ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-01-2022

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ: 01/2022 ಕಲಂ: 304(ಎ) ಐಪಿಸಿ : ಇಂದು ದಿನಾಂಕ:01.01.2022 ರಂದು ಬೆಳಿಗ್ಗೆ 07:15 ಎಮ್ಕ್ಕೆ ಪಿರ್ಯಾದಿ ಶ್ರೀ ಆನಂದ ತಂದೆ ತಿಮ್ಮಯ್ಯ ದೊರಿ ವ:50 ಜಾ: ಹಿಂದೂ ಬೇಡರ ಉ:ಒಕ್ಕಲುತನ ಸಾ:ಹೊಸೂರಪೈದೊಡ್ಡಿ ಕಕ್ಕೇರಾ (ವಾರ್ಡ ನಂ:16) ತಾ:ಸುರಪೂರ ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ನನಗೆ ಮುತ್ತಣ್ಣ @ ದೇವಿಂದ್ರಪ್ಪ, ಬಸವರಾಜ, ಅಕ್ಕನಾಗಮ್ಮ ಅಂತ 3 ಜನ ಮಕ್ಕಳಿದ್ದು ಮೂವರದು ಇನ್ನೂ ಮದುವೆಯಾಗಿರುವದಿಲ್ಲ. ನಮ್ಮೂರ ನನಗೆ ಮಾವನಾಗಬೇಕಾದ ಸೋಮರಾಯ ತಂದೆ ಅಲಕಯ್ಯ ದೊರಿ ಇವರದೂ ಒಂದು ಮಹೀಂದ್ರಾ ಡಿಐ 575 ಕಂಪನಿಯ ಕೆಂಪು ಬಣ್ಣದ ಟ್ರ್ಯಾಕ್ಟರ್ ಇಂಜೀನ್ ನೊಂದಣಿ ನಂಬರ್:ಕೆಎ-33 ಟಿಬಿ-2062 ಇಂಜೀನ್ ನಂ:ಚಏಈ2ಒಃಂ1814, ಚೆಸ್ಸಿ ನಂ:ಒಃಓಂಂಂಐಂಊಏಚಈ00495 ನೆದ್ದು ಇದ್ದು ಅದಕ್ಕೆ ಇನ್ನೂ ನೊಂದಣಿ ಸದರಿ ನೊಂದಣಿ ಸಂಖ್ಯೆ ಬರೆಯಿಸಿರುವದಿಲ್ಲ. ಇದನ್ನು ನನ್ನ ಹಿರಿಯ ಮಗನಾದ ಮುತ್ತಣ್ಣ @ ದೇವಿಂದ್ರಪ್ಪ ಇತನು ಈಗ ಸುಮಾರು ಒಂದು ವರ್ಷದಿಂದ ಸದರಿ ಟ್ರ್ಯಾಕ್ಟರ್ ಇಂಜೀನ್ದ ಚಾಲಕನಾಗಿದ್ದು ನಮ್ಮ ಮಾವ ಸೋಮರಾಯನು ತಮ್ಮ ಮತ್ತು ನಮ್ಮ ಹೊಲಗಳಲ್ಲಿ ಕೆಲಸವಿದ್ದಾಗ ಈ ಟ್ರ್ಯಾಕ್ಟರ್ನ್ನು ಬಳಸುತ್ತಿದ್ದು ಅಲ್ಲದೇ ಬಿಡುವು ಇದ್ದಾಗ ಬೇರೆಯವರ ಹೊಲಗಳಿಗೆ ಬಾಡಿಗೆಗೆ ಬರಲು ತಿಳಿಸಿದಾಗ ಹೋಗುತ್ತಿರುವದು ನನಗೆ ಗೊತ್ತಿರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 31.12.2021 ರಂದು ದಿನನಿತ್ಯದಂತೆ ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ನನ್ನ ಮಗ ಮುತ್ತಣ್ಣ @ ದೇವಿಂದ್ರಪ್ಪ ಇತನು ನಮ್ಮೂರ ಬಸವರಾಜಯ್ಯ ತಂದೆ ಅಮರಯ್ಯ ಹಿರೇಮಠ ಇವರ ಕಕ್ಕೇರಾ ಸೀಮಾಂತರದ ಜಮೀನು ಸವರ್ೆ ನಂ:637 ನೇದ್ದನ್ನು ಲಿಜಿಗೆ ಹಾಕಿಕೊಂಡ ನಮ್ಮೂರ ರಮೇಶ ತಂದೆ ಮಲ್ಲಪ್ಪ ಕುಂಬಾರ ಇತನ ಭತ್ತದ ಗದ್ದೆಗೆ ಪಟ್ಲರ್ ಹೊಡೆಯಲು ಅವನು ಕರೆದ ಮೇರೆಗೆ ಪಟ್ಲರ್ ಹೊಡೆಯಲು ಹೋಗಿದ್ದು ನನ್ನ ಮಗನೊಂದಿಗೆ ಟ್ರ್ಯಾಕ್ಟರ್ ಇಂಜೀನ್ದ ಮಾಲೀಕರಾದ ನಮ್ಮ ಮಾವ ಸೋಮರಾಯ ತಂದೆ ಅಂಕಯ್ಯ ಇವರ ಮಗನಾದ ನನಗೆ ಅಳಿಯನಾದ ಅಂಬ್ರೇಶ ತಂದೆ ಸೋಮರಾಯ ಇತನು ಕೂಡ ಸದರಿ ಹೊಲಕ್ಕೆ ಪಟ್ಲರ್ ಹೊಡೆಯಲು ನನ್ನ ಮಗನ ಜೊತೆಗೆ ಹೋಗಿದ್ದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನನ್ನ ಮಗನ ಜೊತೆಗೆ ಹೋದ ಅಳಿಯನಾದ ಅಂಬ್ರೇಶ ತಂದೆ ಸೋಮರಾಯ ಇತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಮಗನು ರಮೇಶ ತಂದೆ ಮಲ್ಲಪ್ಪ ಕುಂಬಾರ ಇವರು ಲಿಜಿಗೆ ಹಾಕಿಕೊಂಡ ಬಸವರಾಜಯ್ಯ ಹಿರೇಮಠ ರವರ ಹೊಲದ ಭತ್ತದ ಗದ್ದೆಯಲ್ಲಿ ಪಟ್ಲರ್ ಹೊಡೆಯುವಾಗ ಟ್ರ್ಯಾಕ್ಟರ್ ಇಂಜೀನ್ ಹೊಲದಲ್ಲಿಯ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಆಗ ನಾನು ಮತ್ತು ಹೊಲ ಲಿಜಿಗೆ ಹಾಕಿಕೊಂಡ ರಮೇಶ ತಂದೆ ಮಲ್ಲಪ್ಪ ಕುಂಬಾರ ಹಾಗೂ ಇವರ ಹೊಲಕ್ಕೆ ಕೂಲಿ ಕೆಲಸಕ್ಕೆ ಬಂದ ಅಂಬ್ರೇಶ ತಂದೆ ದೇವಿಂದ್ರಪ್ಪ ಕುಂಬಾರ ಇಬ್ಬರೂ ನಿಮ್ಮ ಮಗ ಮುತ್ತಣ್ಣ @ ದೇವಿಂದ್ರಪ್ಪ ರವರಿಗೆ ಈಗ ಟ್ರ್ಯಾಕ್ಟರ್ ನಿಲ್ಲಿಸು ನಾಳೆ ಬೆಳಿಗ್ಗೆ ನೋಡೋಣ ಈಗ ಕತ್ತಲಾಗಿದೆ ನೀನು ಟ್ರ್ಯಾಕ್ಟರ್ ನಡೆಸುವದು ನಿಲ್ಲಿಸು ನೀನು ಮುಂದೆ ಟ್ರ್ಯಾಕ್ಟರ್ ಇಂಜೀನ್ ನಡೆಸಿದರೆ ಗದ್ದೆಯಲ್ಲಿ ನೀರು ಬಾಳ ಇದೆ ಮತ್ತು ಗದ್ದೆಯ ನೆಲ ಪೂತರ್ಿ ನೆನೆದಿದೆ ನೀನು ಟ್ರ್ಯಾಕ್ಟರ್ ನಡೆಸಿದರೆ ಮುಂದೆ ಅಪಾಯವಾಗಬಹುದು ಅಂತ ಅಂದರೂ ಕೂಡ ನಮ್ಮ ಮಾತನ್ನು ಕೇಳದೆ ನಿಮ್ಮ ಮಗನು ಟ್ರ್ಯಾಕ್ಟರ್ ಇಂಜೀನ್ ಚಾಲು ಮಾಡಿ ನೀವು ಸುಮ್ಮನೆ ಇರ್ರಿ ನಾನು ಟ್ರ್ಯಾಕ್ಟರ್ ಇಂಜೀನ್ ಸಿಕ್ಕಿ ಬಿದ್ದಿದ್ದನ್ನು ತೆಗೆಯುತ್ತೇನೆ ಅಂತ ಅಂದವನೇ ಒಮ್ಮೇಲೆ ಟ್ರ್ಯಾಕ್ಟರ್ ಇಂಜೀನ್ಗೆ ನಿರ್ಲಕ್ಷತನದಿಂದ ರೇಸ್ ಮಾಡಿದ್ದು ಆಗ ಟ್ರ್ಯಾಕ್ಟರ್ ಇಂಜೀನ್ ಮುಂದಿನಿಂದ ಹಿಂದಕ್ಕೆ ಬಾಗಿ ನಾಲ್ಕು ಗಾಲಿಗಳು ಅಂಗಾತವಾಗಿ ಬಿದ್ದಿದ್ದು ಅದರ ಕೆಳಗೆ ನೀರು ನಿಂತ ಭತ್ತದ ಗದ್ದೆಯ ಕೆಸರಿನಲ್ಲಿ ನಿಮ್ಮ ಮಗನು ಸಿಲುಕಿಕೊಂಡಿದ್ದು ಕೂಡಲೇ ನೀವು ಬರಬೇಕು ಅಂತ ತಿಳಿಸಿದ್ದು ಕೂಡಲೇ ನಾನು ಮತ್ತು ಟ್ರ್ಯಾಕ್ಟರ್ ಇಂಜೀನ್ದ ಮಾಲೀಕನಾದ ಮಾವ ಸೋಮರಾಯ ತಂದೆ ಅಂಕಯ್ಯ ಹಾಗೂ ನಮ್ಮೂರ ದೇವಪ್ಪ ತಂದೆ ನಾಗಪ್ಪ ಕುಂಬಾರ, ಪರಮಣ್ಣ ತಂದೆ ಜಡೆಪ್ಪ ಕುಂಬಾರ ರವರು ಕೂಡಿ ಇನ್ನೊಂದು ಟ್ರ್ಯಾಕ್ಟರ್ ಇಂಜೀನನ್ನು ತೆಗೆದುಕೊಂಡು ಬಸವರಾಜಯ್ಯ ಹಿರೇಮಠ ರವರ ಲಿಜಿಗೆ ಹಾಕಿಕೊಂಡ ರಮೇಶ ತಂದೆ ಮಲ್ಲಪ್ಪ ಕುಂಬಾರ ರವರ ಹೊಲಕ್ಕೆ ಹೋಗಿ ನೋಡಲಾಗಿ ಅಲ್ಲಿ ಅಳಿಯ ಅಂಬ್ರೇಶ ಹಾಗೂ ಹೊಲ ಲಿಜಿಗೆ ಹಾಕಿಕೊಂಡ ರಮೇಶ ತಂದೆ ಮಲ್ಲಪ್ಪ ಕುಂಬಾರ ಅವರ ಹೊಲಕ್ಕೆ ಕೂಲಿಕೆಲಸಕ್ಕೆ ಬಂದಿದ್ದ ಅಂಬ್ರೇಶ ತಂದೆ ದೇವಿಂದ್ರಪ್ಪ ಕುಂಬಾರ ರವರು ಇದ್ದು ನೋಡಲಾಗಿ ನನ್ನ ಮಗ ಮುತ್ತಣ್ಣ @ ದೇವಿಂದ್ರಪ್ಪ ಇತನು ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ಇಂಜೀನ್ ನಂ:ಕೆಎ-33 ಟಿಬಿ-2062 ನೇದ್ದರ ಕೆಳಗಡೆ ಭತ್ತದ ಗದ್ದೆಯ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಅವನ ಮೇಲೆ ಟ್ರ್ಯಾಕ್ಟರ್ ಇಂಜೀನ್ ನಾಲ್ಕು ಗಾಲಿಗಳು ಮೇಲೆಯಾಗಿ ಬಿದ್ದಿದ್ದು ಆಗ ನಾವೆಲ್ಲರೂ ನನ್ನ ಮಗನಿಗೆ ಹೊರಗೆ ತೆಗೆಯಲು ನಾವು ಒಯ್ದ ಇನ್ನೊಂದು ಟ್ರ್ಯಾಕ್ಟರ್ ಇಂಜೀನ ಸಹಾಯದಿಂದ ಪ್ರಯತ್ನಿಸಿ ಟ್ರ್ಯಾಕ್ಟರ್ ಇಂಜೀನ್ ನಂ:ಕೆಎ-33 ಟಿಬಿ-2062 ನೇದ್ದನ್ನು ಎತ್ತಿ ನನ್ನ ಮಗ ಮುತ್ತಣ್ಣ @ ದೇವಿಂದ್ರಪ್ಪ ಇತನನ್ನು 7:30 ಗಂಟೆಯ ಸುಮಾರಿಗೆ ಹೊರಗೆ ತೆಗೆದು ನೋಡಲಾಗಿ ನನ್ನ ಮಗ ಮುತ್ತಣ್ಣ @ ದೇವಿಂದ್ರಪ್ಪನಿಗೆ ಎದೆಯ ಮೇಲೆ, ಹೊಟ್ಟೆಯ ಮೇಲೆ ಎಡ ಮತ್ತು ಬಲ ಪಕಡಿಗಳ ಮೇಲೆ, ಬೆನ್ನಿನ ಮೇಲೆ ಹಾಗೂ ಬಲಗಡೆ ಮುಡ್ಡಿಯ ಮೇಲೆ ಕಂದುಗಟ್ಟಿದ ಭಾರಿ ಒಳಪೆಟ್ಟುಗಳಾಗಿ ನನ್ನ ಮಗನು ಮೃತಪಟ್ಟಿದ್ದು, ನಂತರ ನನ್ನ ಮಗನ ಶವವನ್ನು ಅಲ್ಲಿಂದ ಒಯ್ದು ನಮ್ಮ ಹೊಸೂರಪೈದೊಡ್ಡಿಯ ನಮ್ಮ ಮನೆಯ ಪಕ್ಕದ ನಮ್ಮ ಹೊಲದಲ್ಲಿ ಹಾಕಿದ್ದು ನಾನು ನಿನ್ನೆ ರಾತ್ರಿಯಾಗಿದ್ದರಿಂದ ಮತ್ತು ವಿಚಾರ ಮಾಡಿ ತಡವಾಗಿ ಇಂದು ತಮ್ಮಲ್ಲಿಗೆ ಬಂದು ದೂರು ಕೊಡುತ್ತಿದ್ದು ಈ ಘಟನೆಗೆ ಟ್ರ್ಯಾಕ್ಟರ್ ಇಂಜೀನ್ ನಂ:ಕೆಎ-33 ಟಿಬಿ-2062 ನೇದ್ದರ ಚಾಲಕನಾದ ನನ್ನ ಮಗ ಮುತ್ತಣ್ಣ @ ದೇವಿಂದ್ರಪ್ಪ ಇತನ ಅತೀವ ನಿರ್ಲಕ್ಷತನವೇ ಕಾರಣವಾಗಿದ್ದು ಕಾರಣ ನನ್ನ ಮಗ ಮೃತ ಮುತ್ತಣ್ಣ @ ದೇವಿಂದ್ರಪ್ಪ ದೊರಿ ಇತನ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:01/2022 ಕಲಂ: 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 02-01-2022 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080