ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-09-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ: 448, 504, 506 ಸಂ. 34 ಐಪಿಸಿ : ಇಂದು ದಿನಾಂಕ. 01/09/2022 ರಂದು 6-30 ಪಿಎಮ್ಕ್ಕೆ ಶ್ರೀಮತಿ ಮುತ್ತಮ್ಮ ಗಂಡ ಶಾಂತವೀರಪ್ಪ ನಾಯಕ ವ; 54 ವರ್ಷ ಜಾ; ಕಬ್ಬಲಿಗ ಉ; ಮನೆಗೆಲಸ ಸಾ; ಕಟಗಿ ಶಹಾಪೂರ ತಾ; ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಯಾದಗಿರಿ ಗಂಜ್ ಏರಿಯಾದಲ್ಲಿರುವ ನನ್ನ ಮನೆ ನಂ 2-14-122/19.20.21.22 ಪಿಐಡಿ ನಂ 34-7-90 ಸದರಿ ಮನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಅನುಸಾರ ದಿನಾಂಕ 18/01/2022 ರಂದು ನಮ್ಮ ಆಸ್ತಿಯನ್ನು ಪೌರಾಯುಕ್ತರ ತಂಡ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ನಮ್ಮ ಮನೆ ನಮ್ಮ ಸ್ವಾಧೀನಕ್ಕೆ ನೀಡುತ್ತಾ ಪೌರಾಯುಕ್ತರು ನಮ್ಮ ಮನೆಗೆ ಬೀಗ ಹಾಕಿ ಕೀಲಿಗಳನ್ನು ನಮಗೆ ಒಪ್ಪಿಸಿ ಪಂಚನಾಮೆ ಮಾಡಿ ಸದರಿ ಆಸ್ತಿಯು ಶ್ರೀಮತಿ ಮುತ್ತಮ್ಮ ಗಂಡ ಶಾಂತವೀರ ನಾಯಕ ಇವರಿಗೆ ಸೇರಿದ್ದು ಆದ್ದರಿಂದ ಅವರು ಅನುಭವಿಸಲು ನಾವು ಅನುಕೂಲ ಮಾಡಿಕೊಟ್ಟಿರುತ್ತೇವೆ. ಕಾರಣ ಸದರಿ ಆಸ್ತಿಯಲ್ಲಿ ನಾಯಿಕೋಡಿ ತಂದೆ ನಾರಾಯಣಪ್ಪ ನಾಯಕ ಹಾಗೂ ಇತರರು ಯಾವುದೇ ಕಾರಣಕ್ಕೂ ಅತಿಕ್ರಮ ಮಾಡಕೂಡದೆಂದು ನಾಲ್ಕು ಜನ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಕೊಟ್ಟಿರುತ್ತಾರೆ. ಆಗ ನಾವು ನಮ್ಮ ಮನೆಯನ್ನು ಬೀಗ ಹಾಕಿಕೊಂಡು ಬಂದ ಸಂದರ್ಭದಲ್ಲಿ ನಾಯಿಕೋಡಿ ತಂದೆ ನಾರಾಯಣಪ್ಪ ನಾಯಕ ವ:59 ವರ್ಷ, ಮಹಾದೇವಿ ಗಂಡ ನಾಯಿಕೋಡಿ ನಾಯಕ ವ:48, ಮಲ್ಲಿಕಾಜರ್ುನ ತಂದೆ ನರಸಪ್ಪ ಧರ್ಮಂಪೂರ ವ:50 ಹಾಗೂ ಇತರರು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ ಅಕ್ರಮವಾಗಿ ನಮ್ಮ ಮನೆಯ ಕೀಲಿಗಳನ್ನು ಮುರಿದು ಕಬ್ಜಾ ಮಾಡಿರುತ್ತಾರೆ. ಹಾಗೂ ಬೇರೆಯವರಿಗೆ ನನ್ನ ಮನೆಯನ್ನು ಬಾಡಿಗೆಗೆ ನೀಡಿರುತ್ತಾರೆ. ಕಾರಣ ಈ ವಿಷಯ ನಮಗೆ ಗೊತ್ತಾದ ನಂತರ ದಿನಾಂಕ 15/08/2022 ರಂದು ಬೆಳಿಗ್ಗೆ 11.00 ಸುಮಾರಿಗೆ ನಾನು ಮತ್ತು ನನ್ನ ಪತಿ ಶಾಂತವೀರ ಇಬ್ಬರು ಅವರಿಗೆ ನೀವು ಹಿಗೇಕೆ ಮಾಡಿರುತ್ತೀರಿ ಅಂತಾ ಕೇಳಲು ಸದರಿ ಮನೆಯ ಹತ್ತಿರ ಹೋದಾಗ ಅಲ್ಲಿ ನನ್ನ ಭಾವನಾದ ನಾಯಿಕೋಡಿ ತಂದೆ ನಾರಾಯಣಪ್ಪ ನಾಯಕ, ನನ್ನ ಅಕ್ಕ ಮಹಾದೇವಿ ಗಂಡ ನಾಯಿಕೋಡಿ ನಾಯಕ, ಮಲ್ಲಿಕಾಜರ್ುನ ತಂದೆ ನರಸಪ್ಪ ಧರ್ಮಂಪೂರ ಇವರುಗಳು ಇದ್ದು ಆಗ ನಾವು ಅವರಿಗೆ ನಮ್ಮ ಮನೆಯನ್ನು ನಾವು ಬೀಗ ಹಾಕಿಕೊಂಡು ಹೋದಾಗ ನೀವು ಕಾನೂನು ವಿರುದ್ದವಾಗಿ ಕೀಲಿ ಮುರಿದು ಮನೆಯಲ್ಲಿ ಯಾಕೆ ವಾಸ ಮಾಡುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ, ನಾಯ್ಕೋಡಿ ಇತನು ನಿಂದೆಲ್ಲಿದೆ ಮನೆ ನೀವು ಏನು ಮಾಡುತ್ತಿರೋ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಅಂತಾ ಅಂದನು. ಮಹಾದೇವಿ ಇವಳು ನೀವು ಇನ್ನೊಮ್ಮೆ ಈ ಮನೆ ಹತ್ತಿರ, ಮನೆ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಕಲಾಸ್ ಮಾಡುತ್ತೇವೆ ಅಂತಾ ಬೈದು ಜೀವದ ಬೆರದಿಕೆ ಹಾಕಿದಳು. ಮಲ್ಲಿಕಾಜರ್ುನ ಇತನು ಬೋಸಡಿ ಮಕ್ಳ್ಯಾ ಇಲ್ಲಿಗೆ ಬಂದು ನೀವು ಈ ಮನ್ಯಾಗ್ ಇದ್ದು ಕಾಲ ಮಾಡಂಗಿರೇನ್ ಮಕ್ಳ್ಯಾ ಅಂತಾ ಬೈದು, ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ದಬ್ಬಾಳಿಕೆ ಮಾಡುತ್ತಾ ದಮ್ಕಿಹಾಕಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಭಯ ಹಾಕಿದಾಗ ಸದರಿ ಸ್ಥಳಲ್ಲಿದ್ದ ಭೀಮರಾಯ ತಂದೆ ಮರೆಪ್ಪ ಕೊಟ್ರೀಗಿ ವ:38 ಸಾ: ಕಟಗಿಶಹಾಪೂರ ಹಾಗೂ ಚನ್ನವೀರಯ್ಯ ತಂದೆ ಚನ್ನಬಸ್ಸಯ್ಯ ಸ್ವಾಮಿ ವ: 38 ಸಾ: ಯಾದಗಿರಿ ಇವರು ಜಗಳ ಬಿಡಿಸಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದ ಕುರಿತು ಹಿರಿಯರಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2022 ಕಲಂ. 448, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ:151/2022 ಕಲಂ: 279, 337, 338 ಐ.ಪಿ.ಸಿ : ಇಂದು ದಿನಾಂಕ:01/09/2022 ರಂದು 6-30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಬಲಭೀಮ ತಂದೆ ನಾಗಪ್ಪ ರೋಟ್ನಡಗಿ ವಯಾ: 18 ಜಾತಿ: ಎಸ್.ಸಿ(ಮಾದಿಗ) ಉ: ಕೂಲಿಕೆಲಸ ಸಾ: ಹಳಿಸಗರ ಶಹಾಪೂರ. ಮೋ.ನಂ: 9880734899 ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ಹೀಗಿದ್ದು ನಿನ್ನೆ ದಿನಾಂಕ: 31/08/2022 ರಂದು ರಾತ್ರಿ 08-20 ಗಂಟೆ ಸುಮಾರಿಗೆ ಶಹಾಪೂರ ನಗರದ ಅಮಾನ್ ದಾಬಾದ ಮುಖ್ಯ ರಸ್ತೆಯ ಪಕ್ಕಕ್ಕೆ ನಾನು ನಿಂತಿದ್ದೆನೆ ಅದೇ ವೇಳೆಗೆ ನಮ್ಮ ಗೆಳೆಯನಾದ ಮಂಜುನಾಥ ತಂದೆ ಗೂಳಪ್ಪ ವಯಾ: 19 ಜಾತಿ: ಎಸ್.ಸಿ(ಮಾದಿಗ) ಸಾ: ಹಳಿಸಗರ ಈತನು ತನ್ನ ಸ್ಕೂಟಿ ಮೋಟಾರ ಸೈಕಲ್ ನಂ: ಕೆ.ಎ. ಕೆ.ಎ.33/ಇಬಿ-1602 ನೇದ್ದನ್ನು ನಡೆಸಿಕೊಂಡು ಆತನ ಹಿಂದುಗಡೆ ಭೀಮರಾಯ ತಂದೆ ನಿಂಗಪ್ಪ ಕಟ್ಟಿಮನಿ ವಯಾ: 20 ಸಾ: ಹಳಿಸಗರ ಇಬ್ಬರು ಬರುತ್ತಿದ್ದರು ನಾನು ಅವರಿಗೆ ಕೈ ಮಾಡಿದ್ದರಿಂದ ಅವರು ನನ್ನ ಹತ್ತಿರ ಬಂದು ಮಾತನಾಡುತ್ತಾ ನಿಂತಿದ್ದೆವೆ, ಆಗ ರಾತ್ರಿ 8-30 ಗಂಟೆ ಸುಮಾರಿಗೆ ಶಹಾಪೂರ ಬಸ್ ನಿಲ್ದಾಣ ಕಡೆಯಿಂದ ಒಂದು ಬಸ್ ನೇದ್ದರ ಚಾಲಕನು ತನ್ನ ಬಸ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಂಜುನಾಥ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಸ್ಕೂಟಿ ಮೋಟಾರ ಸೈಕಲ್ಗೆ ಡಿಕ್ಕಿ ಪಡಿಸಿದನು, ಸ್ಕೂಟಿ ಮೇಲೆ ಇದ್ದ ಇಬ್ಬರು ರಸ್ತೆ ಮೇಲೆ ಬಿದ್ದು ಅವರು ನನ್ನ ಮೇಲೆ ಬಂದು ಬಿದ್ದರು, ನನಗೆ ಬೆನ್ನಿಗೆ ತರಚಿದ ರಕ್ತಗಾಯ, ಎಡ ಮುಡ್ಡಿಗೆ, ಎಡ-ತಲೆಗೆ ರಕ್ತಗಾಯ, ಎಡಕಾಲು ಕೆಳಗೆ ಒಳಪೆಟ್ಟು ಆಗಿರುತ್ತದೆ. ಸ್ಕೂಟಿ ಮೇಲೆ ಮುಂದುಗಡೆ ಕುಳಿತಿದ್ದ ಮಂಜುನಾಥ ತಂದೆ ಗೂಳಪ್ಪ ಈತನಿಗೆ ನೋಡಲಾಗಿ ಈತನಿಗೆ ತಲೆಗೆ ರಕ್ತಗಾಯ, ಒಳಪೆಟ್ಟು, ಎಡಕಾಲು ಮೋಳಕಾಲಿಗೆ, ಬೆನ್ನಿಗೆ, ಹಾಗೂ ಎಡ-ಮೊಳಕಾಲಿಗೆ ರಕ್ತಗಾಯ, ಹಾಗೂ ಎರಡು ಕಾಲುಗಳಿಗೆ ತರಚಿದ ರಕ್ತಗಾಯ ಆಗಿರುತ್ತವೆ. ಸ್ಕೂಟಿ ಹಿಂದುಗಡೆ ಕುಳಿತ ಭೀಮರಾಯ ತಂದೆ ನಿಂಗಪ್ಪ ಕಟ್ಟಿಮನಿ ವಯಾ: 20 ಉ: ವಿದ್ಯಾಥರ್ಿ ಈತನಿಗೆ ನೋಡಲಾಗಿ ಆತನಿಗೆ ಕೂಡಾ ಎಡಕಾಲು ತೋಡೆಯ ಕೀಲಿಗೆ ಭಾರಿ ರಕ್ತಗಾಯ, ಬೆನ್ನಿಗೆ ತರಚಿದ ರಕ್ತಗಾಯ, ಮುಖಕ್ಕೆ ತರಚಿದ ರಕ್ತಗಾಯ, ಎಡ ಬುಜಕ್ಕೆ ತರಚಿದ ರಕ್ತಗಾಯ ಆಗಿರುತ್ತದೆ. ಎಡಕಣ್ಣಿನ ಕೆಳಗಡೆ ರಕ್ತಗಾಯ ಆಗಿರುತ್ತದೆ. ನಮಗೆ ಡಿಕ್ಕಿ ಪಡಿಸಿದ ಬಸ್ ನಂಬರ ನೋಡಲಾಗಿ ಅದು ಶ್ರೀ ದುಗರ್ಾಂಬ ಟ್ರಾವಲ್ಸ ಖಾಸಗಿ ಬಸ್ ನಂ: ಕೆ.ಎ-51/ಬಿ-4930 ಇದ್ದು ಅದರ ಚಾಲಕನ ಹೆಸರು ದೇವರಾಜ ತಂದೆ ಬಸವರಾಜ ಮ್ಯಾಗೇರಿ ತಾ: ಯಂಕ್ಷಾಂತಿ ತಾ: ಶಹಾಪೂರ ಅಂತಾ ಗೊತ್ತಾಗಿರುತ್ತದೆ. ನಂತರ ನಾವೇಲ್ಲರೂ ರಸ್ತೆ ಮೇಲೆ ಚಿರಾಡುತ್ತಿದ್ದಾಗ ಅಲ್ಲೇ ರಸ್ತೆ ಮೇಲೆ ಹೋಗುತ್ತಿದ್ದ ಜನರು 108 ವಾಹನಕ್ಕೆ ಕರೆ ಮಾಡಿದ್ದು, ನಾವೇಲ್ಲರೂ 108 ವಾಹನದಲ್ಲಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿರುತ್ತೇವೆ. ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಮಂಜುನಾಥ ತಂದೆ ಗೂಳಪ್ಪ ಮತ್ತು ಭೀಮರಾಯ ತಂದೆ ನಿಂಗಪ್ಪ ಕಟ್ಟಿಮನಿ ಇಬ್ಬರಿಗೂ ಅವರ ಸಂಬಂದಿಕರಾದ ಬಸಪ್ಪ ಸಾ: ಕೊಯಿಲೂರ ಹಾಗೂ ಮಂಜುನಾಥನ ತಾಯಿಯಾ ಮಂಜಳಮ್ಮ ಇಬ್ಬರು ಕೂಡಿ ಯುನೈಟೆಡ್ ಆಸ್ಪತ್ರೆ ಕಲಬುರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ನಾನು ಮತ್ತು ಸ್ಕೂಟಿ ಮೋಟಾರ ಸೈಕಲ್ ನಂ: ಕೆ.ಎ. ಕೆ.ಎ.33/ಇಬಿ-1602 ನೇದ್ದರ ಮೇಲೆ ಮಂಜುನಾಥ ತಂದೆ ಗೂಳಪ್ಪ ವಯಾ: 19 ಸ್ಕೂಟಿ ಹಿಂದುಗಡೆ ಕುಳಿತ ಭೀಮರಾಯ ತಂದೆ ನಿಂಗಪ್ಪ ಕಟ್ಟಿಮನಿ ಎಲ್ಲರೂ ಶಹಾಪೂರ ನಗರದ ಅಮಾನ ದಾಬಾ ಮುಂದೆ ರಸ್ತೆ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದಾಗ, ದುಗರ್ಾಂಬ ಟ್ರಾವಲ್ಸ ಖಾಸಗಿ ಬಸ್ ನಂ: ಕೆ.ಎ-51/ಬಿ-4930 ನೇದ್ದರ ಚಾಲಕ ದೇವರಾಜ ತಂದೆ ಬಸವರಾಜ ಮ್ಯಾಗೇರಿ ತಾ: ಯಂಕ್ಷಾಂತಿ ಈತನು ತನ್ನ ಟ್ರಾವೆಲ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಪಡಿಸಿ ಭಾರಿ ರಕ್ತಗಾಯ ಮತ್ತು ಸಾದಾಗಾಯ ಪಡಿಸಿದ್ದು, ಸದರಿ ಟ್ರಾವೆಲ್ಸ ಚಾಲಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 151/2022 ಕಲಂ: 279, 337, 338 ಐಪಿಸಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 150/2022 ಕಲಂ 379 ಐಪಿಸಿ : ಇಂದು ದಿನಾಂಕ: 01/09/2022 ರಂದು ಸಾಯಂಕಾಲ 04.00 ಪಿ ಎಂ ಕ್ಕೆ ಠಾಣೆಗೆ ಪಿಯರ್ಾದಿದಾರರಾದ ಶ್ರೀ ನಾಗರಾಜ ತಂದೆ ತಿಪ್ಪಣ್ಣ ಹಯೈಆಳ ಸಾ: ಬಾಪೂಗೌಡ ನಗರ ಶಹಾಪೂರ ತಾ: ಶಹಾಪೂರ ಜಿ: ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ಮಾನ್ಯರವರಲ್ಲಿ ನಾನು ನಾಗರಾಜ ತಂದೆ ತಿಪ್ಪಣ್ಣ ಹಯೈಆಳ ಸಾ: ಬಾಪೂಗೌಡ ನಗರ ಶಹಾಪೂರ ತಾ: ಶಹಾಪೂರ ಜಿ: ಯಾದಗಿರ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಾನು ಸುಮಾರು 01 ವರ್ಷದ 06 ತಿಂಗಳಿಂದ ಶಿಶು ಆಸ್ಪತ್ರೆ ಶಹಾಪೂರದಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ. ಹಿಗಿದ್ದು ಪ್ರತಿ ದಿನದಂತೆ ನಾನು ದಿನಾಂಕ: 17/08/2022 ರಂದು ಸಾಯಂಕಾಲ 04.00 ಪಿಎಂ ಕ್ಕೆ ನನ್ನ ಹೀರೋ ಹೊಂಡಾ ಸ್ಪ್ಲೆಂಡರ ಪ್ರೋ ಮೋಟಾರ ಸೈಕಲ ನಂ: ಕೆಎ-33 ಎಲ್-0658 ನೇದ್ದರ ಮೇಲೆ ಶಿಶು ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಹತ್ತಿರ ನನ್ನ ಮೋಟಾರ ಸೈಕಲ ನಿಲ್ಲಿಸಿ ಓಳಗಡೆ ಹೋಗಿ ಕೆಲಸ ಮಾಡಿಕೋಂಡಿದ್ದೆನೆ. ನಂತರ ಸಾಯಂಕಾಲ ನನ್ನ ಗೆಳೆಯನೊಂದಿಗೆ ಹೋರಗಡೆ ಹೊಗುವ ನಿಮಿತ್ಯ ಆಸ್ಪತ್ರೆಯಿಂದ ಹೊರಗಡೆ ಬಂದು ನಾಣು ಮೋಟಾರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನಮೋಟಾರ ಸೈಕಲ ಇರಲಿಲ್ಲ ನಾನು ಮತ್ತು ನನ್ನ ಸ್ನೇಹಿತ ಬಸವರಾಜ ಮೂಲಿಮನಿ ಇಬ್ಬರೂ ಕೂಡಿ ಆಸ್ಪತ್ರೆಯ ಅಕ್ಕ ಪಕ್ಕದಲ್ಲಿ ನೋಡಲಾಗಿ ನನ್ನ ಮೋಟಾರ ಸೈಕಲ ಸಿಗಲಿಲ್ಲ ನಂತರ ಅಲ್ಲಿಂ ಇಲ್ಲಿಯವರೆಗೆ ಶಹಾಪೂರ ನಗರದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡಕಾಡಲಾಗಿ ನನ್ನ ಮೋಟಾರ ಸೈಕಲ ಸಿಗಲಿಲ್ಲ ಕಾರಣ ಇಂದು ದಿನಾಂಕ: 01/09/2022 ರಂದು ತಡವಾಗಿ ಠಾಣೆಗೆ ಬಂದು ನನ್ನ ಮೋಟಾರ ಸೈಕಲ ಕಳ್ಳತನವಾದ ಬಗ್ಗೆ ದೂರು ಕೊಟ್ಟಿದ್ದು ಸದರಿ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 150/2022 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 136/2022 ಕಲಂ: 279, 338 ಐಪಿಸಿ : ಇಂದು ದಿನಾಂಕ 01/09/2022 ರಂದು 9.00 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀ ಭೀಮರೆಡ್ಡಿ ತಂದೆ ಮಲ್ಲಣ್ಣ ದೇಸಾಯಿ ವ|| 53ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಕಿರದಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ಮಗಳಾದ ವಿಜಯಲಕ್ಷ್ಮೀ ಇವಳಿಗೆ ನಮ್ಮೂರ ಮಲ್ಲಿಕಾಜರ್ುನ ತಂದೆ ಶಾಂತಗೌಡ ಬೋನಾಳ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಮಲ್ಲಿಕಾಜರ್ುನ ಈತನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದಾನೆ. ಹೀಗಿದ್ದು ದಿನಾಂಕ 28/08/2022 ರಂದು 5.00 ಪಿಎಂ ಸುಮಾರಿಗೆ ನಮ್ಮ ಅಳಿಯನಾದ ಮಲ್ಲಿಕಾಜರ್ುನ ಈತನು ಕೆಲಸ ಇದೆ ಮಾಲಗತ್ತಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದನು. ನಂತರ ಅದೇ ದಿನ 9.00 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಶರಣಗೌಡ ದೇಸಾಯಿ ಇಬ್ಬರೂ ಕೂಡಿ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ನಮ್ಮೂರ ಮಲ್ಲಣ್ಣ ಹೆಗ್ಗೇರಿ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಅಳಿಯನಾದ ಮಲ್ಲಿಕಾಜರ್ುನ ಈತನು ನಮ್ಮೂರ ಈರಣ್ಣ ವಿಶ್ವಕರ್ಮ ಇವರ ಸೈಕಲ್ ಮೋಟಾರ ಹಿಂದೆ ಕುಳಿತು ಊರಿನ ಕಡೆಗೆ ಬರುವಾಗ ನಮ್ಮ ಮನೆಯ ಹತ್ತಿರ ರೋಡ ಕವರ್ಿಂಗನಲ್ಲಿ ಈರಣ್ಣನು ತನ್ನ ಮೋಟಾರ ಸೈಕಲ್ ಸ್ಕಿಡ್ ಮಾಡಿ ಬಿದ್ದಿದ್ದು ತಕ್ಷಣ ನಾನು ಎಬ್ಬಿಸಿದ್ದು ನಿಮ್ಮ ಅಳಿಯನಿಗೆ ತಲೆಗೆ, ಕೈಕಾಲುಗಳಿಗೆ ಭಾರೀ ಗಾಯಗಳಾಗಿದ್ದು ನಮ್ಮ ಮನೆಯ ಹತ್ತಿರ ಬರ್ರಿ ಅಂತಾ ತಿಳಿಸಿದ್ದರಿಂದ ತಕ್ಷಣ ನಾನು ಮತ್ತು ನನ್ನ ಮಗನಾದ ಶರಣಗೌಡ ಇಬ್ಬರೂ ಕೂಡಿ ಮಲ್ಲಣ್ಣ ಹೆಗ್ಗೇರಿ ಇವರ ಮನೆಯ ಹತ್ತಿರ ರೋಡಿನಲ್ಲಿ ನಮ್ಮ ಅಳಿಯನು ಸೈಕಲ್ ಮೋಟಾರ ಮೇಲಿಂದ ಬಿದ್ದಿರುವ ಜಾಗಕ್ಕೆ ಹೋಗಿ ನೋಡಲಾಗಿ ನಮ್ಮ ಅಳಿಯನಾದ ಮಲ್ಲಿಕಾಜರ್ುನ ಈತನು ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ. ಅವನ ತಲೆಗೆ ಮುಂಭಾಗದಲ್ಲಿ ಭಾರೀ ರಕ್ತಗಾಯ, ಮೂಗಿನಿಂದ ರಕ್ತಸ್ರಾವ, ಬಲಗೈಗೆ ಗುಪ್ತಗಾಯವಾಗಿದ್ದು ಬಲಗಾಲಿಗೆ ಭಾರೀ ಗುಪ್ತಗಾಯವಾಗಿ ಪಾದದ ಮೇಲ್ಭಾಗದಲ್ಲಿ ಕಾಲು ಮುರಿದಂತೆ ಆಗಿದ್ದು ಇರುತ್ತದೆ. ಸೈಕಲ್ ಮೋಟಾರ ನಡೆಸಿದ ಈರಣ್ಣನ ಬಲಗಾಲಿಗೆ ಮತ್ತು ಬಲಗೈಗೆ ತರಚಿದ ಗಾಯಗಳಾಗಿದು,್ದ ಈರಣ್ಣನು ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ಅಪಘಾತಕ್ಕೀಡಾದ ಸೈಕಲ್ ಮೋಟಾ ನಂಬರ ನೋಡಲಾಗಿ ಅದು ಹೀರೋ ಸ್ಪ್ಲೆಂಡರ ಕಂಪನಿಯ ಸೈಕಲ್ ಮೋಟಾರ ಇದ್ದು ಅದರ ನಂ ಕೆಎ 33 ವೈ 0299 ಇದ್ದುದು ಕಂಡು ಬಂದಿದೆ. ನಮ್ಮ ಅಳಿಯನಿಗೆ ಭಾರೀ ಸ್ವರೂಪದ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನು ಮತ್ತು ನನ್ನ ಮಗನಾದ ಶರಣಗೌಡ ಇಬ್ಬರೂ ಕೂಡಿ ಒಂದು ಖಾಸಗಿ ಕಾರಿನಲ್ಲಿ ನಮ್ಮ ಅಳಿಯನಾದ ಮಲ್ಲಿಕಾಜರ್ುನನಿಗೆ ಕರೆದುಕೊಂಡು ಕಲಬುರಗಿಯ ಮೆಟ್ರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಹೈದರಾಬಾದಿನ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ನಮ್ಮ ಅಳಿಯನ ಜೊತೆಗೆ ನನ್ನ ಮಗನಾದ ಶರಣಗೌಡನಿಗೆ ಬಿಟ್ಟು ಇಂದು ದಿನಾಂಕ 01/09/2022 ರಂದು ನಾನು ದೂರು ನೀಡುವ ಕುರಿತು ಹೈದರಾಬಾದಿನಿಂದ ಕೆಂಭಾವಿ ಠಾಣೆಗೆ ಬಂದು ತಡವಾಗಿ ಫಿಯರ್ಾದಿ ಸಲ್ಲಿಸಿದ್ದು ಇರುತ್ತದೆ. ಕಾರಣ ನಮ್ಮ ಅಳಿಯನಾದ ಮಲ್ಲಿಕಾಜರ್ುನ ತಂದೆ ಶಾಂತಗೌಡ ಬೋನಾಳ ವ|| 36ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಕಿರದಳ್ಳಿ ಈತನು ನಮ್ಮೂರ ಈರಣ್ಣ ತಂದೆ ದೇವಿಂದ್ರಪ್ಪ ವಿಶ್ವಕರ್ಮ ಈತನ ಸೈಕಲ್ ಮೋಟಾರ ನಂ ಕೆಎ 33 ವೈ 0299 ನೇದ್ದರ ಮೇಲೆ ಮಾಲಗತ್ತಿಯಿಂದ ಕಿರದಳ್ಳಿಗೆ ಬರುತ್ತಿದ್ದಾಗ ಈರಣ್ಣನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಮಲ್ಲಣ್ಣ ಹೆಗ್ಗೇರಿ ಇವರ ಮನೆಯ ಹತ್ತಿರ ಇರುವ ಕವರ್ಿಂಗನಲ್ಲಿ ಒಮ್ಮೆಲೇ ಸ್ಕಿಡ್ ಮಾಡಿದ್ದರಿಂದ ಸೈಕಲ್ ಮೋಟಾರ ಅಪಘಾತವಾಗಿ ಸೈಕಲ್ ಮೋಟಾರ ಹಿಂದೆ ಕುಳಿತಿದ್ದ ನಮ್ಮ ಅಳಿಯನಾದ ಮಲ್ಲಿಕಾಜರ್ುನ ಈತನು ಕೆಳಗೆ ಬಿದ್ದು ಭಾರೀ ಸ್ವರೂಪದ ಗಾಯಗಳಾಗಿದ್ದು ಅಪಘಾತ ಮಾಡಿದ ಸೈಕಲ್ ಮೋಟಾರ ನಂ ಕೆಎ 33 ವೈ 0299 ನೇದ್ದರ ಚಾಲಕನಾದ ಈರಣ್ಣನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 136/2022 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ. 279, 337, 338 ಐಪಿಸಿ : ದಿನಾಂಕ:30/08/2022 ರಂದು ಬೆಳಿಗ್ಗೆ 11.45 ಗಂಟೆಯ ಸುಮಾರಿಗೆ ಹುಣಸಗಿ-ದೇವಾಪೂರ ರಸ್ತೆಯ ಮೇಲೆ ಆರೋಪಿತನು ತಾನು ಚಲಾಯಿಸುವ ಮೋಟಾರ್ ಸೈಕಲ್ ನಂ: ಕೆಎ-32 ಇಪಿ-4240 ನೇದ್ದರ ಮೇಲೆ ಫಿರ್ಯಾದಿಯ ಹೆಂಡತಿಯಾದ ಲಲಿತಾಬಾಯಿ ಇವಳಿಗೆ (ಗಾಯಾಳುವಿಗ) ಹಿಂದೆ ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ, ಮಾನಪ್ಪ ವಜ್ಜಲ ಇವರ ಮನೆಯ ಹತ್ತಿರ ರಸ್ತೆಯ ಮೇಲಿನ ರೊಡ್ ಹಂಪ್ ಹತ್ತಿರ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಗಾಯಾಳು ಕೆಳಗೆ ಬಿದ್ದು ತಲೆಗೆ ಭಾರಿ ಒಳಪೆಟ್ಟಾಗಿದ್ದು, & ಎಡಹಣೆಗೆ ರಕ್ತಗಾಯವಾಗಿದ್ದು, ಹಾಗೂ ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರರನಿಗೆ ವಿಷಯ ಗೊತ್ತಾಗಿ ತನ್ನ ಹೆಂಡತಿಗೆ ಆಸ್ಪತ್ರೆಗೆ ಸೇರಿಸಿ ಉಪಚಾರ ಕೊಡಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 02-09-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080