ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 01-12-2022

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ: 323, 324, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 30.11.2022 ರಂದು 5:30 ಪಿಎಮಕ್ಕೆ ಪಿರ್ಯಾದಿ ಶ್ರೀಮತಿ ಹಣಮವ್ವ ಗಂಡ ಹಯ್ಯಾಳಪ್ಪ ಅಬಲೆರ ವ:52 ವರ್ಷ ಉ:ಮನೆಗೆಲಸ ಜಾ:ಹಿಂದೂ ಕುರುಬರ ಸಾ: ಕೆಳಗಿನ ಅಬಲೆರದೊಡ್ಡಿ ಮಂಜಲಾಪೂರ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ 24.11.2022 ರಂದು ಗುರುವಾರ ದಿವಸ ಮುಂಜಾನೆ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ತಿಪ್ಪಣ್ಣ ತಂದೆ ಹಯ್ಯಾಳಪ್ಪ ಅಬಲೇರ ಇಬ್ಬರೂ ಕೂಡಿ ಕಕ್ಕೇರಾ ಸೀಮಾಂತರದಲ್ಲಿಯ ನಮ್ಮ ಜಮೀನು ಸವರ್ೆ ನಂ:156 ನೇದ್ದರ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ 2:05 ಗಂಟೆಯ ಸುಮಾರಿಗೆ ಮಂಜಲಾಪುರದ ಮಾನಪ್ಪ ತಂದೆ ನಿಂಗಪ್ಪ ಗಂಗನಕಲ್ಲ ಹಾಗೂ ಆತನ ಹೆಂಡತಿ ಲಕ್ಷ್ಮೀಬಾಯಿ ಗಂಡ ಮಾನಪ್ಪ ಗಂಗನಕಲ್ಲ ಇವರುಗಳು ತಮ್ಮ ದನಕರುಗಳನ್ನು ಹೊಡೆದುಕೊಂಡು ಬಂದು ಮೇಯಿಸಲಿಕ್ಕೆ ನಮ್ಮ ಹೊಲಗಳಿಗೆ ಬಿಟ್ಟಿದ್ದು, ಆಗ ನಾನು ಮತ್ತು ನನ್ನ ಮಗ ತಿಪ್ಪಣ್ಣ ರವರು ಮಾನಪ್ಪ ಹಾಗೂ ಆತನ ಹೆಂಡತಿ ಲಕ್ಷ್ಮೀಬಾಯಿಗೆ ನಮ್ಮ ಹೊಲದಲ್ಲಿ ನಿಮ್ಮ ದನಕರುಗಳನ್ನು ಮೇಯಿಸಬೇಡಿ ಭತ್ತ ಕಟಾವಿಗೆ ಬಂದಿದೆ ನಮ್ಮ ಭತ್ತದ ಬೆಳೆ ಹಾಳಾಗುತ್ತಿದೆ ನಿಮ್ಮ ದನಕರುಗಳನ್ನು ಹೊಡೆದುಕೊಳ್ಳಿರಿ ಅಂತಾ ಅಂದಾಗ ಮಾನಪ್ಪ ಮತ್ತು ಅವನ ಹೆಂಡತಿ ಲಕ್ಷ್ಮೀಬಾಯಿ ರವರು ನನ್ನ ಮಗ ತಿಪ್ಪಣ್ಣನಿಗೆ ಸೂಳೆ ಮಗನೇ ನಾವು ಇಲ್ಲಿಯೇ ನಿಮ್ಮ ಹೊಲದಲ್ಲಿಯೇ ನಮ್ಮ ದನಗಳನ್ನು ಬಿಟ್ಟು ಮೇಯಿಸುತ್ತೇವೆ ನೀನು ಏನು ಸೆಂಟಾ ಹರಿಕೊಂತಿ ಹರಕೋ ಅಂತಾ ಒದರಾಡಹತ್ತಿದ್ದು, ಆಗ ನಾನು ಮತ್ತು ನನ್ನ ಮಗ ತಿಪ್ಪಣ್ಣ ರವರು ನಮ್ಮ ಹೊಲದಲ್ಲಿಯ ದಾರಿಯ ಮೇಲೆ ಅವರು ಇದ್ದಲ್ಲಿಗೆ ಹೋಗಿ ಯಾಕೆ ನಮಗೆ ಬೈಯುತ್ತಿರಿ ನಮ್ಮ ಹೊಲದಲ್ಲಿ ನಿಮ್ಮ ದನಗಳನ್ನು ಬಿಡಬೇಡಿರಿ ಅಂದರೆ ಏನಾಯ್ತು ಅಂತಾ ಅಂದಾಗ ಪಿರ್ಯಾದಿ ಮತ್ತು ಮಗ ತಿಪ್ಪಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮಾನಪ್ಪ ತಂದೆ ನಿಂಗಪ್ಪ ಗಂಗನಕಲ್ಲ ಹಾಗೂ ಲಕ್ಷ್ಮೀಬಾಯಿ ಗಂಡ ಮಾನಪ್ಪ ಗಂಗನಕಲ್ಲ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 77/2022 ಕಲಂ: 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 156/2022 ಕಲಂ: 324, 504, 506 ಐಪಿಸಿ: ಇಂದು ದಿನಾಂಕಃ 30/11/2022 ರಂದು 8:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀ ಕೃಷ್ಣಾ ತಂದೆ ಭೀಮಣ್ಣ ತಳವಾರ ವಯಾ|| 35 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ರತ್ತಾಳ ತಾ|| ಸುರಪುರ ಇದ್ದು, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನಮ್ಮ ತಂದೆ ತಾಯಿಗೆ ನಾವು 5 ಜನ ಗಂಡುಮಕ್ಕಳು, 3 ಜನ ಹೆಣ್ಣುಮಕ್ಕಳು ಹೀಗೆ ಒಟ್ಟು 8 ಜನ ಮಕ್ಕಳಿರುತ್ತೇವೆ. ನಮ್ಮೂರಲ್ಲಿ ನಾನು, ನಮ್ಮ ತಮ್ಮಂದಿರಾದ ಚಂದಪ್ಪ, ಭೀಮಣ್ಣ ಮೂರು ಜನರು ಊರಲ್ಲಿ ವಾಸವಾಗಿದ್ದು, ಇನ್ನಿಬ್ಬರು ಬೆಂಗಳೂರನಲ್ಲಿ ವಾಸವಾಗಿರುತ್ತಾರೆ. ನಮ್ಮೂರ ರಾಮಣ್ಣ ತಂದೆ ಮಲ್ಲಪ್ಪ ಗಡದರ ಈತನು ನಮ್ಮ ತಮ್ಮನಾದ ಚಂದಪ್ಪನೊಂದಿಗೆ ಆಗಾಗ ವಿನಾಕಾರಣ ತಕರಾರು ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ: 28/11/2022 ರಂದು ರಾತ್ರಿ ನಾನು, ನನ್ನ ತಾಯಿ ಶಾಂತಮ್ಮ, ತಮ್ಮಂದಿರಾದ ಭೀಮಣ್ಣ & ಚಂದಪ್ಪ ಎಲ್ಲರು ಮನೆಯಲ್ಲಿ ಊಟ ಮಾಡಿ ಮಲಗಿದ್ದೆವು. ನಂತರ 11 ಗಂಟೆ ಸುಮಾರಿಗೆ ನನ್ನ ತಮ್ಮ ಚಂದಪ್ಪ ಈತನು ಬಹಿದರ್ೆಸೆಗೆಂದು ಮನೆಯಿಂದ ಹೋಗಿದ್ದು, ಆಗ ಅದೇ ಸಮಯಕ್ಕೆ ನಮ್ಮ ತಮ್ಮನೊಂದಿಗೆ ಯಾರೋ ಬಾಯಿ ಮಾಡುವ ಶಬ್ದ ಕೇಳಿ ನಾನು, ನಮ್ಮ ತಾಯಿ ಶಾಂತಮ್ಮ, ತಮ್ಮನಾದ ಭೀಮಣ್ಣ ಮೂವರು ಹೊರಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಜು ಮನೆಯ ರಾಮಕೃಷ್ಣ ತಳವಾರ ಇವರ ಮನೆಯ ಮುಂದೆ ನಮ್ಮ ತಮ್ಮನಾದ ಚಂದಪ್ಪನೊಂದಿಗೆ ರಾಮಣ್ಣ ತಂದೆ ಮಲ್ಲಪ್ಪ ಗಡದರ ಜಗಳ ತೆಗೆದು ನಿನ್ನ ಸೊಕ್ಕು ಬಾಳ ಆಗಿದೆ ಸೂಳೆಮಗನೆ ಈ ರಾತ್ರಿ ಏಕೆ ತಿರುಗಾಡುತಿ ಸೂಳೆಮಗನೆ ಅಂತ ಬೈಯುತ್ತಿದ್ದಾಗ ನಮ್ಮ ತಮ್ಮ ಚಂದಪ್ಪ ಈತನು ನಾನು ಬಹಿದರ್ೆಸೆಗೆ ಹೋಗುತ್ತಿದ್ದೇನೆ ಸುಮ್ಮನೆ ಯಾಕೆ ಬೈಯುತ್ತಿ ಅಂತ ಅನ್ನುತ್ತಿದ್ದಾಗ ರಾಮಣ್ಣ ಈತನು ಅಲ್ಲೇ ಬಿದ್ದ ಒಂದು ಬಡಿಗೆಯಿಂದ ನಮ್ಮ ತಮ್ಮ ಚಂದಪ್ಪನ ಭುಜಕ್ಕೆ, ಎದೆಯ ಮೇಲೆ, ಬೆನ್ನಿಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದನು. ಆಗ ಅಲ್ಲೇ ಇದ್ದ ನಾನು, ನಮ್ಮ ತಾಯಿ, ನಮ್ಮ ತಮ್ಮ ಭೀಮಣ್ಣ ಮತ್ತು ಬಾಜು ಮನೆಯ ರಾಮಕೃಷ್ಣ ತಳವಾರ ಎಲ್ಲರು ಕೂಡಿ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ಆಗ ಅವನು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿ ಸೂಳೆ ಮಗನೆ ಇಲ್ಲದಿದ್ದರೆ ನಿಮ್ಮ ಜೀವಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದನು. ನಂತರ ನಮ್ಮ ತಮ್ಮ ಚಂದಪ್ಪನಿಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಯದೇವ ಆಸ್ಪತ್ರೆಗೆ ಸೇರಿಕೆ ಮಾಡಿ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನಮ್ಮ ತಮ್ಮ ಚಂದಪ್ಪನಿಗೆ ವಿನಾಕಾರಣ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ರಾಮಣ್ಣ ತಂದೆ ಮಲ್ಲಪ್ಪ ಗಡದರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 156/2022 ಕಲಂ: 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಇತ್ತೀಚಿನ ನವೀಕರಣ​ : 01-12-2022 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080