Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-08-2021

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 57/2021 ಕಲಂ.279, 337 338 ಐಪಿಸಿ & 187 ಐ.ಎಮ್.ವ್ಹಿ ಕಾಯ್ದೆ : ಫಿರ್ಯಾದಿಯ ತಮ್ಮನಾದ ಬಸವರಾಜ ಹಾಗೂ ಅದೇ ಊರಿನ ಭೀಮರಾಯ ಇವರು ಕೂಡಿಕೊಂಡು ಫಿರ್ಯಾದಿದಾರನ ಮೋಟಾರ್ ಸೈಕಲ್ ನಂ: ಕೆಎ-28 ಡಬ್ಲ್ಯೂ-3511 ಪಲ್ಸರ್ ಗಾಡಿ ತೆಗೆದುಕೊಂಡು ಹುಣಸಗಿ ಹತ್ತಿರ ಇರುವ ಕಾಯಿಯವರ ಪೆಟ್ರೋಲ್ ಪಂಪನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಮರಳಿ ಕಾಮನಟಗಿ ಗ್ರಾಮಕ್ಕೆ ಹೊರಟಾಗ ಎದರುಗಡೆಯಿಂದ ಯಾವುದೋ ಒಂದು ಅಟೋ ಟಂ-ಟಂ ಚಾಲಕನು ಲೈಟ್ ಇಲ್ಲದೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಗಾಯಾಳುಗಳು ಹೊರಟ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಗಾಯಾಳುಗಳಿಬ್ಬರೂ ಕೆಳಗೆ ಬಿದ್ದು, ಬಲಗಾಲ ಮೊಣಕಾಲ ಹತ್ತಿರ & ತೊಡೆಯ ಹತ್ತಿರ ಎಲುಬು ಮುರಿದು ಭಾರೀ ರಕ್ತಗಾಯಗಳಾದ ಬಗ್ಗೆ ಅಪರಾಧ. ನಂತರ ಇಂದು ದಿನಾಂಕ:31/07/2021 ರಂದು ಬೆಳಿಗ್ಗೆ 7.30 ಗಂಟೆಗೆ ಪ್ರಕರಣದಲ್ಲಿ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಪುರವಣಿ ಹೇಳಿಕೆ ಕೊಟ್ಟಿದ್ದು ಏನೆಂದರೆ, ನಿನ್ನೆ ದಿನಾಂಕ:30/07/2021 ರಂದು ಸಾಯಂಕಾಲ 7.00 ಗಂಟೆಗೆ ಅಪಘಾತದಲ್ಲಿ ಗಾಯವಾಗಿದ್ದ ಬಸವರಾಜ ತಂದೆ ಪರಮಣ್ಣಗೌಡ ಪೊಲೀಸ್ ಪಾಟೀಲ ವಯಾ-26 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ & ಭೀಮರಾಯ ತಂದೆ ಬಾಲಪ್ಪ ಗುಂಡಕನಾಳ ವಯಾ-38 ಜಾ:ಬೇಡರ ಉ:ಡ್ರೈವರ್ ಕೆಲಸ, ಸಾ:ಇಬ್ಬರೂ ಕಾಮನಟಗಿ ತಾ:ಹುಣಸಗಿ ಇವರಿಗೆ ನಿನ್ನೆ ದಿನಾಂಕ:30/07/2021 ರಂದು ರಾತ್ರಿ ಹುಣಸಗಿ ಸರಕಾರಿ ಆಸ್ಪತ್ರೆಯಿಂದ ವಿಜಯಪೂರ ವಾಸುದೇವ ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಿದ್ದು, ಇಂದು ದಿನಾಂಕ:31/07/2021 ರಂದು ರಾತ್ರಿ 2.00 ಎ.ಎಮ್ಕ್ಕೆ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ಗಾಯ ಹೊಂದಿದ ಬಸವರಾಜ ತಂದೆ ಪರಮಣ್ಣಗೌಡ ಪೊಲೀಸ್ ಪಾಟೀಲ ವಯಾ-26 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಈತನು ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿಗಳು ತಿಳಿಸಿದ್ದು ಇರುತ್ತದೆ. ನಂತರ ಮೃತ ಬಸವರಾಜ ತಂದೆ ಪರಮಣ್ಣಗೌಡ ಪೊಲೀಸ್ ಪಾಟೀಲ ಈತನ ಶವವನ್ನು ವಾಪಸು ಹುಣಸಗಿ ಸರಕಾರಿ ಆಸ್ಪತ್ರೆಗೆನಿಂದು ದಿನಾಂಕ:31/07/2021 ರಂದು ಬೆಳಿಗ್ಗೆ 7.00 ಗಂಟೆಯ ಸುಮಾರಿಗೆ ವಾಪಸು ತಂದಿದ್ದು ಇರುತ್ತದೆ. ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಪುರವಣಿ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ ಅಂತಾ ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 174/2021.ಕಲಂ. 379. ಐ.ಪಿ.ಸಿ. : ಇಂದು ದಿನಾಂಕ 31/07/2021 ರಂದು 12-30 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ನಾಗರಾಜ ತಂದೆ ಸುಧಾಕರ ಗಜಕೋಶ ವ|| 28 ಜಾ|| ಡೋರ ಉ|| ವ್ಯಾಪಾರ ಸಾ|| ವಿದ್ಯಾನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ದಿನಾಂಕ 10/06/2021 ರಂದು ರಾತ್ರಿ 9-00 ಗಂಟೆಗೆ ದಿನನಿತ್ಯದಂತೆ ನಾನು ನನ್ನ ಕೆಲಸಮುಗಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ ನಂ ಕೆಎ-33 ಕ್ಯೂ-0741 ನೇದ್ದು ನಮ್ಮ ಮನೆಯ ಮುಂದೆ ನಿಲ್ಲಿಸಿ ದಿನನಿತ್ಯದಂತೆ ನಾನು ಮತ್ತು ನನ್ನ ತಮ್ಮ ಕೃಷ್ಣಾ ತಂದೆ ಸುಧಾಕರ ಇಬ್ಬರು ಊಟಮಾಡಿ ಹೋರಗಡೆ ಬಂದು ನಾನು ನನ್ನ ಗಾಡಿಯ ಹ್ಯಾಂಡ ಲಾಕಮಾಡಿ ರಾತ್ರಿ 10-00 ಗಂಟೆಗೆ ಮನೆಯಲ್ಲಿ ಎಲ್ಲರು ಮಲಗಿಕೊಂಡೆವು ನಂತರ ಬೆಳಿಗ್ಗೆ 6-00 ಗಂಟೆಗೆ ನಾನು ಎದ್ದು ಹೊರಗಡೆ ಬಂದು ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ್ ಸೈಕಲ್ ನೋಡಲಾಗಿ ಕಾಣಲಿಲ್ಲ. ಆಗ ನನ್ನ ತಮ್ಮ ಕೃಷ್ಣಾನಿಗೆ ಸದರಿ ಮೋಟರ್ ಸೈಕಲ್ ಬಗ್ಗೆ ವಿಚಾರಿಸಲಾಗಿ ನನಗೆ ಗೋತ್ತಿರುವದಿಲ್ಲಾ ಅಂತ ತಿಳಿಸಿದನು. ನಂತರ ನಾನು ಮತ್ತು ನನ್ನ ತಮ್ಮ ಕೃಷ್ಣಾ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ನಂ ಕೆಎ-33 ಕ್ಯೂ-0741 ನೇದ್ದು ಉಡುಕಾಡಲಾಗಿ ಸಿಕ್ಕಿರುವದಿಲ್ಲ ನನ್ನ ಕೆಂಪುಬಣ್ಣದ ಬಜಾಜ್ ಕಂಪನಿಯ ಪಲ್ಸರ 150 ಸಿ.ಸಿ. ಮೋಟರ್ ಸೈಕಲ್ ನಂ. ಕೆಎ-33 ಕ್ಯೂ-0741 ಇಓಉಓಇ ಓಔ- ಆಊಚಅಆಂ98794. ಅಊಇಖಖ ಓಔ-ಒಆ2ಂ11ಅಚ5ಆಅಂ03596 ಅ:ಕಿ:45000=00 ರೂ ನೇದ್ದನ್ನು ನಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಸಮಯದಲ್ಲಿ ದಿನಾಂಕ 10/06/2021 ರಂದು 10-00 ಪಿ.ಎಂ. ರಿಂದ ದಿನಾಂಕ 11/06/2021 ರಂದು ಬೆಳಿಗ್ಗೆ 6-00 ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಕಳ್ಳತನವಾದ ನನ್ನ ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಎಂದು ತಿಳಿದು ಹುಡುಕಾಡಿದರು ಸಿಗದೆ ಇದ್ದಾಗ ಇಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ನನ್ನ ಮೋಟರ್ ಸೈಕಲ್ ನಂ ಕೆಎ-33 ಕ್ಯೂ-0741 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 174/2021 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 126/2021 ಕಲಂ:323, 504, 506, 498(ಎ) ಸಂ. 34 ಐಪಿಸಿ : ಇಂದು ದಿನಾಂಕ:31/07/2021 ರಂದು 1:00 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀಮತಿ ಲಕ್ಷ್ಮಿ ಗಂಡ ಹೊನ್ನಪ್ಪ ಚಿನ್ನಕಾರ ವ|| 25 ವರ್ಷ ಜಾ|| ಕುರಬರ ಉ|| ಹೊಲಮನೆ ಗೆಲಸ ಸಾ|| ಆಲ್ದಾಳ ತಾ|| ಸುರಪುರ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಸುಮಾರು 05 ವರ್ಷಗಳ ಹಿಂದೆ ಆಲ್ದಾಳ ಗ್ರಾಮದ ಹೊನ್ನಪ್ಪ ಚಿನ್ನಕಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಸುಮಾರು ಮೂರ-ನಾಲ್ಕು ವರ್ಷಗಳಿಂದ ಇಬ್ಬರು ಅನ್ಯೂನ್ಯವಾಗಿದ್ದು ನಮ್ಮ ವೈವಾಹಿಕ ಜೀವನದಲ್ಲಿ ನಮಗೆ ಮೂರು ವರ್ಷದ ಒಬ್ಬ ಗಂಡು ಮಗನಿರುತ್ತಾನೆ. ಈಗ ಸುಮಾರು ಒಂದು ವರ್ಷ ನನ್ನ ಗಂಡ ಅತ್ತೆ ಮಾವ ಎಲ್ಲರೂ ಕೂಡಿ ನಿನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ವಿನಾಃಕಾರಣ ನನಗೆ ಆಗಾಗ ದೈಹಿಮ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದರು. ನಾನು ಮುಂದೆ ಸರಿಹೊಗಬಹುದು ಅಂತಾ ಸುಮ್ಮನೀರುತ್ತಿದ್ದೆ. ಈಗ ಎಂಟು ತಿಂಗಳ ಗಭರ್ೀಣಿ ಇರುತ್ತೇನೆ. ಈಗ ಸುಮಾರು ಒಂದು ತಿಂಗಳದಿಂದ ನಾನು ತವರುಮನೆಯಾದ ದೇವತ್ಕಲ್ ಗ್ರಾಮಕ್ಕೆ ಹೊದಾಗ ನನ್ನ ಗಂಡ ಹೊನ್ನಪ್ಪ, ಮಾವ ನಿಂಗಪ್ಪ, ಅತ್ತೆ ಮಲ್ಲಮ್ಮ ಇವರು ಹೊಡೆ ಬಡೆ ಮಾಡಿದ ವಿಷಯ ನಮ್ಮ ತಂದೆ ತಾಯಿಗೆ ಅಣ್ಣನಿಗೆ ಹೇಳಿದಾಗ ಅವರು ಸಂಸಾರದಲ್ಲಿ ಇದೇಲ್ಲಾ ಇದ್ದುದೆ ಅಂತಾ ಹೇಳಿ ಸಮಾದಾನ ಮಾಡುತ್ತಿದ್ದರು. ಹಿಗಿದ್ದು ದಿನಾಂಕ:22/07/2021 ರಂದು ಮದ್ಯಾಹ್ನ 4 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ನಾಗಪ್ಪ ತಂದೆ ಮಲ್ಲಪ್ಪ ಬಬಲಾದಿ, ಶಿವಮ್ಮ ಗಂಡ ನಾಗಪ್ಪ ಬಬಲಾದಿ, ಮಾಳಪ್ಪ ತಂದೆ ನಾಗಪ್ಪ ಬಬಲಾದಿ ಎಲ್ಲರು ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಅದೇ ಸಮಯಕ್ಕೆ ಆಲ್ದಾಳ ಗ್ರಾಮದಿಂದ 1) ನನ್ನ ಗಂಡ ಹೊನ್ನಪ್ಪ ತಂದೆ ನಿಂಗಪ್ಪ ಚಿನ್ನಾಕರ, 2) ನಿಂಗಪ್ಪ ತಂದೆ ಪಲ್ಲಕೆಪ್ಪ ಚಿನ್ನಾಕರ, 3) ಮಲ್ಲಮ್ಮ ಗಂಡ ನಿಂಗಪ್ಪ ಚಿನ್ನಕಾರ ಇವರೆಲ್ಲರು ಕೂಡಿ ಮನೆಯ ಮುಂದೆ ಬಂದು ನನಗೆ ನಮ್ಮ ಅತ್ತೆ ಮಲ್ಲಮ್ಮ ಇವಳು ತವರು ಮನೆಯಲ್ಲಿ ಬಂದು ಕುಂತರೆ ಅಲ್ಲಿ ಯಾರು ಕೆಲಸ ಮಾಡಬೇಕು ರಂಡಿ ಸೂಳಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನ್ನ ಗಂಡನು ನನಗೆ ಕುದಲು ಹಿಡಿದು ಕೈಯಿಂದ ಬೆನ್ನಿಗೆ ಹೊಡೆದನು. ನನ್ನ ಅತ್ತೆ ಇವಳು ಕೈಯಿಂದ ಕಪಾಳಕ್ಕೆ ಎದೆಗೆ ಬೆನ್ನಿಗೆ ಹೊಡೆದಳು. ಮಾವ ಮಲ್ಲಪ್ಪನು ಹೊಡೆಯಿರಿ ಈ ಸೂಳಿಗೆ ಅಂತಾ ಅವಾಚ್ಯಶಬ್ದಳಿಂದ ಬೈಯುತ್ತಿರುವಾಗ ಅಲ್ಲೆ ಇದ್ದ ನನ್ನ ತಂದೆ ನಾಗಪ್ಪ, ತಾಯಿ ಶಿವಮ್ಮ, ಅಣ್ಣ ಮಾಳಪ್ಪ, ಆಜು ಬಾಜು ಮನೆಯವರಾದ ಮಲ್ಲಣ್ಣ ತಂದೆ ಬೀರಪ್ಪ ಕೊಡೆಸೂರ, ಹುಲಗಮ್ಮ ಗಂಡ ಹಣಮಂತ್ರಾಯ ಉದ್ದಾರ ಇವರುಗಳು ಬಂದು ಜಗಳನ್ನು ನೋಡಿ ಬಿಡಿಸಿಕೊಂಡುರು. ಇವರು ಬಂದು ಜಗಳ ಬಿಡಿಸಿದ್ದಾರ ಬಿಟ್ಟಿದಿನಿ ಸೂಳಿ ಇಲ್ಲ ಅಂದರ ನಿನ್ನ ಜೀವ ಹೊಡೆಯದೆ ಬಿಡುತ್ತಿರಲ್ಲ ಸೂಳಿ ಅಂತಾ ಜೀವದ ಬೇದರಿಕೆ ಹಾಕಿ ಹೊದರು. ನನಗೆ ಕೈಯಿಂದ ಹೊಡೆ ಬಡೆ ಮಾಡಿದ್ದರಿಂದ ನಾನು ಯಾವುದೇ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ನಂತರ ನಾನು ಮನೆಯಲ್ಲಿ ನನ್ನ ತಂದೆ-ತಾಯಿ ಮತ್ತು ಅಣ್ಣನ ಜೋತೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸುಮಾರು 1 ವರ್ಷದಿಂದ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿದ್ದರಿಂದ ನಾನು ತವರು ಮನೆಗೆ ಬಂದರೂ ಸಹ ಇಲ್ಲಿಗೆ ಬಂದು ಹೊಡೆಬಡೆ ಮಾಡಿರುವ ಮೇಲೆ ಹೇಳಿರುವ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ದಯಾಪರರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 126/2021 ಕಲಂ: 323, 504, 506 498(ಎ) ಸಂ.34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 98/2021 ಕಲಂ: 447, 504, 323, 506 ಸಂ 34 ಐಪಿಸಿ : ಇಂದು ದಿನಾಂಕ: 31/07/2021 ರಂದು 1-45 ಪಿಎಮ್ ಕ್ಕೆ ಶ್ರೀ ತಮ್ಮಣ್ಣ ತಂದೆ ಯಂಕಣ್ಣ ನಾಗರೆಡ್ಡಿ, ವ:50, ಜಾ:ಲಿಂಗಾಯತ, ಉ:ಕೆ.ಪಿ.ಸಿ ನೌಕರ ಸಾ:ಮಾಚನೂರು ತಾ:ವಡಗೇರಾ ಜಿ:ಯಾದಗಿರಿ ಹಾ:ವ:ಶಕ್ತಿನಗರ ರಾಯಚೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ರಾಯಚೂರು ಥರ್ಮಲ್ ಪವರ್ ಕಾಪರ್ೋರೇಶನದಲ್ಲಿ ನೌಕರಿ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮ ಸ್ವಂತ ಗ್ರಾಮ ಮಾಚನೂರು ಸೀಮಾಂತರದಲ್ಲಿ ನನ್ನ ಹೆಸರಿನಲ್ಲಿ ಹೊಲ ಸವರ್ೆ ನಂ. 237 ವಿಸ್ತೀರ್ಣ 2 ಎಕರೆ 37 ಗುಂಟೆ ಜಮೀನು ಇರುತ್ತದೆ. ನಾನು ಸದರಿ ಜಮೀನು ಮಾಲಿಕ ಮತ್ತು ಕಬ್ಜೆದಾರನಾಗಿರುತ್ತೇನೆ. ಸದರಿ ನನ್ನ ಜಮೀನನ್ನು ನಾನು ಕೆಪಿಸಿ ನೌಕರನಾಗಿರುವುದರಿಂದ ನಮ್ಮೂರಲ್ಲಿ ಲೀಜು ಮಾಡುವವರಿಗೆ ನನ್ನ ಜಮೀನು ಲೀಜ ಕೊಡುತ್ತಾ ಬರುತ್ತಿದ್ದೇನು. ಆದರೆ ನಮ್ಮ ಜಮೀನು ಬಾಜು ಇದೆ ಸವರ್ೆ ನಂ. ದಲ್ಲಿ ಪ್ರಭಾವತಿ ತಂದೆ ತಿಮ್ಮಪ್ಪ ಇವರಿಗೆ 2 ಎಕರೆ 36 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನನ್ನು ಪ್ರಭಾವತಿ ಇವಳ ತಂದೆಯಾದ ತಿಮ್ಮಪ್ಪ ತಂದೆ ಭೀಮರೆಡ್ಡಿ ಪೊಲೀಸ್ ಪಾಟಿಲ್ ಈತನು ಸಾಗುವಳಿ ಮಾಡುತ್ತಿದ್ದು, ಸದರಿ ತಿಮ್ಮಪ್ಪ ಈತನು ನನ್ನ ಹೊಲ ಲೀಜು ಮಾಡುವವರಿಗೆ ನೀವು ನಮ್ಮ ಹೊಲದಲ್ಲಿ ಬಸಿ ನೀರು ಬಿಡಬಾರದು ಮತ್ತು ಬಸಿ ಗಾಲುವೆ ಕೂಡ ಮಾಡಬಾರದು ಎಂದು ತಕರಾರು ಮಾಡುತ್ತಾ ಬಂದಿದ್ದರಿಂದ ಲೀಜು ಮಾಡುವವರು ಅವರಿಗೆ ಅಂಜಿ ಲೀಜು ಮಾಡುವುದು ಬಿಟ್ಟಿರುತ್ತಾರೆ. ಆದ್ದರಿಂದ ಈ ವರ್ಷ ಸದರಿ ಹೊಲವನ್ನು ನಾನೆ ಸ್ವತಃ ಸಾಗುವಳಿ ಮಾಡಿಸುತ್ತಿದ್ದೇನೆ. ಹೀಗಿದ್ದು ದಿನಾಂಕ:20/07/2021 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ನಮ್ಮ ಮೇಲ್ಕಂಡ ಹೊಲ ಸವರ್ೆ ನಂ. 237 ನೇದ್ದರಲ್ಲಿ ಕೆಲಸ ಮಾಡುತ್ತಾ ಗದ್ದೆಗೆ ನೀರು ಬಿಡುತ್ತಿದ್ದೆನು. ಆಗ ಬಾಜು ಹೊಲದ ಪ್ರಭಾವತಿ ಇವಳ ತಂದೆಯಾದ 1) ತಿಮಪ್ಪ ತಂದೆ ಭೀಮರೆಡ್ಡಿ ಪೊಲೀಸ್ ಪಾಟೀಲ್ ಮತ್ತು ಅವನ ಮಕ್ಕಳಾದ 2) ಭೀಮಣ್ಣ ತಂದೆ ತಿಮ್ಮಪ್ಪ, 3) ಯಂಕಪ್ಪ ತಂದೆ ತಿಮ್ಮಪ್ಪ ಎಲ್ಲರೂ ಸಾ:ಮಾಚನೂರು ಈ ಮೂರು ಜನ ಸೇರಿ ಬಂದವರೆ ನನ್ನ ಮೇಲ್ಕಂಡ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ನನಗೆ ಮಗನೆ ನೀನು ಗದ್ದೆಗೆ ನೀರು ಬಿಡಬೇಡ ಅಂತಾ ಅಂದರು, ನೀರು ಬಿಡುತ್ತಿದ್ದಿ, ಆ ನೀರು ನಮ್ಮ ಹೊಲದಲ್ಲಿ ಬಂದು ನಮ್ಮ ಹೊಲ ಹಾಳಾಗುತ್ತಿದೆ ಎಂದು ಜಗಳ ತೆಗೆದವರೆ ನನಗೆ ಭೀಮಣ್ಣ ಮತ್ತು ಯಂಕಪ್ಪ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ತಿಮ್ಮಪ್ಪನು ಬಂದು ಕೈ ಮುಷ್ಟಿ ಮಾಡಿ, ನನ್ನ ಮುಖ ಮತ್ತು ಎದೆಗೆ ಗುದ್ದಿದನು. ಆಗ ಜಗಳವನ್ನು ಅಲ್ಲಿಯೇ ಬಾಜು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವಂತ್ರಾಯ ತಂದೆ ಸಿದ್ರಾಮಪ್ಪ ಪರಸಾಪೂರ ಮತ್ತು ಯಂಕಪ್ಪ ತಂದೆ ಬಸಣ್ಣ ತಮ್ಮಣ್ಣೋರ ಇಬ್ಬರೂ ಬಂದು ಜಗಳ ಬಿಡಿಸಿದರು. ಆಗ ಹೊಡೆಯವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ನಮ್ಮ ಹೊಲದಲ್ಲಿ ನೀರು ಬಿಟ್ಟರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಹೊದರು. ನನಗೆ ಕೈಯಿಂದ ಹೊಡೆದಿದ್ದು, ಅಂತಹ ಪೆಟ್ಟುಗಳಾಗದ ಕಾರಣ ನಾನು ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಗದ್ದೆಗೆ ನೀರು ಬಿಡುವುದನ್ನು ತಡೆಗಟ್ಟಿ, ನನಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 98/2021 ಕಲಂ: 447, 323, 504, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ : 48/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 31/07/2021 ರಂದು 6:10 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 12:10 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಡಂಬಾವಿ ಗ್ರಾಮದ ಶ್ರೀ ಕನಕದಾಸ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು 1/- ರೂ 80/- ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 48/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 8:35 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1200/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

 


ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 83/2021 ಕಲಂ.419,420,465,468, ಐಪಿಸಿ : ಇಂದು ದಿನಾಂಕ.31/07/2021 ರಂದು 7-00 ಪಿಎಂಕ್ಕೆ ಶ್ರೀ ಡಾ:ಲಕ್ಷ್ಮಿಕಾಂತ ತಂದೆ ಶಿವಾನಂದ ವಂಟಿಪೀರ ವಯಾ:46 ಉ: ಜಿಲ್ಲಾ ಮಲೇರಿಯಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಜಾತಿ:ಮಾದಿಗ ಸಾ:ಕುಲೂರು ಮಲ್ಲಪ್ಪ ಲೇ ಔಟ ಗಾರ್ಡನ ಹತ್ತಿರ ಯಾದಗಿರಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಮ್ಮ ತಂದೆಯವರಾದ ಶಿವಾನಂದಪ್ಪ ವಂಟಿಪೀರ ರವರು ದಿನಾಂಕ 27/02/2016 ರಂದು ಮರಣಹೊಂದಿರುತ್ತಾರೆ ಉಲ್ಲೇಖ (1) ಶ್ರೀಕಾಂತ ತಂದೆ ಸಾಯಬಣ್ಣ ದೊಡ್ಡಮನಿ ಸಾಃ ಹೊಸಳ್ಳಿ ಕ್ರಾಸ ಯಾದಗಿರಿ ರವರು ಸವರ್ೇ ನಂ150/1 ಪ್ಲಾಟ ನಂ 30 ಮನೆ ನಂ5-5-344/3ಎ ಮನೆಯನ್ನು ನನ್ನ ತಂದೆಯವರಾದ ಶಿವಾನಂದಪ್ಪ ತಂದೆ ಆಶಪ್ಪ ವಂಟಿಪೀರ ರವರಿಗೆ ದಿನಾಂಕ 04/08/2011 ರಂದು ಉಪನೊಂದಣಾಧಿಕಾರಿಗಳ ಯಾದಗಿರಿ ಕಛೇರಿಯಲ್ಲಿ ನೊಂದಣೆ ಮಾಡಿದ್ದು ಇರುತ್ತದೆ. ಉಲ್ಲೇಖ(2) ರಂತೆ ನಗರ ಸಭೆಕಾರ್ಯಲಯ ಯಾದಗಿರಿಯಲ್ಲಿ ಮನೆಯ ಹೆಸರು ವಗರ್ಾವಣೆ ಆಜ್ಞಾ ಪತ್ರ ಕೂಡಾ ಆಗಿರುತ್ತದೆ ಮತ್ತು ಮನೆ ಕರಪಟ್ಟಿಯನ್ನು ಕೂಡಾ ನಮ್ಮ ತಂದೆಯವರ ಕಟ್ಟಿರುತ್ತಾರೆ ಹಾಗೂ ಉಲ್ಲೇಖ (3) ರಂತೆ ನಕಲಿ ದಾಖಲೆ ಸೃಷ್ಟಿಸಿ ನೊಂದಣೆ ಮತ್ತು ಮುದ್ರಾಂಕ ಇಲಾಖೆ ಯಾದಗಿರಿಯಲ್ಲಿ ಗಿಪ್ಟ ಡೀಡ ತಯ್ಯಾರಿಸಿಕೊಂಡಿದ್ದು ಗಿಪ್ಟ ಡೀಡ ದಿನಾಂಕವನ್ನು ತಿದ್ದಲಾಗಿದೆ ಮತ್ತು ಪಿ.ಎ.ಡಿ ಸಂಖ್ಯೆ 35-501-509ರಲ್ಲಿ ಹಕ್ಕು ಬದಲಾಣೆ ಕಡತ ಸಂಖ್ಯೆ ಇರದೆ ಹಕ್ಕು ಬದಲಾವಣೆ ಕೈಕೊಳ್ಳಲಾಗಿದೆ ಮತ್ತು ಸ್ವಾಧಿನತೆಗೆ ಪೂರಕ ದಾಖಲೆಗಳು ಸ್ಥಳದಲ್ಲಿ ಇತರೆ ಇತರೆಯಂದು ನಮೂದಿಸಿರುತ್ತಾರೆ ಆದರು ಕೂಡಾ ಶ್ರೀಕಾಂತ ತಂದೆ ಸಾಯಬಣ್ಣ ದೊಡ್ಡಮನಿ ರವರು ನಕಾಶೆಯನ್ನು ತಯ್ಯಾರಿಸಿ ಪಿ.ಎ.ಡಿ ಸಂಖ್ಯೆ 35/501-509ರಲ್ಲಿ ನಿಮರ್ಾಣದ/ಕೆಡವಿದ ಸ್ಥಳದಲ್ಲಿ 2007 ಮೇ ವರ್ಷದಲ್ಲಿ ನಿಮರ್ಾಣವಾದ ಹೊಸ ಕಟ್ಟಡವೆಂದು ನಮೂದಿಸಿರುತ್ತಾರೆ. ಆದರೆ ಈ ಕಟ್ಟಡವು ನಮ್ಮ ತಂದೆಯವರು ನೊಂದಣೆ ಮಾಡಿಸಿಕೊಂಡಾಗ ಅಂದರೆ 04/08/2011 ನೇ ಇಸವಿಯಲ್ಲಿಯೇ 17 ವರ್ಷ ಹಳೆದು ಇರುವ ಬಗ್ಗೆ ಉಲ್ಲೇಖಿತ (1) ರಲ್ಲಿ ಉಲ್ಲೆಖಿತವಾಗಿರುತ್ತದೆ.ಆದರೆ ಉಲ್ಲೇಖ (4) ರಲ್ಲಿ ದಿನಾಂಕ 13/02/2020 ರಂದು ಕಾನೂನು ಬಾಹಿರವಾಗಿ ಶ್ರೀಕಾಂತ ತಂದೆ ಸಾಯಬಣ್ಣ ದೊಡ್ಡಮನಿ ರವರು ಅವರ ಪತ್ನಿಯಾದ ಪಾರ್ವತಿ ಗಂಡ ಶ್ರೀಕಾಂತ ದೊಡ್ಡಮನಿ ರವರಿಗೆ ದಾನ ಪತ್ರವನ್ನು ರಜಿಸ್ಟ್ರಾರ ಕಛೇರಿಯಲ್ಲಿ ನೊಂದಣೆ ಮಾಡಿಸಿರುತ್ತಾರೆ. ಕಾರಣ ಶ್ರೀಕಾಂತ ತಂದೆ ಸಾಯಬಣ್ಣ ದೊಡ್ಡಮನಿ ಸಾ:ಹೊಸಳ್ಳಿ ಕ್ರಾಸ್ ಯಾದಗಿರಿ ಮತ್ತು ಆತನ ಪತ್ನಿ ಪಾರ್ವತಿ ಗಂಡ ಶ್ರೀಕಾಂತ ದೊಡ್ಡಮನಿ ರವರು ಇತರೆ ಅಧಿಕಾರಿಗಳಿಂದ ಸುಳ್ಳದಾಖಲೆಗಳನ್ನು ಸೃಷ್ಟಿಸಿ ಮೋಸ ವಂಚನೆ ಮಾಡಿರುತ್ತಾರೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 83/2021 ಕಲಂ. 419,420,465,468, ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 120/2021 ಕಲಂ 341, 323, 324, 504, 506 ಐಪಿಸಿ. : ಇಂದು ದಿನಾಂಕ 31.07.2021 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮ ತಾಂಡಾದಲ್ಲಿಯ ಮೃತಳ ಅಂತ್ಯ ಸಂಸ್ಕಾರ ಮಾಡಿದ ನಂತರ ಸಂಪ್ರದಾಯದಂತೆ ಬೀಡಿ ಕೊಡುವ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಹೀರ್ಯಾ ರಾಠೋಡ ಇವರ ಮನೆಯ ಮುಂದಿನ ದಾರಿಯ ಮುಖಾಂತರ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿತನು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನೊಂದಿಗೆ ಕುಸ್ತಿಗೆ ಬಿದ್ದು ಕೈಯಿಂದ, ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 120/2021 ಕಲಂ 341, 323, 324, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 121/2021 ಕಲಂ 323, 324, 504, 506, ಸಂಗಡ 34 ಐಪಿಸಿ. : ಫಿಯರ್ಾದಿಗೆ ಇಬ್ಬರು ಮಕ್ಕಳಿದ್ದು ಗಂಡ ಮೃತಪಟ್ಟಿದ್ದು ಇಬ್ಬರು ಮಕ್ಕಳು ದುಡಿದು ಆಸ್ತಿ ಮಾಡಿದ್ದು ಫಿಯರ್ಾದಿಯ ಸಣ್ಣ ಮಗನು ಆಸ್ತಿಯಲ್ಲಿ ಪಾಲು ಕೊಡುವಂತೆ ಫಿಯರ್ಾದಿಯ ದೊಡ್ಡ ಮಗನಿಗೆ ಕೇಳಿದಕ್ಕೆ ತಕರಾರು ಮಾಡುತ್ತಿದ್ದು ಫಿಯರ್ಾದಿಯು ದೊಡ್ಡ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ಫಿಯರ್ಾದಿಯು ದಿನಾಂಕ: 31.07.2021 ರಂದು 06.30 ಗಂಟೆ ಸುಮಾರಿಗೆ ತನ್ನ ಮನೆಯ ಮುಂದೆ ಇದ್ದಾಗ ಆರೋಪಿತರಿಬ್ಬರು ಬಂದು ಆವಾಚ್ಚ ಶಬ್ದಗಳಿಂದ ಬೈದು ಹೊಡೆ ಬಡೆಮಾಡಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 111/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 31.07.2021 ರಂದು 1730 ಗಂಟೆಗೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ಇಂದು ದಿನಾಂಕ: 31.07.2021 ರಂದು ಕೆಂಭಾವಿ ಪಟ್ಟಣದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದರಿ ಸ್ಥಳಕ್ಕೆ 05.55 ಪಿಎಮ್ಕ್ಕೆ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಖಾಜಾಹುಸೇನ ತಂದೆ ಜಿಲಾನಿಸಾಬ ಸಿಲ್ಲೇದಾರ ವಯಾ|| 35 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕೆಂಭಾವಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1340/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 6 ಪಿಎಮ್ದಿಂದ 7 ಪಿಎಮ್ವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 111/2021 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ :112/2021 ಕಲಂ 15[ಎ],32[3] ಕೆ. ಇ ಯಾಕ್ಟ : ಇಂದು ದಿನಾಂಕ:31/07/2021 ರಂದು 08.30 ಪಿಎಮ್ಕ್ಕೆ ಶ್ರೀ ದೌಲತ್ ಎನ್ ಕೆ ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ: 31.07.2021 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ಪೆಟ್ರೊಲಿಂಗ ಕರ್ತವ್ಯ ಕುರಿತು ಸಿಬ್ಬಂದಿಯವರಾದ ಬಸವರಾಜ ಪಿಸಿ 176 ರವರೊಂದಿಗೆ ಕೆಂಭಾವಿ ಪಟ್ಟಣದಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ಕೂಡಲಗಿ ಗ್ರಾಮದ ಬಾಬಾ ಸದಾನಂದ ಮಠದ ಹತ್ತಿರ ಎರಡು ಜನರು ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾರೆಂದು ಮಾಹಿತಿ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 37 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಜೀಪ ಚಾಲಕ ಬಸವರಾಜ ಪಿಸಿ 176 ಮತ್ತು ಗಜಾನಂದ ಪಿಎಸ್ಐ ಕೆಂಭಾವಿ ಠಾಣೆ, ಶಂಕರಗೌಡ ಹೆಚ್ಸಿ 33 ಕೆಂಭಾವಿ ಠಾಣೆ, ಪ್ರಕಾಶ ಹೆಚ್ಸಿ 122 ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0315 ನೇದ್ದರಲ್ಲಿ ಠಾಣೆಯಿಂದ 06.15 ಪಿಎಮ್ಕ್ಕೆ ಹೊರಟು 06.40 ಪಿಎಮ್ಕ್ಕೆ ಕೂಡಲಗಿ ಗ್ರಾಮದ ಬಾಬಾ ಸದಾನಂದ ಮಠದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡುವದನ್ನು ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವರು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಗಳನ್ನು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಭೀಮಣ್ಣ ತಂದೆ ಮಲ್ಲಪ್ಪ ಹುಲಿಮನ ವಯಾ|| 45 ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಸಾ|| ಕೂಡಲಗಿ ಅಂತ ತಿಳಿಸಿದನು. ಇನ್ನೊಬ್ಬನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ರವಿ ತಂದೆ ರುದ್ರಗೌಡ ಮಾಲಿ ಪಾಟೀಲ ವಯಾ|| 34 ಜಾ|| ಗಾಣಿಗ ಉ|| ಕೂಲಿ ಸಾ|| ಕೂಡಲಗಿ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 180 ಎಮ್ಎಲ್ನ ಓರಿಜಿನಲ್ ಚೊಯಿಸ್ ವಿಸ್ಕಿ ಪೌಚು ಒಟ್ಟು 12 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 70.26 ರೂ. ಅಂತ ಇದ್ದು ಒಟ್ಟು 12 ಪೌಚ್ಗಳ ಬೆಲೆ 843.12/- ರೂ ಆಗುತ್ತಿದ್ದು ನಂತರ ಎರಡೂ ಜನರಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದರು. ಸದರಿ ಮಧ್ಯ ತುಂಬಿದ 180 ಎಮ್ಎಲ್ನ 12 ಪೌಚ್ಗಳನ್ನು 06:45 ಪಿಎಮ್ದಿಂದ 07.45 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು ನಂತರ ಮೇಲ್ಕಂಡ ಆರೋಪಿತರನ್ನು 08:30 ಪಿಎಮ್ಕ್ಕೆ ಠಾಣೆಗೆ ಕರೆದುಕೊಂಡು ಬಂದು ಸದರಿ ಆರೋಪಿತರ ವಿರುದ್ದ ಕಲಂ: 15(ಎ), 32(3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:112/2021 ಕಲಂ: 15(ಎ), 32(3) ಕೆಇ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 02-08-2021 09:57 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080