ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-01-2022

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 201/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ: 31.12.2021 ರಂದು ಮೃತನು ಟ್ರಾಕ್ಟರ ನಂಬರ ಕೆಎ-33-ಟಿಬಿ-3007, ಟ್ರ್ಯಾಲಿ ನಂಬರ ಕೆಎ-33-ಟಿಬಿ-1471 ನೇದ್ದನ್ನು ಟ್ರಾಕ್ಟರ ಮಾಲಿಕನಾದ ನಾರಾಯಣಯ ತಂದೆ ಹಣಮಂತ ಮನ್ನೆ ಇವರ ಹೊಲದಲ್ಲಿ ಮಣ್ಣನ್ನು ಖಾಲಿಮಾಡಿ ಮರಳಿ ಮದ್ಯಾಹ್ನ 03.00 ಗಂಟೆ ಸುಮಾರಿಗೆ ಗುರುಮಠಕಲ್ ಕಡೆಗೆ ಬರುತ್ತಿರುವಾಗ ಬುದೂರು ಕ್ರಾಸನಿಂದ ಇಂದ್ರಾನಗರ ಕಡೆಗೆ ಬರುವ ರಸ್ತೆಯ ಮೇಲೆ ಶ್ರೀನಿವಾಸ ದಾಸರಿ ಇವರನ ಹೊಲದ ಹತ್ತಿರ ಅತಿವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿ ಒಮ್ಮಿಂದೊಮ್ಮೇಲೆ ಕಟ ಮಾಡಿದ್ದರಿಂದ ತಾನು ಚಲಾಯಿಸುವ ಟ್ರಾಕ್ಟರ ಮೇಲಿಂದ ಕೆಳಗೆ ಬಿದ್ದಿದ್ದು ಟ್ರಾಕ್ಟರಗೆ ಜೋಡಿಸಿದ ಟ್ರ್ಯಾಲಿಯ ಕೊಂಡಿ ಮುರಿದು ನನ್ನ ಮಗನ ಮೇಲೆ ಟ್ರ್ಯಾಲಿ ಬಿದ್ದು ಭಾರಿ ಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 98/2021 ಕಲಂ.457, 380 ಐಪಿಸಿ : ಫಿರ್ಯಾದಿದಾರರು ದಿನಾಂಕ:30/12/2021 ರಂದು ರಾತ್ರಿ 8.30 ಗಂಟೆಗೆ ಹುಣಸಗಿ ಪಟ್ಟಣದಲ್ಲಿರುವ ಯುಕೆಪಿ ಕ್ಯಾಂಪಿನ ವಸತಿಗೃಹ ನಂ:ಡಿ-26/1 ನೇದ್ದನ್ನು ಕೀಲಿ ಹಾಕಿಕೊಂಡು ತಮ್ಮ ಸ್ವಂತ ಊರಾದ ಯಡಹಳ್ಳಿ ಗ್ರಾಮಕ್ಕೆ ಹೋಗಿದ್ದು, ದಿನಾಂಕ:31/12/2021 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಫಿರ್ಯಾದಿಯ ಮಗನು ಯಡಹಳ್ಳಿ ಗ್ರಾಮದಿಂದ ಹುಣಸಗಿಗೆ ಬಂದು ಮನೆಯನ್ನು ನೋಡಿದಾಗ ಮನೆಗೆ ಹಾಕಿದ ಕೀಲಿ ಮುರಿದಿದ್ದು, ಗಾಬರಿಯಾಗಿ ಒಳಗಡೆ ಹೋಗಿ ನೊಡಿದಾಗ ಅಲಮರಿಯ ಕೀಲಿಯನ್ನು ಸಹ ಬೇರೆ ಕೀಲಿಯಿಂದ ಕೀಲಿ ತೆರೆದಿದ್ದು, ಫಿರ್ಯಾದಿಯ ಮಗನು ಫಿರ್ಯಾದಿಗೆ ಪೋನ್ ಮುಖಾಂತರ ತಿಳಿಸಿದಾಗ ಫಿರ್ಯಾದಿದಾರರು ಹುಣಸಗಿಗೆ ಬಂದು ತಮ್ಮ ಮನೆಯಲ್ಲಿ ನೋಡಿದಾಗ ಅಲಮರಿಯಲ್ಲಿ ವ್ಯಾಪಾರಕ್ಕೆಂದು ಇಟ್ಟ ಒಟ್ಟು 5 ಲಕ್ಷ ನಗದು ಹಣ ಹಾಗೂ 5 ಗ್ರಾಮಿನ 4 ಬಂಗಾರದ ಉಂಗುರುಗಳು (ಒಟ್ಟು 2ತೊಲೆ) ಯಾರೂ ಕಳ್ಳರು ದಿನಾಂಕ:30/12/2021 ರಾತ್ರಿ 9.00 ಗಂಟೆಯ ನಂತರದ ಅವಧಿಯಿಂದ ದಿನಾಂಕ:31/12/2021 ರಂದು ಬೆಳಿಗಿನ 8 ಗಂಟೆಯ ಅವಧಿಯಲ್ಲಿ ಮನೆಯ ಕೀಲಿ ಮುರಿದು ಒಳಗಡೆ ಹೋಗಿ ಅಲಮರಿಗೆ ಹಾಕಿದ ಕೀಲಿಯನ್ನು ಬೇರೆ ಕೀಲಯಿಂದ ತೆಗೆದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಅಪರಾಧ.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 143, 147, 148, 323, 324, 426, 427, 430, 504, 506 ಸಂ.149 ಐಪಿಸಿ : ಫಿರ್ಯಾದಿಯು ದಿನಾಂಕ:04/06/2021 ರಂದು ಸಾಕ್ಷಿದಾರರೊಂದಿಗೆ ಆರೋಪಿ ನಂ:1 ನೇದ್ದವನ ಜಮೀನಿಗೆ ಹೋಗಿ ನಮ್ಮ ಹೊಲಕ್ಕೆ ಹೋಗುವ ನೀರು ಬಿಡುತ್ತಿಲ್ಲ, ಹೀಗೆಕೇ ಮಾಡಿದಿ ಅಂತಾ ಕೇಳಿದ್ದಕ್ಕೆ, ಎಲೆ ಬೋಸಡಿ ಮಗನೆ ಅಂದು ಆರೋಪಿತರೆಲ್ಲರೂ ಸೇರಿ ಕೈಯಲ್ಲಿ ಬಡಿಗೆ, ಕೊಡಲಿ, ಬಡಿಗೆಗಳೋಂದಿಗೆ ಬಂದು ಫಿರ್ಯಾದಿಗೆ ಆರೋಪಿ ನಂ:1 ನೇದ್ದವನು ಎದೆಯ ಮೇಲಿನ ಅಂಗಿ ಹಿಡಿದು ಕೆಡವಿ ಎಳೆದಾಡಿದ್ದು, ಆರೋಫಿ ನಂ:2 ರಿಂದ 8 ನೇದ್ದವರು ತಮ್ಮ ಕೈಯಲ್ಲಿದ್ದ ಬಡಿಗೆ ಕಲ್ಲು ಕೊಡಲಿಯಿಂದ ಹಲ್ಲೆ ಮಾಡಿ ಕಾಲುಗಳಿಂದ ಒದ್ದು ಒಳಪೆಟ್ಟು ಮಾಡಿದ್ದು, ಫಿರ್ಯಾದಿಯು ನೆಲಕ್ಕೆ ಬಿದ್ದಾಗ ಆರೋಪಿತರೆಲ್ಲ ಕೇಕೆ ಹಾಕುತ್ತಾ ಹೊಲದಲ್ಲಿಯ ಪೈಪಿನ ವಿಷಯಕ್ಕೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗೆ ಅಪರಾಧ.


.
ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 257/2021.ಕಲಂ. 379. ಐ.ಪಿ.ಸಿ. :: ಇಂದು ದಿನಾಂಕ 31/12/2021 ರಂದು 15-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ಬಸವರಾಜ ತಂದೆ ರಾಮಕೃಷ್ಣ ಸುರಪೂರ ವ|| 33 ವರ್ಷ, ಜಾ|| ಕಬ್ಬಲಿಗ, ಉ|| ಶಿಕ್ಷಕ, ಸಾ|| ಮನೆ ನಂ 1-36 ಮಮದಾಪೂರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ನಾನು ಸರಕಾರಿ ಪ್ರಾಥಮೀಕ ಶಾಲೆ ಅಲ್ಲಿಪೂರಸಣ್ಣ ತಾಂಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಲು ಕರ್ತವ್ಯಕ್ಕೆ ಶಹಾಪೂರದಿಂದ ಹೋಗಿಬರುತ್ತಿದ್ದೆನು. ದಿನನಿತ್ಯದಂತೆ ದಿನಾಂಕ 16/12/2021 ರಂದು ಬೆಳಿಗ್ಗೆ ನನ್ನ ಮೋಟರ್ ಸೈಕಲ್ ನಂ ಕೆಎ-33 ಡಬ್ಲ್ಯೂ-1274 ನೇದ್ದನ್ನು ತೆಗೆದುಕೊಂಡು ಮನೆಯಿಂದ ಬೆಳಿಗ್ಗೆ 8-50 ಗಂಟೆಗೆ ಹೋರಟು, ಶಹಾಪೂರದ ಹೋಸ ಬಸ್ಸ ನಿಲ್ದಾಣದ ಮುಂದೆ ಇರುವ ಪಾರ್ಕ ಹತ್ತಿರ 9-10 ಗಂಟೆಯ ಸುಮಾರಿಗೆ ನನ್ನ ಹೊಂಡಾ ಸೈನ್ ಮೋಟರ್ ಸೈಕಲ್ ನಂ ಕೆಎ-33 ಡಬ್ಲ್ಯೂ-1274 ನೇದ್ದು ನಿಲ್ಲಿಸಿ. ಬಸ್ಸಿನಲ್ಲಿ ಕರ್ತವ್ಯಕ್ಕೆ ಯಾದಗಿರಿ ಹೋಗಿ ಕರ್ತವ್ಯ ಮುಗಿಸಿಕೊಂಡು ನಂತರ ಮರಳಿ ಬಸ್ಸಿನಲ್ಲಿ ಶಹಾಪೂರದ ಹೋಸ ಬಸ್ಸ ನಿಲ್ದಾಣಕ್ಕೆ ಬಂದು ನನ್ನ ಮೋಟರ್ ಸೈಕಲ್ ಹತ್ತಿರ ಸಾಯಾಂಕಾಲ 18-10 ಗಂಟೆಗೆ ಹೋಗಿ ನೋಡಲಾಗಿ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಅಗ ಬಸ್ಸ ನಿಲ್ದಾಣಕ್ಕೆ ಬಂದ ನಮ್ಮ ಅಣ್ಣತಮ್ಮಕೀಯ ರಾಘವೆಂದ್ರ ತಂದೆ ಮಲ್ಲಿಕಾಜರ್ುನ್ ಶ್ಯಾಣೆಗೋಳ ಸಾ|| ಹಳಿಸಗರ ಶಹಾಪೂರ ಈತನು ಬಂದನು. ಅಗ ನಾನು ಮತ್ತು ರಾಘವೆಂದ್ರ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ನಂ ಕೆಎ-33 ಡಬ್ಲ್ಯೂ-1274 ನೇದ್ದು ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಬೂದುಬಣ್ಣದ (ಗ್ರೇ) ಹೊಂಡಾ ಸಿ.ಬಿ. ಸೈನ್ ಕಂಪನಿಯ ಮೋಟರ್ ಸೈಕಲ್ ನಂ. ಕೆಎ-33 ಡಬ್ಲ್ಯೂ-1274 ನೇದ್ದರ ಇಓಉಓಇ ಓಔ- ಎಅ65ಇಖಿ1229887. ಅಊಇಖಖ ಓಔ- ಒಇ4ಎಅ657ಒಊಖಿ067743 ಅ:ಕಿ:49000=00 ರೂ ನೇದ್ದನ್ನು ಶಹಾಪೂರದ ಹೋಸ ಬಸ್ಸ ನಿಲ್ದಾಣದಲ್ಲಿನ ಪಾರ್ಕ ಹತ್ತಿರ ನಿಲ್ಲಿದ ಸಮಯದಲ್ಲಿ ದಿನಾಂಕ 16/12/2021 ರಂದು 9-10 ಎ.ಎಂ. ರಿಂದ 18-10 ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಕಳ್ಳತನವಾದ ನನ್ನ ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಎಂದು ತಿಳಿದು ಹುಡುಕಾಡಿದರು ಸಿಗದೆ ಇದ್ದಾಗ ಇಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ನನ್ನ ಮೋಟರ್ ಸೈಕಲ್ ನಂ ಕೆಎ-33 ಡಬ್ಲ್ಯೂ-1274 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 257/2021 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 184/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 31.12.2021 ರಂದು 6-00 ಪಿ.ಎಮ್.ಕ್ಕೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಅಡವಿ ಸಿದ್ದಲಿಂಗೇಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 620=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ, ಒಂದು ಬಾಲಪೆನ್ನು ಜಪ್ತಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ, ಒಬ್ಬ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು, ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.184/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 01-01-2022 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080