Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-10-2022

 

ಮಹಿಳಾ ಪೊಲೀಸ್ ಠಾಣೆ:-

ಗುನ್ನೆ ನಂ: 51/2022 ಕಲಂ: 363 ಐ.ಪಿ.ಸಿ: ದಿನಾಂಕ: 30.09.2022 ರಂದು ಮದ್ಯಾಹ್ನ 1.00 ಗಂಟೆಗೆ ಪಿರ್ಯಾಧಿದಾರರಾದ ವಿಜಯಲಕ್ಷ್ಮೀ ಗಂಡ ದೇವಪ್ಪ ವಯಾ-45 ವರ್ಷ ಉ-ಕೂಲಿ ಕೆಲಸ ಸಾ-ಅನಕಸೂಗುರ ತಾ-ವಡಗೇರಾ ಜಿ-ಯಾದಗಿರಿ ಮೊಬೈಲ್ ನಂ:9945084815 ನನಗೆ  1) ನಿಂಗಣ್ಣ ವಯಾ-23 ವರ್ಷ 2) ಸುನೀತಾ ವಯಾ- 21 ವರ್ಷ, 3) ಮಲ್ಲಮ್ಮ ವಯಾ-17  ವರ್ಷ, 4) ಶಾಂತಮ್ಮಾ  ವಯಾ-13 ವರ್ಷ, ಈ ರೀತಿ ಮೂರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಕ್ಕಳಿರುತ್ತಾರೆ. ನನ್ನ ಎರಡನೇ ಮಗಳಾದ ಮಲ್ಲಮ್ಮ ಈಕೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐಕೂರ್ ನಲ್ಲಿ 8 ನೇ ತರಗತಿ  ವರೆಗೆ ಓದಿದ್ದು ಸಧ್ಯ ಮನೆಯಲ್ಲಿ ಇರುತ್ತಾಳೆ. ನಮ್ಮ ಮನೆಯ ಎದುರುಗಡೆ ನಿಂಗಪ್ಪ ರವರ ಮನೆ ಇರುತ್ತದೆ.

          ಹೀಗಿದ್ದು ದಿನಾಂಕ : 04.09.2022 ರಂದು ಸಂಜೆ 4-00 ಗಂಟೆ ಸುಮಾರಿಗೆ ನನ್ನ ಎರಡನೇ ಮಗಳಾದ ಮಲ್ಲಮ್ಮ ಈಕೆಯು ನನಗೆ ನಾನು ಬಹಿರ್ದೇಶೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿರುತ್ತಾಳೆ. ತುಂಬ ಸಮಯದವೆಗೂ ನಾನು ಕಾದು ನೋಡಿದ್ದು ನನ್ನ ಮಗಳು ಮರಳಿ ಮನೆಗೆ ಬಂದಿರುವುದಿಲ್ಲ. ಆಗ ನಾನು ನನ್ನ ಮಗಳು ಮಲ್ಲಮ್ಮಳು ಬಹಿರ್ದೇಶೆಗೆ ಹೋದ ಕಡೆ ನೋಡಿದ್ದು ನನ್ನ ಮಗಳು ಎಲ್ಲಿಯೂ ಕಾಣಲಿಲ್ಲ ಆಗ ನಾನು ಗಾಬಾರಿಯಾಗಿ ಮನೆಗೆ ಬಂದು ಮಲ್ಲಮ್ಮಳು ಕಾಣದೇ ಇರುವ ವಿಷಯವನ್ನು ನನ್ನ ಗಂಡನಿಗೆ ಮತ್ತು ನನ್ನ ಮಗನಿಗೆ ತಿಳಿಸಿದ್ದು ಆಗ ನಾನು ಮತ್ತು ನನ್ನ ಗಂಡ ದೇವಪ್ಪ ಹಾಗೂ ನನ್ನ ಮಗನಾದ ನಿಂಗಣ್ಣ ಎಲ್ಲರೂ ಕೂಡಿ ನನ್ನ ಮಗಳನ್ನು ಎಲ್ಲಾಕಡೆ ಹುಡುಕಾಡಲಾಗಿ ನನ್ನ ಮಗಳು ಎಲ್ಲಯೂ ಸಿಕ್ಕಿರುವುದಿಲ್ಲ. ನಮ್ಮ ಸಂಬಂಧಿಕರಿಗೆ ನನ್ನ ಮಗಳು ಮಲ್ಲಮ್ಮಳು ಕಾಣದೇ ಇರುವ ವಿಷಯದ ಬಗ್ಗೆ ವಿಚಾರಿಸಲಾಗಿ ಅವರು ಸಹ ನಮ್ಮ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಮರು ದಿನ ನಮಗೆ ಗೋತ್ತಾಗಿದ್ದೇನೆಂದರೆ ನಮ್ಮ ಮನೆಯ ಎದುರು ಮನೆಯ ನಿಂಗಪ್ಪ ಇವರ ಮಗನಾದ ನಿಂಗಾರೆಡ್ಡಿಯು ಸಹ ಮನೆಯಲ್ಲಿ ಇರುವುದಿಲ್ಲ ಅನ್ನುವ ವಿಷಯವು ನಮಗೆ ಗೋತ್ತಾಗಿರುತ್ತದೆ. ಆದ್ದರಿಂದ ನನ್ನ ಮಗಳಾದ ಮಲ್ಲಮ್ಮಳನ್ನು ನಮ್ಮ ಎದುರು ಮನೆಯ ನಿಂಗಾರೆಡ್ಡಿ ತಂದೆ ನಿಂಗಪ್ಪ ಈತನೇ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೇಂದು ನಮಗೆ ಅನುಮಾನ ಇರುತ್ತದೆ. ನನ್ನ ಮಗಳು ಅಪಹರಣಕ್ಕೊಳಗಾದಾಗ ಗುಲಾಬಿ ಬಣ್ಣ ಟಾಪ್ ಮತ್ತು ಗುಲಾಬಿ ಬಣ್ಣದ ಪ್ಯಾಂಟ್ ಹಾಗೂ ಗುಲಾಬಿ ಬಣ್ಣದ ಓಡಣಿ ಹಾಕಿಕೊಂಡಿರುತ್ತಾಳೆ. ನನ್ನ ಮಗಳು ಮಲ್ಲಮ್ಮ  ಎತ್ತರ-41/2 ಫೀಟ್, ಸಾಧರಣ ಬಣ್ಣ, ತೆಳ್ಳನೇಯ ಮೈಕಟ್ಟು ಕನ್ನಡ ಭಾಷೆ ಮಾತನಾಡುತ್ತಾಳೆ.

         ಆದ್ದರಿಂದ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಮಲ್ಲಮ್ಮ ವಯಾ-17 ವರ್ಷ ಈಕೆಯನ್ನು ದಿನಾಂಕ :04.09.2022 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಿಂಗಾರೆಡ್ಡಿ  ಇತನು ಅವಳನ್ನು ನಮ್ಮ ಮನೆಯ ಮುಂದೆಯಿಂದ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಇಲ್ಲಿಯವರಗೆ ನನ್ನ ಮಗಳನ್ನು ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ, ನನ್ನ ಮಗಳು ಅಪ್ರಾಪ್ತ ವಯಸ್ಸಿನವಳಿದ್ದು, ಯಾವುದೇ ಟಿ.ವಿ ಮಾಧ್ಯಮಾಗಳಲ್ಲಿ, ಪತ್ರಿಕೆಗಳಲ್ಲಿ ಪ್ರಸಾರ ಮಾಡುವುದು ಬೇಡ ನನ್ನ ಮಗಳಿಗೆ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋದ ನಿಂಗಾರೆಡ್ಡಿ ತಂದೆ ನಿಂಗಪ್ಪ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ಅಂತ ಕೊಟ್ಟ ದೂರಿನ ಸಾರಂಶದ ಆಧಾರದ ಮೇಲಿಂದ ಠಾಣೆಯ ಗುನ್ನೆ ನಂ: 51/2022 ಕಲಂ: 363 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೇ ಕೈಗೊಂಡಿರುತ್ತೇನೆ.

                                                                                                 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 111/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ 30.09.2022 ರಂದು 2-30 ಗಂಟೆಗೆ ಸೈದಾಪೂರ ಹಲಾಯಿ ಪೀರ ಮಸೀದ ಪಕ್ಕದ ಸಂದಿನಲ್ಲಿ ಹೋಗಿ ಮರೆಯಾಗಿ ನಿಂತು ಯಾರೋ ಒಬ್ಬ ವ್ಯಕ್ತಿ ಹಲಾಯಿ ಪೀರ ಮುಂದುಗಡೆ ಹೋಗಿ ಬರುವ ಜನರಿಗೆ ಮಟಕಾ ಚೀಟಿ ಬರೆಸಿರಿ ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಸಿಗುತ್ತವೆ ಅಂತಾ ಕೂಗುತ್ತಿದ್ದನು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಸಿಬ್ಬಂದಿಯವರು ಸಾರ್ವಜನಿಕರಿಗೆ ಕೂಗಿ ಕರೆಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಪಿ.ಐ ಸಾಹೇಬರು ಮೂಲ ಜಪ್ತಿ ಪಂಚನಾಮೆ ಹಾಜರಪಡಿಸಿದ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 111/2022 ಕಲಂ 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 279, 337, 338 ಐಪಿಸಿ ಮತ್ತು 187 ಐಎಂವಿ ಯ್ಯಾಕ್ಟ: ಇಂದು ದಿ: 30/09/2022 ರಂದು 11:30 ಎ.ಎಮ್ಕ್ಕೆಶ್ರೀ ಸಿದ್ದಣ್ಣ ಪಿ.ಎಸ್.ಐ ಸುರಪುರ ಪೊಲೀಸ್ಠಾಣೆಗೆ ಬಂದು ವರದಿ ನೀಡಿದ್ದು, ವರದಿ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:29/09/2022 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಾನು ಮತ್ತು ಸಿದ್ರಾಮರೆಡ್ಡಿ ಸಿಪಿಸಿ-423 ಕೂಡಿಕೊಂಡು ಸುರಪುರ ಪಟ್ಟಣದಲ್ಲಿ ಮತ್ತು ಹಳ್ಳಿ ಬೆಟಿಕುರಿತು ಪೆಟ್ರೋಲಿಂಗ್ಕರ್ತವ್ಯ ನಿರ್ವಹಿಸುತ್ತಾ ಸತ್ಯಂಪೇಟ್ ಮುಖಾಂತರ ಹೇಮನೂರಗ್ರಾಮದಕಡೆಗೆ ಹೊಗುತ್ತಿರುವಾಗ ಸುರಪುರ-ಹೆಮನೂರರಸ್ತೆಯ ಮೇಲೆ ಬರುವ ಕೋಳಿ ಫಾರ್ಮ ಸ್ವಲ್ಪ ಮುಂದೆಇರುವಂತೆಒಂದು ಹೊಲದ ಹತ್ತಿರಒಂದು ಖಾಸಗಿ ಟಾಟಾ ಒಮಿನಿ ಮ್ಯಾಜಿಕ್ಅಪಘಾತಕ್ಕಿಡಾಗಿದ್ದರ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಹೊದಾಗಒಂದುಟಾಟಾ ಮ್ಯಾಜಿಕ್ ಓಮಿನಿ ನಂ. ಕೆಎ-33 ಎಮ್-8173 ನೇದ್ದುಅಪಘಾತಕ್ಕಿಡಾಗಿದ್ದುಅಪಘಾತದಲ್ಲಿ ಶಾಲಾ ಮಕ್ಕಳಿಗೆ ಭಾರಿ ಮತ್ತು ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಘಾತದಲ್ಲಿ ಗಾಯಗಾಳಾದ ಶಾಲಾ ಮಕ್ಕಳಿಗೆ ಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸರಕಾರಿಆಸ್ಪತ್ರೆ ಸುರಪುರಕ್ಕೆ ಸೇರಿಕೆ ಮಾಡಿ ಶಾಲಾ ಮಕ್ಕಳಿಗೆ ವಿಚಾರಿಸಲು ಗಾಯಾಳುಗಳಾದ ಜಿಯಾಉಲ್ ಹಕ್, ಮೋನಿಕಾ, ಐಶ್ವರ್ಯ, ಪ್ರೇಮಜ್ಯೋತಿ, ಅಜಯಕುಮಾರ, ರಮೇಶ, ಪ್ರಕಾಶ, ಪ್ರಭುಗೌಡ ರವರುಗಳಿದ್ದು ತಿಳಿಸಿದ್ದೇನೆಂದರೆ, ಇಂದು ಶಾಲೆಯಿಂದ ಪರೀಕ್ಷೆ ಮುಗಿದ ನಂತರ ಮದ್ಯಾಹ್ನ 1 ಗಂಟೆಗೆಊರಿಗೆ ಹೊಗುವ ಕುರಿತುಟಾಟಾ ಓಮಿನಿ ಮ್ಯಾಜಿಕ್ ನಂ. ಕೆಎ-33 ಎಂ-8173 ನೇದ್ದರಲ್ಲಿ ನಮ್ಮ ನಮ್ಮ ಗ್ರಾಮಗಳಿಗೆ ಹೊಗುವಾಗ ಸದರಿ ವಾಹನದ ಚಾಲಕನು ತನ್ನ ವಾಹನವನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಹೊಗಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಬಲಗಡೆ ಸೈಡಿನಲ್ಲಿ ಕೋಳಿ ಫಾರ್ಮ ಸ್ವಲ್ಪ ಮುಂದೆಇರುವಂತೆಒಂದು ಹೊಲದ ಹತ್ತಿರಅಂದಾಜು 1:45 ಪಿಎಂ ಸುಮಾರಿಗೆ ಪಲ್ಟಿ ಮಾಡಿಅಪಘಾತ ಗೊಳಿಸಿ ಚಾಲಕನು ಓಡಿ ಹೊಗಿರುತ್ತಾನೆಅಂತಾ ತಿಳಿಸಿದರು. ಕಾರಣ ಶಾಲಾ ಮಕ್ಕಳಾದ ಈ ಮೇಲಿನ ಗಾಯಾಳುಗಳು ತಮ್ಮ ಮನೆಯವರೊಂದಿಗೆ ಸುರಪುರಆಸ್ಪತ್ರೆಯಿಂದ ಹೆಚ್ಚಿನಉಪಚಾರಕುರಿತು ಬೇರೆ ಬೇರೆಕಡೆಗೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೊಗಿದ್ದುಇಲ್ಲಿಯವರೆಗೆ ಗಾಯಾಳುಗಳ ಮನೆಯವರುಠಾಣೆಗೆ ಬಂದುದೂರು ಸಲ್ಲಿಸದಕಾರಣಇಂದುತಡವಾಗಿದೂರು ಸಲ್ಲಿಸುತ್ತಿದ್ದುಟಾಟಾ ಓಮಿನಿ ಮ್ಯಾಜಿಕ್ ನಂ. ಕೆಎ-33 ಎಂ-8173 ನೇದ್ದರ ಚಾಲಕ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆಠಾಣೆಗುನ್ನೆ ನಂ. 135/2022 ಕಲಂ:279, 337,338 ಐಪಿಸಿ ಮತ್ತು 187 ಐಎಂವಿ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 151/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 03/09/2022 ರಂದು 02.30 ಪಿಎಮ್ ಕ್ಕೆ ಶ್ರೀ ಹಣಮಂತ ಬಂಕಲಗಿ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಏನಂದರೆ ಇಂದು ದಿನಾಂಕ 30.09.2022 ರಂದು 12.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಏವೂರ ದೊಡ್ಡತಾಂಡಾದ ಸೇವಾಲಾಲ್ ಗುಡಿಯ ಪಕ್ಕದ ಬಯಲು ಜಾಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಶಿವರಾಜ ಹೆಚ್ಸಿ-85, ಆನಂದ ಪಿಸಿ 43, ಪ್ರಭುಗೌಡ 361, ಕಾಶಿನಾಥ ಪಿಸಿ 293, ಬಸವರಾಜ ಪಿಸಿ-363 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 12.15 ಪಿಎಂ ಕ್ಕೆ ಹೊರಟು 12.55 ಪಿಎಂ ಕ್ಕೆ ಏವೂರ ದೊಡ್ಡತಾಂಡಾದ ಸೇವಾಲಾಲ್ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 01.00 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 05 ಜನರು ಸಿಕ್ಕಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಬಸವರಾಜ ತಂದೆ ಕಿರು ಚವ್ಹಾಣ ವ|| 28 ಜಾ|| ಲಂಬಾಣಿ ಉ|| ಚಾಲಕ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ 2) ಜಯರಾಮ ತಂದೆ ದಾರು ಜಾಧವ ವ|| 48 ಜಾ|| ಲಂಬಾಣಿ ಉ|| ಕೂಲಿ ಸಾ|| ಏವೂರ ದೊಡ್ಡತಾಂಡಾ 3) ಗುಂಡು ತಂದೆ ಖೂಬು ರಾಠೋಡ ವ|| 35 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಏವೂರ ದೊಡ್ಡತಾಂಡಾ ತಾ|| ಸುರಪೂರ 4) ಅಶೋಕ ತಂದೆ ದೇವುಲು ಚವ್ಹಾಣ ವ|| 37 ಜಾ|| ಲಂಬಾಣಿ ಉ|| ಕೂಲಿ ಸಾ|| ಏವೂರ ದೊಡ್ಡತಾಂಡಾ ತಾ|| ಸುರಪೂರ ತಾಂಡಾ 5) ಸೋಮು ತಂದೆ ಹರಿಶ್ಚಂದ್ರ ಪವಾರ ವ|| 36 ಜಾ|| ಲಂಬಾಣಿ ಉ|| ಕೂಲಿ ಸಾ|| ಏವೂರ ದೊಡ್ಡತಾಂಡಾ ಅಂತ ಗೊತ್ತಾಗಿದ್ದು ಎಲ್ಲರ ಮಧ್ಯದ ಕಣದಲ್ಲಿ 2100/- ರೂ ಹಣ ಸಿಕ್ಕಿದ್ದು ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 01.00 ಪಿಎಂ ದಿಂದ 02.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 02.30 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿ ಆದಾರದ ಮೇಲಿಂದ ಠಾಣಾ ಗುನ್ನೆ ನಂಬರ 151/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ: 78(3) ಕೆ.ಪಿ ಆಕ್ಟ್: ಇಂದು ದಿನಾಂಕ:30.09.2022 ರಂದು 3:35 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಶ್ರೀಶೈಲ್ ಅಂಬಾಟಿ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:30.09.2022 ರಂದು 3:00 ಪಿ.ಎಮ್.ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಪ್ರಭುಗೌಡ ಹೆಚ್.ಸಿ-120 ರವರು ನನಗೆ ತಿಳಿಸಿದ್ದು ಏನೆಂದರೆ ರಾಜವಾಳ ತಾಂಡಾದ ದುರ್ಗಮ್ಮ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 3:30 ಪಿ.ಎಮ್ ಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:66/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಬದ್ದಪ್ಪ ತಂದೆ ರಾಮಣ್ಣ ಜಾಧವ ವ:24 ವರ್ಷ ಉ:ಕೂಲಿಕೆಲಸ ಜಾ:ಹಿಂದೂ ಲಂಬಾಣಿ ಸಾ:ರಾಜವಾಳ ತಾಂಡಾ ತಾ:ಹುಣಸಗಿ ಜಿ:ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=1340/- ರೂ
2) ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ

Last Updated: 01-10-2022 10:46 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080