ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-11-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ 279, 338, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್: ಇಂದು ದಿನಾಂಕ: 31/10/2022 ರಂದು 5:15 ಪಿ.ಎಮ್.ಕ್ಕೆ ಜಿ.ಜಿ.ಹೆಚ್.ಯಾದಗಿರಿಯಿಂದ ಫೋನಿನ ಮುಖಾಂತರ ಡೆತ್ ಎಮ್.ಎಲ್.ಸಿ. ವಸೂಲಾಗಿದ್ದು, ನಾನು ವಿಚಾರಣೆಗಾಗಿ 5:30 ಪಿ.ಎಮ್.ಕ್ಕೆ ಜಿ.ಜಿ.ಹೆಚ್.ಯಾದಗಿರಿಗೆ ಭೇಟಿಕೊಟ್ಟು ಆಸ್ಪತ್ರೆಯಲ್ಲಿ ಹಾಜರಿದ್ದ ಮೃತನ ಅಣ್ಣನಾದ ದೊಡ್ಡ ಅಬ್ದುಲ್ ಭಾಷಾ ತಂದೆ ಮಹೀಬೂಬಸಾಬ ಮುಜಾವರ ವಯ;45 ವರ್ಷ, ಜಾ;ಮುಸ್ಲಿಂ, ಉ;ಕೂಲಿ ಕೆಲಸ, ಸಾ;ಠಾಣಗುಂದಿ, ತಾ;ಜಿ;ಯಾದಗಿರಿ ಇವರು ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 31/10/2022 ರಂದು ಮದ್ಯಾಹ್ನ 4-15 ಪಿ.ಎಂ.ದ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನಮ್ಮುರಿನ ನಮ್ಮ ಸಮಾಜದವರಾದ ಶ್ರೀ ಬಾಷುಮಿಯಾ ತಂದೆ ಲತೀಫಸಾಬ ಹಳಿಗೇರಿ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ತಾವು ತಮ್ಮ ಕೆಲಸದ ಮೇಲೆ ಯಾದಗಿರಿಗೆ ಬಂದು ಮರಳಿ ಠಾಣಾಗುಂದಿಗೆ ಒಂದು ಖಾಸಗಿ ಆಟೋದಲ್ಲಿ ನಮ್ಮುರಿನ ಬಂದಗಿಸಾಬ ತಂದೆ ಖಾಜಾಸಾಬ ಎದುರುಮನಿ ಇವರೊಂದಿಗೆ ಯಾದಗಿರಿ-ಶಹಾಪೂರ ಬೈಪಾಸ್ ರಸ್ತೆಯ ರೈಲ್ವೇಬ್ರಿಡ್ಜ್ ಹತ್ತಿರ ಬರುವಾಗ 4:00 ಪಿ.ಎಮ್. ಸುಮಾರಿಗೆ ನಮ್ಮ ಹಿಂದುಗಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಮ್ಮ ಆಟೋರಿಕ್ಷಾಕ್ಕೆ ಸೈಡ್ ಹೊಡೆದುಕೊಂಡು ಅದೇ ವೇಗದಲ್ಲಿ ಮುಂದೆ ಹೋಗುವಾಗ ಇನ್ನೊಂದು ಬುಲೆಟ್ ಮೋಟರ್ ಸೈಕಲ್ ಸವಾರನು ಸಹ ಕಾರ್ ಹಿಂದುಗಡೆ ನಮ್ಮ ಆಟೋಗೆ ಸೈಡ್ ಹೊಡೆದು ಮುಂದೆ ವೇಗವಾಗಿ ಹೋಗುವಾಗ ಮುಂದುಗಡೆ ಹೋಗುತ್ತಿದ್ದ ಕಾರ್ ಚಾಲಕನು ಎದುರುಗಡೆಯಿಂದ ಯಾದಗಿರಿ ಕಡೆ ಬರುತ್ತಿದ್ದ ಒಂದು ಮೋಟರ್ ಸೈಕಲ್ಗೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಕಾರ್ ಹಿಂದುಗಡೆ ವೇಗವಾಗಿ ಹೋಗುತ್ತಿದ್ದ ಬುಲೆಟ್ ಮೋಟರ್ ಸೈಕಲ್ ಸವಾರನು ಸಹ ಅದೇ ಮೋಟರ್ ಸೈಕಲ್ಗೆ ನೇರವಾಗಿ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಎರಡೂ ವಾಹನಗಳ ರಭಸಕ್ಕೆ ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರನು ಭಾರಿಗಾಯಗೊಂಡು ರಸ್ತೆಯ ಮೇಲೆ ಬಿದ್ದನು. ಆಗ ನಾವು ಕೂಡಲೇ ನಮ್ಮ ಆಟೋರಿಕ್ಷಾವನ್ನು ನಿಲ್ಲಿಸಿ ಆಟೋರಿಕ್ಷಾ ಇಳಿದು ಅಪಘಾತದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದ್ದ ಮೋಟರ್ ಸೈಕಲ್ ಸವಾರನಿಗೆ ನೋಡಲಾಗಿ ಆತನು ನಿನ್ನ ತಮ್ಮ ಸಣ್ಣ ಅಬ್ದುಲಭಾಷಾ ಇದ್ದು, ಆತನಿಗೆ ತಲೆಗೆ ಭಾರಿರಕ್ತಗಾಯವಾಗಿ ಮೃತಪಟ್ಟಿದ್ದು, ಆತನ ಮೋಟರ್ ಸೈಕಲ್ ನಂ: ಕೆಎ-33 ವಾಯ್-0608 ಮುಂದಿನ ಭಾಗ ಜಖಂಗೊಂಡು ಬಿದ್ದಿರುತ್ತದೆ. ಅಪಘಾತಪಡಿಸಿದ ಬುಲೆಟ್ ಮೋಟರ್ ಸೈಕಲ್ ಸವಾರನಿಗೆ ವಿಚಾರಿಸಲಾಗಿ ತನ್ನ ಹೆಸರು ಆಂಜನೇಯ ತಂದೆ ರಂಗಣ್ಣ ತಂಗಲಭಾವಿ ಸಾ||ಬೆನಕನಳ್ಳಿ, ತಾ||ಶಹಾಪೂರ ಎಂದು ತಿಳಿಸಿದ್ದು, ಆತನಿಗೆ ಅಪಘಾತದಲ್ಲಿ ಗದ್ದಕ್ಕೆ ಭಾರಿರಕ್ತಗಾಯವಾಗಿ ಹಲ್ಲುಗಳು ಮುರಿದಂತೆ ಕಂಡುಬಂದಿರುತ್ತವೆ. ಆತನ ಬುಲೆಟ್ ಮೋಟರ್ ಸೈಕಲ್ ನೋಡಲಾಗಿ ಅದಕ್ಕೆ ನೋಂದಣಿ ನಂಬರ್ ಇರಲಿಲ್ಲ ಅದರ ಚಾಸಿಸ್ ನಂ:ಒಇ3ಎ3ಅ5ಕಃಓ2030929 ಇದ್ದು, ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಅಪಘಾತಪಡಿಸಿದ ಕಾರ್ ನೋಡಲಾಗಿ ಅದರ ನಂ: ಕೆಎ-33 ಎಮ್-7451 ಇದ್ದು, ಅದರ ಚಾಲಕನು ನಮಗೆ ನೋಡಿ ಅಲ್ಲಿಂದ ಓಡಿಹೋಗಿದ್ದು ಆತನಿಗೆ ನೋಡಿದರೆ ಗುರುತಿಸುತ್ತೇನೆ, ನೀವು ಕೂಡಲೇ ಸ್ಥಳಕ್ಕೆ ಬರ್ರಿ ಅಂತಾ ತಿಳಿಸಿದ ಕೂಡಲೇ ನಾನು ನನ್ನ ತಾಯಿಯಾದ ಷರೀಫಾಬೀ ಮತ್ತು ನನ್ನ ತಮ್ಮನ ಹೆಂಡತಿಯಾದ ತಾಹೇರಾಬೇಗಂ ರವರಿಗೆ ಅಪಘಾತದ ವಿಷಯ ತಿಳಿಸಿ ಎಲ್ಲರು ಕೂಡಿಕೊಂಡು ಖಾಸಗಿ ವಾಹನದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತವಾಗಿದ್ದು ನಿಜವಿದ್ದು, ಅಪಘಾತದಲ್ಲಿ ನನ್ನ ತಮ್ಮ ಸಣ್ಣ ಅಬ್ದುಲಭಾಷಾ ಈತನಿಗೆ ತಲೆಗೆ ಭಾರಿರಕ್ತಗಾಯವಾಗಿ ಘಟನಾಸ್ಥಳದಲ್ಲಿಯೇ ಮೃತಪಟ್ಟಿದ್ದನು.ಅಲ್ಲಿಯೇ ಇದ್ದ ಭಾಷುಮಿಯಾ ಮತ್ತು ಬಂದಗಿಸಾಬರವರಿಗೆ ವಿಚಾರಿಸಲಾಗಿ ಈ ಮೊದಲು ಫೋನಿನಲ್ಲಿ ತಿಳಿಸಿದಂತೆ ಹೇಳಿದರು. ಅಪಘಾತಪಡಿಸಿದ ಕಾರ್ ನಂ: ಕೆಎ-33 ಎಮ್-7451 ಅಲ್ಲಿಯೇ ನಿಂತಿದ್ದು, ಅದರ ಚಾಲಕನು ಓಡಿಹೋಗಿದ್ದನು. ಅಪಘಾತಪಡಿಸಿದ ಇನ್ನೊಂದು ನೋಂದಣಿ ನಂಬರ್ ಇಲ್ಲದ ಬುಲೆಟ್ ಮೋಟರ್ ಸೈಕಲ್ ಚಾಸಿಸ್ ನಂ: ಒಇ3ಎ3ಅ5ಕಃಓ2030929 ಇದ್ದು ಅದರ ಸವಾರ ಆಂಜನೇಯನಿಗೆ ಗದ್ದಕ್ಕೆ ಭಾರಿರಕ್ತಗಾಯವಾಗಿತ್ತು.ನನ್ನ ತಮ್ಮನ ಮೋಟರ್ ಸೈಕಲ್ ರಸ್ತೆಯ ಮೇಲೆ ಜಖಂಗೊಂಡು ಬಿದ್ದತ್ತು. ಹೀಗಿದ್ದು ಇಂದು ದಿನಾಂಕ: 31/10/2022 ರಂದು 4:00 ಪಿ.ಎಮ್. ಸುಮಾರಿಗೆ ನನ್ನ ತಮ್ಮನಾದ ಸಣ್ಣ ಅಬ್ದುಲಭಾಷಾ ತಂದೆ ಮಹೀಬೂಬಸಾಬ ಮುಜಾವರ ವಯ;40 ವರ್ಷ, ಜಾ;ಮುಸ್ಲಿಂ, ಉ;ಬಿಲ್ಕಲೆಕ್ಟರ್, ಸಾ||ಠಾಣಗುಂದಿ ಈತನು ತನ್ನ ಮೋಟರ್ ಸೈಕಲ್ ನಂ: ಕೆಎ-33 ವಾಯ್-0608 ರ ಮೇಲೆ ಯಾದಗಿರಿಗೆ ಹೋಗುವಾಗ ಯಾದಗಿರಿ-ಶಹಾಪೂರ ಬೈಪಾಸ್ ರಸ್ತೆಯ ಮೇಲೆ ರೈಲ್ವೇ ಬ್ರಿಡ್ಜ್ ಹತ್ತಿರ ಎದುರುಗಡೆಯಿಂದ ಬಂದ ಕಾರ್ ನಂ: ಕೆಎ-33 ಎಮ್-7451 ಚಾಲಕ ಮತ್ತು ನೋಂದಣಿ ನಂಬರ್ ಇಲ್ಲದ ಬುಲೆಟ್ ಮೋಟರ್ ಸೈಕಲ್ ಚಾಸಿಸ್ ನಂ:ಒಇ3ಎ3ಅ5ಕಃಓ2030929 ಇದ್ದು ರ ಸವಾರ ಆಂಜನೇಯ ಇಬ್ಬರು ತಮ್ಮ ವಾಹನಗಳನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನ ಮೋಟರ್ ಸೈಕಲ್ಗೆ ಎದುರುಗಡೆಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನನ್ನ ತಮ್ಮ ಸಣ್ಣ ಅಬ್ದುಲಭಾಷಾ ಈತನ ತಲೆಗೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬುಲೆಟ್ ಮೋಟರ್ ಸೈಕಲ್ ಸವಾರ ಆಂಜನೇಯನಿಗೆ ಗದ್ದಕ್ಕೆ ಭಾರಿರಕ್ತಗಾಯವಾಗಿದ್ದು, ಅಪಘಾತದ ನಂತರ ಕಾರ್ ಚಾಲಕನು ಓಡಿಹೋಗಿದ್ದು, ಈ ಬಗ್ಗೆ ಕಾರ್ ಚಾಲಕ ಮತ್ತು ಬುಲೆಟ್ ಮೋಟರ್ ಸೈಕಲ್ ಸವಾರ ಆಂಜನೇಯ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಯಾದಗಿರಿ ಸಂಚಾರ ಠಾಣೆ ಗುನ್ನೆ ನಂಬರ 51/2022 ಕಲಂ: 279, 338, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 158/2022 ಕಲಂ 279, 337 ಐಪಿಸಿ: ದಿನಾಂಕ 30.10.2022 ರಂದು ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ಗಾಯಾಳು ರಂಗನಾಥನು ತನ್ನ ಮೋಟಾರು ಸೈಕಲ್ ನಂಬರ ಎಪಿ-22-ಎ.ಎಮ್-0488 ರ ಮೇಲೆ ಪುಟಪಾಕ್ ಖಬರಸ್ತಾನ ಕಡೆಯಿಂದ ತಮ್ಮ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಹೋಗಿದ್ದು ಅದೇ ರೀತಿ ಗಾಯಾಳು ವೆಂಕಟೇಶನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಕೆ-7368 ನೇದ್ದನ್ನು ಪುಟಪಾಕ್ ತಾಂಡಾದ ಕಡೆಯಿಂದ ಪುಟಪಾಕ್ ಖಬರಸ್ತಾನದ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಎರಡೂ ಮೋಟಾರು ಸೈಕಲ್ಗಳ ಚಾಲಕರು ತಮ್ಮ-ತಮ್ಮ ವಾಹನಗಳನ್ನು ನಿಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಅಪಘಾತ ಪಡಿಸಿದ್ದರಿಂದ ಎರಡು ಮೋಟಾರು ಸೈಕಲ್ಗಳು ಜಖಂಗೊಂಡು ಎರಡೂ ಮೋಟಾರು ಸೈಕಲ್ಗಳ ಚಾಲಕರಿಗೆ ಭಾರಿ ಹಾಗು ಸಾಧಾ ಸ್ವರೂಪದ ಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 158/2022 ಕಲಂ 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 119/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ 31.10.2022 ರಂದು 2-30 ಗಂಟೆಗೆ ಸೈದಾಪೂರ ವಿರೇಶ ಮಡಿವಾಳ ಮನೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ರಸ್ತೆ ಮೇಲೆ ಹೋಗಿ ಬರುವ ಜನರಿಗೆ ಮಟಕಾ ಚೀಟಿ ಬರೆಸಿರಿ ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಸಿಗುತ್ತವೆ ಅಂತಾ ಕೂಗುತ್ತಿದ್ದಾಗ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಪಿ.ಐ ಸಾಹೇಬರ ಆದೇಶದಂತೆ ಸಿಬ್ಬಂದಿಯವರು ಸಾರ್ವಜನಿಕರಿಗೆ ಕೂಗಿ ಕರೆಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಪಂಚರ ಸಮಕ್ಷಮ ವಿಚಾರಣೆ ಮಾಡಿ ಪಂಚನಾಮೆ ಕೈಕೊಂಡಿದ್ದು, ಪಿ.ಐ ಸಾಹೇಬರು ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಹಾಜರಪಡಿಸಿದ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 119/2022 ಕಲಂ 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 120/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ 31.10.2022 ರಂದು ಸಾಯಂಕಾಲ 6.15 ಗಂಟೆಗೆ ಮಾನ್ಯ ಪಿ.ಐ ಸಾಹೇಬ ಸೈದಾಪೂರ ರವರು ಠಾಣೆಗೆ ಬಂದು ನನಗೆ ಜ್ಞಾಪನ ಪತ್ರದ ಜೊತೆಗೆ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ಒಂದು ಜಪ್ತಿ ಪಂಚನಾಮೆ ಹಾಗೂ ಮಟಕಾ ಚೀಟಿಗಳು ಹಾಗೂ ಬಾಲಪೆನ್ನು, ನಗದು ಹಣ 2130=00 ರೂಪಾಯಿಗಳು ನೀಡಿದರು. ಅಲ್ಲದೆ ಬಸವರಾಜ ತಂದೆ ಚೌಡಪ್ಪ ಪುಂಡುಕೂರ, ವ|| 31 ವರ್ಷ, ಜಾ|| ಕಬ್ಬಲಿಗ, ಉ|| ಕೂಲಿಕೆಲಸ, ಸಾ|| ಕಡೇಚೂರ ಗ್ರಾಮ ಈತನಿಗೆ ನನಗೆ ಒಪ್ಪಿಸಿ ಸದರಿಯವನು ಸೈದಾಪೂರದ ಗಜೇಂದ್ರ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸದರಿಯವನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ನಾನು ರಾಘವೇಂದ್ರ ಸಿ.ಹೆಚ್.ಸಿ-44 ಸೈದಾಪೂರ ಪೊಲೀಸ್ ಠಾಣೆ ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲೆ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 120/2022 ಕಲಂ 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 161/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 31/10/2022 ರಂದು 6.30 ಪಿಎಂ ಕ್ಕೆ ಶ್ರೀ ಹಣಮಂತ ಬಂಕಲಗಿ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, ಆರೋಪಿತರು ಹಾಗೂ ವರದಿ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 31/10/2022 ರಂದು 4.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಗೌಡಗೇರಾ ಸೀಮಾಂತರದ ಸರಕಾರಿ ಗುಡ್ಡದ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೂಡಿ ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಕಾಳಗ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಪ್ರಭುಗೌಡ 361, ಕಾಶಿನಾಥ ಪಿಸಿ 293, ಬಸವರಾಜ ಪಿಸಿ 363, ಮಾಳಪ್ಪ ಪಿಸಿ 29, ವಿಜಯಾನಂದ ಪಿಸಿ 103 ಮತ್ತು ರವಿಕುಮಾರ ಎ.ಹೆಚ್.ಸಿ 38 ರವರನ್ನು ಹಾಗೂ ಇಬ್ಬರು ಪಂಚರಾದ ಇಮ್ರಾನ್ ತಂದೆ ಇಕ್ಬಾಲಸಾಬ ಜಾಗೀರದಾರ ಮತ್ತು ಖಯ್ಯೂಮ್ ತಂದೆ ಅಬ್ದುಲಸಾಬ ಗೋಗಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಮತ್ತು ಒಂದು ಖಾಸಗಿ ಜೀಪಿನಲ್ಲಿ ಠಾಣೆಯಿಂದ 4.15 ಪಿಎಂ ಕ್ಕೆ ಹೊರಟು 4.55 ಪಿಎಂ ಕ್ಕೆ ಗೌಡಗೇರಾ ಸೀಮಾಂತರದ ಸರಕಾರಿ ಗುಡ್ಡದ ಬಯಲು ಜಾಗೆಯ ಸಾರ್ವಜನಿಕ ಸ್ಥಳದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಹಣ ಪಣಕ್ಕಿಟ್ಟು ಕೆಂಪು ಹುಂಜಕ್ಕೆ 100 ರೂಪಾಯಿ, ಬಿಳಿ ಹುಂಜಕ್ಕೆ 100 ರೂಪಾಯಿ ಅಂತಾ ಹುಂಜಗಳನ್ನು ಜಗಳಕ್ಕೆ ಹಚ್ಚಿ ಕೋಳಿ ಪಂದ್ಯಾಟದ ಮೂಲಕ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 5.00 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 10 ಜನರು ಸಿಕ್ಕಿದ್ದು ಉಳಿದವರು ಓಡಿ ಹೋಗಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಬಸಣ್ಣ ತಂದೆ ಮಾನಪ್ಪ ಬಡಿಗೇರ ವ|| 55 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ 2) ದ್ಯಾವಣ್ಣ ತಂದೆ ಮಲ್ಲನಗೌಡ ಮಾಲಿ ಬಿರಾದಾರ ವ|| 40 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ 3) ಮರೆಪ್ಪ ತಂದೆ ಮಲ್ಲಪ್ಪ ಬಾಣತಿಹಾಳ ವ|| 35 ಜಾ|| ಬೇಡರ ಉ|| ಒಕ್ಕಲುತನ ಸಾ|| ಗಂಗನಾಳ ತಾ|| ಶಹಾಪೂರ 4) ಹಳ್ಳೆಪ್ಪ ತಂದೆ ಶಂಕ್ರೆಪ್ಪ ಹವಲ್ದಾರ ವ|| 32 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ 5) ದ್ಯಾವಣ್ಣ ತಂದೆ ಶಿವಪ್ಪ ಮಾಲಿ ಬಿರಾದಾರ ವ|| 55 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ 6) ರವಿ ತಂದೆ ರಮೇಶ ಗೊಂದಳಿ ವ|| 25 ಜಾ|| ಗೊಂದಳಿ ಉ|| ಕೂಲಿ ಸಾ|| ಹುಣಸಗಿ 7) ಅಶೋಕ ತಂದೆ ಗದ್ದೆಪ್ಪ ಗೊಂದಳಿ ವ|| 28 ಜಾ|| ಗೊಂದಳಿ ಉ|| ಕೂಲಿ ಸಾ|| ಹುಣಸಗಿ 8) ಸಿದ್ದಪ್ಪ ತಂದೆ ರಂಗಣ್ಣ ಬುಗಸಾಲ ವ|| 27 ಜಾ|| ಬೇಡರ ಉ|| ಕೂಲಿ ಸಾ|| ಮಂಗಿಹಾಳ 9) ನಿಂಗಪ್ಪ ತಂದೆ ಹೊನ್ನಯ್ಯ ಸೋಪಣ್ಣಮಕ್ಕಳು ವ|| 30 ಜಾ|| ಕುರುಬರ ಉ|| ಒಕ್ಕಲುತನ ಸಾ|| ವನದುರ್ಗ ತಾ|| ಶಹಾಪೂರ 10) ಮಾನುನಾಯಕ ತಂದೆ ಸೋಮಲುನಾಯಕ ಪವಾರ ವ|| 40 ಜಾ|| ಲಂಬಾಣಿ ಉ|| ಕೂಲಿ ಸಾ|| ನಾಗನಟಗಿ ತಾಂಡಾ ತಾ|| ಶಹಾಪೂರ ಅಂತ ತಿಳಿಸಿದ್ದು ಎಲ್ಲರ ಮಧ್ಯದ ಕಣದಲ್ಲಿ 3100/- ರೂ ಹಾಗೂ 4 ಹುಂಜಗಳು ಅಂ|| ಕಿ|| 1200/- ರೂ ಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 5.00 ಪಿಎಂ ದಿಂದ 6.00 ಪಿಎಂ ದವರೆಗೆ ಮಾಡಿದ್ದು ನಮಗೆ ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳಿಗೆ ಪಂದ್ಯಾಟ ನಡೆಸಿಕೊಂಡು ಹೋಗುವ ವ್ಯಕ್ತಿ ಯಾರು ಅಂತಾ ವಿಚಾರಿಸಿದಾಗ ಮಹಾದೇವ ತಂದೆ ಗಂಗಪ್ಪ ದೊರಿ ಸಾ|| ಗೌಡಗೇರಾ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯು ಓಡಿ ಹೋಗಿದ್ದು ಅವನು ಸಿಕ್ಕಿರುವುದಿಲ್ಲ. ದಾಳಿಯಲ್ಲಿ ಸಿಕ್ಕ 10 ಜನ ಹಾಗೂ ಪಂದ್ಯಾಟ ನಡೆಸಿ ಓಡಿ ಹೋದ ಮಹಾದೇವವಿವರ ಮೇಲೆ ಕ್ರಮ ಜರುಗಿಸಲು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 6.30 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಕೆಂಭಾವಿ ಠಾಣೆ ಗುನ್ನೆ ನಂ 161/2022 ಕಲಂ 87 ಕೆಪಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 01-11-2022 12:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080