Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-07-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಪಿ.ಎ.ಆರ್ ನಂ. 12/2022 ಕಲಂ 109 ಸಿ.ಆರ್.ಪಿ.ಸಿ : ಮಾನ್ಯರವಲ್ಲಿ ನಾನು ಹಸನಪಟೇಲ್ ಎ.ಎಸ್.ಐ ಯಾದಗಿರಿ ನಗರ ಪೊಲೀಸ್ ಠಾಣೆ ಇದ್ದು, ಈ ಮೂಲಕ ತಮ್ಮಲ್ಲಿ ವರದಿ ಸಲ್ಲಿಸುವುದೇನೆಂದರೆ, ಈತ್ತೀಚಿಗೆ ಯಾದಗಿರಿ ನಗರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ ಮೇಲಾಧಿಕಾರಿಗಳ ಆದೇಶದಂತೆ ನಾನು ಸಂಗಡ ದಾವಲಸಾಬ್ ಪಿ.ಸಿ 268 ರವರನ್ನು ಸಂಗಡ ಕರೆದುಕೊಂಡು ದಿನಾಂಕ 30/06/2022 ರಂದು ಮಧ್ಯರಾತ್ರಿ 12-00 ಗಂಟೆಯಿಂದ ಇಲಾಖಾ ವಾಹನ ನಂ ಕೆ.ಎ 33 ಜಿ 0101 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ವಿಶೇಷ ರಾತ್ರಿ ಚೆಕ್ಕಿಂಗ್ ಕುರಿತು ಠಾಣೆಯಿಂದ ಹೊರಟೆವು. ಯಾದಗಿರಿ ನಗರದ ಕೋಟರ್್ ರೋಡ್, ರೈಲು ನಿಲ್ದಾಣ, ಹಳೆಯ ಬಸ್ ನಿಲ್ದಾಣ, ಅಜೀಜ್ ಕಾಲೋನಿ, ಸಹರಾ ಕಾಲೋನಿ, ಮಾತಾ ಮಾಣಿಕೇಶ್ವರಿ ನಗರ, ಚಿತ್ತಾಪೂರ ರೋಡ್, ಲಕ್ಕಿನಗರ ಲಕ್ಷ್ಮೀ ನಗರ, ಮಾಕರ್ೇಟ್, ಮುಸ್ಲಿಂಪೂರ, ಗಾಂಧಿಚೌಕ್, ಮೈಲಾಪೂರ ಬೇಸ್, ಗಂಜ್ ಏರಿಯಾಗಳಲ್ಲಿ ತಿರುಗಾಡುತ್ತಾ ಹೊಸಾ ಬಸ್ ನಿಲ್ದಾಣದ ಕಡೆಗೆ ಬೆಳಿಗ್ಗೆ 4-00 ಗಂಟೆಯ ಸುಮಾರಿಗೆ ಹೋದಾಗ ಸಾಯಿ ಹೊಟೇಲ್ ಹತ್ತಿರ ಒಬ್ಬ ವ್ಯಕ್ತಿ ಅನುಮಾನ ಆಸ್ಪದವಾಗಿ ತಿರುಗಾಡುತ್ತಿದ್ದನು. ನಮ್ಮನ್ನು ನೋಡಿದ ಅವನು ತನ್ನ ಇರುವಿಕೆಯನ್ನು ಮರೆ ಮಾರೆಮಾಚತೊಡಗಿದನು. ಸದರಿಯವನಿಗೆ ನೋಡಿದ ನಾವು ಆತನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಳಾಸ ತಪ್ಪು ತಪ್ಪಾಗಿ ಹೇಳತೊಡಗಿದನು. ಮಾತಿನಲ್ಲಿ ಕೂಡ ತಡವರಿಸತೊಡಗಿದ್ದರಿಂದ ಅವನ ಮೇಲೆ ನಮಗೆ ಬಲವಾಗಿ ಅನುಮಾನ ಬಂದ ಕಾರಣ ಕೂಡಲೆ ನಾನು ನಮ್ಮ ಸಿಬ್ಬಂದಿ ಜನರ ಸಹಾಯದಿಂದ ಅವನಿಗೆ ವಶಕ್ಕೆ ತೆಗೆದುಕೊಂಡು, ಬೆಳಿಗ್ಗೆ 04-30 ಗಂಟೆಗೆ ಯಾದಗಿರಿ ನಗರ ಠಾಣೆಗೆ ಬಂದೆವು. ಠಾಣೆಯಲ್ಲಿ ನಾನು ಆತನಿಗೆ ಕೂಲಂಕುಶವಾಗಿ ವಿಚಾರಿಸಿದಾಗ ತನ್ನ ಹೆಸರು ಇಮಾಮ್ಸಾಬ್ ತಂದೆ ಚಾಂದ್ಪಾಶ ಮದ್ರಿಕಿ ವಯಾ 26 ವರ್ಷ, ಜಾ|| ಮುಸ್ಲಿಂ ಉ|| ಗಾರೆ ಕೆಲಸ ಸಾ|| ಸೂಗೂರು ತಾ|| ಚಿತ್ತಾಪೂರ ಜಿ|| ಕಲಬುರಗಿ ಅಂತಾ ತಿಳಿಸಿದನು. ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಇರುವುದ್ದರಿಂದ ಇಂದು ದಿನಾಂಕ 30/06/2022 ರಂದು ಬೆಳಿಗ್ಗೆ 10-15 ಗಂಟೆಗೆ ಅವನ ವಿರುದ್ದ ಮುಂಜಾಗ್ರತೆ ಕ್ರಮ ಕುರಿತು ಠಾಣೆ ಪಿ.ಎ.ಆರ್ ನಂ 12/2022 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ 279, 337, 338 ಐಪಿಸಿ : :- ಇಂದು ದಿನಾಂಕ 30/06/2022 ರಂದು ಬೆಳಿಗ್ಗೆ 4 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ರಸ್ತೆ ಅಪಘಾತದ ಬಗ್ಗೆ ಪೋನ್ ಮೂಲಕ ಎಮ್.ಎಲ್.ಸಿ ತಿಳಿಸಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀ ಮಹಮದ್ ಅಮೀರ್ಖಾನ್ ತಂದೆ ಮುಜಾಫರ್ಖಾನ್ ಖಾನ್ ವಯ;24 ವರ್ಷ, ಜಾ;ಮುಸ್ಲಿಂ, ಉ;ವ್ಯಾಪಾರ, ಸಾ; ಮಂಜಿಲ್ ,ಬಿಲಾಲ್ ಕಾಲೋನಿ, ಚಿದ್ರಿ ಬೀದರ್ ತಾ;ಜಿ;ಬೀದರ್ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ವ್ಯಾಪಾರ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಾನು ಮತ್ತು ನನ್ನ ಸ್ನೇಹಿತನಾದ ಅಲೀಮ ತಂದೆ ಸಯ್ಯದ್ ಅಬೀದ್ ಸಾ;ಬೀದರ್ ಇಬ್ಬರು ಸೇರಿಕೊಂಡು 2-3 ದಿವಸಗಳ ಹಿಂದೆ ಬೀದರನಿಂದ ಹೈದ್ರಾಬಾದಕ್ಕೆ ಹೋಗಿದ್ದೆವು. ಹೈದ್ರಾಬಾದನಲ್ಲಿ ನಮ್ಮಿಬ್ಬರ ಸ್ನೇಹಿತನಾದ ಮಹಮದ್ ಜಾವೀದ್ ತಂದೆ ಮಹಮದ್ ರಜಾಕ ಸಾ;ಹೈದ್ರಾಬಾದ್ ಈತನೊಂದಿಗೆ ಆತನ ಕಾರ್ ನಂಬರ ಟಿ.ಎಸ್.-12, ಇ.ಕ್ಯು-4058 ನೇದ್ದರಲ್ಲಿ ಎಲ್ಲಾ ಕಡೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ಹೀಗಿದ್ದು ನಿನ್ನೆ ದಿನಾಂಕ 29/06/2022 ರಂದು ರಾತ್ರಿ 10 ಪಿ.ಎಂ.ದ ಗಂಟೆ ಸುಮಾರಿಗೆ ನಮ್ಮ ಸ್ನೇಹಿತನಾದ ಮಹಮದ್ ಜಾವೀದ್ ಈತನು ನಾಳೆ ದಿವಸ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮವು ಯಾದಗಿರಿಯಲ್ಲಿ ಇದ್ದು, ನಡೀರಿ ನನ್ನ ಕಾರಿನಲ್ಲಿ ಹೋಗಿ ಬರೋಣ ಅಂದಾಗ ನಾವಿಬ್ಬರು ಆಯಿತು ನಡೀ ಹೋಗಿ ಬರೋಣ ಅಂತಾ ತಯಾರಾಗಿ ಕಾರ್ ನಂಬರ ಟಿ.ಎಸ್.-12, ಇ.ಕ್ಯು-4058 ನೇದ್ದರಲ್ಲಿ ಹೈದ್ರಾಬಾದನಿಂದ ಯಾದಗಿರಿಗೆ ಹೊರಟೆವು ಕಾರನ್ನು ಮಹಮದ್ ಜಾವೀದ್ ಈತನೇ ನಡೆಸಿಕೊಂಡು ಹೊರಟಿದ್ದನು. ಹೈದ್ರಾಬಾದ್-ಯಾದಗಿರಿ ಮುಖ್ಯ ರಸ್ತೆಯ ಯಾದಗಿರಿ ಸಮೀಪ ಬರುತ್ತಿದ್ದಾಗ ಮುಂಡರಗಿ ಗ್ರಾಮದ ಹತ್ತಿರ ರಾಜಸ್ಥಾನಿ ಡಾಬಾದ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಮುಖ್ಯ ರಸ್ತೆಗೆ ಬರುವಾಗ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನೇರವಾಗಿ ಯಾದಗಿರಿ ಕಡೆಗೆ ಹೊರಟಿದ್ದ ನಮ್ಮ ಕಾರಿಗೆ ಅಡ್ಡ ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ಹಣೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ಕಾರ್ ಚಾಲನೆ ಮಾಡುತ್ತಿದ್ದ ಮಹಮದ್ ಜಾವೀದ್ ಈತನಿಗೆ ಬಲಗೈ ಭುಜಕ್ಕೆ ಭಾರೀ ತರಚಿದ ಗಾಯ, ಬಲಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು, ಮುಖಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಅಲೀಮ ಈತನಿಗೆ ತಲೆಗೆ ಭಾರೀ ಗುಪ್ತಗಾಯ, ಹಣೆಗೆ ತರಚಿದ ಗಾಯ, ಎಡಗೈ ಮೊಣಕೈ ಹತ್ತಿರ ಭಾರೀ ಗುಪ್ತಗಾಯವಾಗಿದ್ದು ಇರುತ್ತವೆ. ಈ ಅಪಘಾತವು ಇಂದು ದಿನಾಂಕ 30/06/2022 ರಂದು ಬೆಳಗಿನ 3 ಎ.ಎಂ.ಕ್ಕೆ ಜರುಗಿರುತ್ತದೆ. ನಮಗೆ ಅಪಘಾತ ಪಡಿಸಿದ ಲಾರಿ ಚಾಲಕನು ಘಟನಾ ಸ್ಥಳದಲ್ಲಿ ವಾಹನದ ಸಮೇತ ಹಾಜರಿದ್ದು ಲಾರಿ ನಂಬರ ನೊಡಲಾಗಿ ಕೆಎ-16, ಸಿ-5024 ನೇದ್ದು ಇದ್ದು, ಲಾರಿ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕರಿಬಸಪ್ಪ ತಂದೆ ಈಶ್ವರಪ್ಪ ಸಾ;ಕುಮತಿ, ತಾ;ಕೂಡ್ಲಿಗಿ ಜಿ;ವಿಜಯನಗರ ಅಂತಾ ತಿಳಿಸಿರುತ್ತಾನೆ. ನಾನು ಈ ಘಟನೆಯ ವಿಷಯವನ್ನು ನನ್ನ ಅಣ್ಣನಾದ ಉಮರಖಾನ್ ತಂದೆ ಮುಜಾಫರ್ಖಾನ್ ಈತನಿಗೆ ಮತ್ತು ಮಹಮದ್ ಜಾವೀದ್ ಇವರ ತಂದೆಗೆ ಪೋನ್ ಮಾಡಿ ವಿಷಯ ತಿಳಿಸಿರುತ್ತೇನೆ. ಹೀಗಿದ್ದು ಇಂದು ದಿನಾಂಕ 30/05/2022 ರಂದು ಬೆಳಿಗಿನ ಜಾವ 3 ಎ.ಎಂ.ಕ್ಕೆ ನಮ್ಮ ಕಾರ್ ನಂಬರ ಟಿ.ಎಸ್.-12, ಇ.ಕ್ಯು-4058 ನೇದ್ದಕ್ಕೆ ಲಾರಿ ನಂಬರ ಕೆಎ-16, ಸಿ-5024 ನೇದ್ದರ ಚಾಲಕನು ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರದ ರಾಜಸ್ಥಾನಿ ಹೊಟೆಲ್ ಹತ್ತಿರ ಮುಖ್ಯ ರಸ್ತೆ ಮೇಲೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 5-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 34/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ: ಹೆಣ್ಣುಮಗಳು ಕಾಣೆಯಾದ ಬಗ್ಗೆ : ದಿನಾಂಕ:30/06/2022 ರಂದು 5-30 ಪಿಎಮ್ಕ್ಕೆ ಶ್ರೀಮತಿ ಸಾಬಮ್ಮ ಗಂಡ ಮರೆಪ್ಪ ಇಮ್ಲಾಪೂರ, ವ:50, ಜಾ:ಹೊಲೆಯ, ಉ:ಮನೆಕೆಲಸ ಸಾ:ಬೆನಕನಹಳ್ಳಿ (ಕೆ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನಾನು ಮನೆಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡನು ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ನಮಗೆ 1) ಭಾಗಪ್ಪ ವ:28, 2) ದುರ್ಗಪ್ಪ ವ:24, 3) ರೇಣುಕಾ ವ:21 ಮತ್ತು 4) ಮಹೇಶ ವ:19 ಹೀಗೆ ಮೂರು ಜನ ಗಂಡು ಮತ್ತು ಒಬ್ಬ ಹೆಣ್ಣು ಮಗಳಿರುತ್ತಾಳೆ. ನನ್ನ ಮಗಳಾದ ರೇಣುಕಾ ವ:21 ವರ್ಷ ಇವಳು 10 ನೇ ತರಗತಿಯವರೆಗೆ ಶಾಲೆ ಓದಿ ಬಿಟ್ಟಿರುತ್ತಾಳೆ. ಅವಳ ಜನ್ಮ ದಿನಾಂಕ:01/01/2001 ಇರುತ್ತದೆ. ಸದರಿಯವಳು ಈಗ ನಮ್ಮ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದಳು. ಹೀಗಿದ್ದು ದಿನಾಂಕ:28/06/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳಾದ ರೇಣುಕಾ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದಳು. ನಾನು ಮನೆಯಲ್ಲಿದ್ದೇನು. ಬಹಳ ಹೊತ್ತಾದರು ನನ್ನ ಮಗಳು ಸಂಡಾಸಕ್ಕೆ ಹೋದವಳು ಮರಳಿ ಮನೆಗೆ ಬರದೆ ಇದ್ದಾಗ ನಾನು ಸದರಿ ವಿಷಯವನ್ನು ನನ್ನ ಗಂಡ ಮರೆಪ್ಪ ಮತ್ತು ಮಕ್ಕಳಾದ ಭಾಗಪ್ಪ, ದುರ್ಗಪ್ಪ ಇವರಿಗೆ ಹೇಳಿದಾಗ ಅವರು ನಮ್ಮೂರ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರು. ನನ್ನ ಮಗಳು ಸಿಗಲಿಲ್ಲ. ನನ್ನ ನಂತರ ನನ್ನ ಗಂಡ ಮತ್ತು ಮಕ್ಕಳಾದ ಭಾಗಪ್ಪ, ದುರ್ಗಪ್ಪ ಇವರು ನಮ್ಮ ಬೀಗರ ಗ್ರಾಮಗಳಾದ ಮಾಚನೂರು, ಬೂದನಾಳ, ದೊಡ್ಡ ಸಗರ ಮುಂತಾದ ಕಡೆ ಹುಡುಕಾಡಿದರು. ನಂತರ ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ಫೋನ ಮಾಡಿ ಅಲ್ಲಿ ಏನಾದರೂ ರೇಣುಕಾ ಬಂದಿದ್ದಾಳೆ ಎಂದು ವಿಚಾರಿಸಿದರೆ ಅವರು ಬಂದಿಲ್ಲ ಎಂದು ಹೇಳಿದರು. ನನ್ನ ಮಗಳು ಮನೆಯಿಂದ ಹೋಗುವಾಗ ಮೈಮೇಲೆ ಹಸಿರು ಬಣ್ಣದ ಸೆರಗಿನ ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಚಹರೆಪಟ್ಟಿ ಎತ್ತರ 4'-6'' ಫಿಟ್, ಸಾದಾರಣ ಮೈಕಟ್ಟು, ಸಾದಾಗಪ್ಪು ಬಣ್ಣ, ಉದ್ದನೆ ಮೂಗು ಇರುತ್ತದೆ. ನನ್ನ ಮಗಳಾದ ರೇಣುಕಾ ಇವಳು ದಿನಾಂಕ:28/06/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಸಂಡಾಸಕ್ಕೆ ಎಂದು ಮನೆಯಿಂದ ಹೊರಗಡೆ ಹೊದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ನನ್ನ ಮಗಳಿಗೆ ನನ್ನ ಗಂಡ ಮತ್ತು ಮಕ್ಕಳು ನಮ್ಮ ಬೀಗರ ಗ್ರಾಮಗಳಾದ ಮಾಚನೂರು, ಬೂದನಾಳ, ದೊಡ್ಡ ಸಗರ ಮುಂತಾದ ಕಡೆ ಹೋಗಿ ಹುಡುಕಾಡಿ ಬಂದಿರುತ್ತಾರೆ. ನನ್ನ ಮಗಳಿಗೆ ನಾವು ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾಣೆಯಾದ ನನ್ನ ಮಗಳು ರೇಣುಕಾ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಅಂತಾ ಕೊಟ್ಟ ಫಿಯರ್ಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ ಠಾಣೆ ಗುನ್ನೆ ನಂ. 90/2022 ಕಲಂ:ಹೆಣ್ಣು ಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 78/2022 ಕಲಂ 78(3) ಕೆ.ಪಿ ಕಾಯ್ದೆ : ಇಂದು ದಿನಾಂಕ: 30.06.2022 ರಂದು ಮಧ್ಯಾಹ್ನ 3 ಗಂಟೆಗೆ ಹಣಮಂತ್ರಾಯ ಪಿ.ಎಸ್.ಐ (ತನಿಖೆ) ಸಾಹೇಬ ಸೈದಾಪುರ ಪೊಲೀಸ್ ಠಾಣೆ ರವರು ಸ್ಥಳಿಯ ಸ್ಟೇಷನ್ ಸೈದಾಪುರದ ರೇಣುಕಾ ವೈನ್ಶಾಪ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕಾಜರ್ುನ ತಂದೆ ಬಸಪ್ಪ, ವಯಾ|| 32 ವರ್ಷ ಜಾ|| ಅಗಸರ, ಉ|| ಕೂಲಿ ಕೆಲಸ, ಸಾ|| ಸೈದಾಪೂರ ಗ್ರಾಮ ಈತನನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ, ಆಪಾದಿನನ್ನು ಮತ್ತು ಮುದ್ದೆಮಾಲು ನನಗೆ ಒಪ್ಪಿಸಿದರು. ನಾನು ಮೋಹನರೆಡ್ಡಿ ಸಿ.ಹೆಚ್.ಸಿ-151 ಸೈದಾಪುರ ಠಾಣೆ ಠಾಣಾ ಗುನ್ನೆ ಸಂಖ್ಯೆ 78/2022 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 79/2022 ಕಲಂ 3, 7 ಇ.ಸಿ.ಆಕ್ಟ್ : ಇಂದು ದಿನಾಂಕ: 30.06.2022 ರಂದು ರಾತ್ರಿ 8-30 ಗಂಟೆಗೆ ಸ. ತಫರ್ೇ ಬಸವರಾಜ ತಂದೆ ಅಮೃತ ಪತ್ತಾರ ವಯ|| 46ವರ್ಷ, ಜಾ|| ವಿಶ್ವಕರ್ಮ ಉ|| ಆಹಾರ ನಿರೀಕ್ಷಕರು, ಸಾ|| ಏವೂರ ತಾ|| ಶಹಾಪೂರ ಜಿ|| ಯಾದಗಿರಿ ಹಾ||ವ|| ಯಾದಗಿರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಹೀಗಿದ್ದು ದಿನಾಂಕ 28.06.2022 ರಂದು ಶ್ರೀ ಶಂಕರಗೌಡ ಮುನಮುಟಗಿ ಕನರ್ಾಟಕ ರಾಷ್ಟ್ರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ, ಯುವ ಘಟಕ ಯಾದಗಿರಿ ಇವರು ನಮ್ಮ ಕಾಯರ್ಾಲಯಕ್ಕೆ ಬಂದು ಸ್ಟೇಷನ ಸೈದಾಪೂರದ ಬಜಾರನಲ್ಲಿದ್ದ 3 ಅಂಗಡಿ ಮಾಲಿಕರು ಸಾರ್ವಜನಿಕ ಪಡಿತರ ವಿತರಣೆ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ ಕೂಡಲೇ ನೀವು ಕ್ರಮ ಕೈಗೊಳ್ಳಿರಿ ಅಂತಾ ಲಿಖಿತ ಅಜರ್ಿ ನೀಡಿದ್ದರು. ಇಂದು ದಿನಾಂಕ 30.06.2022 ರಂದು ಪಂಚರ ಹಾಗೂ ಅಜರ್ಿದಾರರ ಸಮಕ್ಷಮ 3 ಅಂಗಡಿಗಳಲ್ಲಿ ಒಟ್ಟು 159.05 ಕ್ವಿಂಟಲ್ ಅಕ್ಕಿ ಅ.ಕಿ. 5,56,675 ರೂಪಾಯಿಗಳು ಬೆಲೆ ಬಾಳುವ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಜಪ್ತಿ ಪಡಿಸಿಕೊಳ್ಳಲಾಗಿದೆ. ಕಾರಣ ಅಂಗಡಿಗಳ ಮಾಲೀಕರಾದ 1. ರಾಮಯ್ಯ ತಂದೆ ಪಾಂಡಯ್ಯ ಸೈದಾಪೂರ 2. ಬುಗ್ಗಪ್ಪ ಗ್ರಾಮ ಸೈದಾಪೂರ 3. ಪಾಂಡಯ್ಯ ತಂದೆ ಪಿಂಕಯ್ಯ ಸೈದಾಪೂರ ಇವರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ-1955 ಕಲಂ 3, 7 ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿದೆ. ಜಪ್ತಿಪಡಿಸಿಕೊಂಡ ಅಕ್ಕಿ 1. ಕೆಎ-33-ಎ-1726 (ಡಿ.ಸಿ.ಎಮ್) 2. ಕೆಎ-33-ಎ-9643 (ಡಿ.ಸಿ.ಎಮ್) ವಾಹನಗಳಲ್ಲಿ ಹಮಾಲರ ಸಹಾಯದಿಂದ ತುಂಬಿಸಿ ತಮ್ಮ ಠಾಣಾ ಆವರಣದಲ್ಲಿ ನಿಲ್ಲಿಸಲಾಗಿದೆ.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 49/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ: 30.06.2022 ರಂದು ಬೆಳಗ್ಗೆ 10:30 ಗಂಟೆಗೆ ಪಿರ್ಯಾಧಿ ಶ್ರೀ ಬಸವರಾಜ ತಂದೆ ಸಂಗಪ್ಪ ರಾಮಣ್ಣನವರ ವ:25 ವರ್ಷ, ಉ:ಹೋಟೆಲ್ ಕೆಲಸ, ಜಾ||ಹಿಂದೂ ನೇಕಾರ, ಸಾ||ಕೊಡೇಕಲ್, ತಾ|| ಹುಣಸಗಿ, ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ನಮ್ಮೂರ ಪ್ಯಾಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಹೋಟೆಲ್ ಇಟ್ಟುಕೊಂಡು ಇದ್ದು, ನಮ್ಮ ತಂದೆ ತಾಯಿಯವರಿಗೆ ನಾವು 4 ಜನ ಗಂಡು ಮಕ್ಕಳಿದ್ದು, ಎಲ್ಲರದೂ ಮದುವೆಯಾಗಿದ್ದು ಎಲ್ಲರೂ ಒಟ್ಟಿಗೆ ಇರುತ್ತೇವೆ. ಈಗ 2 ವರ್ಷಗಳ ಹಿಂದೆ ನಮ್ಮ ತಂದೆತಾಯಿಯವರು ನನಗೆ ನಮ್ಮೂರ ಕೋರಿಸಂಗಯ್ಯ ತಂದೆ ಹಣಮಂತ್ರಾಯ ಎಡಗುಂಡಿ ರವರ ಮಗಳಾದ ಭಾಗ್ಯ ರವರನ್ನು ತೆಗೆದು ನನ್ನ ಜೋತೆಗೆ ಮದುವೆ ಮಾಡಿದ್ದು, ನಮಗೆ ಇನ್ನೂ ಮಕ್ಕಳು ಆಗಿರುವುದಿಲ್ಲಾ. ನಾವು ಗಂಡ ಹೆಂಡತಿ ಇಬ್ಬರೂ ಅನ್ಯೂನ್ಯವಾಗಿರುತ್ತೇವೆ. ಹೀಗಿದ್ದು, ದಿನಾಂಕ:28/06/2022 ಮಂಗಳವಾರ ರಂದು ನಾನು ದಿನನಿತ್ಯದಂತೆ ಮುಂಜಾನೆ 06:00 ಗಂಟೆ ಸುಮಾರಿಗೆ ನನ್ನ ಹೊಟೇಲ್ಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ತಾಯಿ ನಿಂಬೆಮ್ಮ, ಅಣ್ಣಂದಿರಾದ ಸಂಗಯ್ಯ, ಬಸವರಾಜ, ಹಣಮಂತ ರವರು ಹಾಗೂ ನನ್ನ ಅಣ್ಣಂದಿರ ಹೆಂಡತಿಯಾರಾದ ಮಾನಮ್ಮ ಗಂಡ ಸಂಗಯ್ಯ, ಸಂಗಮ್ಮ ಗಂಡ ಬಸವರಾಜ ರವರು ಇದ್ದು, ನಾನು ದಿನಾಂಕ:28/06/2022 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಹೋಟೆಲ್ದಲ್ಲಿ ಇದ್ದಾಗ ನನ್ನ ಅಣ್ಣಂದಿರಾದ ಸಂಗಯ್ಯ, ಬಸವರಾಜ, ಹಣಮಂತ ರವರು ಹೋಟೇಲ್ಕ್ಕೆ ಬಂದು ತಿಳಿಸಿದ್ದೇನೆಂದರೆ, ನಿನ್ನ ಹೆಂಡತಿ ಭಾಗ್ಯ ರವರು ಮುಂಜಾನೆ 09:30 ಗಂಟೆ ಸುಮಾರಿಗೆ ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ಪ್ಯಾಟಿ ಬಸವೇಶ್ವರ ದೇವಸ್ಥಾನದ ಹಿಂದುಗಡೆ ಇರುವ ಮೇನ್ ಕೆನಾಲಕ್ಕೆೆ ಮನೆಯಿಂದ ಹೋದವಳು ಇಷ್ಟೋತ್ತಾದರೂ ಬಂದಿರುವುದಿಲ್ಲಾ ನಿನ್ನಲ್ಲಿಗೆ ಹೋಟೇಲಕ್ಕೆ ಏನಾದರೂ ಬಂದಿದ್ದಾಳೆನು ಅಂತಾ ಕೇಳಿದ್ದು, ನಾನು ನನ್ನ ಅಣ್ಣಂದಿರರಿಗೆ ನನ್ನ ಹೆಂಡತಿಯು ಹೋಟೆಲಕ್ಕೆ ಬಂದಿರುವುದಿಲ್ಲಾ ಅಂತಾ ತಿಳಿಸಿ ನಾನು ಮತ್ತು ನನ್ನ ಮೂರು ಜನ ಅಣ್ಣಂದಿರು ಕೂಡಿ ನನ್ನ ಹೆಂಡತಿಯು ಬಟ್ಟೆ ತೊಳೆಯಲು ಹೋದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಹಿಂದುಗಡೆ ಇರುವ ಮೇನ್ ಕೆನಾಲಕ್ಕೆೆ ಹೋಗಿ ನೋಡಲಾಗಿ ಅಲ್ಲಿ ನನ್ನ ಹೆಂಡತಿ ಭಾಗ್ಯ ಇರಲಿಲ್ಲ ನಮ್ಮೂರ ಕೆಲವು ಜನ ಹೆಣ್ಣು ಮಕ್ಕಳು ಅಲ್ಲಿ ಬಟ್ಟಿ ತೊಳೆಯುತ್ತಿದ್ದು ಅವರಿಗೆ ವಿಚಾರಿಸಲಾಗಿ ನನ್ನ ಹೆಂಡತಿಯು ಬಟ್ಟೆ ತೊಳೆಯಲು ಇಲ್ಲಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಮತ್ತು ನನ್ನ ಅಣ್ಣಂದಿರು ನನ್ನ ಹೆಂಡತಿಯ ತವರು ಮನೆಗೆ ಹೋಗಿ ನಮ್ಮ ಅತ್ತೆ ಗಂಗಮ್ಮ ಗಂಡ ಕೋರಿಸಂಗಯ್ಯ ಎಡಗುಂಡಿ, ಮಾವ ಕೋರಿಸಂಗಯ್ಯ ತಂದೆ ಹಣಮಂತ್ರಾಯ ಎಡಗುಂಡಿ ರವರಿಗೆ ನನ್ನ ಹೆಂಡತಿ ಭಾಗ್ಯಳು ಅವರ ಮನೆಗೆ ಬಂದಿದ್ದಾಳೆನು ಎಂದು ವಿಚಾರಿಸಿದ್ದು, ಅವರು ನನ್ನ ಹೆಂಡತಿಯು ತಮ್ಮ ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನಾವು ನಮ್ಮ ಅತ್ತೆ ಮಾವಂದಿರರಿಗೆ ಭಾಗ್ಯಳು ಮುಂಜಾನೆ 09:30 ಗಂಟೆ ಸುಮಾರಿಗೆ ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಮತ್ತು ನನ್ನ ಅಣ್ಣಂದಿರರು ಹಾಗೂ ಮಾವ ಕೋರಿಸಂಗಯ್ಯ ರವರು ಆ ದಿನ ಕೊಡೇಕಲ್ ಗ್ರಾಮದಲ್ಲಿಯ ನಮ್ಮೆಲ್ಲ ಸಂಬಂಧಿಕರ ಮನೆಗಳಿಗೆ ಹೋಗಿ ವಿಚಾರಿಸಿದ್ದು ಮತ್ತು ಬಟ್ಟೆ ತೊಳೆಯಲು ಹೋಗುವ ಜಾಗೆಗಳಿಗೆ ಹೋಗಿ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಲಾಗಿ ನನ್ನ ಹೆಂಡತಿಯು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ದಿನಾಂಕ:28/06/2022 ರಿಂದ ಇಂದಿನವರೆಗೆ ನಾನು ಮತ್ತು ನನ್ನ ಅಣ್ಣಂದಿರರು ಹಾಗೂ ಮಾವ ಕೋರಿಸಂಗಯ್ಯ ರವರು ಕೂಡಿಕೊಂಡು ನನ್ನ ಹೆಂಡತಿ ಭಾಗ್ಯಳಿಗೆ ನಮ್ಮ ಸಂಬಂಧಿಕರ ಊರುಗಳಾದ ನಾರಾಯಣಪೂರ, ಹುಣಸಗಿ, ಕಕ್ಕೇರಾ, ದಯಾಮನಾಳ, ಸುರಪೂರ, ರುಕ್ಮಾಪೂರ, ವೀರೇಶನಗರ, ಅಮ್ಮಾಪೂರ, ನಾಲತವಾಡ, ಮುದ್ದೇಬಿಹಾಳ, ಬಿಳೇಬಾವಿ, ತಾಳಿಕೋಟಿ ಇತರೆ ಊರುಗಳಿಗೆ ಹೋಗಿ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರುಗಳಿಗೆ ಫೋನ್ ಮಾಡಿ ವಿಚಾರಿಸಿದ್ದು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನನ್ನ ಹೆಂಡತಿಯು ಇಂದಿನವರೆಗೂ ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿ ಭಾಗ್ಯ ಗಂಡ ಬಸವರಾಜ ವ:21 ವರ್ಷ, ಉ:ಮನೆಗೆಲಸ ಇವರು ದಿನಾಂಕ:28/06/2022 ರಂದು ಮುಂಜಾನೆ 09:30 ಗಂಟೆ ಸುಮಾರಿಗೆ ಮನೆಯಿಂದ ಬಟ್ಟೆ ತೊಳೆಯಲು ಹೋಗುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿದ್ದು, ನನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡಬೇಕು ನನ್ನ ಹೆಂಡತಿಯು ತೆಳನೆಯ ಮೈಕಟ್ಟು, ಬಿಳಿಯ ಬಣ್ಣ, ಉದ್ದನೆಯ ಮೂಗು, ದುಂಡ ಮುಖ ಹೊಂದಿದ್ದು, ತಲೆಯ ಮೇಲೆ ಕಪ್ಪು ಬಣ್ಣದ ಕೂದಲು ಇದ್ದು, ಸುಮಾರು 5 ಫೀಟ್ ಎತ್ತರ ಇದ್ದು, ಕಪ್ಪು ಬಣ್ಣದ ನೈಟಿ ಧರಿಸಿದ್ದು. ಕನ್ನಡ ಭಾಷೆ ಮಾತನಾಡುತ್ತಿದ್ದು, ಕನ್ನಡ, ಹಿಂದಿ, ಇಂಗ್ಲಿಷ ಭಾಷೆ ಬರೆಯಲು ಒದಲು ಬರುತ್ತಿದ್ದು ನನ್ನ ಹೆಂಡತಿಯು ಪ್ಯಾರಾ ಮೆಡಿಕಲ್ ವಿದ್ಯಾಭ್ಯಾಸ ಮಾಡಿದ್ದು, ನಾವು ಇಲ್ಲಿಯವರೆಗೂ ಹುಡುಕಾಡಿದರೂ ನನ್ನ ಹೆಂಡತಿ ಭಾಗ್ಯ ಗಂಡ ಬಸವರಾಜ ರಾಮಣ್ಣನವರ ವ:21 ವರ್ಷ, ಉ:ಮನೆಗೆಲಸ ಇವಳು ಸಿಕ್ಕಿರುವುದಿಲ್ಲ. ನನ್ನ ಹೆಂಡತಿ ಕಾಣೆಯಾಗಿದ್ದು ಅವಳಿಗೆೆ ಪತ್ತೆ ಮಾಡಿಕೊಡಬೇಕು ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:49/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 26/2022 ಕಲಂ: 143, 147, 148, 323, 324, 354, 504, 506, ಸಂಗಡ 149 : ಇಂದು ದಿನಾಂಕ : 30/06/2022 ರಂದು 13:00 ಪಿಎಮ್ ಗಂಟೆಗೆ ಫಿರ್ಯಾದಿ ಶ್ರೀ ರಾಯಪ್ಪ ತಂದೆ ಹುಲಗಪ್ಪ ಕಂಬಳಿ ವಯ:40 ವರ್ಷ, ಜಾ:ಹಿಂದೂ ಕುರುಬರ್, ಉ:ಒಕ್ಕಲುತನ, ಸಾ:ಅಮ್ಮಾಪೂರ ಎಸ್.ಕೆ ತಾ:ಹುಣಸಗಿ, ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು, ಹೇಳಿಕೆಯ ಫೀರ್ಯಾದಿಯ ಸಾರಾಂಶವೇನೆಂದರೆ, ನಮ್ಮದು ಅಮ್ಮಾಪೂರ ಸೀಮಾಂತರದಲ್ಲಿ ಸವರ್ೆ ನಂ:27 ರಲ್ಲಿ 2 ಎಕರೆ 11 ಗುಂಟೆ ಮತ್ತು ಸವರ್ೆ ನಂ:49 ನೇದ್ದರಲ್ಲಿ 3 ಎಕರೆ 30 ಗುಂಟೆ ಪಿತ್ರಾಜರ್ಿತ ಹೊಲವಿದ್ದು, ನಾವು ನಮ್ಮ ತಂದೆಗೆ 4 ಜನ ಗಂಡು ಮಕ್ಕಳು ಇದ್ದು, ಸುಮಾರು 10 ವರ್ಷಗಳ ಹಿಂದೆ ಊರ ಹಿರಿಯರು ಪಾಲು ಮಾಡಿ ಕೊಟ್ಟಿದ್ದು, ನಾವುಗಳು ನಮ್ಮ ಪಾಲಿಗೆ ಬಂದ ಹೊಲದಲ್ಲಿ ನಾವೇ ಸಾಗುವಳಿ ಮಾಡುತ್ತು ಇದ್ದೇವು. ನಾವುಗಳು ಇಲ್ಲಿಯವರೆಗೆ ಯಾವದೇ ವಾಟ್ನಿ ಮಾಡಿಸಿಕೊಂಡಿರುವದಿಲ್ಲ. ನಾನು ಸುಮಾರು 4 ವರ್ಷಗಳ ಹಿಂದೆ ನಮ್ಮ ಪಾಲಿಗೆ ಬಂದಂತಹ ಹೊಲವನ್ನು ನಾನು ನನ್ನ ಹೆಸರಿಗೆ ಪಹಣಿ ಮಾಡಿಸಿಕೊಳ್ಳುತ್ತೆನೆ. ನನಗೆ ನೀನು ಸಹಿ ಕೊಡು ಅಂತ ನಮ್ಮ ದೊಡ್ಡ ಅಣ್ಣನಾದ ಹಣಮಪ್ಪ ತಂದೆ ಹುಲಗಪ್ಪ ಕಂಬಳಿ ಈತನಿಗೆ ಕೇಳಿದ್ದು, ನಾನು ನಿಮಗೆ ಸಹಿ ಕೊಡುವದಿಲ್ಲ ಅಂತ ಅಂದ ಅದಕ್ಕೆ ನಾನು ಸುರಪೂರ ಕೋರ್ಟನಲ್ಲಿ ಸಿವೀಲ್ ಮೊಕದಮ್ಮೆಯನ್ನು ದಾಖಲಿಸಿದ್ದು ಇರುತ್ತದೆ. ದಿನಾಂಕ:25/062022 ರಂದು ನಮ್ಮ ದೂರದ ಸಂಬಂಧಿಕರಾಗಬೇಕಾದ ಅಡಿವೆಪ್ಪ ಭಂಗಿ ಸಾ:ಹಣಮಸಾಗರ ರವರು ನಮ್ಮ ಹೊಲ ಹಂಚಿಕೆ ವಿಷಯವನ್ನು ಬಗೆಹರಿಸಿದ್ದು, ನಮ್ಮ ದೊಡ್ಡ ಅಣ್ಣ ಹಣಮಂತನು ನನಗೆ ನೀನು ಹೊಲದ ಮೇಲೆ ಹಾಕಿದ ಕೇಸ್ ವಾಪಸ್ ತೆಗೆದುಕೋ ನಾನು ನಿನ್ನ ಪಾಲಿಗೆ ಬಂದಂತಹ 20 ಗುಂಟೆ ಹೊಲವನ್ನು ನಿನ್ನ ಹೆಸರಿಗೆ ಮಾಡಿಕೊಳ್ಳಲು ನಾನು ಸಹಿ ಕೊಡುತ್ತೇನೆ ಅಂತ ಅಂದಿದ್ದು, ಅದಕ್ಕೆ ನಾನು ಒಪ್ಪಿಕೊಂಡು ಬಂದು ನಮ್ಮ ಪಾಡಿಗೆ ನಾವು ಇದ್ದೇವು. ಗಿದ್ದು, ದಿನಾಂಕ:26/06/2022 ರಂದು ಸಾಯಂಕಾಲ 7:00 ಪಿ.ಎಮ್ ಗಂಟೆಯ ಸುಮಾರಿಗೆ ನಾವು ನಮ್ಮ ಮನೆಯ ಅಂಗಳದಲ್ಲಿ ಮಾತನಾಡುತ್ತ ಕುಳಿತಿರುವಾಗ ಅಲ್ಲಿಗೆ ನಮ್ಮ ದೊಡ್ಡಣ್ಣ ಹಣಮಪ್ಪ ತಂದೆ ಹುಲಗಪ್ಪ, ದೇವಪ್ಪ ತಂದೆ ಹಣಮಪ್ಪ, ನಿಂಗಪ್ಪ ತಂದೆ ಹಣಮಪ್ಪ, ಹಣಮವ್ವ ಗಂಡ ಹಣಮಪ್ಪ, ಗುಡದಪ್ಪ ತಂದೆ ಸಿದ್ದಪ್ಪ, ರೇಣುಕಮ್ಮ ಗಂಡ ಗುಡದಪ್ಪ ಹಾಗು ಬಸಪ್ಪ ತಂದೆ ಗುಡದಪ್ಪ ರವರು ಕೂಡಿಕೊಂಡು ಕೈಯಲ್ಲಿ ರಾಡು, ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ ಏನಲೇ ಬೋಸಡಿ ಮಗನೇ ಹೊಲದ ಮೇಲಿನ ಎಲ್ಲಾ ಕೇಸುಗಳು ಮುಗುದವ ಇನ್ನೇನ ಇಂತಹ ನೂರು ಕೇಸ್ ಮಾಡಲೇ ನಾನು ನಿನಗೆ ಸಹಿ ಕೊಡುವದಿಲ್ಲಲೇ ಮಗನೇ ಅಂತಾ ಅಂದವನೇ ಹಣಮಪ್ಪ ಈತನು ತನ್ನ ಕೈಯಲ್ಲಿದ್ದ ರಾಡು ತೆಗೆದುಕೊಂಡು ಬಾಯಿ ಮೇಲೆ ಹೊಡೆದನು. ಇದನ್ನು ನೋಡಿ ನನ್ನ ಹೆಂಡತಿ ದ್ಯಾಮವ್ವ ಬಿಡಿಸಲು ಬಂದಾಗ ಹಣಮಪ್ಪನು ನನಗೆ ಹೊಡೆಯುವದನ್ನು ಬಿಟ್ಟು ನನ್ನ ಹೆಂಡತಿಯ ಸೀರೆ ಸೆರಗು ಹಿಡಿದುಕೊಂಡು ಎಳೆದಾಡಿ ಕೈಯಿಂದ ಬೆನ್ನ ಮೇಲೆ ಗುದ್ದಿ ನೂಕಿ ಕೆಳಗೆ ಕೆಡವಿದನು. ನನ್ನ ಹೆಂಡತಿ ಹೊಡೆಯುವದನ್ನು ನೋಡಿ ಬಿಡಿಸಲು ಹೋದಾಗ ಹಣಮಪ್ಪನ ಕೈಯಲ್ಲಿದ್ದ ರಾಡಿನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆ ರಕ್ತಗಾಯ ಮಾಡಿದು. ದೇವಪ್ಪ, ನಿಂಗಪ್ಪ, ಗುಡದಪ್ಪ ಹಾಗು ಬಸಪ್ಪ ರವರ ನನ್ನನ್ನು ಹಿಡಿದುಕೊಂಡು ತಮ್ಮ ಕೈಯಲ್ಲಿದ್ದ ಕಟ್ಟಿಗೆಗಳಿಂದ ನನ್ನ ಮೈಮೇಲೆಲ್ಲ ಹೊಡೆದು ಗುಪ್ತಗಾಯಪಡಿಸಿದು. ರೇಣುಕಮ್ಮ ಹಾಗು ಹಣಮವ್ವ ಇವರುಗಳು ನನ್ನ ಹೆಂಡತಿ ದ್ಯಾಮವ್ವಳಿಗೆ ಹಿಡಿದು ಬೆನ್ನ ಮೇಲೆ ಗುದ್ದಿ ಕೆಳಗೆ ಕೆಡವಿ ಒದೆಯುತ್ತಿದ್ದರು. ಅದೇ ದಾರಿಯಿಂದ ಹೋಗುತ್ತಿದ್ದ ನಮ್ಮೂರ ಗದ್ದೆಪ್ಪ ತಂದೆ ಹುಲಗಪ್ಪ ಕಂಬಳಿ, ಯಲ್ಲಪ್ಪ ತಂದೆ ಗಂಗಪ್ಪ ಜೋಗುಂಡಬಾವಿ ರವರು ನಾವು ಜಗಳಾಡುವದನ್ನು ನೋಡಿ ಬಂದು ಜಗಳವನ್ನು ಬಿಡಿಸಿದರು. ಅವರೆಲ್ಲರೂ ಹೋಗುವಾಗ ಇವತ್ತು ಉಳಕೊಂಡಿರಿ ಇನ್ನೊಂದು ಸಲ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನನಗೆ ಗಾಯವಾದ ಕಾರಣ ನಾನು ಉಪಚಾರ ಕುರಿತು ವಿಜಯಪೂರ ಜಿಲ್ಲಾ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ದಿನಾಂಕ:27/06/2022 ರಂದು ಎಮ್.ಎಲ್.ಸಿ ವಿಚಾರಣೆ ಕುರಿತು ಬಾಬು ಎ.ಎಸ್.ಐ ನಾರಾಯಣಪೂರ ಠಾಣೆ ರವರು ಬಂದು ವಿಚಾರಿಸಿದ್ದು, ನಮಗೆ ಹೊಡೆಬಡೆ ಮಾಡಿದವರು ನಮ್ಮ ಅಣ್ಣತಮ್ಮಕೀಯವರಿದ್ದು, ನಾವು ಊರಿಗೆ ಹೋದ ನಂತರ ಮನೆಯಲ್ಲಿ ವಿಚಾರ ಮಾಡಿಕೊಂಡು ಬಂದ ಫಿರ್ಯಾದಿ ಕೊಡುತ್ತೇವೆ ಅಂತಾ ಎಮ್.ಎಲ್.ಸಿ ವಿಚಾರಣೆ ಸಮಯದಲ್ಲಿ ಹೇಳೀದ್ದು, ದಿನಾಂಕ:29/06/2022 ರಂದು ಉಪಚಾರ ಹೊಂದಿ ಊರಿಗೆ ಬಂದು ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ನೀಡುತ್ತಿದ್ದು, ಜಗಳದಲ್ಲಿ ನನ್ನ ಹೆಂಡತಿಯ ಸೀರೆ ಸೆರಗು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಯತ್ನಿಸಿರುವ ಮತ್ತು ನಮಗೆ ಅವಾಚ್ಯ ಬೈದು ರಾಡು, ಕಟ್ಟಿಗೆ ಹಾಗು ಕೈಯಿಂದ ಹೊಡೆಬಡೆ ಮಾಡಿರುವ ಮೇಲೆ ನಮೂದಿಸಿರುವ 7 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ಹೇಳಿಕೆ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 26/2022 ಕಲಂ: 143, 147, 148, 323, 324, 354, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 02-07-2022 10:36 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080