ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-07-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ 341, 447, 323, 504, 506 ಸಂಗಡ 34 ಐಪಿಸಿ : ಫಿಯರ್ಾದಿಗೆ ಸಂಬಂಧಿಸಿದ ಜಮೀನು ಸವರ್ೇ ನಂಬರ 365/01 ರಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಫಿಯರ್ಾದಿಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿದ್ದು, ಫಿಯರ್ಾದಿ ಮಗನಿಗೆ ಕೈಯಿಂದ ಬೆನ್ನಿಗೆ, ಮೊಳಕೈಗೆ ಹೊಡೆಬಡೆ ಮಾಡಿ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು, ಮೇಲ್ಕಂಡ 4 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 118/2022 ಕಲಂ: 78 (3) ಕೆಪಿ ಆಕ್ಟ್ : ಇಂದು ದಿನಾಂಕ: 01/07/2022 ರಂದು 8-15 ಪಿ.ಎಮ್ ಸರಕಾರಿ ತಪರ್ೆ ಪಿರ್ಯಾದಿ ಶ್ರೀ ಶ್ರೀನಿವಾಸ ವಿ. ಅಲ್ಲಾಪೂರ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 01/07/2022 ರಂದು ರಂದು 6.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಶರನಬಸವೇಶ್ವರ ಮಠದ ಹತ್ತಿರ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್.ಸಿ-49, ಬಾಬು ಹೆಚ್.ಸಿ-162, ಶ್ರೀ ಶಂಕರಲಿಂಗ ಹೆಚ್.ಸಿ-131, ಮತ್ತು ಶ್ರೀ ಭಾಗಣ್ಣ ಪಿ.ಸಿ-194, ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಭಾಗಣ್ಣ ಪಿ.ಸಿ-194 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ರಾಜಕುಮಾರ ತಂದೆ ಮಲ್ಲಯ್ಯ ಪಿರಂಗಿ ವಯಾ: 29 ವರ್ಷ ಜಾತಿ: ಸಕು ಸಾಳೇರ ಉ: ಟೇಲರಿಂಗ ಸಾ: ಜೀವೇಶ್ವರ ಕಲ್ಯಾಣ ಮಂಟಪ ಶಹಾಪೂರ 2) ಶ್ರೀ ಆನಂದ ತಂದೆ ಮಲ್ಲಿಕಾಜರ್ುನ ಮಾನು ವಯಾ: 28 ವರ್ಷ ಜಾತಿ: ಸಕು ಸಾಳೇರ ಉ: ಟೇಲರಿಂಗ ಸಾ: ಸಾ: ಜೀವೇಶ್ವರ ಕಲ್ಯಾಣ ಮಂಟಪ ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂದಿವರೊಂದಿಗೆ ಠಾಣೆಯಿಂದ 6.15 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 6.25 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 6.30 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ರಾಮರೆಡ್ಡಿ ತಂದೆ ಶಿವರೆಡ್ಡಿ ವಯ: 22 ವರ್ಷ ಜಾ: ಲಿಂಗಾಯತ ರೆಡ್ಡಿ ಉ: ಮಟಕ ಬರೆದುಕೊಳ್ಳುವದು ಸಾ: ದಿಗ್ಗಿ ಬೇಸ ಶಹಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಪರಿಶಿಲನೆ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 1050 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 6:30 ಪಿ.ಎಮ್ ದಿಂದ 7:30 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಜೀಪಿನ ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 118/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 13-08-2022 01:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080