ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-01-2023ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 01/2023 143, 147, 148, 341, 323, 324, 504, 506 ಡಿ/ತಿ 149 ಠಿಛಿ:  ದಿನಾಂಕ: 01-01-2023 ರಂದು ರಾತ್ರಿ 07-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-12-2022 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳಾದ ವಿನೋದ, ಅರುಣ, ನನ್ನ ಹೆಂಡತಿ ರುಕ್ಮೀಣಿ, ಹಾಗು ನಮ್ಮ ಮಾಣಿಕ್, ಸಂಜಯ ಎಲ್ಲರು ಮನೆಯ ಮುಂದೆ ಇರುವಾಗ  ಆರೋಪಿತರೆಲ್ಲರು ಕೂಡಿಕೊಂಡು ಗುಂಪು ಕಟ್ಟಿಕೊಂಡು ಬಂದು ನಮಗೆ ಲೇ ಸೂಳೆ ಮಕ್ಕಳೆ ನಮ್ಮ ಮನೆಯ ಪಕ್ಕದ ಜಾಗದಲ್ಲಿ ಹಾಕಿದ ಟೈರಗಳನ್ನು ಯಾಕೆ ತೆಗೆದಿದ್ದಿರಿ ಸುಳೆ ಮಕ್ಕಳೆ ಅಂತಾ ಬೈಯುತ್ತ ನಿಮ್ಮವ್ವನ್ ಖಲಾಸ ಮಾಡುತ್ತೇವೆ ಮಕ್ಕಳೆ ಅಂತಾ ಬೈಯುತ್ತಿರುವಾಗ ಆಗ ನಾನು ನಮ್ಮ ಜಾಗದಲ್ಲಿ ಯಾಕೆ ಟೈರುಗಳು ಹಾಕಿದ್ದಿರಿ ಅಂತಾ ಕೇಳಿದ್ದಕ್ಕೆ ಲೇ ಸುಳೆ ಮಕ್ಕಳೆ ನಮ್ಮ ಜಾಗದಲ್ಲಿ ಹಾಕಿದ್ದ ಟೈರು ತೆಗೆದು ಹಾಕಿ ಅದು ನಮ್ಮ ಜಾಗ ಅಂತಿರೇನು ಸುಳೆ ಮಕ್ಕಳೆ ಅಂತಾ ಬೈದು ಅವರಲ್ಲಿ ವಿನೋದ ಇವನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಪೆಟ್ಟು ಮಾಡಿದ್ದು, ಆಗ ನನ್ನ ಮಕ್ಕಳ್ಳಾದ ವಿನೋದ ಈತನು ಬಂದಾಗ ಆತನಿಗೆ ಲಕ್ಷ್ಮಣ, ಸಂತೋಷ ಇವರು ಲೇ ಸೂಳೆ ಮಗನೆ ನಿಮ್ಮ ಸೊಕ್ಕು ಬಹಳ ಆಗಿದೆ ಅಂದು ಅವನಿಗೆ ಎರಡು ಕೈ ಗಟ್ಟಿಯಾಗಿ ಹಿಡಿದುಕೊಂಡು ಎದೆಗೆ ಬೆನ್ನಿಗೆ ಗುದ್ದಿದ್ದಾಗ ಆಗ ನನ್ನ ಇನ್ನೊಬ್ಬ ಮಗ ಅರುಣ ಇತನು ಬಂದಾಗ ಆತನಿಗೆ ಮೋಹನ ಮತ್ತು ರಾಜು ಇವರಿಬ್ಬರು ಆತನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಮನ ಬಂದಂತೆ ಒದ್ದಿರುತ್ತಾರೆ, ಆತನಿಗೆ ಒದೆಯುವದನ್ನು ನೋಡಿ ಮಾಣಿಕ್ ಮತ್ತು ಸಂಜಯ ಜಗಳ ಬಿಡಿಸಲು ಅಡ್ಡ ಬಂದಾಗ ಅವರಿಗೆ ಗೋಪಿ ನಾಥ, ಮನೋಜ, ಭೀಮಾ, ಪವನ, ಶ್ರೀನಿವಾಸ, ರಾಹುಲ್, ಪೂನಂ ಇವರು ಅವರಿಗೆ ಕೈಯಿಂದ ಮೈಯಲ್ಲಾ ಗುದ್ದಿರುತ್ತಾರೆ ಆಗ ನನ್ನ ಹೆಂಡತಿ ರುಕ್ಮೀಣಿ ಈಕೆಯು ಜಗಳ ಬಿಡಿಸಲು ಬಮದಾಗ ಆಕೆಗೆ ಗಾಯತ್ರಿ, ಮೇನಕಾ ತಲೆಯ ಕೂದಲು ಹಿಡಿದು ಎಳದಾಡಿದಾಗ ಸಕ್ಕಿಬಾಯಿ, ಸುನಿತಾ, ಮನುಷಾ ಇವರು ಆಕೆಗೆ ಲೇ ಸುಳೆ ಮಗಳೆ ನಿಮ್ಮದು ಬಹಳ ಸೊಕ್ಕು ಆಗಿದೆ ಅಂದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾರೆ,  ಆಗ ನಾವು ಅಂಜಿ ನಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ವಿನೋದ ಇವನು ನನಗೆ ಅಡ್ಡಗಟ್ಟಿ ನಿಲ್ಲಿಸಿ ಲೇ ಸುಳೆ ಮಗಳೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ.  

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 01/2023  143, 147, 323, 324, 504, 506 ಡಿ/ತಿ 149 ಠಿಛಿ: ಮಾನಪ್ಪ ತಂದೆ ಮಾಳಪ್ಪ ಅರಿಕೇರಿ ಇವರ ಮತ್ತು ಫಿಯರ್ಾದಿಯ ಗಂಡ ಹಣಮಂತ ಇವರ ಮದ್ಯ ಹಣದ ವಿಷಯದಲ್ಲಿ ವ್ಯವಹಾರ ಇದ್ದು ಹಣಮಂತ ಈತನು 03 ಲಕ್ಷ ರೂಪಾಯಿ ಕೊಡಬೇಕು ಅಂತ ಆರೋಪಿತರು ಕೇಳಿದ್ದಕ್ಕೆ ನಂತರದಲ್ಲಿ ಕೊಡುತ್ತೇವೆ ಅಂತ ಫಿಯರ್ಾದಿದಾರರು ಹೇಳಿದ್ದರು. ದಿನಾಂಕ 30/12/2022 ರಂದು ಬೆಳಿಗ್ಗೆ 10.00 ಗಂಟೆಗೆ ಮಾನಪ್ಪ ತಂದೆ ಮಾಳಪ್ಪ ಅರಕೇರಿ ಇವರು ಹಣದ ವಿಷಯದಲ್ಲಿ ಮಾತಾಡೋಣ ಊರಿಗೆ ಬನ್ನಿ ಅಂತ ಹೇಳಿದ್ದರಿಂದ ಫಿಯರ್ಾದಿ ಮತ್ತು ಫಿಯರ್ಾದಿ ಗಂಡ ಗಂಗನಾಳಕ್ಕೆ ಹೋಗಿ ಸೋಮರಾಯ ಇವರ ಮನೆಯ ಮುಂದೆ ನಿಂತಾಗ ಅಂದಾಜು ಮದ್ಯಾಹ್ನ 02.00 ಗಂಟೆ ಸುಮಾರಿಗೆ ಅರೋಪಿತರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಬಂದವರೇ ಎಲೇ ಹಣಮ್ಯಾ ನಮಗೆ ಕೊಡುವ ಹಣ ಕೊಡು ಅಂತ ಅಂದರೂ ನೀನು ಮರಳಿ ಕೊಡುತ್ತಿಲ್ಲ ಸೂಳೇ ಮಗನೆ ಇವತ್ತು ಏನಾದರಾಗಲಿ ನಿನಗೆ ಬಿಡುವುದಿಲ್ಲ ಅಂತ ಎಲ್ಲರೂ ಕೂಡಿ ಕೈ ಮುಷ್ಠಿ ಮಾಡಿ ಮುಖಕ್ಕೆ & ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿದ್ದು, ಬಿಡಿಸಲು ಹೋದ ಫಿಯರ್ಾದಿಗೆ ಹಾಗು ಲಕ್ಷ್ಮಿಇವರಿಗೆ ದಬ್ಬಿಸಿಕೊಟ್ಟು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 143, 147, 323,  504, 506 ಡಿ/ತಿ 149 ಠಿಛಿ: ಆರೋಪಿ ಹಣಮಂತ ತಂದೆ ಮಲ್ಲಪ್ಪ ಅರಿಕೇರಿ ಈತನು ಗುತ್ತೇದಾರಿಕೆ ಕೆಲಸ ಮಾಡುತ್ತಿದ್ದು ಈತನು ಅಲ್ಲಿ ಇಲ್ಲಿ ಕಾಂಟ್ರ್ಯಾಕ್ಟರ್ ಕೆಲಸ ಮಾಡುತ್ತಿದ್ದರಿಂದ ಫಿಯರ್ಾದಿ ಮತ್ತು ಮಾನಪ್ಪ ತಂದೆ ಮಾಳಪ್ಪ ಅರಿಕೇರಿ, ಸೋಮರಾಯ ತಂದೆ ಮಾಳಪ್ಪ ಅರಿಕೇರಿ ಹೀಗೆ ಇನ್ನೂ ಕೆಲವರು ಕೈಗಡ ಅಂತ ಹಣವನ್ನು ಕೊಟ್ಟಿದ್ದು ಇರುತ್ತದೆ. ಕೊಟ್ಟ ಹಣ ಮರಳಿ ಕೊಡದೇ ಇದ್ದುದರಿಂದ  ದಿನಾಂಕ 30/12/2022 ರಂದು ಬೆಳಿಗ್ಗೆ 10.00 ಗಂಟೆಗೆ ನಾವು ಕಲಬುಗರ್ಿಗೆ ಹೋಗಿ ಹಣದ ವಿಷಯ ಮಾತಾಡೋಣ ಊರಿಗೆ ಬಾ ಅಂತ ಹೇಳಿದ್ದರಿಂದ ಆರೋಪಿ ಹಣಮಂತ ಹಾಗು ಆತನ ಹೆಂಡತಿ ಕಾನಮ್ಮ ಇವರು ಗಂಗನಾಳಕ್ಕೆ ಬಂದಿದ್ದು, ಸೋಮರಾಯ ಇವರ ಮನೆಯ ಮುಂದೆ ನಿಂತಾಗ ಅಂದಾಜು ಮದ್ಯಾಹ್ನ 02.00 ಗಂಟೆ ಸುಮಾರಿಗೆ ಹಣಮಂತ ಈತನು ಎಲೇ ಭೋಸಡಿ ಮಕ್ಕಳ್ಯಾ ನೀವು ಹೇಳಿದಂಗ ನಾ ಯಾಕ ಕೇಳಲಿ, ನಿಮ್ಮ ರೊಕ್ಕಾ ಕೊಡುವುದಿಲ್ಲ, ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಅಂತ ಬೈಯ್ಯತೊಡಗಿದನು. ಆಗ ನಾವು ನೋಡು ಹಣಮಂತ  ನಾವು ಬೇಕಾಗಿ ಹಣ ಕೊಟ್ಟೀವಿ, ಈಗ ಕೊಡಲ್ಲ ಅಂದರ ಹೆಂಗ ಅಂತ ಆತನಿಗೆ ಕೇಳುತ್ತಿದ್ದಾಗ ಉಳಿದ ಆರೋಪಿತರು ಗುಂಪುಕಟ್ಟಿಕೊಂಡು ಬಂದು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ.
 

ಇತ್ತೀಚಿನ ನವೀಕರಣ​ : 03-01-2023 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080