ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-11-2022
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 279, 338 ಐಪಿಸಿ: ಇಂದು ದಿನಾಂಕ 01/11/2022 ರಂದು ಸಾಯಂಕಾಲ 5 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಪೋನ್ ಮೂಲಕ ಎಮ್.ಎಲ್.ಸಿ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಸಿದ್ದಪ್ಪ ಎಚ್.ಸಿ-75 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀ ಶರಣಪ್ಪ ತಂದೆ ಮಲ್ಲಣ್ಣ ಕೊಳ್ಳಿ ವಯ;41 ವರ್ಷ, ಜಾ;ಲಿಂಗಾಐತ್, ಉ;ಹೊಟೆಲ್ ಕೆಲಸ, ಜಾ;ಲಿಂಗಾಯತ್ ಹಟಗಾರ, ಸಾ;ನಾಲವಾರ, ತಾ;ಚಿತ್ತಾಪುರ, ಜಿ;ಕಲಬುರಗಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 7-15 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆಯ ಅಸಲು ಪ್ರತಿಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಹೊಟೆಲ್ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ಇಂದು ದಿನಾಂಕ 01/11/2022 ರಂದು ನಮ್ಮ ಹೊಟಲಗೆ ಒಂದು ರಾಕ್ ವೆಲ್ ಕಂಪನಿಯಿಂದ ಡಬಲ್ ಡೋರ್ ಪ್ರಿಡ್ಜ್ ಆಫರ್ ಬಂದ ಕಾರಣ ತೆಗೆದುಕೊಂಡು ಹೋಗುವಂತೆ ನನಗೆ ಕಂಪನಿಯವರು ತಿಳಿಸಿದ್ದರಿಂದ ತೆಗೆದುಕೊಂಡು ಹೋದರಾಯಿತು ಅಂತಾ ಯಾದಗಿರಿಗೆ ಬಂದಿದ್ದೆನು. ಯಾದಗಿರಿಯ ಎಲ್.ಐ.ಸಿ ಕಚೇರಿ ಹತ್ತಿರ ಇರುವ ಕೋರಿ ಹೋಮ್ ನೀಡ್ಸ್ ಶಾಪಗೆ ಬಂದಿದ್ದಾಗ ಅದೇ ಸಮಯಕ್ಕೆ ನನಗೆ ಈ ಮೊದಲೇ ಪರಿಚಯ ಇರುವ ಶ್ರೀ ರವಿಕುಮಾರ ತಂದೆ ಕಾಮಣ್ಣ ನರಬೋಳಿ ಸಾ;ಕಡಬೂರ ಇವರ ಬುಲೆರೋ ವಾಹನ ಪಿಕಪ್ ವಾಹನ ನಂಬರ ಕೆಎ 32, ಡಿ-0134 ನೇದ್ದನ್ನು ತೆಗೆದುಕೊಂಡು ಇದೇ ಅಂಗಡಿಗೆ ಬಂದಿದ್ದರು. ಅವರೊಂದಿಗೆ ಅದೇ ಊರಿನ ಮಲ್ಲಿಕಾಜರ್ುನ ತಂದೆ ಗುರಣ್ಣ ರಾವೂರು ಹಾಗೂ ವಿಶ್ವನಾಥ ತಂದೆ ಶಿವಶರಣಪ್ಪ ಗೂಡುರ ಇವರುಗಳು ಕೂಡ ಬಂದಿದ್ದರು. ಹೀಗಿದ್ದು ನಾನು ಮತ್ತು ಕಡಬೂರ ಗ್ರಾಮದ ವಿಶ್ವನಾಥ ಗೂಡುರ ನಮ್ಮಿಬ್ಬರ ಡಬಲ್ ಡೋರ್ ಪ್ರಿಡ್ಜ್ ಗಳನ್ನು ಕೋರಿ ನೀಡ್ಸ್ ಶಾಪನಲ್ಲಿ ಖರೀದಿ ಮಾಡಿದಾಗ ಅವರಲ್ಲಿ ವಾಹನವನ್ನು ತಂದಿದ್ದ ರವಿಕುಮಾರ ಈತನು ನನಗೆ ನಮ್ಮ ವಾಹನದಲ್ಲಿಯೇ ನಿನ್ನ ಪ್ರಿಡ್ಜನ್ನು ಹಾಕು ನಿನಗೆ ನಾಲವಾರ ಗ್ರಾಮಕ್ಕೆ ಬಿಡುತ್ತೇವೆ ಅಂತಾ ತಿಳಿಸಿದನು. ಆಗ ನಾನು ನನ್ನ ಪ್ರಿಡ್ಜನ್ನು ಅದೇ ವಾಹನದಲ್ಲಿ ಹಾಕಿಕೊಂಡು ಅವರೊಂದಿಗೆ ಯಾದಗಿರಿಯಿಂದ ನಾಲವಾರ ಕಡೆಗೆ ಹೊರಟೆವು. ನಾನು ವಾಹನದ ಚಾಲಕನ ಮುಂಬಾಗದಲ್ಲಿರುವ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದೆನು. ಮಾರ್ಗ ಮದ್ಯೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರ ಹಳ್ಳಿ ಗೇಟ್ ಹತ್ತಿರ ನಮ್ಮ ವಾಹನದಲ್ಲಿದ್ದ ಮಲ್ಲಿಕಾಜರ್ುನ , ವಿಶ್ವನಾಥ ಹಾಗೂ ವಾಹನದ ಚಾಲಕ ರವಿಕುಮಾರ ಇವರು ಮೂತ್ರ ವಿಸರ್ಜನೆ ಮಾಡಿದರಾಯಿತು ಅಂತಾ ರಸ್ತೆ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿ, ವಾಹನಕ್ಕೆ ಪಾಕರ್ಿಂಗ್ ಲೈಟಗಳನ್ನು ಹಾಕಿ, ಸಂಚಾರ ನಿಯಮಗಳನ್ನು ಪಾಲಿಸಿ ವಾಡಿ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು ಇರುತ್ತದೆ. ನನಗೆ ಮೂತ್ರ ಬರದ ಕಾರಣ ವಾಹನದಿಂದ ಕೆಳಗೆ ಇಳಿದಿರಲಿಲ್ಲ, ಅದೇ ಸಮಯಕ್ಕೆ ನಾನು ನಮ್ಮ ವಾಹನದ ಸೈಡ್ ಮಿರರ್ನಲ್ಲಿ ಗಮನಿಸುತ್ತಿದ್ದಾಗ ನಮ್ಮ ಹಿಂದಿನಿಂದ ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಬ್ಬ ಲಾರಿ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಬುಲೆರೋ ಪಿಕಪ್ ವಾಹನಕ್ಕೆ ಹಿಂದಿನ ಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದಾಗ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯಲ್ಲಿ ಇರುವ ತಗ್ಗಿನಲ್ಲಿ ಹೋಗಿ ಬಿದ್ದು ಪಲ್ಟಿಯಾಗಿರುತ್ತದೆ. ವಾಹನದಲ್ಲಿ ಕುಳಿತಿದ್ದ ನನಗೆ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿದ್ದು ಮತ್ತು ಎದೆಯ ಬಲಭಾಗಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ಈ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಮಲ್ಲಿಕಾಜರ್ುನ, ವಿಶ್ವನಾಥ ಹಾಗೂ ರವಿಕುಮಾರ ಇವರುಗಳು ವಾಹನದ ಹತ್ತಿರ ಬಂದು ನನಗೆ ವಾಹನದಿಂದ ಹೊರಗೆ ತೆಗೆದಿದ್ದು ಇರುತ್ತದೆ. ನಮಗೆ ಅಪಘಾತ ಪಡಿಸಿದ ವಾಹನ ಲಾರಿ ನಂಬರ ನೋಡಲಾಗಿ ಎಪಿ-24, ಟಿಬಿ-5499 ನೇದ್ದು ಇರುತ್ತದೆ, ಅದರ ಚಾಲಕ ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಬ್ಬಾಸಲಿ ತಂದೆ ಬಡೇಸಾಬ ಹೊರಪುರ ಸಾ;ನಾಯ್ಕಲ್ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಇಂದು ದಿನಾಂಕ 01/11/2022 ರಂದು ಸಮಯ 04-15 ಪಿ.ಎಂ.ಕ್ಕೆ ಜರುಗಿರುತ್ತದೆ. ನನಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಆಗ ನನ್ನ ತಮ್ಮನಾದ ಶ್ರೀಶೈಲ್ ಈತನಿಗೆ ಪೋನ್ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಲು ಹೇಳಿರುತ್ತೇನೆ. ಸ್ವಲ್ಪ ಸಮಯದ ನಂತರ ನನ್ನ ತಮ್ಮ ಶ್ರೀಶೈಲ್ ಈತನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನನಗೆ ವಿಚಾರಿಸಿರುತ್ತಾನೆ. ಹೀಗಿದ್ದು ಇಂದು ದಿನಾಂಕ 01/11/2022 ರಂದು ಸಾಯಂಕಾಲ 04-15 ಪಿ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಕಂಚಗಾರಹಳ್ಳಿ ಗೇಟ್ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಬುಲೆರೋ ವಾಹನ ನಂಬರ ಕೆಎ-32, ಡಿ-0134 ನೇದ್ದಕ್ಕೆ ಲಾರಿ ನಂಬರ ಎಪಿ-24, ಟಿಬಿ-5499 ನೇದ್ದರ ಚಾಲಕ ಅಬ್ಬಾಸಲಿ ಈತನು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 52/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 121/2022 ಕಲಂ78(3) ಕೆ.ಪಿ ಕಾಯ್ದೆ: ಇಂದು ದಿನಾಂಕ 01.11.2022 ರಂದು ಸ್ಟೇಷನ್ ಸೈದಾಪೂರದ ಹಲಾಯಿ ಪೀರ ಮಸೀದಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ರಸ್ತೆ ಮೇಲೆ ಹೋಗಿ ಬರುವ ಜನರಿಗೆ ಮಟಕಾ ಚೀಟಿ ಬರೆಸಿರಿ ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಸಿಗುತ್ತವೆ ಅಂತಾ ಕೂಗುತ್ತಿದ್ದಾಗ ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಪಿ.ಐ ಸಾಹೇಬರು ಮತ್ತು ಸಿಬ್ಬಂದಿಯವರು ಸಾರ್ವಜನಿಕರಿಗೆ ಕೂಗಿ ಕರೆಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಪಂಚರ ಸಮಕ್ಷಮ ವಿಚಾರಣೆ ಮಾಡಿ ಪಂಚನಾಮೆ ಕೈಕೊಂಡಿದ್ದು, ಪಿ.ಐ ಸಾಹೇಬರು ಠಾಣೆಗೆ ಬಂದು ಆರೋಪಿ, ಮುದ್ದೆಮಾಲು ಮತ್ತು ಮೂಲ ಜಪ್ತಿ ಪಂಚನಾಮೆ ಹಾಜರಪಡಿಸಿದ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 121/2022 ಕಲಂ 78(3) ಕೆ.ಪಿ.ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 185/2022.ಕಲಂ, 341,323,504,506 ಐ.ಪಿ.ಸಿ.: ಇಂದು ದಿನಾಂಕ 01.11.2022 ರಂದು 12.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಭೀಮಾಶಂಕರ ತಂದೆ ಚಂದ್ರಶೇಖರ ಸೂಗೂರ ವ|| 22 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹೈಯಾಳ [ಕೆ]. ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಿನ್ನೆ ದಿನಾಂಕ 31/10/2022 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಾನು ನಮ್ಮೂರ ಹನುಮಾನ ದೇವರ ಗುಡಿಯ ಮುಂದೆ ಹಾದು ಹೋಗುತ್ತಿದ್ದಾಗ ನಮ್ಮೂರ ಭೀಮರಾಯ ತಂದೆ ನಿಂಗನಗೌಡ ಚಬಿರಾದಾರ ಈತನು ನನಗೆ ತಡೆದು ನಿಲ್ಲಿಸಿ ಸೂಳೇ ಮಗನೇ ಊರಲ್ಲಿ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏಕೇ? ಸುಮ್ಮನೇ ಬೈಯುತ್ತೀ ನಾನೇನು ಅಂದಿದ್ದೇನೆ ಅಂತ ಅಂದಾಗ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆಯುತ್ತಾ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಮನಸ್ಸಿಗೆ ಬಂದ ಹಾಗೆ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಕುಳಿತ ನಮ್ಮ ತಂದೆಯವರಾದ ಚಂದ್ರಶೇಖರ ಹಾಗು ನಮ್ಮೂರ ಬಂಡೇಶಗೌಡ ಬಿರಾದಾರ ಮತ್ತು ಭೀಮಾಶಂಕರ ಸೂಗೂರ ಇವರು ಬಂದು ಸದರಿಯವನು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಅವನು ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದನು. ನಂತರ ನಾನು ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ವಿನಾಕಾರಣವಾಗಿ ನನ್ನೊಂದಿಗೆ ಜಗಳಾ ತೆಗೆದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಭೀಮರಾಯ ತಂದೆ ನಿಂಗನಗೌಡ ಚಬಿರಾದಾರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂಬರ 185/2022 ಕಲಂ 341,323,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 186/2022 ಕಲಂ 279 338 ಐ.ಪಿ.ಸಿ: ಇಂದು ದಿನಾಂಕ 01/11/2022 ರಂದು ಮಧ್ಯಾಹ್ನ 13-00 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ಚಂಡು ಸಾಃ ಹಳಿಸಗರ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 30/10//2022 ರಂದು ಮಧ್ಯಾಹ್ನದ ಸುಮಾರಿಗೆ ತನ್ನ ತಮ್ಮನಾದ ಗಾಯಾಳು ಸಣ್ಣ ಭೀಮರಡ್ಡಿ @ ಭೀಮರಾಯ ವಯಸ್ಸು 36 ವರ್ಷ ಈತನು ಶಹಾಪೂರದ ತರಕಾರಿ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿ ಮಾಡಿಕೊಂಡು ನಡೆದುಕೊಂಡು ಮನೆಗೆ ಬರುತಿದ್ದಾಗ ಸಾಯಂಕಾಲ 16-00 ಗಂಟೆಗೆ ಶಹಾಪೂರದ ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಎದರುಗಡೆ ಬರುತಿದ್ದಾಗ ಹಿಂದಿನಿಂದ ಅಂದರೆ ಬಸವೇಶ್ವರ ವೃತ್ತದ ಕಡೆಯಿಂದ ಆರೋಪಿತನು ಕಾರ್ ನಂ ಕೆಎ-36-ಬಿ-5472 ರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ಸಣ್ಣ ಭೀಮರಡ್ಡಿ @ ಭೀಮರಾಯನಿಗೆ ಬಲಗಾಲ ಹಿಮ್ಮಡಿ ಮತ್ತು ಕಪಗಂಡಿಯ ಎಲಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 186/2022 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 187/2022 ಕಲಂ 279,337,338 ಐ.ಪಿ.ಸಿ: ಇಂದು ದಿನಾಂಕ: 01/11/2022 ರಂದು ಸಾಯಂಕಾಲ 6.00 ಪಿ.ಎಂ.ಕ್ಕೆ ಎ.ಎಂ.ಕ್ಕೆ ಶ್ರೀ ಶ್ರೀಶೈಲ್ ತಂ/ ಗುರುಬಸಪ್ಪ ಅರಳಗುಂಡಗಿ, ಸಾ|| ಹಿಪ್ಪರಗಾ ಎಸ್.ಎನ್, ತಾ|| ಜೇವಗರ್ಿ, ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ನನ್ನ ತಮ್ಮ ಸಿದ್ದರಾಮ ತಂ/ ಗುರುಬಸಪ್ಪ ಅರಳಗುಂಡಗಿ ಈತನು ಸುಮಾರು 5 ವರ್ಷಗಳಿಂದ ಶಹಾಪೂರ ಕೆ.ಕೆ.ಆರ್.ಟಿ.ಸಿ ಬಸ್ ಡೀಪೋದಲ್ಲಿ ಕಿರಿಯ ಸಹಾಯಕ ಅಂತ ಕೆಲಸ ಮಾಡಿಕೊಂಡು, ತನ್ನ ಕುಟುಂಬದೊಂದಿಗೆ ಶಹಾಪೂರದಲ್ಲಿಯೇ ವಾಸವಾಗಿದ್ದನು. ಹೀಗಿದ್ದು, ದಿನಾಂಕ: 29/10/2022 ರಂದು ರಾತ್ರಿ 10.25 ಪಿ.ಎಂ. ಸುಮಾರಿಗೆ ನನಗೆ ಪರಿಚಯದ ಜೇವಗರ್ಿ ಬಸ್ ಡೀಪೋದಲ್ಲಿ ಬಸ್ ಚಾಲಕನಾದ ಚಂದ್ರಶೇಖರ ತಂ/ ಶರಣಪ್ಪ ಚನ್ನಮಲ್ಲಪ್ಪಗೋಳ ಈತನು ಫೋನ್ ಮಾಡಿ ನಮ್ಮ ಬಸ್ ನಂ. ಕೆಎ-32 ಎಫ್-2220 ನೇದ್ದರಲ್ಲಿ ಶಹಾಪುರದಿಂದ ಸುರಪುರಕ್ಕೆ ಹೊರಟಿದ್ದ ನಿಮ್ಮ ತಮ್ಮ ಸಿದ್ದರಾಮನು 9.30 ಪಿ.ಎಂ.ಕ್ಕೆ ನಮ್ಮ ಬಸ್ಸು ವಿಭೂತಿಹಳ್ಳಿ ಗ್ರಾಮದ ಹತ್ತಿರ ಇರುವ ಹಿಲ್ ಟೌನ್ ದಾಬಾದ ಹತ್ತಿರ ನಮ್ಮ ಬಸ್ಸನ್ನು ಊಟಕ್ಕೆಂದು ನಿಲ್ಲಿಸಿದಾಗ ನಿಮ್ಮ ತಮ್ಮನು ಏಕಿ ಮಾಡಲು ಶಹಾಪೂರ-ಸುರಪುರ ರೋಡ್ ದಾಟಿ ಹೋಗಿ ಏಕಿ ಮಾಡಿ ಮರಳಿ ನಮ್ಮ ಕಡೆಗೆ ಬರಲು ರಸ್ತೆ ಕ್ರಾಸ್ ಮಾಡುತ್ತಿದ್ದಾಗ, ಶಹಾಪೂರ ಕಡೆಯಿಂದ ತನ್ವೀರ ತಂ/ ಸಲಿಂಸಾಬ ಸೌದಾಗರ್ ಈತನು ತನ್ನ ಮೋಟರ ಸೈಕಲ್ ನಂ. ಕೆಎ-33 ಇ.ಬಿ-0749 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ತಮ್ಮನಿಗೆ ಡಿಕ್ಕಿಪಡಿಸಿದ ಪರಿಣಾಮ ನಿಮ್ಮ ತಮ್ಮನಿಗೆ ಭಾರೀ ಗಾಯವಾಗಿದ್ದು, ಮೋಟರ ಸೈಕಲ್ ಚಾಲಕ ತನ್ವೀರನಿಗೆ ಮತ್ತು ಮೋಟರ ಸೈಕಲದಲ್ಲಿದ್ದ, ಜಾಫರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಸೇರಿಕೆ ಮಾಡಿ ನಂತರ ವೈಧ್ಯರ ಸಲಹೆಯ ಮೇರೆಗೆ ಕಲಬುಗರ್ಿಗೆ ಕಳುಹಿಸುತ್ತಿದ್ದೇವೆ ಅಂತಾ ಫೋನ್ ಮಾಡಿ ತಿಳಿಸಿದ್ದರಿಂದ ನನ್ನ ತಮ್ಮನಿಗೆ ಕಲಬುಗರ್ಿಯ ಕುರಾಳ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿ ತಡವಾಗಿಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಮೋಟರ ಸೈಕಲ್ ನಂ. ಕೆಎ-33 ಇ.ಬಿ-0749 ರ ಚಾಲಕ ನೇದ್ದರ ಚಾಲಕ ತನ್ವೀರ ತಂ/ ಸಲಿಂಸಾಬ ಸೌದಾಗರ್, ಸಾ|| ಬಡೇಮಸೀದಿ ಹತ್ತಿರ ಸುರಪುರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ. 187/2022 ಕಲಂ 279, 337, 338 ಐ.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 188/2022.ಕಲಂ, 498(ಎ) ,354, 323, 504,506 ಸಂ, 34 ಐ.ಪಿ.ಸಿ.: ಇಂದು ದಿನಾಂಕ 01/11/2022 ರಂದು 1915 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಮಂಜುಳಾ ಗಂಡ ಲಕ್ಷ್ಮೀಕಾಂತ ಗೋಗಿ ವ|| 37 ಜಾ|| ಹಡಪಾದ ಉ|| ಮನೆಗೆಲಸ ಸಾ|| ಇಂದ್ರಾ ನಗರ ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನನ್ನ ತವರು ಮನೆಯು ಚಿತಾಪೂರ ತಾಲೂಕಿನ ವಾಡಿಯಾಗಿದ್ದು ನನಗೆ 2013 ನೇ ಸಾಲಿನಲ್ಲಿ ಶಹಾಪೂರ ಪಟ್ಟಣದ ಇಂದಿರಾ ನಗರದ ಲಕ್ಷ್ಮೀಕಾಂತ ತಂದೆ ಚಂದ್ರಾಮಪ್ಪ ಗೋಗಿ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದವರೆಗೆ ನಾನು ಹಾಗು ನನ್ನ ಗಂಡ ಅನೋನ್ಯವಾಗಿದ್ದೆವು. ನಮ್ಮಿಬ್ಬರ ಸುಖ ದಾಂಪತ್ಯದಿಂದ ನಮಗೆ 2014 ನೇ ಸಾಲಿನಲ್ಲಿ ಒಂದು ಗಂಡು ಮಗು ಜನಿಸಿದ್ದು ಆತನ ಹೆಸರು ಚಂದ್ರಮೋಹನ್ ವ|| 09 ವರ್ಷ ಇರುತ್ತದೆ. ನನ್ನ ಮಗ ಹುಟ್ಟಿದ ನಂತರ ನನ್ನ ಗಂಡನಾದ 1] ಲಕ್ಷ್ಮೀಕಾಂತ ತಂದೆ ಚಂದ್ರಾಮಪ್ಪ ಗೋಗಿ ಅತ್ತೆಯಾದ 2] ಬುದೇವಿ ಗಂಡ ಚಂದ್ರಾಮಪ್ಪ ಗೋಗಿ ಭಾವನಾದ 3] ಮಾನಪ್ಪ ತಂದೆ ಚಂದ್ರಾಮಪ್ಪ ಗೋಗಿ ಹಾಗು ನಾದನಿಯಾದ 4] ಮಾಲಾ ತಂದೆ ಚಂದ್ರಾಮಪ್ಪ ಗೋಗಿ ಈ ಎಲ್ಲಾ ಜನರು ಸೇರಿ ನನಗೆ ದಿನಾಲು ನೀನು ಸರಿಯಾಗಿ ಇಲ್ಲ ಕಪ್ಪಾಗಿದ್ದಿ ನಿನಗೆ ಯಾವದೇ ಅಡುಗೆ ಮಾಡಲು ಬರುವದಿಲ್ಲ ಅಂತ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡಲು ಪ್ರಾರಂಬಿಸಿದರು. ಈ ವಿಷಯವಾಗಿ ನಾನು ಬೇಸತ್ತು ಆಗಾಗ ನನ್ನ ತಾಯಿಯಾದ ಚೆನ್ನಮ್ಮ ಗಂಡ ಸೋಮಲಿಂಗಪ್ಪ ಗುಳಬಾಳ, ತಂದೆಯಾದ ಸೋಮಲಿಂಗಪ್ಪ ಗುಳಬಾಳ ಹಾಗು ಅಣ್ಣನಾದ ಸುರೇಶ ತಂದೆ ಸೋಮಲಿಂಗಪ್ಪ ಗುಳಬಾಳ ಇವರಿಗೆ ಪೋನ ಮೂಲಕ ತಿಳಿಸಿದ್ದು ಸದರಿಯವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಹಾಗು ಅವರ ಮನೆಯವರಿಗೆ ತಿಳಿಸಿ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 31/10/2022 ರಂದು ಬೆಳಿಗ್ಗೆ 07.00 ಗಂಟೆಗೆ ನಾನು ಶಹಾಪೂರ ಪಟ್ಟಣದ ಇಂದಿರಾ ನಗರದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ 1] ಲಕ್ಷ್ಮೀಕಾಂತ ತಂದೆ ಚಂದ್ರಾಮಪ್ಪ ಗೋಗಿ ಅತ್ತೆಯಾದ 2] ಬುದೇವಿ ಗಂಡ ಚಂದ್ರಾಮಪ್ಪ ಗೋಗಿ ಭಾವನಾದ 3] ಮಾನಪ್ಪ ತಂದೆ ಚಂದ್ರಾಮಪ್ಪ ಗೋಗಿ ಹಾಗು ನಾದನಿಯಾದ 4] ಮಾಲಾ ತಂದೆ ಚಂದ್ರಾಮಪ್ಪ ಗೋಗಿ ಈ ಎಲ್ಲಾ ಜನರು ಸೇರಿ ಮತ್ತೆ ನನ್ನೊಂದಿಗೆ ಜಗಳಾ ತೆಗೆದು ನೀನು ಸರಿಆಯಗಿ ಇಲ್ಲ ನೀನು ನಮ್ಮ ಮನೆಯಲ್ಲಿ ಇರುವದು ಬೇಡ ಅಂತ ಬೈಯುತ್ತಾ ಮನಸ್ಸಿಗೆ ಬಂದ ಹಾಗೆ ಕೈಯಿಂದ ಹೊಡೆಬಡೆ ಮಾಡಿ ಸೂಳೇ ಇಲ್ಲಿ ನಡೆದ ವಿಷಯ ನಿನ್ನ ತಂದೆ, ತಾಯಿಯ ಮುಂದೆ ಹೇಳುತ್ತೀಯಾ ರಂಡಿ ಅಂತ ಅವಾಚ್ಯವಾಗಿ ಬೈಯುತ್ತಾ ಹೊಡೆದಿದ್ದು ಅಲ್ಲದೇ ಅವರಲ್ಲಿಯ ನಮ್ಮ ಭಾವನಾದ [ಗಂಡನ ಅಣ್ಣ] ಮಾನಪ್ಪ ತಂದೆ ಚಂದ್ರಾಮಪ್ಪ ಗೋಗಿ ಈತನು ಈ ಸೂಳಿಗೆ ಬಿಡಬ್ಯಾಡಿರಿ ಇವಳ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ನನ್ನ ಕೂದಲು ಹಾಗು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಸತ್ತೆನೆಪ್ಪೊ ಅಂತ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಷ್ಟರಲ್ಲಿ ನಮ್ಮ ಸಂಬಂದಿಯಾದ ಗೋಪಾಲ ತಂದೆ ಯಮನಪ್ಪ ಗುಳಬಾಳ ಹಾಗು ನಮ್ಮ ಅಣ್ಣನ ಹೆಂಡತಿಯಾದ ಪಾರ್ವತಿ ಗಂಡ ಅಂಬ್ರೀಶ ಇವರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರು ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಈ ವಿಷಯದಲ್ಲಿ ಕೇಸ್ ಏನಾದರೂ ಮಾಡಿದಲ್ಲಿ ನಿನ್ನನ್ನು ಖಲಾಸ ಮಾಡುತ್ತೇವೆ ಅಂತ ಜೀವದ ಭಯ ಹಾಕಿದರು. ನಂತರ ನಾನು ನನಗೆ ಬಿಡಿಸಿಕೊಂಡವರ ಜೊತೆಯಲ್ಲಿ ನಮ್ಮ ಊರಿಗೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ನೀನು ಸರಿಯಾಗಿ ಇಲ್ಲ, ನಿನಗೆ ಯಾವದೇ ಕೆಲಸ ಮಾಡಲು ಬರುವದಿಲ್ಲ ಅಂತ ವಿನಾಕಾರಣವಾಗಿ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಅವಾಚ್ಚ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದಲ್ಲದೇ, ಮಾನಬಂಗ ಮಾಡಲು ಸಹ ಪ್ರಯತ್ನಿಸಿದ ನನ್ನ ಗಂಡ, ಅತ್ತೆ, ಭಾವ ಹಾಗು ನಾದನಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 188/2022 ಕಲಂ 498[ಎ],354,323,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: 79/2022 ಕಲಂ. 498(ಎ),323,504,506 ಸಂ 34 ಐ.ಪಿ.ಸಿ: ಕಳೆದ 10-11 ವರ್ಷದ ಹಿಂದೆ ಫಿಯರ್ಾದಿಯ ಸೋದರತ್ತೆಯ ಮಗ ಆರೋಪಿ ಶರಣಬಸವ ಈತನು ಫಿರ್ಯಾದಿಯೊಂದಿಗೆ ಪ್ರೀತಿಸುತ್ತಿರುವ ವಿಷಯ ಆರೋಪಿತನ ಮೊದಲನೇ ಹೆಂಡತಿಗೆ ಗೊತ್ತಾಗಿ ಆಕೆ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದಾಗ ಅರೋಪಿತನು ಫಿಯರ್ಾದಿಯ ತಂದೆ ತಾಯಿಗೆ ಒಪ್ಪಿಸಿ 10 ವರ್ಷದ ಹಿಂದೆ ಮದುವೆ ಮಾಡಿಕೊಂಡಿರುತ್ತಾನೆ. ಮದುವೆಯಾದ ನಂತರ ಆತನ ಮೊದಲನೇ ಹೆಂಡತಿ ವಿಚ್ಛೇದನ ಪಡೆದುಕೊಂಡು ಹೋಗಿರುತ್ತಾಳೆ. ಆಗ ಆರೋಪಿತನು ಫಿಯರ್ಾದಿಯೊಂದಿಗೆ ಚನ್ನಾಗಿ ಸಂಸಾರ ಮಾಡಿಕೊಂಡಿದ್ದು 02 ಹೆಣ್ಣು ಮಕ್ಕಳು ಜನಿಸಿರುತ್ತಾರೆ. ಈಗ ಒಂದು ವರ್ಷದಿಂದ ಆರೋಪಿತನು ಫಿಯರ್ಾದಿಗೆ ನೀನು ಅವಿದ್ಯಾವಂತಳು, ನಾನು ನೌಕರಿ ಮಾಡುವವ. ನಮ್ಮಿಬ್ಬರಿಗೆ ಹೊಂದಾಣಿಕೆ ಆಗುವುದಿಲ್ಲ. ಅಲ್ಲದೆ ನೀನು ಹಳ್ಳಿಯವಳು ನಿನಗೆ ಪ್ರಪಂಚ ಗೊತ್ತಿಲ್ಲ ಅಂತ ಕಿರುಕುಳ ನೀಡಲು ಪ್ರಾರಂಭಿಸಿ ಮನೆಗೆ ಬರುವದನ್ನು ಬಿಟ್ಟು ಅಲ್ಲಿ ಇಲ್ಲೆ ಶಹಾಪೂರ ಭೀ.ಗುಡಿಯಲ್ಲಿ ಇರಲು ಪ್ರಾರಂಭಿಸಿದನು. ಆಗ ಫಿಯರ್ಾದಿಯ ಅತ್ತೆ ಚಂದಮ್ಮ ಹಾಗು ಮೈದುನ ಪ್ರವೀಣಕುಮಾರ ಇವರು ಸಹ ಕಿರುಕುಳ ನೀಡುತ್ತಿದ್ದು, ಈ ವಿಷಯ ಫಿಯರ್ಾದಿಯ ತಂದೆಗೆ ಗೊತ್ತಾಗಿ ಇಂದು ಕೇಳಲು ಬಂದಾಗ ಸಾಯಂಕಾಲ 05.00 ಗಂಟೆ ಸುಮಾರಿಗೆ ಶರಣಬಸವ ಈತನು ಬಂದು ಎಲೇ ರಂಡಿ ನಿನಗೂ ನನಗೂ ಹೊಂದಾಣಿಕೆ ಆಗುವದಿಲ್ಲ ಅಂತ ನಿನಗ ಎಷ್ಟು ಹೇಳಿದರೂ ಮತ್ತೆ ನ್ಯಾಯ ಮಾಡಲು ತವರು ಮನೆಯವರಿಗೆ ಕರಿಸಿದಿಯಾ ಅಂತ ಕೈಯಿಂದ ಹೊಡೆ ಬಡೆ ಮಡಿದ್ದು ಬಿಡಿಸಲು ಬಂದ ಫಿಯರ್ಾದಿಯ ತಂದೆಗೂ ಸಹ ಕಾಲಿನಿಂದ ಒದ್ದು ಅವಚ್ಯವಗಿ ಬೈದು ಜೀವ ಬೆದರಿಕೆ ಹಾಖಿದ ಬಗ್ಗೆ ದೂರು.