ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-11-2022

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 163/2022 ಕಲಂ. 279, 338, 283. ಐಪಿಸಿ: ಇಂದು ದಿನಾಂಕ:27-11-2022 ರಂದು ರಾತ್ರಿ 7-30 ಗಂಟೆಗೆ ಫಿರ್ಯಾಧಿದಾರ ಶ್ರೀ ಬಾಷುಮಿಯಾ ತಂದೆ ದಾವಲಸಾಬ ಖುರೇಶಿ ಸಾ|| ರಾಮಸಮುದ್ರ ತಾ|| ಜಿ|| ಯಾದಗಿರಿ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಂದರೆ, ದಿನಾಂಕ:26-11-2022 ರಂದು ಸಾಯಂಕಾಲ 5-45 ಗಂಟೆಗೆ ನನ್ನ ಮಗ ಮಹ್ಮದ ಮುಸ್ತಫ್ ಮತ್ತು ನನ್ನ ತಮ್ಮನ ಮಗ ಮೌಲಾಲಿ ತಂದೆ ಖಾದರ ಸಾಬ ಕೂಡಿಕೊಂಡು ಮೊಟರ ಸೈಕಲ್ ನಂ.ಕೆ.ಎ-33 ಎಕ್ಸ್-8773 ನೇದ್ದರ ಮೇಲೆ ಕುಳಿತು ಅವರಲ್ಲಿ ಮೌಲಾಲಿ ಮೊಟಾರ ಸೈಕಲ್ ನಡೆಸುತ್ತಿದ್ದನು ಮತ್ತು ಮಹ್ಮದ ಮುಸ್ತಫ್ ಹಿಂದುಗಡೆ ಕುಳಿತುಕೊಂಡು ಹೋಗಿದ್ದರು. ನಂತರ ಅವರು ಹೋದ ಅರ್ದ ಗಂಟೆಯಲ್ಲಿ ಅಂದರೆ ಸಾಯಂಕಾಲ 6-45 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಈಶಪ್ಪ ತಂದೆ ಭೀಮರಾಯ ಗುಂಡಾನೋರ ಇವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತಿದ್ದಾಗ, ಬಯಲು ಹನುಮಾನ ದೇವಸ್ಥಾನದ ಹತ್ತಿರ ನಿಮ್ಮ ಮಗ ಮಹ್ಮದ ಮುಸ್ತಫ್ ಮತ್ತು ಮೌಲಾಲಿ ಇಬ್ಬರು ಮೋಟರ್ ಸೈಕಲ್ ಮೇಲೆ ಮೈಲಾಪೂರ ಕಡೆಗೆ ಹೋಗುತ್ತಿರುವಾಗ ಮೋಟರ್ ಸೈಕಲ್ ಮೌಲಾಲಿ ಚಲಾಯಿಸುತಿದ್ದು, ನಿಮ್ಮ ಮಗ ಮುಸ್ತಫ್ಹಿಂದುಗಡೆ ಕುಳಿತುಕೊಂಡಿದ್ದನು. ಇಬ್ಬರು ಮಾತನಾಡಿಕೊಂಡು ಮೊಟರ ಸೈಕಲ್ ಮೇಲೆ ಹೋಗುತ್ತಿರುವಾಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ಯಾದಗಿರಿ - ರಾಯಚೂರ ರಾಜ್ಯ ಹೆದ್ದಾರಿ ಮೇಲೆ ಹನುಮಾನ ದೇವಸ್ಥಾನದದ ಹತ್ತಿರ ರಸ್ತೆ ಮೇಲೆ ಒಬ್ಬ ಲಾರಿಯ ಚಾಲಕನು ತನ್ನ ಲಾರಿಯನ್ನು ರಸ್ತೆಯಲ್ಲಿ ಯಾವುದೇ ಇಂಡಿಕೇಟರ್, ಪಾಕರ್ಿಂಗ್ ಲೈಟ್ ಹಾಕದೇ ಅಥವಾ ಇನ್ನಾವುದೇ ರೀತಿಯಲ್ಲಿ ಮುಂಜಾಗ್ರತಾ ಮತ್ತು ಮುನ್ಸೂಚನಾ ಕ್ರಮಗಳನ್ನು ಕೈಗೊಳ್ಳದೇ ಸಂಚಾರಕ್ಕೆ ಅಡತಡೆಯಾಗುವ ರೀತಿಯಲ್ಲಿ ಲಾರಿಯನ್ನು ರಾತ್ರಿ ಕತ್ತಲೆಯಲ್ಲಿ ರಾಯಚೂರ ಕಡೆಗೆ ಮುಖ ಮಾಡಿ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದು, ಆ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಮೌಲಾಲಿ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಾರಿಯ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಹಿಂದುಗಡೆ ಕುಳಿತ ನಿಮ್ಮ ಮಗ ಮಹ್ಮದ ಮುಸ್ತಫ್ನು ನಿಂತ ಲಾರಿಗೆ ಬಡಿದು ರಸ್ತೆಯ ಮೇಲೆ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದರು, ಆಗ ನಾನು ಹೋಗಿ ನೋಡಲಾಗಿ ಮೌಲಾಲಿಗೆ ಯಾವುದೆ ಗಂಭಿರ ಗಾಯಗಳಾಗಿರುವುದಿಲ್ಲ ಇಬ್ಬರು ಸೇರಿ ನಿಮ್ಮ ಮಗ ಮುಸ್ತಫ್ನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತ ಮತ್ತು ರಕ್ತಗಾಯ, ಬಲಗಣಿಗೆ ಭಾರಿ ರಕ್ತ ಮತ್ತು ಗುಪ್ತ ಗಾಯ, ಬಲಗಡೆ ದವಡೆ ಮತ್ತು ಮೂಗಿಗೆ ಭಾರಿ ಗುಪ್ತ ಮತ್ತು ರಕ್ತಗಾಯ, ಹಣೆಯ ಮೇಲೆ ರಕ್ತಗಾಯ, ಬಲಗೈ ಮಣಿಕಟ್ಟಿಗೆ ಭಾರಿ ಗುಪ್ತಗಾಯ, ಬಲಗಡೆ ಮೊಣಕಾಲಿನ ಮೇಲೆ ಭಾರಿ ಗುಪ್ತಗಾಯ, ಎಡಗಡೆ ಬಲ ಭುಜಕ್ಕೆ ಭಾರಿ ಗುಪ್ತಗಾಯಗಳಾಗಿದ್ದು.ಲಾರಿ ಚಾಲಕ ಮತ್ತು ಮೊಟರ ಸೈಕಲ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೆಕೆಂದು ಫಿರ್ಯಾದಿ ಇರುತ್ತದೆ.

ಇತ್ತೀಚಿನ ನವೀಕರಣ​ : 28-11-2022 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080