ಅಭಿಪ್ರಾಯ / ಸಲಹೆಗಳು


                                          ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 1-11-2021

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ:116/2021 ಕಲಂ: 323, 354, 504, 506, ಸಂ. 34 ಐಪಿಸಿ : ಇಂದು ದಿನಾಂಕ; 31/10/2021 ರಂದು 4-00 ಪಿಎಮ್ ಕ್ಕೆ ಪಿರ್ಯಾಧಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ; 30/10/2021 ರಂದು ನಾನು ಯಾದಗಿರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನನ್ನ ತಮ್ಮನ ಮಗಳ ಡೆಲೆವರಿ ಸಲುವಾಗಿ ಯಾದಗಿರಿಗೆ ಬಂದು ನಂತರ ನನ್ನ ಮಗನಿಗೆ ಭೇಟಿಯಾಗಿ ಬಂದರಾಯಿತು ಅಂತಾ ಕಾಡ್ಲೂರು ಪೆಟ್ರೋಲ ಬಂಕ ಹತ್ತಿರವಿರುವ ನಮ್ಮ ವಾಟರ ಸವರ್ಿಸಿಂಗ್ ಸೆಂಟರಗೆ ಹೋಗಿದ್ದೆನು. ನಂತರ 4-00 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ಮಗ ಮಹ್ಮದ ಸಲೀಂ ನಮ್ಮ ವಾಟರ ಸವರ್ಿಸಿಂಗ್ ಸೆಂಟರದಲ್ಲಿದ್ದಾಗ ಸದರಿ ಈ ಮೇಲ್ಕಂಡ ಮಹ್ಮದ ಅಪ್ಸರ, ಮಹ್ಮದ ಅಫಜಲ್, ಮಹ್ಮದ ಆಸೀಫ್ ರವರು ಅಲ್ಲಿಗೆ ಬಂದು ವಾಟರ ಸವರ್ಿಸ ಸೆಂಟರ ಮುಂದೆ ರಸ್ತೆಯ ಮೇಲೆ ನಿಂತುಕೊಂಡು ಹೆ ಬೇ ಸಲೀಂ ಇದರ ಆ ಗ್ಯಾರೆಜ ಖಾಲಿ ಕರೋ ನಹಿತೋ ತುಮಕೋ ಜಾನಸೇ ಮಾರತೆ ಅಂತಾ ಅವಾಚ್ಯವಾಗಿ ಬೈದಾಡತೊಡಗಿದರು. ಆಗ ನಾನು ಮತ್ತು ನನ್ನ ಮಗ ಸಲೀಂ ಅಲ್ಲಿಗೆ ಹೋಗಿ ಯಾಕೆ ಬೈದಾಡುತ್ತೀರಾ, ಏನಿದ್ದರೂ ಕುಳಿತು ಮಾತಾಡೋಣಾ ಅಂತಾ ಅಂದಾಗ ಮಹ್ಮದ ಅಪ್ಸರ ಈತನು ನಿನ್ನೊಂದಿಗೆ ಏನು ಮಾತನಾಡಬೇಕು ಸೂಳೆ ಮಗನೇ ಅಂತಾ ಅಂದವನೇ ನನ್ನ ಮಗ ಸಲೀಂ ಈತನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ನಂತರ ಮಹ್ಮದ ಅಫಜಲ್ ಈತನು ಕಾಲಿನಿಂದ ಸೊಂಟಕ್ಕೆ ಒದ್ದು ಗುಪ್ತಗಾಯ ಮಾಡಿದನು. ಆಗ ನಾನು ಜಗಳ ಬಿಡಿಸಲು ಹೋದಾಗ ಮಹ್ಮದ ಆಸೀಫ್ ಮತ್ತು ಮಹ್ಮದ ಅಫಜಲ ಇವರು ಹೆ ಬೋಸಡೀ ತು ಕೈಕು ಬಿಚಮೆ ಆರಹಿ ಅಂತಾ ಬೈದು ಮಹ್ಮದ ಅಫಜಲ್ ಈತನು ನನ್ನ ಕೈ ಹಿಡಿದು ಜಗ್ಗಾಡಿ ತಿರುವಿ ಹಿಡಿದಾಗ ಮಹ್ಮದ ಆಸೀಫ್ ಈತನು ಕೈಯಿಂದ ನನ್ನ ಬೆನ್ನಿಗೆ ಗುದ್ದಿ ಮಾನಹಾನಿ ಮಾಡಿದ್ದು ಆಗ ಅಲ್ಲೇ ಇದ್ದ ಬಂದಗಿಸಾಬ ತಂದೆ ಮಹಿಬೂಬಸಾಬ ಶೇಖ ಸಾ; ಠಾಣಗುಂದಿ, ಇಮ್ರಾನ ತಂದೆ ಮಹಿಬೂಬ ಕುರೇಷಿ ಸಾ; ಖುರೇಷಿ ಮೊಹಲ್ಲಾ ಯಾದಗಿರಿ, ರಾಹುಲ ತಂದೆ ಪೈಲಸಿಂಗ್ ಸಾ; ಠಾಣಗುಂದಿ ತಾಂಡಾ ರವರು ಜಗಳ ಬಿಡಿಸಿದ್ದು ಇರುತ್ತದೆ. ನಂತರ ಜಗಳದಲ್ಲಿ ಗಾಯಪೆಟ್ಟು ಹೊಂದಿದ ನನ್ನ ಮಗ ಮಹ್ಮದ ಸಲೀಂ ಈತನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿದ್ದು ನನಗೆ ಅಂತಹ ಯಾವುದೇ ಗಾಯಗಳಾಗದೇ ಇರುವುದಿರಿಂದ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ನನಗೆ ಮತ್ತು ನನ್ನ ಮಗ ಸಲೀಂ ಈತನಿಗೆ ಕೈಯಿಂದ ಹೊಡೆಬಡೆ ಮಾಡಿ, ಜೀವ ಬೆದರಿಕೆ ಹಾಕಿ, ಮಾನಹಾನಿ ಮಾಡಿದ ಮೇಲ್ಕಂಡವರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.116/2021 ಕಲಂ.323, 354, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 172/2021 ಕಲಂ : 363 ಐಪಿಸಿ : ದಿನಾಂಕ 22.10.2021 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕುಮಾರಿ. ಸವಿತಾಳು ಕಾಲೇಜಿಗೆ ಹೋಗಿ ಬರುವುದಾಗಿ ತನ್ನ ಅಜ್ಜಿ ಬುಗ್ಗಮ್ಮ ಎಂಬಾಕೆಗೆ ಹೇಳಿ ಮನೆಯಿಂದ ಗುರುಮಠಕಲ್ಗೆ ಹೋದವಳು ಸಂಜೆಯಾದರು ಮರಳಿ ಮನೆಗೆ ಬಾರದೇ ಇರುವುದರಿಂದ ಬುಗ್ಗಮ್ಮಳು ಹೈದ್ರಾಬಾದಲ್ಲಿ ತನ್ನ ಹೆಂಡತಿ ಮಗನೊಂದಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ತನ್ನ ಮಗನಾದ ಮಹಾದೇವಪ್ಪನಿಗೆ ಫೋನ್ ಮಾಡಿ ನಿನ್ನ ಮಗಳು ಸವಿತಾಳು ಕಾಲೇಜಿಗೆ ಹೋಗಿ ಬರುತ್ತೆನೆಂದು ಹೋದವಳು ಮರಳಿ ಮನೆಗೆ ಬಂದಿಲ್ಲ ಅಂತಾ ತಿಳಿಸಿದ್ದರಿಂದ ಫೀರ್ಯಾದಿಯು ಯದ್ಲಾಪೂರಕ್ಕೆ ಬಂದು ತನ್ನ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ಹಾಗೂ ಗ್ರಾಮಗಳಿಗೆ ಹೋಗಿ ವಿಚಾರಿಸಿದರೂ ಸಹ ಪತ್ತೆಯಾಗದೇ ಇರುವುದರಿಂದ ತಡವಾಗಿ ಇಂದು ದಿನಾಂಕ 31.10.2021 ರಂದು 11:00 ಗಂಟೆಗೆ ಠಾಣೆಗೆ ಬಂದು ತನ್ನ ಮಗಳನ್ನು ಯಾರೋ,ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ದು ಆಕೆಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಸಾರಾಂಸದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 172/2021 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಭೀಗುಡಿ ಪೊಲೀಸ ಠಾಣೆ

83/2021 ಕಲಂ 341, 323, 504 ಸಂಗಡ 34 ಐ.ಪಿ.ಸಿ. : ದಿನಾಂಕ:30/10/2021 ರಂದು 7 ಎ.ಎಮ್. ಸುಮಾರಿಗೆ ಫಿಯರ್ಾದಿಯತಂದೆತಾಯಿಇನ್ನೂ ಮಲಗಿದ್ದು ಫಿಯರ್ಾದಿ ಹೆಂಡತಿಯಾದ ಆರೋಪಿತಳು ಮನೆಯಲ್ಲಿ ಕೆಲಸ ಮಾಡಲುತಿರುಗಾಡುತ್ತಿರುವಾಗ ಫಿಯರ್ಾದಿ ತಾಯಿಯ ಕಾಲು ತುಳಿದಿದ್ದರಿಂದ ಎಚ್ಚರವಾಗಿ ಆರೋಪಿತಳ ಮೇಲೆ ಒದರಾಡುತ್ತಾ ಅಂಗಳ ಕಸ ಹೊಡೆಯಲು ಹೊರಟಾಗ ಆರೋಪಿತಳಾದ ಮಹಿಬೂಬಿ ಇವಳು ಫಿಯರ್ಾದಿ ತಾಯಿಗೆತಡೆದು ನಿಲ್ಲಿಸಿ ಎಲೇ ಭೋಸಡಿ ನಿನ್ನಿಂದಲೇ ನನ್ನ ಸಂಸಾರ ಹಾಳು ಆಗಿದೆಅಂತಾ ಬೈದುಕೈಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿದ್ದು ಆಗ ಫಿಯರ್ಾದಿ ತಂದೆ ಹೊಡೆಯುವದನ್ನು ಬಿಡಿಸಲು ಹೋದಾಗ ಫಿಯರ್ಾದಿಯ ಮಗ ಸಲೀಮ ಈತನು ನಬಿಸಾಬ ಈತನಎದೆಗೆಕೈಯಿಂದ ಗುದ್ದಿ ಒಳಪೆಟ್ಟು ಮಾಡಿದ್ದು ಆಗ ಫಿಯರ್ಾದಿ ಜಗಳ ಬಿಡಿಸಲು ಹೋದಾಗಆರೋಪಿತರು ಫಿಯರ್ಾದಿಗೆಕೈಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 01-11-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080