Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02-07-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 83/2021 ಕಲಂ:279, 304(ಎ) ಐಪಿಸಿ ಸಂ 187 ಐಎಮ್ಐ ಎಕ್ಟ್ : ಇಂದು ದಿನಾಂಕ:01/07/2021 ರಂದು 11:00 ಎ.ಎಮ್.ಕ್ಕೆ. ಫಿಯರ್ಾದಿ ಶ್ರೀ.ರಾಮಕೃಷ್ಣ ತಂದೆ ಭೀಮರಾಯ ಉಳ್ಳೆಸೂಗೂರು, ವಯ:35 ವರ್ಷ, ಜಾತಿ:ಉಪ್ಪಾರ್, ಉ||ಒಕ್ಕಲುತನ, ಸಾ||ಖಾನಾಪೂರ ಇದ್ದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ:01/07/2021 ರಂದು ರಾತ್ರಿ ನಾನು ತಡಿಬಿಡಿ ಸೀಮಾಂತರದಲ್ಲಿರುವ ನಮ್ಮ ಹೊಲಕ್ಕೆ ಖಾನಾಪೂರ-ತಡಿಬಿಡಿ ರಸ್ತೆಯ ಮೇಲೆ ನನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ರಾತ್ರಿ 1:30 ಸುಮಾರಿಗೆ ಈರಣ್ಣ ಸಾಹುಕಾರ ಇವರ ಹೊಲದ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಬಿದ್ದದ್ದನ್ನು ನಾನು ನನ್ನ ಮೋಟರ್ ಸೈಕಲ್ ಬೆಳಕಿನಲ್ಲಿ ನೋಡಿ ನನ್ನ ಮೋಟರ್ ಸೈಕಲ್ ನಿಲ್ಲಿಸಿ ಮೋಟರ್ ಸೈಕಲ್ ಬೆಳಕಿನಲ್ಲಿ ನೋಡಲಾಗಿ ಒಬ್ಬ ವ್ಯಕ್ತಿ ಭಾರಿ ರಕ್ತಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದು, ನಾನು ಮಾತಾಡಿಸಲು ಪ್ರಯತ್ನಿಸಿದಾಗ ಆತನು ಮಾತನಾಡಲಿಲ್ಲ. ಅಂದಾಜು 27 ರಿಂದ 32 ವಯಸ್ಸಿನವನಾಗಿದ್ದು, ನಾನು ಆ ವ್ಯಕ್ತಿಯ ಸಮೀಪ ಹೋಗಿ ನೋಡಲಾಗಿ ಆತನಿಗೆ ಯಾವುದೋ ಒಂದು ವಾಹನ ಅಪಘಾತಪಡಿಸಿದಂತೆ ಕಂಡುಬಂದಿದ್ದು, ಆತನ ಬಲ ಮೆಲಕಿಗೆ ರಕ್ತಗಾಯ, ಬಲಗಡೆ ತಲೆಯ ಮುಂದಿನ ತಲೆಗೆ ರಕ್ತಗಾಯ, ಬಲಗಡೆ ಕಿವಿಯ ಹಿಂದೆ ತಲೆಗೆ ರಕ್ತಗಾಯ, ಎಡಕೆನ್ನೆಗೆ ರಕ್ತಗಾಯಗಳಾಗಿದ್ದು, ಎರಡೂ ಕಾಲುಗಳು ಮೊಳಕಾಲು ಕೆಳಗಡೆ ಪಾದಗಳವರೆಗೆ ಮುರಿದು ಭಾರಿರಕ್ತಗಾಯಗಳಾಗಿ ಮಾಂಸ, ಎಲುಬುಗಳು ಹೊರಗಡೆ ಬಂದಿದ್ದು, ನೋಡಲಾಗಿ ಸತ್ತಿದ್ದನು. ಆತನ ಹತ್ತಿರ ಯಾವುದೇ ಗುರುತಿನ ಚೀಟಿಗಳು ಇರಲಿಲ್ಲ. ನಂತರ ರಸ್ತೆಯ ಮೇಲೆ ಹಾದುಹೋಗುವ ಸಾರ್ವಜನಿಕರು ಸಹ ನಿಂತು ನೋಡಿದ್ದು, ಮೃತಪಟ್ಟ ವ್ಯಕ್ತಿಯನ್ನು ಯಾರೂ ಗುರುತಿಸಲಿಲ್ಲ. ಈ ಘಟನೆಯು ರಾತ್ರಿ 00:30 ಗಂಟೆಯಿಂದ 01:30 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರಬಹುದು. ನಂತರ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಅಪರಿಚಿತ ಮೃತ ವ್ಯಕ್ತಿಯ ಮೃತದೇಹವನ್ನು ಹಾಕಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದೆವು. ಮೃತಪಟ್ಟ ವ್ಯಕ್ತಿಯ ಬಗ್ಗೆ ನಮ್ಮೂರಿನಲ್ಲಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಲ್ಲಿಯವರೆಗೆ ವಿಚಾರಿಸಿದ್ದು, ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಯಾರಾದರೂ ಬಂದು ದೂರು ಕೊಡಬಹುದೆಂದು ನಾನು ತಿಳಿದುಕೊಂಡಿದ್ದೆನು. ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಸಧ್ಯಕ್ಕೆ ಯಾರೂ ಪತ್ತೆಯಾಗದ ಕಾರಣ ನಾನು ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರು ಕೊಟ್ಟಿರುತ್ತೇನೆ. ಕಾರಣ ದಿನಾಂಕ:01/07/2021 ರಂದು 00:30 ಎ.ಎಮ್.ದಿಂದ 01:30 ಎ.ಎಮ್. ಮಧ್ಯದ ಅವಧಿಯಲ್ಲಿ ಖಾನಾಪೂರ-ತಡಿಬಿಡಿ ರಸ್ತೆಯ ಮೇಲೆ ಈರಣ್ಣ ಸಾಹುಕಾರ ಇವರ ಹೊಲದ ಹತ್ತಿರ ರಸ್ತೆಯ ಮೇಲೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಅಂದಾಜು 27 ರಿಂದ 32 ವಯಸ್ಸಿನ ಅಪರಿಚಿತ ವ್ಯಕ್ತಿಗೆ ಅಪಘಾತಪಡಿಸಿ ಓಡಿಹೋಗಿದ್ದು, ಅಪಘಾತದಲ್ಲಿ ಅಪರಿಚಿತ ವ್ಯಕ್ತಿಗೆ ಭಾರಿರಕ್ತಗಾಯ ಹಾಗು ಗುಪ್ತಗಾಯಗಳಾಗಿ ಮೃತಪಟ್ಟಿದ್ದು, ಅಪಘಾತಪಡಿಸಿ ಓಡಿಹೋದ ವಾಹನ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:83/2021 ಕಲಂ:279, 304(ಎ) ಐ.ಪಿ.ಸಿ ಮತ್ತು ಕಲಂ:187 ಐ.ಎಮ್.ವಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 84/2021 ಕಲಂ: 504, 323, 324 506 ಸಂ 34 ಐಪಿಸಿ : ಇಂದು ದಿನಾಂಕ: 01/07/2021 ರಂದು 5-30 ಪಿಎಮ್ಕ್ಕೆ ಶ್ರೀ ಇಮಾಮ ಸಾಬ ತಂದೆ ನಬಿಸಾಬ ಬಳಗಾರ ವ:58, ಜಾ:ಮುಸ್ಲಿಂ. ಉ: ಒಕ್ಕಲುತನ, ಸಾ: ಗುರುಸಣಗಿ ಇವರು ಪೊಲೀಸ್ ಠಾಣೆಗೆ ಬಂದು ಸಲ್ಲಿಸಿದ್ದರ ದೂರು ಅಜರ್ಿಯೆಂನದರೆ ಗುರುಸಣಗಿ ಸೀಮಾಂತರ ಸವರ್ೆ ನಂಬರ 89 ರಲ್ಲಿ 2 ಎಕರೆ 4 ಗುಂಟೆ ಜಮೀನು ಇರುತ್ತದೆ. ಸುಮಾರ 20 ವರ್ಷಗಳಿಂದ ನಾನು ಉಪಬೋಗಿಸಿಕೊಂಡು ಬಂದಿರುತ್ತೇನೆ. ನಮ್ಮ ಹೊಲದ ಮೇಲೆ ಮಾನ್ಯ ನ್ಯಾಯಲಯ ಶಹಾಪೂರದಲ್ಲಿ ಸಿವಿಲ್ ಕೇಸ ದಾಖಲಾಗಿರುತ್ತದೆ. ಹೀಗಿದ್ದು ದಿನಾಂಕ: 29/06/2021 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕಡೆ ಹೋಗಿ ಬರೋಣ ಹೋದಾಗ ನಮ್ಮೂರಿನವರಾದ 1) ಶರಣಪ್ಪ ತಂದೆ ಸಿದ್ದಲಿಂಗಪ್ಪಗೌಡ, 2) ರಡ್ಡೆಪ್ಪ್ಪ ತಂದೆ ಸಿದ್ರಾಮಪ್ಪ, 3) ದೇವಪ್ಪ ತಂದೆ ಚಂದ್ರಾಮಪ್ಪ, ಎಲ್ಲರೂ ಸಾ:ಗುರುಸಣಗಿ ಇವರೆಲ್ಲರೂ ಸೇರಿಕೊಂಡು ನಮ್ಮ ಜಾಗದಲ್ಲಿ ಮನೆ ಕಟ್ಟಲು ಬುನಾದಿ ಹಾಕುತಿದ್ದರು ಅದನ್ನು ನೋಡಿದ ನಾನು ಯಾಕೇ ನಮ್ಮ ಹೊಲದ ಜಾಗದಲ್ಲಿ ಬುನಾದಿ ಹಾಕುತ್ತಿದ್ದಾರ ಎಂದು ಕೇಳಿದಕ್ಕೆ ಮೂರು ಜನ ಸೇರಿ ಬಂದವರೆ ಲ್ಹೇ ಭೊಸುಡಿ ಮಗನೆ ನಮ್ಮ ಜಾಗದಲ್ಲಿ ನಾವು ಬುನಾದಿ ಹಾಕಿ ಮನೆ ಕಟ್ಟುತ್ತೇವೆ ಅದನ್ನು ಕೇಳೊಕೆ ನೀನು ಯಾರೋ ಊರಲ್ಲಿ ನಿನ್ನ ತಿಂಡಿ ಬಹಳ ಆಗಿದೆ ನಿನ್ನ ಸೊಕ್ಕು ಮುರಿಯುತ್ತೇವೆ ಸೂಳೆ ಮಗನೆ ಎಂದು ಅವಾಚ್ಯ ಬೈದು ನನಗೆ ರಡೆಪ್ಪ ತಂದೆ ಸಿದ್ರಾಮಪ್ಪ ಮತ್ತು ದೇವಪ್ಪ ತಂದೆ ಚಂದ್ರಾಮಪ್ಪ ಇಬ್ಬರೂ ಹಿಡಿದುಕೊಂಡಾಗ ಶರಣಪ್ಪ ತಂದೆ ಸಿದ್ದಲಿಂಗಪ್ಪಗೌಡ ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿ ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎಡ ಹಣೆಗೆ ರಕ್ತ ಗಾಯವಾಗುವಂತೆ ಹೊಡೆದು ನೆಲಕ್ಕೆ ಜಾಡಿಸಿ ನೂಕಿದಾಗ ನಾನು ನೆಲದ ಮೇಲೆ ಬಿದ್ದಾಗ ರೆಡ್ಡಪ್ಪ ಮತ್ತು ದೇವಪ್ಪ ಇಬ್ಬರೂ ಸೇರಿ ಕಾಲಿನಿಂದ ತುಳಿಯುತ್ತಿರುವುದನ್ನು ನೋಡಿದ ನಮ್ಮೂರ ಮೀರಜ ತಂದೆ ನಬಿಚಾಂದ ಮತ್ತು ಜಲಾಲಸಾಬ ತಂದೆ ಜಲಾಲಸಾಬ ಇಬ್ಬರೂ ಬಂದು ನಮಗೆ ಹೊಡೆಯುವುದು ಬಿಡಿಸಿಕೊಂಡರು. ಕಾರಣ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ನಮ್ಮ ಜಾಗದಲ್ಲಿ ಯಾಕೆ ಬುನಾದಿ ಹಾಕುತ್ತಿದ್ದರಾ ಅಂತಾ ಕೇಳಿದಕ್ಕೆ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 84/2021 ಕಲಂ: 504, 323, 324 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 94/2021 ಕಲಂ 379 ಐ.ಪಿ.ಸಿ : ಇಂದು ದಿನಾಂಕ 01-07-2021 ರಂದು 8-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ವಿಜಯಕುಮಾರ ತಂದೆ ಮಾರೇಪ್ಪ ಕಡೆಚೂರ ವಯಾ: 48 ವರ್ಷ ಉ: ವ್ಯಾಪಾರ ಜಾ: ಹರಿಜನ ಸಾ: ವಿವೇಕಾನಂದ ನಗರ ಯಾದಗಿರಿ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ವ್ಯಾಪಾರ ಮಾಡಿಕೊಂಡು ನಮ್ಮ ಕುಟುಂಬದವರೊಂದಿಗೆ ಉಪಜೀವನ ಸಾಗಿಸುತ್ತೆನೆ. ನಾನು ಯಾದಗಿರಿಯ ಶಾರದಾ ಆಯುವರ್ೆದಿಕ ಕಾಲೇಜ ಹತ್ತಿರ ಮಾತೋಶ್ರೀ ಪೆಟ್ರೊಲಿಯಂ ಎಂಬ ಹೆಸರಿನ ಪೆಟ್ರೋಲ್ ಬಂಕ್ 5 ವರ್ಷದ ಹಿಂದೆ ಪ್ರಾರಂಭ ಮಾಡಿರುತ್ತೆನೆ, ನನ್ನ ಪೆಟ್ರೋಲ ಬಂಕ್ದಲ್ಲಿ ಅಬ್ದುಲ ಅಜೀಜ ತಂದೆ ಮಹ್ಮದ ಅಜಮ ಪರಾಶ, ವೈಜನಾಥ ತಂದೆ ಗುರುಸ್ವಾಮಿ ಹಿರೇಮಠ ಇವರಿಬ್ಬರೂ ಮ್ಯಾನೇಜರ ಅಂತಾ ಮತ್ತು ಮಲ್ಲಿಕಾಜರ್ುನ ತಂದೆ ತಾಯಪ್ಪ ಮಡಿವಾಳ, ನವೀನ ತಂದೆ ಯಶಪ್ಪ ಚಿನ್ನಾಕಾರ, ಮೊಜೇಶ ತಂದೆ ವಿಜಯಕುಮಾರ ಮಾಟ್ನಳ್ಳಿ, ಭೀಮರಾಯ ತಂದೆ ಶರಣಪ್ಪ ಕುಂಟಿಮಾರಿ ಮತ್ತು ಮಂಜುನಾಥ ತಂದೆ ಹಣಮಯ್ಯ ಗುತ್ತೆದಾರ ಇವರೆಲ್ಲರೂ ವಾಹನಗಳಿಗೆ ಪೇಟ್ರೋಲ ಮತ್ತು ಡಿಜಲ್ ಹಾಕುವ ಕೆಲಸ ಮಾಡುತ್ತಾರೆ, ಪ್ರತಿ ದಿನ ನಮ್ಮಲ್ಲಿ ಕೆಲಸ ಮಾಡುತ್ತಿರುವ 3 ಜನರು ರಾತ್ರಿ 12-00 ಗಂಟೆಯವರೆಗೆ ವಾಹನಗಳಿಗೆ ಪೆಟ್ರೋಲ ಮತ್ತು ಡಿಜಲ್ ಹಾಕುವ ಕೆಲಸ ಮಾಡುತ್ತಾರೆ, ನಾನು ದಿನಾಲು ಮಧ್ಯಾಹ್ನ 12-00 ಗಂಟೆಗೆ ಪೆಟ್ರೋಲ್ ಬಂಕ್ಗೆ ಹೋಗಿ ಮಧ್ಯಾಹ್ನ 1-00 ಗಂಟೆಗೆ ಮನೆಗೆ ಬರುತ್ತೆನೆ ಮತ್ತು ರಾತ್ರಿ 9-30 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕಗೆ ಹೋಗಿ ರಾತ್ರಿ 12-00 ಗಂಟೆಗೆ ಮರಳಿ ಮನೆಗೆ ಬರುತ್ತೆನೆ. ಪ್ರತಿ ದಿನ ಬೆಳಿಗ್ಗೆ ನಮ್ಮ ಮ್ಯಾನೇಜರಾದ ಅಬ್ದುಲ ಅಜೀಜ ತಂದೆ ಮಹ್ಮದ ಅಜಮ ಪರಾಶ ಇವರು ಬೆಳಿಗ್ಗೆ 9-00 ಗಂಟೆಗೆ ಡಿಪ ರಾಡನಿಂದ ಟ್ಯಾಂಕನಲ್ಲಿದ್ದ ಪೆಟ್ರೋಲ ಮತ್ತು ಡಿಜಲ್ ಅನ್ನು ಚೆಕ್ ಮಾಡಿ ನನಗೆ ವಿಷಯ ತಿಳಿಸಿ ಅಕೌಂಟ ಬುಕ್ನಲ್ಲಿ ಬರೆಯುತ್ತಾನೆ, ನಿನ್ನೆ ದಿನಾಂಕ 30/06/2021 ರಂದು ರಾತ್ರಿ ನವೀನ ತಂದೆ ಯಶಪ್ಪ ಚಿನ್ನಾಕಾರ, ಮೊಜೇಶ ತಂದೆ ವಿಜಯಕುಮಾರ ಮಾಟ್ನಳ್ಳಿ, ಭೀಮರಾಯ ತಂದೆ ಶರಣಪ್ಪ ಕುಂಟಿಮಾರಿ ಈ ಮೂರು ಜನರು ಪೆಟ್ರೋಲ ಬಂಕದಲ್ಲಿ ರಾತ್ರಿ 12-00 ಗಂಟೆಯವರೆಗೆ ವಾಹನಗಳಿಗೆ ಪೆಟ್ರೋಲ್ ಹಾಕಿ ಪೆಟ್ರೋಲ ಬಂಕದಲ್ಲಿ ಮಲಗಿಕೊಂಡಿದ್ದರು, ನಿನ್ನೆ ನಾನು ಪೆಟ್ರೋಲ ಬಂಕಕ್ಕೆ ಹೋಗಿರುವದಿಲ್ಲ, ಹೀಗಿದ್ದು ಇಂದು ದಿನಾಂಕ 01-07-2021 ರಂದು ಬೆಳಗ್ಗೆ ನಾನು ಮನೆಯಲ್ಲಿರುವಾಗ ನಮ್ಮ ಮ್ಯಾನೇಜರಾದ ಅಬ್ದುಲ ಅಜೀಜ ತಂದೆ ಮಹ್ಮದ ಅಜಮ ಪರಾಶ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಪ್ರತಿನಿತ್ಯದಂತೆ ಇಂದು ಕೂಡಾ ನಾನು ಪೆಟ್ರೋಲ ಬಂಕಗೆ ಹೋಗಿ ನಾನು ಟ್ಯಾಂಕನಲ್ಲಿದ್ದ ಡಿಜಲ್ ಮತ್ತು ಪೆಟ್ರೋಲ ಅನ್ನು ಡಿಪ ರಾಡನಿಂದ ಚೆಕ್ ಮಾಡಿ ನೋಡಲಾಗಿ ಟ್ಯಾಂಕನಲ್ಲಿ ಡಿಜಲ್ 2700 ಲೀಟರ ಕಡಿಮೆ ಕಾಣಿಸಿರುತ್ತದೆ ಆಗ ನಾನು ಸಿಸ್ಟಮದಲ್ಲಿ ನೋಡಲಾಗಿ ಅದರಲ್ಲಿಯೂ ಕೂಡಾ 2700 ಲೀಟರ ಡಿಜಲ್ ಕಡಿಮೆ ಕಂಡಿರುತ್ತದೆ, ನಂತರ ನಾನು ಮತ್ತು ವೈಜನಾಥ ಇಬ್ಬರೂ ಕೂಡಿಕೊಂಡು ನಮ್ಮ ಪೆಟ್ರೋಲ ಬಂಕ್ ಸುತ್ತಮುತ್ತ ಹೋಗಿ ನೋಡಲಾಗಿ ಹೆಸರಿನ ಹೊಲದಲ್ಲಿ ಡಿಜಲ್ ಸೋರಿದ್ದು ಕಂಡು ಬಂದಿರುತ್ತದೆ ನೀವು ಬೇಗನೇ ಪೇಟ್ರೋಲ ಬಂಕಿಗೆ ಬನ್ನಿರಿ ಅಂತಾ ಹೇಳಿದ್ದರಿಂದ ಆಗ ನಾನು ಪೇಟ್ರೋಲ ಬಂಕಿಗೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು ಡಿಜಲ್ ಟ್ಯಾಂಕದಲ್ಲಿ 2700 ಲೀಟರ ಡಿಜಲ್ ಕಡಿಮೆ ಇದ್ದಿತು, ನನ್ನ ಪೆಟ್ರೋಲ ಬಂಕದ ಸುತ್ತಮುತ್ತ ಇರುವ ಹೊಲದಲ್ಲಿ ಡಿಜಲ್ ಕೆಳಗಡೆ ಸೋರಿ ಬಿದ್ದಿತ್ತು, ದಿನಾಂಕ 01/07/2021 ರಂದು ರಾತ್ರಿ 00-40 ಗಂಟೆಯ ಸುಮಾರಿಗೆ ಯಾರೋ ಕಳ್ಳರು ನನ್ನ ಪೆಟ್ರೋಲ ಬಂಕಗೆ ಬಂದು ಸಿಸಿಟಿವಿ ಯು ಮೇಲ್ಗಡೆ ತಿರುವಿ ಅದರ ದಿಕ್ಕು ಬದಲಾಯಿಸಿ ಡಿಸೇಲ್ ಗೇಜ್ ಚಕ್ಕ ಮಾಡುವ ಪೈಪ್ ಮುಖಾಂತರ ಪೈಪ ಹಾಕಿ ದೂರದಲ್ಲಿ ಮೋಟಾರ ಇಟ್ಟು ಪೈಪಿನ ಮುಖಾಂತರ ಡಿಜಲ್ ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ಖಚಿತವಾಗಿರುತ್ತದೆ, ನಂತರ ನಾನು ಮತ್ತು ನಮ್ಮ ಪೆಟ್ರೋಲ ಬಂಕದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಜನರು ಕೂಡಿಕೊಂಡು ನಮಗೆ ಸಂಶಯ ಬಂದ ಕಡೆಗೆ ಹೋಗಿ ಹುಡುಕಾಡಿದ್ದು ನಮಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ಈ ಘಟನೆಯು ದಿನಾಂಕ 01-07-2021 ರಂದು ರಾತ್ರಿ 00-40 ಗಂಟೆಯಿಂದ ದಿನಾಂಕ 01-07-2021 ರಂದು ಬೆಳಗ್ಗೆ 6 ಗಂಟೆಯ ಮಧ್ಯದಲ್ಲಿ ಜರುಗಿದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ 2700 ಲೀಟರ ಡಿಜಲಿನ ಅಂದಾಜು ಕಿಮ್ಮತ್ತು 2,56,176/ರೂ (ಎರಡು ಲಕ್ಷ ಐವತ್ತಾರು ಸಾವಿರ ನೂರಾ ಎಪ್ಪಾತ್ತಾರು) ರೂಪಾಯಿ ಆಗಬಹುದು. ಈ ಬಗ್ಗೆ ನಾವು ಮನೆಯಲ್ಲಿ ಮತ್ತು ಪೆಟ್ರೊಲಿಯಮ್ ಕಂಪನಿಯವರ ಸಂಗಡ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 94/2021 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 150/2021 ಕಲಂ 363 ಐ.ಪಿ.ಸಿ : ಇಂದು ದಿನಾಂಕ 01/07/2021 ರಂದು, ಮಧ್ಯಾಹ್ನ 13-45 ಗಂಟೆಗೆ ಫಿರ್ಯಾದಿ ಶ್ರೀ ಮಲ್ಲಯ್ಯ ತಂದೆ ಸಾಬಣ್ಣ ಶಿರವಾರ, ವಯಸ್ಸು 45 ವರ್ಷ ಜಾತಿ ಉಪ್ಪಾರ,  ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನಗೆ ಇಬ್ಬರೂ ಮಕ್ಕಳಿದ್ದು, 1) ರಾಘವೇಂದ್ರ ವಯಸ್ಸು 21 ವರ್ಷ ಈತನು ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಅಲ್ಲಿಯೇ ಇರುತ್ತಾನೆ 2) ಕುಮಾರಿ  ವಯಸ್ಸು 16 ವರ್ಷ, ಇವಳು ಪ್ರಸ್ತುತ ಹತ್ತಿಗೂಡುರ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದಾಳೆ. ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ ಇಬ್ಬರು ಸುಮಾರು 15-20 ವರ್ಷಗಳಿಂದ ದೇವದುರ್ಗ ಕ್ರಾಸ್ದಲ್ಲಿ ಹೋಟೆಲ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಅಲ್ಲಿಯೇ ವಾಸವಾಗಿರುತ್ತೇವೆ.ದೇವದುರ್ಗ ಕ್ರಾಸ್ದಲ್ಲಿ ನಮ್ಮ ಹೋಟೆಲ್ ಬಿಟ್ಟು ಸ್ವಲ್ಪ ದೂರದಲ್ಲಿ ಆರೀಕಾ ಹೋಟೆಲ್ ಮಾಲೀಕರಾದ ಪ್ರಕಾಶ ಈತನ ಹತ್ತಿರ ಶರಣು ತಂದೆ ಭೀಮಣ್ಣ ವಯಸ್ಸು 25 ವರ್ಷ ಜಾತಿ ಪ.ಜಾತಿ ಸಾಃ ಬಿಳವಾರ ತಾಃ ಜೇವಗರ್ಿ ಈತನು ಈ ಹಿಂದೆ ಕೆಲಸ ಮಾಡುವ ಸಮಯದಲ್ಲಿ ನನ್ನ ಮಗಳು ರೇಣುಕಾ ಇವಳು ಬಟ್ಟೆ ತೊಳೆಯಲು ಹೋದಾಗ ಮತ್ತು ಬಹಿದರ್ೇಶೆಗೆ ಹೋಗಿ ಬರುವಾಗ ಕದ್ದು ಮಾತನಾಡುವುದು ಮಾಡುತಿದ್ದನು, ಒಂದೆರಡು ಸಲ ನಾನು ನೋಡಿ ಹುಡಗನಿಗೆ ಮತ್ತು ಹುಡುಗ ಕೆಲಸ ಮಾಡುತಿದ್ದ ಹೋಟೆಲ್ ಮಾಲೀಕರಾದ ಪ್ರಕಾಶ ಇವರ ಗಮನಕ್ಕೆ ತಂದಿದ್ದೆನು, ಪ್ರಕಾಶ ಇವರು ಆ ಹುಡಗನಿಗೆ ಮಾತನಾಡದಂತೆ ಬುದ್ದಿವಾದ ಹೇಳಿದ್ದರು, ನಂತರ ಆ ಹುಡಗ ತನ್ನ ಹಳೆ ಚಾಳಿ ಬಿಡದೇ ಪುನಃ ನಮ್ಮ ಮಗಳನ್ನು ಕದ್ದು ಮಾತನಾಡುವುದು ಮಾಡುತಿದ್ದರಿಂದ ಅವನನ್ನು ಕೆಲಸದಿಂದ ಬಿಡಿಸಿದ್ದರು.ಹೀಗಿರುವಾಗ ದಿನಾಂಕ 29/06/2021 ರಂದು, ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ ಲಕ್ಷ್ಮೀ ಮತ್ತು ನನ್ನ ತಂದೆ ಸಾಬಣ್ಣ, ತಾಯಿ ಹಣಮಂತಿ ರವರೆಲ್ಲರು ಹೋಟೆಲ್ದಲ್ಲಿದ್ದಾಗ, ನಮ್ಮ ಮಗಳು  ಇವಳು ಬಹಿದರ್ೆಶೆಗೆ ಹೋಗಿ ಬರುತ್ತೇನೆ ಅಂತ ಸಗರ(ಬಿ) ಗ್ರಾಮದ ಕೆನಾಲ್ ರೋಡಿನ ಕಡೆಗೆ ಹೋದಳು. ಸುಮಾರು ಅರ್ಧಗಂಟೆಯಾದರು ನಮ್ಮ ಮಗಳು ಮರಳಿ ಹೋಟೆಲ್ಗೆ ಬರದೇ ಇದ್ದಾಗ, ನಾನು ಮತ್ತು ದೇವದುರ್ಗ ಕ್ರಾಸ್ದಲ್ಲಿ ಕಿರಾಣಾ ವ್ಯಾಪಾರ ಮಾಡಿಕೊಂಡಿದ್ದ, ಹಣಮಂತಪ್ಪ ತಂದೆ ಬಸಪ್ಪ ಹೊಸಮನಿ ಈತನಿಗೆ ವಿಷಯ ತಿಳಿಸಿ ಇಬ್ಬರು ಕೂಡಿ ಮೋಟರ್ ಸೈಕಲ್ ಮೇಲೆ ಸಗರ(ಬಿ) ಗ್ರಾಮದ ಕಡೆಗೆ ಹೋಗುವ ಕೆನಾಲ್ ರೋಡಿನ ಕಡೆಗೆ ಮತ್ತು ಕೊಂಗಂಡಿ, ಹತ್ತಿಗೂಡುರ ಗ್ರಾಮದವರೆಗೆ ಹೋಗಿ ಹುಡಕಾಡಿದ್ದು, ನನ್ನ ಮಗಳು ರೇಣುಕಾ ಇವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ರಾತ್ರಿಯಾಗಿದ್ದರಿಂದ ಮರಳಿ ಮನೆಗೆ ಬಂದು, ನನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದು, ನಂತರ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದು, ಇಲ್ಲಿಯವರೆಗೆ ನಮ್ಮ ಮಗಳು  ಇವಳ ಬಗ್ಗೆ ಹುಡಕಾಡಿದ್ದು ಸಿಗದೇ ಇದ್ದಾಗ ತಡವಾಗಿ ಇಂದು ಠಾಣೆಗೆ ಹಾಜರಾಗಿ ಅಪಹರಣವಾದ ನನ್ನ ಮಗಳ ಬಗ್ಗೆ ದೂರು ಸಲ್ಲಿಸುತ್ತಿದ್ದೇನೆ. ದಿನಾಂಕ 29/06/2021 ರಂದು ಸಾಯಂಕಾಲೆ 6-30 ಗಂಟೆಯಿಂದ 07-00 ಗಂಟೆಯ ಅವಧಿಯಲ್ಲಿ ನಮ್ಮ ಮಗಳು ಅಪಹರಣವಾಗಿರುತ್ತಾಳೆ.ಕಾರಣ ಈ ಹಿಂದೆ ನಮ್ಮ ಮಗಳಜೊತೆ ಕದ್ದು ಮಾತನಾಡುವುದು ಮಾಡುತಿದ್ದ ಶರಣು ತಂದೆ ಭೀಮಣ್ಣ ವಯಸ್ಸು 25 ವರ್ಷ ಜಾತಿ ಪ.ಜಾತಿ ಸಾಃ ಬಿಳವಾರ ತಾಃ ಜೇವಗರ್ಿ ಈತನು ನನ್ನ ಮಗಳನ್ನು ಪುಸಲಾಯಿಸಿ ಯಾವುದೋ ಉದ್ದೇಶದಿಂದ ಜೋರಾವರಿಯಿಂದ ಅಪಹರಣ ಮಾಡಿಕೊಂಡು ಹೋಗಿರಬಹುದು, ಆತನ ಮೇಲೆ ನಮಗೆ ಸಂಶಯವಿರುತ್ತದೆ ಈ ಬಗ್ಗೆ ಕ್ರಮ ಕೈಕೊಂಡು ಅಪಹರಣವಾದ ನನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 150/2021 ಕಲಂ 363 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 114/2021 ಕಲಂ. ಮನುಷ್ಯ ಕಾಣಿಯಾದ ಬಗ್ಗೆ : ಇಂದು ದಿನಾಂಕ:01/07/2021 ರಂದು 6 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸತ್ಯನಾರಾಯಣ ತಂದೆ ಗಿರೇಪ್ಪ ಶಹಾಪುರಕರ ವ|| 62 ವರ್ಷ ಜಾ|| ಉಪ್ಪಾರ ಉ|| ನಿವೃತ್ತ ನೌಕರ ಸಾ|| ಗಾಂದಿನಗರ ಹಸನಾಪುರ ಇದ್ದು ಫಿಯರ್ಾದಿ ಸಾರಾಂಸವೆನೆಂದರೆ, ಹಿಗಿದ್ದು ದಿನಾಂಕ:29/06/2021 ರಂದು ಮುಂಜಾನೆ ಅಂದಾಜು 6:30 ಗಂಟೆಗೆ ನನ್ನ ಮಗ ವೇಣುಗೋಪಾಲ ಇತನು ಹೊರಗಡೆ ಸಂಡಾಸಕ್ಕೆ ಹೊಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊದನು. ನಂತರ 8 ಗಂಟೆ ಆದರೂ ನನ್ನ ಮಗ ಮನೆಗೆ ಬರೆದೆ ಇದ್ದ ಕಾರಣ ನಾನು ಮತ್ತು ನನ್ನ ಮಗನಾದ ಗೊವಿಂದರಾಜ ಇಬ್ಬರು ಕೂಡಿ ನಮ್ಮ ಮನೆಯ ಸುತ್ತಮುತ್ತಾ ಹುಡುಕಾಡಿದರು ನನ್ನ ಮಗ ಸಿಗದೆ ಇದ್ದುದರಿಂದ ನಾನು ಗಾಭರಿಯಾಗಿ ನನ್ನ ಅಣ್ಣನ ಮಕ್ಕಳಾದ ಬಲಭೀಮ ತಂದೆ ಕಾಡಪ್ಪ ಶಹಾಪುರಕರ, ಅಶೋಕ ತಂದೆ ಸಿದ್ರಾಮಪ್ಪ ಶಹಾಪುರಕರ ಇವರುಗಳಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಇಬ್ಬರು ಕುಡಿ ಬಂದು ಅವರು ನಮ್ಮ ಜೊತೆಯ ಸುರಪುರ ನಗರದ ವೇಣುಗೋಪಾಲ ಸ್ವಾಮಿ ಗುಡಿಯ ಹತ್ತಿರ, ವಾಲ್ಮೀಕಿ ಚೌಕ, ಕಬಾಡಗೇರಾ, ರಂಗಮಪೇಟ್ ದಿವಳಗುಡ್ಡ, ಶಹಾಪುರ ಹೊಸ್ ನಿಲ್ದಾಣ ಮತ್ತು ಹೆಳೆ ಬಸ್ ನಿಲ್ದಾಣದ ಹತ್ತಿರ ತಿಂಥಣಿ, ವೀರಗೋಟ್, ವೆಂಕಟಾಪುರ, ಕುಂಬಾರಪೇಟ್ ಇನ್ನೂ ಮುಂತಾದ ಊರುಗಳಲ್ಲಿ ಹೂಡುಕಾಡಿದರು ನನ್ನ ಮಗ ಸಿಕ್ಕಿರುವದಿಲ್ಲ. ಕಾರಣ ನಾನು ಮನೆಯಲ್ಲಿ ವಿಚಾರ ಮಾಡಿ ಹುಡಕಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೆನೆ. ಕಾರಣ ನಾನು ಮನೆಯಲ್ಲಿ ವಿಚಾರ ಮಾಡಿ ಹುಡಕಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ. 114/2021 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 02-07-2021 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080