ಅಭಿಪ್ರಾಯ / ಸಲಹೆಗಳು

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 14/2022 ಕಲಂ. 279,338 ಐಪಿಸಿ & 187 ಐ.ಎಮ್.ವಿ ಕಾಯ್ದೆ : ದಿನಾಂಕ 31-01-2020 ರಂದು ರಾತ್ರಿ 08-30 ಗಂಟೆಗೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಪೊನ್ ಮೂಲಕ ಎಮ್.ಎಲ್ ಸಿ ಬಂದಿದ್ದು ಎಮ್.ಎಲ್.ಸಿ ಕುರಿತು ಸರಕಾರಿ ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 31-01-2022 ರಂದು ರಾತ್ರಿ 07-30 ಗಂಟೆ ಸುಮಾರಿಗೆ ನಾನು ನಮ್ಮ ಗೆಳೆಯವರು ಸೇರಿ ಹೊಲದಿಂದ ಮನೆಗೆ ರೋಡಿನ ಮೇಲೆ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಚಾಲಕನು ತಾನು ನಡೆಸುವ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದು ಅಪಘಾತಪಡಿಸಿ ಮೋಟರ ಸೈಕಲನ್ನು ನಿಲ್ಲಿಸಿದೆ ಹೋಗಿರುತ್ತಾನೆ ಅಪಘಾತದಲ್ಲಿ ನನಗೆ ಗದ್ದಕ್ಕೆ ಭಾರಿ ರಕ್ತಗಾಯವಗಿ ಹಲ್ಲು ಮುರಿದಿರುತ್ತವೆ ಮತ್ತು ಕಾಲಿಗೆ ಭಾರಿ ಮತ್ತು ಸಾದಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.


ಕೆಂಭಾವಿ ಪೊಲಸ್ ಠಾಣೆ
ಗುನ್ನೆ ನಂ 22/2022 ಕಲಂ: 143, 147, 323, 447, 504, 506 ಸಂ 149 ಐಪಿಸಿ : ಇಂದು ದಿನಾಂಕ 01.02.2022 ರಂದು 06.15 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಸವರಾಜ ತಂದೆ ಹಣಮಂತ್ರಾಯ ಪೂಜಾರಿ ವ|| 32ವರ್ಷ ಜಾ|| ಹಿಂದೂ ಕಬ್ಬಲಿಗ ಉ|| ಒಕ್ಕಲುತನ ಸಾ|| ಹೆಗ್ಗಣದೊಡ್ಡಿ ತಾ|| ಸುರಪೂರ ಇದ್ದು ಈ ಅಜರ್ಿ ನೀಡುವುದೇನೆಂದರೆ, ನಮ್ಮ ಹೊಲ ಹಾಗು ನಮ್ಮ ಅಣ್ಣತಮ್ಮಕಿಯವರಾದ ಬಸಣ್ಣ ತಂದೆ ನಿಂಗಯ್ಯ ಪೂಜಾರಿ ಇವರ ಹೊಲ ಆಜುಬಾಜು ಇದ್ದು ಸದರಿಯವರು ನಮ್ಮ ಹೊಲದಲ್ಲಿ ದಾರಿ ಇಲ್ಲದಿದ್ದರೂ ನಮ್ಮ ಹೊಲದಲ್ಲಿ ಹಾದು ಹೋಗುತ್ತಿದ್ದು ಈ ವಿಷಯವಾಗಿ ನಾನು ಸದರಿಯವರಿಗೆ ಸುಮಾರು ಸಲ ನೀವು ಈ ದಾರಿಯಲ್ಲಿ ಹಾದು ಹೋಗುವದರಿಂದ ಬೆಳೆ ಹಾಳಾಗುತ್ತವೆ. ಈ ಹಿಂದಿನಿಂದಲೂ ನಿಮ್ಮ ಹೊಲಕ್ಕೆ ಹೋಗಲು ಹಳ್ಳದ ಪಕ್ಕದಲ್ಲಿರುವ ರಸ್ತೆಯ ಮೂಲಕ ಹೋಗಿರಿ ಅಂತ ಸುಮಾರು ಸಲ ಹೇಳಿದರೂ ಅವರು ನಮ್ಮ ಮಾತು ಕೇಳದೇ ನಮ್ಮ ಹೊಲದಲ್ಲಿಯೇ ಹಾದು ಹೋಗುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ 30.01.2022 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಮ್ಮ ಸಂಬಂದಿಕರಾದ 1] ಕರೆಪ್ಪ ತಂದೆ ಬಸಣ್ಣ ಸಾ|| ಮಾವಿನಮಟ್ಟಿ 2] ಬಸಲಿಂಗಪ್ಪ ತಂದೆ ದ್ಯಾವಪ್ಪ ಕುರಕುಂದಿ 3] ರಮೇಶ ತಂದೆ ಬಸಣ್ಣ ಪೂಜಾರಿ 4] ಆಂಜನೇಯ ತಂದೆ ಬಸಣ್ಣ ಸಾ|| ಮಾವಿನಮಟ್ಟಿ 5] ಸಹಾದೇವಪ್ಪ ತಂದೆ ಬಸಣ್ಣ ಪೂಜಾರಿ 6] ಬಸಣ್ಣ ತಂದೆ ನಿಂಗಯ್ಯ ಪೂಜಾರಿ 7] ಬೀರಪ್ಪ ತಂದೆ ಬಸಣ್ಣ ಸಾ|| ಮಾವಿನಮಟ್ಟಿ 8] ಮಲ್ಲಪ್ಪ ತಂದೆ ದ್ಯಾವಪ್ಪ ಕುರಕುಂದಿ 9] ಚೆನ್ನಮ್ಮ ಗಂಡ ಬಸಣ್ಣ ಪೂಜಾರಿ ಈ ಎಲ್ಲಾ ಜನರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ಹೊಲದಲ್ಲಿ ದಾರಿಯಿಲ್ಲದಿದ್ದರೂ ಸಹ ನಮ್ಮ ಹೊಲ ಸವರ್ೆ ನಂಬರ 68 ರ ವಿಸ್ತೀರ್ಣ 32 ಗುಂಟೆ ಹಾಗು ಹೊಲ ಸವರ್ೆ ನಂಬರ 69 ರ 33 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಯಾವದೇ ದಾರಿ ಇಲ್ಲದಿದ್ದರೂ ಸಹ ನಡು ಹೊಲದಲ್ಲಿ ರಸ್ತೆ ಮಾಡುತ್ತಿದ್ದಾಗ ನಾನು ಹೋಗಿ ಇಲ್ಲಿ ದಾರಿ ಇಲ್ಲದಿದ್ದರೂ ಏಕೇ ದಾರಿ ಮಾಡುತ್ತಿದ್ದೀರಿ ಅಂತ ಕೇಳಲು ಹೋದಾಗ ಸದರಿಯವರೆಲ್ಲರೂ ಗುಂಪುಕಟ್ಟಿಕೊಂಡು ಬಂದವರೇ ಏನಲೇ ಸೂಳಿ ಮಗನೇ ನಮಗೆ ಕೇಳುವವ ನೀನು ಯಾರು ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೂಡಿ ನನಗೆ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಮಲ್ಲಿನಾಥ ತಂದೆ ಚೆನ್ನಬಸಪ್ಪಗೌಡ ಪೊ|| ಪಾಟೀಲ ಹಾಗು ಶರಣಪ್ಪ ತಂದೆ ಶೇಖಪ್ಪ ಗೌಂಡಿ ಇವರು ಬಂದು ಬಿಡಿಸಿಕೊಂಡಿದ್ದು ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಇರುತ್ತದೆ. ಈ ವಿಷಯದಲ್ಲಿ ನಾನು ನನ್ನ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 9 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 22/2022 ಕಲಂ 143,147,447,323,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 23/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 01/02/2022 ರಂದು 7.00 ಪಿಎಂ ಕ್ಕೆ ಮಾನ್ಯ ಶ್ರೀ ದೌಲತ್ ಎನ್.ಕೆ ಸಿ.ಪಿ.ಐ ಸಾಹೇಬರು ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ದೌಲತ್ ಎನ್ ಕೆ ಸಿ.ಪಿ.ಐ ಹುಣಸಗಿ ಇದ್ದು ಇಂದು ದಿನಾಂಕ: 01/02/2022 ರಂದು 4.20 ಪಿಎಂ ಕ್ಕೆ ನಾನು ಕೆಂಭಾವಿ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮೀ ಬಂದಿದ್ದು, ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿಯುವ ಕುರಿತು ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಸಾ|| ಕೆಂಭಾವಿ ಮತ್ತು ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಸಾ|| ಕೆಂಭಾವಿ ರವರನ್ನು ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮೀ ವಿಷಯ ತಿಳಿಸಿ ನಮ್ಮೊಂದಿಗೆ ಬಂದು ದಾಳಿ ಮಾಡುವ ಕಾಲಕ್ಕೆ ಹಾಜರಿದ್ದು ಸಹಕರಿಸಿ ಈ ಬಗ್ಗೆ ಪಂಚನಾಮೆಯನ್ನು ಬರೆಯಿಸಿಕೊಡಬೇಕೆಂದು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು ನಂತರ ಕೆಂಬಾವಿ ಪೊಲೀಸ್ ಠಾಣೆಯ ಶ್ರೀ ಗಜಾನಂದ ಬಿರಾದಾರ ಪಿ.ಎಸ್.ಐ(ಕಾ&ಸು) ಹಾಗೂ ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್.ಸಿ.185, ಶಿವಪ್ಪ ಹೆಚ್ ಸಿ 136 ಮತ್ತು ಆನಂದ ಪಿಸಿ 43 ರವರನ್ನು ಕರೆದುಕೊಂಡು ಮಾನ್ಯ ಡಿ ಎಸ್ ಪಿ ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಕೆಂಭಾವಿ ಪೊಲೀಸ್ ಠಾಣೆಯಿಂದ ಸರಕಾರಿ ಜೀಪ್ ನಂ ಕೆ.ಎ 33 ಜಿ.0228 ನೇದ್ದರಲ್ಲಿ ಕುಳಿತು 4.30 ಪಿಎಂ ಕ್ಕೆ ಹೊರಟು 4.55 ಪಿಎಂ ಕ್ಕೆ ಕಿರದಳ್ಳಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುವದನ್ನು ಖಚಿತಪಡಿಸಿಕೊಂಡು ನಾನು ಸಿಬ್ಬಂದಿಯವರೊಂದಿಗೆ ಸದರಿ ವ್ಯಕ್ತಿಯ ಮೇಲೆ 5.00 ಪಿಎಂ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುವ ವ್ಯಕ್ತಿಗೆ ಹಿಡಿದು ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಗಣೇಶ ತಂದೆ ಗಂಗಾಧರ ವಿಶ್ವಕರ್ಮ ವ|| 40 ಜಾ|| ವಿಶ್ವಕರ್ಮ ಉ|| ಕೂಲಿಕೆಲಸ ಸಾ|| ಕಿರದಳ್ಳಿ ಅಂತ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ 1050/- ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟಿ ಹಾಗು ಒಂದು ಬಾಲಪೆನ್ನು ಸಿಕ್ಕಿದ್ದು ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ 5.00 ಪಿಎಂ ದಿಂದ 6.00 ಪಿಎಂ ದವರೆಗೆ ಸ್ಥಳದಲ್ಲಿ ಕುಳಿತು ಗಣಕೀಕೃತ ಪಂಚನಾಮೆಯನ್ನು ಪೂರೈಸಿ ನಮ್ಮ ತಾಬಾಕ್ಕೆ ತೆಗೆದುಕೊಳ್ಳಲಾಯಿತು. ನಂತರ ಪಂಚರ ಸಮಕ್ಷಮ ಸಿಬ್ಬಂದಿಗಳ ಸಹಕಾರದಿಂದ ತಾಬಾಗೆ ಪಡೆದ ಒಬ್ಬ ಆರೋಪಿತನಿಗೆ ಮತ್ತು ಜಪ್ತಿ ಮಾಡಿಕೊಂಡ ಮುದ್ದೆಮಾಲಿನೊಂದಿಗೆ ಕೆಂಭಾವಿ ಠಾಣೆಗೆ 7.00 ಪಿಎಂ ಕ್ಕೆ ಬಂದು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 23/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 25/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 01/02/2022 ರಂದು 3 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 01/02/2022 ರಂದು 12:30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ವೃತ್ತದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ದೇವರಾಜ ಬಿ. ಮಾನ್ಯ ಡಿ.ಎಸ್.ಪಿ. ಸಾಹೇಬರು ಸುರಪೂರ ಉಪ-ವಿಭಾಗ ಸುರಪೂರ ರವರ ಮಾರ್ಗದರ್ಶನದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಹೊನ್ನಪ್ಪ ಸಿಪಿಸಿ-427 ಸುರಪುರ ಠಾಣೆ, 2) ಶ್ರೀ ಶರಣಗೌಡ ಸಿಪಿಸಿ-218 ಡಿ.ಎಸ್.ಪಿ. ಆಫೀಸ್ ಸುರಪೂರ ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ-427 ರವರು ಇಬ್ಬರು ಪಂಚರಾದ 1) ನಾನಗೌಡ ತಂದೆ ಭೀಮಣ್ಣ ಕರಡಕಲ್ ವ|| 40 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ದೇವರಗೋನಾಲ ತಾ|| ಸುರಪೂರ 2) ಶ್ರೀ ದೇವಿಂದ್ರಪ್ಪಗೌಡ ತಂದೆ ಭೀಮನಗೌಡ ಮಾಲಿಪಾಟೀಲ್ ವ|| 40 ವರ್ಷ ಜಾ|| ಬೆಸ್ತರ ಉ|| ಒಕ್ಕಲುತನ ಸಾ|| ದೇವರಗೋನಾಲ ತಾ|| ಸುರಪೂರ ಇವರನ್ನು 1 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 1:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಹೊರಟು 1:20 ಪಿ.ಎಮ್ ಕ್ಕೆ ಸುರಪೂರ ನಗರದ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ವೃತ್ತದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1:25 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ನಾಗಪ್ಪ ತಂದೆ ಸಿದ್ರಾಮಪ್ಪ ಮಡಿವಾಳಪ್ಪ ವ|| 38 ವರ್ಷ ಜಾ|| ಮಡಿವಾಳ ಉ|| ಇಸ್ತ್ರಿ ಅಂಗಡಿ ಸಾ|| ದೇವರಗೋನಾಲ ತಾ|| ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1650=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 1:25 ಪಿ.ಎಮ್ ದಿಂದ 2:25 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ಸಂಖ್ಯೆ 19/2022 ಕಲಂ 78(3) ಕೆ.ಪಿ ಕಾಯ್ದೆ : ಇಂದು ದಿನಾಂಕ: 01.02.2022 ರಂದು ಸಾಯಂಕಾಲ 6 ಗಂಟೆಗೆ ವಿಜಯಕುಮಾರ ಪಿಐ ಸಾಹೇಬ ಸೈದಾಪುರ ಪೊಲೀಸ್ ಠಾಣೆ ರವರು ಮಾದ್ವಾರ ಗ್ರಾಮದ ಸುಶೀಲಮ್ಮ ಹೋಟೆಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ, ಆಪಾದಿತ ಮತ್ತು ಮುದ್ದೆಮಾಲು ನನಗೆ ಒಪ್ಪಿಸಿದರು. ನಾನು ಬಸಪ್ಪ ಕುಂಬಾರ ಸಿ.ಹೆಚ್.ಸಿ-142 ಸೈದಾಪುರ ಠಾಣೆ ಠಾಣಾ ಗುನ್ನೆ ಸಂಖ್ಯೆ 19/2022 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 08/2022 ಕಲಂ: 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ 01/02/2022 ರಂದು 6:10 ಪಿ. ಎಂ ಕ್ಕೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಂಕ್ಷಿಪ್ತ ಸಾರಾಂಶವೆನೆಂದರೆ ಇಂದು ದಿನಾಂಕ: 01/02/2022 ರಂದು 4:50 ಪಿ.ಎಂ ಕ್ಕೆ ದೇವರಗಡ್ಡಿ ಗ್ರಾಮದ ಬೇವಿನಗಿಡದ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1/- ರೂ 80/- ಕೊಡುತ್ತೆನೆೆ ಬರಿ ಇದು ದೈವದ ಆಟ ಅಂತಾ ಹೇಳಿ ಮಟಕಾ ನಂಬರ ಬರೆದುಕೊಡುತ್ತಿದ್ದಾಗ ದಾಳಿಮಾಡಿ ಆರೋಪಿತನಿಂದ 1030/- ರೂ ನಗದು ಹಣ ಹಾಗೂ ಒಂದು ಬಾಲಪೆನ್ನು ಹಾಗೂ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಯನ್ನು ಜಪ್ತುಪಡಿಸಿಕೊಂಡು ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರುಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 08/2022 ಕಲಂ 78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 02-02-2022 01:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080