ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-06-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ. 279.304(ಎ) ಐಪಿಸಿ & 187 ಐ.ಎಮ್.ವಿ ಕಾಯ್ದೆ : ದಿನಾಂಕ: 01-06-2022 ರಂದು ಬೆಳಿಗ್ಗೆ 08-15 ಗಂಟೆಗೆ ಪಿಯರ್ಾಧಿದಾರನು ಠಾನೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ದಿನಾಂಕ: 31-05-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಮ್ಮೂರಾದ ಯರಗೋಳ ಗ್ರಾಮದಿಂದ ಯಾದಗಿರಿಗೆ ಬಂದು ಅಲ್ಲಿ ಎಕ್ಸಿಸ್ ಬ್ಯಾಂಕನಲ್ಲಿ ಕೆಲಸ ಮುಗಿಸಿಕೊಂಡು ನಂತರ ನಾನು ಮೋಟರ ಸೈಕಲ್ ಮೇಲೆ ಯಾದಗಿರಿಯಿಂದ ಯರಗೊಳ ಗ್ರಾಮಕ್ಕೆ ಹೋಗುತಿದ್ದೆನು. ನಾನು ಯಾದಗಿರಿ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ನಮ್ಮೂರಾದ ಯರಗೊಳ ಗ್ರಾಮದ ಹೊಸದಾಗಿ ನಿಮರ್ಾಣವಾಗುತ್ತಿರುವ ಟೂಲ್ ಗೇಟ್ ಹತ್ತಿರ ಹೋಗುತ್ತಿರುವಾಗ ನನ್ನ ಮುಂದೆ ಒಬ್ಬ ಮೋಟರ ಸೈಕಲ್ ಚಾಲಕನು ಕಲಬುರಗಿ ಕಡೆಗೆ ಹೋಗುತಿದ್ದನು. ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಕ್ರೂಸರ್ ವಾಹನ ಬರುತಿತ್ತು ರೋಡಿನ ಮೇಲೆ ಸಾಯಂಕಾಲ 05-30 ಗಂಟೆ ಸುಮಾರಿಗೆ ನಾನು ಯರಗೊಳ ಗ್ರಾಮಕ್ಕೆ ಹೋಗುತ್ತಿರುವಾಗ ಎದರುಗಡೆಯಿಂದ ಬಂದ ಕ್ರೂಸರ್ ಚಾಲಕನು ತಾನು ನಡೆಸುವ ಕ್ರೂಸರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಯರಗೋಳ ಗ್ರಾಮದ ಕಡೆಗೆ ಹೋಗುತ್ತಿರುವ ಮೋಟರ ಸೈಕಲ್ ಸವಾರನಿಗೆ ಡಿಕ್ಕಿ ಪಡಿಸಿದ್ದರಿಂದ ಅಪಘಾತದಲ್ಲಿ ಮೋಟರ ಸೈಕಲ್ ಸವಾರನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೈಗೆ ಸಣ್ಣ ಪುಟ್ಟ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ, ಆತನು ನಡೆಸುವ ಮೋಟರ ಸೈಕಲ್ ನಂಬರ ನೋಡಲಾಗಿ ಕೆಎ-33 ಎಲ್-6898 ಅಂತಾ ಇತ್ತು ಅಪಘಾತವಾದಾಗ ಕ್ರೂಸರ್ ಚಾಲಕನು ತಾನು ನಡೆಸುವ ವಾಹನವನ್ನು ಬಿಟ್ಟು ಹೋದನು ಅವನ ಹೆಸರು ವಿಳಾಸ ಗೋತ್ತಾಗಿರುವದಿಲ್ಲ, ಆಗ ಕ್ರೂಸರ್ ನಂಬರ ನೋಡಲಾಗಿ ಅದರ ನಂಬರ ಕೆಎ-17 ಸಿ-3115 ಅಂತಾ ಇತ್ತು. ಮೃತನನ್ನು ಯಾರು ಅಂತಾ ತಿಳಿಯಲು ಆತನ ಹತ್ತಿರ ಆಧಾರ ಕಾರ್ಡ ಇತರೆ ಎನಾದರು ಇರಬಹುದು ಅಂತಾ ನೋಡಲಾಗಿ ಆತನ ಹತ್ತಿರ ಯಾವುದೆ ಆಧಾರಗಳು ಸಿಗಲಿಲ್ಲ. ಅಂತಾ ಪಿಯರ್ಾಧಿ ಸಾರಂಶ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:64/2022 ಕಲಂ: 341, 323, 504, 506 ಸಂ. 34 ಐಪಿಸಿ : ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ಮಂಜುಳಾ ಗಂಡ ಶಂಕರ ಗೂಳಿ ಇವರಿಗೆ ದಿನಾಂಕ.31/07/2017 ರಂದು ಸಿದ್ದಮ್ಮ ಗಂಡ ಮಹಾದೇವಪ್ಪ ಕಂದಕೂರ ರವರಿಗೆ ಯಲ್ಹೇರಿ ಗ್ರಾಮದ ಸೀಮಾಂತರದಲ್ಲಿ ಬರುವ ಸವರ್ೆ ನಂ.893 ವಿಸ್ತೀರ್ಣ 7 ಕರೆ 20 ಗುಂಟೆ ಜಮೀನನ್ನು ಮಂಜುಳಾ ಗೂಳಿ ರವರ ಹೆಸರಿನಲ್ಲಿ 38,00,000/-ರೂ.ಗಳಿಗೆ ಖರೀದಿ ಕರಾರು ಪತ್ರ ಮೂಲಕ ನೊಂದಣಿ ಮಾಡಿಸಿಕೊಟ್ಟಿದ್ದು ನಂತರ ಆರೋಪಿತಳಾದ ಸಿದ್ದಮ್ಮ ಇವರು ಬಿ.ಸಿದ್ದಣ್ಣ ಇವರಿಗೆ ಮಾರಾಟ ಮಾಡಿದ್ದು ಈ ವಿಷಯ ಪಿರ್ಯಾದಿಗೆ ತಿಳಿದ ನಂತರ ಮಾನ್ಯ ತಹಸೀಲ್ದಾರರು ಗುರುಮಿಠಕಲ್ ರವರಿಗೆ ತಕರಾರು ಅಜರ್ಿಯನ್ನು ಕೊಟ್ಟು ಸದರಿಯವರಿಗೆ ಹೆಸರಿಗೆ ಮುಟೆಷನ್ ವಗರ್ಾವಣೆ ಆಗದಂತೆ ತಡೆ ಹಿಡಿಯಬೇಕೆಂದು ಅಜರ್ಿಯನ್ನು ಸಲ್ಲಿಸಿರುತ್ತೇವೆ. ಆದರೆ ಮಾನ್ಯ ರವರು ದಿನಾಂಕ.31/05/2022 ರಂದು ಬಿ.ಸಿದ್ದಣ್ಣ ಇವರಿಗೆ ಹೆಸರಿಗೆ ವಗರ್ಾವಣೆ ಮಾಡದಂತೆ ಆಧೇಶ ಹೊರಡಿಸಿರುತ್ತಾರೆ. ಇದನ್ನು ಸಹಿಸದ ಇವರುಗಳು ಇಂದು ದಿನಾಂಕ.01/06/2022 ರಂದು ಮುಂಜಾನೆ 9-45 ಗಂಟೆ ಸುಮಾರಿಗೆ ನಾನು ನಮ್ಮ ಹತ್ತಿರ ಇರುವ ಜಗನ್ನಾಥರೆಡ್ಡಿ ಸಂಬುರ ರವರ ಮನೆಯ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ 1. ಮಹಾದೇವಪ್ಪ ಕಂದಕೂರ 2. ಸಿದ್ದಮ್ಮ ಗಂಡ ಮಹಾದೇವಪ್ಪ ಕಂದಕೂರ. 3. ಬಿ.ಸಿದ್ದಣ್ಣ ತಂದೆ ಭಿಮಶೆಟ್ಟಿ ರವರು ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಲೇ ಬೋಸಡಿ ಮಗನೇ ಅಂತಾ ಬೈಯುತ್ತಾ ಈ ಮೇಲಿನ ಜಮೀನಿನ ವಿಷಯವಾಗಿ ತಕರಾರು ಅಜರ್ಿ ಹಿಂದಕ್ಕೆ ಪಡೆದುಕೊಳ್ಳುವಂತೆ ಜಗಳಾ ತೆಗೆದು ಜಮೀನಿನ ತಂಟೆಗೆ ಏನಾದರೂ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ನಾನು ಚೀರಾಡುತ್ತಿರುವಾಗ ಅಲ್ಲೆ ಪಕ್ಕದಲ್ಲಿ ಇದ್ದ ಸುಬಾಷ ಹೆಡಗಿಮದ್ರಿ, ವಸಂತನಾಯಕ ತಂದೆ ಶಾಸ್ವತ ನಾಯಕ ರವರು ಜಗಳವನ್ನು ನೋಡಿ ಬಿಡಿಸಿರುತ್ತಾರೆ. ನಂತರ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಆಗಿದ್ದು ನನಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 1-00 ಪಿಎಂಕ್ಕೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 64/2022 ಕಲಂ. 341,323,504,506, ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ. 01/06/2022 ರಂದು 4-00 ಪಿಎಂಕ್ಕೆ ಶ್ರೀ ಮಹೆಬೂಬ ಅಲಿ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಪ್ರಭಾರ ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 01/06/2022 ರಂದು 1-30 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಮೈಲಾಪೂರ ಬೇಸ್ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 2-45 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಯಂಕಾರೆಡ್ಡಿ ತಂದೆ ಮಲ್ಲರೆಡ್ಡಿ ತತ್ತರೆಡ್ಡಿ ವಃ46 ಜಾಃ ರೆಡ್ಡಿ ಉಃ ಪಾನಶಾಪ ಸಾಃ ಭೀಮನಳ್ಳಿ ತಾಃಚಿತ್ತಾಪೂರ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 1800-00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 01/06/2022 ರಂದು 2-45 ಪಿಎಂ ದಿಂದ 3-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 4-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ. 01/06/2022 ರಂದು 6-00 ಪಿಎಂಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿಐ ಸಿ.ಇ.ಎನ್.ಪೊಲಿಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 01/06/2022 ರಂದು 3-15 ಪಿಎಂಕ್ಕೆ ನಾನು ಸಿ.ಇ.ಎನ್.ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಹೊಸಳ್ಳಿ ಕ್ರಾಸದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಠಾಣೆ ಜೀಪಿನಲ್ಲಿ ಲ್ಯಾಪಟಾಪ ತೆಗೆದುಕೊಂಡು 4-30 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ನಿರಂಜನ ತಂದೆ ದೇವಿಂದ್ರಪ್ಪ ಕರದಾಳ ವಃ 47 ಜಾಃ ಮಾದಿಗ ಉಃ ಖಾಸಗಿಕೆಲಸ ಸಾಃ ಹೊಸಳ್ಳಿ ಕ್ರಾಸ್ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 3600-00 ನಗದು ಹಣ 2) 2 ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 01/06/2022 ರಂದು 4-30 ಪಿಎಂ ದಿಂದ 5-30 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿ ಪಂಚರ ಸಹಿ ಮಾಡಿಸಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಒಪ್ಪಿಸಿ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.66/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ. 01/06/2022 ರಂದು 6-45 ಪಿಎಂಕ್ಕೆ ಶ್ರೀ ವಿಠೋಭಾ ಎ.ಎಸ್.ಐ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 01/06/2022 ರಂದು 4-15 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಗಂಜ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-30 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಹೀರ್ಯಾ ತಂದೆ ಸಕ್ರ್ಯಾ ಚವ್ಹಾಣ ವಃ 62 ಜಾಃ ಲಂಬಾಣಿ ಉಃ ಕೂಲಿಕೆಲಸ ಸಾಃ ಅಶೋಕ ನಗರ ಮುಂಡರಗಿ ತಾಂಡ ತಾಃಜಿಃಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 800-00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 01/06/2022 ರಂದು 5-30 ಪಿಎಂ ದಿಂದ 6-30 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.59/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂಬರ 91/2022 ಕಲಂ: 341, 427, 448, 504, 506 ಸಂ.34 ಐಪಿಸಿ : ಗ್ರೀನ್ಕೊ ಮಮತ್ಖೇಡಾ ಪ್ರ.ಲಿ ಕಂಪನಿಗೆ ಸೇರಿದ ಜಾಗದ ಕಛೇರಿಗೆ ದಿನಾಂಕ 08.10.2022 ರಂದು ಪೂರ್ವ ತಯಾರಿಯಿಂದ ಆರೋಪಿತರೆಲ್ಲಾರು ಬಂದು ಅತಿಕ್ರಮಣ ಪ್ರವೇಶ ಮಾಡಿ ಕಛೇರಿಯ ಗೇಟ್ಗೆ ಭೀಗ ಹಾಕಿ ಕೆಲಸ ಮಾಡದಂತೆ ಸಿಬ್ಬಂದಿಯವರಿಗೆ ತಡೆದು ಕೆಲಸ ಮಾಡಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ವಿದ್ಯೂತ್ ಟ್ರಾನ್ಸ್ಫಾರಮರ್ ಫೂಸ್ ಗೆ ಹೊಡೆದು ವಿದ್ಯುತ್ ಉತ್ಪಾದನೆಯಾದಂತೆ ತಡೆಯುವುದರ ಮೂಲಕ ನಷ್ಟುಂಟು ಮಾಡಿದ ಮೂರು ಜನ ಆರೋಪಿತರ ಮೇಲೆ ಕೇಸ್ ಮಾಡುವ ವಿಚಾರದಲ್ಲಿ ಫಿರ್ಯಾದಿಯು ತಮ್ಮ ಕಂಪನಿಯ ಹಿರಿಯ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿದ ನಂತರ ತಡವಾಗಿ ಗುರುಮಠಕಲ್ ಸ್ಟೇಷನ್ಗೆ ತಡವಾಗಿ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 91/2022 ಕಲಂ: 341, 427, 448, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 93/2022 ಕಲಂ: 448, 323, 355, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 01/06/2022 ರಂದು ಅಜರ್ಿದಾರರಾದ ಶ್ರೀ ಸಿದ್ದಪ್ಪ ತಂದೆ ನಿಂಗಪ್ಪ ಹುಣಸ್ಯಾಳ ಸಾ|| ಕೆಂಭಾವಿ ರವರು ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರಲ್ಲಿ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿಯನ್ನು ಮಾನ್ಯ ಎಸ್.ಪಿ ಸಾಹೇಬರು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಆದೇಶಿಸಿ ಅಜರ್ಿಯನ್ನು ಠಾಣೆಗೆ ಕಳುಹಿಸಿದ್ದು ಅಜರ್ಿದಾರರು ಸದರಿ ಅಜರ್ಿಯನ್ನು 10.30 ಪಿಎಂ ಕ್ಕೆ ತಂದು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಸಿದ್ದಪ್ಪ ತಂದೆ ನಿಂಗಪ್ಪ ಹುಣಸ್ಯಾಳ ಇದ್ದು ನಮ್ಮ ತಂದೆ ತಾಯಿಯರು ನೋಡಿ ಮದುವೆ ಮಾಡಿದಂತೆ ನಾನು ರಾಜಾಪೂರ ಗ್ರಾಮದ ಶಾಂತಮ್ಮ ಎಂಬುವವಳಿಗೆ ಮದುವೆ ಮಾಡಿಕೊಂಡಿದ್ದು ನಾನು ಮತ್ತು ಶಾಂತಮ್ಮ ಇಬ್ಬರೂ ಮದುವೆಯಾದ ನಂತರ ಚನ್ನಾಗಿ ಸಂಸಾರ ಸಾಗಿಸಿದ್ದು ನಮಗೆ ಒಂದು ಗಂಡು ಮಗ ಮತ್ತು ಒಂದು ಹೆಣ್ಣು ಮಗಳು ಇರುತ್ತಾರೆ. ಆದರೆ 1 ವರ್ಷದ ಹಿಂದಿನಿಂದ ನನ್ನ ಹೆಂಡತಿಯಾದ ಶಾಂತಮ್ಮಳು ನಮ್ಮೊಂದಿಗೆ ಸರಿಯಾಗಿ ಇರದೇ ಮೇಲಿಂದ ಮೇಲೆ ನಮಗೆ ಹೇಳದೇ ಕೇಳದೇ ತನ್ನ ತವರುಮನೆಯಾದ ರಾಜಾಪೂರಕ್ಕೆ ಹೋಗುತ್ತಿದ್ದಳು. ನನ್ನ ಹೆಂಡತಿ ಚನ್ನಾಗಿ ದ್ದವಳು ಹೀಗೆ ಏಕೆ ಮಾಡುತ್ತಿದ್ದಾಳೆ ಅಂತಾ ನಾವು ಮನೆಯಲ್ಲಿ ವಿಚಾರಿಸಿದೆವು ಮತ್ತು ನಮ್ಮ ಸಂಬಂಧಿಕರಿಗೆ ಇದರ ಬಗ್ಗೆ ವಿಚಾರಿಸಿದೆವು. ಆಗ ನಮಗೆ ಗೊತ್ತಾಗಿದ್ದೇನೆಂದರೆ, ಗೋಗಿ ಪೊಲೀಸ್ ಠಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ತಂದೆ ನಿಂಗಪ್ಪ ಪೊಲೀಸ್ ಪೇದೆ ಈತನು ನನ್ನ ಹೆಂಡತಿಯನ್ನು ತನ್ನ ವಶವಾಗುವಂತೆ ಮಾಡಿಕೊಂಡು ಅವಳು ನಮ್ಮ ಹತ್ತಿರ ಇದ್ದು ಸಂಸಾರ ಮಾಡದಂತೆ ತಲೆ ತುಂಬಿದ್ದರಿಂದ ಅವಳು ನಮ್ಮ ಮನೆಯಲ್ಲಿ ಎಲ್ಲರೊಂದಿಗೆ ಜಗಳ ಮಾಡುತ್ತಾ ಬಂದಿದ್ದು ಅಲ್ಲದೇ ಸದ್ಯ ಪರಶುರಾಮ ಪೊಲೀಸನು ನನ್ನ ಹೆಂಡತಿಗೆ ತನ್ನ ಹತ್ತಿರ ಇಟ್ಟುಕೊಂಡು ಅವಳಿಗೆ ತಾನು ಹೇಳಿದಂತೆ ಮಾಡು ಅನ್ನುತ್ತಾ ಅವಳು ನನ್ನನ್ನು ಬಿಟ್ಟು ಹೋಗುವಾಗ ನಮ್ಮ ಹತ್ತಿರ ಗಂಡು ಮಗನನ್ನು ಬಿಟ್ಟು ಹೋಗಿದ್ದು ಅವನಿಗೆ ಕರೆದುಕೊಂಡು ಹೋಗುವ ನೆಪ ಮಾಡಿ ನಮ್ಮ ಮನೆಗೆ ಆಗಾಗ್ಗೆ ಬಂದು ಜಗಳ ಮಾಡುತ್ತಾ ಬಂದಿರುತ್ತಾಳೆ. ಹೀಗಿದ್ದು ದಿನಾಂಕ 27/05/2022 ರಂದು ಮತ್ತು 28/05/2022 ರಂದು ನನ್ನ ಹೆಂಡತಿಯಾದ ಶಾಂತಮ್ಮಳು ತನ್ನೊಂದಿಗೆ ಪರಶುರಾಮ ಪೊಲೀಸನಿಗೆ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದಳು. ದಿನಾಂಕ 28/05/2022 ರಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಮಗನಾದ ಮಾಣಿಕ ವ|| 11ವರ್ಷ ಎಲ್ಲರೂ ಮಾತನಾಡುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ನನ್ನ ಹೆಂಡತಿಯಾದ ಶಾಂತಮ್ಮ ಗಂಡ ಸಿದ್ದಪ್ಪ ಹುಣಸ್ಯಾಳ ಮತ್ತು ಅವಳೊಂದಿಗೆ ಪರಶುರಾಮ್ ತಂದೆ ನಿಂಗಪ್ಪ ಪೊಲೀಸ್ ಪೇದೆ ಗೋಗಿ ಪೊಲೀಸ್ ಠಾಣೆ ಇಬ್ಬರೂ ಕೂಡಿ ನಮ್ಮ ಮನೆಯೊಳಗೆ ಬಂದಿದ್ದು ಪರಶುರಾಮನು ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಏನಲೇ ಸಿದ್ದಪ್ಪ ಶಾಂತಮ್ಮಳ ಮಗನಿಗೆ ಅವನೊಂದಿಗೆ ಕಳಿಸು ಅಂದರೆ ಕಳಿಸಲ್ಲ ಅಂದರೆ ನಿನಗೆ ಸೊಕ್ಕು ಜಾಸ್ತಿಯಾಗಿದೆ ಏನು ಮಗನೇ ಅನ್ನುತ್ತಾ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ನನಗೆ ಹೊಡೆದನು. ಆಗ ನನ್ನ ಹೆಂಡತಿಯಾದ ಶಾಂತಮ್ಮಳು ನನ್ನ ಮಗನಿಗೆ ಜೋರಾವರಿಯಿಂದ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ನನ್ನ ಮಗನು ಅವಳೊಂದಿಗೆ ಹೋಗುವುದಿಲ್ಲ ಎಂದಾಗ ಶಾಂತಮ್ಮಳು ಸಿಟ್ಟಿಗೆ ಬಂದು ನನ್ನ ಮಗನಿಗೆ ಹೊಡೆಯಲು ಬಂದಿದ್ದು ನಾನು ಬಿಡಿಸಿಕೊಳ್ಳಲು ಹೋದೆನು. ಆಗ ಶಾಂತಮ್ಮಳು ನನಗೆ ಕಪಾಳಕ್ಕೆ ಕೈಯಿಂದ ಹೊಡೆದಳು. ಅಷ್ಟರಲ್ಲಿ ಪರಶುರಾಮ ಪೊಲೀಸನು ಮತ್ತೆ ಚಪ್ಪಲಿಯಿಂದ ನನಗೆ ಹೊಡೆಯುತ್ತಾ ಇವತ್ತು ನಿನಗೆ ಬಿಡಲ್ಲ ಮಗನೇ ಅಂತಾ ಜೀವದ ಬೆದರಿಕೆ ಹಾಕಿ ಹೊಡೆಯುತ್ತಿದ್ದಾಗ ನಾನು ಚೀರುವ ಸಪ್ಪಳ ಕೇಳಿ ನಮ್ಮ ಓಣಿಯ ಸಿದ್ದಣ್ಣ ಹೊಸಮನಿ, ಚಂದ್ರು ಮುದನೂರ, ಪರಶುರಾಮ ಯರಗಲ್ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ನಮ್ಮ ಮನೆಯಲ್ಲಿ ಅತಿಕ್ತಮ ಪ್ರವೇಶ ಮಾಡಿ ನನಗೆ ಕೈಯಿಂದ, ಚಪ್ಪಲಿಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಶಾಂತಮ್ಮ ಹುಣಸ್ಯಾಳ ಮತ್ತು ಪರಶುರಾಮ ಪೊಲೀಸ್ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 93/2022 ಕಲಂ 448, 323, 355, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 02-06-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080