ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-01-2023


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ 457, 380: ಇಂದು ವಾಗೇಶ ತಂದೆ ಈಶ್ವರಪ್ಪ ಅಣಬೇರು ವಯಾ:34, ಉ;ಶಿಕ್ಷಕ, ಜಾ: ಲಿಂಗಾಯಿತ, ಸಾ: ಕಾಶಿಪುರ, ತಾ&ಜಿ ದಾವಣಗೆರೆ, ಹಾ.ವ:ಸಹರಾ ಕಾಲೋನಿ, ಯಾದಗಿರಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 15-12-2022 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ಯಾದಗಿರಿಯಿಂದ ನಮ್ಮ ಗ್ರಾಮಕ್ಕೆ ತೆರಳಿದ್ದು ಇರುತ್ತದೆ, ಹೀಗಿದ್ದು ದಿನಾಂಖ 20-12-2022 ರಂದು ಬೆಳಿಗ್ಗೆ 08:30 ರ ಸುಮಾರಿಗೆ ನಮ್ಮ ಮನೆಯ ಮಾಲಿಕರಾದ ದೇವೇದ್ರರೆಡ್ಡಿ ತಂದೆ: ಶಂಕ್ರಪ್ಪ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 20-12-2022 ರಂದು ಮದ್ಯರಾತ್ರಿ 02:00 ಗಂಟೆಯ ಸುಮಾರಿಗೆ ನಾನು ನಿದ್ದೆಯಿಂದ ನೈಸಗರ್ಿಕ ಕ್ರಿಯೆಗಾಗಿ ಎದ್ದು  ಹೊರಗಡೆ ಹೋಗಿ ಬರುವಾಗ ನೀವು ವಾಸವಿರುವ ಮನೆಗೆ ಬೀಗ ಇರುವುದನ್ನು ನೋಡಿದ್ದು ಇರುತ್ತದೆ.
     ನಂತರ ಬೆಳಿಗ್ಗೆ 07:00 ಗಂಟೆಯ ಸಮಯದಲ್ಲಿ ಎದ್ದು ಮನೆಯೆ ಹೊರಗಡೆ ಬಂದಾಗ ನಿಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಒಳಗೆ ಯಾರೋ ಹೋಗಿರುವುದಾಗಿ ಕಾಣಿಸಿದ್ದು ಕೂಡಲೇ ನಾನು ಮನೆಯಲ್ಲಿ ಹೋಗಿ ನೋಡಲಾಗಿ ನೀವು ಮನೆಯಲ್ಲಿ ಇಟ್ಟಿರುವ ಸೂಟ್ಕೇಸ್ ಗಳನ್ನು ಮುರಿದು ಹಾಕಿ ಅದರಲ್ಲಿರುವ ಬಟ್ಟೆ ಹಾಗೂ ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿರುತ್ತಾರೆ ಎಂಬುದಾಗಿ ನೋಡಿ ಕೂಡಲೇ ನನಗೆ ಪೋನ್ ಮಾಡಿರುತ್ತಾರೆ.
     ಈ ವಿಷಯ ತಿಳಿದು ದಿನಾಂಕ 22-12-2022 ರಂದು ರಾತ್ರಿ 11:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಡದಿ ಚೈತ್ರ ಇಬ್ಬರು ಕೂಡಿಕೊಂಡು ಯಾದಗಿರಿಗೆ ಬಂದು ನಾವು ವಾಸವಿರುವ ಯಾದಗಿರಿಯಲ್ಲಿರುವ ನಮ್ಮ ಮನೆಗೆ ಬಂದು ಪರಿಶೀಲಿಸಿ ನೋಡಲಾಗಿ ನಾವು ಇಟ್ಟಿರುವ ಸೂಟ್ಕೇಸುಗಳನ್ನ ಮುರಿದು ಅದರಲ್ಲಿರುವ ಕಾಗದ ಪತ್ರಗಳು ಮತ್ತು ಬಟ್ಟೆಗಳನ್ನ ಚೆಲ್ಲಾಪಿಲ್ಲಿಯಾಗಿ ಬೀಸಾಡಿ ಅದರಲ್ಲಿರುವ ಅಂದಾಜು 11 ಗ್ರಾಂ ಬಂಗಾರದ ತಾಳಿ ಚೈನ್ ಅ.ಕಿ 50,000/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ನಾವು ಮನೆಯಲ್ಲಿರದೇ ಇರುವುದನ್ನು ಗಮನಿಸಿ ದಿನಾಂಕ 20-12-2022 ರಂದು ಮಧ್ಯ ರಾತ್ರಿ 02:00 ಗಂಟೆಯಿಂದ ಬೆಳಗ್ಗೆ 07:00 ಗಂಟೆಯ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವಂತೆ ಕಂಡುಬಂದಿರುತ್ತದೆ, ನಾನು ನನ್ನ ಗ್ರಾಮಕ್ಕೆ ಹೋಗಿರುವುದರಿಂದ ಠಾಣೆಗೆ ಬಂದು ಪಿಯರ್ಾದಿ ಕೊಡಲು ತಡವಾಗಿರುತ್ತದೆ. ಕಾರಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಎಂಬುದಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.141/2022 ಕಲಂ 457, 380 ಐ.ಪಿಸಿ ನೇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ 78(3) ಕೆ.ಪಿ ಎಕ್ಟ್ 1963: :- ಇಂದು ದಿನಾಂಕ. 31/12/2022 ರಂದು 5-40 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ,  ಇಂದು ದಿನಾಂಕ: 31/12/2022 ರಂದು 3-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಯಾದಗಿರಿ-ಹೊಸಳ್ಳಿ ರಸ್ತೆಯ ವಿಜಯಸ್ವಾಮಿ ಇತನ ಅಂಗಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಮಡಿವಾಳಪ್ಪ ಪಿಸಿ-105, ವಿನೋದ ಪಿಸಿ-88 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 4-20 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ಸಂದೀಪ್ ತಂದೆ: ನರಸಪ್ಪ ಪೂಜಾರಿ, ವಾಯ: 23, ಜಾ: ಕುರುಬರು, ಉ: ಗಾರೆ ಕೆಲಸ ಸಾ: ಲಾಡೇಜ್ ಗಲ್ಲಿ, ಯಾದಗಿರಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 650/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 31/12/2022 ರಂದು 4-20 ಪಿಎಂ ದಿಂದ 5-20 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 5-40 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.142/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 177/2022 ಕಲಂ 87 ಕೆ.ಪಿ ಕಾಯ್ದೆ: ದಿನಾಂಕ: 31-12-2022 ರಂದು 02-00 ಪಿಎಮ್ ಕ್ಕೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಮದ್ಯಾಹ್ನ 12-05 ಗಂಟೆಗೆ ಮುಂಡರಗಿ ಗ್ರಾಮದ ರಾಜಸ್ಥಾನ ದಾಬದ ಬಿಂದೆ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪೆಟ  ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿತರನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.177/2022 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 178/2022.  ಕಲಂ. 143, 147, 148, 323, 324, 504, 506 ಸಂಗಡ 149  ಐ.ಪಿ.ಸಿ. ಕಾಯ್ದೆ.: ಇಂದು ದಿನಾಂಕ 31-12-2022 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾಧಿದಾರನಾದ ಬಸವರಾಜ ತಂದೆ ಶಿವಪ್ಪ ವಡ್ನಳ್ಳಿ ಸಾ|| ಹೆಡಗಿಮದ್ರ ಇವರು ದೂರು ಅಜರ್ಿ ಹಾಜರು ಪಡಿಸಿದ್ದು ಸದರಿ ದೂರು ಅಜರ್ಿ ಸಾರಂಶವೆನೆಂದರೆ, ಇಂದು ದಿನಾಂಕ:31-12-2022 ರಂದು ಸಮಯ ಬೆಳಗ್ಗೆ 07-00 ಗಂಟೆಯ ಸುಮಾರಿಗೆ ನಾನು ಮತ್ತು  ನನ್ನ ಹೆಂಡತಿ ಶಿವಮ್ಮ, ಮಕ್ಕಳಾದ ಶಿವಶರಣಪ್ಪ, ಮತ್ತು ಚಂದ್ರಶೇಖರ ಹಾಗು ನನ್ನ ಅಕ್ಕ ಹಣಮಂತಿ ಕೂಡಿ ನಮ್ಮ ಮನೆಯ ಮುಂದೆ ಕುಳಿತುಕೊಂಡಿರುವಾಗ ನಮ್ಮೂರಿನ ಕುಮಾರ ನಾಯಕ ತಂದೆ ಬಸವರಾಜ, ನಂದಿನಿ ಗಂಡ ಕುಮಾರ ನಾಯಕ, ಮಹಾದೇವಿ ಗಂಡ ಬಸವರಾಜ ಚಂದ್ರಪ್ಪ ಕಟಕಟಿ ಮತ್ತು ಸಂಗಡ ಇನ್ನಿತರ 8 ಜನರು ಕೂಡಿ ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದು ಎಲೇ ಬಸ್ಯ ನಿಂದು ಊರಲ್ಲಿ ಬಹಳ ಆಗ್ಯಾದ ಹೋರಗಡೆ ಬಾರಲೆ ನಿಮ್ಮವನ ನಿಂದು ಊರಲ್ಲಿ ಬಹಳ ಆಗ್ಯಾದ ಇವತ್ತು ನಿಮ್ಮವ್ವನ್ ಒಂದು ಕೈ ನೋಡಕತಿನಿ ಬರ್ರೆಲೆ ನಿಮ್ಮವ್ವನ ರಂಡಿ ಮಕ್ಕಳೆ ಅಂತ ಅವಾಚ್ಯವಾಗಿ ಬೈಯುತ್ತಿರುವಾಗ ಆಗ ನಾನು ನಮಗೆ ಯಾಕೇ ಬೈಯುತ್ತಿರಿ ಅಂದಾಗ ಕುಮಾರ ನಾಯಕನು ನನಗೆ ನಿ ಏನ ದೊಡ್ಡ ಹಿರೇ ಮನುಷ್ಯ ಏನು ನಾವು ಹೇಳಿದಂಗ ಕೇಳಲೇಮಗನೆ ಅಂದವನೆ ತನ್ನ ಕೈಯಲ್ಲಿದ್ದ ಕಟಿಗೆಯಿಂದ ನನ್ನ ಬೆನ್ನಿಗೆ ಜೊರಾಗಿ ಹೊಡೆದು ಗುಪ್ತ ಪೆಟ್ಟು ಮಾಡಿದಾಗ ನಾನು ಸತ್ತನೇಪ್ಪೋ ಅಂತ ಚಿರಾಡುತ್ತಿರುವಾಗ ನನ್ನ ಹೆಂಡತಿ ಮತ್ತು ಮಕ್ಕಳು ಬಂದು ಜಗಳ ಬಿಡಿಸುತ್ತಿರುವಾಗ ನನ್ನ ಮಗ ಶಿವಶರಣಪ್ಪನಿಗೆ  ಚಂದ್ರಪ್ಪನ್ನು ಕಲ್ಲಿನಿಂದ ಮೈಯಿಗೆ ಹೊಡೆದು ಗುಪ್ತ ಪೆಟ್ಟು ಮಾಡಿದಾಗ ಆಗ ನನ್ನ ಮಗ ಚಂದ್ರಶೇಖರ ಮತ್ತು ನನ್ನ ಹೆಂಡತಿ ಶಿವಮ್ಮ ಹಾಗು ಅಕ್ಕ ಹಣಮಂತಿ ಜಗಳ ಬಿಡಿಸಲು ಅಡ್ಡ ಬಂದಾಗ ಕುಮಾರ ನಾಯಕ ಮತ್ತು ಆತನ ಸಂಗಡ ಬಂದಿರುವ ವ್ಯಕ್ತಿಗಳು ಸೇರಿ ಚಂದ್ರಶೇಖರ, ಹಣಮಂತಿ, ನನ್ನ ಹೆಂಡತಿ ಶಿವಮ್ಮಳಿಗೆ ಈ ಸೂಳೆ ಮಕ್ಕಳಿಗೆ ಇವತ್ತು ಬಿಡೋದು ಬ್ಯಾಡ ಅಂತ ಅವರಿಗೆ ನೆಲಕ್ಕೆ ಹಾಕಿ ಮನಬಂದಂತೆ ಕೈಯಿಂದ ಹೋಡೆದು ಕಾಲಿನಿಂದ ಒದ್ದು ಮೈಯಲ್ಲ ಗುಪ್ತ ಪೆಟ್ಟು ಮಾಡಿದಾಗ ನನ್ನ ಹೆಂಡತಿ ಶಿವಮ್ಮಳಿಗೆ ಮತ್ತು ನನ್ನ ಅಕ್ಕ ಹಣಮಂತಿಗೆ ನಂದಿನಿ ಮತ್ತು ಮಹಾದೇವಿ ಇಬ್ಬರು ಕೂಡಿಕೊಂಡು ಕೂದಲು ಹಿಡಿದು ಎಳಾದಾಡಿ ಕೈಯಿಂದ ಹೊಡೆದು ಗುಪ್ತ ಪೆಟ್ಟು ಮಾಡಿದಾಗ ಆಗ ನಾನು ಅವರಿಗೆ ಯಾಕೇ ಹೊಡೆಯುತ್ತಿರಿ ಅಂತ ಅಂದಾಗ ಚಂದ್ರಪ್ಪನ್ನು ಕಲ್ಲಿನಿಂದ ನನ್ನ ಬಲಗಾಲಿಗೆ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿದ್ದು ಅಂತ ಫಿರ್ಯಾಧಿ ದೂರು ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 179/2022 ಕಲಂ 323, 324, 504, 506 ಸಂ. 149 ಐಪಿಸಿ: :-ದಿನಾಂಕ: 31-12-2022 ರಂದು ಸಾಯಂಕಾಲ 05-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 31-12-2022 ರಂದು ಮುಂಜಾನೆ 07-30 ಗಂಟೆ ಸುಮಾರಿಗೆ ನಾನು ನೀರು ಹಿಡಿಯುವ ಸಲುವಾಗಿ ನಮ್ಮ ಮನೆಯ ನಳದಲ್ಲಿ ನೀರು ಹಿಡಿಯುವ ಸಮಯದಲ್ಲಿ ನಮ್ಮ ಮನೆಯ ಪಕ್ಕದ ಮನೆಯವರಾದ 1) ಶರಣುಕುಮಾರ ತಂದೆ ಬಸವರಾಜ ವಡ್ನಳ್ಳಿ 2) ಬಸವರಾಜ ತಂದೆ ಬಸಪ್ಪ ವಡ್ನಳ್ಳಿ 3) ಶಿವಮ್ಮ ಗಂಡ ಬಸವರಾಜ ವಡ್ನಳ್ಳಿ 4) ಚಂದ್ರಶೇಖರ ತಂದೆ ಬಸವರಾಜ ವಡ್ನಳ್ಳಿ 5) ಶರಣಪ್ಪ ತಂದೆ ಶಿವಪ್ಪ ಎಲ್ಲರು ಸಾ|| ಹೆಡಗಿಮದ್ರ  ಇವರೆಲ್ಲರು ಕೂಡಿಕೊಂಡು ಒಮ್ಮಲಿದೊಮ್ಮೆ ಬಂದು ಲೇ ಸುಳೆ ಮಗನೆ ನಿನ್ಯಾಕೆ ನೀರು ಹಿಡಿತಿದಿ ಬೆಳಿಗ್ಗೆ ಬೆಳಿಗ್ಗೆ ನೀರು ಹಿಡಿಯಕ ಬಂದಿದ್ಯಾ ಮಗನೆ ನಿಂದು ಬಹಳ ಆಗಿದೆ ಅಂತಾ ಶರಣಕುಮಾರ ಈತನು ನನಗೆ ಬಡಿಗೆಯಿಂದ ಎರಡು ಎಟು ಎರಡು ಕಾಲಿಗೆ ಹೊಡೆದಿರುತ್ತಾನೆ, ಸದರಿ ಬಡಿಗೆಯನ್ನು ಕಸಿದುಕೊಂಡಾಗ ಚಂದ್ರಶೇಖರ ಈತನು ನನ್ನನ್ನು ಒತ್ತಿ ಹಿಡಿದುಕೊಂಡನು ಆಗ ಶರಣಕುಮಾರ ಈತನು ಚಾಕುವಿನಿಂದ  ಹಲ್ಲೆ ಮಾಡಿದಾಗ  ನಾನು ತಪ್ಪಿಸಿಕೊಂಡಿರುತ್ತೇನೆ, ಬಸವರಾಜ ಈತನು ನನಗೆ ಕಲ್ಲಿನಿಂದ ನನ್ನ ತಲೆಗೆ ಹೊಡೆದಿರುತ್ತಾನೆ,  ಹಾಗೂ ಶಿವಮ್ಮ ಈಕೆಯು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾಳೆ,  ಹಾಗೂ ಶರಣಪ್ಪ ಈತನು ಕೈಹಿಡಿದು ತಿರಿವಿರುತ್ತಾನೆ. ಎಲ್ಲರು ಕೂಡಿಕೊಂಡು ನನಗೆ ಮತ್ತು ನನ್ನ ಹೆಂಡತಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಜೀವ ಸಹಿತ ಬಿಡುವದಿಲ್ಲ ನಿನಗೆ ಹೊಡೆದು ಹಾಕುತ್ತೇವೆ ಮಗನೆ ಎಂದು ಎಲ್ಲರು ಕೂಡಿಕೊಂಡು ಮನಸ್ಸಿಗೆ ಬಂದಂತೆ ಹೊಡೆದಿರುತ್ತಾರೆ, ಸದರಿ ಹೊಡೆದಿರುವದರಿಂದ ನನಗೆ ಗುಪ್ತಗಾಯಗಳಾಗಿರುತ್ತವೆ,  ನನಗೆ ಹೊಡೆ ಬಡೆ ಮಾಡುವ ಸಮಯದಲ್ಲಿ ನಮ್ಮ ತಾಯಿ ಬಂದು ಚೀರಾಡಿ ಕೂಗಾಡುವಾಗ ಊರ ಜನರು ಬಂದಿದ್ದನ್ನು ನೋಡಿ ಇವತ್ತು ನೀನು ಉಳಿದಿದಿ ಮಗನೆ ನಿಮ್ಮ ಕುಟುಂಬದವರನ್ನು ಊರು ಬಿಟ್ಟು ಕಳುಹಿಸುತ್ತೇವೆ ಅದೇ ರೀತಿ ನೀನು ಊರು ಬಿಟ್ಟು ಹೋಗು ಇಲ್ಲ ಅಂದರೆ ಇನ್ನೊಂದು ಬಾರಿ ನಿನ್ನ ಜೀವ ಸಹಿತ ಬಿಡುವದಿಲ್ಲವೆಂದು ನನಗೆ ಜೀವ ಬೇದರಿಕೆ ಹಾಕಿರುತ್ತಾರೆ,

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: ಗುನ್ನೆ ನಂ 175/2022 ಕಲಂ: 427 ಐಪಿಸಿ ಮತ್ತು ಕಲಂ 3 ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪಟರ್ಿ ಯಾಕ್ಟ್ 1984: ಇಂದು ದಿನಾಂಕ 31/12/2022 ರಂದು 11.30 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ರಾಜಕುಮಾರ ತಂದೆ ಶರಣಪ್ಪ ಜಪಾಳೆ ವ|| 39ವರ್ಷ ಜಾ|| ಲಿಂಗಾಯತ ಉ|| ಜೆ.ಟಿ.ಓ ಬಿ.ಎಸ್.ಎನ್.ಎಲ್ ಕಂಪನಿ ಸಾ|| ವಿದ್ಯಾನಗರ ಜೇವಗರ್ಿ ತಾ|| ಜೇವಗರ್ಿ ಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಾನು ಬಿ.ಎಸ್.ಎನ್.ಎಲ್ ಕಂಪನಿಯಲ್ಲಿ ಜೇವಗರ್ಿ ಶಾಖೆಯಲ್ಲಿ ಜೆ.ಟಿ.ಓ ಅಂತಾ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಬಿ.ಎಸ್.ಎನ್.ಎಲ್ ಕಂಪನಿಯಿಂದ ದೂರ ಸಂಪರ್ಕಕ್ಕಾಗಿ 2007 ನೇ ಸಾಲಿನಲ್ಲಿ ನೆಲ ಅಗೆದು ನೆಲದಲ್ಲಿ ಓ.ಎಫ್.ಸಿ ಕೇಬಲ್ ಅಳವಡಿಸಿ ದೂರವಾಣಿ ಸಂಪರ್ಕ ನೀಡಲಾಗುತ್ತಿದೆ. ಸುರಪೂರ ತಾಲೂಕಿನ ಮಲ್ಲಾ(ಬಿ) ಗ್ರಾಮದಿಂದ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದವರೆಗೆ ಮುಖ್ಯ ರಸ್ತೆಯ ಪಕ್ಕದಲ್ಲಿನ ಹೊಲಗಳಲ್ಲಿ ನೆಲ ಅಗೆದು ಕೇಬಲ್ ಅಳವಡಿಸಿದ್ದು ಕೇಬಲ್ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ. ಹೀಗಿದ್ದು ದಿನಾಂಕ 04/11/2022 ರಂದು 10.00 ಎಎಂ ಕ್ಕೆ ನಾಗರಹಳ್ಳಿಯ ಉಗಾರ ಶುಗರ್ಸ ಕಂಪನಿಯ ಸಿಬ್ಬಂದಿಯೊಬ್ಬರು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ಫೋನ್ ಮಾಡಿ ಮಲ್ಲಾ-ಮಳ್ಳಿ ದೂರವಾಣಿ ಸಂಪರ್ಕ ಕಡಿತಗೊಂಡಿದ್ದರಿಂದ ನಮ್ಮ ಶುಗರ್ ಫ್ಯಾಕ್ಟರಿಯ ಲೈನ್ ಬಂದ್ ಆಗಿರುತ್ತದೆ ಅಂತಾ ತಿಳಿಸಿದ್ದರಿಂದ ನಮ್ಮ ಮೇಲಾಧಿಕಾರಿಗಳ ಆದೇಶದಂತೆ ನಾನು ಮತ್ತು ನಮ್ಮ ಕಂಪನಿಯ ಡಿವಿಜನಲ್ ಇಂಜಿನಿಯರ(ಓ.ಎಫ್.ಸಿ) ಆಗಿರುವ ಅನಿಲಕುಮಾರ ತಂದೆ ಚನ್ನವೀರಪ್ಪ ಕೇರ್ ಹಾಗೂ ಸಿಬ್ಬಂದಿಯಾದ ಶಿವಣ್ಣ ತಂದೆ ಶಿವಲಿಂಗಪ್ಪ ಸೊನ್ನ, ಮಲ್ಲಿಕಾಜರ್ುನ ತಂದೆ ಹಣಮಂತಪ್ಪ ಎಲ್ಲರೂ ಕೂಡಿ ಕೇಬಲ್ ಲೈನ್ ಚೆಕ್ ಮಾಡಲು ಮಲ್ಲಾ(ಬಿ) ಗ್ರಾಮಕ್ಕೆ ಬಂದು ಮಲ್ಲಾ(ಬಿ) ಗ್ರಾಮದಿಂದ ಕೇಬಲ್ ಲೈನ್ ಚೆಕ್ ಮಾಡುವ ಮಶಿನ್ ಮೂಲಕ ಲೈನ್ ಚೆಕ್ ಮಾಡುತ್ತಾ ಹೋಗುತ್ತಿದ್ದಾಗ ಹದನೂರ ಹತ್ತಿರ ಇರುವ ಹಳ್ಳದ ಬ್ರಿಜ್ ಪಕ್ಕದಲ್ಲಿ 2 ಕಡೆ ಲೈನ್ ಕಟ್ ಆಗಿರುವ ಬಗ್ಗೆ ತಿಳಿದು ಬಂದಿದ್ದು ನಂತರ ಮತ್ತೆ ಚೆಕ್ ಮಾಡುತ್ತಾ ಹೋಗುತ್ತಿದ್ದಾಗ ಹದನೂರ ಗ್ರಾಮ ದಾಟಿ ಮಳ್ಳಿ ಕಡೆಗೆ 1 ಕಿಮೀ ದೂರದಲ್ಲಿ 2 ಕಡೆಗೆ ಲೈನ್ ಕಟ್ ಆಗಿದ್ದು ಕಂಡು ಬಂದಿದ್ದು ಇರುತ್ತದೆ. ನಮ್ಮ ಕೇಬಲ್ ಹೇಗೆ ಕಟ್ ಆಯಿತು ಅಂತಾ ನಾವು ಪರಿಶೀಲಿಸಿದಾಗ ಮತ್ತು ಹದನೂರ, ಮಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ವಿಚಾರಿಸಿದಾಗ ದಿನಾಂಕ 03/11/2022 ರಂದು ಮತ್ತು 04/11/2022 ರಂದು ಏರಟೆಲ್ ಕಂಪನಿಯವರು ನೆಲ ಅಗೆದು ತಮ್ಮ ಕೇಬಲ್ ಅಳವಡಿಸುವ ಕಾರ್ಯ ಮಾಡಿದ್ದು ತಮ್ಮ ಕೇಬಲ್ ಅಳವಡಿಸಲು ನೆಲ ಅಗೆಯುವಾಗ ಬಿ.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿ ಹಾನಿ ಉಂಟು ಮಾಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ನಂತರ ಏರಟೆಲ್ ಕಾರ್ಯ ಗುತ್ತಿಗೆ ಮಾಡಿರುವ ವ್ಯಕ್ತಿ ಯಾರೆಂದು ತಿಳಿದುಕೊಳ್ಳಲಾಗಿ ವೆಂಕಟರೆಡ್ಡಿ ವಿಜಯಪೂರ ಇವರು ಕೆಲಸ ಮಾಡಿಸಿದ್ದು ಕೆಲಸ ಮಾಡಿಸುವಾಗ ನಮ್ಮ ಕಂಪನಿಗೆ ಯಾವುದೇ ಮಾಹಿತಿ ನೀಡದೇ ನಾವು ಅಳವಡಿಸಿರುವ ಕೇಬಲ್ ಪಕ್ಕದಲ್ಲಿ ನೆಲ ಅಗೆದು ನಮ್ಮ ಕೇಬಲ್ ಹಾನಿ ಮಾಡಿರುತ್ತಾರೆ. ನಮ್ಮ ಕಂಪನಿಯಿಂದ ಅಳವಡಿಸಿರುವ ಓ.ಎಫ್.ಸಿ ಕೇಬಲ್ ಅಂದಾಜು 3,24,000/-(3ಲಕ್ಷ ಇಪ್ಪತ್ನಾಲ್ಕು ಸಾವಿರ) ರೂಪಾಯಿ ಕಿಮ್ಮತ್ತಿನದು ಹಾಳಾಗಿರುತ್ತದೆ. ನಮ್ಮ ಕೇಬಲ್ ದೂರವಾಣಿ ಸಂಪರ್ಕ ನೀಡುವ ಸಾರ್ವಜನಿಕ ಆಸ್ತಿಯಾಗಿದ್ದು ಕಾರಣ ಕೇಬಲ್ ಕಟ್ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ವೆಂಕಟರೆಡ್ಡಿ ವಿಜಯಪೂರ ಏರಟೆಲ್ ಕಂಪನಿ ಗುತ್ತಿಗೆದಾರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಮತ್ತು ನಾನು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ವಿಚಾರಿಸಿಕೊಂಡು ಮೇಲಾಧಿಕಾರಿಗಳ ಆದೇಶ ಪಡೆದುಕೊಂಡು ತಡವಾಗಿ ಇಂದು ದಿನಾಂಕ 31/12/2022 ರಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 175/2022 ಕಲಂ: 427 ಐಪಿಸಿ ಮತ್ತು ಕಲಂ 3 ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪಟರ್ಿ ಯಾಕ್ಟ್ 1984 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 145/2022 ಕಲಂ: 504, 353, 506 ಐ.ಪಿ.ಸಿ. ಕಲಂ: 3(1)(ಡಿ)(), 3(2)(ತ-ಚಿ) ಖಅ/ಖಖಿ ಕಂ ಂಛಿಣ 1989 : ದಿನಾಂಕ:31/12/2022 ರಂದು 09:00 ಎ.ಎಮ್ ಕ್ಕೆ ಹುಲಿಗೆಪ್ಪ ಹೆಚ್.ಸಿ-03 ವಡಗೇರಾ ಪೊಲೀಸ್ ಠಾಣೆ ರವರು ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಹುಲಿಗೆಪ್ಪ ಹೆಚ್.ಸಿ-03, ವಯ:38 ವರ್ಷ, ಜಾತಿ:ಹಿಂದೂ ಕೊರಮ (ಎಸ್.ಸಿ), ವಡಗೇರಾ ಪೊಲೀಸ್ ಠಾಣೆ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ದಿನಾಂಕ:30/12/2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ:31/12/2022 ರ ಬೆಳಗ್ಗೆ 08:00 ಗಂಟೆಯವರೆಗೆ ನಾನು ಠಾಣೆ ದಿನಚರಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆನು. ಶ್ರೀ.ಬೂದೆಪ್ಪ ಪಿ.ಸಿ-352 ರವರು ಠಾಣಾ ಪಹರೆ ಕರ್ತವ್ಯದ ಮೇಲೆ ಇದ್ದರು. ಇಂದು ದಿನಾಂಕ:31/12/2022 ರಂದು ಬೆಳಗಿನ ಜಾವ 02:00 ಗಂಟೆ ಸುಮಾರಿಗೆ ನಾನು ಮತ್ತು ಬೂದೆಪ್ಪ ಪಿ.ಸಿ-352 ಇಬ್ಬರು ನಮ್ಮ ಕರ್ತವ್ಯದ ಮೇಲೆ ಇದ್ದಾಗ ಈ ಮೊದಲಿನಿಂದಲೂ ನನಗೆ ಪರಿಚಯಸ್ಥನಾದ ಸಂದೀಪರೆಡ್ಡಿ ತಂದೆ ಚನ್ನರೆಡ್ಡೆಪ್ಪಗೌಡ ಮಾಲಿಪಾಟೀಲ್ ಸಾ||ಗೋನಾಲ ತಾ||ವಡಗೇರಾ ಎಂಬುವರು ಠಾಣೆಯ ಒಳಗಡೆ ಬಂದವರೇ ನಮಗೆ ನೋಡಿ ನಮ್ಮ ಗೋನಾಳ, ಶಿವಪೂರ ಗ್ರಾಮದ ಸೀಮಾಂತರದಲ್ಲಿ ಮರಳು ಸಾಗಿಸುತ್ತಿದ್ದಾರೆ, ನೀವೇನು ಮಾಡ್ತಿದಿರಿ ಪೊಲೀಸ್ ಸೂಳೇ ಮಕ್ಕಳೇ ಅಂತಾ ಅಂದಾಗ ನೀವು ದೂರು ಕೊಡ್ರಿ ನಾನು ಮೇಲಾಧಿಕಾರಿಯವರಿಗೆ ತಿಳಿಸಿ ಕ್ರಮ ಜರುಗಿಸುತ್ತೇನೆ, ಈ ಮೊದಲು ಶಿವಪೂರ, ಗೋನಾಲ ಕೃಷ್ಣಾನದಿಯಲ್ಲಿ ಅಕ್ರಮ ಮರಳು ಸಂಬಂಧಪಟ್ಟಂತೆ ಅಧಿಕಾರಿಯವರು ಹಲವಾರು ಸಲ ದಾಳಿಗಳನ್ನು ಮಾಡಿ ಪ್ರಕರಣಗಳು ದಾಖಲಿಸಿಕೊಂಡಿದ್ದಾರೆ, ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಸಮಯದಲ್ಲಿ ನಮಗೆ ಮಾಹಿತಿ ನೀಡಿದರೆ ಮೇಲಾಧಿಕಾರಿಯವರಿಗೆ ತಿಳಿಸಿ ಕ್ರಮ ಜರುಗಿಸಲಾಗುವುದು. ನೀವು ಈ ರೀತಿ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಸರಿಯಲ್ಲ ಅಂತಾ ಹೇಳಿದಾಗ ಸಂದೀಪರೆಡ್ಡಿ ಈತನು ಏಯ್ ಪೊಲೀಸ್ ಸೂಳೇ ಮಗನೆ ನನಗೆ ಕಂಪ್ಲೇಂಟ್ ಕೊಡು ಅಂತಾ ಹೇಳ್ತೀ, ನಿನಗೆ ನೋಡಿಲ್ಲೇನು, ನಿನ್ನ ಹೆಂಡತಿ ಮಕ್ಕಳನ್ನು ತಂದು ರೋಡಿಗೆ ಮಲಗಿಸು ಸೂಳೆ ಮಗನೆ, ನಿಮ್ಮ ಠಾಣಾದಾಗ ಪೊಲೀಸ್ ಸೂಳಿಮಕ್ಕಳು ಹೊಟ್ಟಿಗಿ ಏನ್ ತಿಂತೀರಿ ಹೇಲ್ ತಿಂತಿರೇನು, ಎಲ್ಲಾ ಪೊಲೀಸ್ ಸೂಳಿಮಕ್ಕಳು ನನಗೆ ಹುಟ್ಟಿರಿ ಅಂತಾ ಬೈಯ್ಯುತ್ತಿರುವಾಗ ನಾನು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಶ್ರೀ.ರಾಮಣ್ಣ ಪಿ.ಎಸ್.ಐ (ತನಿಖೆ) ರವರಿಗೆ ಕರೆಮಾಡಿ ಠಾಣೆಯಲ್ಲಿ ಗೋನಾಲ ಗ್ರಾಮದ ಸಂದೀಪರೆಡ್ಡಿ ಈತನು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳವಾಡುತ್ತಿದ್ದಾನೆ ನೀವು ಠಾಣೆಗೆ ಬರುವಂತೆ ಹೇಳಿದಾಗ ರಾಮಣ್ಣ ಪಿ.ಎಸ್.ಐ.(ತನಿಖೆ) ರವರು ತಮ್ಮ ಸಂಗಡ ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಶ್ರೀಶೈಲ್ ಪಿ.ಸಿ-327 ರವರೊಂದಿಗೆ ಠಾಣೆಗೆ ಬಂದು ಸಂದೀಪರೆಡ್ಡಿ ಗೋನಾಲ ಈತನಿಗೆ ನೀವು ದೂರು ಕೊಡುವುದಿದ್ದರೆ ಕೊಡ್ರಿ, ನೀವು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಸರಿಯಲ್ಲ ಅಂತಾ ರಾಮಣ್ಣ ಪಿ.ಎಸ್.ಐ. ರವರು ಸಂದೀಪರೆಡ್ಡಿ ಈತನಿಗೆ ಹೇಳಿದಾಗ ರಾಮಣ್ಣ ಪಿ.ಎಸ್.ಐ. ರವರಿಗೆ ಏಯ್ ಮುದುಕ ಇಲ್ಲಿ ಕತ್ತೆ ಕಾಯ್ತಿದಿಯೇನು, ಹೊಟ್ಟೆಗೆ ಹೇಲ್ ತಿಂತಿಯೇನ್ ಅಂತಾ ಅವಾಚ್ಯ ಶಬ್ದಗಳಿಂದ ಬೈದನು. ರಾಮಣ್ಣ ಪಿ.ಎಸ್.ಐ. ರವರು ಸಧ್ಯ ಶಿವಪೂರ ಗೋನಾಲ ಕೃಷ್ಣಾ ನದಿ ತೀರದಲ್ಲಿ ಯಾವುದೇ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿಲ್ಲ, ಅಕ್ರಮ ಮರಳು ಸಾಗಾಣಿಕೆ ಸಂಬಂಧಿಸಿದಂತೆ ದಾಳಿಮಾಡಿ ಹಲವಾರು ಪ್ರಕರಣಗಳು ದಾಖಲಿಸಿಕೊಂಡಿದ್ದೇವೆ, ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಸಮಯದಲ್ಲಿ ನಮಗೆ ಮಾಹಿತಿ ನೀಡಿದರೆ ದಾಳಿಮಾಡಿ ಕ್ರಮ ಜರುಗಿಸಲಾಗುವುದು ಅಂತಾ ಹೇಳಿದರೂ ಸಹ ಕೇಳದೇ ಸಂದೀಪರೆಡ್ಡಿ ಈತನು ಚೀರಾಡುತ್ತಾ ಪೊಲೀಸ್ ಇಲಾಖೆಗೆ ಅವಮಾನವಾಗುವ ರೀತಿಯಲ್ಲಿ ಬೈದಾಡಿ ಮಗನೇ ಇವತ್ತು ಉಳಿದಿ, ಇನ್ನೊಮ್ಮೆ ನಿನಗೆ ಜೀವದ ಸಹಿತ ಬಿಡುವುದಿಲ್ಲಾ ಕೊರಮ ಜಾತಿ ಸೂಳೇಮಗನೆ ಅಂತಾ  ನನಗೆ ಜೀವದ ಬೆದರಿಕೆ ಹಾಕಿರುತ್ತಾನೆ.  ಕಾರಣ ದಿನಾಂಕ:31/12/2022 ರಂದು ರಾತ್ರಿ 02:00 ಗಂಟೆಗೆ ಪೊಲೀಸ್ ಠಾಣೆಗೆ ಬಂದು ನಾನು ಪರಿಶಿಷ್ಟ ಜಾತಿಯ ಕೊರಮ ಜಾತಿಯವನೆಂದು ಗೊತ್ತಿದ್ದರೂ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ನನ್ನ ಕರ್ತವ್ಯಕ್ಕೆ ಅಡೆತಡೆಮಾಡಿ ಜೀವದ ಬೆದರಿಕೆ ಹಾಕಿದ ಸಂದೀಪರೆಡ್ಡಿ ತಂದೆ ಚನ್ನರೆಡ್ಡೆಪ್ಪಗೌಡ ಮಾಲಿಪಾಟೀಲ್ ಸಾ||ಗೋನಾಲ ತಾ||ವಡಗೇರಾ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ.  ಸಂದೀಪರೆಡ್ಡಿ ಗೋನಾಲ ಈತನು ರಾತ್ರಿ ಸಮಯದಲ್ಲಿ ನಮ್ಮ ಠಾಣೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ ನಾನು ನನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾಡರ್ಿಂಗ್ ಮಾಡಿದ್ದು, ಅವುಗಳನ್ನು ಈ ಫಿಯರ್ಾದಿಯೊಂದಿಗೆ ಲಗತ್ತಿಸಲಾಗಿದೆ. ಘಟನೆಯು ರಾತ್ರಿ ವೇಳೆಯಲ್ಲಿ ಜರುಗಿದ್ದು, ಇಂದು ಬೆಳಗ್ಗೆ ನಾನು ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ ದೂರು ನೀಡಲು ತಡವಾಗಿರುತ್ತದೆ. ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 145/2022 ಕಲಂ: 504, 353, 506 ಐ.ಪಿ.ಸಿ. ಮತ್ತು ಕಲಂ: 3(1)(ಡಿ)(), 3(2)(ತ-ಚಿ) ಖಅ/ಖಖಿ ಕಂ ಂಛಿಣ 1989 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ 107 ಸಿಆರ್ಪಿಸಿ: 31/12/2022 ರಂದು ಹಳ್ಳಿಭೇಟಿ ಕುರಿತು ಉಕ್ಕನಾಳ ಧಮರ್ಾನಾಯಕ ತಾಂಡಾಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳಿಂದ ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದಲ್ಲಿ ಪ್ರತಿವಾದಿಯಾದ  ರಾಜು @ ರಾಜಕುಮಾರ ತಂದೆ ಗೋವಿಂದ ರಾಠೋಡ ವ:26ವರ್ಷ, ಜಾ:ಲಂಬಾಣಿ, ಉ:ಕೂಲಿ, ಸಾ:ಧಮರ್ಾನಾಯಕತಾಂಡಾ ಉಕ್ಕನಾಳ ತಾ:ಶಹಾಪೂರ ಈತನು ರೌಡಿ ಶೀಟರ್ನಿದ್ದು ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ, ಇನ್ನೊಂದು ಪಕ್ಷದ ಕಾರ್ಯಕರ್ತರ ಜೊತೆ ವಿನಾ ಕಾರಣ ಜಗಳ ಮಾಡಿಕೊಂಡು  ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಗಳಂತಹ ಸಂಜ್ಞೆಯ ಅಪರಾಧವನ್ನು ಎಸಗುವ ಸಾಧ್ಯತೆಗಳು ಕಂಡು ಬಂದಿರುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರೃತಾ ಕ್ರಮವಾಗಿ ಸದರಿಯವನ ವಿರುದ್ದ ಇಂದು ದಿನಾಂಕ 31/12/2022 ರಂದು 01.30 ಪಿಎಮ್ ಕ್ಕೆ ಗೋಗಿ ಠಾಣೆಯ ಮುಂಜಾಗ್ರತಾ ಕ್ರಮ ವರದಿ ಸಂ:86/2022 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
 
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ: 31/12/2022 ರಂದು ಹಳ್ಳಿಭೇಟಿ ಕುರಿತು ವನದುರ್ಗ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳಿಂದ ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದಲ್ಲಿ ಪ್ರತಿವಾದಿಯಾದ  ಸುದರ್ಶನ ತಂದೆ ಪಿಡ್ಡನಾಯಕ ಮುನಮುಟಗಿ, ವ:24ವರ್ಷ, ಜಾ:ಬೇಡರ, ಉ:ಒಕ್ಕಲುತನ, ಸಾ:ವನದುರ್ಗ, ತಾ:ಶಹಾಪೂರ ಈತನು ರೌಡಿ ಶೀಟರ್ನಿದ್ದು ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ, ಇನ್ನೊಂದು ಪಕ್ಷಜ ಕಾರ್ಯಕರ್ತರ ಜೊತೆ ವಿನಾ ಕಾರಣ ಜಗಳ ಮಾಡಿಕೊಂಡು  ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಗಳಂತಹ ಸಂಜ್ಞೆಯ ಅಪರಾಧವನ್ನು ಎಸಗುವ ಸಾಧ್ಯತೆಗಳು ಕಂಡು ಬಂದಿರುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರೃತಾ ಕ್ರಮವಾಗಿ ಸದರಿಯವನ ವಿರುದ್ದ ಇಂದು ದಿನಾಂಕ 31/12/2022 ರಂದು 02.00 ಪಿಎಮ್ ಕ್ಕೆ ಗೋಗಿ ಠಾಣೆಯ ಮುಂಜಾಗ್ರತಾ ಕ್ರಮ ವರದಿ ಸಂ:87/2022 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ: 31/12/2022 ರಂದು ಹಳ್ಳಿಭೇಟಿ ಕುರಿತು ಗೋಗಿ(ಕೆ) ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳಿಂದ ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದಲ್ಲಿ ಪ್ರತಿವಾದಿಯಾದ  ಭೀಮರೆಡ್ಡಿ @ ಮುದಕಪ್ಪ ತಂದೆ ಚಂದಪ್ಪ ಮೂಲಿಮನಿ, ವ:33ವರ್ಷ, ಜಾ:ಕಬ್ಬಲಿಗ, ಉ:ಒಕ್ಕಲುತನ, ಸಾ:ಗೋಗಿ(ಕೆ), ಈತನು ರೌಡಿ ಶೀಟರ್ನಿದ್ದು ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ, ಇನ್ನೊಂದು ಪಕ್ಷಜ ಕಾರ್ಯಕರ್ತರ ಜೊತೆ ವಿನಾ ಕಾರಣ ಜಗಳ ಮಾಡಿಕೊಂಡು  ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಗಳಂತಹ ಸಂಜ್ಞೆಯ ಅಪರಾಧವನ್ನು ಎಸಗುವ ಸಾಧ್ಯತೆಗಳು ಕಂಡು ಬಂದಿರುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರೃತಾ ಕ್ರಮವಾಗಿ ಸದರಿಯವನ ವಿರುದ್ದ ಇಂದು ದಿನಾಂಕ 31/12/2022 ರಂದು 02.30 ಪಿಎಮ್ ಕ್ಕೆ ಗೋಗಿ ಠಾಣೆಯ ಮುಂಜಾಗ್ರತಾ ಕ್ರಮ ವರದಿ ಸಂ:88/2022 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ 107 ಸಿಆರ್ಪಿಸಿ: 31/12/2022 ರಂದು ಹಳ್ಳಿಭೇಟಿ ಕುರಿತು ವನದುರ್ಗ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳಿಂದ ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದಲ್ಲಿ ಪ್ರತಿವಾದಿಯಾದ  ಗುರುರಾಜ ತಂದೆ ತಿರುಪತಿ ಗುಡ್ಡಕಾಯಿ, ವ:34 ವರ್ಷ ಜಾ:ಬೇಡರ, ಉ:ಒಕ್ಕಲುತನ, ಸಾ:ವನದುರ್ಗ, ತಾ:ಶಹಾಪೂರ ಈತನು ರೌಡಿ ಶೀಟರ್ನಿದ್ದು ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ, ಇನ್ನೊಂದು ಪಕ್ಷಜ ಕಾರ್ಯಕರ್ತರ ಜೊತೆ ವಿನಾ ಕಾರಣ ಜಗಳ ಮಾಡಿಕೊಂಡು  ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಗಳಂತಹ ಸಂಜ್ಞೆಯ ಅಪರಾಧವನ್ನು ಎಸಗುವ ಸಾಧ್ಯತೆಗಳು ಕಂಡು ಬಂದಿರುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರೃತಾ ಕ್ರಮವಾಗಿ ಸದರಿಯವನ ವಿರುದ್ದ ಇಂದು ದಿನಾಂಕ 31/12/2022 ರಂದು 03.00 ಪಿಎಮ್ ಕ್ಕೆ ಗೋಗಿ ಠಾಣೆಯ ಮುಂಜಾಗ್ರತಾ ಕ್ರಮ ವರದಿ ಸಂ:89/2022 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ: 31/12/2022 ರಂದು ಹಳ್ಳಿಭೇಟಿ ಕುರಿತು ಹೋಸಕೇರಾ ಮೇಲಿನ ತಾಂಡಾ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಮಾನಗಳಿಂದ ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದಲ್ಲಿ ಪ್ರತಿವಾದಿಯಾದ  ಗುರುನಾಥ ತಂದೆ ತಿಪ್ಪಣ್ಣ ವ:32 ವರ್ಷ, ಜಾ:ಲಂಬಾಣಿ, ಉಸರಕಾರಿ ನೌಕರ, ಸಾ:ಹೋಸಕೇರಾ ಮೇಲಿನ ತಾಂಡಾ, ತಾ:ಶಹಾಪೂರ ಈತನು ರೌಡಿ ಶೀಟರ್ನಿದ್ದು ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ, ಇನ್ನೊಂದು ಪಕ್ಷಜ ಕಾರ್ಯಕರ್ತರ ಜೊತೆ ವಿನಾ ಕಾರಣ ಜಗಳ ಮಾಡಿಕೊಂಡು  ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಗಳಂತಹ ಸಂಜ್ಞೆಯ ಅಪರಾಧವನ್ನು ಎಸಗುವ ಸಾಧ್ಯತೆಗಳು ಕಂಡು ಬಂದಿರುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರೃತಾ ಕ್ರಮವಾಗಿ ಸದರಿಯವನ ವಿರುದ್ದ ಇಂದು ದಿನಾಂಕ 31/12/2022 ರಂದು 03.30 ಪಿಎಮ್ ಕ್ಕೆ ಗೋಗಿ ಠಾಣೆಯ ಮುಂಜಾಗ್ರತಾ ಕ್ರಮ ವರದಿ ಸಂ:90/2022 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 01-01-2023 12:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080