ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01-07-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 81/2021 ಕಲಂ: 341, 504, 506 ಐಪಿಸಿ : ಇಂದು ದಿನಾಂಕ:30/06/2021 ರಂದು 5-15 ಪಿಎಮ್ ಕ್ಕೆ ಶ್ರೀಮತಿ ಶರಣಮ್ಮ ಗಂಡ ದಿ:ನಾಗಪ್ಪ @ ನಾಗರೆಡ್ಡಿಗೌಡ ವಡಗೇರಾ ಸಾ:ಗೋಡಿಹಾಳ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಹೀಗೆ ಸುಮಾರು 2017 ರಲ್ಲಿ ನನ್ನ ಗಂಡ ಗಂಡ ದಿವಂಗತರಾಗಿರುತ್ತಾರೆ. ನಮಗೆ ಒಬ್ಬ ಮಗ ಅಮೀನರೆಡ್ಡಿ ಈತನು ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಒಬ್ಬ ಮಗಳು ಮದುವೆ ಮಾಡಿಕೊಟ್ಟಿರುತ್ತೇವೆ. ನನಗೆ ಸಂಬಂದಿಸಿದ ಜಮೀನನ್ನು ಉಳುಮೆ ಮಾಡಲು ವಯಸ್ಸಾದ ಕಾರಣ ನಮ್ಮ ಹೊಲಗಳನ್ನು ಸವರ್ೆ ನಂಬರ 8 ಮತ್ತು ಸವರ್ೆ ನಂಬರ 116 ರ ಜಮೀನುಗಳನ್ನು ನಮ್ಮ ಊರಿನ ವಿಶ್ವನಾಥರೆಡ್ಡಿ ತಂದೆ ಶರಣಪ್ಪ ರಾಮನಾಳ ಈತನಿಗೆ ಲೀಸಿಗೆ ಪಾಲಿಗೆ ಪ್ರತಿ ವರ್ಷದಂತೆ 2 ಲಕ್ಷ ರೂಪಾಯಿಗಳಿಗೆ ಹಾಕಿರುತ್ತೇನೆ. ಹೀಗೆ ನನ್ನ ಮೈದುನನ ಗಂಡನ ತಮ್ಮ ಮಗನಾದ ಶಿವಪ್ಪ @ ಶಿವರಾಜ ತಂದೆ ಶರಣಪ್ಪ ಈತನು ನನಗೆ ಹಲವಾರು ಸುಮಾರು ವರ್ಷಗಳಿಂದ ತಂಟೆ ತಕರಾರು ಜಗಳ ಮಾಡುತ್ತಾ ಬಂದಿದ್ದರೂ ಹೀಗೆ 2018 ರಲ್ಲಿ ಈತನ ಮೇಲೆ ಒಂದು ಪ್ರಕರಣ ದಾಖಲಾಗಿರುತ್ತದೆ. ಅದು ಪ್ರ.ವ.ವ. ದಿನಾಂಕ: 09/08/2018 ಅಪರಾಧ ಸಂಖ್ಯೆ 173/2018 ವಡಗೇರಾ ಪಿಎಸ್,ದಿ ಸಿವಿಲ್ ಜಡ್ಜ್ ಅಂಡ ಜೆಎಮ್ಎಫಸಿ (ಜೂ.ಡಿ) ಕೋರ್ಟ ಶಹಾಪೂರು ಸಿ.ಸಿ ನಂಬರ: 404/2019 ರಂತೆ ದಾಖಲಾಗಿರುತ್ತದೆ. ಮತ್ತು ಈಗ ನನ್ನ ಮೇಲೆ ದೌರ್ಜನ್ಯ ಮಾಡುತ್ತಾ ಜೀವ ಬೆದರಿಕೆ ಹಾಕಿ ಈ ಮೊದಲಿನ ಪ್ರಕರಣವನ್ನು ತೆಗೆಸು ತೆಗೆಸದೆ ಇದ್ದರೆ ನಿನ್ನ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ನಮ್ಮ ಮನೆಯಲ್ಲಿ ಬಂದು ಜಗಳ ಗಲಾಟೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಮತ್ತು ಭೂಮಿ ಎಲ್ಲಾ ನನಗೆ ಬಿಟ್ಟುಕೊಡದೇ ಇದ್ದರೆ ನಿನ್ನ ಜೀವಂತ ಕೊಲ್ಲುತ್ತೇನೆ ಅಂತಾ ಜೀವಬೆದರಿಕೆ ಹಾಕಿರುತ್ತಾನೆ. ಹಾಗೂ ನಮ್ಮ ಜಮೀನುಗಳನ್ನು ಉಳುಮೆ ಮಾಡದೇ ಹಾಗೆ ವಿಶ್ವನಾಥರೆಡ್ಡಿಗೆ ಹೆದರಿಸಿ ಹೊಲಗಳನ್ನು ಉಳುಮೆ ಮಾಡದೆ ಹಾಗೇ ತಡೆದಿರುತ್ತಾನೆ ಹಾಗೂ ಆತನಿಗೆ ಬೇರೆ ಬೇರೆಯವರ ಮುಖಾಂತರ ಹಾಗೂ ತಾನೇ ನೇರವಾಗಿ ಈ ಭೂಮಿಗಳನ್ನು ಯಾರು ಪಾಲಿಗೆ ಉಳುಮೆ ಮಾಡಬಾರದು ಮಾಡಿದರೆ ನಾನು ಅವರೆಲ್ಲರಿಗೂ ಮತ್ತು ನಿಮಗೂ ಜೀವಂತ ಬಿಡುವುದಿಲ್ಲ ಅಂತಾ ವಿಶ್ವನಾಥರೆಡ್ಡಿಗೆ ಜೀವ ಬೆದರಿಕೆ ಹಾಕಿ ಹೊಲಗಳನ್ನು ಉಳುಮೆ ಮಾಡದ ಹಾಗೆ ತಡೆದಿರುತ್ತಾನೆ. ದಿನಾಂಕ:17/06/2021 ರಂದು ಬೆಳಗ್ಗೆ 8-30 ಎಎಮ್ ಸುಮಾರಿಗೆ ಮನೆ ಮುಂದೆ ನಿಂತಾಗ ಆರೋಪಿತನು ಜಗಳ ಮಾಡಿರುತ್ತಾನೆ. ಆದ ಕಾರಣ ಈ ಆರೋಪಿತನ ಶಿವಪ್ಪನ ಮೇಲೆ ಬೇರೆ ಬೇರೆ ವಿವಿಧ ಪ್ರಕರಣಳಿದ್ದು 1)ಎಫ್.ಐ ಆರ್ ನಂ:143/2015 ಮತ್ತು 2) ಎಂ. ಓ.ಬಿ ಪ್ರಕರಣಗಳು, 3)ಸಿಸಿ. ನಂಬರ:404/2019 ಈತನು ಮೊದಲಿನಿಂದಲೂ ನನಗೆ ಮತ್ತು ನಮ್ಮ ಹೊಲ ಜಮೀನುಗಳನ್ನು ಉಳುಮೆ ಮಾಡುವವರಿಗೆ ಹೆದರಿಸುತ್ತಾ, ಬೆದರಿಸುತ್ತಾ ಜೀವ ಬೆದರಿಕೆ ಹಾಕಿ ಇತರರು ಯಾರೂ ಕೂಡ ಉಳುಮೆ ಮಾಡದ ಹಾಗೆ ತಡೆಯೊಡ್ಡಿ ತಾನೇ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಹೊಲದಲ್ಲಿ ನಡೆಯುವ ಕೆಲಸಗಳಿಗೆ ತಡೆಯೊಡ್ಡಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನಮ್ಮ ಹೊಲಗಳಿಗೆ ಹೋಗುವಾಗ ಬರುವಾಗ ದಾರಿ ಬಿಡದೇ ಮತ್ತು ನಮಗೆ ಬೇರೆಯವರಿಂದ ಅಂದರೆ ಅಕ್ಕ ಪಕ್ಕದವರಿಗೆ ಸಹಿತ ಇವವರಿಗೆ ದಾರಿ ಬೀಡಬೇಡಿ ಅಂತಾ ದಾರಿ ತಪ್ಪಿಸಿ ಒತ್ತಾಯಪಡಿಸಿರುತ್ತಾನೆ. ಹಾಗೂ ಅವರಿಗೂ ಸಹಿತ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಹಾಗಾಗಿ ನಾನು ಮಾನಸಿಕವಾಗಿ ನೊಂದು ನನ್ನ ಮೇಲೆ ಜೀವ ಬೆದರಿಕೆ ಇರುವದರಿಂದ ಹೆದರಿಕೊಂಡು ಸ್ವಂತ ಊರಾದ ಗೋಡಿಹಾಳ ಗ್ರಾಮವನ್ನು ಬಿಟ್ಟು ತೊರೆದು ಯಾದಗಿರಿಯಲ್ಲಿ ವಾಸವಾಗಿರುತ್ತೇನೆ. ಈತನು ಅಂದರೆ ಶಿವಪ್ಪನು ನಮ್ಮ ಜಮೀನುಗಳನ್ನು ಲಪಟಾಯಿಸಲು ಅಂದರೆ ನುಂಗಿ ಹಾಕಲು ಹುನ್ನಾರ ಹೋಂದಿರುತ್ತಾನೆ. ನಮ್ಮ ಜಮೀನುಗಳು ಈಗಾಗಲೇ ಸುಮಾರು ವರ್ಷಗಳಿಂದಲೇ ಭಾಗಗಳಾಗಿರುತ್ತವೆ/ಪಾಲುಗಳಾಗಿರುತ್ತವೆ ಆರೋಪಿಯು ನಮ್ಮ ಜಮೀನು: ಭೂಮಿಯನ್ನು ಕಬಳಿಸುವ ಏಕ ಉದ್ದೇಶ ಹೊಂದಿರುತ್ತಾನೆ ಹಾಗಾಗಿ ತಾವುಗಳು ನನ್ನ ಹಾಗೂ ನನ್ನ ಕುಟುಂಬಕ್ಕೆ ಮತ್ತು ಲೀಜುದಾರನಿಗೂ ಸೂಕ್ತ ರಕ್ಷಣೆಯನ್ನು ಕೊಟ್ಟು ನಮ್ಮ ಭೂಮಿ ಜಮೀನುಗಳನ್ನು ಉಳುಮೆ ಮಾಡುವಂತೆ ನಮಗೆ ಅನುಕೂಲ ಮಾಡಿ ಕೊಡಬೇಕಾಗಿ ತಮ್ಮಲ್ಲಿ ನಮ್ಮ ಕಳಕಳಿಯ ವಿನಂತಿ. ಹಾಗೆಯೇ ಆರೋಪಿಯನ್ನು ಸೂಕ್ತ ಕಾನೂನು ಕ್ರಮ ಕೈಗೊಂಡು ಆತನ ಮೇಲೆ ಪ್ರಕರಣ ದಾಖಲಿಸಿ ನಮಗೆ ನ್ಯಾಯಕೊಡಿಸಲು ತಮ್ಮಲ್ಲಿ ಮನವಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 81/2021 ಕಲಂ:341, 504, 506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 82/2021 ಕಲಂ: 447, 427 ಐಪಿಸಿ : ದಿನಾಂಕ:30/06/2021 ರಂದು 6-45 ಪಿಎಮ್ ಕ್ಕೆ ಶ್ರೀ ಚನ್ನಾರೆಡ್ಡಿ ತಂದೆ ಸಿದ್ದಣ್ಣ ಕುಲಕಣರ್ಿ, ವ:65 ವರ್ಷ ಸಾ:ಕೋಡಾಲ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ಕಬ್ಜೆಯಲ್ಲಿರುವ ಸವರ್ೆ ನಂ. 221 ವಿಸ್ತೀರ್ಣ 12 ಎಕರೆ 37 ಗುಂಟೆ ಕೋಡಾಲ ಸೀಮಾಂತರದಲ್ಲಿರುವ ಸಾಗುವಳಿ ಜಮೀನು ಸುಮಾರು 50 ವರ್ಷಗಳಿಂದ ನಾನೇ ಸಾಗುವಳಿ ಮಾಡುತ್ತಿದ್ದು, ಸದರಿ ಜಮೀನಿನ ಬದಿಯಲ್ಲಿ ನಾನು ಹಾಕಿರುವ ಕಲ್ಲಿನ ಕಂಬ, ಕಬ್ಬಿಣ ಕಂಬ, ಜಾಲಿ, ಮುಳ್ಳು ತಂತಿ ಹಾಗೂ ಹೊಲದಲ್ಲಿ ಬೆಳೆದಿರುವ ಮಾವಿನ ಗಿಡಗಳು, ಶ್ರೀಗಂಧ ಗಿಡಗಳು ಮತ್ತು ಇನ್ನಿತರ ಕೊಟಿಗಟ್ಟಲೆ ಬೆಲೆ ಬಾಳುವಂತಹ ನೂರಾರು ಗಿಡಮರಗಳನ್ನು ಕಡಿದು, ಕಿತ್ತಿ ಹಾಳು ಮಾಡಿ ಹಾಕಿರುತ್ತಾರೆ ಮತ್ತು ಭತ್ತದ ಸಸಿ ಮಡಿಯನ್ನು ಟ್ರ್ಯಾಕ್ಟರನಿಂದ ತುಳಿಸಿ ಹಾಳು ಮಾಡಿರುತ್ತಾರೆ ಮತ್ತು ರಸ್ತೆಯನ್ನು ಜೆ.ಸಿ.ಬಿ ಯಂತ್ರದಿಂದ ತೋಡಿ ಹಾಳು ಮಾಡಿರುತ್ತಾರೆ. ಸದರಿ ಘಟನೆ ದಿನಾಂಕ: 29/06/2021 ರಂದು ಬೆಳೆಗ್ಗೆಯಿಂದ ರಾತ್ರಿ ವರೆಗೆ ಜರುಗಿರುತ್ತದೆ. ಈಗಾಗಲೇ ಸದರಿ ಜಮೀನಿಗೆ ಸಂಬಂಧಿಸಿದಂತೆ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮಾನ್ಯ ನ್ಯಾಯಾಯಲಯ ಶಹಾಪೂರದಲ್ಲಿ ಓ.ಎಸ್ ನಂ.122/2014 ರಲ್ಲಿ ದಾವೆ ಹೂಡಿರುವುದನ್ನು ಮಾನ್ಯ ನ್ಯಾಯಾಲಯವು ದಿನಾಂಕ:12/09/2019 ರಂದು ನಮ್ಮ ಪರವಾಗಿ ಆದೇಶ ಮಾಡಿರುತ್ತದೆ. ಕಾರಣ ದಯಾಳುಗಳಾದ ತಾವು ಸದರಿ ಜಮೀನಿನಲ್ಲಿ ಇರುವ ಗಿಡ, ಮರ, ಭತ್ತದ ಸಸಿ, ಕಂಬಗಳು ಮತ್ತು ಜಾಲಿ ತಂತಿಗಳು ಮತ್ತು ರಸ್ತೆಯನ್ನು ಹಾಳು ಮಾಡಿರುವ ಮತ್ತು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗುಂಪುಗಾರಿಕೆ ಮಾಡಿ ಜೀವ ಬೆದರಿಕೆ ಹಾಕಿರುವ ಈ ಕೆಳಗೆ ನಮೂದಿಸಿದ ವ್ಯಕ್ತಿಗಳಾದ 1) ಸಿದ್ದಲಿಂಗ ಸ್ವಾಮಿಗಳು, 2) ಧರ್ಮಣ್ಣ ತಂದೆ ಸೋಮಪ್ಪ ದೋತರೆಡ್ಡಿ, 3) ಪಂಪಾರೆಡ್ಡಿ ತಂದೆ ರಾಮರೆಡ್ಡಿ ಮಾಡಿಗಿರಿ, 4) ರಾಮರೆಡ್ಡಿ ತಂದೆ ಭೀಮಣ್ಣ ಮಾಡಿಗಿರಿ, 5) ಸುರೇಶ ತಂದೆ ನಾಗಪ್ಪ ದೋತರೆಡ್ಡಿ, 6) ಸಿದ್ದಲಿಂಗಪ್ಪ ತಂದೆ ಬಸವರಾಜಪ್ಪ ಮಾ:ಪಾ: ಕೋಡಾಲ ಮತ್ತು ಇನ್ನಿತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 82/2021 ಕಲಂ: 447, 427 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸೈದಪೂರ ಪೊಲೀಸ್ ಠಾಣೆ
ಗುನ್ನೆ ನಂ : 105/2021, ಕಲಂ. 143,147,148,323,324,354, 504.506. ಸಂ.149 ಐ ಪಿ ಸಿ : ದಿನಾಂಕ: 30-06-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-06-2021 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣ ಹೊಲದಲ್ಲಿ ಬಿತ್ತನೆ ಮಾಡುತ್ತಿರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಮ್ಮ ಹೊಲದಲ್ಲಿ ಯಾಕೆ ಬಿತ್ತನೆ ಮಾಡುತ್ತಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಸಿರೆಯ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ.

 


ಸೈದಪೂರ ಪೊಲೀಸ್ ಠಾಣೆ
ಗೆನ್ನೆ ನಂ: 106/2021, ಕಲಂ. 143,147,148,341,323,324,354, 504.506. ಸಂ.149 ಐ ಪಿ ಸಿ : ಇಂದು ದಿನಾಂಕ: 30.06.2021 ರಂದು ಸಾಯಂಕಾಲ 5.00 ಗಂಟೆಗೆ ಸರಕಾರಿ ಆಸ್ಪತ್ರೆ, ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ ನಿರ್ಮಲಾ ಗಂಡ ಬಾಪುಗೌಡ ಪೊಲೀಸ್ ಪಾಟೀಲ ಸಾ||ಶಟ್ಟಿಹಳ್ಳಿ ತಾ||ಜಿ||ಯಾದಗಿರಿ ಇವರ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-06-2021 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ನಮಗೆ ಸಮಪಾಲು ಕೊಡದೆ ನಮ್ಮ ಜಮೀನುದಲ್ಲಿ ಆರೋಫಿತರು ಬಿತ್ತನೆ ಮಾಡುತ್ತಿರುವಾಗ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿಕೊಂಡು ಬಂದು ತಡೆದು ನಿಲ್ಲಿಸಿ,ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಕೈಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ.

 


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 70/2021 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ : ಇಂದು ದಿನಾಂಕ: 30/06/2021 ರಂದು 06.30 ಪಿಎಂ ಕ್ಕೆ ಶ್ರೀಮತಿ. ಪದ್ಮಾವತಿ ಗಂಡ ಬಸವರಾಜ ಹುಣಿಸಿಗಿಡ ವಯ|| 42 ಜಾ: ಬೇಡರ ಉ|| ಮನೆಗೆಲಸ & ಕಿರಾಣಿ ಅಂಗಡಿ ವ್ಯಾಪಾರ ಸಾ|| ವನದುರ್ಗ ತಾ: ಶಹಾಪೂರ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಂಶ ಏನಂದರೆ, ನಿನ್ನೆ ದಿನಾಂಕ:29/06/2021 ರಂದು ನಾನು ಮತ್ತು ನನ್ನ ಗಂಡ ದೇವರೆಡ್ಡಿ ತಂದೆ ಭಿಮರಾಯ ಕಡಕಲ್, ನಮ್ಮ ಬಾವಂದಿರಾದ ನಿಂಗಾರೆಡ್ಡಿ ತಂದೆ ಭೀಮರಾಯ ಕಡಕಲ, ಸಂಜೀವರೆಡ್ಡಿ ತಂದೆ ಭೀಮರಾಯ ಕಡಕಲ್ ಎಲ್ಲರು ಕೂಡಿ ನಮ್ಮ ಹೊಲಕ್ಕೆ ಬಿತ್ತುವ ಕುರಿತು ಗಳೆ ಹೊಡೆದು ಕಸ ತೆಗದರಾಯಿತು ಅಂತಾ ನಮ್ಮ ಚನ್ನೂರ ಸೀಮಾಂತರದ ಹೊಲ ಸವರ್ೇ ನಂ:11/1 ನೇದ್ದರಲ್ಲಿ ಹೋದಾಗ ಅದೇ ಸವರ್ೇ ನಂಬರಿನ ಹೊಲದ ಇನ್ನೊಂದು ಭಾಗದಲ್ಲಿ ಹೊಲ ಹೊಂದಿರುವ ನಮ್ಮ ಅಣ್ಣ-ತಮ್ಮಕಿಯವರಾದ 1) ಸೋಮಶೇಖರ ತಂದೆ ಶರಣಪ್ಪ ಕಡಕಲ್ ವಯಾ:28 ವರ್ಷ 2) ಶರಣಪ್ಪ ತಂದೆ ಮಡಿವಾಳಪ್ಪ ಕಡಕಲ ವಯಾ:55 ವರ್ಷ 3) ಚನ್ನಬಸ್ಸಪ್ಪ ತಂದೆ ಮಲ್ಲಪ್ಪ ಹೊನ್ನಾರೆಡ್ಡಿ, ವಯಾ:60 ವರ್ಷ 4) ಸಿದ್ರಾಮರೆಡ್ಡಿ ತಂದೆ ಚನ್ನಬಸ್ಸಪ್ಪ ಹೊನ್ನಾರೆಡ್ಡಿ ವಯಾ:25 5) ಚನ್ನಮ್ಮ ಗಂಡ ಶರಣಪ್ಪ ಕಡಕಲ್ ವಯಾ:50 ವರ್ಷ 6) ಪವೀತ್ರ ಗಂಡ ಸೋಮಶೇಖರ ಕಡಕಲ ವಯಾ:25 ವರ್ಷ 7) ಸಿದ್ದಮ್ಮ ಗಂಡ ಚನ್ನಬಸ್ಸಪ್ಪ ಹೊನ್ನಾರೆಡ್ಡ ವಯಾ:55 ವರ್ಷ 8) ರೇಣುಕಾ ತಂದೆ ಚನ್ನಬಸ್ಸಪ್ಪ ಹೊನ್ನಾರೆಡ್ಡಿ ವಯಾ: 25 ವರ್ಷ 9) ಗಂಗಮ್ಮ ತಂದೆ ಚನ್ನಬಸ್ಸಪ್ಪ ಹೊನ್ನಾರೆಡ್ಡಿ ವಯಾ:20 ವರ್ಷ ಎಲ್ಲರು ಜಾ: ಲಿಂಗಾಯತ ರೆಡ್ಡಿ ಸಾ: ಚನ್ನೂರ ತಾ: ಶಹಾಪೂರ ಇವರೆಲ್ಲರು ಕೂಡಿ ಅವಾಚ್ಯಾವಗಿ ಬೈಯುತ್ತಾ ಚೀರುತ್ತಾ ಬಂದು ಮಕ್ಕಳೆ ಇದು ನಮ್ಮ ಪಾಲಿಗೆ ಇದೆ ಅಂತಾ ಅಂದರು ನಿಮಗೆ ಈ ಹೊಲ ಕೊಡುವದಿಲ್ಲ ಅಂತಾ ಹೇಳಿದರು ಇಲ್ಲಿ ಯಾಕೆ ಬಂದಿದ್ದಿರಿ ಅಂತಾ ನಮ್ಮ ಜೋತೆಗೆ ಜಗಳ ತಗೆದು ಅವಾಚ್ಯವಾಗಿ ಬೈಯುತ್ತಾ ನನ್ನ ಗಂಡನ ಜೋತೆ ಜಗಳಕ್ಕೆ ಬಂದರು, ಆಗ ನಾನು ನನ್ನ ಗಂಡನಿಗೆ ಅವರು ಏನೆ ಅಂದರೂ ಅವರಿಗೆ ಮಾತಾಡ ಬೇಡ ಅಂತಾ ಹೇಳಿದೆ ಅವನು ಸುಮನಿದ್ದನು, ಆಗ ನಮ್ಮ ಬಾವ ನಿಂಗಾರೆಡ್ಡಿ ಮತ್ತು ಸಂಜೀವರೆಡ್ಡಿ ಇವರು ಕೂಡ ಅವರೋಂದಿಗೆ ಏನು ಮಾತು ಅಂತಾ ಸುಮ್ಮನಿದ್ದಾಗಲೂ ಕೂಡ ಸದರಿ ಎಲ್ಲರೂ ಕೂಡಿ ಬಂದು ಮಕ್ಕಳೆ ನಿಮಗೆ ತಿಂಡಿ ಇದ್ದರೆ ಬರ್ರಿ ಮಕ್ಕಳೆ ಅಂತಾ ಅನ್ನುತ್ತಾ ಬಂದವರೆ ನನ್ನ ಗಂಡನಿಗೆ ಮತ್ತು ನಮ್ಮ ಬಾವಂದಿರರಿಗೆ ಕೈಯಿಂದ ಹೊಡೆಯತೊಡಗಿದರು, ಆಗ ನಾನು ಬಿಡಿಸಿಕೊಳ್ಳಲು ಹೊದಾಗ ಸೋಮಶೇಖರ ತಂದೆ ಶರಣಪ್ಪ ಕಡಕಲ ಈತನು ನನಗೆ ಕುತ್ತಗೆಗೆ ಕೈ ಹಾಕಿ ನನ್ನ ಎಡಗೈ ಹಿಡಿದು ಜಗ್ಗಾಡಿ ನನ್ನ ಮಾನ ಹಾನಿ ಮಾಡಿರುತ್ತಾನೆ. ಶರಣಪ್ಪ ತಂದೆ ಮಡಿವಾಳಪ್ಪ ಈತನು ಒಂದು ಕಲ್ಲನಿಂದ ನಿಂಗಾರೆಡ್ಡಿ ಈತನ ಎದೆಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಸಿದ್ರಾಮರೆಡ್ಡಿ ತಂದೆ ಚನ್ನಬಸ್ಸಪ್ಪ ಈತನು ಒಂದು ಬಡೆಗೆಯಿಂದ ನಿಂಗಾರೆಡ್ಡಿ ಈತನ ಬೆನ್ನಿಗೆ ಮತ್ತು ಕುಂಡಿಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಚನ್ನಬಸ್ಸಪ್ಪ ತಂದೆ ಮಲ್ಲಪ್ಪ ಈತನು ಒಂದು ಕೊಡಲಿ ಕಾವಿನಿಂದ ನನ್ನ ಗಂಡನಿಗೆ ಬೆನ್ನಿಗೆ, ಕುಂಡಿಗೆ, ಕಾಲಿಗೆ ಹೊಡೆದಿರುತ್ತಾನೆ. ಬೆನ್ನಿಗೆ ಹೊಡೆದಾಗ ನನ್ನ ಗಂಡ ದೇವರೆಡ್ಡಿ ಈತನ ಕಿವಿಗೂ ಕೂಡ ತರಚಿದ ಗಾಯವಾಗಿರುತ್ತದೆ. ಚನ್ನಮ್ಮ ಗಂಡ ಶರಣಪ್ಪ, ಪವಿತ್ರ ಗಂಡ ಸೋಮಶೇಖರ ಮತ್ತು ಸಿದ್ದಮ್ಮ ಗಂಡ ಚನ್ನಬಸ್ಸಪ್ಪ, ರೇಣುಕಾ ತಂದೆ ಚನ್ನಬಸ್ಸಪ್ಪ ಮತ್ತು ಗಂಗಮ್ಮ ತಂದೆ ಚನ್ನಬಸ್ಸಪ್ಪ ಇವರುಗಳು ನನಗೆ ಕೈಯಿಂದ ಹೊಡೆದಿದ್ದು ಅವಾಚ್ಯವಾಗಿ ಬೈಯ್ದಿರುತ್ತಾರೆ. ಅಷ್ಟರಲ್ಲಿ ದೇವಪ್ಪ ತಂದೆ ಸಂಗಪ್ಪ ಜಂಗಳಿ ಸಾ; ಚನ್ನೂರ ಮತ್ತು ಚಂದಪ್ಪ ತಂದೆ ಕೆರೆಪ್ಪ ಹರಿಜನ ಸಾ: ದರ್ಶನಾಪೂರ ಇವರು ನೋಡಿ ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಆಗ ಮೇಲಿನ 9 ಜನರು ಮಕ್ಕಳೆ ಯಾರು ಸವರ್ೇ ಮಾಡಿ ಹೇಳಿದರೂ ನೀವು ಇಲ್ಲಿ ಬರುವಹಾಗೇ ಇಲ್ಲ. ಇನ್ನೊಮ್ಮೆ ಇಲ್ಲಿ ಹೊಲ ಇದೆ ಅಂತಾ ಬಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಿನ್ನೆ ದಿನಾಂಕ: 29/06/2021 ರಂದು ನನ್ನ ಗಂಡ ದೇವರೆಡ್ಡಿ, ಮತ್ತು ನನ್ನ ಬಾವಂದಿರಾದ ನಿಂಗಾರೆಡ್ಡಿ ಮತ್ತು ಸಂಜೀವರೆಡ್ಡಿ ಇವರಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ಹೊಗಿ ಉಪಚಾರ ಮಾಡಿಸಿಕೊಂಡು ನಂತರ ನವು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 30/06/2021 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿರುತ್ತೇನೆ. ಘಟನೆಯು ದಿ:29/06/2021 ರಂದು 04.00 ಪಿಎಂ ಸುಮಾರಿಗೆ ಜರುಗಿರುತ್ತದೆ. ಹೊಲದಲ್ಲಿ ನಾವು ಗಳೆ ಹೊಡೆದು ಸ್ವಚ್ಚ ಮಾಡಲು ಹೊದಾಗ ಜಗಾಳಾ ತಗೆದು ನನ್ನ ಕೈಹಿಡಿದು ಎಳೆದಾಡಿ ಅವಮಾನ ಮಾಡಿ ನನ್ನ ಗಂಡ ಮತ್ತು ಬಾವಂದಿರರಿಗೆ ಕೈಯಿಂದ ಕಲ್ಲಿನಿಂದ ಬಡಿಗೆಯಿಂದ ಮತ್ತು ಕೊಡಲಿ ಕಾವಿನಿಂದ ಹೊಡೆದು ಗುಪ್ತ ಪೆಟ್ಟುಗಳನ್ನು ಮಾಡಿರುವ ಮೇಲಿನ 9 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2021 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 01-07-2021 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080