Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-08-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 117/2022 ಕಲಂ. 304(ಎ) 201 ಐಪಿಸಿ: ದಿನಾಂಕ: 31-07-2022 ಮದ್ಯಾಹ್ನ 2-00 ಗಂಟೆಗೆ ಪಿರ್ಯಾಧಿಧಾರನು ಠಾಣೆಗೆ ಹಾಜರಾರ್ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-07-2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಮ್ಮ ತಮ್ಮ ಆಡು ಮೇಯಿಸಲು ನಾವು ಲೀಸಿಗೆ ಮಾಡಿದ ಸುಧೀಂದ್ರ ಇವರ ಹೊಲದ ಕಡೆಗೆ ಹೋಗಿದ್ದನು. ಸಾಯಂಕಾಲ 05-00 ಗಂಟೆ ಸುಮಾರಿಗೆ ನಾನು ನಮ್ಮ ತಂದೆ ಮನೆಯಲ್ಲಿರುವಾಗ ನಮ್ಮ ಆಡುಗಳು ಮನೆಗೆ ಬಂದವು ಆದರೆ ನನ್ನ ತಮ್ಮ ಮಲ್ಲಿಕಾಜರ್ುನ ಈತನು ಬರಲಿಲ್ಲ. ಆಗ ನಾವು ಊರಲ್ಲಿ ಹೋಗಿ ನೋಡಿದೆವು ಎಲ್ಲಿ ನನ್ನ ತಮ್ಮ ಇರಲಿಲ್ಲ. ಆಗ ನಮ್ಮ ತಂದೆ ಭೀಮರಾಯ ನಮ್ಮ ಮಾವ ಭೀಮರಾಯ ಬಾವೂರ ಎಲ್ಲರು ಕೂಡಿ ನಾವು ಲೀಜಿಗೆ ಮಾಡಿದ ಹೊಲಕ್ಕೆ ಹೋಗಿ ನೋಡಲಾಗಿ ಅಲ್ಲಿ ಕೂಡ ಇರಲಿಲ್ಲ ಆಗ ನಾವು ನಾವು ಲಿಜಿಗೆ ಮಾಡಿದ ಹೊಲದಲ್ಲಿ ಬಾವಿ ಇದ್ದು ಆ ಬಾವಿ ಹತ್ತಿರ ಹೋಗಿ ನೋಡಲಾಗಿ ಬಾವಿಯ ಮುಂದುಗಡೆ ನಮ್ಮ ತಮ್ಮನ ಚಪ್ಪಲಿ ಇದ್ದವು, ಆಗ ನಮಗೆ ಸಂಶಯ ಬಂದಿದ್ದು ನಮ್ಮೊಂದಿಗೆ ಬಂದಿದ್ದ 1)ಅಂಜಪ್ಪ, 2)ಮರೆಪ್ಪ, 3)ಮಲ್ಲಪ್ಪ, 4)ಭೀಮರಾಯ ತಂದೆ ಮಲ್ಲಪ್ಪ ಬಾವೂರ ಇವರು ಭಾವಿಯಲ್ಲಿ ಇಳಿದು ಈಜಾಡಿ ಹುಡುಕಾಡಿದ್ದು 7:30 ಗಂಟೆಯ ಸುಮಾರಿಗೆ ನನ್ನ ತಮ್ಮನ ಶವ ದೊರೆತಿದ್ದು, ಮೇಲೆ ತಂದು ನೊಡಲಾಗಿ ನನ್ನ ತಮ್ಮ ಮಲ್ಲಿಕಾಜರ್ುನನು ಸತ್ತಿದ್ದನು. ನನ್ನ ತಮ್ಮನ ಶವವನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಶವ ಕೊಳೆಯಬಹುದೆಂದು ಉಪ್ಪು ಹಾಕಿ ನನ್ನ ತಮ್ಮನ ಶವವನ್ನು ಉಪ್ಪಿನಲ್ಲಿ ಇಟ್ಟೆವು. ಇಂದು ಬೆಳಗ್ಗೆ ನನ್ನ ತಮ್ಮ ಮಲ್ಲಿಕಾಜರ್ುನನ ಶವಕ್ಕೆ ಸ್ನಾನ ಮಾಡಿಸುವಾಗ ನೋಡಲಾಗಿ ನನ್ನ ತಮ್ಮನ ಎಡಪಕ್ಕೆಗೆ, ಬೆನ್ನಿನ ಹಿಂದೆ ಕುತ್ತಿಗೆಯ ಕೆಳಗಡೆ, ಎರಡೂ ಕಾಲುಗಳ ತೊಡೆಗಳಿಗೆ, ಎಡಕೈಗೆ ಕಂದುಗಟ್ಟಿದ ಗಾಯಗಳು ಕಂಡುಬಂದವು. ನಂತರ ನಮ್ಮ ಸಂಬಂಧಿಕ ಸುಭಾಷ ತಂದೆ ಮಲ್ಲಪ್ಪ ಬಾವೂರ ಇವರು ತಿಳಿಸಿದ್ದೇನೆಂದರೆ, ಸಾಯಂಕಾಲ 4:00 ಗಂಟೆಯ ಸುಮಾರಿಗೆ ಮಹಾದೇವಪ್ಪ ತಂದೆ ತಿಪ್ಪಣ್ಣ ಮಂಗನೋರ್, ತಿಪ್ಪಣ್ಣ ತಂದೆ ಭೀಮಣ್ಣ ಮಂಗನೋರ್ ಇವರ ಹೊಲ ಗದ್ದೆಯಲ್ಲಿ ನಿಂಗಪ್ಪ ತಂದೆ ದೊಡ್ಡತಾಯಪ್ಪ ಮಡಿವಾಳ ಈತನು ಉಳುಮೆ ಮಾಡುವಾಗ ಕೆಸರಿನಲ್ಲಿ ಅವರ ಟ್ರ್ಯಾಕ್ಟರ್ ಸಿಕ್ಕಿಬಿದ್ದಿರುತ್ತದೆ ಆ ಸಮಯದಲ್ಲಿ ಮಲ್ಲಿಕಾಜರ್ುನ ಅಲ್ಲೆ ಇದ್ದ ಎಂದು ತಿಳಿಸಿದೆನು. ನಿನ್ನೆ ದಿನಾಂಕ:30/07/2022 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನನ್ನ ತಮ್ಮ ಮಲ್ಲಿಕಾಜರ್ುನನು ಮಹಾದೇವಪ್ಪ ತಂದೆ ತಿಪ್ಪಣ್ಣ ಮಂಗನೋರ್, ತಿಪ್ಪಣ್ಣ ತಂದೆ ಭೀಮಣ್ಣ ಮಂಗನೋರ್ ಇವರ ಹೊಲದ ಪಕ್ಕದಲ್ಲಿರುವ ಸುಧೀಂದ್ರ ದೇಸಾಯಿರವರ ಹೊಲದಲ್ಲಿ ನಮ್ಮ ಆಡುಗಳನ್ನು ಮೇಯಿಸುತ್ತಾ ಮಹಾದೇವಪ್ಪ ಮಂಗನೋರ್ ಇವರ ಗದ್ದೆಯ ಹೊಲದ ಹತ್ತಿರ ಇದ್ದಾಗ ಮಹಾದೇವಪ್ಪ ಮಂಗನೋರ್ ಇವರ ಹೊಲದಲ್ಲಿ ನಿಂಗಪ್ಪ ತಂದೆ ದೊಡ್ಡತಾಯಪ್ಪ ಮಡಿವಾಳ ಈತನು ಉಳುಮೆ ಮಾಡುವಾಗ ಕೆಸರಿನಲ್ಲಿ ಟ್ರ್ಯಾಕ್ಟರ್ ಸಿಕ್ಕಿಹಾಕಿಕೊಂಡಿದ್ದರಿಂದ ಆ ಟ್ರ್ಯಾಕ್ಟರನ್ನು ತೆಗೆಯಲು ತಾಯಪ್ಪ ತಂದೆ ಬುಗ್ಗಪ್ಪ ಧನಕಾಯೋರ್ ಇವರ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಸಿಕ್ಕಿಬಿದ್ದ ಟ್ರ್ಯಾಕ್ಟರ್ಗೆ ಹಗ್ಗಕಟ್ಟಿ ಹೊರಗಡೆ ಎಳೆಯುವಾಗ ಅವರ ನಿರ್ಲಕ್ಷ್ಯತನದಿಂದ ಟ್ರ್ಯಾಕ್ಟರ್ ಸ್ಲಿಪ್ ಆಗಿ ಬಂದು ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ನನ್ನ ತಮ್ಮನಿಗೆ ಗುದ್ದಿದ್ದರಿಂದ ನನ್ನ ತಮ್ಮ ಮಲ್ಲಿಕಾಜರ್ುನನು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. 1)ಮಹಾದೇವಪ್ಪ ತಂದೆ ತಿಪ್ಪಣ್ಣ ಮಂಗನೋರ್, 2)ತಿಪ್ಪಣ್ಣ ತಂದೆ ಭೀಮಣ್ಣ ಮಂಗನೋರ್, 3)ತಾಯಪ್ಪ ತಂದೆ ಬುಗ್ಗಪ್ಪ ಧನಕಾಯೋರ್, 4)ನಿಂಗಪ್ಪ ತಂದೆ ದೊಡ್ಡತಾಯಪ್ಪ ಮಡಿವಾಳ ಇವರು ಕೂಡಿಕೊಂಡು ನನ್ನ ತಮ್ಮನು ಟ್ರ್ಯಾಕ್ಟರ್ ಗುದ್ದಿದ್ದರಿಂದ ಮೃತಪಟ್ಟಿದ್ದನ್ನು ಮರೆಮಾಚಲು ತಮ್ಮ ಮೇಲೆ ಸಂಶಯಬರಬಾರದೆಂದು ಘಟನೆಯನ್ನು ನಾವು ಲೀಜಿಗೆ ಮಾಡಿದ ಸುಧೀಂದ್ರ ದೇಸಾಯಿರವರ ಹೊಲದಲ್ಲಿರುವ ಭಾವಿಯಲ್ಲಿ ನನ್ನ ತಮ್ಮ ಮಲ್ಲಿಕಾಜರ್ುನನ ಮೃತದೇಹವನ್ನು ಹಾಕಿ ಸಾಕ್ಷಿನಾಶಪಡಿಸಲು ಯತ್ನಿಸಿರುತ್ತಾರೆ. ಅಂತಾ ಪಿಯರ್ಾಧಿ, ಸಾರಂಶ

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 279, 337, 338, 304(ಎ) ಐ.ಪಿ.ಸಿ: ಇಂದು ದಿನಾಂಕ: 31/05/2022 ರಂದು 5.00 ಎ.ಎಂ.ಕ್ಕೆ ಶ್ರೀ ದೇವರಾಜ ತಂ/ ಮರೆಪ್ಪ ತಳವಾರ ವ|| 25 ವರ್ಷ ಜಾ:ಕಬ್ಬಲಿಗ ಉ:ಕೂಲಿಕೆಲಸ ಸಾ:ರಾಕಮಗೇರಾ ಶಹಾಪೂರ ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರು ಅಜರ್ಿ ಸಾರಾಂಶ ಏನೆಂದರೆ, ದಿನಾಂಕ: 21/07/2022 ರಂದು ಶಹಾಪೂರ ನಗರದ ರಾಯಲ್-ಎನಪೀಲ್ಡ ಟೈಯರ ಅಂಗಡಿ ಎದುರುಗಡೆ ಇರುವ ಜೀಶಾನ ಪಾಟಾ ಗ್ಯಾರೆಜ ಮುಂದೆ ಮುಖ್ಯ ರಸ್ತೆ ಮೇಲೆ ಜರುಗಿದ ಆಟೋ ನಂ: ಕೆ.ಎ-33 ಬಿ-0667 ನೇದ್ದರ ರಸ್ತೆ ಅಪಘಾತದಲ್ಲಿ ನನ್ನ ತಂದೆ ಮರೆಪ್ಪ ತಂ/ ಸಾಯಬಣ್ಣ ತಳವಾರ ಇವರಿಗೆ ಭಾರೀ ಗಾಯಗಳಾದ ಬಗ್ಗೆ ನಾನು ಕೊಟ್ಟ ಫಿಯರ್ಾದಿ ಆಧಾರದ ಮೇಲಿಂದ ಶಹಾಪೂರ ಪೊಲೀಸ್ ಠಾಣೆ ಗುನ್ನೆ. ನಂ. 135/2022 ಕಲಂ 279, 337, 338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲು ಆಗಿರುತ್ತದೆ. ದಿನಾಂಕ: 21/07/2022 ರಂದು ಜರುಗಿದ ರಸ್ತೆ ಅಪಘಾತದಲ್ಲಿ ಗಾಯಗಳನ್ನು ಹೊಂದಿದ್ದ ನನ್ನ ತಂದೆ ಮರೆಪ್ಪ ತಳವಾರ ರವರಿಗೆ ಉಪಚಾರ ಕುರಿತು ಕಲಬುರಗಿಯ ಕುರಾಳ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಅಲ್ಲಿ ಅಷ್ಟೊಂದ ಚಿಕಿತ್ಸೆ ಸೌಲಭ್ಯ ಇಲ್ಲದಿರುವುದಿಂದ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ದಿನಾಂಕ: 24/07/2022 ರಂದು ಚಿರಾಯಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು, ನಿನ್ನೆ ದಿನಾಂಕ: 30/07/2022 ರ ವರೆಗೆ ಚಿರಾಯು ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಉಪಚಾರದಲ್ಲಿ ಗುಣಮುಖರಾಗದೇ ಇದ್ದುದರಿಂದ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದಾರಾಯಿತು ಅಂತಾ ಸಾಯಂಕಾಲ ಚಿರಾಯು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ರಾಕಮಗೇರಾಕ್ಕೆ ಬಂದು ಹಣದ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ಹೋದರಾಯಿತು ಅಂತಾ ಇದ್ದಾಗ ನಿನ್ನೆ ರಾತ್ರಿ 11.30 ಪಿ.ಎಂ ಸುಮಾರಿಗೆ ನನ್ನ ತಂದೆಯವರು ಅಪಘಾತದಲ್ಲಿ ತನಗೆ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ಮೃತಪಟ್ಟಿರುತ್ತಾರೆ. ಕಾರಣ ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ಪ್ರಕರಣದ ಮುಂದಿನ ತನಿಖೆ ಕೈಗೊಳ್ಳಲಾಗಿದೆ


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ.15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ: ದಿನಾಂಕ:31/07/2022 ರಂದು ಮದ್ಯಾಹ್ನ 4.20 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನುವು ಮಾಡಿಕೊಟ್ಟಿದ್ದು, ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಮಲ್ಲಪ್ಪ ಹೆಚ್.ಸಿ-184, ಹಣಮಂತ ಹೆಚ್.ಸಿ-83, ವಿರೇಂದ್ರ ಪಿಸಿ-264, ಸಂತೋಷ ಎ.ಪಿ.ಸಿ-126 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಮದ್ಯ & ಮದ್ಯದ ಖಾಲಿ ಪೋಚಗಳು, ಖಾಲಿ ಗ್ಲಾಸಗಳು ಒಟ್ಟು 185-00/-ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ & ಪಿಎಸ್ಐ ರವರು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 31/07/2022 ರಂದು 4.00 ಪಿ ಎಮ್ ಕ್ಕೆ ಮಾನ್ಯ ವಿಶ್ವನಾಥ ಮುದರೆಡ್ಡಿ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು, 6 ಜನ ಆರೋಪಿತರು ಮತ್ತು ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 31/07/2022 ರಂದು 2.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಆಲಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿನ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಬಲರಾಮ ಎ.ಎಸ್.ಐ, ಆನಂದ ಪಿಸಿ 43, ಈರಪ್ಪ ಪಿಸಿ 386, ಕಾಶಿನಾಥ ಪಿಸಿ 293, ಬಸವರಾಜ ಪಿಸಿ 363, ಮಾಳಪ್ಪ ಪಿಸಿ 29, ವಿಜಯಾನಂದ ಪಿಸಿ 103 ಮತ್ತು ಶಿವಪ್ಪ ಪಿಸಿ 326 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 2.10 ಪಿಎಂ ಕ್ಕೆ ಹೊರಟು 2.25 ಪಿಎಂ ಕ್ಕೆ ಆಲಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಶಾಲೆಯ ಹಿಂದಿನ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 2.30 ಪಿಎಂ ಕ್ಕೆ ನಾನು, ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 6 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಬರಮರಡ್ಡಿ ತಂದೆ ಗುತ್ತಪ್ಪ ಹಾದಿಮನಿ ವ|| 33 ಜಾ|| ಹೊಲೆಯ ಉ|| ಕೂಲಿ ಸಾ|| ಆಲಾಳ ತಾ|| ಸುರಪೂರ 2) ಬಸನಗೌಡ ತಂದೆ ಹೇಮರೆಡ್ಡಿಗೌಡ ಚಟ್ಟರಕಿ ವ|| 36 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಆಲಾಳ ತಾ|| ಸುರಪೂರ 3) ಸಿದ್ದು ತಂದೆ ಭೀಮಪ್ಪ ಬಡಿಗೇರ ವ|| 22 ಜಾ|| ಹೊಲೆಯ ಉ|| ಕೂಲಿ ಸಾ|| ಆಲಾಳ ತಾ|| ಸುರಪೂರ 4) ಆರೂಡಪ್ಪ ತಂದೆ ನಾಗಪ್ಪ ಹಾದಿಮನಿ ವ|| 65 ಜಾ|| ಹೊಲೆಯ ಉ|| ಕೂಲಿ ಸಾ|| ಆಲಾಳ ತಾ|| ಸುರಪೂರ 5) ಹಣಮಂತ್ರಾಯ ತಂದೆ ಮುದುಕಪ್ಪ ಮೋಪಗಾರ ವ|| 45 ಜಾ|| ವಡ್ಡರ ಉ|| ಒಕ್ಕಲುತನ ಸಾ|| ಆಲಾಳ ತಾ|| ಸುರಪೂರ 6) ಮಲ್ಲಿಕಾಜರ್ುನ ತಂದೆ ಸೋಮಪ್ಪ ಕೆಂಭಾವಿ ವ|| 35 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಆಲಾಳ ತಾ|| ಸುರಪೂರ ಇದ್ದು ಎಲ್ಲರ ಮಧ್ಯ ಕಣದಲ್ಲಿ 10210/- ರೂಪಾಯಿ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅಲ್ಲದೇ ಅಲ್ಲಿಯೇ ಸ್ಥಳದಲ್ಲಿ 4 ಮೋಟರ ಸೈಕಲಗಳು ಬಿಟ್ಟು ಓಡಿ ಹೋಗಿದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ 1) ಒಂದು ಹಿರೋ ಹೊಂಡಾ ಸ್ಪ್ಲೆಂಡರ್ ಕಂಪನಿಯ ಮೋಟರ್ ಸೈಕಲ್ ನಂ ಕೆಎ 20 ಕೆ 1978, 2) ಒಂದು ಹಿರೋ ಹೆಚ್.ಎಫ್ ಡಿಲಕ್ಸ್ ಕಂಪನಿಯ ಮೋಟರ್ ಸೈಕಲ್ ನಂ ಕೆಎ 33 ವೈ 4708, 3) ಒಂದು ಹಿರೋ ಹೆಚ್.ಎಫ್ ಡಿಲಕ್ಸ್ ಕಂಪನಿಯ ಮೋಟರ್ ಸೈಕಲ್ ನಂ ಕೆಎ 33 ಇಎ 5167 ಮತ್ತು 4) ಒಂದು ಬಜಾಜ್ 110ಎಕ್ಸ್ ಕಂಪನಿಯ ಮೋಟರ್ ಸೈಕಲ ಚೆಸ್ಸಿ ನಂಬರ ಒಆಚಃ85ಂಘಿ8ಒಘಇ15884 ಅಂತ ಇದ್ದು ಸದರಿ ಎಲ್ಲವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 2.30 ಪಿಎಂ ದಿಂದ 3.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ ಬಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 125/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ: 363ಐ.ಪಿ.ಸಿ: ಈ ಮೇಲ್ಕಂಡ ಹೆಸರು ಮತ್ತು ವಿಳಾಸದವಳಾದ ನಾನು ಇಂಉ ದಿನಾಂಕ: 26.07.2022 ರಂದು ಬೆಳಿಗ್ಗೆ 11:30 ಗಂಟೆಗೆ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿ ಬರೆಯಿಸಿದ ಹೇಳಿಕೆಯ ಸಾರಾಂಶವೇನೆಂದರೆ ನಮಗೆ 1) ಬಂಗಾರಮ್ಮ ವಯಾ- 25 ವರ್ಷ , 2) ನಿಂಗಮ್ಮ ವಯಾ- 17 ವರ್ಷ ಮತ್ತು 3) ಆಂಜನೇಯ ವಯಾ- 14 ವರ್ಷ ಅಂತಾ ಮೂರು ಜನ ಮಕ್ಕಳಿರುತ್ತಾರೆ. ನಾವು ಹೊಟ್ಟೆಪಾಡಿಗಾಗಿ ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ಕೂಲಿಕೆಲಸ ಮಾಡಿಕೊಂಡು ವಾಸವಾಗಿದ್ದೇವೆ. ಆಗಾಗ ಯಾದಗಿರಿಗೆ ಬಂದು ಹೋಗುವುದು ಮಾಡುತ್ತಿರುತ್ತೇವೆ. ನನ್ನ ಎರಡನೇ ಮಗಳಾದ ನಿಂಗಮ್ಮ ಇವಳು ಯಾದಗಿರಿಯಲ್ಲಿರುವ ಜೂನಿಯರ್ ಕಾಲೇಜಿನಲ್ಲಿ ಪ್ರಥಮ PUC ಓದುತ್ತಿದ್ದಾಳೆ, ಹಾಗೂ ನನ್ನ ಮಗ ಆಂಜನೇಯ ಈತನು ಯಾದಗಿರಿಯ MRD ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು, ಇವರಿಬ್ಬರನ್ನು ನನ್ನ ಅತ್ತೆಯಾದ ಮರೆಮ್ಮ ಗಂಡ ರಾಚಪ್ಪ ವಯಾ- 60 ವರ್ಷ ಸಾ- ಕೋಲಿವಾಡ ಯಾದಗಿರಿ ಇವರಲ್ಲಿ ಬಿಟ್ಟು ನಾವು ಗಂಡ ಹೆಂಡತಿ ಬೆಂಗಳೂರಿನಲ್ಲಿದ್ದೇವು. ಹೀಗಿರುವಾಗ ದಿನಾಂಕ: 23.07.2022 ರಂದು ನನ್ನ ಮಗಳಾದ ನಿಂಗಮ್ಮ ಇವಳು ಕಾಲೇಜಿಗೆ ಹೋಗಿ ಬರುವುದಾಗಿ ಅವಳ ಅಜ್ಜಿಯ ಹತ್ತಿರ ಹೇಳಿ ಮನೆಯಿಂದ ಬೆಳಿಗ್ಗೆ 8:00 ಗಂಟೆಗೆ ಹೋಗಿರುತ್ತಾಳೆ. ಸಾಯಂಕಾಲವಾದರೂ ನನ್ನ ಮಗಳು ಮನೆಗೆ ಬಂದಿಲ್ಲವೆಂದು ನನ್ನ ಚಿಕ್ಕ ಮಗನು ನಮಗೆ ಪೋನ್ ಮಾಡಿ ತಿಳಿಸಿದನು, ಆಗ ನಾವು ಯಾರಾದರೂ ಸ್ನೇಹಿತರ ಮನೆಗೆ ಹೋಗಿರಬೇಕು, ಬರುತ್ತಾಳೆ ಎಂದು ಹೇಳಿದ್ದು ತಡರಾತ್ರಿಯಾದರೂ ಮನೆಗೆ ಬರದ ಕಾರಣ ನನ್ನ ಮಗ ಮತ್ತೆ ಕರೆ ಮಾಡಿ ಅಕ್ಕ ಇನ್ನು ಮನೆಗೆ ಬಂದಿಲ್ಲವೆಂದು ಹೇಳಿದನು. ಆಗ ನಾವು ಎಲ್ಲಾ ಕಡೆ ಹುಡುಕಾಡಲು ತಿಳಿಸಿದ್ದು, ಸಿಗದ ಕಾರಣ ಅವಳ ಕಾಲೇಜಿನ ಸರರೋಬ್ಬರಿಗೆ ಪೋನ್ ಮಾಡಿ ಕೇಳಲಾಗಿ ಅವರು ನಿಮ್ಮ ಮಗಳು ಬೆಳಿಗ್ಗೆ ಕಾಲೇಜಿಗೆ ಬಂದಿದ್ದು, ಕಾಲೇಜು ಮುಗಿಸಿಕೊಂಡು ಹೋಗಿದ್ದಾಳೆ ಅಂತಾ ಹೇಳಿದರು. ಆಗ ನಾವು ಎಲ್ಲಾ ನಮ್ಮ ಸಂಬಂಧಿಕರಿಗೆ ಕರೆ ಮಾಡಿ ಕೇಳಲಾಗಿ ಎಲ್ಲಿಯೂ ಸಹ ಬಂದಿರುವುದಿಲ್ಲ ಎಂದು ಹೇಳಿರುತ್ತಾರೆ. ಆಗ ನಾವು ದಿನಾಂಕ: 24.07.2022 ರಂದು ಬೆಂಗಳೂರಿನಿಂದ ದಿನಾಂಕ: 25.07.2022 ರಂದು ಯಾದಗಿರಿಗೆ ಬಂದು ನಮ್ಮ ಮನೆಯ ಅಕ್ಕ ಪಕ್ಕದವರಿಗೆ ವಿಚಾರಿಸಲಾಗಿ ಎಲ್ಲಿಯೂ ಅವಳ ಸುಳಿವು ಸಿಕ್ಕಿರುವುದಿಲ್ಲ. ನನ್ನ ಮಗಳು ಶಾಲೆಯ ರಜಾ ದಿನಗಳಲ್ಲಿ ನಮ್ಮ ಜೊತೆ ಬೆಂಗಳೂರಿಗೆ ಬರುತ್ತಿದ್ದಳು ಆಗ ಅಲ್ಲಿ ನಮ್ಮ ಜೊತೆಗೆ ಕೆಲಸ ಮಾಡುವ ಆಕಾಶ ತಾಯಿ ಶಶಿಕಲಾ ಸಾ- ದೊರನಳ್ಳಿ ತಾ- ಜಿ- ಯಾದಗಿರಿ ಇತನು ನನ್ನ ಮಗಳಿಗೆ ಪರಿಚಯವಾಗಿದ್ದು ಅವಳೊಂದಿಗೆ ಸಲುಗೆಯಿಂದ ಇರುತ್ತಿದ್ದನು. ಆದ್ದರಿಂದ ಆತನೇ ನನ್ನ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ನಮಗೆ ಅನುಮಾನವಿರುತ್ತದೆ.ಅಂತಾ ಕೊಟ್ಟ ದೂರಿನ ಸಾರಾಂಶದ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 42/2022 ಕಲಂ : 363 ಐ.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು..

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 93/2022 ಕಲಂ 323, 324, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ: 31.07.2022 ರಂದು ಮಧ್ಯಾಹ್ನ 12.30 ಗಂಟೆಗೆ ಬಸವರಾಜ ಐರೆಡ್ಡಿ ತಂದೆ ಶರಣಬಸಪ್ಪ ಐರೆಡ್ಡಿ ಸಾ|| ಕೂಡ್ಲೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಫಿಯರ್ಾದಿದಾರರ ಕಬ್ಜೆಯಲ್ಲಿರುವ ಜಮೀನನಲ್ಲಿ ಪ್ರಕರಣದ ಎ-1, ಎ-2 ರವರು ತಮ್ಮ ಜಮೀನಿದೆ ಅಂತ ಹೇಳಿ ಫಿಯರ್ಾದಿದರನ ಜಮೀನು ಕಬಳಿಸಬೇಕೆಂಬ ಉದ್ದೇಶದಿಂದ ದಿನಾಂಕ 30.07.2022 ರಂದು ಬೆಳಿಗ್ಗೆ ಸದರಿ ಜಮೀನನಲ್ಲಿ ಕೆಲಸ ಮಾಡಿಸುತ್ತಿದ್ದ ಫಿಯರ್ಾದಿದಾರನಿಗೆ ಎ-1 ಈತನು ಕಲ್ಲಿನಿಂದ ಹಲ್ಲೆ ಮಾಡಿದ್ದಲ್ಲದೇ, ಅಸಭ್ಯ ಶಭ್ದಗಳಿಂದ ನಿಂಧಿಸಿ, ಆರೋಪಿತರು 3 ಜನ ರಾತ್ರಿ ಮನೆಗೆ ಬಂದು ಮುಗಿಸುತ್ತೇವೆ ಅಂತ ಜೀವಬೆದರಿಕೆ ಒಡ್ಡಿರುತ್ತಾರೆ ಅಂತ ವಗೈರೆ ಆಪಾದೆನೆ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ 279, 337 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್: ಇಂದು ದಿನಾಂಕ 31.07.2022 ರಂದು ಫಿರ್ಯಾದಿಯ ಅಣ್ಣನಾದ ಆರೋಪಿ ಕಾಶಪ್ಪ ಈತನು ತನ್ನ ಹೆಂಡತಿಯಾದ ಆಶಮ್ಮ ಹಾಗೂ ತನ್ನಮಗಳು ಶೈಲಜಾ ಎಂಬುವವರನ್ನು ಕರೆದುಕೊಂಡು ತನ್ನ ಹೆಂಡತಿ ಆಶಮ್ಮ ಎಂಬಾಕೆಯ ಹೆಸರಿನಲ್ಲಿರುವ ನೊಂದಣಿ ಸಂಖ್ಯೆ ಟಿ.ಎಸ್.-38-ಟಿ-0395 ಎಂದು ಆರ್.ಟಿ.ಓ ಕಛೇಯಲ್ಲಿ ನೊಂದಣಿಯಾಗಿದ್ದರು ಸಹ ಆ ಟಂ ಟಂ ಆಟೋಕ್ಕೆ ನೊಂದಣಿ ಸಂಖ್ಯೆ ನಮೂದಿಸದೇ ಸದರಿ ಟಂ ಟಂ ವಾಹವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಒಮ್ಮೇಲೆ ಬಲಕ್ಕೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಗುರುಮಠಕಲ್-ಚಪೆಟ್ಲಾ ಗ್ರಾಮಗಳ ನಡುವೆ ರೋಡಿನ ಮೇಲೆ ಅಪಘಾತ ಸಂಭವಿಸಿದ್ದು ಅದರಲ್ಲಿ ಆರೋಪಿ ಕಾಶಪ್ಪ ಎಂಬಾತನಿಗೆ ಸಾಧಾ ಸ್ವರೂಪದ ಗಾಯವಾಗಿದ್ದು ಆ ಬಗ್ಗೆ ವಿಷಯ ಗೊತ್ತಾಗಿ ಫಿರ್ಯಾದಿಯು ಆಸ್ಪತ್ರೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 125/2022 ಕಲಂ: 279, 337 ಐಪಿಸಿ ಮತ್ತು ಕಲಂ: 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ : 121/2022 ಕಲಂ: 279, 337 ಐಪಿಸಿ: ಇಂದು ದಿ: 31/07/2022 ರಂದು 07.00 ಪಿ.ಎಮ್ಕ್ಕೆ ಶ್ರೀ ಮಾನಪ್ಪ ತಂದೆ ಗೋಪಾಲ ದಾಸರ ವ|| 35 ವರ್ಷ ಜಾ|| ದಾಸರ ಉ|| ಒಕ್ಕಲುತನ ಸಾ|| ಮಾವಿನಮಟ್ಟಿ ತಾ|| ಸುರಪೂರ ಇದ್ದು, ನನ್ನ ಅತ್ತೆಯಾದ ಮಹಾದೇವಿ ಗಂಡ ಮಹಾಂತಪ್ಪ ದಾಸರ ಸಾ|| ಯಲಗೋಡ ತಾ|| ಜೇವಗರ್ಿ ಹಾಗೂ ಆಕೆಯ ಮಗನಾದ ವೆಂಕಟೇಶ ತಂದೆ ಮಹಾಂತಪ್ಪ ದಾಸರ ಮತ್ತು ಸಂಬಂದಿಯಾದ ಗಿರೀಶ ತಂದೆ ಹಳ್ಳೆಪ್ಪ ದಾಸರ ಸಾ|| ಅಪ್ಪರ ಮಡ್ಡಿ, ಶಹಾಬಾದ ಮೂವರು ಕೂಡಿ ದಿನಾಂಕ: 29/07/2022 ರಂದು ಕಕ್ಕೇರಾ ಪಟ್ಟಣದ ನಮ್ಮ ಸಂಬಂದಿಕರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದ ವಿಷಯ ನಮ್ಮ ಅತ್ತೆಯು ನನಗೆ ಫೋನ್ ಮಾಡಿ ತಿಳಿಸಿದ್ದಳು. ನಿನ್ನೆ ದಿನಾಂಕ: 30/07/2022 ರಂದು ನಾನು ಸುರಪುರದಲ್ಲಿ ನಾನು ಸಂತೆ ಮಾಡಲು ಮಾವಿನಮಟ್ಟಿಯಿಂದ ಬಂದಿದ್ದೆನು. ಹೀಗಿದ್ದು ಬೆಳಿಗ್ಗೆ 8.45 ಗಂಟೆ ಸುಮಾರಿಗೆ ಅಳಿಯನಾದ ವೆಂಕಟೇಶ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ ನಾನು, ನಮ್ಮ ತಾಯಿ ಮಹಾದೇವಿ ಮತ್ತು ನಮ್ಮ ಸಂಬಂದಿ ಗಿರೀಶ ಮೂವರು ಕಕ್ಕೇರಾದಿಂದ ನಮ್ಮೂರಿಗೆ ಬರುವ ಕುರಿತು ಶಾಂತಪೂರ ಕ್ರಾಸದಲ್ಲಿ ನಿಂತಿದ್ದಾಗ ತಿಂಥಣಿ ಬ್ರಿಜ್ ಕಡೆಯಿಂದ ಕ್ರಶರ್ ನಂಬರ ಕೆಎ 33 ಎ 4714 ನೇದ್ದು ಬಂದಿದ್ದು, ಅದರಲ್ಲಿ ನಾವು ಕುಳಿತುಕೊಂಡು ಶಹಾಪುರಕ್ಕೆ ಹೋಗುತ್ತಿರುವಾಗ ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಸುರಪುರ-ಲಿಂಗಸುಗುರು ಮುಖ್ಯ ರಸ್ತೆಯ ಕವಡಿಮಟ್ಟಿ ಹತ್ತಿರ ಕ್ರಶರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಿಯಂತ್ರಣ ತಪ್ಪಿ ರೋಡಿನ ಎಡಬದಿಯಲ್ಲಿರುವ ಗಿಡಕ್ಕೆ ಗುದ್ದಿದನು. ಆಗ ಕ್ರಶರ್ದಲ್ಲಿದ್ದ ನನಗೆ ಎದೆಗೆ ಒಳಪೆಟ್ಟಾಗಿದ್ದು, ನನ್ನ ತಾಯಿ ಮಹಾದೇವಿಗೆ ಬೆನ್ನಿಗೆ ಒಳಪೆಟ್ಟಾಗಿದ್ದು, ಗಿರೀಶ ಈತನಿಗೆ ಬಲಗೈಗೆ ಒಳಪೆಟ್ಟಾಗಿರುತ್ತದೆ ನೀವು ಬೇಗನೆ ಇಲ್ಲಿಗೆ ಬನ್ನಿರಿ ಅಂತ ಹೇಳಿದಾಗ ನಾನು ಕೂಡಲೆ ಕವಡಿಮಟ್ಟಿ ಹತ್ತಿರ ಹೋಗಿ ನೋಡಲಾಗಿ ಮೂವರಿಗೆ ಮೇಲೆ ಹೇಳಿದಂತೆ ಒಳಪೆಟ್ಟಾಗಿದ್ದು, ಕ್ರಶರ್ ನಂಬರ ನೋಡಲಾಗಿ ಕೆಎ 33 ಎ 4714 ಅಂತ ಇದ್ದು, ಚಾಲಕನು ಕೂಡ ಅಲ್ಲೇ ಇದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮಶಾಕ ತಂದೆ ಬಂದಗಿಸಾ ಸಾ|| ಕಂಚನಕವಿ ತಾ|| ಶಹಾಪುರ ಅಂತ ತಿಳಿಸಿದನು. ನಂತರ ಗಾಯಗೊಂಡು ಮೂವರನ್ನು ಒಂದು ಖಾಸಗಿ ವಾಹನದಲ್ಲಿ ಸುರಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಪಡಿಸಿದ್ದು, ವೈದ್ಯರ ಸಲಹೆಯಂತೆ ಮೂವರಿಗೂ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಕ್ರಶರ್ ನಂ. ಕೆಎ-33. ಎ-4714 ನೇದ್ದರ ಚಾಲಕನಾದ ಮಶಾಕ ತಂದೆ ಬಂದಗಿಸಾ ಸಾ|| ಕಂಚನಕವಿ ತಾ|| ಶಹಾಪುರ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಗುದ್ದಿ ವಾಹನದಲ್ಲಿದ್ದ ನಮ್ಮ ಅತ್ತೆ ಮಹಾದೇವಿ, ಅಳಿಯ ವೆಂಕಟೇಶ ಹಾಗೂ ಸಂಬಂದಿ ಗಿರೀಶ ಮೂವರಿಗೂ ಒಳಪೆಟ್ಟುಗೊಳಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.121/2022 ಕಲಂ:279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 01-08-2022 05:41 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080