ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-05-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 60/2021 ಕಲಂ 279, 338, 304 (ಎ) ಐಪಿಸಿ : ಇಂದು ದಿನಾಂಕ: 30-04-2022 ರಂದು 07.30 ಪಿ.ಎಮ್ ಕ್ಕೆ ಫೀರ್ಯಾಧಿ ಶ್ರೀ ಮತಿ ಚಂದಮ್ಮ ಗಂಡ ಭೀಮರಾಯ ಮೇದಾ ವ:50 ವರ್ಷ ಜಾ:ಮೇದಾರ ಉ:ಮನೆ ಕೆಲಸ ಸಾ:ಭೀಮನಳ್ಳಿ ತಾ:ಚಿತ್ತಾಪುರ ಜಿ:ಕಲಬುಗರ್ಿ. ಹೇಳಿಕೆ ಫಿರ್ಯಾಧಿ ಸಲ್ಲಿಸಿದೆನೆಂದರೆ ಇಂದು 5:30 ಪಿ.ಎಮ್. ಸುಮಾರಿಗೆ ಶಿವರಾಯ ತಂದೆ ಮಲ್ಲಪ್ಪ ಹಾದಿಮನಿ ಸಾ:ಭೀಮನಳ್ಳಿ ನನಗೆ ಪೊನ ಕರೆ ಮಾಡಿ ತಿಳಿಸಿದೆನೆಂದರೆ ಯಾದಗಿರಿ - ಸೆಡಂ ಮುಖ್ಯೆ ರಸ್ತೆಯ ಮೇಲೆ ಬಾಚವಾರ ಸಿಮಾಂತರದ ಹನುಮಾನ ದೇವರ ಗುಡಿಯ ಹತ್ತಿರ ರಸ್ತೆಯ ತಿರುವಿನಲ್ಲಿ ಬಸವರಾಜ ತಂದೆ ಭೀಮರಾಯ ಮೇದ ಈತನ ಮೊಟರ ಸೈಕಲ್ ನಂ.ಕೆಎ-50.ಇಬಿ-8806 ನೆದ್ದರ ಮೇಲೆ ಮೃತ ಬಸವರಾಜ ತಂದೆ ಬಸವಂತಪ್ಪ ಮೇದಾ ಮತ್ತು ಶಿವರಾಯ ತಂದೆ ಮಹಾದೇವಪ್ಪ ಮೇದಾ ಈ ಮೂರು ಜನರು ಯಾದಗಿರಿಯಿಂದ ಭೀಮನಳ್ಳಿ ಗೆ ಹೋಗುವಾಘ ಎದುರುಗಡೆ ಸೆಡಂ ರಸ್ತೆಯ ಕಡೆಯಿಂದ ಬೊಲೆರೋ ಪಿಕಪ್ ವಾಹನ ನಂ,ಕೆಎ-33,ಬಿ-1347 ನೆದ್ದರ ಚಾಲಕ ವಿಶ್ವನಾಥ ತಂದೆ ಬಸವರಾಜ ಈತನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೊಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಅಪಘಾತದಲ್ಲಿ ಬಸವರಾಜ ತಂದೆ ಬಸವಂತಪ್ಪ ಮೇದಾ ಮತ್ತು ಮೊಟರ್ ಸೈಕಲ್ ಸವಾರ ಬಸವರಾಜ ತಂದೆ ಭೀಮರಾಯ ಇಬ್ಬರೂ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.ಶಿವರಾಯ ತಂದೆ ಮಹಾದೇವಪ್ಪ ಮೇದಾ ಈತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಹೇಚ್ಚಿನ ಚಕಿತ್ಸೆಗೆ ಕಲಬುಗರ್ಿಗೆ ಕರೆದುಕೊಂಡು ಹೊಗಿರುತ್ತಾರೆ.ಕಾರಣ ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಅಪಘಾತ ಪಡಿಸಿದ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೋಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.60/2022 ಕಲಂ 279, 338, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 30-04-2022 ರಂದು ಸಾಯಂಕಾಲ 05-30 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಹಳಿಗೇರಾ ಗ್ರಾಮದ ಮೈಲಾಲರಿಂದ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1500=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.59/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆರ ನಂ: 33/2022 ಕಲಂ.379 ಐಪಿಸಿ : ದಿನಾಂಕ:18/04/2022 ರಂದು ಬೆಳಿಗ್ಗೆ 9.30 ಗಂಟೆಗೆ ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ:ಕೆಎ-33 ಯು-4901 ಹಿರೋ ಸ್ಪ್ಲೆಂಡರ ಪ್ಲಸ್ ನೇದ್ದನ್ನು ತೆಗೆದುಕೊಂಡು ತನ್ನ ಕೆಲಸದ ನಿಮಿತ್ಯ ಬಲಶೆಟ್ಟಿಹಾಳ ಗ್ರಾಮ್ಕಕೆ ಬಂದು ಅಲ್ಲಿ ತನ್ನ ಕೆಲಸ ಮುಗಿಸಿಕೊಂಡು, 10.30 ಎ.ಎಮ್ ಸುಮಾರಿಗೆ ಬಲಶೆಟ್ಟಿಹಾಳದ ಕನಕದಾಸ ಚೌಕ್ ಹತ್ತಿರ ರಸ್ತೆಯ ಮಗ್ಗಲಿಗೆ ನಿಂತಾಗ, ಶಾಂತಗೌಡ ಮಾಲಿಪಾಟೀಲ ಸಾ:ಚನ್ನಪಟ್ಟಣ ಈತನು ತನ್ನ ಜೀಪ್ ತೆಗೆದುಕೊಂಡು ಬಂದು ಫಿರ್ಯಾದಿಗೆ ನಿನ್ನ ಮೋಟಾರ್ ಸೈಕಲ್ ರಸ್ತೆಯ ಸೈಡಿಗೆ ನಿಲ್ಲಿಸಿ ಲಾಕ್ ಮಾಡು, ಕೊಡೇಕಲ್ಲಗೆ ಹೋಗಿ ಬರೋಣ ಅಂತಾ ಹೇಳಿದ್ದು, ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ರಸ್ತೆಯ ಮಗ್ಗಲಿಗೆ ನಿಲ್ಲಿಸಿ ಲಾಕ್ ಮಾಡಿಕೊಂಡು ಕೊಡೇಕಲ್ಲಗೆ ಜೀಪಿನಲ್ಲಿ ಹೋಗಿದ್ದು, ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ಕೊಡೇಕಲ್ಲದಿಂದ ವಾಪಸು ಬಲಶೆಟ್ಟಿಹಾಳಕ್ಕೆ ಬಂದು ಮೋಟಾರ್ ಸೈಕಲ್ ನೋಡಿದಾಗ ಸದರಿ ಮೋಟಾರ್ ಸೈಕಲ್ ಇರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಮೋಟರ್ ಸೈಕಲನ್ನು ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಫಿರ್ಯಾದಿಯ ಮೋಟರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಮೋಟಾರ್ ಸೈಕಲ್ಲನ್ನು ಪತ್ತೆ ಹಚ್ಚಿ ಕಾಯ್ದೆಸಿರಿ ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆನಂ: 62/2022 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ 29.04.2022 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಶಿವಾಜಿ ಮರಾಠ ಖಾನಾವಳಿಯನ್ನು ಮುಚ್ಚುತ್ತಿದ್ದಾಗ ಆರೋಪಿತರೆಲಾರು ಕೂಡಿಕೊಂಡು ಅಲ್ಲಿಗೆ ಹೋಗಿ ಊಟ ಕೊಡುವಂತೆ ಅವಾಚ್ಯ ಶಬ್ದಗಳೀಂದ ಬೈದಿದ್ದು ಆಗ ಫಿರ್ಯಾದಿಯು ಊಟವನ್ನು ಪಾರ್ಸಲ್ ಕೊಡುವುದಾಗಿ ಹೇಳಿದರು ಸಹ ಕೇಳದೇ ಅಲ್ಲೇ ಇದ್ದ ಪ್ಲಾಸ್ಟೀಕ್ ಚೇರ್ಗಳನ್ನು ತೆಗೆದುಕೊಂಡು ಫೀರ್ಯಾದಿಗೆ ನಡುವೆ ಮಾಡಿಕೊಂಡು ಪ್ಲಾಸ್ಟೀಕ್ ಚೇಕ್ನಿಂದ ಕೈಯಿಂದ ಹೊಡ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿಯು ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ 30.04.2022 ರಂದು ಖುದ್ದಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂಬರ 62/2022 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ 279, 337, 338 ಐಪಿಸಿ : ದಿನಾಂಕ 28.04.2022 ರಂದು ಸಂಜೆ 7:30 ಗಂಟೆಗೆ ಕೊಟಗೇರಾ-(ಎಸ್) ಹೊಸಳ್ಳಿ ಗ್ರಾಮಗಳ ನಡುವೆ ರೋಡಿನ ಮೇಲೆ ಎ-1 ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಯು-6311 ನೇದ್ದನ್ನು ಯಾದಗಿರಿ ಕಡೆಯಿಂದ ಕೊಟಗೇರಾ ಗ್ರಾಮದ ಕಡೆಗೆ ಅದೇ ರೀತಿ ಎ-2 ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಎಕ್ಸ್-3699 ಕೊಟಗೇರಾ ಕಡೆಯಿಂದ ಯಾದಗಿರ ಕಡೆಗೆ ತಮ್ಮ-ತಮ್ಮ ಮೋಟಾರು ಸೈಕಲ್ಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಅಪಘಾತ ಸಂಭವಿಸಿದ್ದು ಅದರಿ ಅಪಘಾತದಲ್ಲಿ ಎ-2 ಈತನಿಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಎ-1 ಈತನಿಗೆ ಸಾಧಾ ಸ್ವರೂಪದ ರಕ್ತಗಾಯ ಮತ್ತು ಆತನ ಹೆಂಡತಿ ಭಾಗ್ಯಶ್ರೀಗೆ ಸಾಧಾ ಸ್ವರೂಪದ ರಕ್ತಗಾಯವಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 63/2022 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 279, 338 ಐಪಿಸಿ : ಇಂದು ದಿನಾಂಕ:30/04/2022 ರಂದು 7:30 ಪಿ.ಎಂ. ಕ್ಕೆ ಶ್ರೀಮತಿ ದುರ್ಗಮ್ಮ ಗಂಡ ಹಣಮಂತ ಕೋಟೆ ವ|| 55 ವರ್ಷ ಜಾ|| ಮಾದಿಗ ಉ|| ಹೊಲಮನೆಗೆಲಸ ಸಾ|| ಸತ್ಯಂಪೇಟ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ 4 ಜನ ಹೆಣ್ಣು ಮಕ್ಕಳು, 3 ಜನ ಗಂಡು ಮಕ್ಕಳು ಒಟ್ಟು 07 ಜನ ಮಕ್ಕಳಿದ್ದು, ಇಂದು ದಿನಾಂಕ: 30/04/2022 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ನನ್ನ ಇಬ್ಬರು ಗಂಡು ಮಕ್ಕಳಾದ ಶಿವರಾಜ ತಂದೆ ಹಣಮಂತ ಕೋಟೆ ವ|| 22 ವರ್ಷ , ಮಲ್ಲಿಕಾಜರ್ುನ ತಂದೆ ಹಣಮಂತ ಕೋಟೆ ವ|| 18 ವರ್ಷ ಇಬ್ಬರು ಕೂಡಿ ಕನರ್ಾಳ ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ನಮ್ಮ ಮೋಟರ್ ಸೈಕಲ್ ನಂ. ಕೆಎ-33 ಇ-7938 ನೇದ್ದನ್ನು ಶಿವರಾಜ ಇತನು ನಡೆಸಿಕೊಂಡು, ಅವನ ಹಿಂದೆ ಮಲ್ಲಿಕಾಜರ್ುನ ಕುಳಿತುಕೊಂಡು ಹೊದರು. ನಂತರ ಮುಂಜಾನೆ 9:50 ಗಂಟೆ ಸುಮಾರಿಗೆ ನನ್ನ ಗಂಡನ ಪೋನಿಗೆ ನಮ್ಮ ದೂರದ ಸಂಬಂದಿಯಾದ ಮರೆಪ್ಪ ತಂದೆ ದೇವಿಂದ್ರಪ್ಪ ಕಟ್ಟಿಮನಿ ಸಾ|| ದೆವಾಪುರ ಇತನು ಪೊನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಹೇಮನೂರ ಗ್ರಾಮಕ್ಕೆ ಕೆಲಸದ ನಿಮಿತ್ಯ ಹೊಗುತ್ತಿದ್ದಾಗ ಅಂದಾಜು 9:30 ಎ.ಎಂ ಕ್ಕೆ ಸತ್ಯಂಪೇಟ್-ಹೆಮನುರ ಮುಖ್ಯ ರಸ್ತೆಯ ಶಖಾಪುರ ಗ್ರಾಮದ ಹತ್ತಿರ ರೋಡಿನ ಮೇಲೆ ನನ್ನ ಮುಂದೆ ರೋಡಿನ ಎಡ ಬದಿಗೆ ಒಂದು ಮೋಟರ್ ಸೈಕಲ್ ಹೊಗುತ್ತಿದ್ದು ಎದರುಗಡೆಯಿಂದ ಅಂದರೆ ಹೆಮನೂರ ಕಡೆಯಿಂದ ಒಂದು ಬೋಲೋರೊ ಮ್ಯಾಕ್ಸಿ ಟ್ರಕ್ ವಾಹನವನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮುಂದೆ ಹೊರಟಿದ್ದ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಮೋಟರ್ ಸೈಕಲ್ ಮೇಲಿದ್ದ ಇಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದರು, ನಾನು ಹೊಗಿ ನೋಡಲಾಗಿ ನನ್ನ ಸಂಬಂದಿಕರಾದ ಶಿವರಾಜ ತಂದೆ ಹಣಮಂತ ಕೋಟೆ ಮತ್ತು ಮಲ್ಲಿಕಾಜರ್ುನ ತಂದೆ ಹಣಮಂತ ಕೋಟೆ ಇವರು ಇದ್ದು, ಶಿವರಾಜ ಇತನಿಗೆ ಮೊಳಕಾಲ ಕೆಳಗೆ ಮುರಿದಂತಾಗಿ ಭಾರಿ ರಕ್ತಗಾಯವಾಗಿ, ಮುಖಕ್ಕೆ ಮತ್ತು ಅಲ್ಲಲ್ಲಿ ತರಚಿದಗಾಯವಾಗಿರುತ್ತದೆ ಮತ್ತು ಮಲ್ಲಿಕಾಜರ್ುನ ಇತನಿಗೆ ತೊಡೆಯ ಹತ್ತಿರ ಮುರಿದಂತಾಗಿ ಭಾರಿ ರಕ್ತಗಾಯವಾಗಿರುತ್ತದೆ. ಆಗ ನಾನು ಬೋಲೋರೊ ವಾಹನ ನಂಬರ ನೊಡಲಾಗಿ ಕೆಎ-18 ಬಿ-5259 ಇದ್ದು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ನಿಂಗಯ್ಯ ತಂದೆ ಮಾಹಾದೇವಪ್ಪ ಪೊಲೀಸ್ ಪಾಟೀಲ್ ಸಾ|| ಕುಪಗಲ್ ಅಂತಾ ತಿಳಿಸಿದನು, ನಿಮ್ಮ ಮೋಟರ್ ಸೈಕಲ್ ನಂ. ಕೆಎ-33 ಇ-7938 ಅಂತಾ ಇದ್ದು ಅದನ್ನು ಶಿವರಾಜ ಇತನು ನಡೆಸುತ್ತಿದ್ದನು. ನಾನು ಒಂದು ಖಾಸಗಿ ವಾಹನದಲ್ಲಿ ಸುರಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತೇನೆ ನೀವು ಆಸ್ಪತ್ರೆಗೆ ಬನ್ನಿರಿ ಅಂತಾ ತಿಳಿಸಿದಾಗ, ನಾನು ಮತ್ತು ನನ್ನ ಗಂಡ ಹಣಮಂತ ಇಬ್ಬರು ಕೂಡಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ನನ್ನ ಮಕ್ಕಳಿಗೆ ನೊಡಲಾಗಿ ಇಬ್ಬರಿಗು ಮೇಲೆ ಹೇಳಿದಂತೆ ಗಾಯಗಳು ಆಗಿದ್ದವು. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಗೆ ಹೊಗಲು ತಿಳಿಸಿದ್ದರಿಂದ ನನ್ನ ಮಕ್ಕಳನ್ನು ನನ್ನ ಗಂಡ ಹಣಮಂತ ಇತನು ಅಂಬುಲೇನ್ಸ ವಾಹನಗಳಲ್ಲಿ ಕರೆದುಕೊಂಡು ಕಲಬುರಗಿಗೆ ಹೊದನು. ನಂತರ ನಾನು, ನನ್ನ ಗಂಡ ಹಣಮಂತ ಇವರ ಜೊತೆ ಪೊನಿನಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ಬೊಲೋರೊ ವಾಹನ ನಂ. ಕೆಎ-18 ಬಿ-5259 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ ಚಾಲಕ ನಿಂಗಯ್ಯ ತಂದೆ ಮಹಾದೇವಪ್ಪ ಪೊಲೀಸ್ ಪಾಟೀಲ್ ಸಾ|| ಕುಪಗಲ್ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 66/2022 ಕಲಂ: 279, 338 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 01-05-2022 12:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080