ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 , ಕನರ್ಾಟಕ ಜಾನುವಾರು ಹತ್ಯೆ ಪ್ರತಿಭಂಧಕ ಮತ್ತು ಸಂರಕ್ಷಣ ಆಧ್ಯಾದೇಶ ಕಾಯಿದೆ 2020. ಕಲಂ. 4, 5,7, 12, ಮತ್ತು 192 (ಎ) ಸಂ 177 ಐ.ಎಮ.ವಿ ಕಾಯ್ದೆ: ದಿನಾಂಕ: 31-08-2022 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಯಡ್ಡಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಬಂದಳ್ಳಿ ರೋಡ ಕಡೆಯಿಂದ ಪಾಟಿಲ್ ಪೆಟ್ರೊಲ್ ಬಂಕ್ ಹತ್ತಿರ ಒಂದು ಮಹೇಂದ್ರ ಬುಲೇರೋ ವಾಹನದಲ್ಲಿ ದನಗಳನ್ನು ವಧೆ ಮಾಡಲು ತುಂಬಿಕೊಂಡು ಹತ್ತಿಕುಣಿ ಗ್ರಾಮದ ಕಡೆಗೆ ಬರುತ್ತಿರುವದನ್ನು ಕಂಡು ನನಗೆ ಸಂಶಯ ಬಂದು ವಾಹನವನ್ನು ನಿಲ್ಲಿಸಿ ಅದರಲ್ಲಿ ಇದ್ದ ಚಾಲಕನಿಗೆ ಹೆಸರು ವಿಳಾಸವನ್ನು ವಿಚಾರಿಸಿದಾಗ ಅವನು ತನ್ನ ಹೆಸರು. ಅಬ್ರಾರ್ ತಂದೆ ಮಹ್ಮದ್ ಇಸ್ಮಾಯಿಲ್ ಟಾಂಗವಾಲಾ ವ|| 28 ವರ್ಷ ಜಾ|| ಮುಸ್ಲಿಂ ಸಾ|| ದಗರ್ಾಏರಿಯಾ ಕಲಬುರಗಿ ತಾ|| ಜಿ|| ಕಲಬುರಗಿ ಅಂತ ತಿಳಿಸಿದ್ದು, ವಾಹನದಲ್ಲಿರುವ ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ ಅವನ ಹೆಸರು ರಾಯಲ್ ತಂದೆ ಅಲೀಮ್ ವ|| 18 ವರ್ಷ ಜಾ|| ಮುಸ್ಲಿಂ ಸಾ|| ದಗರ್ಾ ಏರಿಯಾ ಕಲಬುರಗಿ ತಾ|| ಜಿ|| ಕಲಬುರಗಿ ಅಂತ ತಿಳಿಸಿದನು. ಅವರು ದನಗಳನ್ನು ಆಶನಾಳ ಗ್ರಾಮದಿಂದ ತೆಗೆದುಕೊಂಡು ಕಲಬುರಗಿಗೆ ಹೋಗುವದಾಗಿ ತಿಳಿಸಿದ್ದು, ನಂತರ ವಾಹನವನ್ನು ಪರಿಶೀಲಸಿ ನೋಡಲಾಗಿ ಮಹೇಂದ್ರ ಬುಲೇರೋ ವಾಹನ ಇದ್ದು ಅದರ ನಂಬರ ಕೆ.ಎ-32, ಡಿ-8241 ಇದ್ದು ಅದರಲ್ಲಿ 7 ಜಾನುವಾರುಗಳನ್ನು ತುಂಬಿಕೊಂಡು ಜಾನುವಾರಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಬಿಗಿಯಾಗಿ ಕಟ್ಟಿದ್ದು ವಾಹನದಲ್ಲಿರುವ ಜಾನುವಾರಗಳನ್ನು ಪರಿಶೀಲಿಸಿ ನೋಡಲಾಗಿ 1) ಮೂರು ಬಿಳಿಯ ಬಣ್ಣದ ಹೋರಿಗಳು 2) 2 ಕೆಂಪು ಬಣ್ಣದ ಹೋರಿಗಳು 3) 1 ಕರಿ ಬಣ್ಣದ ಹೋರಿ 4) 1 ಎಮ್ಮೆ ಇದ್ದು ಅವುಗಳ ಅಂದಾಜು ಕಿಮ್ಮತ್ತು 60000=00 ಆಗಬಹುದು, ಜಾನುವಾರಗಳನ್ನು ವದೇ ಮಾಡಲು ಹಿಂಸಾತ್ಮಾಕವಾಗಿ ವಾಹನದಲ್ಲಿ ಸಾಗಾಣಿಕೆ ಮಾಡುವದು ಕನರ್ಾಟಕ ಸರಕಾರ ನೀಷೆದ ಮಾಡಿದ್ದು ಗೋತ್ತಿದ್ದರು ಕೂಡ ಜಾನುವಾರಗಳನ್ನು ವಾಹನದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ತೆಗೆದುಕೊಂಡು ಹೋಗುತ್ತಿರುವದು ಗೊತ್ತಾಗಿರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ 341, 447, 323, 504, 506 ಐಪಿಸಿ:ಫಿಯರ್ಾದಿಗೆ ಸಂಬಂಧಿಸಿದ ಜಮೀನು ಸವರ್ೇ ನಂಬರ 22/ಆ ರಲ್ಲಿ ಆರೋಪಿತನು ಅಕ್ರಮವಾಗಿ ಪ್ರವೇಶ ಮಾಡಿ ಫಿಯರ್ಾದಿಗೆ ಎದೆಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ, ಜೀವಬೆದರಿಕೆ ಹಾಕಿದ್ದು ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ; 31/08/2022 ರಂದು 12-15 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 31/08/2022 ರಂದು 10-15 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಗಾನಗರ ಕ್ರಾಸಿನಲ್ಲಿರುವ ಹನುಮಾನ ಗುಡಿಯ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ವಿನೋದ ಪಿಸಿ-88, ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 11-05 ಎಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ನಾಗಪ್ಪ ತಂದೆ ಶಿವಪ್ಪ ಕಡ್ಡಿ ವ:51 ಜಾತಿ:ಕಬ್ಬಲಿಗ ಉ:ಕೂಲಿಕೆಲಸ ಸಾ:ಹನುಮಾನ ನಗರ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನಿಗೆ ಮಟಕಾ ಜೂಜಾಟದ ಹಣ ಮತ್ತು ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಿದ್ದಕ್ಕೆ ಆತನು ಸಾರ್ವಜನಿಕರಿಂದ ಮಟಕಾ ನಂಬರ್ಗಳನ್ನು ಬರೆದುಕೊಂಡು ಅದರಿಂದ ಬಂದ ಹಣವನ್ನು ಮತ್ತು ಪಟ್ಟಿಯನ್ನು ಅಬ್ದುಲ್ ರಹೆಮಾನ @ ಐಮಾನ ಸಾ: ರಾಯಚೂರ ಮೊಹಲ್ಲಾ ಯಾದಗಿರಿ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 1500/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 31/08/2022 ರಂದು 11-05 ಪಿಎಂ ದಿಂದ 12-05 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 12-15 ಪಿಎಂಕ್ಕೆ ಬಂದು ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 98/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 136/2022 ಕಲಂ:498(ಎ),323,504,506, ಸಂ.34 ಐಪಿಸಿ: ಈಗ್ಗೆ ಸುಮಾರು 6 ತಿಂಗಳಿಂದ ಈ ಪ್ರಕರಣದಲ್ಲಿ ಫಿಯರ್ಾದಿಯ ಗಂಡನಾದ ಭೀಮಪ್ಪ ಇತನು ತನ್ನ ಹೆಂಡತಿಯ ಶೀಲದ ಮೇಲೆ ಸಂಶಯ ಮಾಡಿ ಅವಳಿಗೆ ನಿನ್ನ ನಡತೆ ಸರಿಯಾಗಿಲ್ಲ, ಭರತ ನನಗೆ ಹುಟ್ಟಿಲ್ಲ, ನೀನು ಯಾರಲ್ಲಿ ಮಲಗಿದ್ದಿ ಹೇಳು, ರಂಡಿ ಸೂಳಿ ಅಂತಾ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾನೆ. ಇದೇ ರೀತಿ ಫಿಯರ್ಾದಿಯ ಭಾವಂದಿರರಾದ ತಿಪ್ಪಣ್ಣ, ಹಣಮಂತ ಹಾಗೂ ನೆಗ್ಯಾಣಿ ಕಾಶಮ್ಮ ಇವರು ಕೂಡ ಫಿಯರ್ಾದಿಗೆ ರಂಡಿ, ಸೂಳಿ, ನಿನ್ನ ನಡತೆ ಸರಿಯಿಲ್ಲ, ನಿನ್ನಿಂದ ನಮ್ಮ ಮನೆಯ ಮಯರ್ಾದೆ ಹೋಗಿದೆ, ನೀನು ಮನೆಯಲ್ಲಿ ಇರಬೇಡಾ, ನಿನ್ನ ತವರು ಮನೆಗೆ ಹೋಗು ಅಂತಾ ನನ್ನ ಜೊತೆಯಲ್ಲಿ ದಿನಾಲು ಕಿರಕಿರಿ ಮಾಡಿ ಅವಾಚ್ಯವಾಗಿ ಬೈದು ಹೊಡೆಯುವುದು ಬಡೆಯುವುದು ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದರು. ಇದೇ ವಿಷಯದಲ್ಲಿ ದಿನಾಂಕಃ 15/08/2022 ರಂದು ಮದ್ಯಾಹ್ನ 12.30 ಗಂಟೆಗೆ ಈ ಪ್ರಕರಣದಲ್ಲಿರುವ 04 ಜನ ಆರೋಪಿತರು ಕೂಡಿ ಏಲ್ಹೇರಿ ಗ್ರಾಮದ ಮನೆಯಲ್ಲಿ ಫಿಯರ್ಾದಿಯೊಂದಿಗೆ ಜಗಳ ತೆಗೆದು ಏ ರಂಡಿ, ಸೂಳಿ, ನಿನ್ನ ನಡತೆ ಸರಿಯಿಲ್ಲ, ನಿನ್ನಿಂದ ನಮ್ಮ ಮನೆಯ ಮಯರ್ಾದೆ ಹೋಗಿದೆ ಅಂತಾ ನನ್ನ ಶೀಲದ ಮೇಲೆ ಸಂಶಯ ಪಟ್ಟು ಅವಾಚ್ಯವಾಗಿ ಬೈದು ನೀನು ಇರಬಾರದು, ಸಾಯಬೇಕು, ಇವತ್ತು ನಿನಗೆ ಕೊಂದೆ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಬೆನ್ನಿಗೆ, ಕಪಾಳ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಅಲ್ಲದೆ ಕೈ ಹಿಡಿದು ಎಳೆದಾಡಿ ಉಗುರಿನಿಂದ ಚೂರಿ ದೈಹಿಕ ಮತ್ತು ಮಾನಸಿಕ ಕಿರಕುಳ ನೀಡಿರುವ ಬಗ್ಗೆ ದೂರು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ 20(ಎ)&(ಬಿ) ಎನ್.ಡಿ.ಪಿ.ಎಸ್. ಆಕ್ಟ್: ಇಂದು ದಿನಾಂಕ 31.08.2022 ರಂದು ಮಧ್ಯಾಹ್ನ 3:00 ಗಂಟೆಗೆ ಗುರುಮಠಕಲ್ ಪಟ್ಟಣದ ಇಂದಿರಾನಗರ ಏರಿಯಾದಲ್ಲಿ ಎ-1]ಮಹಿಪಾಲ ಈತನು ತನ್ನ ಸ್ನೇಹಿತರೊಂದಿಗೆ ಕೂಡಿಕೊಂಡು ಎ-2 ಈತನು ತಂದು ಕೊಟ್ಟ ಒಣಗಿದ ಗಾಂಜಾವನ್ನು ಎ-3 ನೊಂದಿಗೆ ಕೂಡಿಕೊಂಡು ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಒಣಗಿದ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಫಿಯರ್ಾದಿಯವರು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ದಾಳಿ ಮಾಡುವ ಕುರಿತು ಅನುಮತಿ ಪಡೆದುಕೊಂಡು, ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಗೆಜೆಟೆಡ್ ಅಧಿಕಾರಿ ಮಾನ್ಯ ಮುಖ್ಯಾಧಿಕಾರಿಗಳು ಪುರಸಭೆ ಕಾರ್ಯಲಯ ಗುರುಮಠಕಲ್ ಹಾಗೂ ಪಂಚರು, ತೂಕ ಮಾಡುವ ವ್ಯಕ್ತಿ ಮತ್ತು ಸಾಧನದೊಂದಿಗೆ ಹಾಗೂ ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ್ಗಳಲ್ಲಿ ಠಾಣೆಯಿಂದ ಗುರುಮಠಕಲ್ ಪಟ್ಟಣದ ಇಂದಿರಾನಗರ ಏರಿಯಾಕ್ಕೆ ಹೋಗಿ ದಾಳಿ ಮಾಡಿದಾಗ ಎ-1 ಈತನು ಸಿಕ್ಕಿಬಿದ್ದಿದ್ದು ನಂತರ ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಿದ ನಂತರ ಆತನ ವಶದಲ್ಲಿದ್ದ 758 ಗ್ರಾಂ ಒಣಗಿದ ಗಾಂಜಾವನ್ನು ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ಸದರಿ ಜಪ್ತಿ ಪಂಚನಾಮೆಯನ್ನು ಸಮಯ ಸಂಜೆ 4:30 ಗಂಟೆಯಿಂದ ಸಂಜೆ 5:30 ಗಂಟೆಯ ಅವಧಿಯಲಿ ಜಪ್ತಿ ಪಡಿಸಿಕೊಂಡು ಅದರಲ್ಲಿ ತಜ್ಞರ ಪರೀಕ್ಷೆ ಕುರಿತು ಗಾಂಜಾ ಗಿಡಗಲ್ಲಿನ ಸ್ವಲ್ಪ-ಸ್ವಲ್ಪ ಒಣಗಿದ ಎಲೆಗಳು,ಭೀಜಗಳು, ಹೂವಿನ ಭಾವನ್ನು ಅಂದಾಜು 100 ಗ್ರಾಂ ನಷ್ಟು ಪಡೆದುಕೊಂಡು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಹಾಕಿ ನಂತರ ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಠಾಣೆಯ ಉಏಐ ಎಂಬ ಅಕ್ಷರದಲ್ಲಿ ಸಿಲ್ ಮಾಡಿ ಮುದ್ದೆ ಮಾಲಿನೊಂದಿಗೆ ಸಂಜೆ 6:00 ಗಂಟೆಗೆ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 137/2022 ಕಲಂ: 20(ಎ)&(ಬಿ) ಎನ್.ಡಿ.ಪಿ.ಎಸ್. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 31/08/2022 ರಂದು 4.00 ಪಿಎಂ ಕ್ಕೆ ಶ್ರೀ ಹಣಮಂತ ಪಿ ಎಸ್ ಐ (ಕಾ.ಸು)ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಇಬ್ಬರು ಆರೋಪಿ ,ಜಪ್ತಿ ಪಂಚನಾಮೆ ಮುದ್ದೆ ಮಾಲ ಸಮೆತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರ ವರದಿಯ ಸಾರಾಂಶವೇನೆಂದರೆ ನಾನು ಹಣಮಂತ ಪಿ,ಎಸ್,ಐ (ಕಾ,ಶು) ಕೆಂಭಾವಿ ಪೊಲೀಸ್ ಠಾಣೆ ಇದ್ದುವರದಿ ನೀಡುವದೇನೆಂದರೆ ನಾನು ಇಂದು ದಿನಾಂಕ 31.08.2022 ರಂದು 2.30 ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿದಿಬ್ಬರು ವ್ಯಕ್ತಿಗಳು ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85 ಮತ್ತು ಆನಂದ ಪಿಸಿ 43 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 2.35 ಪಿಎಂ ಕ್ಕೆ ಹೊರಟು ಕೆಂಭಾವಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರ 2.40 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಇಬ್ಬರು ವ್ಯಕ್ತಿಗಳು ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 2.45 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ಇಬ್ಬರು ವ್ಯಕ್ತಿಗಳು ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲಾಗಿ 1) ಶರತ್ ತಂದೆ ಕೊರಗಯ್ಯ ಶೆಟ್ಟಿ ವ|| 40 ಜಾ|| ಶೆಟ್ಟಿ ಉ|| ವ್ಯಾಪಾರ ಸಾ|| ಉಡುಪಿ ಹಾ|| ವ|| ಕೆಂಭಾವಿ ತಾ|| ಸುರಪೂರ ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 1280/- ರೂಪಾಯಿ ಸಿಕ್ಕಿದ್ದು ಮತ್ತು 2) ಭೀಮನಗೌಡ ತಂದೆ ಯಮನಪ್ಪಗೌಡ ಬಿರಾದಾರ ವ|| 42 ಜಾ|| ಬೇಡರ ಉ|| ಕೂಲಿ ಸಾ|| ಐನಾಪೂರ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 900/- ರೂಪಾಯಿ ಸಿಕ್ಕಿದ್ದು ಒಟ್ಟು 2180/- ರೂಪಾಯಿ ನಗದು ಹಣ, 2 ಮಟ್ಕಾ ಚೀಟಿ ಮತ್ತು 2 ಪೆನ್ನುಗಳು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 2.45 ಪಿಎಂ ದಿಂದ 3.45 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 135/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 01-09-2022 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080