Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-08-2021

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 109/2021 ಕಲಂ 279, 304 (ಎ) ಐಪಿಸಿ : ಇಂದು ದಿನಾಂಕ: 01/08/2021 ರಂದು 07.30 ಪಿ.ಎಮ್ ಕ್ಕೆ ಫೀರ್ಯಾಧಿ ಶ್ರೀ ಮಲ್ಲಪ್ಪ ತಂದೆ ಶಿವಪ್ಪ ಚಿಮಟಗಿ ವಯಾ: 32 ಜಾತಿ:ಕಬ್ಬಲಿಗ ಉ: ಒಕ್ಕಲುತನ ಸಾ: ಯರಗೋಳ ಹೇಳಿಕೆ ಫಿರ್ಯಾಧಿ ಸಲ್ಲಿಸಿದೆನೆಂದರೆ ನಾನು ಮೇಲ್ಕಂಡ ವಿಳಾಸ ನಿವಾಸಿಯಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೇನೆ. ನನಗೆ 1)ಸಿಂಚನ, 2)ಶಿವುಮಲ್ಯ, 3)ಶಿವಮಣಿ ಹೆಸರಿನ ಮೂರು ಜನ ಮಕ್ಕಳಿರುತ್ತಾರೆ. ಎಲ್ಲರೂ ವಿದ್ಯಾಭ್ಯಾಸ ಮಾಡಿಕೊಂಡು ನಮ್ಮೊಂದಿಗೆ ಇರುತ್ತಾರೆ. ನನ್ನ ಮಗ ಶಿವುಮಲ್ಯ ವಯ:10 ವರ್ಷ ಈತನು 5ನೇ ತರಗತಿಯಲ್ಲಿ ನಮ್ಮೂರಿನಲ್ಲಿ ಶಾಲೆಗೆ ವಿದ್ಯಾಭ್ಯಾಸ ಮಾಡುತ್ತಿದ್ದನು. ಹೀಗಿರುವಾಗ ನಿನ್ನೆ ದಿನಾಂಕ:01/08/202121 ರಂದು ಮುಂಜಾನೆ 10 ಎ.ಎಮ್ ಸುಮಾರಿಗೆ ನಾನು ನನ್ನ ಸಂಗಡ ನನ್ನ ಮಗ ಶಿವುಮಲ್ಯ ಹಾಗೂ ಸಿದ್ದಪ್ಪ ತಂದೆ ತಿಪ್ಪಣ್ಣ ಅಲ್ಲಿಪೂರ ಸೇರಿಕೊಂಡು ನಮ್ಮ ಹೋಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಸಂಜೆ 06 ಪಿ.ಎಮ್ ಸುಮಾರಿಗೆ ಯಾದಗಿರಿ-ವಾಡಿ ರಸ್ತೆಯ ಮೇಲೆ ಯರಗೋಳ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ಅಡಮಡಿ ತಾಂಡ ಗೇಟ ಹತ್ತಿರ ನಾವುಗಳು ರಸ್ತೆ ದಾಟುತ್ತಿರುವಾಗ ಅಡಮಡಿ ತಾಂಡದ ಕಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನನ್ನ ಮಗನಿಗೆ ಜೋರಾಗಿ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ನನ್ನ ಮಗನು ಪುಟಿದು ರಸ್ತೆಯ ಮೇಲೆ ಬಿದ್ದಿದ್ದು, ನೋಡಲಾಗಿ ನನ್ನ ಮಗನ ಎದೆಗೆ ಬಾರಿ ತರಚಿದ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿ ಮಾತನಾಡುವ ಸ್ಥಿತಿಯಲ್ಲಿರದೇ ಬಿದ್ದಿದ್ದನು. ಅಪಘಾತಪಡಿಸಿದ ಟ್ರ್ಯಾಕ್ಟರ್ ನೋಡಲಾಗಿ ಅದರ ನಂ:ಕೆಎ-33 ಟಿಎ-5811 ಇದ್ದು, ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಎಂದು ತಿಳಿಸಿ ಟ್ರ್ಯಾಕ್ಟರನ್ನು ಬಿಟ್ಟು ಓಡಿಹೋದನು. ನಂತರ ನಾನು ಮತ್ತು ಸಿದ್ದಪ್ಪ ತಂದೆ ತಿಮ್ಮಣ್ಣ ಅಲ್ಲಿಪೂರ ಇಬ್ಬರು ಕೂಡಿಕೊಂಡು ಗಾಯಗೊಂಡು ಬಿದ್ದಿದ್ದ ನನ್ನ ಮಗ ಶಿವುಮಲ್ಯನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು, ನನ್ನ ಮಗನಿಗೆ ಪರೀಕ್ಷೆ ಮಾಡಿದ ವೈದ್ಯರು ಅಪಘಾತದಲ್ಲಿ ಆದ ಗಾಯಗಳಿಂದ ಶಿವುಮಲ್ಯ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಸದರಿ ಅಪಘಾತವು ಟ್ರ್ಯಾಕ್ಟರ್ ನಂ:ಕೆಎ-33 ಟಿಎ-5811 ರ ಚಾಲಕ ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಈತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ನನ್ನ ಮಗ ಶಿವುಮಲ್ಯ ವಯ:10 ವರ್ಷ ಈತನು ಭಾರಿಗಾಯಗೊಂಡು ಮೃತಪಟ್ಟಿರುತ್ತಾನೆ. ಕಾರಣ ಟ್ರ್ಯಾಕ್ಟರ್ ನಂ:ಕೆಎ-33 ಟಿಎ-5811 ರ ಚಾಲಕ ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೋಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.109/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 02-08-2021 09:59 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080