Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-09-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 46/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 01/09/2021 ರಂದು ಸಮಯ 8-15 ಎ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಆರ್.ಟಿ.ಎ/ಡೆತ್ ಎಮ್.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ ವಿಚಾರಣೆ ನಂತರ ಪಿಯರ್ಾದಿ ಶ್ರೀ ದಶರಥಕುಮಾರ ತಂದೆ ಕೇಶವ ಮಾತೋ ವಯ;30 ವರ್ಷ, ಜಾ;ಕುಮರ್ಿ(ಎಂಬಿಸಿ), ಉ;ಕೂಲಿ, ಸಾ;ಬೊಂಗಹಾರ, ತಾ;ಮಾಂಡು, ಜಿ;ರಾಮಗಢ (ಜಾರ್ಖಂಡ್ ರಾಜ್ಯ) ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 8-45 ಎ.ಎಂ.ದಿಂದ 9-45 ಎ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಸ್ವಲ್ಪ ದಿವಸಗಳ ಹಿಂದೆ ನಾನು ಜಾರ್ಖಂಡ್ ರಾಜ್ಯದಿಂದ ನಮಗೆ ಈಗಾಗಲೇ ಪರಿಚಯ ಇರುವ ಕಾಂಟ್ರ್ಯಾಕ್ಟರ್ ಬಾಲ ಮುರಗನ್ ಇವರ ಹತ್ತಿರ ಯಾದಗಿರಿ ಜಿಲ್ಲೆಯ ಮುಂಡರಗಿ ಗ್ರಾಮದ ಹತ್ತಿರ ಕೆ.ಪಿ.ಸಿ.ಟಿ.ಎಲ್ ಕಾಮಗಾರಿಯಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದು ಇರುತ್ತದೆ ನನ್ನಂತಯೇ ನಮ್ಮ ಸಂಗಡ ನಮ್ಮ ಗ್ರಾಮದ ಬಿನೋದ ತಂದೆ ಮೋಹನ ತುರಿ ವಯ;27 ವರ್ಷ ಹಾಗೂ ಬಿನೋದಕುಮಾರ ತಂದೆ ದಿನೇಶ ಮಾಹತೋ ಇವರುಗಳು ಸಹ ಬಂದಿರುತ್ತಾರೆ. ನಮ್ಮ ಮಾಲೀಕರಾದ ಕಾಂಟ್ರ್ಯಾಕ್ಟರ್ ಬಾಲ ಮುರಗನ್ ಇವರು ತಮ್ಮ ಕೆಲಸದ ನಿಮಿತ್ಯ 2-3 ದಿವಸಗಳ ಹಿಂದೆ ಚಿತ್ರದುರ್ಗಕ್ಕೆ ಹೋಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 31/08/2021 ರಂದು ಸಾಯಂಕಾಲ ನಾವುಗಳು ನಮ್ಮ ಕೆಲಸದಿಂದ ಮರಳಿ ಮುಂಡರಗಿ ಹತ್ತಿರ ಇರುವ ನಮ್ಮ ಶೆಡ್ಗೆ ಬಂದಿರುತ್ತೇವೆ. ರಾತ್ರಿ 9-30 ಪಿ.ಎಂ.ದ ಸುಮಾರಿಗೆ ಎಲ್ಲರೂ ಊಟವಾದ ಬಳಿಕ ಬಿನೋದ ತುರಿ ಈತನು ನಮ್ಮ ಶೆಡ್ ಹತ್ತಿರ ನಿಂತಿದ್ದ ನಮ್ಮ ಕಾಮಗಾರಿಗೆ ಬಳಸುವ ಮಹಿಂದ್ರಾ ಹೊಸ ಟ್ರ್ಯಾಕ್ಟರ್ ಇಂಜಿನ್ ನೊಂದಣಿ ಇಲ್ಲದ್ದು ಅದರ ಇಂಜಿನ ನಂ.ಓಒಏ2ಎಂಇ0466 ಹಾಗೂ ಚೆಸ್ಸಿ ನಂ.ಒಃಓಖಿಈಂಎಃಇಒಓಏ01731 ನೇದ್ದನ್ನು ಯಾರಿಗೂ ಹೇಳದೇ, ಕೇಳದೇ ಆಫೀಸಿನಲ್ಲಿ ಇದ್ದ ಟ್ರ್ಯಾಕ್ಟರ ಕೀಯನ್ನು ತೆಗೆದುಕೊಂಡು ಟ್ರ್ಯಾಕ್ಟರ್ ಚಾಲು ಮಾಡಿಕೊಂಡು ಹೊರಟೇ ಹೋದನು. ನಾನು ನಂತರ ಈ ವಿಷಯವನ್ನು ನಮ್ಮ ಸೂಪರ್ ವೈಸರ್ ಅರುಣಕುಮಾರ ಇವರಿಗೆ ತಿಳಿಸಿದಾಗ ನಾನು ಯಾದಗಿರಿಯಲ್ಲಿ ಇದ್ದೇನೆ ಬರುತ್ತಿದ್ದೇನೆ ತಡೀರಿ ಅಂತಾ ಹೇಳಿದರು. ನಂತರ ರಾತ್ರಿ 10-45 ಪಿ.ಎಂ.ಕ್ಕೆ ಅರುಣಕುಮಾರ ಇವರು ನಮ್ಮ ಶೆಡ್ಗೆ ಬಂದು ನನಗೆ ತಿಳಿಸಿದ್ದೇನೆಂದರೆ ಮುಂಡರಗಿ ಗ್ರಾಮದ ಬಸವರಾಜ ತಂದೆ ಸಣ್ಣ ಗುಂಜಲಪ್ಪ ದನಕಾಯಿ ಇವರು ನನಗೆ ಈಗಷ್ಟೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ತಾವು ರಾಮಸಮುದ್ರದಿಂದ ಮುಂಡರಗಿಗೆ ಬರುವಾಗ ಮಾರ್ಗ ಮದ್ಯೆ ತಾವು ನೋಡಿದ್ದೇನೆಂದರೆ ನಮ್ಮ ಕಂಪನಿಗೆ ಸೇರಿದ ಹೊಸ ಮಹಿಂದ್ರಾ ಟ್ರ್ಯಾಕ್ಟರ್ ಇಂಜಿನ್ ನೇದ್ದನ್ನು ಬಿನೋದ ಈತನು ರಾಮಸಮುದ್ರ ಕಡೆಯಿಂದ ಮುಂಡರಗಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುವಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಆಶನಾಳ ಕ್ರಾಸ್ ಹತ್ತಿರ ಮುಖ್ಯ ಸಮಯ ಅಂದಾಜು ರಾತ್ರಿ 10-30 ಪಿ.ಎಂ.ಕ್ಕೆ ಸ್ಕಿಡ್ ಆಗಿ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾಗಿ ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಬಿನೋದ ಈತನು ಟ್ರ್ಯಾಕ್ಟರನಿಂದ ಸಿಡಿದು ಬಿದ್ದಾಗ ಟ್ರ್ಯಾಕ್ಟರ ಇಂಜಿನ್ ಆತನ ಮೇಲೆ ಬಿದ್ದಿದ್ದು ಸದರಿ ಅಪಘಾತದಲ್ಲಿ ಆತನ ತಲೆಗೆ ಭಾರೀ ಗಂಬೀರ ಗಾಯವಾಗಿ ಎರಡು ಕಿವಿಗಳಿಂದ ರಕ್ತ ಹೊರಬಂದಿದ್ದು, ಅಲ್ಲದೇ ಅಲ್ಲಲ್ಲಿ ಭಾರೀ ತರಚಿದ ರಕ್ತಗಾಯ ಮತ್ತು ಗುಪ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಘಟನಾ ಸ್ಥಳಕ್ಕೆ ಪೊಲೀಸ್ ವಾಹನಗಳು ಬಂದಿದ್ದು ನೀವು ಕೂಡಲೇ ಬರ್ರೀ ಅಂತಾ ತಿಳಿಸಿದ್ದು ನಡೀರಿ ಘಟನಾ ಸ್ಥಳಕ್ಕೆ ಹೋಗೋಣ ಅಂತಾ ನನಗೆ ಮತ್ತು ಬಿನೋದಕುಮಾರ ಮಾಹತೋ, ಅಜಗುತುರೈ ರವರಿಗೆ ಮಾಹಿತಿ ತಿಳಿಸಿ ನಮ್ಮ ಸಂಗಡ ಅವರಿಗೆ ಕರೆದುಕೊಂಡು ಹೊರಟೆವು. ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಘಟನೆಯ ಸ್ಥಳದಲ್ಲಿ ಬಸವರಾಜ ಮುಂಡರಗಿ ಇವರು ಕೂಡ ಇದ್ದರು. ನಂತರ ಅರುಣಕುಮಾರ ಇವರು ಈ ಘಟನೆ ಬಗ್ಗೆ ನಮ್ಮ ಮಾಲೀಕರಾದ ಬಾಲಮುರಗನ್ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿರುತ್ತಾರೆ. ನಾನು ಕೂಡ ಈ ಘಟನೆಯ ಬಗ್ಗೆ ಬಿನೋದ ತುರಿ ಇವರ ಹೆಂಡತಿ ಬಬಿತಾದೇವಿ ಹಾಗೂ ಅವರ ತಂದೆ ಮೋಹನ ತುರಿ ಇವರಿಗೆ ಪೋನ್ ಮಾಡಿ ಘಟನೆಯ ಬಗ್ಗೆ ವಿವರವಾಗಿ ತಿಳಿಸಿರುತ್ತೇನೆ. ಆಗ ಬಿಬಿತಾದೇವಿ ಇವರು ನಾವು ಸದ್ಯ ಜಾರ್ಖಂಡ್ ನಲ್ಲಿದ್ದು ಅಲ್ಲಿಗೆ ಬರಲು ಬಹಳ ಸಮಯ ಹಿಡಿಯುತ್ತದೆ ನೀವು ಘಟನೆಯ ಬಗ್ಗೆ ದೂರು ನೀಡಿ ಎಫ್.ಐ.ಆರ್ ದಾಖಲು ಮಾಡಿ ನಂತರ ನನ್ನ ಮೃತ ಗಂಡನ ಮಹಜರ್ ಪಂಚನಾಮೆಯ ನಂತರ ಮಾನ್ಯ ವೈದ್ಯರು ಪಿ.ಎಂ.ಇ ಮಾಡಿದ ನಂತರ ಮೃತದೇಹವನ್ನು ನಮ್ಮ ಗ್ರಾಮಕ್ಕೆ ತೆಗೆದುಕೊಂಡು ಬರಲು ತಿಳಿಸಿರುತ್ತಾರೆ. ನಾನು ಮತ್ತು ಬಿನೋದಕುಮಾರ ತಂದೆ ದಿನೇಶ ಮಾಹತೋ ಇಬ್ಬರು ಮೃತ ಬಿನೋದ ತಂದೆ ಮೋಹನ ತುರಿ ಈತನ ಮೃತದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಗುತರ್ಿಸಿರುತ್ತೇವೆ. ಹೀಗಿದ್ದು ಇಂದು ದಿನಾಂಕ 01/09/2021 ರಂದು ನಮ್ಮ ಮಾಲೀಕರು ಕೂಡ ನನಗೆ ಬರುವುದು ತಡವಾಗುತ್ತಿದೆ ನೀವು ದೂರು ನೀಡಿ ಮುಂದಿನ ಕಾರ್ಯಗಳನ್ನು ಪೂರೈಸಲು ನಮಗೆ ತಿಳಿಸಿದ್ದರಿಂದ ಮತ್ತು ಮೃತನ ಹೆಂಡತಿಯು ಈ ಘಟನೆ ಬಗ್ಗೆ ದೂರು ನೀಡಲು ತಿಳಿಸಿದ್ದರಿಂದ, ನಿನ್ನೆ ದಿನಾಂಕ 31/08/2021 ರಂದು ರಾತ್ರಿ 10-30 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಖ್ಯ ರಸ್ತೆಯ ಆಶನಾಳ ಕ್ರಾಸ್ ಹತ್ತಿರ ಹೊಸ ಟ್ರ್ಯಾಕ್ಟರ್ ಇಂಜಿನ್ ನೊಂದಣಿ ಇಲ್ಲದ್ದು, ಅದರ ಇಂಜಿನ ನಂ.ಓಒಏ2ಎಂಇ0466 ಹಾಗೂ ಚೆಸ್ಸಿ ನಂ.ಒಃಓಖಿಈಂಎಃಇಒಓಏ01731 ನೇದ್ದರ ಚಾಲಕ ಮೃತ ಬಿನೋದ ತುರಿ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಆತನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ನಾನು ಹಿಂದಿ ಭಾಷೆಯಲ್ಲಿ ಹೇಳಿದ್ದನ್ನು ತನಿಖಾಧಿಕಾರಿಯವರು ಕನ್ನಡಕ್ಕೆ ಅನುವಾದಿಸಿಕೊಂಡು ಲ್ಯಾಪ್ಟ್ಯಾಪ್ ನಲ್ಲಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಕೊಟ್ಟ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಸಮಯ 10 ಎ.ಎಂ.ಕ್ಕೆ ಬಂದು ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 46/2021 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಯಾದಗಿರ ಮಹಿಳಾ ಪೊಲೀಸ್ ಠಾಣೆ
ಗುನ್ನೆ ನಂ: 57/2021 ಕಲಂ: 363 ಐ.ಪಿ.ಸಿ : ಇಂದು ದಿನಾಂಕ: 01.09.2021 ರಂದು ಸಂಜೆ 6.30 ಗಂಟೆಗೆ ಪಿರ್ಯಾಧಿ ಶಿ ರವರು ಯಾದಗಿರಿ ಮಹಿಳಾ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಂಶವೇನೆಂದರೆ , ದಿನಾಂಕ: 31.08.2021 ರಂದು ಬೆಳಿಗ್ಗೆ 9.30 ಗಂಟೆಗೆ ನನ್ನ 2 ನೇ ಮಗಳಾದ ವಯಾ-14 ವರ್ಷ ಈಕೆಯು ಎಂದಿನಂತೆ ಗ್ರಾಮದ ಸರಕಾರಿ ಫ್ರೌಡ ಶಾಲೆಗೆ ಹೋಗಿದ್ದಳು. ಮರಳಿ ಮನೆಗೆ ಮದ್ಯಾಹ್ನ 1.30 ಗಂಟೆಗೆ ಬರಬೇಕಾದವಳು ಬರದೇ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ನನ್ನ ಮಗಳನ್ನು ಹುಡುಕಲು ಶಾಲೆಯ ಹತ್ತಿರ ಹೋಗಿದ್ದಾಗ ನನ್ನ ಮಗಳು ಕಾಣಿಸಿರುವುದಿಲ್ಲ. ನಂತರ ಊರಲ್ಲಿ ಎಲ್ಲಾ ಕಡೆ ಹುಡುಕಾಡಲು ಸಿಕ್ಕಿರುವುದಿಲ್ಲ. ನಮ್ಮ ಮನೆಯ ಹಿಂದುಗಡೆ ಮನೆಯವನಾದ ಕುರುಕುಂದಿ ಗ್ರಾಮದ ಪರುಶುರಾಮ್ ತಂದೆ ಸಾಯಿಬಣ್ಣ ಈತನು ತನ್ನ ಅಜ್ಜಿಯ ಮನೆಗೆ ಬಂದಿದ್ದನು. ಸದರಿಯವನು ಆಗಾಗೆ ನಮ್ಮ ಮನೆಯ ಹತ್ತಿರ ನೋಡುವುದು ಮಾಡುತ್ತಿದ್ದನು. ಸದರಿಯವನು ನನ್ನ 2 ನೇ ಮಗಳಾದ ಶಾಲೆಯ ಹತ್ತಿರದಿಂದ ಅಪಹರಣ ಮಾಡಿಕೊಂಡು ಹೋಗಿರಬಹುದೆಂದು ನಮಗೆ ಅನುಮಾನವಿದ್ದು, ಸದರಿ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಹಾಗೂ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋದವನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಅಂತ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 57/2021 ಕಲಂ: 363 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 205/2021 ಕಲಂ 454, 380 .ಐ.ಪಿ.ಸಿ. : ಇಂದು ದಿನಾಂಕ:01-09-2021 ರಂದು 5:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ನಾಗಪ್ಪ ತಂದೆ ಮಲ್ಲಪ್ಪ ಹಡಪದ ವಯ: 35 ವರ್ಷ ಜಾ:ಹಡಪದ ಉ: ಕ್ಷೌರಿಕ ಸಾ: ಗೌಡಗೇರಾ ತಾ: ಸುರಪುರ ಹಾಲಿ ವಸತಿ ಗಾಂಧಿಚೌಕ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರಲ್ಲಿ ಟೈಪ ಮಾಡಿಸಿದ ಅಜಿ ಹಾಜರು ಪಡಿಸಿದ್ದು ಏನಂದರೆ ನಾನು ಶಹಾಪುರ ನಗರದಲ್ಲಿ ಸ್ವಂತ ಮನೆಯಿದ್ದು ಶಹಾಪುರದಲ್ಲಿ ಕ್ಷೌರಿಕ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ದಿನಾಂಕ: 29-05-2021 ರಂದು ನಾನು ಮತ್ತು ನನ್ನ ಹೆಂಡತಿ ಐಶ್ವರ್ಯ ಇಬ್ಬರೂ ಕೂಡಿ ನಮ್ಮ ಊರಿಗೆ ಹೋಗಿದ್ದೆವು. ಹೀಗಿದ್ದು ದಿನಾಂಕ: 30-05-2021 ರಂದು 5:00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವರಾದ ಶಿವು ತಂದೆ ಮಲ್ಲಪ್ಪ ಹಡಪದ ರವರು ನನಗೆ ಫೊನ ಮಾಡಿ ತಿಳಿಸಿದ್ದೇನಂದರೆ ಮುಂಜಾನೆ 11 ಗಂಟೆಗೆ ನಿಮ್ಮ ಮನೆಯ ಕಡೆ ನೋಡಿದಾಗ ಬಾಗಿಲು ಸರಿ ಇತ್ತು ನಾನು ಈಗ ಬಂದು ನೋಡುತ್ತಿದ್ದೇನೆ ಬಾಗಿಲು ಕೀಲಿ ಮುರಿದಿದೆ ನೀವು ಬನ್ನಿ ಕಳ್ಳತನವಾಗಿರಬಹುದು ಎಂದು ಹೇಳಿದನು. ಆಗ ನಾನು ಮತ್ತು ನನ್ನ ಹೆಂಡತಿ ಶಹಾಪುರಕ್ಕೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿತ್ತು. ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ತಿಜೋರಿಯ ಕೀಲಿ ಮುರಿದಿದ್ದು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಇಟ್ಟಿದ್ದ 25 ಗ್ರಾಂ ಬಂಗಾರದ ಲಾಕೆಟ್ ಅ.ಕಿ.80,000=00 ರೂ. ಮತ್ತು ಒಂದು ಜುಮುಕಿ ಬೆಂಡೋಲಿ ಅ.ಕಿ.5000=00 ರೂ. ಒಟ್ಟು 85000=00 ರೂ. ಮೌಲ್ಯದ ಬಂಗಾರದ ಆಭರಣಗಳು ಇರಲಿಲ್ಲ ನಾವು ಚೆಲ್ಲಾ ಪಿಲ್ಲಿಯಾದ ವಸ್ತುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇತ್ತು. ನಾನು ಮತ್ತು ನನ್ನ ಹೆಂಡತಿ ಗಾಬರಿಯಾಗಿ ಚಿಂತೆಯಲ್ಲಿ ಇಲ್ಲಿಯವರೆಗೆ ದೂರು ನಿಡಿರುವುದಿಲ್ಲ ಇಂದು ದಿನಾಂಕ: 01-09-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ದಿನಾಂಕ: 30-05-2021 ರಂದು 11:00 ಎ.ಎಮ್.ದಿಂದ 5:00 ಪಿ.ಎಮ್.ದ ಮದ್ಯದ ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಒಳಗಿದ್ದ 85,000=00 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದದ ಮೇಲಿಂದ ಠಾಣೆ ಗುನ್ನೆ ನಂ. 205/2021 ಕಲಂ. 454, 380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 134/2021 ಕಲಂ: 269, 270, ಐಪಿಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸೆಸ್ ಆಕ್ಟ-2020 : ಇಂದು ದಿನಾಂಕ: 01/09/2021 ರಂದು ಮಧ್ಯಾಹ್ನ 6:00 ಗಂಟೆಗೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಶಿವಪುತ್ರ ತಂದೆ ಸಿದ್ದಣ್ಣ ನಡಗೇರಿ ವ|| 30 ವರ್ಷ ಜಾ|| ಪ.ಜಾತಿ ಉ|| ಕಿರಿಯ ಆರೋಗ್ಯ ನಿರೀಕ್ಷಕರು ಸರ್ಕಲ್ ನಂ.01 ಸುರಪುರ ಸಾ|| ಹೊಸಳ್ಳಿ ಕ್ರಾಸ ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ದೂರು ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ ಜಗತ್ತಿನಾಧ್ಯಂತ ಕೊವಿಡ್-19 ರೋಗಾಣಿವಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಗ್ರಾಮಗಳಲ್ಲಿ ಯಾವುದೆ ಜಾತ್ರೆ, ರಥೊತ್ಸವ ನಡೆಸದಂತೆ ಸರಕಾರಿ ಆದೇಶಿದ್ದು ಇರುತ್ತದೆ. ಈ ವಿಷಯ ಕುರಿತು ಈಗಾಗಲೆ ನಮ್ಮ ಕಂದಾಯ ಇಲಾಖೆಯ ಕಡೆಯಿಂದ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ದ್ವನಿವರ್ದಕ ಹಾಗೂ ಡಂಗೂರ ಸಾರುವ ಮೂಲಕ ಮಾಹಿತಿ ನೀಡಿ ಜಾಗೃತೆ ಮೂಡಿಸಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ:31/08/2021 ರಂದು 4 ಪಿಎಂ ರಿಂದ 6 ಪಿಎಂ ದ ಅವಧಿಯಲ್ಲಿ ನಾನು ಮತ್ತು ನಗರ ಸಬೆಯ ಕಂದಾಯ ಅಧಿಕಾರಿಯಾದ ಪವನಕುಮಾರ ತಂದೆ ಯಂಕೋಬರಾವ್ ಕುಲ್ಕಣರ್ಿ ಇಬ್ಬರು ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹತ್ತಿರ ಇದ್ದಾಗ ವೇಣುಗೋಪಾಲ ಸ್ವಾಮಿ ಸ್ಥಂಭ ಉತ್ಸವ ಹಾಗೂ ಜಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸದರಿ ಜಾತ್ರಾ ಕಮ್ಮಿಟಿಯವರು ಹಾಗೂ ಸುರಪುರ ನಗರದ ಇತರೆ ಜನರು ಕೂಡಿ ನಗರದಲ್ಲಿ ಸ್ಥಂಭ ಉತ್ಸವ ಹಾಗೂ ಜಾತ್ರಾ ಕಾರ್ಯಕ್ರಮವನ್ನು ಮಾಡಿ ಕೋವಿಡ್-19 ಸಾಂಕ್ರಾಮೀಕ ಕಾಯಿಲೆ ಉಲ್ಬಣಿಸಿ ಸಾರ್ವಜನೀಕರ ಜೀವಕ್ಕೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ವಿರುತ್ತದೆ ಅಂತಾ ತಿಳಿದರು ಸಹೀತ ಸದರಿ ಮೇಲ್ಕಂಡ ಗ್ರಾಮಸ್ಥರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಗರದಲ್ಲಿ ಪಲ್ಲಕಿ ಉತ್ಸವ ನಡೆಸಿದ್ದು ಇರುತ್ತದೆ. ಸದರಿಯವರು ಕೋವಿಡ್-19 ಸಾಂಕ್ರಾಮೀಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ನಿರ್ಲಕ್ಷಿತನದಿಂದ ಕೃತ್ಯ ಎಸಗಿರುವದು ಕಂಡು ಬಂದಿರುತ್ತದೆ. ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ಅಜರ್ಿ ನೀಡಿದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.134/2021 ಕಲಂ: 269, 270, ಐಪಿಸಿ ಮತ್ತು ಕಲಂ: 5(1) ಕನರ್ಾಟಕ ಎಪಿಡೆಮಿಕ್ ಡಿಸೀಸೆಸ್ ಆಕ್ಟ-2020 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 65/2021 ಕಲಂ. 19 ಕನರ್ಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ಅಧಿನಿಯಮ-2007 : ದಿನಾಂಕ:01/09/2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಯಾದಗಿರಿ ರವರು ಕೂಡಿ ಆರೋಪಿತನ ಆಸ್ಪತ್ರೆಗೆ ಬಂದು ಪರಿಶೀಲನೆ ಮಾಡಿದಾಗ ಸದರಿ ಆರೋಪಿತನು ಬಿ.ಎ.ಎಮ್.ಎಸ್. ಪದವಿ ಹೊಂದಿದ್ದು, ಸದರಿಯವನು, ಖಾಸಗಿ ವೈದ್ಯಕೀಯ ಚಿಕಿತ್ಸೆ ನೀಡಲು ನೊಂದಣಿ ಮಾಡಿಸದೇ ಹಾಗೆಯೇ ರೋಗಿಗಳಿಗೆ ಚಿಕಿತ್ಸೆ ನೀಡಿ, ಕಲಂ. 19 ಕನರ್ಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ಅಧಿನಿಯಮ-2007 ಉಲ್ಲಂಘನೆ ಮಾಡಿದ ಬಗ್ಗೆ ಅಪರಾಧ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 127/2021 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ : ಇಂದು ದಿನಾಂಕ 01.09.2021 ರಂದು 07.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಾಯಬಣ್ಣ ತಂದೆ ಭೀಮರಾಯ ಮಾದರ ವ|| 32 ಜಾ|| ಮಾದರ ಉ|| ಕೂಲಿಕೆಲಸ ಸಾ|| ಶಖಾಪೂರ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನಿನ್ನೆ ದಿನಾಂಕ 31.08.2021 ರಂದು ರಾತ್ರಿ 08.45 ಗಂಟೆಯ ಸುಮಾರಿಗೆ ನಮ್ಮೂರಿನಿಂದ ನಾನು ಹಾಗು ನಮ್ಮ ಸಹೋದರ ಮಾವನವರಾದ ಸಕ್ರೆಪ್ಪ @ ಮುದಕಪ್ಪ ತಂದೆ ನಿಂಗಪ್ಪ ಮಾದರ ಇಬ್ಬರೂ ಕೂಡಿಕೊಂಡು ರಾಂಪೂರದಲ್ಲಿ ಕೆಲಸವಿದ್ದ ನಿಮಿತ್ಯ ಮೋಟರ ಸೈಕಲ್ ನಂಬರ ಕೆಎ-33 ಹೆಚ್-544 ನೇದ್ದನ್ನು ತೆಗೆದುಕೊಂಡು ನಾವಿಬ್ಬರೂ ಹೋಗುತ್ತಿದ್ದು ಸದರ ಮೋಟರ್ ಸೈಕಲನ್ನು ನಮ್ಮ ಮಾವನವರಾದ ಸಕ್ರೆಪ್ಪ@ಮುದಕಪ್ಪ ಈತನೇ ನಡೆಸುತ್ತಿದ್ದನು. ಹೀಗಿರುತ್ತಾ ರಾತ್ರಿ 9 ಗಂಟೆಯ ಸುಮಾರಿಗೆ ಶಖಾಪೂರದಿಂದ ರಾಂಪೂರಗೆ ಹೋಗುವ ರಸ್ತೆಯ ಬನ್ನಪ್ಪಗೌಡ ರಾಂಪೂರ ಇವರ ಹೊಲದ ಪಕ್ಕದ ರೋಡಿನಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರಿನಿಂದ ಒಂದು ಟಂಟಂ ನೇದ್ದರ ಚಾಲಕನು ತನ್ನ ಟಂಟಂನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಮ್ಮ ಮೋಟರ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದನು. ಆಗ ನಾವಿಬ್ಬರೂ ನೆಲಕ್ಕೆ ಬಿದ್ದಿದ್ದು ನನಗೆ ಯಾವದೇ ಗಾಯಗಳಾಗಿರುವದಿಲ್ಲ ಆದರೆ ನಮ್ಮ ಮೋಟರ ಸೈಕಲ ನಡೆಸುತ್ತಿದ್ದ ಮಾವ ಸಕ್ರೆಪ್ಪ@ಮುದಕಪ್ಪ ಈತನಿಗೆ ನೋಡಲಾಗಿ ಬಲಗೈ ಮುಂಗೈಗೆ, ಹಣೆಗೆ ರಕ್ತಗಾಯವಾಗಿ ಮೂಗಿಗೆ ಭಾರೀ ರಕ್ತಗಾಯವಾಗಿರುತ್ತದೆ. ಅಲ್ಲದೇ ಕುತ್ತಿಗೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ಟಂಟಂ ಚಾಲಕನು ಅಪಘಾತ ಪಡಿಸಿದ ತಕ್ಷಣ ತನ್ನ ಟಂಟಂನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಅದರ ನಂಬರ ನೋಡಲಾಗಿ ಕೆಎ-33 ಎ-2505 ಅಂತ ಇತ್ತು. ಅದರ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ರಮೇಶ ತಂದೆ ಭೀಮಣ್ಣ ಬಡಿಗೇರ ಸಾ|| ಮುದನೂರ [ಕೆ] ಅಂತ ಗೊತ್ತಾಗಿರುತ್ತದೆ. ನಮ್ಮ ಮಾವನಾದ ಸಕ್ರೆಪ್ಪ @ ಮುದಕಪ್ಪ ಈತನ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಉಪಚಾರ ಪಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ವಾಸುದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ಮೋಟರ ಸೈಕಲಗೆ ಡಿಕ್ಕಿಪಡಿಸಿ ಮಾವನಾದ ಸಕ್ರೆಪ್ಪ@ಮುದಕಪ್ಪ ಇವರಿಗೆ ಭಾರೀ ಹಾಗು ಸಾದಾ ಗಾಯಪಡಿಸಿದ ಟಂಟಂ ನಂಬರ ಕೆಎ-33,ಎ-2505 ನೆದ್ದರ ಚಾಲಕ ರಮೇಶ ತಂದೆ ಭೀಮಣ್ಣ ಬಡಿಗೇರ ಸಾ|| ಮುದನೂರ [ಕೆ] ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 127/2021 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 02-09-2021 03:36 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080