ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-06-2022


ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ: 279, 304 (ಎ) ಐಪಿಸಿ ಸಂಗಡ 187 ಐಎಮ್ವಿ ಆಕ್ಟ್: ಇಂದು ದಿನಾಂಕ:31.05.2022 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿ ಶ್ರೀಮತಿ ಗದ್ದೆಮ್ಮ ತಂದೆ ಹಣಮಂತ ಕಾಳೇರ ವ:60 ವರ್ಷ ಉ:ಮನೆಗೆಲಸ ಜಾ:ಹಿಂದೂ ಮಾದರ ಸಾ:ಗೆದ್ದಲಮರಿ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶ ಏನೆಂದರೆ, ನನಗೆ ಭೀಮಣ್ಣ & ರಾಘವೇಂದ್ರ ಅಂತಾ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರದೂ ಮದುವೆಯಾಗಿದ್ದು, ಇಬ್ಬರೂ ತಮ್ಮ ತಮ್ಮ ಕುಟುಂಬದೊಂದಿಗೆ ಬೇರೆಯಾಗಿದ್ದು, ನಾನು ನನ್ನ ಸಣ್ಣ ಮಗನಾದ ರಾಘವೇಂದ್ರ ಈತನ ಜೊತೆಗೆ ಇರುತ್ತೇನೆ. ದಿನಾಂಕ:25.05.2022 ರಂದು ವಜ್ಜಲ ಗ್ರಾಮದಲ್ಲಿ ನಮ್ಮ ಸಂಬಂಧಿಕರಾದ ಭೀಮಣ್ಣ ದೊಡ್ಡಮನಿ ಇವರ ಮಕ್ಕಳ ಮದುವೆ ಇದ್ದುದರಿಂದ ನನ್ನ ಮಗ ರಾಘವೇಂದ್ರನು ತನ್ನ ಮೋಟರ್ ಸೈಕಲ್ ನಂ:ಕೆಎ-33 ಆರ್-3558 ನೇದ್ದರ ಮೇಲೆ ಹಾಗೂ ನಮ್ಮೂರ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ, ಸಂಜೀವಪ್ಪ ತಂದೆ ಬಸಪ್ಪ ಲಿಂಗದಳ್ಳಿ ಇವರು ತಮ್ಮ ಮೋಟರ್ ಸೈಕಲ್ ಮೇಲೆ ನಮ್ಮೂರಿನಿಂದ ಮುಂಜಾನೆ 11:00 ಗಂಟೆಯ ಸುಮಾರಿಗೆ ಮದುವೆಗೆ ಹೋಗಿದ್ದು ಇರುತ್ತದೆ. ನಂತರ ನಾನು ದಿನಾಂಕ:25.05.2022 ರಂದು 3:15 ಪಿಎಮ್ ಸುಮಾರಿಗೆ ನನ್ನ ಮಗನಾದ ಭೀಮಣ್ಣ ಈತನೊಂದಿಗೆ ಮನೆಯಲ್ಲಿದ್ದಾಗ ನನ್ನ ಮಗ ರಾಘವೇಂದ್ರನ ಜೊತೆಗೆ ವಜ್ಜಲಕ್ಕೆ ಮದುವೆಗೆ ಹೋದ ನಮ್ಮೂರ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ ಈತನು ನನ್ನ ಮಗ ಭೀಮಣ್ಣನ ಪೋನಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ವಜ್ಜಲದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಬರಲು ಬಲಶೆಟ್ಟಿಹಾಳ-ಗೆದ್ದಲಮರಿ ರಸ್ತೆಯ ಮೇಲೆ ಹೊಂಬಳಕಲ್ಲ ಕ್ರಾಸ್ ದಾಟಿ ಸ್ವಲ್ಪ ಮುಂದೆ ಆದಿ ಬಸವಣ್ಣನ ದೇವಸ್ಥಾನದ ಹತ್ತಿರ 3:00 ಪಿಎಮ್ ಸುಮಾರಿಗೆ ಬರುತ್ತಿರುವಾಗ ನಿಮ್ಮ ಮಗನು ನಮ್ಮ ಸೈಕಲ್ ಮೋಟರ್ಗಿಂತ ಸ್ವಲ್ಪ ಮುಂದೆ ಒಬ್ಬನೇ ತನ್ನ ಸೈಕಲ್ ಮೋಟರ್ ಚಲಾಯಿಸುತ್ತಾ ಹೊರಟಿದ್ದು ಅವನ ಹಿಂದುಗಡೆ ಸ್ವಲ್ಪ ಅಂತರದಲ್ಲಿ ನಾನು ನನ್ನ ಮೋಟರ್ ಸೈಕಲ್ ಹಿಂದುಗಡೆ ಸಂಜೀವಪ್ಪ ತಂದೆ ಬಸಪ್ಪ ಲಿಂಗದಳ್ಳಿ ಇವರನ್ನು ಕೂಡಿಸಿಕೊಂಡು ಹೋಗುತ್ತಿರುವಾಗ ಎದುರಿನಿಂದ ಒಂದು ಬಿಳಿಯ ಬಣ್ಣದ ಟಾಟಾ ಏಸ್ ಗೂಡ್ಸ್ ವಾಹನದ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದವನೇ ನಿಮ್ಮ ಮಗನ ಮೋಟರ್ ಸೈಕಲ್ ನಂ:ಕೆಎ-33 ಆರ್-3558 ನೇದ್ದಕ್ಕೆ ಡಿಕ್ಕಿ ಪಡಿಸಿ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಓಡಿ ಹೋಗಿದ್ದು, ನಿಮ್ಮ ಮಗ ರಾಘವೇಂದ್ರನು ಮೋಟರ್ ಸೈಕಲ್ ಸಮೇತ ಬಿದ್ದಿದ್ದು ನಾನು ನನ್ನ ಮೋಟರ್ ಸೈಕಲ್ನ್ನು ನಿಲ್ಲಿಸಿ ನನ್ನ ಮೋಟರ್ ಸೈಕಲ್ ಹಿಂದೆ ಕುಳಿತಿದ್ದ ಸಂಜೀವಪ್ಪ ಲಿಂಗದಳ್ಳಿ ಈತನೊಂದಿಗೆ ಹೋಗಿ ನೋಡಲಾಗಿ ನಿಮ್ಮ ಮಗ ರಾಘವೇಂದ್ರನ ತಲೆಯ ಮೇಲೆ ಭಾರೀ ರಕ್ತಗಾಯವಾಗಿ ರಕ್ತಸೋರಹತ್ತಿದ್ದು ಅವನು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು ನಾನು ಮತ್ತು ಸಂಜೀವಪ್ಪ ರವರು ನಿಮ್ಮ ಮಗನಿಗೆ ಉಪಚಾರಕ್ಕಾಗಿ ಹುಣಸಗಿ ಸರಕಾರಿ ಆಸ್ಪತ್ರೆಗ ಕರೆದುಕೊಂಡು ಹೋಗುತ್ತಿದ್ದೇವೆ ಕೂಡಲೇ ನೀವು ಅಲ್ಲಿಗೆ ಬರಬೇಕು ಅಂತಾ ತಿಳಿಸಿದ್ದರಿಂದ ನಾನು ನನ್ನ ಮಗ ಭೀಮಣ್ಣನೊಂದಿಗೆ ಕೂಡಲೇ ಹುಣಸಗಿ ಸರಕಾರಿ ಆಸ್ಪತ್ರೆಗ ಹೋಗಿ ನೋಡಲಾಗಿ ನನ್ನ ಮಗನ ಹತ್ತಿರ ನಮಗೆ ಪೋನ್ ಮಾಡಿದ ನಮ್ಮೂರ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ ಹಾಗೂ ಸಂಜೀವಪ್ಪ ತಂದೆ ಬಸಪ್ಪ ಲಿಂಗದಳ್ಳಿ ರವರು ಇದ್ದು, ನೋಡಲಾಗಿ ನನ್ನ ಮಗನ ತಲೆಯ ಮೇಲೆ ಭಾರೀ ರಕ್ತಗಾಯವಾಗಿದ್ದು ನನ್ನ ಮಗನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಪರಸಪ್ಪನಿಗೆ ವಿಚಾರಿಸಲಾಗಿ ಪೋನಿನಲ್ಲಿ ತಿಳಿಸಿದಂತೆ ಹೇಳಿದ್ದು ಈ ಅಪಘಾತವು ಬಿಳಿಯ ಬಣ್ಣದ ಟಾಟಾ ಏಸ್ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಸದರಿ ವಾಹನವನ್ನು ಹಾಗೂ ಚಾಲಕನನ್ನು ನೋಡಿದರೆ ಗುರುತಿಸುತ್ತೇನೆ, ವಾಹನದ ನೊಂದಣಿ ನಂಬರನ್ನು ನೋಡಿರುವುದಿಲ್ಲ ಅಂತಾ ಪರಸಪ್ಪನು ತಿಳಿಸಿದ್ದು, ನಂತರ ಹುಣಸಗಿ ಸರಕಾರಿ ಆಸ್ಪತ್ರೆಯ ವೈದ್ಯರು ನನ್ನ ಮಗ ರಾಘವೇಂದ್ರನಿಗೆ ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗ ಭೀಮಣ್ಣ ರವರು ನನ್ನ ಮಗ ರಾಘವೇಂದ್ರನಿಗೆ ದಿನಾಂಕ:25.05.2022 ರಂದು ವಿಜಯಪೂರದ ಭಾಗ್ಯವಂತಿ ಆಸ್ಪತ್ರೆಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು, ನಿನ್ನೆ ದಿನಾಂಕ:30.05.2022 ರಂದು ಮದ್ಯಾಹ್ನ 2:30 ಪಿಎಮ್ ವರೆಗೆ ವಿಜಯಪೂರದ ಭಾಗ್ಯವಂತಿ ಆಸ್ಪತ್ರೆಯಲ್ಲಿ ನನ್ನ ಮಗನಿಗೆ ಉಪಚಾರ ಮಾಡಿಸಿದ್ದು ನನ್ನ ಮಗನಿಗೆ ಗುಣವಾಗದ ಕಾರಣ ನಿನ್ನೆ ಭಾಗ್ಯವಂತಿ ಆಸ್ಪತ್ರೆಯಿಂದ ಬಿಡುಗಡೆಮಾಡಿಸಿಕೊಂಡು ವಿಜಯಪೂರದ ಶ್ರೀ ಬಸವ ಬ್ರೇನ್ & ಸ್ಪೈನ್ ಸೆಂಟರ್ ಆಸ್ಪತ್ರೆಗೆ 3:30 ಗಂಟೆಯ ಸುಮಾರಿಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು, ವಿಜಯಪೂರದ ಶ್ರೀ ಬಸವ ಬ್ರೇನ್ & ಸ್ಪೈನ್ ಸೆಂಟರ್ ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಿನ್ನೆ ರಾತ್ರಿ ಆ ಆಸ್ಪತ್ರೆಯಿಂದ ನನ್ನ ಮಗನಿಗೆ ಬಿಡುಗಡೆಮಾಡಿಕೊಂಡು ಹೆಚ್ಚಿನ ಉಪಚಾರಕ್ಕಾಗಿ ಕರೆದುಕೊಂಡು ಹೋಗುತ್ತಿದ್ದಾಗ ಇಂದು ದಿನಾಂಕ:31.05.2022 ರಂದು ಬೆಳಗಿನ ಜಾವ 3:00 ಗಂಟೆಯ ಸುಮಾರಿಗೆ ಹುಣಸಗಿ ಹತ್ತಿರ ಹೋಗುತ್ತಿರುವಾಗ ನನ್ನ ಮಗ ರಾಘವೇಂದ್ರ ತಾಯಿ ಗದ್ದೆಮ್ಮ ಕಾಳೇರ ವ:36 ವರ್ಷ ಉ:ಒಕ್ಕಲುತನ ಜಾ:ಹಿಂದೂ ಮಾದರ ಸಾ:ಗೆದ್ದಲಮರಿ ಈತನು ಮೃತಪಟ್ಟಿದ್ದು, ನಂತರ ನನ್ನ ಮಗನ ಶವವನ್ನು ನಮ್ಮೂರಿಗೆ ತಂದು ನಮ್ಮ ಮನೆಯ ಮುಂದೆ ಹಾಕಿದ್ದು ಈ ಅಪಘಾತವು ಬಿಳಿಯ ಬಣ್ಣದ ಟಾಟಾ ಏಸ್ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಸದರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:44/2022 ಕಲಂ: 279, 304 (ಎ) ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 31/05/2022 ರಂದು 4.30 ಪಿಎಂ ಕ್ಕೆ ಮಾನ್ಯ ಶ್ರೀ ಬಾಪುಗೌಡ ಪಾಟೀಲ್ ಆರಕ್ಷಕ ನಿರೀಕ್ಷಕರು ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ 31/05/2022 ರಂದು 2.00 ಪಿಎಂ ಕ್ಕೆ ಕೆಂಭಾವಿ ಪೊಲೀಸ್ ಠಾಣೆಗೆ ವಿಶೇಷ ಕರ್ತವ್ಯದ ಮೇಲೆ ಬಂದು ಕೆಂಭಾವಿ ಠಾಣೆಯಲ್ಲಿದ್ದಾಗ ಶಖಾಪೂರ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಕೆಂಭಾವಿ ಠಾಣೆಯ ಶಿವರಾಜ ಹೆಚ್.ಸಿ 85 ಮತ್ತು ಆನಂದ ಪಿಸಿ 43 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ಕೆಂಭಾವಿ ಠಾಣೆಯಿಂದ 2.15 ಪಿಎಂ ಕ್ಕೆ ಹೊರಟು ಶಖಾಪೂರ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ 2.35 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 2.40 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮಣ ತಂದೆ ರಂಗಪ್ಪ ಚಿಗಿರಿಹಾಳ ವ|| 25 ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಶಖಾಪೂರ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 2700/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 2.40 ಪಿಎಂ ದಿಂದ 3.40 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯ ಸಮೇತ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಸೂಚಿಸಿದ ಮೇರೆಗೆ ಸದರಿ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 91/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಭೀ.ಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ 78(3) ಕೆ.ಪಿ. ಎಕ್ಟ್ : ಇಂದು ದಿನಾಂಕ:31/05/2022 ರಂದು 5.30 ಪಿ.ಎಮ್ ಕ್ಕೆ ಶಕಾಪೂರಗ್ರಾಮದ ವಿಶ್ವರಾಧ್ಯ ಮಠದ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 1360=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 6.30 ಪಿ.ಎಮ್ ದಿಂದ 7.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 8 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ: 31.05.2022 ರಂದು ಸಾಯಂಕಾಲ 6.00 ಗಂಟೆಗೆ ವಿಜಯಕುಮಾರ ಪಿ.ಐ ಸಾಹೇಬರು ಸ್ಥಳಿಯ ಸ್ಟೇಷನ್ ಸೈದಾಪುರದ ಹಲಾಯಿ ಪೀರ ಮಸೀದಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ನೀಡಿ ಜಪ್ತಿಪಂಚನಾಮೆ ಮತ್ತು ಮುದ್ದೆಮಾಲು ಠಾಣೆಗೆ ಹಾಜರಪಡಿಸಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ನೀಡಿದ್ದರ ಸಾರಾಂಶವೇನೆಂದರೆ, ಸ್ಟೇಷನ್ ಸೈದಾಪುರದ ರೈಲ್ವೆ ಸ್ಟೇಷನ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ನಾರಾಯಣ ತಂದೆ ಕಿಶನರಾವ ವಯ|| 41 ವರ್ಷ, ಜಾ|| ಆರ್ಯ ಕಟಗರ ಉ|| ಕೂಲಿ ಸಾ|| ಸೈದಾಪೂರ ತಾ||ಜಿ|| ಯಾದಗಿರಿ ಹೋಗಿ ಬರುವ ಸಾರ್ವಜನಿಕರಿಗೆ ಮಟಕಾ ಜೂಜಾಟದ ನಂಬರ ಬರೆಸಿ 1 ರೂಪಾಯಿಗೆ 80 ರೂಪಾಯಿಗಳು ಸಿಗುತ್ತವೆ ಇದು ದೈವಲೀಲೆ ಆಟ ಅಂತಾ ಕೂಗುತ್ತ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆಯುತ್ತಿದ್ದಾಗ ಪಂಚರ ಸಮಕ್ಷಮ ದಾಳಿಮಾಡಿ ಕಾನೂನು ಕ್ರಮ ಕೈಗೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ: 31.05.2022 ರಂದು 7.00 ಪಿ.ಎಮ್.ಕ್ಕೆ ಹಣಮಂತ್ರಾಯ ಪಿ.ಎಸ್.ಐ ಸಾಹೇಬರು ಸ್ಥಳಿಯ ಸ್ಟೇಷನ್ ಸೈದಾಪುರದ ರೇಣುಕಾ ವೈನಶಾಪ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ನೀಡಿ ಜಪ್ತಿಪಂಚನಾಮೆ ಮತ್ತು ಮುದ್ದೆಮಾಲು ಠಾಣೆಗೆ ಹಾಜರಪಡಿಸಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ನೀಡಿದ್ದರ ಸಾರಾಂಶವೇನೆಂದರೆ, ಸ್ಟೇಷನ್ ಸೈದಾಪುರದ ರೇಣುಕಾ ವೈನಶಾಪ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಚಂದಪ್ಪ ತಂದೆ ಮಲ್ಲಪ್ಪ ಪೂಜಾರಿ ವಯ|| 19 ವರ್ಷ, ಜಾ|| ಕುರುಬರ ಉ|| ಕೂಲಿ ಸಾ|| ಸ್ಟೇಶನ ಏರಿಯಾ ಯಾದಗಿರಿ ಹೋಗಿ ಬರುವ ಸಾರ್ವಜನಿಕರಿಗೆ ಮಟಕಾ ಜೂಜಾಟದ ನಂಬರ ಬರೆಸಿ 1 ರೂಪಾಯಿಗೆ 80 ರೂಪಾಯಿಗಳು ಸಿಗುತ್ತವೆ ಇದು ದೈವಲೀಲೆ ಆಟ ಅಂತಾ ಕೂಗುತ್ತ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆಯುತ್ತಿದ್ದಾಗ ಪಂಚರ ಸಮಕ್ಷಮ ದಾಳಿಮಾಡಿ ಕಾನೂನು ಕ್ರಮ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 01-06-2022 11:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080