ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/04/2021

ವಡಗೇರಾ ಪೊಲೀಸ್ ಠಾಣೆ:- 40/2021 ಕಲಂ: 504, 324, 506 ಐಪಿಸಿ : ಇಂದು ದಿನಾಂಕ :01/04/2021 ರಂದು ಸಂಜೆ 6:30 ಪಿಎಮ್ ಕ್ಕೆೆ ಶ್ರೀ ರವಿ ತಂದೆ ಮಲ್ಲಪ್ಪ ಬಡಕಣ್ಣೊರ, ವ:33, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಬಬಲಾದ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಅಂಗವಿಕಲನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಮತ್ತು ನಮ್ಮ ಅಣ್ಣತಮ್ಮಕೀಯರ ಮದ್ಯ ಆಸ್ತಿ ಸಂಬಂಧ ಕೊಟರ್ಿನಲ್ಲಿ ದಾವೆ ಹೂಡಿದ್ದು ವಿಚಾರಣೆಯಲ್ಲಿರುತ್ತದೆ. ಅದಕ್ಕಾಗಿ ವಂಶಾವಳಿ ಪ್ರಮಾಣ ಪತ್ರ ಕುರಿತು ನಾನು ಕಂದಾಯ ಅಧಿಕಾರಿಗಳಿಗೆ ಅಜರ್ಿ ಸಲ್ಲಿಸಿದ್ದು, ನಿನ್ನೆ ದಿನಾಂಕ:31/03/2021 ರಂದು ಕಂದಾಯ ಅಧಿಕಾರಿಗಳು ಗ್ರಾಮಕ್ಕೆ ಬಂದು ವಂಶಾವಳಿಗೋಸ್ಕರ ಪಂಚನಾಮೆ ಮಾಡಿಕೊಂಡು ಹೊದರು. ಅವರು ಹೋದ ನಂತರ 11-30 ಎಎಮ್ ಸುಮಾರಿಗೆ ನಾನು ನಮ್ಮೂರ ಬೀರಪ್ಪ ದೇವರ ಗುಡಿ ಮುಂದೆ ಕುಳಿತುಕೊಂಡಿದ್ದೆನು. ಆಗ 1) ಮಲ್ಲಪ್ಪ ತಂದೆ ಸಾಬಣ್ಣ ಬಡಕಣ್ಣೋರ, 2) ಚಂದ್ರಾಮಪ್ಪ ತಂದೆ ಸಣ್ಣ ಬಸಪ್ಪ ಬಡಕಣ್ಣೋರ, 3) ಸಿದ್ದಪ್ಪ ತಂದೆ ಸಣ್ಣ ಬಸಪ್ಪ ಬಡಕಣ್ಣೋರ, 4) ರೆಡ್ಡಿ ತಂದೆ ಸಿದ್ದಪ್ಪ ಬಡಕಣ್ಣೋರ ಎಲ್ಲರೂ ಸಾ:ಬಬಲಾದ ಇವರೆಲ್ಲರೂ ಸೇರಿಕೊಂಡು ಬಂದವರೆ ನನಗೆ ಮಗನೆ ನೀನು ವಂಶಾವಳಿಗೋಸ್ಕರ ಅಜರ್ಿ ಸಲ್ಲಿಸಿದಿ, ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದು ಸಿದ್ದಪ್ಪ ಮತ್ತು ರೆಡ್ಡಿ ಇಬ್ಬರು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಮಲ್ಲಪ್ಪ ಈತನು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ಬಲಗಾಲ ತೊಡೆಗೆ ಮತ್ತು ಎರಡು ಮೊಳಕಾಲುಗಳಿಗೆ ಹೊಡೆದು ಒಳಪೆಟ್ಟು ಮಾಡಿದನು. ಚಂದ್ರಾಮಪ್ಪನು ಕೈ ಮುಷ್ಠಿ ಮಾಡಿ ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರು ಭೀಮಶಪ್ಪ ತಂದೆ ಬಸಪ್ಪ ಮಾಳಪ್ಪನೋರ ಮತ್ತು ಹಂಪಯ್ಯ ತಂದೆ ಶರಣಪ್ಪ ಸ್ವಾಮಿ ಇಬ್ಬರೂ ಬಂದು ಜಗಳ ಬಿಡಿಸಿದರು. ನಂತರ ನಾನು ಅಲ್ಲಿಂದ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ. ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸ್ರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ವಡಗೇರಾ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೆವೆ ಎಂದು ಹೇಳಿರುತ್ತೆವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ವಂಶಾವಳಿಗೋಸ್ಕರ ಅಜರ್ಿ ಸಲ್ಲಿಸಿದ ವಿಷಯಕ್ಕೆ ಜಗಳ ತೆಗೆದು ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2021 ಕಲಂ: 504, 324, 323, ಸಂಗಂಡ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಮಹಿಳಾ ಪೊಲೀಸ್ ಠಾಣೆ :- 22/2021 ಕಲಂ: 323, 504, 506, 354 ಸ ಕಲಂ: 34 ಐ.ಪಿ.ಸಿ : ದಿನಾಂಕ 01.04.2021 ರಂದು ಸಂಜೆ 6-30 ಪಿರ್ಯಾದಿ ಶ್ರೀಮತಿ ಶೀಲಾ ಗಂಡ ವಿಜಯಕುಮಾರ ವನಕಣಿ ಸಾ- ಯಾದಗಿರಿ ಹಾ.ವ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ ಸಾರಂಶವೇನೆಂದರೆ ನನಗೆ 2 ಜನ ಹೆಣ್ಣು ಮಕ್ಕಳಿದ್ದು ನಾವು ಸುಮಾರು 10 ವರ್ಷಗಳಿಂದ ಕಲಬುರಗಿಯಲ್ಲಿಯೇ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ 01.04.2021 ರಂದು ಯಾದಗಿರಿಯ ಗಾಂಧೀಚೌಕನಲ್ಲಿರುವ ಗೂಗಲ್ ವಾಡಿ ಹಳೆ ಎಸ್.ಬಿ.ಹೆಚ್ ಬ್ಯಾಂಕ್ ಹತ್ತಿರವಿರುವ ಆಸ್ತಿ ನಮ್ಮ ಪಾಲಿಗೆ ಬಂದಿದ್ದು ನಾವು ಅದನ್ನು ನೋಡಿಕೊಂಡು ಬೇರೆಯವರಿಗೆ ಮಾರಾಟ ಮಾಡಬೇಕು ಅಂತಾ ನಾನು ಮತ್ತು ನನ್ನ ಭಾವನ ಮಗಳಾದ ರಾಜೇಶ್ವರೀ @ ಜಯಶ್ರೀ ಕೂಡಿ ಯಾದಗಿರಿಗೆ ಬಂದಾಗ ನಮ್ಮ ಭಾವನ ಮಗನಾದ 1)ವೀರುಪಾಕ್ಷ ತಂದೆ ಚಂದ್ರಕಾಂತ್ ವನಕಣಿ ನಮ್ಮ ಭಾವನಾದ 2) ಚಂದ್ರಕಾಂತ್ ತಂದೆ ಶರಣಪ್ಪ ವನಕಣಿ ರವರು ಕೂಡಿ ಈ ಆಸ್ತಿ ನಮ್ಮದಿದೆ ನಿಮ್ಮದಲ್ಲ ಅಂತಾ ನನ್ನ ಜೊತೆ ಜಗಳ ಮಾಡಿ ನನಗೆ ಮತ್ತು ನಮ್ಮ ಭಾವನ ಮಗಳಾದ ರಾಜೇಶ್ವರಿ @ ಜಯಶ್ರೀ ರವರಿಗೆ ಅವ್ಯಾಚ ಶಬ್ದಗಳಿಂದ ಬೈದು ನನಗೆ ಕೈ ಹಿಡಿದು ಎಳೆದುಕೊಂಡು ಹೋಗಿ ಕೆಳಗಡೆ ದಬ್ಬಿಕೊಂಡಿರುತ್ತಾನೆ, ನಮ್ಮ ಆಸ್ತಿಯ ವಿಷಯವಾಗಿ ನಮ್ಮ ಸಮೀಪ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಪ್ರಾಣ ಬೆದರಿಕೆ ಹಾಕಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ: 22/2021 ಕಲಂ 323,504,506,354,ಸಂಗಡ 34 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ :- 12/2021 ಕಲಂ 174 ಸಿ.ಆರ್.ಪಿ.ಸಿ. ಕೆ.ಪಿ.ಕಾಯ್ದೆ : ದಿನಾಂಕ: 01/04/2021 ರಂದು 8-15 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಜಿಜಿಹೆಚ್. ಸುರಪುರದಿಂದ ಡೆಥ್ ಎಂ.ಎಲ್.ಸಿ. ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಮೃತಳ ಅಕ್ಕ ಶ್ರೀಮತಿ ರಾಧಿಕಾ ಗಂಡ ಹಣಮಂತ ನಾಯಕ ಸಾ|| ಅರಳಹಳ್ಳಿ ಇವರ ಹೇಳಿಕೆ ಪಡೆದುಕೊಂಡು 9-30 ಪಿ.ಎಂ. ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶವೆನೆಂದರೆ, ನಾನು ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು, ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸಿಕೊಂಡಿದ್ದೇನೆ. ನನ್ನ ಚಿಕ್ಕಪ್ಪನ ಹೆಸರು ಆಚಿಜನೇಯ ಹಾಗೂ ಚಿಕ್ಕಮ್ಮಳ ಹೆಸರು ಗಂಗಮ್ಮ ಅಂತಾ ಇದ್ದು, ಅವರಿಬ್ಬರು ತೀರಿಕೊಂಡಿರುತ್ತಾರೆ. ಅವರಿಗೆ ಯಂಕಪ್ಪ ಅಂತಾ ಒಬ್ಬ ಗಂಡು ಮಗ ಹಾಗೂ ಹುಲಗಮ್ಮ ಮತ್ತು ಅಶ್ವಿನಿ ಅಂತಾ ಇಬ್ಬರು ಹೆಣ್ಣು ಮಕ್ಕಳು ಹೀಗೆ ಒಟ್ಟು ಮೂರು ಜನ ಮಕ್ಕಳಿರುತ್ತಾರೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇವರಿಬ್ಬರು ತೀರಿಕೊಂಡ ನಂತರ ಅಣಾಥರಾದ ಅವರ ಮಗನಾದ ಯಂಕಪ್ಪ ಹಾಗೂ ಮಗಳಾದ ಅಶ್ವಿನಿ ಇವರಿಗೆ ನನ್ನ ತಂದೆಯಾದ ನಾಗಣ್ಣ ಇವರು ಸಾಕುತ್ತಿದ್ದು, ಹಿರಿಯ ಮಗಳಾದ ಹುಲಗಮ್ಮ ಇವಳಿಗೆ ನಾನು ಅರಳಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಬಂದು ಅವಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ನನ್ನ ತಂಗಿ ಹುಲಗಮ್ಮ ತಂದೆ ಆಚಿಜನೇಯ ನಾಯಕ ವ|| 18 ವರ್ಷ ಸಾ|| ಬಂಡಿಗೇರಾ ಅಗಸಿ ಯಾದಗಿರಿ ಇವಳು ತನ್ನ ತಂದೆ-ತಾಯಿ ತೀರಿಕೊಂಡಿರುವ ಬಗ್ಗೆ ಚಿಂತೆ ಮಾಡುತ್ತಾ ಮಾಣಸಿಕ ಖಿನ್ನತೆಯಿಂದ ಬಳುಲುತ್ತಾ ಇದ್ದಾಗ ನಾನು ಮತ್ತು ನನ್ನ ಗಂಡ ಹಣಮಂತ ಇಬ್ಬರು ಆಕೆಗೆ ಚಿಂತೆ ಮಾಡಬೇಡ. ಸತ್ತವರು ಮರಳಿ ಬರಲ್ಲ. ನಾವೇ ನಿನ್ನ ತಂದೆ ತಾಯಿ ಅಂತಾ ತಿಳಿದುಕೋ. ನಿನಗೆ ನಾವೆ ಮುಂದೆನಿಂತು ಮದುವೆ ಮಾಡಿಕೋಡುತ್ತೇವೆ ಅಂತಾ ಧೈರ್ಯ ಹೇಳಿದರೂ ಆಕೆ ತನ್ನ ತಂದೆ-ತಾಯಿಯರ ಬಗ್ಗೆ ಚಿಂತಿಸುತ್ತಾ ನಾವು ಮತ್ತೊಬ್ಬರಿಗೆ ಏಕೆ? ಭಾರ ಆಗಬೇಕು?. ಎವುದಕಿಂತ ಸಾಯುವುದೇ ಲೇಸು ಅಂತಾ ನಮ್ಮ ಎದುರಿಗೆ ಹೇಳಿದಾಗ ನಾನು ಆಕೆಗೆ ನಮಗೇನು ಬೇರೆಯವರು ಅಂತಾ ತಿಳಿದಿಯೇನು. ನಿನ್ನ ಅಕ್ಕ ಇದ್ದೇನೆ. ಚಿಂತೆ ಮಾಡಬೇಡ ಅಂತಾ ಬುದ್ದಿವಾದ ಹೇಳಿದ್ದೇನೆ. ಆದರೂ ಸಃ ತನ್ನ ತಂದೆ-ತಾಯಿ ಮೃತಪಟ್ಟಿರುವ ಬಗ್ಗೆ ಚಿಂತೆ ಮಾಡುತ್ತಿದ್ದಳು. ಹೀಗಿದ್ದು ಇಂದು ದಿನಾಂಕ: 01/04/2021 ರಂದು ಸಾಯಂಕಾಲ 5 ಗಂಟೆಯ ಸು,ಆರಿಗೆ ನಾನು ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನನ್ನ ತಂಗಿಯಾದ ಹುಲಗಮ್ಮ ಇವಳು ನಮ್ಮ ಮನೆಯಲ್ಲಿ ವಾಂತಿ ಮಾಡುತ್ತಿರುವಾಗ ನಾನು ಮತ್ತು ನನ್ನ ಗಂಡ ಹಣಮಂತ ಇಬ್ಬರು ಏನಾಗಿದೆ ಎಂದು ವಿಚಾರಿಸಿದಾಘ ಆಕೆ ನಮ್ಮ ತಂದೆ-ತಾಯಿಯವರ ಚಿಂತೆಯಲ್ಲಿ ಈಗ್ಗೆ 4:30 ಪಿ.ಎಂ. ಸುಮಾರಿಗೆ ಕ್ರಿಮಿನಾಷಕ ಎಣ್ಣೆ ಕುಡಿದಿರುತ್ತೇನೆ ಅಂತಾ ಹೇಳಿದ್ದರಿಂದ ನಾವಿಬ್ಬರು ಗಂಡ-ಹೆಂಡತಿ ನ್ನ ತಂಗಿಗೆ ಒಂದು ಕಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದೆವು. ಇಲ್ಲಿ ನನ್ನ ತಂಗಿ ಚಿಕಿತ್ಸೆ ಪಡೆಯುತ್ತಾ, ಚಿಕಿತ್ಸೆ ಫಲಕಾರಿಯಾಗದೆ 8-00 ಪಿ.ಎಂ. ಸುಮಾರಿಗೆ ಮೃತಪಟ್ಟಿರುತ್ತಾಳೆ. ನನ್ನ ತಂಗಿ ಹುಲಗಮ್ಮ ಇವಳು ತನ್ನ ತಂದೆ-ತಾಯಿ ಮೃತಪಟ್ಟಿರುವ ಚಿಂತೆಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರಿಮಿನಾಷಕ ಓಷಧ ಸೇವನೆ ಮಾಡಿ ಮೃತಪಟ್ಟಿದ್ದು, ಈ ಬಗ್ಗೆ ನಮ್ಮದು ಯಾರ ಮೇಲೆ ಯಾವದೇ ರೀತಿಯ ದೂರು, ಸಂಶಯ ಇರುವದಿಲ್ಲ ಅಂತಾ ಹೇಳಿಕೆ ಕೊಟ್ಟಿದ್ದು ನಿಜವಿದೆ ಅಂತಾ ಕೊಟ್ಟ ದೂರಿನ ಮೇಲೆ ಠಾಣಾ ಯು.ಡಿ.ಆರ್. ನಂಬರ್ 12/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ :- ಯುಡಿಆರ್ ನಂ 05/2021 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ: 01/04/2021 ರಂದು 2.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಜಟ್ಟೆಪ್ಪ ತಾಯಿ ರಾಯವ್ವ ಮಾದರ ವಯಾ|| 42 ಜಾ|| ಹಿಂದೂ ಮಾದಿಗ ಉ|| ಕೂಲಿ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನೆಂದರೆ, ನನ್ನ ಹೆಂಡತಿಯಾದ ಲಕ್ಷ್ಮೀ ಗಂಡ ಜಟ್ಟೆಪ್ಪ ಮಾದರ ವಯಾ|| 37 ಇವಳು ಹಾಗೂ ನಾನು ಇಂದು ದಿ: 01/04/2021 ರಂದು ಬೆಳಿಗ್ಗೆ 9 ಗಂಟೆಗೆ ದಿನನಿತ್ಯದ ಕೆಲಸಕ್ಕಾಗಿ ಕಲ್ಲು ಆರಿಸಲು ಹೋಗಿದ್ದು ಇಬ್ಬರು ಸೇರಿ ಕಲ್ಲು ಆರಿಸುವಾಗ ಮದ್ಯಾಹ್ನ 1 ಗಂಟೆಗೆ ನಮ್ಮ ಹೊಲದಲ್ಲಿನ ದೊಡ್ಡದಾದ ಹಾವು ಕಚ್ಚಿತು ಆಗ ನಾನು ಗಾಬರಿಯಾಗಿ ಆಸ್ಪತ್ರೆಗೆ ಕರೆ ತರುವ ಸಂದರ್ಭದಲ್ಲಿ ನನ್ನ ಹೆಂಡತಿ ಹಾವಿನ ವಿಷ ಬೇನೆಯಿಂದ ಊರಿಗೆ ಬರುವಷ್ಟರಲ್ಲಿ ಮರಣಹೊಂದಿದ್ದು ಕಾರಣ ತಾವು ನನ್ನ ಹೆಂಡತಿ ಮರಣ ಕುರಿತು ಪ್ರಕರಣ ದಾಖಲಿಸಿ ನ್ಯಾಯಕೊಡಿಸಬೇಕು ಅಂತ ಇತ್ಯಾದಿ ವಿವರವಾದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ 05/2021 ಕಲಂ: 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 03-04-2021 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080