ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-08-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: ಯು.ಡಿ.ಆರ್ ನಂ: 15/2022 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ:01-08-2022 ರಂದು ಮದ್ಯಾಹ್ನ 1:30 ಗಂಟೆಗೆ ಶ್ರೀ ಶಾಂತಪ್ಪ ತಂದೆ ಶರಣಪ್ಪ ಡೊಣಗಾಂವ ಸಾ||ಓರುಂಚಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಹೇಳಿಕೆ ಸಾರಂಶವೆನೆಂದರೆ ಮೂರು ಜನ ಮಕ್ಕಳಿದ್ದು ಅವರಲ್ಲಿ 1) ರಂಜಿತಾ 2) ರಾದಿಕಾ ಮತ್ತು 3) ಶರತ ಅಂತಾ ಮೂರು ಜನ ಮಕ್ಕಳಲ್ಲಿ ಒಂದು ಗಂಡು ಮಗು ಎರಡು ಹೆಣ್ಣು ಮಕ್ಕಳಿದ್ದು ಮೊದಲ ಮಗಳು ರಂಜಿತಾ ಮೂರನೆ ತರಗತಿ ಓದುತ್ತಿದ್ದು ದಿನಾಲು ಶಾಲೆ ಹೋಗುತ್ತಿರುತ್ತಾಳೆ. ನಮಗೆ ಹಿರಿಯರಿಂದ ಬಂದ ಹೊಲದಲ್ಲಿ ಒಕ್ಕಲುತನ ಮಾಡಿಕೊಂಡು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿರುತ್ತೆನೆ. ನಮಗೆ ಒಂದು ಹೊಲ ಇದ್ದು ಅದು ನಮ್ಮ ಊರಿಗೆ ಹತ್ತಿಕೊಂಡಿದ್ದು ಅದರ ಸವರ್ೆ ನಂ.16 ಇದ್ದು, ನಮ್ಮ ಮನೆಯ ಹಿಂದು ಗಡೆಯ ಇರುತ್ತದೆ. ಹಿಗಿದ್ದು ಇಂದು ದಿನಾಂಕ.01-08-2022 ರಂದು ನಾನು ಎಂದಿನಂತೆ ಮುಂಜಾನೆ 05-30 ಗಂಟೆಗೆ ಎದ್ದು ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡಿದ್ದೆನು ಸ್ವಲ್ಪ ಸಮಯದ ನಂತರ ನನ್ನ ಮೊದಲ ಮಗಳು ರಂಜಿತಾ ನಾನು ಕೆಲಸ ಮಾಡುತ್ತಿದ್ದ ಹೊಲಕ್ಕೆ ಬಂದಳು ನಾನು ಇಲ್ಲಿ ಯಾಕೇ ಬಂದಿದಿ ಮನೆಗೆ ಹೋಗು ಅಂತಾ ಹೇಳಿದ್ದಕ್ಕೆ ಆಕೆ ಇಲ್ಲ ನಾನು ಇಲ್ಲೆ ಆಟ ಆಡುತ್ತೆನೆ ಅಂತ ಹೇಳಿದಳು ಆಗ ನಾನು ನನ್ನ ಕೆಲಸದಲ್ಲಿ ತೊಡಗಿಕೊಂಡೆನು, ನಾನು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿರುವಾಗ ಒಮ್ಮೆಲೆ ನನ್ನ ಮಗಳು ರಂಜಿತಾ ಏಕಾ ಏಕಿ ಚಿರಿಕೊಂಡು ಅಪ್ಪಾ ನನಗೆ ಹಾವು ಕಚ್ಚಿದೆ ಅಂತಾ ಚಿರಾಡುತ್ತಿರುವಾಗ ನಾನು ಓಡೊಡಿ ಹೋಗಿ ಸುತ್ತಮುತ್ತ ನೋಡಲಾಗಿ ಒಂದು ವಿಷಪೂರಿತ ಹಾವು ಅಲ್ಲಿಂದ ಕಸದಲ್ಲಿ ಹರಿದ ಹೋಗುತ್ತಿರುವದನ್ನು ನೋಡಿ ಅದರ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದೆನು ಆಗ ಸಮಯ 06-00 ಗಂಟೆಯಾಗಿರ ಬಹುದು ತಕ್ಷಣ ನನ್ನ ಮಗಳಿಗೆ ಎತ್ತಿಕೊಂಡು ಮನೆಗೆ ಬಂದು ನನ್ನ ಹೆಂಡತಿ ಯಲ್ಲಮ್ಮಗೆ ನಮ್ಮ ಮಗಳಿಗೆ ಹಾವು ಕಚ್ಚಿದೆ ನಾವು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗೊಣ ಅಂತಾ ತಿಳಿ ಹೇಳಿ ನಮ್ಮೂರಿನ ಸಾಬಣ್ಣ ತಂದೆ ಶೆಂಕ್ರಪ್ಪ ತಳವಾರ ಮತ್ತು ರಂಗಪ್ಪ ತಂದೆ ಶರಣಪ್ಪ ಡೊಣಗಾಂವ ಇವರಿಗೆ ಕರೆದುಕೊಂಡು ಒಂದು ಖಾಸಗಿ ವಾಹನ ಮಾಡಿಕೊಂಡು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ನಮ್ಮ ಮಗಳನ್ನು ಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳು ನಿಮ್ಮ ಮಗಳು ಮೃತ ಪಟ್ಟಿರುತ್ತಾಳೆ, ನೀವು ಕರೆದುಕೊಂಡು ಬರುವಾಗ ಮಾರ್ಗ ಮದ್ಯದಲ್ಲಿ ಸತ್ತಿರುತ್ತಾಳೆ ಅಂತಾ ತಿಳಿಸಿರುತ್ತಾರೆ.
ಕಾರಣ ನನ್ನ ಮಗಳು ರಂಜಿತಾ ತಂದೆ ಶಾಂತಪ್ಪ ಡೊಣಗಾಂವ ಇವಳು ಹೊಲದಲ್ಲಿ ಯಾವುಧೋ ಒಂದು ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿರುತ್ತಾಳೆ. ನನ್ನ ಮಗಳ ಸಾವಿನಲ್ಲಿ ಯಾರ ಮೇಲು ಯಾವುದೇ ರಿತಿಯಾದ ಸಂಶಯ ಇರುವದಿಲ್ಲ ಕಾರಣ ತಾವುಗಳು ಕಾನೂನು ರಿತಿ ಕ್ರಮ ಕೈಕೊಳ್ಳಬೆಕೆಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಹೇಳಿಕೆ ನಿಜವಿರುತ್ತದೆ.ಅಂತಾ ನಿಡಿದ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್.ನಂ.15/2022 ಕಲಂ.174 ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 07/2022 ಕಲಂ 174 ಸಿ.ಆರ್.ಪಿಸಿ : ದಿನಾಂಕ 01/08/2022 ರಂದು 06.00 ಎ.ಎಮ್ ಸುಮಾರಿಗೆ ಮೃತಧರ್ಮಣ್ಣಈತನು ಮದ್ರಕಿ ಸೀಮಾಂತರದಲ್ಲಿರುವ ಗೌಡಪ್ಪಗೌಡ ಪಾಟಿಲ್ಇವರ ಹೊಲಕ್ಕೆ ತನ್ನ ಕುರಿಗಳಿಗೆ ಮೇವು ತರಲು ಹೋಗಿ ಹೊಲದಲ್ಲಿ ಮೇವು ಮಾಡುತ್ತಿರುವಾಗ ಆಕಸ್ಮಿಕವಾಗಿ ಮೃತನ ಬಲಗೈ ನಡು ಬೆರಳಿಗೆ ಯಾವುದೋಒಂದು ವಿಷಕಾರಿ ಹಾವು ಕಚ್ಚಿದ್ದರಿಂದ ಅವನಿಗೆ ಸಾದ್ಯಾಪೂರಗ್ರಾಮದಲ್ಲಿಗೌಂಟಿಔಷಧ ಕೊಡಿಸಿದ್ದು ಆರಾಮಆಗದೇಇದ್ದಾಗ ವೈದ್ಯಕೀಯಉಪಚಾರಕುರಿತು ಜಿ.ಜಿ.ಹೆಚ್. ಶಹಾಪುರಕ್ಕೆಅಲ್ಲಿಂದ ಹೆಚ್ಚಿನಉಪಚಾರಕುರಿತುಜಿಜಿಹೆಚ್ ಕಲಬುರಗಿಗೆತೆಗೆದುಕೊಂಡು ಹೊರಟಾಗಜೇವಗರ್ಿ ಹತ್ತಿರಇಂದು 4.30 ಪಿ.ಎಮ್. ಸುಮಾರಿಗೆ ಮೃತಪಟ್ಟಿದ್ದು ಮುಂದಿನ ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.a

ಇತ್ತೀಚಿನ ನವೀಕರಣ​ : 02-08-2022 11:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080