ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-03-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 30/2022 ಕಲಂ 454, 457, 380 ಐಪಿಸಿ : ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶಿಲ್ಪಾವತಿ ನನ್ನ ತಾಯಿ ಲಲಿತಾ ಹಾಗೂ ಇಬ್ಬರು ಚಿಕ್ಕಮಕ್ಕಳು ಇರುತ್ತೇವೆ. ನನ್ನ ಹೆಂಡತಿಯ ತವರು ಮನೆ ಚಿಂಚೋಳಿ ತಾಲ್ಲೂಖಿನ ಗರಗಪಳ್ಳಿ ಇದ್ದು, ಅವರ ಚಿಕ್ಕಮ್ಮನ ಮಗನ ಮದುವೆ ನಿನ್ನೆ ದಿನಾಂಕ 27/02/2022 ರಂದು ಇದ್ದ ಕಾರಣ ಒಂದು ವಾರದ ಮುಂಚೆ ನನ್ನ ಹೆಂಡತಿ ಆ ಮದುವೆಗೆ ಹೋಗಿದ್ದು, ಮೊನ್ನೆ ದಿನಾಂಕ 26/02/2022 ರಂದು ಮಧ್ಯಾಹ್ನ 03-30 ಗಂಟೆಗೆ ನನ್ನ ತಾಯಿ ಹಾಗೂ ಸಾಯಂಕಾಲ 05-30 ಗಂಟೆಗೆ ನಾನು ಸದರಿ ಮದುವೆಗೆ ಮನೆ ಕೀಲಿ ಹಾಕಿಕೊಂಡು ಹೋದೆವು. ಹೀಗಿದ್ದು ನಿನ್ನೆ ದಿನಾಂಕ 27/02/2022 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ನಾನು ಮದುವೆ ಕಾರ್ಯಕ್ರಮದಲ್ಲಿ ಇದ್ದಾಗ ಯಾದಗಿರಿಯ ನಮ್ಮ ಮನೆಯ ಎದುರುಗಡೆ ಇರುವ ಪವನ ತಂದೆ ಅಂಭಾರಾಯ ಗಬ್ಬೂರ ಈತನು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ತೆಗೆದ ಕಾರಣ ನಾನು ಸಮೀಪ ಹೋಗಿ ನೋಡಿದಾಗ ಕೀಲಿ ಹಾಕಿದ ಬಗಿಲು ಕೊಂಡಿ ಮುರಿದಿದ್ದು, ಮನೆ ಕಳ್ಳತನ ವಾದಂತೆ ಕಂಡು ಬರುತ್ತದೆ ಅಂತಾ ಹೇಳಿದನು. ನಾನು ಆತನಿಗೆ ನಾವು ಬರುವ ವರೆಗೆ ನಮ್ಮ ಮನೆಯ ಬಾಗಿಲು ಮುಚ್ಚರಿ ನಾನು ಬಂದ ನಂತರ ನೋಡೋಣ ಅಂತಾ ತಿಳಿಸಿದೆನು. ನಂತರ ನಾನು ನಿನ್ನೆ ದಿನಾಂಕ 27/02/2022 ರಂದು ಮಧ್ಯಾಹ್ನ 03-30 ಗಂಟೆಯ ಸುಮಾರಿಗೆ ನಾನು ಮನೆಗೆ ಬಂದು ನೋಡಿದಾಗ ಮನೆಯ ಕೀಲಿಕೊಂಡಿ ಮುರಿದಿದ್ದು, ಬೆಡ್ ರೋಮಿನಲ್ಲಿ ಇದ್ದ ಅಲಮರಿ ಕೀಲಿ ಕೂಡ ಮುರಿದ್ದು, ಅದರಲ್ಲಿಯ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂತು. ಅಲಮರಿಯಲ್ಲಿ ಇದ್ದ ಮನೆ ಕಟ್ಟಲು ಎಂದು ತಂದು ಇಟ್ಟ ನಮ್ಮ ತಾಯಿಯ ಪಿಂಚಣಿ ಹಣ 80,000/-ರೂಪಾಯಿಗಳು ಮತ್ತು 1] ಒಂದು 5 ಗ್ರಾಂ. ಬಂಗಾರದ ಅರಳಿನ ಉಂಗುರ, 2] ಒಂದು ಜೊತೆ 4 ಗ್ರಾಂ, ಬಂಗಾರದ ಜುಮಕಿ, 3] 3 ಗ್ರಾಂ, ಬಂಗಾರದ 02 ಮಾಟಿನ್ ಎಳೆಗಳು, 4] 8 ಗ್ರಾಂ. ಬಂಗಾರದ 2 ತಾಳಿ, ಗುಂಡುಗಳು, ಮತ್ತು 2 ಕಿವಿಯಲ್ಲಿಯ ತಾಟ್, ಹಾಗೂ ಒಂದು ಜೊತೆ 4 ತೊಲೆಯ ಬೆಳ್ಳಿಯ ಹುಡುಗರ ಕಾಲು ಚೈನ್ಗಳು ಹೀಗೆ ಒಟ್ಟು 1,45,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಹಾಗೂ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 30/2022 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ:30/2022 ಕಲಂ 279, 338 ಐಪಿಸಿ : ಇಂದು ದಿನಾಂಕ 28.02.2022 ರಂದು ಮಧ್ಯಾಹ್ನ 12-45 ಗಂಟೆ ಸುಮಾರಿಗೆ ಸೈದಾಪೂರ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಕರೆಯ ಮೇರೆಗೆ ನಾನು ಸೈದಾಪೂರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದೆ ಗಾಯಾಳು ಬಸಪ್ಪ ರಸ್ತೆ ಅಪಘಾತ ಕಾಲಕ್ಕೆ ಗಂಭೀರವಾಗಿ ಗಾಯಗೊಂಡು ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ ಮತ್ತು ಗಾಯಾಳುವಿಗೆ ಕೂಡಲೇ ಹೆಚ್ಚಿನ ಉಪಚಾರ ಕುರಿತು ರಾಯಚೂರ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರಿಂದ ಆಸ್ಪತ್ರೆಯಲ್ಲಿದ್ದ ಗಾಯಾಳುವಿನ ಸಂಬಂಧಿಯಾದ ಕಾಂತಪ್ಪ ತಂದೆ ಶರಣಪ್ಪ ಶಿಕರಿ ವಯ|| 21 ವರ್ಷ, ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬಳಿಚಕ್ರ ಗ್ರಾಮ ತಾ|| ಜಿ|| ಯಾದಗಿರಿ ಈತನಿಗೆ ವಿಚಾರಿಸಿ ಫಿಯರ್ಾದಿ ಹೇಳಿಕೆ ಪಡೆದೆನು. ದೂರಿನ ಸಾರಾಂಶವೇನೆಂದರೆ, ಇಂದು ಮಧ್ಯಾಹ್ನ 12.40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ದೊಡ್ಡಪ್ಪನ ಮಗ ಮಶೆಪ್ಪ ತಂದೆ ಭೀಮಣ್ಣ ಶಿಕರಿ ಈತನು ನನಗೆ ತಿಳಿಸಿದ್ದೇನೆಂದರೆ, ತನ್ನ ತಮ್ಮನಾದ ಬಸಪ್ಪ ತಂದೆ ಭೀಮಣ್ಣ ಶಿಕರಿ ಈತನು ಕಾಳೇಬೆಳಗುಂದಿ ರಸ್ತೆಯ ಮೇಲೆ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಕಾರಣ ಅಂಬುಲೆನ್ಸ್ ವಾಹನದಲ್ಲಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದಾರೆ ಅಂತ ತಿಳಿಸಿದ್ದಲ್ಲದೇ ಆಸ್ಪತ್ರೆಗೆ ಹೋಗಿ ಬರೋಣ ಬಾ ಅಂತ ಕರೆದಿದ್ದರಿಂದ ನಾನು ಮತ್ತು ಮಶೆಪ್ಪ ಹಾಗೂ ಇನ್ನಿತರರು ಕೂಡಿ ಇಲ್ಲಿಗೆ ಅಂದರೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದಿದ್ದೇವೆ. ಆಸ್ಪತ್ರೆಯಲ್ಲಿದ್ದ ನನ್ನ ದೊಡ್ಡಪ್ಪನ ಮಗನಾದ ಬಸಪ್ಪ ತಂದೆ ಭೀಮಣ್ಣ ಶಿಕರಿ ವಯ|| 36 ವರ್ಷ, ಜಾ|| ಕಬ್ಬಲಿಗ ಉ|| ಒಕ್ಕಲುತನ ಈತನಿಗೆ ಮುಖಕ್ಕೆ ಮತ್ತು ಕೈಕಾಲುಗಳಿಗೆ ಪೆಟ್ಟುಗಳಾಗಿ ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ. ಬಸಪ್ಪನಿಗೆ ಯಂಗಾಗ್ಯದ ಆಕ್ಸಿಡೆಂಟ್ ಅಂತ ನಾವು ವಿಚಾರಿಸಿದಾಗ ಬಸಪ್ಪ ಸರಿಯಾಗಿ ಮಾತನಾಡದೇ ನಂದೆಪಲ್ಲಿಯಿಂದ ಬರುವಾಗ ಕಾಳೇಬೆಳಗುಂದಿ ಸಮೀಪ ರಸ್ತೆಯ ತಿರುವಿನಲ್ಲಿ ಬೆಳಿಗ್ಗೆ 11-45 ಗಂಟೆ ಸುಮಾರಿಗೆ ನಾನೇ ಬಿದ್ದೆ ಅಂತ ಸಣ್ಣ ಧ್ವನಿಯಲ್ಲಿ ತಿಳಿಸಿದ. ನಂತರ ಗಾಯಾಳು ಬಸಪ್ಪನಿಗೆ ಸೈದಾಪೂರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ರಾಯಚೂರ ರಿಮ್ಸ್ ಆಸ್ಪತ್ರೆಗೆ ಬಸಪ್ಪನ ಅಣ್ಣ ಮಶಪ್ಪ ಹಾಗೂ ಅವರ ಮನೆಯವರು ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋದರು.
ನನ್ನ ದೊಡ್ಡಪ್ಪನ ಮಗನಾದ ಬಸಪ್ಪ ತಂದೆ ಭೀಮಣ್ಣ ಶಿಕರಿ ಈತನು ತನ್ನ ಮೋಟಾರ ಸೈಕಲ ನೊಂದಣಿ ನಂಬರ ಕೆ.ಎ-33 ಎಕ್ಷ-4217 ವಾಹನ ಚಲಾಯಿಸಿಕೊಂಡು ನಂದೇಪಲ್ಲಿ ಗ್ರಾಮದಿಂದ ನಮ್ಮೂರಾದ ಬಳಿಚಕ್ರ ಗ್ರಾಮಕ್ಕೆ ಬರುವ ಕಾಲಕ್ಕೆ ಇಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ ವಾಹನ ವೇಗವಾಗಿ ನಡೆಸಿ ತಿರುವು ರಸ್ತೆಯಲ್ಲಿ ವಾಹನ ನಿಯಂತ್ರಿಸದೆ ತನ್ನಿಂದ ತಾನೇ ವಾಹನ ಪಲ್ಟಿಮಾಡಿರುತ್ತಾನೆ. ಅಪಘಾತದಲ್ಲಿ ಬಸಪ್ಪ ಗಂಭೀರವಾಗಿ ಗಾಯಗೊಂಡಿರುತ್ತಾನೆ. ಕಾರಣ ಬಸಪ್ಪ ತಂದೆ ಭೀಮಣ್ಣ ಶಿಕರಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.

 


ಕೊಡೇಕಲ್ ಪೊಲೀಸ್ ಠಾಣೆ:-
22/2022 ಕಲಂ: 143,147,323,504,506, 498(ಂ) ಖ/ಘ 149 ಕಅ,ಂಓಆ 3,4 : ಇಂದು ದಿನಾಂಕ:28.02.2022 ರಂದು ಮಧ್ಯಾಹ್ನ 12:30 ಗಂಟೆಗೆ ಫಿಯರ್ಾದಿ ಶ್ರೀಮತಿ ಶಾಂತಿಬಾಯಿ ಗಂಡ ವೆಂಕಟೇಶ ಪವಾರ ವ|| 27 ವರ್ಷ ಜಾ|| ಹಿಂದೂ ಲಂಬಾಣಿ ಉ|| ಮನೆ ಕೆಲಸ ಸಾ|| ಸೊನ್ನಾಪೂರ ದೊಡ್ಡ ತಾಂಡಾ ಹಾ||ವ||ಏದಲಬಾವಿ ತಾಂಡಾ, ತಾ||ಹುಣಸಗಿ, ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ಬೂದಿಬಾಯಿ ಅಂತಾ ಇಬ್ಬರು ಹೆಣ್ಣು ಮಕ್ಕಳಿದ್ದು, ನನಗೆ ಈಗ ಆರು ವರ್ಷದ ಹಿಂದ ನನ್ನ ತಾಯಿಯ ತವರೂರಾದ ಸೊನ್ನಾಪೂರ ದೊಡ್ಡ ತಾಂಡಾದ ನನ್ನ ತಾಯಿಯ ಅಣ್ಣ ತಿಪ್ಪಣ್ಣನ ಮಗನಾದ ವೆಂಕಟೇಶ ಇತನಿಗೆ ಕೊಟ್ಟು ಮದುವೆ ಮಾಡಿದ್ದು, ನಮ್ಮ ಮದುವೆಯು ಸೋನ್ನಾಪೂರ ದೊಡ್ಡ ತಾಂಡಾದ ನನ್ನ ಗಂಡನ ಮನೆಯ ಮುಂದೆ ನಮ್ಮ ಧರ್ಮದ ಸಂಪ್ರದಾಯದಂತೆ ಆಗಿದ್ದು, ನಮ್ಮ ಮದುವೆಯ ಮಾತುಕತೆಯನ್ನು ನಮ್ಮ ತಾಂಡಾದ ಅಣ್ಣತಮ್ಮಕ್ಕಿಯವರಾದ ಶಂಕ್ರಾನಾಯಕ ತಂದೆ ರಾಮಜೀ ಜಾಧವ, ಪೋಮಣ್ಣ ತಂದೆ ಭಂಗೆಪ್ಪ ಜಾಧವ, ಜಗನಪ್ಪ ತಂದೆ ಡೊಂಗರೆಪ್ಪ ಜಾಧವ, ಸಕ್ರೆಪ್ಪ ತಂದೆ ರಾಮಪ್ಪ ಜಾಧವ ರವರು ಆಡಿದ್ದು, ಮದುವೆ ಕಾಲಕ್ಕೆ ಇವರೆಲ್ಲರೂ ಹಾಗೂ ನನ್ನ ತಂದೆ ತಾಯಿ ಹಾಗೂ ನಮ್ಮ ಅಣ್ಣತಮ್ಮಕ್ಕಿಯವರೆಲ್ಲರೂ ಇದ್ದು, ಮದುವೆ ಕಾಲಕ್ಕೆ ನನ್ನ ಗಂಡನಿಗೆ ನನ್ನ ತವರು ಮನೆಯವರು ನಗದು ಹಣ 50,000/-ರೂ, ನಾಲ್ಕು ತೊಲೆ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಸುರಿಗೆ ಸಾಮಾನುಗಳನ್ನು ಮತ್ತು ಒಂದು ಮೋಟರ್ ಸೈಕಲ್ನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ ಮನೆಗೆ ನಡೆಯಲಿಕ್ಕೆ ಹೋಗಿದ್ದು, ಗಂಡನ ಮನೆಯಲ್ಲಿ ಅತ್ತೆ, ಮಾವ, ನಾದಿನಿಯರು ಎರಡು ಮೂರು ವರ್ಷಗಳವರೆಗೆ ನನ್ನನ್ನು ಒಳ್ಳೆಯ ರೀತಿಯಿಂದ ನಡೆಯಿಸಿಕೊಂಡಿದ್ದು, ನಮ್ಮ ದಾಂಪತ್ಯದಿಂದ ನನಗೆ 4 ಜನ ಹೆಣ್ಣು ಮಕ್ಕಳು ಜನಿಸಿದ್ದು, ಈಗ 5-6 ತಿಂಗಳುಗಳಿಂದ ನನ್ನ ಗಂಡನು ತನ್ನ ತಂದೆ ತಾಯಿ ಅಜ್ಜಿ ನಾದಿನಿ ಹಾಗೂ ಕಾಕಂದಿರ ಮಾತನ್ನು ಕೇಳಿ ನನಗೆ ಸೂಳೆ ನೀನು ಬರೆ ಹೆಣ್ಣು ಮಕ್ಕಳಿಗೆ ಹಡದಿದಿ, ನಿನಗೆ ಗಂಡು ಮಕ್ಕಳು ಹುಟ್ಟುವದಿಲ್ಲ ನಿನ್ನ 4 ಜನ ಹೆಣ್ಣು ಮಕ್ಕಳಿಗೆ ಮತ್ತು ನಿನಗೆ ಕೆನಾಲಕ್ಕೆ ಹಾಕುತ್ತೇವೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಮತ್ತೆ ನಿನ್ನ ತವರು ಮನೆಯಿಂದ ಎರಡು ತೊಲೆ ಬಂಗಾರ ಮತ್ತು 50,000/- ರೂ ತೆಗೆದುಕೊಂಡು ಬರಬೇಕು ಅಂತಾ ನನಗೆ ಹೊಡೆಬಡೆ ಮಾಡುತ್ತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು, ಆದರೂ ಕೂಡ ನಾನು ನನ್ನ ಗಂಡ ಹಾಗೂ ಮನೆಯವರೆಲ್ಲರೂ ಕೊಡುವ ಕಿರುಕುಳವನ್ನು ಮುಂದೆ ನನ್ನ ಸಂಸಾರ ಸರಿಹೊಂದುತ್ತದೆ ಅಂತಾ ತಾಳಿಕೊಂಡು ಬಂದಿದ್ದು, ಈಗ ನಾಲ್ಕು ತಿಂಗಳು ಹಿಂದೆ ಮತ್ತೆ ನನಗೆ ನನ್ನ ಗಂಡ ಮತ್ತು ಮನೆಯವರೆಲ್ಲರೂ ಕಿರುಕುಳಕೊಡುವುದನ್ನು ಮುಂದುವರೆಸಿದಾಗ ನಾನು ನನ್ನ ತಂದೆಗೆ ಈ ವಿಷಯವನ್ನು ತಿಳಿಸಿದಾಗ ನನ್ನ ತಂದೆಯು ನಮ್ಮ ಮದುವೆ ಕಾಲಕ್ಕೆ ಮಾತುಕತೆ ಆಡಿದ ಶಂಕ್ರಾನಾಯಕ ತಂದೆ ರಾಮಜೀ ಜಾಧವ, ಪೋಮಣ್ಣ ತಂದೆ ಭಂಗೆಪ್ಪ ಜಾಧವ, ಜಗನಪ್ಪ ತಂದೆ ಡೊಂಗರೆಪ್ಪ ಜಾಧವ, ಸಕ್ರೆಪ್ಪ ತಂದೆ ರಾಮಪ್ಪ ಜಾಧವ ಇವರೆಲ್ಲರನ್ನು ಕರೆದುಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಮತ್ತು ಮನೆಯವರೆಲ್ಲರಿಗೆ ಇವರೆಲ್ಲರೂ ತಿಳುವಳಿಕೆ ಹೇಳಿ ಹೋಗಿದ್ದು, ನಂತರ ಒಂದು ವಾರದವರೆಗೆ ಎಲ್ಲರು ನನ್ನನ್ನು ಒಳ್ಳೆಯ ರೀತಿಯಿಂದ ನೋಡಿಕೊಂಡು ಮತ್ತೆ ನನಗೆ ತವರು ಮನೆಯಿಂದ ಬಂಗಾರ ಹಣ ತರುವಂತೆ ಕಿರುಕುಳ ಕೊಡಹತ್ತಿದ್ದು ಆಗ ನಾನು ಅವರಿಗೆ ನಮ್ಮ ತಂದೆ ತಾಯಿಯವರು ಬಡವರಿದ್ದಾರೆ ಅವರಿಂದ ಈಗ ಬಂಗಾರ ಹಣ ಕೊಡುವುದು ಆಗುವುದಿಲ್ಲಾ ಅಂತಾ ಅಂದಾಗ ನನಗೆ ನನ್ನ ಗಂಡನು ಮನೆಯವರೆಲ್ಲರ ಮಾತನ್ನು ಕೇಳಿ ಹೊಡೆಬಡೆ ಮಾಡಿ ತವರು ಮನೆಗೆ ಹೋಗುವಂತ ಒತ್ತಾಯಿಸಿದಾಗ ನಾನು ಈಗ ಮೂರು ತಿಂಗಳ ಹಿಂದೆ ನನ್ನ ತಂದೆಯನ್ನು ನನ್ನ ಗಂಡನ ಮನೆಗೆ ಕರೆಯಿಸಿಕೊಂಡು ನನ್ನ ತಂದೆ ಜೋತೆಗೆ ನನ್ನ ತವರೂರಾದ ಏದಲಬಾವಿ ತಾಂಡಾಕ್ಕೆ ಬಂದಿದ್ದು, ಈಗ ನಾನು ನನ್ನ ತವರು ಮನೆಯಲ್ಲಿಯೇ ನನ್ನ ತಂದೆ ತಾಯಿಯೊಂದಿಗೆ ಅವರ ಹೊಲದಲ್ಲಿಯ ಮನೆಯಲ್ಲಿ ಇರುತ್ತೇನೆ. ಹೀಗಿದ್ದು ದಿನಾಂಕ:05/02/2022 ಶನಿವಾರದಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ನಾನು ಏದಲಬಾವಿ ಸೀಮಾಂತರದಲ್ಲಿರುವ ನಮ್ಮ ತಂದೆಯವರ ಮನೆಯಲ್ಲಿ ನನ್ನ ತಂದೆತಾಯಿಯೊಂದಿಗೆ ಇದ್ದಾಗ ಸೊನ್ನಾಪೂರ ದೊಡ್ಡ ತಾಂಡಾದಿಂದ ನನ್ನ ಗಂಡ ವೆಂಕಟೇಶ ತಂದೆ ತಿಪ್ಪಣ್ಣ ಪವಾರ, ಮಾವ ತಿಪ್ಪಣ್ಣ ತಂದೆ ಧೀರಪ್ಪ ಪವಾರ, ಅತ್ತೆ ಮಾನಾಬಾಯಿ ಗಂಡ ತಿಪ್ಪಣ್ಣ ಪವಾರ ಹಾಗೂ ನನ್ನ ಗಂಡನ ಅಜ್ಜಿಯಾದ ಸೋಮಲಿಬಾಯಿ ಗಂಡ ತಿಪ್ಪಣ್ಣ ಪವಾರ ಹಾಗೂ ನನ್ನ ಗಂಡನ ಕಾಕಂದಿರಾದ ದೀಪಲೆಪ್ಪ ತಂದೆ ಧೀರಪ್ಪ ಪವಾರ, ರತ್ನಪ್ಪ ತಂದೆ ಧೀರಪ್ಪ ಪವಾರ ಮತ್ತು ನನ್ನ ಗಂಡನ ಅಕ್ಕಳಾದ ದೇವಿಬಾಯಿ ಗಂಡ ನಿಂಗಪ್ಪ ರಾಠೋಡ್ ಹಾಗೂ ನನ್ನ ಗಂಡನ ಕಾಕನಾದ ದೀಪಲೆಪ್ಪನ ಮಗನಾದ ಗೋವಿಂದ ತಂದೆ ದೀಪಲೆಪ್ಪ ಪವಾರ, ದೀಪಲೆಪ್ಪನ ಹೆಂಡತಿಯಾದ ದೇವಲಿಬಾಯಿ ಗಂಡ ದೀಪಲೆಪ್ಪ ಇವರೆಲ್ಲರೂ ಗುಂಪಾಗಿ ನನ್ನ ತಂದೆಯ ಮನೆಯ ಮುಂದೆ ಬಂದು ಬಾಯಿಗೆ ಬಂದಹಾಗೆ ಒದರಾಡ ಹತ್ತಿದ್ದು ಆಗ ನಾನು ಅವರಿಗೆ ಮನೆಯ ಮುಂದೆ ನಿಂತು ಯಾಕೆ ಒದರಾಡಹತ್ತಿರಿ ಮನೆಯೋಳಗೆ ಬನ್ನಿರಿ ಅಂತಾ ಅಂದಾಗ, ನನ್ನ ಗಂಡನು ನನಗೆ ಸೂಳೆ ನೀನು ತವರು ಮನೆಗೆ ಬಂದು ಮೂರು ತಿಂಗಳಾಯಿತು ಇಲ್ಲಿಯವರೆಗೆ ನಾವು ಕೇಳಿದ ಎರಡು ತೊಲೆ ಬಂಗಾರ, 50000/-ರೂ. ಹಣ ತಂದಿಲ್ಲ ಸೂಳೆ ನೀನು ಇವತ್ತು ಹಣ ಮತ್ತು ಬಂಗಾರ ತೆಗೆದುಕೊಂಡು ನಮ್ಮ ಜೋತೆ ನಮ್ಮ ಮನೆಗೆ ಬರಬೇಕು ಅಂತಾ ಬೈದಿದ್ದು, ನಾನು ನನ್ನ ಗಂಡನಿಗೆ ನನ್ನ ತಂದೆತಾಯಿ ಬಡವರಿದ್ದಾರೆ ಅವರಿಗೆ ಈಗ ಹಣ ಬಂಗಾರ ಕೊಡುವುದು ಆಗುವುದಿಲ್ಲಾ ಅಂದಾಗ ನನ್ನ ಗಂಡನು ನನಗೆ ಕೈಯಿಂದ ಜೋರಾಗಿ ನನ್ನ ಎಡ ಕಪಾಳದ ಮೇಲೆ ಹೊಡೆದಿದ್ದು, ನನ್ನ ಅತ್ತೆ ಮಾನಾಬಾಯಿ, ಅಜ್ಜಿ ಸೋಮಲಾಬಾಯಿ, ನಾದಿನಿ ದೇವಿಬಾಯಿ ರವರು ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು, ನಾನು ನೆಲದ ಮೇಲೆ ಬಿದ್ದಾಗ ದೇವಲಿಬಾಯಿ ಗಂಡ ದೀಪಲೆಪ್ಪ ಇವಳು ನನ್ನ ಸೊಂಟದ ಮೇಲೆ ಎದೆಯ ಮೇಲೆ ಒದ್ದು ತುಳಿದು ಗುಪ್ತಗಾಯಪಡಿಸಿದ್ದು, ಉಳಿದವರು ಈ ಸೂಳಿ ಶಾಂತಿದು ಬಹಳ ಆಗಿದೆ ಅವಳಿಂದ ತವರು ಮನೆಯಿಂದ ಹಣ ಬಂಗಾರ ತರುವುದು ಆಗುವುದಿಲ್ಲ ಇವಳಿಗೆ ಬಿಡಬೇಡರಿ ಇವಳಿಗೆ ಹಾಗೂ ಇವಳ ಮಕ್ಕಳಿಗೆ ಕೆನಾಲಕ್ಕೆ ಹಾಕೋಣ ಅಂತಾ ಒದರಾಡ ಹತ್ತಿದ್ದು, ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚೀರಾಡುತ್ತಿದ್ದಾಗ ಅಲ್ಲಯೇ ಇದ್ದ ನನ್ನ ತಂದೆ ಲೋಕಪ್ಪ ತಂದೆ ಭಂಗೆಪ್ಪ ಜಾಧವ, ತಾಯಿ ಲಕ್ಷ್ಮೀಬಾಯಿ ಗಂಡ ಲೋಕಪ್ಪ ಹಾಗೂ ನಮ್ಮ ಮನೆಯ ಪಕ್ಕದಲ್ಲಿ ಮನೆ ಇರುವ ತಿರುಪತಿ ತಂದೆ ಲಕ್ಷ್ಮಣ ರಾಠೋಡ್, ಭಂಗೆಪ್ಪ ತಂದೆ ಪೋಮಣ್ಣ ಜಾಧವ, ತಾರಾಬಾಯಿ ಗಂಡ ಲಕ್ಷ್ಮಣ ಜಾಧವ ಇವರೆಲ್ಲರೂ ಬಂದು ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು, ಹೋಗುವಾಗ ಅವರೆಲ್ಲರೂ ಸೂಳೆ ಶಾಂತಿ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ಮತ್ತು ನನ್ನ ತಂದೆ ನಮ್ಮ ಮದುವೆ ಕಾಲಕ್ಕೆ ಮಾತುಕತೆ ಆಡಿದ ನಮ್ಮ ತಾಂಡಾದ ಶಂಕ್ರಾನಾಯಕ ತಂದೆ ರಾಮಜೀ ಜಾಧವ, ಪೋಮಣ್ಣ ತಂದೆ ಭಂಗೆಪ್ಪ ಜಾಧವ, ಜಗನಪ್ಪ ತಂದೆ ಡೊಂಗರೆಪ್ಪ ಜಾಧವ, ಸಕ್ರೆಪ್ಪ ತಂದೆ ರಾಮಪ್ಪ ಜಾಧವ ರವರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದು, ಇವರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ತವರು ಮನೆಯಿಂದ ಇನ್ನು ಎರಡು ತೊಲೆ ಬಂಗಾರ ಮತ್ತು 50000/-ರೂಪಾಯಿ ತರುವಂತೆ ಪೀಡಿಸುತ್ತಿರುವ ಮೇಲೆ ನಮೂದಿಸಿದ ನನ್ನ ಗಂಡ ಹಾಗೂ ಅವನ ಮನೆಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2022 ಕಲಂ:143, 147, 323, 504, 506, 498(ಎ) ಸಂ 149 ಐ.ಪಿ.ಸಿ ಸಂಗಡ 3, 4 ಡಿ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 30/2022 ಕಲಂ 285, 337, 338, 304(ಎ) ಐ.ಪಿ.ಸಿ : ಇಂದು ದಿನಾಂಕ 28/02/2022 ರಂದು, ಸಾಯಂಕಾಲ 17-30 ಗಂಟೆಗೆ ಫಿರ್ಯಾದಿ ಶ್ರೀ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಹೆರುಂಡಿ, ವಯಸ್ಸು 63 ವರ್ಷ, ಜಾತಿ ಗಾಣಿಗ ಉಃ ನಿವೃತ್ತ ವರ್ಕ ಇನ್ಸಪೆಕ್ಟರ ಸಾ|| ದೊರನಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 25/02/2022 ರಂದು ದೋರನಹಳ್ಳಿ ಗ್ರಾಮದ ಯು.ಕೆ.ಪಿ ಕ್ಯಾಂಪ್ನಲ್ಲಿರುವ ತಮ್ಮ ಮನೆಯಲ್ಲಿ ಮಕ್ಕಳ ಕುಬಸದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅಡುಗೆ ಮಾಡುವ ಸಿಲಿಂಡರ್ ಸ್ಪೋಟಗೊಂಡು ಸುಮಾರು 20 ರಿಂದ 25 ಜನರು ಸಾಧಾ ಹಾಗೂ ಭಾರಿ ಸುಟ್ಟಗಾಯಗಳಾಗಿದ್ದು ಇಲ್ಲಿಯವರೆಗೆ ಒಟ್ಟು 5 ಜನರು ಮೃತ ಪಟ್ಟಿದ್ದು ಇನ್ನೂಳಿದ ಗಾಯಾಳು ಜನರು ಕಲಬುರಗಿಯ ವಿವಿಧ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು, ಸದರಿ ಘಟನೆಗೆ ಶಹಾಪೂರದ ವಿಜಯ ಗ್ಯಾಸ್ ಏಜನ್ಸಿಯ ಮಾಲೀಕರಾದ 1) ಹಣಮಂತ್ರಾಯಗೌಡ ತಂದೆ ಸಿದ್ದನಗೌಡ ಪಾಟೀಲ, ವಯಸ್ಸು 46 ವರ್ಷ ಸಾಃ ಬಸವೇಶ್ವರ ನಗರ ಶಹಾಪೂರ 2) ಅಣವೀರಯ್ಯ ತಂದೆ ಶರಣಯ್ಯ ಮಠ, ವಯಸ್ಸು 2 ಸಾಃ ವೆಂಕಟೇಶ್ವರ ನಗರ ಶಹಾಪೂರ ಇವರು ಇಂಡಿಯನ್ ಗ್ಯಾಸ್ ಡೀಲರ್ ಶೀಪ್ ಇದ್ದು, ಇವರು ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ನೀಡುವ ಕಾಲಕ್ಕೆ ಸಿಲಿಂಡರನ್ನು ಪರಿಶೀಲಿಸಿ ಸೂಕ್ತವಾದ ಒಳ್ಳೆಯ ಸಿಲಿಂಡರನ್ನು ನೀಡಬೇಕಾಗಿತ್ತು. ಆದರೆ ಅವರು ಸಿಲಿಂಡರ್ನ್ನು ಪರಿಶೀಲನೆ ಮಾಡದೇ ದೋಷಪೂರಿತವಾದ ಹಳೆ ಗ್ಯಾಸ್ ಸಿಲಿಂಡರ್ ನೀಡಿ ನಿರ್ಲಕ್ಷತನ ವಹಿಸಿದ್ದರಿಂದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಾವು ನೋವು ಸಂಭವಿಸಿರುತ್ತವೆ. ಆದ್ದರಿಂದ ಮೇಲ್ಕಂಡವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 30/2022 ಕಲಂ 285, 337, 338, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 31/2022. ಕಲಂ. 279.338. ಐ.ಪಿ.ಸಿ. 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 28/02/2022 ರಂದು 18-00 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ್ ತಂದೆ ಬಸಪ್ಪ ದೋಡ್ಡಮನಿ ವ|| 42 ಜಾ|| ಹರಿಜನ ಉ|| ಕೂಲಿ ಸಾ|| ಗುಂಡಗುತರ್ಿ ತಾ|| ವಡಗೇರಾ 9901607515 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 22/02/2022 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನನ್ನ ತಮ್ಮ ರಾಮಪ್ಪ ತಂದೆ ಬಸಪ್ಪ ಈತನು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 22/02/2022 ರಂದು ರಾತ್ರಿ 7-30 ಗಂಟೆಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮ ಸಮಾಜದ ಶರಣಬಸವ ತಂದೆ ಜಡಗಪ್ಪ ಕ್ವಾಟೇರ ಈತನಿಗೆ ಮೈಯಲ್ಲಿ ಆರಾಮ ಇರುವುದಿಲ್ಲ ಹತ್ತಿಗುಡುರದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂತ ಹೇಳಿ ನನ್ನ ತಮ್ಮನಾದ ಹೋನ್ನಪ್ಪ ತಂದೆ ಬಸಪ್ಪ ಡೊಡ್ಡಮನಿ ಈತನು ನಮ್ಮ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆಎ-33 ಎಲ್-9951 ನೇದ್ದನ್ನು ತೆಗೆದುಕೊಂಡು ಶರಣಬಸವ ತಂದೆ ಜಡಗಪ್ಪ ಕ್ವಾಟೇರ, ಹಾಗೂ ಮಲ್ಲಿಕಾಜರ್ುನ್ ತಂದೆ ಶರಣಪ್ಪ ದೊಡ್ಡಮನಿ, ರವರಿಗೆ ಕರೆದುಕೊಂಡು ಹತ್ತಿಗೂಡುರ ಗ್ರಾಮಕ್ಕೆ ಹೋರಟು ಸದರಿ ಮೋಟರ್ ಸೈಕಲ್ನ್ನು ನನ್ನ ತಮ್ಮ ಹೋನ್ನಪ್ಪನು ಚಲಾಯಿಸುತ್ತಿದ್ದನು. ಹೋನ್ನಪ್ಪನ ಹಿಂದೆ ಮೋಟರ್ ಸೈಕಲ್ ಮೇಲೆ ಶರಣಬಸಪ್ಪನು ಕುಳಿತುಕೊಂಡಿದ್ದನು. ಶರಣಬಸಪ್ಪನ ಹಿಂದೆ ಮಲ್ಲಿಕಾಜರ್ುನ್ ಈತನು ಕುಳಿತುಕೊಂಡಿದ್ದನು. ಸದರಿ ಮೋಟರ್ ಸೈಕಲ್ ಮೇಲೆ ಮೂರು ಜನರು ಹತ್ತಿಗುಡೂರಕ್ಕೆ ಹೋದರು. ನಂತರ ಚಂದ್ರಶೇಖರ ತಂದೆ ಹಣಮಂತ ಕ್ವಾಟೇರ ಈತನು ನನಗೆ ರಾತ್ರಿ 8-20 ಗಂಟೆಗೆ ಫೊನ ಮಾಡಿ ತಿಳಿಸಿದ್ದೆನೆಂದರೆ. ನಾನು ನನ್ನ ಮೋಟರ್ ಸೈಕಲ್ ಮೇಲೆ ಸುರಪೂರ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಹೈಯಾಳ (ಕೆ) ಕ್ರಾಸ್ ಹತ್ತಿರ ಹೋಗುತ್ತಿರುವಾಗ. ನನ್ನ ಮುಂದೆ ಹೋನ್ನಪ್ಪನ ಮೋಟರ್ ಸೈಕಲ್ ಹೋರಟಿತ್ತು ರಾತ್ರಿ 8-00 ಗಂಟೆಯ ಸುಮಾರಿಗೆ ಸದರಿ ಮೋಟರ್ ಸೈಕಲ್ಕ್ಕೆ ಹೈಯಾಳ (ಕೆ) ಕ್ರಾಸಿಗೆ ಯಾವುದೊ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟನ್ನು ಅನವಾರ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹೋನ್ನಪ್ಪನ ಮೋಟರ್ ಸೈಕಲ್ ಮುಂದೆ ಗುದ್ದಿ ಅಪಘಾತ ಮಾಡಿದ್ದು ಇರುತ್ತದೆ. ಆಗ ಮೋಟರ್ ಸೈಕಲ್ ಸಮೇತವಾಗಿ ಹೊನ್ನಪ್ಪ ಮತ್ತು ಶರಣಬಸವ, ಹಾಗೂ ಮಲ್ಲಿಕಾಜರ್ುನ ಇವರು ಬಿದ್ದರು ಸದರಿ ಅಪಘಾತವನ್ನು ನೋಡಿ ನಾನು ಹೋಗಿ ನೋಡಲಾಗಿ ಟ್ರ್ಯಾಕ್ಟರ್ ಚಾಲಕನು ಸ್ವಲ್ಪ ನಿಂತಹಾಗೆ ಮಾಡಿ ಟ್ರಾಕ್ಟರನ್ನು ತೆಗೆದುಕೊಂಡು ಹೈಯಾಳ (ಕೆ) ಕಡೆಗೆ ಹೋದನು ಅದರ ಚಾಲಕನಿಗೆ ನೋಡಿದರೆ ಗುರುತ್ತಿಸುತ್ತೆನೆ. ಸದರಿ ಅಪಘಾತದಲ್ಲಿ ಹೋನ್ನಪ್ಪನಿಗೆ, ಶರಣಬಸವನಿಗೆ ಹಾಗು ಮಲ್ಲಿಕಾಜರ್ುನ್ ಇವರಿಗೆ ಭಾರಿ ಗಾಯಗಳು ಆಗಿರುತ್ತವೆ ಅಂತ ತಿಳಿಸಿದನು. ಆಗ ನಾನು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಿ ಗಾಯಾಳಯದಾರರಿಗೆ ವಿಚಾರಿಸಲಾಗಿ ಹೊನ್ನಪ್ಪನಿಗೆ ತಲೇಗೆ ಭಾರಿ ಗುಪ್ತಗಾಯ, ಬಲಗಡೆ ಕಾಲಿನ ಸೋಂಟದ ಗುಡುಗಿಗೆ ಭಾರಿ ಗುಪ್ತಗಾಯ, ಶರಣಬಸ್ಸವ ಈತನಿಗೆ ಬಲಗಾಲು ತೋಡೆಗೆ ಭಾರಿ ಗುಪ್ತಗಾಯ, ಎಡಗಡೆಯ ಕಪಾಳಕ್ಕೆ ತರಚಿದ ಗಾಯ, ಮಲ್ಲಿಕಾಜರ್ುನ್ ಈತನಿಗೆ ಬಲಗಡೆ ಬುಜಕ್ಕೆ ರಕ್ತಗಾಯ, ಬಲಗಡೆ ಮೋಳಕಾಲು ಚಿಪ್ಪಿಗೆ ಭಾರಿ ರಕ್ತಗಾಯ, ಬಲಗಡೆ ಹಣೆಗೆ ತರಚಿದ ಗಾಯವಾಗಿದ್ದು ಇರುತ್ತದೆ. ಆಗ ನಾನು ಮತ್ತು ಚಂದ್ರಶೇಖರ ಇಬ್ಬರು ಕೂಡಿ ಒಂದು ವಾಹನದಲ್ಲಿ ಹೋನ್ನಪ್ಪನಿಗೆ, ಶರಣಬಸವನಿಗೆ, ಮಲ್ಲಿಕಾಜರ್ುನ ಇವರಿಗೆ ಉಪಚಾರ ಕುರಿತು ಅಲ್ಲೆ ಹೋರಟಿದ್ದ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಮಾಡಿದು ಇರುತ್ತದೆ. ಉಪಚಾರ ಮಾಡಿದ ಅಲ್ಲಿಯ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಹೊನ್ನಪ್ಪನಿಗೆ, ಒಂದು ಅಂಬುಲೇನ್ಸದಲ್ಲಿ ಮತ್ತು ಚಂದ್ರಶೇಖರ ಈತನು ಶರಣಬಸವನಿಗೆ, ಮಲ್ಲಿಕಾಜರ್ುನ್ ಇವರಿಗೆ ಒಂದು ಅಂಬುಲೇನ್ಸ್ದಲ್ಲಿ ಕರೆದುಕೊಂಡು ಬಂದು ಕಲಬುರಗಿಯ ಮನೂರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತ ಫೋನ ಮಾಡಿ ತಿಳಿಸದನು. ಆಗ ನಾನು ಬೆಂಗಳೂರಿನಿಂದ ಕಲಬುರಗಿಯ ಆಸ್ಪತ್ರೆಗೆ ಬಂದು ನನ್ನ ತಮ್ಮ ಹೋನ್ನಪ್ಪನಿಗೆ ಮತ್ತು ಶರಣಬಸವನಿಗೆ ಹಾಗೂ ಮಲ್ಲಿಕಾಜರ್ುನ ಇವರಿಗೆ ನೋಡಿ ವಿಚಾರಿಸಿದ್ದು ಇರುತ್ತದೆ. ಗಾಯಾಳುದಾರರಿಗೆ ಉಪಚಾರ ಮಾಡಿಸುವುದು ಅವಶ್ಯಕವಾಗಿದ್ದರಿಂದ ಉಪಚಾರ ಮಾಡಿಸಿ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ.
ಕಾರಣ ನಮ್ಮ ಮೋಟರ್ ಸೈಕಲ್ ನಂ ಕೆಎ-33 ಎಲ್-9951 ನೇದ್ದಕ್ಕೆ ಗುದ್ದಿ ಅಪಘಾತಮಾಡಿ ಹೋನ್ನಪ್ಪನಿಗೆ, ಶರಣಬಸವನಿಗೆ, ಮಲ್ಲಿಕಾಜರ್ುನ ಇವರಿಗ ಭಾರಿ ಗಾಯಮಾಡಿ ಹೋಗಿದ್ದ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 31/2022 ಕಲಂ: 279, 338, ಐಪಿಸಿ ಮತ್ತು 187 ಐ.ಎಂ.ವಿ. ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

 


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 40/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 28/02/2022 ರಂದು 7.00 ಪಿಎಂ ಕ್ಕೆ ಮಾನ್ಯ ಶ್ರೀ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 28.02.2022 ರಂದು 4.15 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕರಡಕಲ್ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಆನಂದ ಪಿಸಿ 43. ಹುಲಿಗೆಪ್ಪ ಪಿಸಿ 340, ಶಿವಲಿಂಗಪ್ಪ ಹೆಚ್.ಸಿ 185 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಒಂದು ಖಾಸಗಿ ಜೀಪಿನಲ್ಲಿ ಠಾಣೆಯಿಂದ 4.20 ಪಿಎಂ ಕ್ಕೆ ಹೊರಟು 4.55 ಪಿಎಂ ಕ್ಕೆ ಕರಡಕಲ್ ಗ್ರಾಮಕ್ಕೆ ಹೋಗಿ ಕರಡಕಲ್ ಗ್ರಾಮದ ಹನುಮಾನ ದೇವರ ಹುಡಿಯ ಹತ್ತಿರ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು 5.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿ ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶರಣಪ್ಪ ತಂದೆ ಪಾಮಯ್ಯ ಕಾಡಮಗೇರಾ ವ|| 40 ಜಾ|| ಬೇಡರ ಉ|| ಕೂಲಿ ಸಾ|| ಕರಡಕಲ್ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 550/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.00 ಪಿಎಂ ದಿಂದ 6.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಜಪ್ತಿ ಪಂಚನಾಮೆಯ ಸಮೇತ ಕೆಂಭಾವಿ ಠಾಣೆಗೆ 7.00 ಪಿಎಂ ಕ್ಕೆ ಬಂದು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 40/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ:46/2022 ಕಲಂ: 143, 147, 323, 504, 506, 498(ಎ) ಸಂಗಡ149ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 : ದಿನಾಂಕಃ 28/02/2022 ರಂದು 8-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಪರಹತ್ಗಂಡಇಸ್ರಾರ್ಇನಾಮದಾರ, ಸಾ: ಪಾಶಾಪಟ್ಟಿಗಲ್ಲಿ ವಿಜಯಪೂರ, ಹಾ.ವ: ದಖನಿ ಮೊಹಲ್ಲಾ ಸುರಪೂರಇವರುಠಾಣೆಗೆ ಹಾಜರಾಗಿದೂರುಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಮದುವೆಯು ದಿನಾಂಕಃ 26-04-2007 ರಂದು ನನ್ನತವರು ಮನೆಯಾದ ಸುರಪೂರದಖನಿ ಮೊಹಾಲ್ಲಾದಲ್ಲಿ ವಿಜಯಪುರದಇಸ್ರಾರ್ತಂದೆ ಪೀರಪಾಶಾಇನಾಮದಾರಇವರೊಂದಿಗೆ ನಮ್ಮಇಸ್ಲಾಂಧರ್ಮದ ಪ್ರಕಾರಜರುಗಿದ್ದುಇರುತ್ತದೆ. ಮದುವೆಯ ಸಮಯದಲ್ಲಿ ನನ್ನತಂದೆ ತಾಯಿಗಳು ತಮ್ಮ ಸ್ವಂತಖಚರ್ಿನಿಂದ ಸುಮಾರು 2 ಲಕ್ಷರೂಪಾಯಿ ಹಣಖಚರ್ು ಮಾಡಿ ಮದುವೆ ಮಾಡಿದ್ದಲ್ಲದೆ ವರದಕ್ಷಿಣೆಯಂತೆ 21 ಸಾವಿರ ರೂಪಾಯಿಗಳು ಹಾಗು 1 ತೊಲೆ 5 ಗ್ರಾಂ ಬಂಗಾರ, ಒಡವೆ ವರನಿಗೆ ನೀಡಿದ್ದುಇರುತ್ತದೆ. ನನ್ನತಂದೆ-ತಾಯಿಯವರು ಗೃಹ ಉಪಯೋಗಿ ವಸ್ತುಗಳಿಗೆ 1 ಲಕ್ಷ 50 ಸಾವಿರ ರೂಪಾಯಿಗಳು ಹಣಖಚರ್ು ಮಾಡಿ ನನ್ನ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ನಾನು ನನ್ನಗಂಡನಜೊತೆಗೆ ವಿಜಯಪುರದಲ್ಲಿ ಸುಮಾರು 5 ವರ್ಷಗಳವರೆಗೆ ಅನೋನ್ಯವಾಗಿ ವೈವಾಹಿಕ ಜೀವನ ನಡೆಸಿದ್ದು ಇರುತ್ತದೆ. ನಮ್ಮ ವೈವಾಹಿಕ ಜೀವನದಿಂದ ಈಗ ನಮಗೆ ನಾಲ್ಕು ಜನ ಮಕ್ಕಳು ಇರುತ್ತಾರೆ. 1) ರಹೇನಾ 14 ವರ್ಷ, 2) ಅಫನಾ 11 ವರ್ಷ, 3) ಮಸ್ಕೂರ 10 ವರ್ಷ, 4) ಅಯಾನ 7 ವರ್ಷ. ಐದು ವರ್ಷದ ನಂತರ ನನ್ನಗಂಡನ ನಡತೆಯಲ್ಲಿ ಬದಲಾವಣೆಕಂಡು ಬಂದಿದ್ದು ನನಗೆ ಸಣ್ಣ-ಪುಟ್ಟ ವಿಷಯಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ನೀನು ನಿನ್ನತವರು ಮನೆಯಿಂದ ಏನು ತಂದಿದ್ದಿಯಾ ಕೇವಲ 21 ಸಾವಿರ ರೂಪಾಯಿಗಳು ಮತ್ತು 1 ತೊಲೆ 5 ಗ್ರಾಂ ಬಂಗಾರಕೊಟ್ಟಿದ್ದಾರೆ. ನಮ್ಮ ಸ್ಥಾನಮಾನಕ್ಕೆತಕ್ಕಂತೆ ವರದಕ್ಷಿಣೆಕೊಟ್ಟಿಲ್ಲ. ಇನ್ನು 2 ಲಕ್ಷರೂಪಾಯಿ ವರದಕ್ಷಿಣೆ ನಿನ್ನತವರು ಮನೆಯಿಂದತರುವಂತೆ ಕಿರುಕುಳ ನೀಡುತ್ತಾ ಬಂದಿದ್ದು, ಆದರೂ ಸಹ ನಾನು ನನ್ನ ಮಕ್ಕಳ ಭವಿಷ್ಯದಕುರಿತುಚಿಂತಿಸುತ್ತಾಅವರುಕೊಡುವ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದುಇರುತ್ತದೆ. ಆದರೂ ಸಹಿತ ನನ್ನಗಂಡನ ಕಿರುಕುಳ ಅತಿಯಾಗಿ ಅವನ ಕೃತ್ಯಕ್ಕೆ, ಅವನ ಸಹೋದರ ಸದ್ದಾಂ, ಅತ್ತೆ ತಹಸೀನ್, ನಾದಿನಿಯರಾದಅಪ್ರೋಜ್ ಮತ್ತು ಸುಮಯ್ಯಇವರು ಕೈ ಜೋಡಿಸಿ ನನಗೆ ದಿನ ನಿತ್ಯ ನಿಂದಿಸುವುದು, ಕೈಯಿಂದ ಹೊಡೆಬಡೆ ಮಾಡುವದು, ನೀನು ಸರಿಯಾಗಿ ಮನೆಕೆಲಸ ಮಾಡುವದಿಲ್ಲ ಅಂತ ಮಾನಸಿಕ ಹಿಂಸೆ ನೀಡುತ್ತ ಬಂದಿದ್ದುಇರುತ್ತದೆ. ನಾನು ಅವರೆಲ್ಲರ ಕಿರುಕುಳ ಅತಿಯಾದಾಗ ನಾನು ಈ ವಿಷಯವನ್ನು ನನ್ನತಂದೆ-ತಾಯಿಗೆ ಹೇಳಲು ಮುಂದಾದಾಗ ನೀನೇನಾದರೂ ಈ ವಿಷಯವನ್ನು ನಿನ್ನ ತಂದೆ-ತಾಯಿಗಳಿಗೆ ತಿಳಿಸಿದ್ದಲ್ಲಿ ನಿನ್ನನ್ನುಜೀವ ಸಹಿತ ಬಿಡುವದಿಲ್ಲ ಅಂತಜೀವಭಯ ಹಾಕುತ್ತಿದ್ದರು. ನಾನು ಆರೋಪಿಗಳ ಸ್ವಭಾವಗಳ ಇಂದಲ್ಲಾ ನಾಳೆ ಸುಧಾರಿಸುತ್ತಾರೆಂಬ ಮನೋಭಾವನೆಯಿಂದಇಲ್ಲಿಯವರೆಗೂ ತಾಳ್ಮೆಯಿಂದ ಅವರೊಂದಿಗೆಜೀವನ ನಡೆಸುತ್ತ ಬಂದಿರುತ್ತೇನೆ.ನಾನು ಸದರಿಯವರ ಕಿರುಕುಳ ಮಿತಿಮೀರಿದಾಗ ವಿಷಯವನ್ನು ನನ್ನತಂದೆಅಬ್ದುಲ್ಅಜೀಜ್ ಮತ್ತು ನನ್ನ ಸಹೋದರರಾದಅಬ್ದುಲ್ರೌಫ್, ಅಬ್ದುಲ್ಅಲ್ತಾಫ್ ಮತ್ತು ಸುರಪೂರದ ನಮ್ಮಓಣಿಯ ಹಿರಿಯರಾದ ಸೈಯ್ಯದ ನವಾಜ್ ಮತ್ತು ಸಲೀಂ ಎಲ್ಲರೂ ಸೇರಿ ನವ್ಹಂಬರ ತಿಂಗಳ 2021 ರಕೊನೆಯ ವಾರದಲ್ಲಿ ವಿಜಯಪೂರಕ್ಕೆ ಬಂದು ನನ್ನಗಂಡ, ಅತ್ತೆ, ಮೈದುನ ನಾದಿನಿಯರಿಗೆ ಬುದ್ದಿಮಾತು ಹೇಳಿ ನನಗೆ ಕಿರುಕುಳ ನೀಡದಂತೆ ತಿಳಿ ಹೇಳಿದ್ದರು. ಆದರೂ ಸಹಿತ ನನ್ನಗಂಡ ಮತ್ತು ಮೈದುನನಾದ ಸದ್ದಾಮ ಇವರುಗಳು ತಿಳಿಹೇಳಲು ಬಂದ ನನ್ನತಂದೆ, ನನ್ನ ಸಹೋದರರಿಗೆ ಮತ್ತು ಹಿರಿಯರಿಗೆ ನಿವ್ಯಾರು ನಮಗೆ ಬುದ್ದಿ ಹೇಳಾಕ, ಇನ್ನೊಂದು ಬಾರಿ ಬಂದರೆ ನಿಮ್ಮ ಕಾಲು ತಗೆದು ಕಳುಹಿಸುತ್ತೇವೆ ಅಂತಾ ಬೆದರಿಕೆ ಹಾಕಿದರು. ಆದರೂ ಸಹಿತ ನನ್ನತಂದೆ ಮತ್ತು ಹಿರಿಯರು ಸುಮ್ಮನಾಗಿ ಹೋಗಿದ್ದರು. ಇದಾದ ನಂತರ ನನ್ನಗಂಡ ಮೈದುನ, ಅತ್ತೆ ನಾದಿನಿಯರು ನನ್ನೊಂದಿಗೆ ಜಗಳವಾಡುತ್ತ, ಬೈಯ್ಯತ್ತ ಮಾನಸಿಕ, ದೈಹಿಕ ಕಿರುಕುಳ ನೀಡಿ ನಿನಗೆ ಸೊಕ್ಕು ಬಂದಿದೆ, ನಾವು ಹೇಳಿದಂತೆ 2 ಲಕ್ಷರೂಪಾಯಿ ವರದಕ್ಷಿಣೆ ಹಣಇನ್ನುತಂದುಕೊಟ್ಟಿಲ್ಲ. ಆದರೂ ನೀನು ನಿಮ್ಮತಂದೆ, ಸಹೋದರರು ಮತ್ತು ಹಿರಿಯರನ್ನು ಕರೆಯಿಸಿ ನಮಗೆ ಬುದ್ದಿಮಾತು ಹೇಳಿಸುತ್ತಿದಿ ನಿನಗೆ ನಾಚಿಕೆಇದ್ದರೆತವರು ಮನೆಗೆ ಹೋಗಿ ನಾವು ಹೇಳಿದಂತೆ 2 ಲಕ್ಷರೂಪಾಯಿ ವರದಕ್ಷಿಣೆ ಹಣತರುವಂತೆ ನನಗೆ ಡಿಸೆಂಬರ 2021 ರಂದು ಮನೆಯಿಂದ ಹೊರಹಾಕಿದರು. ಅಂದಿನಿಂದ ನಾನು ಸುರಪೂರದ ನನ್ನತಂದೆ-ತಾಯಿಯ ಮನೆಯಲ್ಲಿ ನನ್ನ ಮಗನಾದಆಯಾನ್ ವಾಸ ಮಾಡುತ್ತಿದ್ದು, ಆದರೆ ಉಳಿದ ಮೂರು ಮಕ್ಕಳನ್ನು ನನ್ನಗಂಡ, ಅತ್ತೆ ಮತ್ತು ಮೈದುನ ನನ್ನಿಂದ ಬಲವಂತವಾಗಿ ಕಸಿದುಕೊಂಡಿದ್ದು ಇರುತ್ತದೆ. ಹೀಗಿರುವಾಗ ದಿನಾಂಕಃ 11-01-2022 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಸುರಪೂರದದಖನಿ ಮೊಹಲ್ಲಾದಲ್ಲಿರುವ ನನ್ನತಂದೆ-ತಾಯಿಯ ಮನೆಗೆ ಬಂದ್ ನನ್ನಗಂಡಇಸ್ರಾರ, ಅತ್ತೆ ತಹಸೀನ್, ಮೈದುನ ಸದ್ದಾಂ, ನಾದಿನಿಯರಾದಅಪ್ರೋಜ್, ಸುಮಯ್ಯಇವರು ಬಂದವರೆ ಮನೆಯ ಮುಂದಿನ ಹೊರಗಿದ್ದಕಂಪೌಂಡಿನಲ್ಲಿದ್ದ ನನ್ನನ್ನು ನೋಡಿದವರೆ ಎಲೇ ಸೂಳಿ ನಿನಗೆ 2 ಲಕ್ಷರೂಪಾಯಿ ಹಣತಗೆದುಕೊಂಡು ಬರುವಂತೆ ಹೇಳಿದರೂ ಇನ್ನುಇಲ್ಲೆಕುಂತಿಯಾ ಅಂತಾಅವಾಚ್ಯ ಶಬ್ದಗಳಿಂದ ಬೈದು ನನ್ನಗಂಡಇಸ್ರಾರ್ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ಅಲ್ಲೆಇದ್ದ ನನ್ನ ಮೈದುನ ಸದ್ದಾಂಇತನು ಕೈಮುಷ್ಟಿ ಮಾಡಿ ನನ್ನ ಬೆನ್ನಿಗೆ ನಾಲ್ಕೈದು ಏಟುಗಳು ಹೊಡೆದನು. ನನ್ನಅತ್ತೆ ತಹಸೀನ್ ಇವಳು ಈ ಸೂಳೆದು ಬಹಳ ಸೊಕ್ಕು ಬಂದಿದೆ. ಈಕೆಯನ್ನು ಬಿಡಬೇಡ್ರಿಅನ್ನುತ್ತಿದ್ದಾಗ ನಾದಿನಿಯರಾದಅಪ್ರೋಜ್ ಮತ್ತು ಸುಮಯ್ಯಇವರು ನನ್ನಕುದಲನ್ನು ಹಿಡಿದುಜಗ್ಗಾಡಿದರು. ಆಗ ನಾನು ಭಯದಿಂದಚಿರಾಡುತ್ತಿರುವಾಗ ಮನೆಯ ಒಳಗಡೆ ಇದ್ದ ನನ್ನತಾಯಿರಜೀಯಾಬೇಗಂ ಮತ್ತುಅದೇತಾನೆ ಹೊರಗಿನಿಂದ ಬಂದ ನನ್ನತಂದೆಅಬ್ದುಲ್ಅಜೀಜ, ನನ್ನ ಸಹೋದರರಾದಅಬ್ದುಲ್ರೌಫ್ ಮತ್ತುಅಬ್ದುಲ್ಅಲ್ತಾಫ್ ಮತ್ತು ಪಕ್ಕದ ಮನೆಯವರಾದ ಸಲೀಂ ತಂದೆಅಬ್ದುಲ್ಜಾಫರ್ ಮತ್ತು ಸೈಯ್ಯಾದ್ ನವಾಜ್ಇವರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂ ನಿನೇನಾದರೂ ಪೊಲೀಸ್ಠಾಣೆಗೆ ಹೋದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದುಜೀವಭಯ ಹಾಕಿದರು. ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 46/2022 ಕಲಂ. 143, 147, 323, 504, 506, 498(ಎ) ಸಂಗಡ 149 ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಇತ್ತೀಚಿನ ನವೀಕರಣ​ : 01-03-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080