬಣ್ಣ ತಂದೆ ಹಣಮಂತ ಪಿಲ್ಲೆ ಮತ್ತು ರಂಗಯ್ಯ ತಂದೆ ಲಚಮಣ್ಣ ಇವರಿಗೆ ಹೇಳಿದಾಗ ಅವರು ಕೂಡಾ ಬಂದರು. ನಾವೆಲ್ಲರೂ ಸೇರಿ ನಮ್ಮ ಟ್ರ್ಯಾಲಿಯನ್ನು ತುಮಕೂರು, ಕೊಂಕಲ್, ಅನಕಸೂಗೂರು, ಐಕೂರು ಮುಂತಾದ ಕಡೆ ಹೋಗಿ ಹುಡುಕಾಡಿದೆವು. ಎಲ್ಲಿಯೂ ನಮ್ಮ ಟ್ರ್ಯಾಲಿ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 14/10/2022 ರಂದು 7 ಪಿಎಮ್ ದಿಂದ ದಿನಾಂಕ:15/10/2022 ರಂದು ಬೆಳಗ್ಗೆ 6 ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ತಾಯಿ ಹೆಸರಿನಿಲ್ಲಿರುವ ಟ್ರ್ಯಾಲಿ ನಂ. ಕೆಎ 36 ಟಿಸಿ 6156 ಅ:ಕಿ: 70,000/- ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನಮ್ಮ ಟ್ರ್ಯಾಲಿಯನ್ನು ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ನಮ್ಮ ತಾಯಿಯವರು ಸದರಿ ನಮ್ಮ ಟ್ರ್ಯಾಲಿ ಕಳುವಾದ ಬಗ್ಗೆ ಫಿರ್ಯಾಧಿ ಕೊಡಲು ನನಗೆ ಸ್ಪೇಷಲ್ ಪವರ್ ಆಫ್ ಅಟಾನರ್ಿ ಕೊಟ್ಟಿರುತ್ತಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನಮ್ಮ ಟ್ರ್ಯಾಲಿಯನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 124/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 81/2022 ಕಲಂ:279, 304(ಎ) ಐಪಿಸಿ : ದಿನಾಂಕ:05/11/2022 ರಂದು ಮೃತನು ಹುಣಸಗಿ-ತಾಳಿಕೋಟಿ ರಸ್ತೆಯ ಮೇಲೆ ಮಾಳನೂರ ಗ್ರಾಮದ ಗುರುನಾಥಗೌಡ ಇವರ ಹೊಲದ ಹತ್ತಿರ ರಸ್ತೆಯ ಬಾಜು ಮಲವಿಸರ್ಜನೆಗೆಂದು ಕುಳಿತಾಗ ಆರೋಪಿತನು ತಾನು ಚಲಾಯಿಸುವ ಲಾರಿ ನಂ:ಕೆಎ-14, ಬಿ-1082 ನೇದ್ದನ್ನು ಹುಣಸಗಿ ಕಡೆಯಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬೆಳಿಗ್ಗೆ 6.10 ಗಂಟೆಯ ಸುಮಾರಿಗೆ ಅದೇ ವೇಗದಲ್ಲಿ ಮೃತನಿಗೆ ಜೊರಾಗಿ ಡಿಕ್ಕಿ ಕೊಟ್ಟಿದ್ದರಿಂದ ಲಾರಿಯ ಗಾಲಿ ಎಡಗೈ ರಟ್ಟೆಯ ಮೇಲೆ & ಪಕ್ಕೆಯ ಮೇಲೆ ಹಾಗೂ ಕಿವಿಯ ಮೇಲೆ ಹೋಗಿ ಗಾಯವಾಗಿ ಬೇವುಸಾದಾಗ ಫಿರ್ಯಾದಿಯು ಹಾಗೂ ಪ್ರತ್ಯಕ್ಷ ಸಾಕ್ಷಿದಾರರು ಕೂಡಿ ಒಂದು ಖಾಸಗಿ ವಾಹನದಲ್ಲಿ ಮೃತನಿಗೆ ಹಾಕಿಕೊಂಡು ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಬೆಳಿಗ್ಗೆ 6.40 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ ಅಂತಾ ಫಿರ್ಯಾದಿಯು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ: 71/2022 ಕಲಂ: 143, 147, 148, 323, 324, 354, 504, 506 ಸಂ 149 ಐಪಿಸಿ : ಇಂದು ದಿನಾಂಕ:05.11.2022 ರಂದು 8:30 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀಮತಿ ದ್ಯಾಮವ್ವ ಗಂಡ ಬಾಲನಗೌಡ ಪೊಲೀಸ್ ಪಾಟೀಲ್ ವಯಸ್ಸು- 55 ವರ್ಷ, ಜಾತಿ: ಬೇಡರ, ಕೆಲಸ: ಮನೆಕೆಲಸ, ಸಾ: ಬೈಲಕುಂಟಿ, (ಹಾಲಿ ವಸ್ತಿ ಹಾಲಭಾವಿ ತಾ: ಲಿಂಗಸೂರ) ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಾನು ಈ ದಿನ ದಿನಾಂಕ: 05-11-2022 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ಶೌಚಾಲಯಕ್ಕೆ ಹೊಗುವ ಸಮಯದಲ್ಲಿ ನಮ್ಮೂರಿನ ದ್ಯಾಮವ್ವನ ಗುಡಿ ಮುಂದೆ 1) ಹಣಮಗೌಡ ತಂದೆ ಅಂಬ್ರಪ್ಪಗೌಡ ಪೋಲಿಸ್ ಪಾಟೀಲ್, ವಯಸ್ಸು: 44, 2) ಬಸವಂತ್ರಾಯ ತಂದೆ ಶರಣಪ್ಪ ತೆಳಗಿನಮನಿ, ವಯಸ್ಸು 32. 3) ಮದನಪ್ಪ ತಂದೆ ಹಣಮಂತ್ರಾಯ ಸಾಲವಾಡಗಿ ವಯಸ್ಸು: 55. 4) ಗೋಪಾಲಪ್ಪ ತಂದೆ ಭೀಮರಾಯ ಹರನಾಳ ವಯಸ್ಸು: 28. 5) ಪರಸಪ್ಪ ತಂದೆ ಹಲವಪ್ಪ ಬಿರಾದಾರ ಇವರೆಲ್ಲರು ಬೈಲಕುಂಟಿ ಗ್ರಾಮದವರು, ಇವರೆಲ್ಲರೂ ಕೂಡಿ ಕೊಂಡು ನನ್ನ ಹತ್ತಿರ ಬಂದು ಲೇ ಬೋಸುಡಿ ಹೊಲದ ನ್ಯಾಯ ಮುಗಿಸ್ತಿಯಾ ಇಲ್ಲಾ ನಮಗೆ ಹೊಲ ಬಿಟ್ಟು ಕೊಡುತ್ತಿಯಾ ಇಲ್ಲಾ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹಣಮಗೌಡ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಮತ್ತು ಬಸವಂತ್ರಾಯ ಇವನು ಕೈಯಲ್ಲಿ ಮಚ್ಚು ಹಿಡಿದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಲದಮೇಲೆ ಕೊಟರ್ಿನಲ್ಲಿರುವ ಕೇಸ್ ವಾಪಸ್ಸು ತೆಗೆದುಕೊ ಎಂದು ಇವರು ನನಗೆ ಮೈ ಮುಟ್ಟಿ ದೈಹಿಕ ಹಿಂಸೆ ನೀಡಿದರು, ಮದನಪ್ಪ ಮತ್ತು ಗೋಪಾಲಪ್ಪ ಇವರು ನನ್ನನ್ನು ಎಳೆದಾಡಿ ನನ್ನ ಸೀರೆ ಎಳೆದಾಡಿ ಹರಿದು ನನ್ನ ಮೇಲೆ ಮಾನಭಂಗಕ್ಕೆ ಪ್ರಯತ್ನ ಪಟ್ಟರು, ಪರಸಪ್ಪ ಈತನು ನನ್ನ ಎಡ ಕಪಾಳಕ್ಕೆ ಮತ್ತು ಬಲಗಣ್ಣಿಗೆ ಬಲವಾಗಿ ಹೊಡೆದಿದ್ದರಿಂದ ನನ್ನ ಕಣ್ಣು ಕಾಣದಂತಾಗಿರುತ್ತದೆ ಮತ್ತು ಮಲಕಿಗೆ ಪೆಟ್ಟಾಗಿದ್ದರಿಂದ ಮಾತನಾಡಲಿಕ್ಕೆ ಸಾದ್ಯವಾಗುತ್ತಿಲ್ಲ, ಇದೇ ಸಮಯದಲ್ಲಿ 1) ಶಿವಪ್ಪಗೌಡ ತಂದೆ ಕೃಷ್ಣಪ್ಪಗೌಡ ಪೋಲಿಸ್ ಪಾಟೀಲ್, ವಯಸ್ಸು: 38. 2)ಬಾಲಗೌಡ ತಂದೆ ಕೃಷ್ಣಪ್ಪಗೌಡ ಪೋಲಿಸ್ ಪಾಟೀಲ್ ವಯಸ್ಸು 30. 3)ಭೀಮರಾಯ ತಂದೆ ಗೋಪಾಲಪ್ಪ ಅರನಾಳ ವಯಸ್ಸು: 31. 4)ಅಂಬ್ರಗೌಡ ತಂದೆ ಹಣಮಗೌಡ ಪೋಲಿಸ್ ಪಾಟೀಲ್ ವಯಸ್ಸು: 22. 5) ಗದ್ದೆಪ್ಪ ತಂದೆ ಹಣಮಂತ್ರಾಯ ಸಾಲವಾಡಗಿ ವಯಸ್ಸು: 45 ಇವರೆಲ್ಲರೂ ಬೈಲಕುಂಟಿ ಗ್ರಾಮದವರು, ಇವರೆಲ್ಲರೂ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಆಸ್ತಿ ನಮಗೆ ಬಿಟ್ಟುಕೊಡು ಇಲ್ಲವಾದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ಶಿವಪ್ಪಗೌಡ ಮತ್ತು ಬಾಲಗೌಡ ಇವರು ಬೈಯುತ್ತಿದ್ದರು, ನಿನ್ನನ್ನು ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಹೊಳೆಗೆ ಹಾಕುತ್ತೇವೆ ಎಂದು ಭೀಮರಾಯ ಮತ್ತು ಅಂಬ್ರಪ್ಪಗೌಡ ಇವರು ಬೆದರಿಕೆ ಹಾಕಿದರು ಇವಳನ್ನು ಹೀಗೆ ಬಿಟ್ಟರೆ ನಮ್ಮ ಮಾವನ ಆಸ್ತಿ ನಮ್ಮ ಮಾವನಿಗೆ ಸಿಗುವುದಿಲ್ಲ ಇವಳನ್ನು ಜೀವಂತವಾಗಿ ಉಳಿಸಬೇಡಿರಿ ಎಂದು ಗದ್ದೆಪ್ಪ ಇವನು ಕಡಿಮನಿ ಬಸಣ್ಣನ ಕಡಿದಂಗ ನಿನ್ನನ್ನು ಕಡಿಯುತ್ತೇನೆ ಎಂದು ನನಗೆ ಜೀವ ಬೆದರಿಕೆ ಹಾಕಿದನು. ಆವಾಗ ನಾನು ನನ್ನನ್ನು ಬಿಟ್ಟು ಬಿಡಿರಿ ಎಂದು ಜೋರಾಗಿ ಅಳುತ್ತಾ ಚಿರುತ್ತಾ ಅವರ ಕಾಲಿಗೆ ಬಿದ್ದೆನು, ನನ್ನ ಚೀರಾಟ ಕೇಳಿ 1)ಗುರಪ್ಪ ತಂದೆ ಹಣಮಂತ್ರಾಯ ಕೋಳಿಹಾಳ, 2)ಪ್ರಭು ತಂದೆ ಹಣಮಂತ್ರಾಯ ಕೋಳಿಹಾಳ 3) ರಾಮನಗೌಡ ತಂದೆ ಭೀಮಣ್ಣ ತೆಳಗಿನಮನಿ ಇವರೆಲ್ಲರು ಬಂದು ಅವರಿಂದ ನನ್ನನ್ನು ಬಿಡಿಸಿದರು. ಕಾರಣ ದಯಾಳುಗಳಾದ ತಾವು ನನ್ನ ಮೇಲೆ ಹಲ್ಲೆ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ನನಗೆ ಜೀವಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಪಿಯರ್ಾದಿಯ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.71/2022 ಕಲಂ: 143, 147, 148, 323, 324, 354, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ: 72/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ : ಇಂದು ದಿನಾಂಕ:05.11.2022 ರಂದು 10:00 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ಕೃಷ್ಣಪ್ಪಗೌಡ ತಂದೆ ಶಿವಪ್ಪಗೌಡ ಪೊಲೀಸ್ಪಾಟೀಲ ವ-80 ವರ್ಷ ಉ-ಒಕ್ಕಲುತನ ಜಾತಿ-ಹಿಂದೂ ಬೇಡರ ಸಾ-ಬೈಲಕುಂಟಿ ತಾ-ಹುಣಸಗಿ ಜಿ-ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನನಗೆ ಬಸನಗೌಡ, ನಾಗಪ್ಪಗೌಡ, ಶಿವಪ್ಪಗೌಡ ಮತ್ತು ಬಾಲಗೌಡ ಅಂತ ನಾಲ್ಕು ಜನ ಗಂಡು ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು ಬಸನಗೌಡ ಮತ್ತು ನಾಗಪ್ಪಗೌಡ ರವರು ತಮ್ಮ ತಮ್ಮ ಕುಟುಂಬದೊಂದಿಗೆ ಬೇರೆ ಬೇರೆಯಾಗಿದ್ದು ಶಿವಪ್ಪಗೌಡ ಮತ್ತು ಬಾಲಗೌಡ ರವರು ಕೂಡಿ ಇದ್ದು ನಾನು ಮತ್ತು ನನ್ನ ಹೆಂಡತಿ ಸಾಬವ್ವ ರವರು ಇವರ ಹತ್ತಿರ ಇರುತ್ತೇವೆ. ದಿನಾಂಕ 02.11.2022 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನನ್ನ ಮಗನಾದ ಬಾಲಗೌಡ ಇತನೊಂದಿಗೆ ನಮ್ಮೂರ ರಾಮನಗೌಡ ತಂದೆ ಭೀಮಣ್ಣ ತೆಳಗಿನಮನಿ ಇತನು ತಕರಾರು ಮಾಡಿಕೊಂಡಿದ್ದು ಇದ್ದು ರಾಮನಗೌಡನು ನಾನೇ ನನ್ನ ಮಗನಾದ ಬಾಲಗೌಡನಿಗೆ ತನ್ನೊಂದಿಗೆ ಜಗಳ ಮಾಡಲು ಹೇಳಿದ್ದೇನೆ ಅಂತ ತಪ್ಪು ತಿಳಿದುಕೊಂಡು ನನ್ನ ಮೇಲೆ ಸಿಟ್ಟಾಗಿದ್ದು ಇರುತ್ತದೆ.
ಹೀಗಿರುವಾಗ ನಿನ್ನೆ ದಿನಾಂಕ 04.11.2022 ರಂದು ರಾಜನಕೊಳೂರ ಗ್ರಾಮದಲ್ಲಿ ನನ್ನ ಕೆಲಸ ಇದ್ದುದರಿಂದ ನನಗೆ ಮಗನಾಗಬೇಕಾದ ನನ್ನ ಹೆಂಡತಿಯ ತಂಗಿಯ ಮಗನಾಗಬೇಕಾದ ನಮ್ಮೂರ ಪರಸಪ್ಪ ತಂದೆ ಹಲವಪ್ಪ ಬಿರಾದಾರ ಇತನನ್ನು ಕರೆದುಕೊಂಡು ಅವನ ಮೋಟರ್ ಸೈಕಲ್ ಮೇಲೆ ರಾಜನಕೊಳೂರಕ್ಕೆ ಮುಂಜಾನೆ 10:00 ಗಂಟೆಯ ಸುಮಾರಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ಮತ್ತೆ ನಮ್ಮೂರಿಗೆ ಹೋಗಲು ನಿನ್ನೆ ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ಬೊಮ್ಮಗುಡ್ಡ-ಬೈಲಕುಂಟಿ ಮುಖ್ಯ ರಸ್ತೆಯ ಮೇಲೆ ಬೊಮ್ಮಗುಡ್ಡತಾಂಡಾದ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಅದೇ ಸಮಯಕ್ಕೆ ನಮ್ಮೂರ ನನ್ನ ಮೇಲೆ ಸಿಟ್ಟಾಗಿದ್ದ 1) ರಾಮನಗೌಡ ತಂದೆ ಭೀಮಣ್ಣ ತೆಳಗಿನಮನಿ 2) ಬಸವರಾಜ ತಂದೆ ಭೀಮಣ್ಣ ತೆಳಗಿನಮನಿ 3) ಕುಪೇಂದ್ರ ತಂದೆ ಭೀಮಣ್ಣ ತೆಳಗಿನಮನಿ 4) ಹುಲಗಪ್ಪ ತಾಯಿ ಗದ್ದೆವ್ವ ಮಾದರ 5) ತಿಮ್ಮಪ್ಪ ತಾಯಿ ಗದ್ದೆವ್ವ ಮಾದರ 6) ಸಿದ್ದಪ್ಪ ತಂದೆ ತಿಮ್ಮಪ್ಪ ಮಾದರ 7) ಸಾಬಣ್ಣ ತಂದೆ ತಿಮ್ಮಪ್ಪ ಮಾದರ 8) ಪರಶುರಾಮ ತಂದೆ ಹುಲಗಪ್ಪ ಮಾದರ ರವರುಗಳು ಗುಂಪಾಗಿ ನಮ್ಮ ಎದುರಿಗೆ ಬಂದವರೇ ಮೋಟರ್ ಸೈಕಲ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು ಆಗ ಮೋಟರ್ ಸೈಕಲ್ ನಡೆಸುತ್ತಿದ್ದ ಪರಸಪ್ಪನು ಮೋಟರ್ ಸೈಕಲ್ಲ ನಿಲ್ಲಿಸಿದ್ದು ನಾವಿಬ್ಬರೂ ಮೋಟರ್ ಸೈಕಲ್ದಿಂದ ಕೆಳಗೆ ಇಳಿದು ನಾನು ಅವರಿಗೆ ಯಾಕೆ ಮೋಟರ್ ಸೈಕಲ್ಲ ನಿಲ್ಲಿಸುವಂತೆ ಕೈ ಸನ್ನೆ ಮಾಡಿದಿರಲ್ಲ ಅಂತ ಅಂದಾಗ ಅವರಲ್ಲಿಯ ರಾಮನಗೌಡ ತಂದೆ ಭೀಮಣ್ಣ ತೆಳಗಿನಮನಿ ಹಾಗೂ ಆತನ ತಮ್ಮಂದಿರಾದ ಬಸವರಾಜ ತಂದೆ ಭೀಮಣ್ಣ ತೆಳಗಿನಮನಿ ಹಾಗೂ ಕುಪೇಂದ್ರ ತಂದೆ ಭೀಮಣ್ಣ ತೆಳಗಿನಮನಿ ಇವರುಗಳು ನನಗೆ ಲೇ ಸೂಳಿ ಮಗನೇ ಕೃಷ್ಣ್ಯಾ ನಿನ್ನ ಮಗ ಬಾಲಗೌಡನು ನಮ್ಮೊಂದಿಗೆ ಮೊನ್ನೆ ದಿನ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುತ್ತಾನೆ ನಿನ್ನ ಮಗ ಬಾಲಗೌಡನಿಗೆ ನೀನೆ ನಮ್ಮೊಂದಿಗೆ ತಕರಾರು ಮಾಡು ಅಂತ ಹೇಳಿದೀ ಬೋಸಡಿ ಮಗನೇ ಇವತ್ತು ಸಿಕ್ಕಿದೀ ನಿನಗೆ ಸುಮ್ಮನೇ ಬಿಡುವದಿಲ್ಲ ಒಂದ ಗತಿ ಕಾಣಿಸುತ್ತೇವೆ ಅಂತ ಒದರಾಡ ಹತ್ತಿದ್ದು ಆಗ ಹುಲಗಪ್ಪ ತಾಯಿ ಗದ್ದೆವ್ವ, ತಿಮ್ಮಪ್ಪ ತಾಯಿ ಗದ್ದೆವ್ವ, ಸಿದ್ದಪ್ಪ ತಂದೆ ತಿಮ್ಮಪ್ಪ, ಸಾಬಣ್ಣ ತಂದೆ ತಿಮ್ಮಪ್ಪ, ಪರಶುರಾಮ ತಂದೆ ಹುಲಗಪ್ಪ ಇವರೆಲ್ಲರೂ ನನಗೆ ಈ ಸೂಳೆ ಮಗಂದು ಬಾಳ ಆಗಿದೆ ಹೊಡೆಯಿರೀ ಅಂತ ಅಂದಾಗ ರಾಮನಗೌಡ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು, ಬಸವರಾಜ ಮತ್ತು ಕುಪೇಂದ್ರ ರವರು ಕೈಯಿಂದ ನನಗೆ ಎದೆಯ ಮೇಲೆ, ಕಪಾಳಕ್ಕೆ ಹೊಡೆದಿದ್ದು ತಿಮ್ಮಪ್ಪ ಮತ್ತು ಸಿದ್ದಪ್ಪ ರವರು ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲದ ಮೇಲೆ ಬಿದ್ದಾಗ ಹುಲಗಪ್ಪ, ಸಾಬಣ್ಣ ಮತ್ತು ಪರಶುರಾಮ ರವರು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು ಆಗ ನಾನು ಚೀರಾಡಲು ನನ್ನ ಜೊತೆಗೆ ಇದ್ದ ಪರಸಪ್ಪ ತಂದೆ ಹಲವಪ್ಪ ಬಿರಾದಾರ ಹಾಗೂ ಅದೇ ವೇಳೆಗೆ ಅಲ್ಲಿಂದಲೇ ಹೋಗುತ್ತಿದ್ದ ನಮ್ಮೂರ ರಾಮಲಿಂಗಪ್ಪ ತಂದೆ ರಾಮಪ್ಪ ಮಾದರ, ಹಣಮಂತ್ರಾಯ ತಂದೆ ಭೀಮಪ್ಪ ವಜ್ಜಲ ಇವರುಗಳು ಬಂದು ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ಸೂಳೆ ಮಗನೇ ಕೃಷ್ಣ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದೀ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಾನು ಅವರಿಗೆ ಅಂಜಿ ಮನೆಗೆ ಹೋಗಿ ಮನೆಯಲ್ಲಿ ಈ ಬಗ್ಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು ಈ ಜಗಳದಲ್ಲಿ ನನಗೆ ಗುಪ್ತಗಾಯಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಬೇಕು ಮತ್ತು ನನಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 08 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ ಅಂತ ಪಿಯರ್ಾದಿಯ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.72/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 162/2022 ಕಲಂ: 279, 337, 338 ಐಪಿಸಿ : ದಿನಾಂಕ 05/11/2022 ರಂದು 9.30 ಪಿಎಂ ಕ್ಕೆ ಅಜರ್ಿದಾರರಾದ ಪ್ರಭು ತಂದೆ ರೇವಣಸಿದ್ದಪ್ಪ ಗ್ಯಾಂಗಮ್ಯಾನ್ ವ|| 29ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಹುಣಸಗಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಅಜರ್ಿ ಸಲ್ಲಿಸಿದ್ದು, ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾವು 3 ಜನ ಅಣ್ಣ ತಮ್ಮಂದಿರರು ಇದ್ದು ಹಿರಿಯವನು ನಮ್ಮ ಅಣ್ಣನಾದ ಫಕೀರಪ್ಪ ಅಂತಾ ಇದ್ದು, 2ನೇಯವನು ನಾನು ಮತ್ತು 3ನೇಯವನು ನಮ್ಮ ತಮ್ಮನಾದ ಪ್ರೇಮಕುಮಾರ ಅಂತಾ ಇರುತ್ತೇವೆ. ನಮ್ಮ ತಮ್ಮನಾದ ಪ್ರೇಮಕುಮಾರನು ಕೂಡಾ ಕೂಲಿ ಕೆಲಸಕ್ಕೆ ಬೇರೆ ಬೇರೆ ಕಡೆಗೆ ಹೋಗುತ್ತಾನೆ. ಅದರಂತೆ ನಿನ್ನೆ ದಿನಾಂಕ 04/11/2022 ರಂದು ಮುಂಜಾನೆ 9.00 ಗಂಟೆಗೆ ಕೂಲಿ ಕೆಲಸಕ್ಕೆ ಹುಣಸಗಿ ಸಿನಿಮಾ ಥೇಟರನ ಪೋಸ್ಟರ್ ಅಂಟಿಸಲು ಪ್ರೇಮಕುಮಾರನ ಸ್ನೇಹಿತರಾದ ರವಿಕುಮಾರ ತಂದೆ ಸಿದ್ರಾಮಪ್ಪ ಕೆಸರಟ್ಟಿ ಮತ್ತು ಮೌನೇಶ ತಂದೆ ದೇವಪ್ಪ ಚಲುವಾದಿ ಇವರ ಜೊತೆಗೆ ಹೋಗುತ್ತೇನೆ ಅಂತಾ ಮನೆಯಲ್ಲಿ ನಮಗೆ ಹೇಳಿ ಹೋಗಿದ್ದನು. ನಂತರ 11.00 ಗಂಟೆಯ ಸುಮಾರಿಗೆ ನಮ್ಮ ಸ್ನೇಹಿತನಾದ ಮಂಜುನಾಥ ಬಳಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, 10.45 ಎಎಂ ಸುಮಾರಿಗೆ ನಾನು ಹುಣಸಗಿಯಿಂದ ಕೆಂಭಾವಿ ಕಡೆಗೆ ಅಗತೀರ್ಥ ಕ್ರಾಸ್ ಮತ್ತು ಮುದನೂರ ಕ್ರಾಸ್ ನಡುವೆ ಹೋಗುತ್ತಿದ್ದಾಗ ನಮ್ಮ ಮುಂದೆ ಪೋಸ್ಟರ್ ಅಂಟಿಸಲು ಕೆಂಭಾವಿ ಕಡೆಗೆ ಸಿನಿಮಾ ಥೇಟರ ರವರ ಸ್ಕೂಟಿ ನಂ ಕೆಎ 33 ವೈ 8842 ನೇದ್ದರ ಮೇಲೆ ನಿಮ್ಮ ತಮ್ಮನಾದ ಪ್ರೇಮಕುಮಾರ, ಮತ್ತು ಅವನ ಸ್ನೇಹಿತರಾದ ರವಿಕುಮಾರ ಹಾಗೂ ಮೌನೇಶ ಮೂರೂ ಜನರು ಕೂಡಿ ಹೋಗುತ್ತಿದ್ದು ಮೌನೇಶನು ಸ್ಕೂಟಿ ನಡೆಸುತ್ತಿದ್ದು ಅವರು ಮುದನೂರ ದೇವರ ದಾಸಿಮಯ್ಯ ಕ್ಯಾಂಪ್ ಹತ್ತಿರ ಕವರ್ಿಂಗನಲ್ಲಿ ಕೆಂಭಾವಿ ಹುಣಸಗಿ ರಸ್ತೆಯ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಕಾರು ನಂ ಕೆಎ 33 ಎಮ್ 6424 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ಸ್ಕೂಟಿ ನಡೆಸುತ್ತಿದ್ದ ಮೌನೇಶ ತಂದೆ ದೇವಪ್ಪ ಚಲುವಾದಿ ವ|| 17ವರ್ಷ ಈತನು ಕೆಳಗೆ ಬಿದ್ದು ಅವನ ತುಟಿಗೆ, ಹಣೆಗೆ, ಎರಡೂ ಕಾಲುಗಳಿಗೆ ಮತ್ತು ಕೈಗಳಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು, ನಡುವೆ ಕುಳಿತಿದ್ದ ರವಿಕುಮಾರ ಈತನು ಕೆಳಗೆ ಬಿದ್ದಿದ್ದು ಅವನಿಗೆ ಎಡಗಾಲಿನ ಪಾದದ ಹತ್ತಿರ ಮತ್ತು ಬಲಗಾಲಿನ ಮೊಣಕಾಲಿಗೆ ತರಚಿದ ಗಾಯ ಮತ್ತು ಎರಡೂ ಕೈಗಳಿಗೆ ತರಚಿದ ಗಾಯಗಳಾಗಿದ್ದು, ಸ್ಕೂಟಿಯ ಹಿಂದೆ ಕುಳಿತಿದ್ದ ನಿಮ್ಮ ತಮ್ಮನಾದ ಪ್ರೇಮಕುಮಾರ ತಂದೆ ರೇವಣಸಿದ್ದಪ್ಪ ಗ್ಯಾಂಗಮ್ಯಾನ್ ವ|| 28ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಹುಣಸಗಿ ಈತನು ಕೆಳಗೆ ಬಿದ್ದು ತಲೆಗೆ, ಎರಡೂ ಕಾಲುಗಳಿಗೆ, ಕೈಗಳಿಗೆ ಭಾರೀ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಮಾತನಾಡದ ಸ್ಥಿತಿಯಲ್ಲಿದ್ದಾನೆ. ಅವರು ಬಿದ್ದ ತಕ್ಷಣ ಅವರಿಗೆ ನಾನು ಮತ್ತು ಅಪಘಾತಪಡಿಸಿದ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ವ್ಯಕ್ತಿಯು ಎಬ್ಬಿಸಿ ಅಂಬುಲೆನ್ಸ್ ವಾಹನದಲ್ಲಿ ಹಾಕಿ ಹುಣಸಗಿ ಆಸ್ಪತ್ರೆಗೆ ಮತ್ತು ಅಲ್ಲಿಂದ ವಿಜಯಪೂರಕ್ಕೆ ಹೋಗುವಂತೆ ಹೇಳಿ ಕಳುಹಿಸಿದ್ದು ನೀನು ಹುಣಸಗಿ ಸರಕಾರಿ ಆಸ್ಪತ್ರೆಗೆ ಬಾ ಅಂತಾ ಹೇಳಿದ್ದರಿಂದ ನಾನು ಹುಣಸಗಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಮ್ಮ ಹಾಗೂ ಅವನ ಗೆಳೆಯರಿಗೆ ಗಾಯಗಳಾಗಿದ್ದರಿಂದ ಅರ್ಜಂಟಾಗಿ ಉಪಚಾರ ಕುರಿತು ವಿಜಯಪೂರ ಭಾಗ್ಯವಂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಮ್ಮ ತಮ್ಮನಾದ ಪ್ರೇಮಕುಮಾರನಿಗೆ ನೋಡಲಾಗಿ ಅವನ, ತಲೆಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ಅವನು ಮಾತನಾಡದ ಸ್ಥಿತಿಯಲ್ಲಿದ್ದನು. ಮತ್ತು ಅಲ್ಲಿಯೇ ಇದ್ದ ಸ್ಕೂಟಿ ಚಾಲಕನಾಗಿದ್ದ ಮೌನೇಶ ತಂದೆ ದೇವಪ್ಪ ಚಲುವಾದಿ ಈತನಿಗೆ ನೋಡಲಾಗಿ ಅವನ ಕಾಲುಗಳಿಗೆ, ಕೈಗಳಿಗೆ, ಮುಖಕ್ಕೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಮಾತನಾಡುತ್ತಿದ್ದುದರಿಂದ ಅವನಿಗೆ ಅಪಘಾತದ ಬಗ್ಗೆ ವಿಚಾರಿಸಲಾಗಿ ಅವರು ಮೂರೂ ಜನರು ಕೂಡಿ ಸ್ಕೂಟಿ ನಂ ಕೆಎ 33 ವೈ 8842 ನೇದ್ದರ ಮೇಲೆ ಕೆಂಭಾವಿಗೆ ಹೋಗುತ್ತಿದ್ದಾಗ ಎದುರಿನಿಂದ ಕಾರು ನಂ ಕೆಎ 33 ಎಮ್ 6424 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಸ್ಕೂಟಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಮಗೆ ಗಾಯಗಳಾಗಿದ್ದು ಅಪಘಾತಪಡಿಸಿದ ಕಾರಿನ ಚಾಲಕನ ಹೆಸರು ಬಸವರಾಜ ಬೈರವಾಡಗಿ ಸಾ|| ಹಳಿಸಗರ ಅಂತಾ ಗೊತ್ತಾಗಿದೆ ಅಂತಾ ತಿಳಿಸಿದ್ದು ನಮ್ಮ ತಮ್ಮನಿಗೆ ಭಾರೀ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಬಿ.ಎಲ್.ಡಿ.ಇ ಆಸ್ಪತ್ರೆ ವಿಜಯಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ನಮ್ಮ ತಮ್ಮನಾದ ಪ್ರೇಮಕುಮಾರ ಮತ್ತು ವನ ಇಬ್ಬರು ಗೆಳೆಯರು ಕೂಡಿ ಹೋಗುತ್ತಿದ್ದ ಸ್ಕೂಟಿ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರಿನ ಚಾಲಕನ ಮೇಲೆ ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 162/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 06-11-2022 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080