ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-12-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ.32, 323, 504, 506, 509, 415, 417, 420 ಐಪಿಸಿ ಮತ್ತು ಕಲಂ.31(1) (ಡಿ), (ಆರ್), (ಹೆಚ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989: ಇಂದು ದಿನಾಂಕ: 06.12.2022 ರಂದು 06-30 ಪಿ.ಎಮಕ್ಕೆ ಮಾನ್ಯ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ರವರ ಕಾಯರ್ಾಲಯದಿಂದ ಜ್ಞಾಪನ ಪತ್ರದೊಂದಿಗೆ ಶ್ರೀ ಪ್ರದೀಪ ಪಿಸಿ-100 ಯಾದಗಿರಿ ನಗರ ಠಾಣೆ ರವರು ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 01/2018 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೆನೆಂದರೆ, ಯಾದಗಿರಿ (ಬಿ) ಗ್ರಾಮದ ಸವರ್ೆ ನಂ:  159/9 ವಿಸ್ತೀರ್ಣ 1 ಎಕರೆ 03 ಗುಂಟೆ ಜಮೀನನ್ನು ಫಿರ್ಯಾದಿದಾರರಾದ ಶ್ರೀಮತಿ ಶರಣಮ್ಮ ಗಂಡ ಹೈಯಾಳಪ್ಪ  ಸಾ: ಅಂಬೇಡ್ಕರ ಚೌಕ ಯಾದಗಿರಿ ರವರು ತಮ್ಮ ಸಂಸಾರದ ಅಡಚಣೆಗಾಗಿ ಆರೋಪಿನ ನಂ: 05 ಬಸವರಾಜ ತಂದೆ ವಿಶ್ವವನಾಥರೆಡ್ಡಿ ಇವರಿಗೆ ಎಕರೆಗೆ 40 ಲಕ್ಷ ರೂ ಅಂತೆ ಮಾರಾಟ ಮಾಡಲು ಒಪ್ಪಿಕೊಂಡಿದ್ದು ಆರೋಪಿತರೆಲ್ಲರೂ ಜಂಟಿಯಾಗಿ ಸದರಿ ಜಮೀನನ್ನು ವಸತಿ ನಿವೇಶನಗಳನಳಾಗಿ ಮಾರಾಟ ಮಾಡಲು  ವಸತಿ ವಿನ್ಯಾಸಕ್ಕಾಗಿ ಅಭಿವೃದ್ದಿಪಡಿಸಲು ಜಂಟಿ ಸಹಭಾಗಿತ್ವದ ಒಪ್ಪಂದದಲ್ಲಿದ್ದರು ಅದರಂತೆ ಎಲ್ಲಾ ಆರೋಪಿಗಳು ನೊಂದಾಯಿತ ಜಿಪಿಎ ಆಧಾರದ ಮೇಲೆ ಲೇಹೌಟ ಹಾಕುವ ಮೂಲಕ ಉದ್ದೇಶಿತ ನಿವೇಷಗಳನ್ನು ಮಾರಾಟ ಮಾಡಲು ದೂರುರುದಾರೊಂದಿಗೆ ನಿಯಮದ ಮತ್ತು ಷರ್ತುಗಳನ್ನು ಒಪ್ಪಿಕೊಳ್ಳುತ್ತಾರೆ. ದಿನಾಂಕ: 29/04/2016 ರಂದು ಎಲ್ಲಾ ಆರೋಪಿತರು ದೂರುದಾರರನ್ನು ಯಾದಗಿರಿಯ ಉಪನೊಂದಣಾಧಿಕಾರಿಗಳ ಕಛೇರಿಗೆ ಕರೆದುಕೊಂಡು ಹೋಗಿ ಮೇಲ್ಕಂಡ ಆಸ್ತಿಗಳಿಗೆ ಸಂಬಂಧಿಸಿದಂತೆ  ಮೇಲ್ಕಂಡ ಜಮೀನನ್ನು ಜನರಲ್ ಪಾವರ್ ಆಫ್ ಅಟಾನರ್ಿ ಎಂದು ಸಹಿ ಮಾಡುವಂತೆ ಆರೋಪಿತರು ಹೇಳಿದ್ದರಿಂದ ದೂರುದಾರರು ಸಹಿ ಮಾಡಿರುತ್ತಾರೆ. ದೂರುದಾರರು ಅನಕ್ಷರಸ್ಥ ಮಹಿಳೆಯಾಗಿದ್ದು ಆಂಗ್ಲ ಭಾಷೆ ತಿಳಿಯದೇ ಇರುವುದರಿಂದ ಆರೋಪಿತರು ಮೋಸ ಮಾಡುವ ದುರದ್ದೇಶ ದಾಖಲಾತಿಗಳನ್ನು ಸೃಷ್ಟಿಸಿ ದೂರುದಾರರಿಗೆ ಹಣೆ ನಿಡದೇ ಜಮೀನು ನೊಂದಣಿ ಮಾಡಿಕೊಂಡಿರುತ್ತಾರೆ. ಈ ವಿಷಯವು 2016 ರ ಮೆ ತಿಂಗಳ ಮೊದಲವಾರದಲ್ಲಿ ತಹಸೀಲದಾರರವರಿಂದ ಮೇಲ್ಕಂಡ ಆಸ್ತಿಗಳ ಮುಟೇಷನ್ ಬಗ್ಗೆ ವಸೂಲಾದ ನೋಟಿಸ್ನಿಂದ ದೂರುದಾರರಿಗೆ ತಿಳಿದುಬಂದಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ರೂ. 18 ಲಕ್ಷ ನೇದ್ದನ್ನು ದೂರುದಾರರಿಗೆ ಕೆನರಾ ಬ್ಯಾಂಕ್ ಯಾದಗಿರಿಯ ಚೆಕ್ ಸಂಖ್ಯೆ 810693 ನೇದ್ದರ ಮೂಲಕ ಪಾವತಿಸಿದ್ದು, ಮತ್ತು ಯಾದಗಿರಿ ಎಸ್.ಬಿ.ಹೆಚ್. ಶಾಖೆಯ ಚೆಕ್ ನಂಬರ 314779 ನೇದ್ದರ ಮೂಲಕ 8,00,000 ರೂಗಳನ್ನು ಸ್ವೀಕರಿಸಲಾಗಿದೆ ಅಂತ ದಾಖಲಾತಿಗಳನ್ನು ಸೃಷ್ಟಿಸಿದ್ದು  ಆದರೆ ಆರೋಪಿ ನಂಬರ 1 ರಿಂದ 4 ರವರೆಗೆ ಯಾವುದೇ ಚೆಕ್ ನ್ನು ನೀಡಿರುವುದಿಲ್ಲ.  ಮೇ 2016 ರಕೊನೆಯ ವಾರದಲ್ಲಿ ಎಲ್ಲಾ ಆರೋಪಿಗಳು ಆಸ್ತಿಗೆ ಸಂಬಂಧಿಸಿದ ಮೊತ್ತ 80.00,000 ರೂಗಳನ್ನು ಕೊಡುವುದಾಗಿ ಆರೋಪಿತರು ಒಪ್ಪಿಕೊಂಡಿರುತ್ತಾರೆ. ಆದ್ದರಿಂದ ದೂರುದಾರರು ಮೇಲ್ಕಂಡ ಆಸ್ತಿಗಳನ್ನು ಆರೋಪಿ ಸಂಖ್ಯೆ 1 ರಿಂದ 4 ರವರಿಗೆ ವಗರ್ಾವಣೆ ಮಾಡಲು ಒಪ್ಪಿಕೊಂಡಿರುತ್ತಾರೆ ಆದ್ದರಿಂದ ದೂರುದಾರರು ಆರೋಪಿ ನಂಬರ 1 ರಿಂದ 4 ರ ಹೆಸರನ್ನು ಸದರಿ ಆಸ್ತಿಗಳ ಆರ್ಓಆರ್ ನಲ್ಲಿ ರೂಪಾಂತರಿಸಲಾಗಿದೆ. ಇದು ಎಲ್ಲ ಸಾಕ್ಷಿಗಳ ಸಮಕ್ಷಮ ನಡೆದಿದ್ದು ಇರುತ್ತದೆ. ಸದರಿ 80 ಲಕ್ಷ ರೂಪಾಯಿ ಮೊತ್ತವನ್ನು ಆರೋಪಿ ಸಂಖ್ಯೆ 1 ರಿಂದ 4 ರವರು ಅಗಷ್ಟ 2018 ರ 2 ನೇಯ ವಾರದಲ್ಲಿ ಅಥವಾ ಅದಕ್ಕೂ ಮೊದಲೇ ಕೊಡುವುದಾಗಿ ಒಪ್ಪಿಗೆ ನೀಡಿರುತ್ತಾರೆ.  ದೂರುದಾರರು ಹಣ ಪಾವತಿ ಮಾಡುವ ವಿಷಯದಲ್ಲಿ ಆರೋಪಿ ನಂಬರ 1 ರಿಂದ 4 ರ ವರಿಗೆ ಕೇಳಿಕೊಂಡಾಗ ಆರೋಪಿ ನಂಬರ 1 ರಿಂದ 11 ನೇದ್ದವರು ಸೇರಿಕೊಂಡು ದೂರದಾರರ ಬರಳಿಗೆ ಬಂದು 80 ಲಕ್ಷ ರೂ ಹಣ ಕೊಡುವುದನ್ನು ನಿರಾಕರಿಸಿ ನಿರಾಕರಿಸಿ ಹೊಲಸು ಭಾಷೆಯಲ್ಲಿ ನಿಂದಿಸಿದ್ದು ಏ ಹೊಲೆಯ ಮಾದಿಗ ಬೋಸಡಿ ನೀನು ದುಡ್ಡು ಕೇಳಿದರೆ ನಾವು ಎಲ್ಲರೂ ಸೇರಿ ನಿನಗೆ ಖಲಾಸ ಮಾಡಿ ಬಿಡುತ್ತೇವೆ ನಿನ್ನ ಮತ್ತು ನಮ್ಮ ನಡುವ ಯಾವುದೇ ರೀತಿಯ ವ್ಯವಹಾರ ಇಲ್ಲ ಎಂದು ಹೇಳಿ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದೆನೆ ಮಾಡಿ ಅವಮಾನಿಸಿದ್ದಾರೆ. ಮೇಲಿನ ಎಲ್ಲಾ ಆಪಾದಿತರಾದ ಆರೋಪಿ ನಂಬರ 1 ರಿಂದ 11 ನೇದ್ದವರು ಬಡ ಮಹಿಳೆ ಮಾದಿಗ ಜಾತಿಗೆ ಸೇರಿದವರಾಗಿದ್ದರಿಂದ ಉದ್ದೇಶಪೂರ್ವಕವಾಗಿ ದೂರುದಾರರನ್ನು ಸಾರ್ವಜನಿಕ ಸ್ಥಳದಲ್ಲಿ ಜಾತಿ ಹೆಸರು ಕರೆದು ಅವಮಾನಿಸಿರುತ್ತಾರೆ. ಮತ್ತು ಸಾಮಾನ್ಯ ಉದ್ದೇಶ ಮಹಿಳೆಯ ಮೇಲೆ ಆಕ್ರಶೋಶ ವ್ಯಕ್ತಿ ಪಡಿಸಿರುತ್ತಾರೆ. ಮೇಲ್ಕಂಡ ಆಸ್ತಿಯ ಬಗ್ಗೆ ಆರೋಪಿತರು ಫಿಯರ್ಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲಿಗಳನ್ನು ಸೃಷ್ಟಿಸಿದ್ದು ಇರುತ್ತದೆ. ಕಾರಣ ಎಲ್ಲ ಆರೋಪಿತರ ವಿರುದ್ಧ ಕಲಂ 32,  323, 504, 506, 509, 415, 420, ಐಪಿಸಿ ಸಂಗಡ ಕಲಂ 3(1)(ಡಿ)(ಆರ್)(ಹೆಚ್) ಎಸ್.ಸಿ/ ಎಸ್/ಟಿ ಕಾಯಿದೆ ಅಡಿ ಕ್ರಮ ಜರೂಗಿಸಬೇಕು ಅಂತ ಇತ್ಯಾದಿ ಸಾರಾಂಶವಿರುತ್ತದೆ ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.128/2022 ಕಲಂ.32, 323, 504, 506, 509, 415, 417, 420 ಐಪಿಸಿ ಮತ್ತು ಕಲಂ.31(1) (ಡಿ), (ಆರ್), (ಹೆಚ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
 
              
ಹುಣಸಗಿ  ಪೊಲೀಸ್ ಠಾಣೆ:-
ಗುನ್ನೆ ನಂ: 323, 307,504,506, ಸಂಗಡ 34 ಐಪಿಸಿ ಮತ್ತು ಕಲಂ. 3(1) (ಆರ್), 3(1) (ಎಸ್), 3(2)(ಗಿ), ಎಸ್.ಸಿ/ಎಸ್.ಟಿ  ಪಿ.ಎ ಯಾಕ್ಟ 1989: ದಿನಾಂಕ:02/12/2022 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿಯು ಹುಣಸಗಿ ಪಟ್ಟಣದ ತಹಸೀಲ್ ಕಾಯರ್ಾಲಯಕ್ಕೆ ಪಿರ್ಯಾದಿಯು ತನ್ನ ವೈಯಕ್ತಿಕ ಕೆಲಸಕ್ಕಾಗಿ ಬಸವೇಶ್ವರ ಝರಾಕ್ಸ ಅಂಗಡಿಯ ಮುಂಭಾಗ ಹೊರಟಾಗ ಆರೋಪಿ ನಂ.2 ನೇದ್ದವನ್ನು ಆರೋಪಿ ನಂ.1 ನೇದ್ದವರಿಗೆ ಮಹೇಶ ಅಂದರೆ ಇವನೇ ನೋಡು ನಮಗೆ ತಳವಾರ ಜಾತಿ ಪ್ರಮಾಣ ಪತ್ರ ಕೊಡಬೇಡಾ ಅಂತಾ ಅನ್ನುವವನು ಎಂದು ಹೇಳಿದ ತಕ್ಷಣವೇ ಆರೋಪಿ ನಂ.1 ನೇದ್ದವನು ಪಿರ್ಯಾದಿಗೆ ಮಹೇಶ ಎಂದರೆ ನಿನೇನಾ ಅಂತಾ  ಬೈಯುತ್ತಾ ಏ ಬ್ಯಾಡ ಸೊಳೆ ಮಕ್ಕಳೆ ನೀವು ಯಾರು ಯಾರು ಇದ್ದಿರಿ ಬಂದು ಬಿಡಿರಿ ಅಂತಾ ಪಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದಾಗ ಅವನೊಂದಿಗೆ ಇದ್ದ ಆರೋಪಿ ನಂ.2 ನೇದ್ದವನು ಪಿರ್ಯಾದಿಗೆ ಇವತ್ತು ಜೀವ ಸಹಿತ ಬಿಡಬೇಡಾ ಅಂತಾ ಚಿರಾಡುತ್ತಾ ಪಿರ್ಯಾದಿ ಹೆಗಲ ಮೇಲೆ ಇದ್ದ ಟಾವಲನ್ನು ತೆಗೆದುಕೊಂಡು ಪಿರ್ಯಾದಿಗೆ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಅಲ್ಲದೇ ಇಬ್ಬರೂ ಕೂಡಿ ಜಾತಿ ಎತ್ತಿ ಬೈದು ಹೊಟ್ಟೆ, ಎದೆಗೆ, & ಮಮರ್ಾಂಗಕ್ಕೆ ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದಿದ್ದರಿಂದ ಪಿರ್ಯಾದಿಯು ಕೆಳಗೆ ಬಿದ್ದಾಗ ಅಲ್ಲಿಯೇ ಇದ್ದ 2-3 ಜನರು ಕೂಡಿ ಪಿರ್ಯಾದಿಗೆ ಹೊಡೆಯುವುದನ್ನು ಬಿಡಿಸಿದ್ದು, ಪಿರ್ಯಾದಿಯು ಮೂಛರ್ೆ ಹೋಗಿದ್ದರಿಂದ ಪಿರ್ಯಾದಿಗೆ ಹುಣಸಗಿ ಸರಕಾರಿ ಆಸ್ಪತ್ರೆಗೆ ಒಯ್ದು ನಂತರ ಹೆಚ್ಚಿನ ಉಪಚಾರ ಕುರಿತು ವಿಜಯಪೂರದ ಖಾಸಗಿ ಆಸ್ಪತ್ರೆಗೆ ಒಯ್ದದ್ದು ಸೇರಿಕೆ ಮಾಡಿದ್ದು ಪಿರ್ಯಾದಿಯು ಇಲಾಜು  ಹೊಂದಿ ಗುಣಮುಖವಾಗಿ ವಾಪಸ್ಸು ಹುಣಸಗಿ ಪಟ್ಟಣಕ್ಕೆ ಬಂದು ಇಂದು ಬೆಳಿಗ್ಗೆ ಠಾಣೆಗೆ ಬಂದು ದೂರು ನೀಡಿದ್ದು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 61/2022  ಕಲಂ 279, 337, 338  ಐಪಿಸಿ: ಇಂದು ದಿನಾಂಕ 06/12/2022 ರಂದು 7-45 ಎ.ಎಂ.ಕ್ಕೆ  ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ  ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಅಯ್ಯಣ್ಣ ಎಚ್.ಸಿ-46 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆಯ ನಂತರ, ಗಾಯಾಳು ಪಿಯರ್ಾದಿ ಶ್ರೀ ಭೀಮಶೆಪ್ಪ @ ಭೀಮು ತಂದೆ ನಾಗಪ್ಪ ಮಡಿವಾಳ ವಯ;23 ವರ್ಷ, ಜಾ;ಅಗಸರ, ಉ;ಒಕ್ಕುಲುತನ, ಸಾ;ಕ್ಯಾಸಪ್ಪನಳ್ಳಿ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ತಡವಾಗಿ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 10-30 ಎ.ಎಂ.ಕ್ಕೆ  ಬಂದು ಪಿಯರ್ಾದಿಯ ಹೇಳಿಕೆಯ ಅಸಲು ಪ್ರತಿಯನ್ನು ನನಗೆ ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನೆ ದಿನಾಂಕ 05/12/2022 ರಂದು ಬೆಳಿಗ್ಗೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಹಣಮಂತ ತಂದೆ ದೇವಪ್ಪ ಹುಡೇದವರ ಈತನು ಬಂದು ನನಗೆ ತಿಳಿಸಿದ್ದೇನೆಂದರೆ ಇಂದು ತನ್ನ ಹೆಂಡತಿಗೆ ಯಾದಗಿರಿಯ ಹಳೆ ಜಿಲ್ಲಾಸ್ಪತ್ರೆಯ ಹೆರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡುತ್ತಿದ್ದು ಅವರಿಗೆ ನಿಮ್ಮ ಆಟೋದಲ್ಲಿ ಕರೆದುಕೊಂಡು ಬರೋಣ ಅಂದಾಗ, ಆಗ ನಾನು ಆಯಿತು ನಡೀ ಹೋಗಿ ಬರೋಣ ಅಂತಾ ನಮ್ಮ ಆಟೋ ನಂಬರ ಕೆಎ-33, ಎ-9491 ನೇದ್ದರ ಚಾಲಕ ಶಿವು ತಂದೆ ಬಾಬು ರಾಠೋಡ ಸಾ;ಕ್ಯಾಸಪ್ಪನಳ್ಳಿ ಈತನಿಗೆ ಪೋನ್ ಮಾಡಿ ಯಾದಗಿರಿಗೆ ಹೋಗಿ ಬರುವುದಿದೆ ಬಾ ಅಂತಾ ಕರೆದಾಗ ಶಿವು ಈತನು ಬಂದಾಗ ಆಟೋದಲ್ಲಿ ನಾನು ಮತ್ತು ಹಣಮಂತ ಕುಳಿತುಕೊಂಡು  ನಮ್ಮೂರಿನಿಂದ ಯಾದಗಿರಿಗೆ ಬಂದಿರುತ್ತೇವೆ.  ಹೀಗಿದ್ದು ಯಾದಗಿರಿಗೆ ಬಂದು ಹಳೆ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡನಿಂದ ಹಣಮಂತ ಈತನ ಪತ್ನಿಯಾದ ಸಾವಿತ್ರಮ್ಮ ನವರಿಗೆ ಕರೆದುಕೊಂಡು ಸಮಯ 4-30 ಪಿ.ಎಂ.ಕ್ಕೆ ಯಾದಗಿರಿಯಿಂದ ನಮ್ಮುರಿಗೆ ನಮ್ಮ ಆಟೋದಲ್ಲಿಯೇ ಹೊರಟೆವು. ಶಿವು ಈತನು ನಮ್ಮ ಆಟೋವನ್ನು ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ವಾಡಿ ಮುಖ್ಯ ರಸ್ತೆ ಮೇಲೆ ಬರುವ ವೆಂಕಟೇಶನಗರದ ತಾಂಡಾದ ಬಸ್ ನಿಲ್ದಾಣದ ಹತ್ತಿರ ಮುಖ್ಯ ರಸ್ತೆ ಮೇಲೆ ನಿನ್ನೆ ದಿನಾಂಕ 05/12/2022 ರಂದು ಸಮಯ ಸಾಯಂಕಾಲ 4-45 ಪಿ.ಎಂ.ಕ್ಕೆ ನಮ್ಮ ಆಟೋ ಚಾಲಕ ಶಿವು ಈತನು ಆಟೋವನ್ನು ಅತೀವೇಗ & ಅಲಕ್ಷ್ಯತನದಿಂದ  ನಡೆಸಿಕೊಂಡು ಹೊರಟಿದ್ದಾಗ ನಾವು ಆತನಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದೆವು, ಅದೇ ಸಮಯಕ್ಕೆ ನಾವು ನೋಡು ನೋಡುತ್ತಿದ್ದಂತೆ ವಾಡಿ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡವನೇ ನಮ್ಮ ಆಟೋ ನೇದ್ದಕ್ಕೆ ನೇರವಾಗಿ ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ಗಂಟಲಿಗೆ ತರಚಿದ  ಗಾಯ, ಹಣೆಗೆ ಭಾರೀ ರಕ್ತಗಾಯವಾಗಿರುತ್ತದೆ. ಆಟೋದಲ್ಲಿದ್ದ ಹಣಮಂತ, ಆತನ ಪತ್ನಿ ಸಾವಿತ್ರಮ್ಮ ಹಾಗೂ ಆಟೋ ಚಾಲಕ ಶಿವು ಇವರಿಗೆ ಯಾವುದೇ ಗಾಯ, ವಗೈರೆ ಆಗಿದ್ದು ಕಂಡು ಬಂದಿರುವುದಿಲ್ಲ, ಆಟೋದಿಂದ ಇಳಿದು ಹೊರಗೆ ಬಂದು ನೋಡಲಾಗಿ ಮೋಟಾರು ಸೈಕಲ್ ಸವಾರನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು, ತನ್ನ ಹೆಸರು ಮಹಮದ್ ಉಮರ್ ತಂದೆ ಅಬ್ದುಲ್ ಸಲೀಂ ಗೋಗಿ ಸಾ;ಆಸರ ಮೊಹಲ್ಲಾ, ಯಾದಗಿರಿ ಅಂತಾ ತಿಳಿಸಿದ್ದು, ಆತನಿಗೆ ಸದರಿ ಅಪಘಾತದಲ್ಲಿ ಬಲತೊಡೆಗೆ ಭಾರೀ ರಕ್ತಗಾಯವಾಗಿ ಮುರಿದಂತೆ ಕಂಡು ಬರುತ್ತಿದ್ದು, ಬಲಕಪಾಳಕ್ಕೆ ತರಚಿದ ರಕ್ತಗಾಯ ಆಗಿರುತ್ತದೆ. ಆತನ ಮೋಟಾರು ಸೈಕಲ್ ನಂಬರ ನೋಡಲಾಗಿ ಕೆಎ-33, ಇಎ-8345 ನೇದ್ದು ಇರುತ್ತದೆ. ಅದೇ ಸಮಯಕ್ಕೆ ವಾಡಿ ಕಡೆಯಿಂದ ಯಾದಗಿರಿಗೆ ಮೋಟಾರು ಸೈಕಲ್ ಮೇಲೆ ಹೊರಟಿದ್ದ ಗಾಯಾಳು ಮೋಟಾರು ಸೈಕಲ್ ಸವಾರನ ಪರಿಚಯ ಇರುವ ಶ್ರೀ ರಿಯಾಜ್ ಅಹಮದ್ ತಂದೆ ನಜಿಮೆನ್ ಗನಿ ಸಾ;ಆಸರ ಮೊಹಲ್ಲಾ ಯಾದಗಿರಿ ಇವರು ಬಂದು ವಿಚಾರಿಸಿರುತ್ತಾರೆ. ಆಗ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಾಗ ಗಾಯಾಳುಗಳಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಮೋಟಾರು ಸೈಕಲ್ ಸವಾರನಿಗೆ ಕೂಡಲೇ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ರೆಫರ್ ಮಾಡಿರುತ್ತಾರೆ. ಈ ಘಟನೆ ಕುರಿತು ನಿನ್ನೆ ರಾತ್ರಿ ಈ ಆಸ್ಪತ್ರೆಗೆ ವಿಚಾರಣೆಗೆ ಬಂದಿದ್ದ ಯಾದಗಿರಿ ಸಂಚಾರಿ ಪೊಲೀಸರಿಗೆ ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ನಾಳೆ ಬೆಳಿಗ್ಗೆ ತಿಳಿಸುವುದಾಗಿ ಹೇಳಿದ್ದು ಇರುತ್ತದೆ.  ಹೀಗಿದ್ದು ಇಂದು ದಿನಾಂಕ 06/12/2022 ರಂದು ನನಗೆ ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ನನಗೆ ಹೆಚ್ಚಿನ ಉಪಚಾರ ಕುರಿತು ರೆಫರ್ ಮಾಡಿದ್ದರಿಂದ ನಾನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹೊರಟಿದ್ದು, ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಕೊಡಲು ತಿಳಿಸಿದ್ದು, ಆದ್ದರಿಂದ ನಿನ್ನೆ ದಿನಾಂಕ 05/12/2022 ರಂದು ಸಾಯಂಕಾಲ 4-45 ಪಿ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ವೆಂಕಟೇಶ ನಗರ ತಾಂಡಾದ ಬಸ್ ನಿಲ್ದಾಣದ ಹತ್ತಿರ ನಾವು ಕುಳಿತುಕೊಂಡು ಹೊರಟಿದ್ದ ನಮ್ಮ ಆಟೋ ನಂಬರ ಕೆಎ-33, ಎ-9491 ನೇದ್ದರ ಚಾಲಕ ಶಿವು ಈತನು ಮತ್ತು ಮೋಟಾರು ಸೈಕಲ್ ನಂಬರ ಕೆಎ-33, ಇಎ-8345 ನೇದ್ದರ ಸವಾರ ಮಹಮದ್ ಉಮರ್ ಇವರಿಬ್ಬರ ಅತೀವೇಗ ಮತ್ತು ಅಲಕ್ಷ್ಯತನದಿಂದ ವಾಹನ ನಡೆಸಿದ್ದರಿಂದ ಎದುರು ಬದರು ಡಿಕ್ಕಿ ಹೊಡೆದುಕೊಂಡಿದ್ದರಿಂದ ಈ ಅಪಘಾತ ಜರುಗಿದ್ದು ಇರುತ್ತದೆ, ಅವರಿಬ್ಬರ ಮೇಲೆ ಕಾನೂನಿನ ಸೂಕ್ತ  ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  61/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.          .  

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ: ಇಂದು ದಿನಾಂಕ:06/12/2022 ರಂದು 6-30 ಪಿಎಮ್ ಕ್ಕೆ ಶ್ರೀ ಜಲಾಲಸಾಬ ತಂದೆ ಮಹಿಬೂಬಸಾಬ ಚಾಕ್ರಿ, ವ:24, ಜಾ:ಮುಸ್ಲಿಂ, ಉ:ಡ್ರೈವರ ಕಮ್ ಮಾಲಿಕ ಸಾ:ಠಾಣಗುಂದಿ ತಾ:ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಟಾಟಾ ಎಸ್ ವಾಹನ ನಂ. ಕೆಎ 33 ಎ 5836 ನೇದರ ಮಾಲಿಕನಿದ್ದು, ಸದರಿ ನನ್ನ ಟಾಟಾ ಎಸ್ ವಾಹನವನ್ನು ಸ್ವತಃ ನಾನೆ ಚಲಾಯಿಸಿಕೊಂಡು ನನ್ನ ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಹೊಲದಲ್ಲಿ ಬೆಳೆದ ಹತ್ತಿಯನ್ನು ಮಾರಾಟ ಮಾಡುವ ಕುರಿತು ಇಂದು ದಿನಾಂಕ:06/12/2022 ರಂದು ನನ್ನ ಮೇಲ್ಕಂಡ ಟಾಟಾ ಎಸ್ ಗಾಡಿಯಲ್ಲಿ ಲೋಡ ಮಾಡಿಕೊಂಡು ನಾಯ್ಕಲ್ ಹತ್ತಿರ ಇರುವ ಕೆ.ಬಿ.ಎನ್ ಹತ್ತಿ ಮಿಲನಲ್ಲಿ ಕಾಟಾ ಮಾಡಿಸಿ, ಹತ್ತಿಯನ್ನು ಮಾರಾಟ ಮಾಡಿ ಮದ್ಯಾಹ್ನ ವಾಪಸ ಊರಿಗೆ ಹೋಗುತ್ತಿದ್ದೆನು. ನನಗೆ ದಾರಿ ಮಧ್ಯದಲ್ಲಿ ಹಸಿವು ಆಗಿದ್ದರಿಂದ ಊಟ ಮಾಡಬೇಕೆಂದು ನನ್ನ ಟಾಟಾ ಎಸ್ ವಾಹನವನ್ನು ಗುರುಸಣಗಿ ಕ್ರಾಸ ಹತ್ತಿರ ರಸ್ತೆಯ ಕೆಳಭಾಗದಲ್ಲಿ ಸೈಡಿಗೆ ನಿಲ್ಲಿಸಿ, ಅಲ್ಲಿಯೇ ಇರುವ ಹೊಟೇಲನಲ್ಲಿ ಹೋಗಿ ಊಟ ಮಾಡಿ ನಂತರ ಚಹಾ ಕುಡಿಯುತ್ತಿದ್ದೆನು. ಆಗ ಮದ್ಯಾಹ್ನ 2-20 ಗಂಟೆ ಸುಮಾರಿಗೆ ಗುರುಸಣಗಿ ಗ್ರಾಮದ ಒಳಗಡೆಯಿಂದ ಮಾರುತಿ ಕಾರ ನಂ. ಕೆಎ 33 ಎನ್ 0243 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಮೇನ ರೋಡಿಗೆ ಬರುತ್ತಿದ್ದಾಗ ಅದೇ ವೇಳೆಗೆ ಯಾದಗಿರಿ ಕಡೆಯಿಂದ ಶಹಾಪೂರ ಕಡೆ ಒಂದು ಗೂಡ್ಸ ಲಾರಿ ನಂ. ಎಮ್.ಹೆಚ್ 09 ಇಎಮ್ 9896 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದು, ಸದರಿ ಎರಡು ವಾಹನಗಳ ಚಾಲಕರು ತಮ್ಮ ತಮ್ಮ ಚಾಲನೆ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ ಎರಡು ವಾಹನಗಳ ಮಧ್ಯ ಅಪಘಾತ ಸಂಭವಿಸಿದ್ದು, ಗೂಡ್ಸ ಲಾರಿಯ ಚಾಲಕನು ಒಮ್ಮೆಲೆ ತನ್ನ ವಾಹನವನ್ನು ಎಡಗಡೆ ಕಟ್ ಹೊಡೆದಿದ್ದರಿಂದ ಸದರಿ ವಾಹನ ಅವನ ನಿಯಂತ್ರಣ ತಪ್ಪಿ ರಸ್ತೆ ಬಾಜು ನಿಲ್ಲಿಸಿದ ನನ್ನ ಟಾಟಾ ಎಸ್ ವಾಹನ ಮತ್ತು ಅದರ ಪಕ್ಕದಲ್ಲಿ ನಿಂತಿದ್ದ ಸ್ಕೂಟಿ ನಂ. ಕೆಎ 32 ಹೆಚ್.ಸಿ 0395 ಹಾಗೂ ಅದರ ಪಕ್ಕದಲ್ಲಿ ನಿಲ್ಲಿಸಿದ ಮೋಟರ್ ಸೈಕಲ್ ನಂ. ಕೆಎ 33 ಎಸ್ 8078 ನೇದವುಗಳ ಮೇಲೆ ಬಲ ಮಗ್ಗುಲಾಗಿ ಬಿದ್ದಿರುತ್ತದೆ. ಹೀಗಾಗಿ ನನ್ನ ಟಾಟಾ ಎಸ್ ಮತ್ತು ನನ್ನ ಪಕ್ಕದಲ್ಲಿ ನಿಂತಿದ್ದ ಸ್ಕೂಟಿ ಹಾಗೂ ಮೋಟರ್ ಸೈಕಲ್ಗಳು ನುಜ್ಜುಗುಜ್ಜಾಗಿರುತ್ತವೆ. ನಾವು ಹೋಗಿ ಮಾರುತಿ ಕಾರಿನಲ್ಲಿದ್ದವರಿಗೆ ನೋಡಲಾಗಿ ಮಾರುತಿ ಕಾರಿನ ಚಾಲಕ 1) ಸುರೇಶ ತಂದೆ ಥಾವರಪ್ಪ ರಾಠೋಡ ಸಾ:ಯಾದಗಿರಿ ಈತನಿಗೆ ತಲೆಗೆ, ಮುಖಕ್ಕೆ, ಎದೆಗೆ ಅಲ್ಲಲ್ಲಿ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿದ್ದವು. ಕಾರಿನಲ್ಲಿ ಕುಳಿತ್ತಿದ್ದ 2) ದೇವಿಂದ್ರಪ್ಪ ತಂದೆ ಮಲ್ಲಣ್ಣ ಕನಗೊಂಡ ಸಾ:ದೋರನಳ್ಳಿ ಈತನಿಗೆ ಬಲ ತಲೆಗೆ ಮತ್ತು ಬಲ ಭುಜಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದವು, 3) ಹೈಯಾಳಪ್ಪ ತಂದೆ ನಾಗಪ್ಪ ವಗ್ಗಾನೋರ ಸಾ:ಶಹಾಪೂರ ಈತನಿಗೆ ಬಲಗಡೆ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿತ್ತು. 4) ಚಂದ್ರಾಮಪ್ಪ ತಂದೆ ಮೈಲಾರಪ್ಪ ಸಾ:ಬೀರನೂರ ಹಾ:ವ:ಯಾದಗಿರಿ ಈತನಿಗೆ ಎಡಗಾಲಿಗೆ ಭಾರಿ ಒಳಪೆಟ್ಟಾಗಿ ಬಾವು ಬಂದಿತ್ತು. ಸದರಿ ಗೂಡ್ಸ ಲಾರಿ ಚಾಲಕನು ಲಾರಿಯಿಂದ ಕೆಳಗೆ ಇಳಿದು ಬಂದಿದ್ದು, ಅವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಬಸವರಾಜ ತಂದೆ ಶಿವಯೋಗಿ ಮಜ್ಜಿಗೆ ಸಾ:ಮದಿನಾ ಕಾಲೋನಿ ಉಚ್ಛಗಾಂವ ಕೊಲ್ಹಾಪೂರ ಎಂದು ಹೇಳಿ ಸ್ವಲ್ಪ ಹೊತ್ತು ನಿಂತು ತನ್ನ ಲಾರಿಯನ್ನು ಬಿಟ್ಟು ಅಲ್ಲಿಂದ ಹೋಗಿಬಿಟ್ಟನು. ಆಗ ನಾನು ಮತ್ತು ಅಲ್ಲಿಯೇ ಇದ್ದ ಸ್ಕೂಟಿ ಮಾಲಿಕ ಪ್ರದೀಪ, ಅವನ ಸ್ನೇಹಿತ ಸಚಿನ ಹಾಗೂ ಹೊಟೆಲಿನಲ್ಲಿದ್ದ ಕೆಲವರು ಸೇರಿ ಗಾಯಾಳುಗಳಿಗೆ ಮಾರುತಿ ಕಾರಿನಿಂದ ಹೊರಗಡೆ ತೆಗೆದು ರಸ್ತೆ ಮೇಲೆ ಹೊರಟಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇವೆ. ಕಾರಣ ಸದರಿ ಅಪಘಾತವು ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸನಲ್ಲಿ ಮಾರುತಿ ಕಾರಿನ ಚಾಲಕ ಮತ್ತು ಗೂಡ್ಸ ಲಾರಿ ಚಾಲಕ ಇವರಿಬ್ಬರ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಸಂಭವಿಸಿರುತ್ತದೆ. ಆದ್ದರಿಂದ ಸದರಿ ಎರಡು ವಾಹನಗಳ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 134/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 158/2022 ಕಲಂ: 279, 338 ಐಪಿಸಿ: ಇಂದು ದಿ: 06/12/2022 ರಂದು 11-30 ಎ.ಎಮ್ಕ್ಕೆ ಪಿರ್ಯಾದಿ ಶ್ರೀ ಹೊನ್ನಪ್ಪ ತಂದೆ ಮೈಲಾರೆಪ್ಪ ಬಂಡೇರ ವ|| 70 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಬೋನಾಳ ಹಾ.ವ|| ಬಂಡೇರ ದೊಡ್ಡಿ ತಾ|| ಸುರಪೂರ ಇದ್ದು, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವದೆನೆಂದರೆ, ನನಗೆ ಇಬ್ಬರು ಗಂಡುಮಕ್ಕಳು ಹಾಗೂ 4 ಜನ ಹೆಣ್ಣುಮಕ್ಕಳು ಇದ್ದು ಎಲ್ಲರ ಮದುವೆಯಾಗಿರುತ್ತದೆ. ನನ್ನ ಮಗನಾದ ನಾಗಪ್ಪ ವಯಸ್ಸು|| 35 ವರ್ಷ ಈತನು ಸುಮಾರು 4-5 ವರ್ಷಗಳಿಂದ ತನ್ನ ಹೆಂಡತಿಯ ತವರೂರಾದ ಟಿ ಬೊಮನಳ್ಳಿ ಗ್ರಾಮದಲ್ಲಿ ಒಕ್ಕಲುತನ ಮಾಡಿಕೊಂಡು ವಾಸವಾಗಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 05/12/2022 ರಂದು ನಾನು ಮತ್ತು ನನ್ನ ಅಳಿಯ ಶಾಂತಪ್ಪ ತಂದೆ ಕನಕಪ್ಪ ಕುರಿ ಸಾ|| ಚಿಕನಳ್ಳಿ ಇಬ್ಬರು ನಮ್ಮ ಮನೆಯಲ್ಲಿದ್ದಾಗ ಬೆಳಿಗ್ಗೆ 9 ಗಂಟೆ ಸುಮಾರಿಗೆ ನನಗೆ ಪರಿಚಯದವಾರ ಟಿ ಬೊಮನಳ್ಳಿ ಗ್ರಾಮದ ನಿಂಗಪ್ಪ ತಂದೆ ಪರಮಣ್ಣ ಮಾಲಗತ್ತಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಮಾಚಗುಂಡಾಳ ಗ್ರಾಮದಲ್ಲಿ ಕೆಲಸವಿದ್ದ ನಿಮಿತ್ಯ ನಾನು ಮತ್ತು ನಮ್ಮೂರ ಮಲ್ಲಪ್ಪ ತಂದೆ ಮಾಳಪ್ಪ ದೇವಿಕೇರಿ ಇಬ್ಬರು ಕೂಡಿ ನನ್ನ ಮೋಟರ ಸೈಕಲ್ ಮೇಲೆ ಹಾಗೂ ನಿಮ್ಮ ಮಗನಾದ ನಾಗಪ್ಪ ಈತನು ತನ್ನ ಮೋಟರ ಸೈಕಲ್ ನಂ ಕೆಎ 35 ಎಕ್ಸ್ 1660 ನೇದ್ದರ ಮೇಲೆ ನಮ್ಮೂರಿನಿಂದ ಮಾಚಗುಂಡಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಸುರಪುರ ಕೆಂಭಾವಿ ಮುಖ್ಯ ರಸ್ತೆಯ ಮಾಚಗುಂಡಾಳ ಗ್ರಾಮದ ಕವರ್ಿಂಗ್ ಹತ್ತಿರ ಎದುರುಗಡೆಯಿಂದ ಒಂದು ಕ್ರೂಷರ್ ವಾಹನದ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದೆ ಹೊರಟಿದ್ದ ನಿಮ್ಮ ಮಗ ನಾಗಪ್ಪನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾಗಪ್ಪನು ಮೋಟರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದನು. ಆಗ ನಾನು ಮತ್ತು ಮಲ್ಲಪ್ಪ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ್ ನಿಲ್ಲಿಸಿ ಬಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ನಾಗಪ್ಪನಿಗೆ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಬಲಗಣ್ಣಿನ ಹತ್ತಿರ ತರಚಿದ ಗಾಯ, ಗದ್ದಕ್ಕೆ ರಕ್ತಗಾಯ, ಬಲಗೈ ಹಸ್ತ ಹಾಗು ಮೊಳಕೈ ಹತ್ತಿರ ತರಚಿದ ಗಾಯ, ಬಲಮುಡ್ಡಿಗೆ ತರಚಿದ ಗಾಯ, ಬಲಗಾಲ ತೊಡೆ ಮತ್ತು ಮೊಳಕಾಲ ಕೆಳಗೆ ಮುರಿದಂತಾಗಿ ಬಾರಿ ಗಾಯವಾಗಿದ್ದು ಇರುತ್ತದೆ. ನಂತರ ಅಲ್ಲೆ ನಿಂತಿದ್ದ ಕ್ರೂಷರ್ ವಾಹನ ನಂಬರ ನೋಡಲಾಗಿ ಕೆಎ 28 ಎಮ್ 3922 ಅಂತ ಇದ್ದು, ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲು ಪಾಡೆಶಾ ಮುಲಿನ್ ತಂದೆ ಗುಡನಶಾ ಕೊತ್ವಾಲ ಸಾ|| ಅಗ್ನಿ ಅಂತ ತಿಳಿಸಿದ್ದು ಗಾಯಗೊಂಡ ನಿಮ್ಮ ಮಗನಿಗೆ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಹೋಗುತ್ತೇವೆ ನೀವು ಬೇಗನೆ ಬನ್ನಿರಿ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಅಳಿಯ ಶಾಂತಪ್ಪ ತಂದೆ ಕನಕಪ್ಪ ಕುರಿ ಸಾ|| ಚಿಕನಳ್ಳಿ ಇಬ್ಬರು ಕೂಡಿ ಕೂಡಲೆ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ನನ್ನ ಮಗನಿಗೆ ನೋಡಲಾಗಿ ಮೇಲಿನಂತೆ ಗಾಯಗಳಾಗಿದ್ದು ಇರುತ್ತದೆ. ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅಳಿಯ ಶಾಂತಪ್ಪ ಇಬ್ಬರು ಕೂಡಿ ನನ್ನ ಮಗ ನಾಗಪ್ಪನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಕ್ರೂಷರ್ ಜೀಪ್ ನಂ. ಕೆಎ 28 ಎಮ್ 3922 ನೇದ್ದರ ಚಾಲಕನಾದ ಪಾಡೆಶಾ ಮುಲಿನ್ ತಂದೆ ಗುಡನಶಾ ಕೊತ್ವಾಲ ಸಾ|| ಅಗ್ನಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.158/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 159/2022 ಕಲಂ 457, 380 ಐಪಿಸಿ : ಇಂದು ದಿನಾಂಕ:06/12/2022 ರಂದು 4:00 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಮೌನೇಶ ತಂದೆ ತಿಮ್ಮಣ್ಣ ಸುಬೇದಾರ ವಯಾ|| 32 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ತಿಂಥಣಿ ತಾ|| ಸುರಪುರ ಇದ್ದು ತಮ್ಮಲ್ಲಿ ದೂರು ನೀಡುವುದೆನೆಂದರೆ, ನಮ್ಮ ತಂದೆ ತಾಯಿಗೆ ನಾವು 4 ಜನ ಮಕ್ಕಳಿದ್ದು, ಇಬ್ಬರು ಒಕ್ಕಲುತನ ಮಾಡಿಕೊಂಡಿದ್ದು, ಒಬ್ಬ ಕುರಿ ಕಾಯುವದು ಮತ್ತು ಇನ್ನೊಬ್ಬ ವಿದ್ಯಾಭ್ಯಾಸ ಮಾಡಿಕೊಂಡು ಇದ್ದು ಎಲ್ಲರು ಒಟ್ಟಿಗೆ ವಾಸವಾಗಿರುತ್ತೇವೆ. ನಮ್ಮವು ಒಟ್ಟು 70 ಕುರಿಗಳು ಇದ್ದು, ಅವುಗಳನ್ನು ನಮ್ಮ ತಮ್ಮನಾದ ಮುದೆಪ್ಪ ಈತನು ಕಾಯ್ದುಕೊಂಡು ಬಂದು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹತ್ತಿರ ಇರುವ ನಮ್ಮದೇ ಜನತಾ ಮನೆಯಲ್ಲಿ ಕುರಿಗಳನ್ನು ಬಿಡುತ್ತಿದ್ದನು. ದಿನಾಂಕ: 03/12/2022 ರಂದು ಮದ್ಯಾಹ್ನ ನಾನು ಮನೆಯಲ್ಲಿದ್ದಾಗ ಒಂದು ಕಪ್ಪುಬಣ್ಣದ ಸ್ಕಾಪರ್ಿಯೋ ವಾಹನ ನಮ್ಮ ಮನೆಯ ಮುಂದೆ ಬಂದು ಹೋಯಿತು. ಹೀಗಿದ್ದು ದಿನಾಂಕ: 03/12/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ತಮ್ಮನಾದ ಮುದೆಪ್ಪ ಈತನು ಕುರಿಗಳನ್ನು ಮೇಯಿಸಿಕೊಂಡು ಬಂದು ಜನತಾ ಮನೆಯಲ್ಲಿ ತಂದು ಬಿಟ್ಟು ಬೀಗ ಹಾಕಿಕೊಂಡು ಮನೆಗೆ ಬಂದಿದ್ದನು. ನಂತರ ನಾನು, ನಮ್ಮ ತಮ್ಮಂದಿರಾದ ಮುದೆಪ್ಪ, ದೇವರಾಜ ಮೂವರು ರಾತ್ರಿ ಊಟ ಮಾಡಿ 10 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದೆವು. ನಂತರ ದಿನಾಂಕ: 04/12/2022 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಮ್ಮ ತಮ್ಮನಾದ ಮುದೆಪ್ಪ ಈತನು ಜನತಾ ಮನೆಯಲ್ಲಿ ಬಿಟ್ಟಿದ್ದ ಕುರಿಗಳ ಹತ್ತಿರ ಕಸ ಹೊಡೆಯಲು ಹೋದಾಗ ಸದರಿ ಜನತಾ ಮನೆಯ ಬಾಗಿಲಿನ ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಕುರಿಗಳನ್ನು ಎಣಿಸಿದಾಗ 66 ಕುರಿಗಳು ಇದ್ದು ಇನ್ನೂ 4 ಕುರಿಗಳು ಕಾಣಲಿಲ್ಲ ಆಗ ಮುದೆಪ್ಪನು ಗಾಬರಿಗೊಂಡು ನಮ್ಮ ಮುಂದೆ ಬಂದು ಹೇಳಿದಾಗ ನಾವೆಲ್ಲರು ಕೂಡಿ ಊರಲ್ಲಿ ಎಲ್ಲ ಕಡೆ ಮತ್ತು ಹೊಲಗದ್ದೆಗಳಲ್ಲಿ ಹುಡುಕಾಡಿ ಮತ್ತು ಸುತ್ತಮುತ್ತಲಿನ ಊರುಗಳಾದ ದಾದಲಾಪುರ, ಶಾಂತಪುರ, ಲಿಂಗದಳ್ಳಿ ಗ್ರಾಮಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಇಂದು ತಡವಾಗಿ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ದಿನಾಂಕಃ 03-12-2022 ರಂದು ರಾತ್ರಿ 10 ಗಂಟೆಯಿಂದ ದಿನಾಂಕಃ 04-12-2022 ರಂದು ಮುಂಜಾನೆ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಜನತಾ ಮನೆಯಲ್ಲಿ ಬಿಟ್ಟಿದ್ದ 4 ಕುರಿಗಳು ಅಂದಾಜು ಕಿಮ್ಮತ್ತು 40,000/- ರೂ ಇವುಗಳನ್ನು ಜನತಾ ಮನೆಯ ಬೀಗ ಮುರಿದು ಒಳಗಡೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುವದರಿಂದ, ಸದರಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 159/2022 ಕಲಂ: 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಹುಣಸಗಿ  ಪೊಲೀಸ್ ಠಾಣೆ:-
ಗುನ್ನೆ ನಂ: 143,147,323,307,504,506, ಸಂ.149 ಐಪಿಸಿ: ದಿನಾಂಕ:02/12/2022 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಪಿರ್ಯಾದಿಯು ಹುಣಸಗಿಯ ತಹಸೀಲ್ದಾರ ಕಚೇರಿಗೆ ತಹಸೀಲ್ದಾರ ಸಾಹೇಬರ ಹತ್ತಿರ ಪಿರ್ಯಾದಿಯು ತಳವಾರು ಜಾತಿ ಸಮಾಜದವರಿಗೆ ಎಸ್.ಟಿ. ಸಟರ್ಿಪಿಕೇಟಿಗಾಗಿ ಅಜರ್ಿಯನ್ನು ಸಲ್ಲಿಸಿದ್ದು ತಹಸೀಲ್ದಾರರು ಅಜರ್ಿಯಗಳನ್ನು ತಿರಸ್ಕರಿಸಿದ್ದರಿಂದ ಅವುಗಳ ಸೂಕ್ತ ಹಿಂಬರಹ ಪಡೆಯುವ ಸಲುವಾಗಿ ಹೊರಟಾಗ ಆರೋಪಿತರೆಲ್ಲರೂ ಸೇರಿ ಏಕಾಏಕಿ ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ದಾಳಿ ಮಾಡಿ ಆರೋಪಿ ನಂ.1 ನೇದ್ದವನು ಕುತ್ತಿಗೆ ಹಿಡಿದು ಹಿಸುಕಿದ್ದು, ಆರೋಪಿ ನಂ.2 ನೇದ್ದವನು ಬಲವಾಗಿ ಹೊಡೆದಿದ್ದು, ಆರೋಪಿ ನಂ.3 ನೇದ್ದವನು ಪಿರ್ಯಾದಿಯ ಮಮರ್ಾಂಗಕ್ಕೆ ಸಾಯಿ ಸೂಳೆಮಗನೇ ಅಂತಾ ಒದ್ದಿದ್ದು ಮತ್ತು ಇನ್ನೂಳಿದವರು ಕೈಯಲ್ಲಿ ರಾಡು,ಬಡಿಗೆ ಹಾಗೂ ಕಲ್ಲುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದು ಇರುತ್ತದೆ, ಹೊಡೆಯರಿ ಬಿಡಬೇಡಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಅಪರಾಧ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ 379 ಐಪಿಸಿ: ಇಂದು ದಿನಾಂಕ:06/12/2022 ರಂದು 8.30 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಮಾನಪ್ಪ ತಂದೆ ಪಕೀರಪ್ಪ ಕಡ್ಡೋಣಿ ಸಾ|| ಲಿಂಗದಳ್ಳಿ ಎಸ್ಕೆ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಇಬ್ಬರು ಗಂಡುಮಕ್ಕಳು ಒಬ್ಬಳು ಹೆಣ್ಣುಮಗಳು ಇರುತ್ತಾಳೆ. ಮೂವರು ವಿದ್ಯಾಬ್ಯಾಸ ಮಾಡಿಕೊಂಡು ಇರುತ್ತಾರೆ. ನಮ್ಮವು ಒಟ್ಟು 15 ಕುರಿಗಳು ಇದ್ದು ಅವುಗಳನ್ನು ನಾನೇ ಮೇಯಿಸಿಕೊಂಡು ಇರುತ್ತೇನೆ. ಹೀಗಿದ್ದು ದಿನಾಂಕ: 03/12/2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ನಮ್ಮ ಕುರಿಗಳನ್ನು ನಮ್ಮ ಅಳಿಯನಾದ ತಿಮ್ಮಣ್ಣ ತಂದೆ ಭೀಮಣ್ಣ ಮಕಾಶಿ ಈತನ ಮನೆಯ ಬಾಜು ಇರುವ ನಮ್ಮ ಹಟ್ಟಿಯಲ್ಲಿ ಬಿಟ್ಟು, ಮನೆಗೆ ಬಂದಿದ್ದೆನು. ನಂತರ ನಾನು ರಾತ್ರಿ ಊಟ ಮಾಡಿ 10 ಗಂಟೆ ಸುಮಾರಿಗೆ ನಮ್ಮ ಹಟ್ಟಿಯ ಹತ್ತಿರ ಹೋಗಿ ಕುರಿಗಳನ್ನು ನೋಡಿಕೊಂಡು ಮರಳಿ ಮನೆಗೆ ಬಂದು ಮಲಗಿದ್ದೆನು. ನಂತರ ದಿನಾಂಕ: 04/12/2022 ರಂದು ಬೆಳಿಗ್ಗೆ 5.30 ಗಂಟೆ ಸುಮಾರಿಗೆ ನಾನು ಕುರಿಗಳ ಹತ್ತಿರ ಕಸ ಹೊಡೆಯಲು ಹಟ್ಟಿಗೆ ಹೋದಾಗ ಕುರಿಗಳನ್ನು ನೋಡಲಾಗಿ 11 ಕುರಿಗಳು ಮಾತ್ರ ಇದ್ದು ಇನ್ನೂ 4 ಕುರಿಗಳು ಕಾಣಲಿಲ್ಲ. ಆಗ ನಾನು ಗಾಬರಿಗೊಂಡು ನಮ್ಮ ಅಳಿಯ ತಿಮ್ಮಣ್ಣ ಹಾಗೂ ನಮ್ಮ ಅಣ್ಣನ ಮಗ ಪರಮಣ್ಣ ತಂದೆ ಹೈಯಾಳಪ್ಪ ಕರನಾಳ ಮೂವರು ಕೂಡಿ ಊರಲ್ಲಿ ಎಲ್ಲ ಕಡೆ ಹಾಗೂ ಹೊಲಗದ್ದೆಗಳಲ್ಲಿ ಹುಡುಕಾಡಿ ಮತ್ತು ಸುತ್ತಮುತ್ತಲಿನ ಊರುಗಳಾದ ಬಂಡೊಳ್ಳಿ, ಹುಣಸಿಹೊಳೆ, ಶಾಂತಪುರ ಗ್ರಾಮಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಿಗದೇ ಇದ್ದುದರಿಂದ ಇಂದು ತಡವಾಗಿ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ದಿನಾಂಕಃ 03-12-2022 ರಂದು ರಾತ್ರಿ 10 ಗಂಟೆಯಿಂದ ದಿನಾಂಕಃ 04-12-2022 ರಂದು ಮುಂಜಾನೆ 5-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಹಟ್ಟಿಯಲ್ಲಿ ಬಿಟ್ಟಿದ್ದ 4 ಕುರಿಗಳು ಅಂದಾಜು ಕಿಮ್ಮತ್ತು 40,000/- ರೂ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವದರಿಂದ, ಸದರಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 160/2022 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
 


 

ಇತ್ತೀಚಿನ ನವೀಕರಣ​ : 09-12-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080