ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-10-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 151/2022 ಕಲಂ: 143, 147, 323, 504, 506 ಸಂಗಡ 149 ಐಪಿಸಿ: ಆರೋಪಿತಳಾದ ಸುನೀತಾ@ತೇಜಶ್ವಿನಿಯು ತನ್ನ 2ನೇ ಮಗುವಿನ ಬಾಣಿತಕ್ಕೆಂದು ತವರು ಮನೆಗೆ ಹೋಗಿದ್ದು ಮರಳಿ ಗಂಡನ ಮನೆಗೆ ಬರದೇ ದಿನಾಂಕ 06.03.2022 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಆರೋಪಿತರೆಲ್ಲಾರು ಕಂದಕೂರು ಗ್ರಾಮದ ಈಶ್ವರ ಗುಡಿಯ ಹತ್ತಿರ ಫೀರ್ಯಾದಿಗೆ ಮತ್ತು ಆಕೆಯ ತಾಯಿಗೆ & ಮಕ್ಕಳಿಗೆ ಅಲ್ಲಿಗೆ ಕರೆಸಿ ಅವರೊಂದಿಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅವರೊಂದಿಗೆ ತಕರಾಡು ಮಾಡಿ ಅವರಿಗೆ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿಯು ತನ್ನ ಸೊಸೆ ಇಂದಲ್ಲಾ ನಾಳೆ ತಮ್ಮ ಮಕ್ಕಳೊಂದಿಗೆ ಬಂದು ಸಂಸಾರ ಮಾಡುತ್ತಾಳೆಂದು ಯೋಚಿಸಿ ಕಾದಿದ್ದರು ಇಲ್ಲಿಯವರೆಗೂ ಅವರು ಬರದೇ ಇದ್ದಾಗ ತಮ್ಮ ಮಗ ಸುರೇಶನೊಂದಿಗೆ ವಿಚಾರ ಮಾಡಿದ ನಂತರ ಇಂದು ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 152/2022 ಕಲಂ 279, 337, 338 ಐಪಿಸಿ:ದಿನಾಂಕಃ 11.10.2022 ರಂದು ರಾತ್ರಿ 10.45 ಗಂಟೆಯ ಸುಮಾರಿಗೆ ಕಂದಕೂರ ಗ್ರಾಮದ ಸೀಮೆಯಲ್ಲಿರುವ ಯಾದಗಿರ-ಹೈದರಾಬಾದ ರಾಜ್ಯ ಹೆದ್ದಾರಿ ಮೇಲೆ ಕಂದಕೂರು ಗೇಟ ಇನ್ನೂ ಒಂದು ಕಿ.ಮಿ. ದೂರದಲ್ಲಿರುವಾಗ ಮಾರುತಿ ಸೂಜುಕಿ ಸ್ವಿಫ್ಟ ಕಾರ ನಂ. ಕೆ.ಎ-32-ಎನ-0517 ನೇದ್ದರ ಚಾಲಕನಾದ ಸಿದ್ದಲಿಂಗರೆಡ್ಡಿ ತಂದೆ ಅನಂತರೆಡ್ಡಿ ಸಿದ್ರಾಮ್ಮಪ್ಪನೋರ ಸಾ|| ಕಂದಕೂರ ಗ್ರಾಮ ಇತನು ಕಾರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ತನ್ನ ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ಒಮ್ಮೆಲೆ ರೈಟ ಸೈಡಗೆ ಕಟ್ ಮಾಡಿ ಎದುರಗಡೆಯಿಂದ ಬರುತ್ತಿದ್ದ ಮಹೇಂದ್ರ ಬೊಲೆರೋ ಪಿಕಅಪ ಗೂಡ್ಸ ವಾಹನ ನಂ.ಕೆ.ಎ-29-ಸಿ-0072 ನೇದ್ದರ ಬಲಗಡೆಯ ಬಾಡಿಗೆ ರಬಸದಿಂದ ಡಿಕ್ಕಿ ಪಡಿಸಿದ ಪರಿಣಾಮ ಈ ಅಪಘಾತದಲ್ಲಿ ಬೊಲೆರೋ ಪಿಕಅಪ ವಾಹನ ಚಾಲಕನಿಗೆ ಮತ್ತು ಅಪಘಾತ ಪಡಿಸಿದ ಕಾರ ಚಾಲಕನಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತ ಮತ್ತು ಗುಪ್ತಗಾಯಗಳಾಗಿರುವ ಬಗ್ಗೆ ದೂರು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 120/2022 ಕಲಂ: 177, 182, 197, 207, 209, 404, 406, 420, 423, 468 ಸಂ 34 ಐಪಿಸಿ (ಕೋರ್ಟ ಉಲ್ಲೇಖಿತ ಗುನ್ನೆ): ಇಂದು ದಿನಾಂಕ:12/10/2022 ರಂದು 6-30 ಪಿಎಮ್ ಕ್ಕೆ ಟಪಾಲ ಮೂಲಕ ಮಾನ್ಯ ಅಪರ ಜೆ.ಎಮ್.ಎಫ್.ಸಿ ನ್ಯಾಯಲಯ ಶಹಾಪೂರ ರವರ ಖಾಸಗಿ ಫಿಯರ್ಾದಿ ಸಂಖ್ಯೆ:48/2022 ನೇದ್ದು ಸ್ವಿಕೃತವಾಗಿರುತ್ತದೆ. ಸದರಿ ಖಾಸಗಿ ಫಿಯರ್ಾದಿಯನ್ನು ಇಂಗ್ಲಿಷನಲ್ಲಿ ಕಂಪ್ಯೂಟರ ಟೈಪ ಮಾಡಿದ್ದು ಅದರ ಸಾರಾಂಶವೇನೆಂದರೆ ಫಿಯರ್ಾದಿದಾರಳಾದ ಶ್ರೀಮತಿ ಸಿದ್ದಮ್ಮ ಗಂಡ ಲೇಟ್ ವೆಂಕಟರೆಡ್ಡಿ ವ:45, ಉ:ಹೊಲಮನೆ ಕೆಲಸ ಇವರು ಚೆನ್ನೂರು (ಜೆ) ಗ್ರಾಮದ ಖಾಯಂ ನಿವಾಸಿಯಾಗಿರುತ್ತಾರೆ. ಕೇಸಿನ ಫಿಯರ್ಾದಿದಾರಳು ತುಂಬಾ ಹಿರಿಯ ವಯಸ್ಸಿನವರಾಗಿದ್ದು ಸುಮಾರು 75 ವರ್ಷ ಮೇಲ್ಪಟ್ಟು ವಯಸ್ಸಾಗಿದ್ದು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾಳೆ. ಹೀಗಾಗಿ ತಮ್ಮೂರಿನಿಂದ ತಾಲ್ಲೂಕು ಕೇಂದ್ರ ಸ್ಥಾನಕ್ಕೆ ಪ್ರಯಾಣ ಮಾಡಲು ಸಮರ್ಥರಾಗಿರುವುದಿಲ್ಲ ನ್ಯಾಯಲಯ ಕರೆದಾಗ ಮತ್ತು ಪ್ರಕರಣ ನ್ಯಾಯಲಯದ ಮುಂದೆ ಬಂದಾಗ ಸ್ವಂತ ಊರಿನಿಂದ ಸುಮಾರು 75 ಕೀ.ಮಿ ಪ್ರಯಾಣ ಮಾಡಲು ಆಗದ ಕಾರಣ ತನ್ನ ಫಿಯರ್ಾದಿಯನ್ನು ತನ್ನ ಸ್ವಂತ ಮಗ ಸಿದ್ರಾಮರಡ್ಡಿ ತಂದೆ ಲೇಟ್ ವೆಂಕಟರಡ್ಡಿ ಸಾ:ಚೆನ್ನೂರು (ಜೆ) ರವರಿಗೆ ಸಲ್ಲಿಸಲು ವಿಶೇಷ ಪವರ ಅಟರ್ಾನಿಯನ್ನು ಕೊಟ್ಟಿರುತ್ತಾರೆ. 1 ನೇ ಆರೋಪಿ ಕೋರ ಗ್ರೀನ ಶುಗರ ಪ್ಯಾಕ್ಟರಿಯ ಚೀಫ ಮ್ಯಾನೇಜರ ಇನ್ನು ಇಬ್ಬರಾದ 2 ಮತ್ತು 3 ನೇಯವರು ಕಂಪನಿಯ ಉದ್ಯೋಗಿಯಾಗಿರುತ್ತಾರೆ. ಫಿಯರ್ಾದಿದಾರಳು ಸವರ್ೆ ನಂಬರ: 576 ವಿಸ್ತೀರ್ಣ 7 ಎಕರೆ 6 ಗುಂಟೆ ಜಮೀನು ತುಮಕೂರು ಸೀಮಾಂತರದಲ್ಲಿನ ಮಾಲಿಕಳು ಮತ್ತು ಕಬ್ಜೆದಾರಳು ಆಗಿರುತ್ತಾಳೆ. ಆರೋಪಿತರು ಶ್ರೀಮಂತ ಕಂಪನಿಯ ಉದ್ಯೋಗಿಗಳಾಗಿದ್ದು ಮತ್ತು ತುಂಬಾ ಪ್ರಭಾವಿತರಾಗಿರುತ್ತಾರೆ. ಸದರಿ ಕಂಪನಿಯು ಸಕ್ಕರೆ ಮತ್ತು ಇನ್ನು ಸಕ್ಕರೆಯ ಬೇರೆ ಬೇರೆ ಉತ್ಪಾದನೆಗಳನ್ನು ತಯಾರು ಮಾಡುತ್ತಾರೆ. ಮೇಲ್ಕಂಡ ಕಂಪನಿಯು ತುಮಕೂರು ಸೀಮಾಂತರದಲ್ಲಿ ಕೃಷ್ಣನದಿ ದಂಡೆಗೆ ಸ್ಥಾಪನೆ ಮಾಡಿರುತ್ತಾರೆ. ಸದರಿ ಕಂಪನಿಗೆ ಉತ್ಪಾದನೆ ಮಾಡಲು ಸಾಕಷ್ಟು ನೀರಿನ ಅವಶ್ಯಕತೆ ಇರುತ್ತದೆ. ಕೃಷ್ಣ ನದಿಯಿಂದ ನೀರು ತರಲು ಸಾಕಷ್ಟು ಬ್ರಿಡ್ಜಗಳನ್ನು ಮಾಡಿ ಫೈಪ್ಲೈನ ಮಾಡಿರುತ್ತಾರೆ. ಮೇಲ್ಕಂಡ ಆರೋಪಿತರು ಕೇಸಿನ ಫಿಯರ್ಾದಿದಾರಳ ಜಮೀನಿನ ಸ್ವಲ್ಪ ಭಾಗದಲ್ಲಿ ಓವರ ಬ್ರಿಡ್ಜ ಮಾಡಿ ಪೈಪಲೈನ್ ಮೂಲಕ ನೀರು ಪ್ಯಾಕ್ಟರಿಗೆ ತೆಗೆದುಕೊಂಡು ಹೋಗಲು ಕೇಳಿಕೊಂಡಾಗ ಫಿಯರ್ಾದಿದಾರಳು ನಿರಾಕರಿಸಿರುತ್ತಾರೆ. ಆಗ ಆರೋಪಿತರು ತಮ್ಮ ಕುಶಲತೆಯಿಂದ ದಾಖಲಾತಿಗಳನ್ನು ತಯಾರಿಸಿ ಫಿಯರ್ಾದಿದಾರಳ ವಯ್ಸಸು, ಅನಕ್ಷರತೆ, ಬಡತನ, ಮತ್ತು ಮುಗ್ದತೆಯ ಲಾಭ ಪಡೆದುಕೊಂಡು ದಾಖಲಾತಿ ತಯಾರಿಸಿದ ಲೈಸನ್ಸ್ ದಿನಾಂಕ: 30/06/2007 ರಲ್ಲಿ ಸೃಷ್ಠಿ ಮಾಡಿ ಫಿಯರ್ಾದಿದಾರಳು ಹೊಲದಲ್ಲಿನ ಜಾಗವನ್ನು ಕೊಟ್ಟಿರುವುದಾಗಿ ಸ್ವಯಂ ಘೋಷಣೆ ಮಾಡಿರುತ್ತಾರೆ. ಸದರಿ ಆರೋಪಿತರು ಏಕೋದ್ದೇಶವುಳ್ಳವರಾಗಿದ್ದು, ಘೋಷಿತ ದಾಖಲೆ ತಯಾರಿಸುವಲ್ಲಿ ಸಿದ್ದ ಹಸ್ತರಾಗಿದ್ದು, ಡೀಡ ಆಫ್ ಲೈಸೆನ್ಸನ್ನು ಫಿಯರ್ಾದಿದಾರಳು ಆರೋಪಿತರಿಗೆ ಬರೆದುಕೊಟ್ಟಿರುವುದಿಲ್ಲ. ಸದರಿ ಡಿಡ್ ಆಫ್ ಲೈಸೆನ್ಸ್ ದಿನಾಂಕ: 30/03/2007 ನೇದರಲ್ಲಿ ಖೋಟ್ಟಿ ದಾಖಲಾತಿ ಸೃಷ್ಟಿಸಿರುತ್ತಾರೆ. ಸದರಿ ಆರೋಪಿತರು ಕಾನೂನಿಗೆ ವಿರುದ್ದವಾಗಿ ಮತ್ತು ಮಾನವೀಯ ಮೌಲ್ಯಗಳಿಗೆ ವಿರುದ್ದವಾಗಿ ಖೋಟ್ಟಿ ದಾಖಲಾತಿಗಳು ವಂಚನೆಯಿಂದ ತಯಾರಿಸಿ ಸದರಿ ಡಿಡ ಮೇಲೆ ಫಿಯರ್ಾದಿದಾರಳ ಖೊಟ್ಟಿ ರುಜು ಮಾಡಿರುತ್ತಾರೆ ಅಂತಾ ಇತ್ಯಾದಿ ಆರೋಪಿಸಿರುತ್ತಾರೆ. ಸದರಿ ಖಾಸಗಿ ಫಿರ್ಯಾಧಿ ದೂರಿನ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ. 120/2022 ಕಲಂ: 177, 182, 197, 207, 209, 404, 406, 420, 423, 468 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 111/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ; 12/10/2022 ರಂದು 18-25 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 12/10/2022 ರಂದು 04-15 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಗಾನಗರ ಕ್ರಾಸಿನಲ್ಲಿರುವ ಹನುಮಾನ ಗುಡಿಯ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಮಡಿವಾಳಪ್ಪ ಪಿಸಿ-105, ವಿನೋದ ಪಿಸಿ-88 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 05-10 ಎಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ಮಲ್ಲಪ್ಪ ತಂದೆ ಸಿದ್ದಪ್ಪ ತೆಲಗರ ವ:23 ಜಾತಿ:ಕಬ್ಬಲಿಗ ಉ:ಕೂಲಿಕೆಲಸ ಸಾ:ಹನುಮಾನ ನಗರ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 650/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 12/10/2022 ರಂದು 05-10 ಪಿಎಂ ದಿಂದ 06-10 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 06-25 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 111/2022 ಕಲಂ 78(3) ಕೆಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 173/2022 ಕಲಂ: 78 (3) ಕೆಪಿ ಆಕ್ಟ್ ಇಂದು ದಿನಾಂಕ: 12/10/2022 ರಂದು 05-10 ಗಂಟೆ ಸುಮಾರಿಗೆ ಶಹಾಪೂರ ನಗರದ ಬಸವೇಶ್ವರ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ರಾಹುಲ್ ಪಿ.ಎಸ್.ಐ(ಕಾಸು) ಮತ್ತು ಸಿಬ್ಬಂದಿಯವರಾದ ಶ್ರೀ ಶಂಕರಲಿಂಗ ಹೆಚ್.ಸಿ131, ಸಿದ್ದಪ್ಪ ಪಿಸಿ-89, ನೀಲಪ್ಪ ಪಿ.ಸಿ-44 ಹಾಗೂ ಭೀಮನಗೌಡ ಪಿಸಿ-402, ರವರ ಸಂಗಡ ಕರೆದುಕೊಂಡು, ಹಾಗೂ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ಸಿದ್ದಪ್ಪ ಪಿ.ಸಿ-89 ರವರಿಗೆ ತಿಳಿಸಿದ್ದು, ಇಬ್ಬರೂ ಪಂಚರನ್ನು ಬರಮಾಡಿಕೊಂಡು, ಮಾಹಿತಿ ಬಂದ ಸ್ಥಳಕ್ಕೆ ಬೇಟಿ ನೀಡಿ ಇಬ್ಬರೂ ಆರೋಪಿತನನ್ನು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವನಿಂದ 2660=00 ನಗದು ಹಣ ಹಾಗೂ 1 ಬಾಲ್ ಪೆನ್ ಹಾಗೂ 1 ಮಟಕ ನಂಬರ ಬರೆದು ಚೀಟಿಗಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಲ್ಲಿ ವರದಿ ಸಲ್ಲಿಸಿದ್ದು ಸದರಿ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 173/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 13-10-2022 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080