ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-08-2021

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 109/2021 ಕಲಂ 279, 304 (ಎ) ಐಪಿಸಿ : ಇಂದು ದಿನಾಂಕ: 01/08/2021 ರಂದು 07.30 ಪಿ.ಎಮ್ ಕ್ಕೆ ಫೀರ್ಯಾಧಿ ಶ್ರೀ ಮಲ್ಲಪ್ಪ ತಂದೆ ಶಿವಪ್ಪ ಚಿಮಟಗಿ ವಯಾ: 32 ಜಾತಿ:ಕಬ್ಬಲಿಗ ಉ: ಒಕ್ಕಲುತನ ಸಾ: ಯರಗೋಳ ಹೇಳಿಕೆ ಫಿರ್ಯಾಧಿ ಸಲ್ಲಿಸಿದೆನೆಂದರೆ ನಾನು ಮೇಲ್ಕಂಡ ವಿಳಾಸ ನಿವಾಸಿಯಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೇನೆ. ನನಗೆ 1)ಸಿಂಚನ, 2)ಶಿವುಮಲ್ಯ, 3)ಶಿವಮಣಿ ಹೆಸರಿನ ಮೂರು ಜನ ಮಕ್ಕಳಿರುತ್ತಾರೆ. ಎಲ್ಲರೂ ವಿದ್ಯಾಭ್ಯಾಸ ಮಾಡಿಕೊಂಡು ನಮ್ಮೊಂದಿಗೆ ಇರುತ್ತಾರೆ. ನನ್ನ ಮಗ ಶಿವುಮಲ್ಯ ವಯ:10 ವರ್ಷ ಈತನು 5ನೇ ತರಗತಿಯಲ್ಲಿ ನಮ್ಮೂರಿನಲ್ಲಿ ಶಾಲೆಗೆ ವಿದ್ಯಾಭ್ಯಾಸ ಮಾಡುತ್ತಿದ್ದನು. ಹೀಗಿರುವಾಗ ನಿನ್ನೆ ದಿನಾಂಕ:01/08/202121 ರಂದು ಮುಂಜಾನೆ 10 ಎ.ಎಮ್ ಸುಮಾರಿಗೆ ನಾನು ನನ್ನ ಸಂಗಡ ನನ್ನ ಮಗ ಶಿವುಮಲ್ಯ ಹಾಗೂ ಸಿದ್ದಪ್ಪ ತಂದೆ ತಿಪ್ಪಣ್ಣ ಅಲ್ಲಿಪೂರ ಸೇರಿಕೊಂಡು ನಮ್ಮ ಹೋಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಸಂಜೆ 06 ಪಿ.ಎಮ್ ಸುಮಾರಿಗೆ ಯಾದಗಿರಿ-ವಾಡಿ ರಸ್ತೆಯ ಮೇಲೆ ಯರಗೋಳ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ಅಡಮಡಿ ತಾಂಡ ಗೇಟ ಹತ್ತಿರ ನಾವುಗಳು ರಸ್ತೆ ದಾಟುತ್ತಿರುವಾಗ ಅಡಮಡಿ ತಾಂಡದ ಕಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನನ್ನ ಮಗನಿಗೆ ಜೋರಾಗಿ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ನನ್ನ ಮಗನು ಪುಟಿದು ರಸ್ತೆಯ ಮೇಲೆ ಬಿದ್ದಿದ್ದು, ನೋಡಲಾಗಿ ನನ್ನ ಮಗನ ಎದೆಗೆ ಬಾರಿ ತರಚಿದ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿ ಮಾತನಾಡುವ ಸ್ಥಿತಿಯಲ್ಲಿರದೇ ಬಿದ್ದಿದ್ದನು. ಅಪಘಾತಪಡಿಸಿದ ಟ್ರ್ಯಾಕ್ಟರ್ ನೋಡಲಾಗಿ ಅದರ ನಂ:ಕೆಎ-33 ಟಿಎ-5811 ಇದ್ದು, ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಎಂದು ತಿಳಿಸಿ ಟ್ರ್ಯಾಕ್ಟರನ್ನು ಬಿಟ್ಟು ಓಡಿಹೋದನು. ನಂತರ ನಾನು ಮತ್ತು ಸಿದ್ದಪ್ಪ ತಂದೆ ತಿಮ್ಮಣ್ಣ ಅಲ್ಲಿಪೂರ ಇಬ್ಬರು ಕೂಡಿಕೊಂಡು ಗಾಯಗೊಂಡು ಬಿದ್ದಿದ್ದ ನನ್ನ ಮಗ ಶಿವುಮಲ್ಯನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು, ನನ್ನ ಮಗನಿಗೆ ಪರೀಕ್ಷೆ ಮಾಡಿದ ವೈದ್ಯರು ಅಪಘಾತದಲ್ಲಿ ಆದ ಗಾಯಗಳಿಂದ ಶಿವುಮಲ್ಯ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಸದರಿ ಅಪಘಾತವು ಟ್ರ್ಯಾಕ್ಟರ್ ನಂ:ಕೆಎ-33 ಟಿಎ-5811 ರ ಚಾಲಕ ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಈತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ನನ್ನ ಮಗ ಶಿವುಮಲ್ಯ ವಯ:10 ವರ್ಷ ಈತನು ಭಾರಿಗಾಯಗೊಂಡು ಮೃತಪಟ್ಟಿರುತ್ತಾನೆ. ಕಾರಣ ಟ್ರ್ಯಾಕ್ಟರ್ ನಂ:ಕೆಎ-33 ಟಿಎ-5811 ರ ಚಾಲಕ ಶಿವುಕುಮಾರ ತಂದೆ ಭೀಮರತ ಸಾ||ಯರಗೋಳ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೋಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.109/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 02-08-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080