ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-11-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 173/2021 ಕಲಂ 457, 380 ಐ.ಪಿ.ಸಿ. : ಪಿರ್ಯಾಧಿಯು ಶಿಕ್ಷಕರಿದ್ದು ಅವರು ಸಾಯಿ ನಗರ ಗುರುಮಠಕಲ್ದಲ್ಲಿ ಶಿವರೆಡ್ಡಿ ಇವರ ಮನೆಯಲ್ಲಿ ಬಾಡಿಗೆ ಇದ್ದು ದಿನಾಂಕ:15.10.2021 ರ ಸಾಯಂಕಾಲ 8.00 ಗಂಟೆಯಿಂದ ದಿನಾಂಕ;16.10.2021 ರ ಬೆಳಗಿನ 6.00 ಗಂಟೆಯ ಮಧ್ಯದ ಅವದಿಯಲ್ಲಿ ಯಾರೋ ಕಳ್ಳರು ಪಿರ್ಯಾಧಿ ಮನೆಯ ಬಾಗಿಲು ಕೀಲಿಯ ಕೊಂಡಿ ಮುರಿದು ಬೆಡ್ ರೂಮಿನ ಆಲ್ಮಹರಿಯಲ್ಲಿಟ್ಟದ್ದ ಒಂದು 6 ಮಾಸಿಯ ಬಂಗಾರದ ಉಂಗುರು ಮತ್ತು ನಗದು ಹಣ 15,000/- ಹೀಗೆ ಒಟ್ಟು 30,000/- ಬಂಗಾರದ ಉಂಗುರು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾಧಿ ವಗೈರೆ ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 162/2021 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 01/11/2021 ರಂದು 4.00 ಪಿಎಂ ಕ್ಕೆ ಶ್ರೀ ಗಜಾನಂದ ಪಿ.ಎಸ್.ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ವರದಿ, ಮುದ್ದೆಮಾಲು, ಜಪ್ತಿ ಪಂಚನಾಮೆ ಸಮೇತ 7 ಜನ ಆರೋಪಿತರನ್ನು ಹಾಜರುಪಡಿಸಿ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 01/11/2021 ರಂದು 2.00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬೈಚಬಾಳ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಠಾಣೆಯ ಸಿಬ್ಬಂದಿಯವರಾದ 1) ಶಂಕರಗೌಡ ಹೆಚ್ಸಿ 33 2) ಸೈಯದ ಪಿಸಿ 106 3) ಹುಲಿಗೆಪ್ಪ ಪಿಸಿ 340 4) ವಿಜಯಾನಂದ ಪಿಸಿ 103 5) ಮಾಳಪ್ಪ ಪಿಸಿ 29 6) ಚನ್ನಬಸಪ್ಪ ಪಿಸಿ 345 ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 37 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಮಕ್ತುಂಸಾಬ ತಂದೆ ಮಾಸುಂಸಾಬ ವಡಕೇರಿ ವ|| 36 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಯ ಶಂಕರಗೌಡ ಹೆಚ್ಸಿ 33 ಇವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 2.05 ಪಿಎಮ್ಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ ಹೊರಟು 2.25 ಪಿಎಮ್ಕ್ಕೆ ಬೈಚಬಾಳ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅದರಲ್ಲಿ ಒಬ್ಬನು ರಾಣಿ ಹೊರಗೆ ಅಂತ ಇನ್ನೊಬ್ಬ ರಾಣಿ ಒಳಗೆ ಅಂತ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2.30 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 7 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ರಾಮು ತಂದೆ ಯಂಕಣ್ಣ ಯನಗುಂಟಿ ವಯಾ|| 24 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಬೈಚಬಾಳ 2) ರಾಮಕೃಷ್ಣ ತಂದೆ ಚಂದ್ರಶೇಖರ ದ್ಯಾಪುರ ವಯಾ|| 44 ಜಾ|| ಹಿಂದೂ ಬೇಡರ ಉ|| ಒಕ್ಕಲುತನ ಸಾ|| ಕನ್ನೆಳ್ಳಿ 3) ಅಮರಪ್ಪ ತಂದೆ ರಾಮಪ್ಪ ತಾಳಿಕೋಟಿ ವಯಾ|| 41 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಬೈಚಬಾಳ 4) ಭೀಮರಾಯ ತಂದೆ ಯಮನಪ್ಪ ಮಚರ್ೆಡ ವಯಾ|| 45 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಬೈಚಬಾಳ 5) ನಿಂಗಣ್ನ ತಂದೆ ಗುರುಲಿಂಗಪ್ಪ ಸಜ್ಜನ್ ವಯಾ|| 32 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ಕನ್ನೆಳ್ಳಿ 6) ಚನ್ನಮಲ್ಲಪ್ಪ ತಂದೆ ಮಡಿವಾಳಪ್ಪ ಇಂಬ್ಲಾಪೂರ ವಯಾ|| 45 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೈಚಬಾಳ 7) ರಮೇಶ ತಂದೆ ಯಂಕಣ್ಣ ಕಟ್ಟಿಮನಿ ವಯಾ|| 48 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಯಡ್ಡೆಳ್ಳಿ ಅಂತ ತಿಳಿಸಿದ್ದು ಸದರಿಯವರ ಹತ್ತಿರ ನಗದು ಹಣ 6500=00 ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು 2.30 ಪಿಎಮ್ ದಿಂದ 3.30 ಪಿಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣಾ ಗುನ್ನೆ ನಂ 162/2021 ಕಲಂ 87 ಕೆಪಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 04-11-2021 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080