ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-12-2022


ಯಾದಗಿರಿ ಗ್ರಾಮಿಣ  ಪೊಲೀಸ್ ಠಾಣೆ
ಗುನ್ನೆ ನಂ: 168/2022 ಕಲಂ 323, 324, 504, 506 ಸಂ. 34 ಐಪಿಸಿ: ದಿನಾಂಕ: 05-12-2022 ರಂದು ರಾತ್ರಿ 08-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 04-12-2022 ರಂದು ಊಟ ಮಾಡಿ ರಾತ್ರಿ 09-00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದಲ್ಲಿರುವ ಅಂಬೇಡ್ಕರ ಕಟ್ಟೆಯ ಹತ್ತಿರ ಹೋದಾಗ ದೇವಪ್ಪ ಈತನು ನನಗೆ ಲೇ ಸೂಳೆ ಮಗನೆ ನನಗೆ ಪದೇ ಪದೇ ಹೊಲ ರಜೀಸ್ಟರ ಮಾಡು ಅಂತಾ ಹೇಳುತ್ತೇನಲೆ ಮಗನೆ ಅಂತಾ ಬೈಯುತಿದ್ದಾಗ ಆಗ ನಾನು ಆತನಿಗೆ ನಮ್ಮಲ್ಲಿ ಹೊಲ ಕೊಡುತ್ತೇನೆ ಅಂತಾ ರೊಕ್ಕ ತೆಗೆದುಕೊಂಡಿದ್ದು ಹೊಲ ರಜೀಸ್ಟರ ಮಾಡಲು ಎನ ತ್ರಾಸು ಇಲ್ಲಂದರೆ ನಮ್ಮ ರೊಕ್ಕ ನಮಗೆ ಕೊಡು ಅಂತಾ ಹೇಳಿದ್ದಕ್ಕೆ ಆತನು ನನಗೆ ಲೇ ಸೂಳೆ ಮಗನೆ ನಿಮಗೆ ಹೊಲ ಕೊಡಲ್ಲಾ ಮತ್ತು ಹಣನ ಕೂಡ ಕೊಡಲ್ಲ ಎನ ಮಾಡುತಿ ಮಾಡು ಸೂಳೆ ಮಗನೆ ನಿಮ್ಮ ಕಿರಿ ಕಿರಿ ಸಾಕಾಗಿದೆ ಅಂತಾ ಬೈಯುತ್ತಿರುವಾಗ ಮರಲಿಂಗ, ಭೀಮರಾಯ, ಮಲ್ಲಪ್ಪ ಇವರೆಲ್ಲರು ಕೂಡಿಕೊಂಡು ಬಂದು ನನಗೆ ಈ ಸೂಳಿ ಮಗನದ್ದು ಬಹಳ ಸೊಕ್ಕು ಇವ ನಮಗೆ ಬಹಳ ಕಿರಿ ಕಿರಿ ಮಾಡುತ್ತಾನೆ, ಇವನಿಗೆ ಖಲಾಸ ಮಾಡುರಿ ಅಂತಾ ಬೈದು ಅವರಲ್ಲಿ ಮರಲಿಂಗ ಇತನು ನನಗೆ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟು ಮಾಡಿ ಕೈಯಿಂದ ಬಾಯಿಗೆ ಗುದ್ದಿ ಗುಪ್ತ ಪೆಟ್ಟು ಮಾಡಿರುತ್ತಾನೆ, ಆಗ ನಾವು ಜಗಳ ಮಾಡುವದನ್ನು ನೋಡಿ ನಮ್ಮ ಮನೆಯರು ಬಂದು ಜಗಳ ಬಿಡಿಸುತ್ತಿರುವಾಗ ನಮ್ಮ ತಮ್ಮ ಮರಲಿಂಗ ಇತನಿಗೆ ಭೀಮರಾಯ ಈತನು ಕೈಯಿಂದ ಹೊಟ್ಟೆಗೆ, ಬೆನ್ನಿಗೆ  ಗುದ್ದಿ ಗುಪ್ತ ಪೆಟ್ಟು ಮಾಡಿದನು, ಆಗ ನಮ್ಮ ಹಣಮಂತ ಈತನು ಜಗಳದಲ್ಲಿ ಅಡ್ಡ ಬಂದಾಗ ಆತನಿಗೆ  ಮಲ್ಲಪ್ಪ ಈತನು ಲೇ ಸುಳೆ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳದಾಡಿ ಕೈಯಿಂದ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದಿರುತ್ತಾನೆ, ಆಗ ನಮ್ಮ ತಾಯಿ ಯಾಕೆ ಜಗಳ ಮಾಡುತ್ತಿರಿ ಬಿಡಿರಿ ಅಂತಾ ಜಗಳದಲ್ಲಿ ಹೋದಾಗ ಬಂದಾಗ ಆಕೆಗೆ ದೇವಪ್ಪ ಇವನು ಲೇ ಸುಳೆ ಮಗಳೆ ನಿಮ್ಮ ಮಕ್ಕಳಿಗೆ ಬುದ್ದಿಕಲಿಸಲು ಬರುವದಿಲ್ಲ ಮಗಳೆ ನಿಮ್ಮ ಸೊಕ್ಕು ಜಾಸ್ತಿ ಆಗಿದೆ ಅಂದು ಆಕೆಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಲೇ ಸೂಳೆ ಮಕ್ಕಳೆ ಇನ್ನೊಂದು ಸಲ ನಮಗೆ ಹೊಲ ರಜೀಸ್ಟರ ಮಾಡು ಅಂತಾ ಕೇಳಿದರೆ ನಿಮಗೆ ಖಲಾಸ ಮಾಡುತ್ತೇವೆ ಮಕ್ಕಳೆ  ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 78/2022  ಕಲಂ: 457, 380 ಐಪಿಸಿ: ಇಂದು ದಿನಾಂಕ 05.12.2022 ರಂದು 5:00 ಪಿಎಮಕ್ಕೆ ಪಿರ್ಯಾದಿ ಶ್ರೀ ಚಾಂದಸಾಬ ತಂದೆ ಗುಡೇಸಾಬ ದಖನಿ ವ:48 ವರ್ಷ ಉ:ಗೌಂಡಿಕೆಲಸ ಜಾ:ಮುಸ್ಲಿಂ ಸಾ:ಸಿ.ಆರ್ ಕ್ಯಾಂಪ್ ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ 03.12.2022 ರಂದು ರಾತ್ರಿ 9:30 ಗಂಟೆಯ ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳು ಎಂದಿನಂತೆ ಊಟ ಮಾಡಿ ನಮ್ಮ ಟಗರುಗಳನ್ನು ಪತ್ರಾಸ್ ಶೆಡ್ನ ಒಳಗೆ ಕಟ್ಟಿ ಬಾಗಿಲು ಹಾಕಿ ನಮ್ಮ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ ಸುಮಾರು 11:45 ಗಂಟೆಯ ಸುಮಾರಿಗೆ ನಮ್ಮ ಅಂಗಳದಲ್ಲಿನ ಟಗರಿನ ಶೆಡ್ನ ಹತ್ತಿರ ಒಮ್ಮೆಲೇ ಸಪ್ಪಳ ಕೇಳಿ ಬಂದಿದ್ದು ಮತ್ತು ಟಗರುಗಳು ಚೀರಾಡುವ ಶಬ್ದ ಕೇಳಿ ನಾನು ಮತ್ತು ನನ್ನ ಹೆಂಡತಿ ದವಲಬೀ ರವರು ಎದ್ದು ನಮ್ಮ ಮನೆಯ ಹೊರಗೆ ಎದ್ದು ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಅಂಗಳದಲ್ಲಿನ ಪತ್ರಾಸ್ ಶೆಡ್ನ ಬಾಗಿಲು ಮುರಿದು ಒಳಗೆ ಕಟ್ಟಿದ ನಮ್ಮ 4 ಟಗರುಗಳ ಪೈಕಿ 3 ಟಗರುಗಳನ್ನು ಹೊತ್ತುಕೊಂಡು ಕಳುವು ಮಾಡಿಕೊಂಡು ಹೋಗುತ್ತಿದ್ದುದು ಕಂಡು ಬಂದಿದ್ದು ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಅವರನ್ನು ಹಿಡಿಯಲು ಬೆನ್ನು ಹತ್ತಿದಾಗ ಅವರು ಓಡುತ್ತಾ ಹೋಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಒಂದು ಬಿಳಿಯ ಬಣ್ಣದ ಕಾರಿನಲ್ಲಿ ನಮ್ಮ 3 ಟಗರುಗಳನ್ನು ಹಾಕಿಕೊಂಡು ಕಾರನ್ನು ಚಾಲು ಮಾಡಿಕೊಂಡು ಶಾಂತಪೂರ ಕಡೆಗೆ ಹೋಗಿದ್ದು ಕಳ್ಳರು ಕಳುವು ಮಾಡಿಕೊಂಡು ಹೋದ ನನ್ನ ಟಗರುಗಳ ಒಂದೊಂದರ ಅಂದಾಜು ಕಿಮ್ಮತ್ತು 20,000/- ರೂ ಒಟ್ಟು 60,000/- ರೂ ಆಗುತ್ತಿದ್ದು ಕಳುವು ಆದ ನನ್ನ ಟಗರುಗಳನ್ನು ನಾನು ನೋಡಿದರೆ ಗುತರ್ಿಸುತ್ತೇನೆ ಮತ್ತು ಕಳುವು ಮಾಡಿಕೊಂಡು ಹೋದ  ಕಳ್ಳರನ್ನು ಸಹ ಗುತರ್ಿಸುತ್ತೇನೆ ನನ್ನ ಟಗರುಗಳನ್ನು ಕಳ್ಳರು ಹಾಕಿಕೊಂಡ ಹೋದ ಕಾರಿನ ನಂಬರ ನೋಡಿರುವದಿಲ್ಲ ನೋಡಿದಲ್ಲಿ ಕಾರನ್ನು ಗುತರ್ಿಸುತ್ತೇನೆ. ನಾನು ಮತ್ತು ನನ್ನ ಮಕ್ಕಳಾದ ಮಹ್ಮದಮುಸ್ತಫಾ ಮತ್ತು ಶಮೀರ್ಖಾನ್ ಹಾಗೂ ನನ್ನ ತಮ್ಮಂದಿರಾದ ಬಂದಗೀಸಾಬ ಮತ್ತು ದಾವೂದ್ ರವರು ಇಂದಿನವರೆಗೆ ಕುರಿ ಸಂತೆ ನಡೆಯುವ ಊರುಗಳಾದ ಹುಣಸಗಿ, ಹಟ್ಟಿ, ಮುದಗಲ್ ಹಾಗೂ ಇತರೆ ಗ್ರಾಮಗಳಿಗೆ ಹೋಗಿ ಮತ್ತು ಕುರಿಹಟ್ಟಿಗಳಿಗೆ ಹೋಗಿ ಹುಡುಕಾಡಿದ್ದು ನನ್ನ ಟಗರುಗಳು ಸಿಕ್ಕಿರುವದಿಲ್ಲ ಕಾರಣ ಅಲ್ಲಲ್ಲಿ ಹುಡುಕಾಡಿ ಈ ದಿವಸ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನನ್ನ ಕಳುವಾದ ಮೂರು ಟಗರುಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 78/2022 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 79/2022  ಕಲಂ: 379 ಐಪಿಸಿ : ಇಂದು ದಿನಾಂಕ 05.12.2022 ರಂದು 7:00 ಪಿಎಮಕ್ಕೆ ಪಿರ್ಯಾದಿ ಶ್ರೀ ಹಣಮಂತ ತಂದೆ ಬಸಪ್ಪ ಗೆದ್ದಲಮರಿ ವ:33 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ:ಕೊಡೆಕಲ್ಲ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ 02.12.2022 ರಂದು ರಾತ್ರಿ 10:00 ಗಂಟೆಯವರೆಗೆ ನಾನು ನಮ್ಮ ಜಮೀನು ಸವರ್ೆ ನಂ:126 ರಲ್ಲಿಯ ಮೆಣಸಿನಕಾಯಿ ಬೆಳೆಗೆ ನಮ್ಮ ಪಂಪಸೆಟ್ನಿಂದ ನೀರು ಹಾಯಿಸಿ ಕರೆಂಟ್ ಮೋಟರ್ ಬಂದ್ ಮಾಡಿಕೊಂಡು ಮನೆಗೆ ಬಂದಿದ್ದು ನಂತರ ನಾನು ದಿನಾಂಕ 03.12.2022 ರಂದು ಬೆಳಿಗ್ಗೆ 06:00 ಗಂಟೆಗೆ ನಮ್ಮ ಹೊಲದಲ್ಲಿಯ ಬೆಳೆಗೆ ನೀರು ಹಾಯಿಸಲೆಂದು ನಾನು ಮತ್ತು ನನ್ನ ತಮ್ಮ ಈರಪ್ಪ ರವರು ನಮ್ಮ ಪಂಪ್ಸೆಟ್ನ ಕರೆಂಟ್ ಮೋಟರ್ ಹತ್ತಿರ ಹೋದಾಗ ನಮ್ಮ ಕರೆಂಟ್ ಮೋಟರ್ ಕಾಣಿಸಲಿಲ್ಲ. ಅದನ್ನು ಯಾರೋ ಕಳ್ಳರು ಕಿತ್ತಿಕೊಂಡು ಕಳುವು ಮಾಡಿಕೊಂಡು ಹೋಗಿದ್ದು ಕಂಡು ಬಂದಿದ್ದು ನಂತರ ನಾನು ಮತ್ತು ನನ್ನ ತಮ್ಮ ನಮ್ಮ ಪಕ್ಕದ ಹೊಲದವರಾದ ಅವರ ಹೊಲದಲ್ಲಿದ್ದ ಚನ್ನಪ್ಪ ತಂದೆ ಧೂಳಪ್ಪ ಕಚಕನೂರ, ಅಂಬ್ರೇಶ ತಂದೆ ಸೋಮಪ್ಪ ಗೆದ್ದಲಮರಿ ಇವರಿಗೆ ಕರೆದು ತೋರಿಸಿದ್ದು ಅವರು ಬಂದು ನೋಡಿದ್ದು ನಮ್ಮ ಪಂಪ್ಸೆಟ್ಗೆ ಕೂಡಿಸಿದ ಟ್ಯಾಕ್ಸ್ಮೋ ಕಂಪನಿಯ ಏಳುವರೆ ಹೆಚ್ಪಿಯ ಕರೆಂಟ್ ಮೋಟರನ್ನು ಯಾರೋ ಕಳ್ಳರು ದಿನಾಂಕ:02.12.2022 ರ ರಾತ್ರಿ 10:00 ಗಂಟೆಯಿಂದ ದಿನಾಂಕ03.12.2022 ರ ಬೆಳಗಿನ 06:00 ಗಂಟೆಯ ಮಧ್ಯದ ವೇಳೆಯಲ್ಲಿ ಕಿತ್ತಿಕೊಂಡು ಕಳುವು ಮಾಡಿಕೊಂಡು ಹೋಗಿದ್ದು ನಮ್ಮ ಕರೆಂಟ್ ಮೋಟರ್ನ ಅಂದಾಜು ಕಿಮ್ಮತ್ತು 25,000/- ರೂ ಆಗುತ್ತಿದ್ದು ಕಳುವು ಆದ ನಮ್ಮ ಮೋಟರ್ನ್ನು ನಾನು ಮತ್ತು ನನ್ನ ತಮ್ಮ ನೋಡಿದರೆ ಗುತರ್ಿಸುತ್ತೇವೆ. ನಾನು ಮತ್ತು ನನ್ನ ತಮ್ಮನಾದ ಈರಪ್ಪ ರವರು ಅಂದಿನಿಂದ ಇಂದಿನವರೆಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಹುಡುಕಾಡಿದ್ದು ನಮ್ಮ ಕರೆಂಟ್ ಮೋಟರ್ ಸಿಕ್ಕಿರುವದಿಲ್ಲ ಕಾರಣ ಅಲ್ಲಲ್ಲಿ ಹುಡುಕಾಡಿ ಈ ದಿವಸ  ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನನ್ನ ಕಳುವಾದ ಟ್ಯಾಕ್ಸ್ಮೋ ಕಂಪನಿಯ ಏಳುವರೆ ಹೆಚ್ಪಿಯ ಕರೆಂಟ್ ಮೋಟರ್ನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 79/2022 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.
 

ಇತ್ತೀಚಿನ ನವೀಕರಣ​ : 09-12-2022 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080