ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-12-2021

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ: 124/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ.01/12/2021 ರಂದು ಮದ್ಯಾಹ್ನ 12-45 ಗಂಟೆಗೆ ಶ್ರೀ ಚಂದ್ರಶೇಖರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ವರದಿ ಹಾಗೂ ಜಪ್ತಿ ಪಂಚನಾಮೆಯನ್ನು ಒಪ್ಪಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ: 01/12/2021 ರಂದು 11-15 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಮೈಲಾಪೂರ ಬೆಸ್ ಹತ್ತಿರ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 11-30 ಎಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ಸಾಬರೆಡ್ಡಿ ತಂ. ಸಾಬಣ್ಣ ಅನಪೂರ ವಃ 33 ಜಾಃ ಮಾದಿಗ ಉಃ ಕೂಲಿಕೆಲಸ ಸಾಃ ತಪ್ಪಡಗೇರಾ ಯಾದಗಿರಿ ಅಂತಾ ತಿಳಿಸಿದ್ದು ಆರೋಪಿತನಿಂದ ಮಟಕಾ ಜೂಜಾಟದ 1) ನಗದು ಹಣ 1520/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00 ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 11-30 ಎಎಂದಿಂದ 12-30 ಪಿಎಂದವರೆಗೆ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮದ್ಯಾಹ್ನ 12-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ. 124/2021 ಕಲಂ. 78(3) ಕೆ.ಪಿ.ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
62/2021 ಕಲಂ 279, 337, 338 ಐಪಿಸಿ : ದಿನಾಂಕ 30/11/2021 ರಂದು ರಾತ್ರಿ 8-15 ಪಿ.ಎಂ.ಕ್ಕೆ ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಶ್ರೀ ನಿಂಗಪ್ಪ ಎಚ್.ಸಿ-05 ರವರಿಗೆ ಇಂದು ದಿನಾಂಕ 01/12/2021 ರಂದು ಬೆಳಿಗ್ಗೆ 5-15 ಎ.ಎಂ.ಕ್ಕೆ ನೇಮಿಸಿ ಕಳಿಸಿದ್ದು ಇರುತ್ತದೆ. ಸದರಿ ಎಚ್.ಸಿ-05 ರವರು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವಿಚಾರಣೆ ನಂತರ, ಗಾಯಾಳು ಪಿಯರ್ಾದಿ ಶ್ರೀಮತಿ ಸಾಬಮ್ಮ ಗಂಡ ಹಣಮಂತ ಬಾವೂರ ವಯ;45 ವರ್ಷ, ಜಾ;ಕಬ್ಬಲಿಗ, ಉ;ಕೂಲಿ, ಸಾ;ಜಿನಕೇರಿ ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 10-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆಯನ್ನು ಹಾಜರು ಪಡಿಸಿದ್ದು, ಹೇಳಿಕೆ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ದಿನಾಂಕ 29/11/2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನ್ನ ಗಂಡನಾದ ಹಣಮಂತ ಇವರು ಇಂದು ಅಬ್ಬೆತುಮಕುರ ಮಠಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರೋಣ ನಡೀ ಅಂತಾ ನನಗೆ ತಯಾರು ಮಾಡಿ ನಮ್ಮ ಮೋಟಾರು ಸೈಕಲ್ ನಂಬರ ಕೆಎ-36, ವಾಯ್-6443 ನೇದ್ದರ ಮೇಲೆ ನನಗೆ ಕರೆದುಕೊಂಡು ನಮ್ಮೂರಿನಿಂದ ಅಬ್ಬೆತುಮಕುರಕ್ಕೆ ಹೊರಟೆವು. ಹೀಗಿದ್ದು ಮಾರ್ಗ ಮದ್ಯೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿ ನಗರದ ಎಸ್.ಎಲ್.ವಿ ಹೊಟೆಲ್ ಕ್ರಾಸ್ ಹತ್ತಿರ ನಮ್ಮ ಮೊಟಾರು ಸೈಕಲನ್ನು ನನ್ನ ಗಂಡನು ನಡೆಸಿಕೊಂಡು ಅಬ್ಬೆತುಮಕುರ ಕಡೆಗೆ ಹೋಗುತ್ತಿದ್ದಾಗ ಒಂದು ಕ್ರೂಜರ್ ಜೀಪ್ ವಾಹನದ ಚಾಲಕನು ಎಸ್.ಎಲ್.ವಿ ಹೊಟೆಲ್ ಕಡೆಯಿಂದ ಮುಖ್ಯ ರಸ್ತೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಬಂದವನೇ, ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ ಸದರಿ ಅಪಘಾತದಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರು ಮೋಟಾರು ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದೆವು. ಸದರಿ ಅಪಘಾತದಲ್ಲಿ ನನಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿ ತಲೆಗೆ ಚಕ್ಕರ್ ಬಂದಂತೆ ಆಗುತ್ತಿದ್ದು, ಸಾವರಿಸಿಕೊಂಡು ಎದ್ದು ನೋಡಲು ನನ್ನ ಗಂಡನಿಗೆ ಈ ಅಪಘಾತದಲ್ಲಿ ಎರಡು ಮೊಣಕಾಲುಗಳಿಗೆ ತರಚಿದ ರಕ್ತಗಾಯ, ಎಡಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯವಾಗಿ ಬಾವು ಬಂದಿರುತ್ತದೆ. ಅಪಘಾತವನ್ನು ಕಂಡು ಅಲ್ಲಿಯೆ ಇದ್ದ ನಮ್ಮೂರಿನ ಶ್ರೀ ತಾಯಪ್ಪ ತಂದೆ ನಾಗಪ್ಪ ದುಗನೂರ ಹಾಗೂ ಯಾದಗಿರಿಯ ಲಕ್ಷ್ಮಣ ತಂದೆ ಹಣಮಂತ ಬಾವೂರು ಇವರುಗಳು ಬಂದು ನಮಗೆ ವಿಚಾರಿಸಿರುತ್ತಾರೆ. ನಮಗೆ ಅಪಘಾತ ಪಡಿಸಿದ ಕ್ರೂಜರ್ ಜೀಪ್ ಮತ್ತು ಅದರ ಚಾಲಕನು ಘಟನಾ ಸ್ಥಳದಲ್ಲಿದ್ದು ಕ್ರೂಜರ್ ನಂಬರ ನೊಡಲಾಗಿ ಕೆಎ-37, ಎಮ್-2190 ನೇದ್ದು ಇದ್ದು, ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾಗರ ತಂದೆ ಟೋಪಸಿಂಗ್ ಚವ್ಹಾಣ ವಯ;27 ವರ್ಷ, ಜಾ;ಲಂಬಾಣಿ, ಉ;ಜೀಪ್ ಚಾಲಕ, ಸಾ;ಲಕ್ಷ್ಮೀ ನಗರ ಯಾದಗಿರಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ದಿನಾಂಕ 29/11/2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಜರುಗಿರುತ್ತದೆ. ಆಗ ಸುಭಾಷ್ ವೃತ್ತದಲ್ಲಿದ್ದ ಪೊಲೀಸರು ಬಂದು ಅಪಘಾತದಲ್ಲಿ ಭಾಗಿಯಾದ ಎರಡು ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ನಮಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿನ ವೈದ್ಯರು ನಮಗೆ ಚಿಕಿತ್ಸೆ ನೀಡಿ, ಸಿಟಿ ಸ್ಕ್ಯಾನ್ ವರದಿ ಬಂದ ನಂತರ ನನಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಹೋಗಲು ತಿಳಿಸಿದ್ದು, ಪ್ರಕರಣದ ಕುರಿತು ಪೊಲೀಸರು ಆಸ್ಪತ್ರೆಗೆ ವಿಚಾರಣೆಗೆ ಬಂದಾಗ ನಾವು ಈ ಘಟನೆ ಬಗ್ಗೆ ಕೇಸು ಕೊಡುವ ಕುರಿತು ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸುತ್ತೇವೆ ಸದ್ಯಕ್ಕೆ ಉಪಚಾರ ಪಡೆಯಲು ಕಲಬುರಗಿಗೆ ಹೊರಟಿದ್ದು ನಂತರ ತಿಳಿಸುವುದಾಗಿ ಹೇಳಿದ್ದು ಇರುತ್ತದೆ. ನನಗೆ ಅದೇ ದಿನ ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆಯಾಗಿದ್ದು ಇರುತ್ತದೆ. ಹೀಗಿದ್ದು ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಪ್ರಕರಣ ದಾಖಲು ಮಾಡು ಅಂತಾ ತಿಳಿಸಿದ ಮೇರೆಗೆ ತಡವಾಗಿ ಈ ಘಟನೆ ಬಗ್ಗೆ ದೂರು ನೀಡುತ್ತಿದ್ದು, ದಿನಾಂಕ 29/11/2021 ರಂದು ಬೆಳಿಗ್ಗೆ 11 ಎ.ಎಂ.ದ ಗಂಟೆ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಎಸ್.ಎಲ್.ವಿ ಹೊಟೆಲ್ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನನ್ನ ಗಂಡನು ನಮ್ಮ ಮೊಟಾರು ಸೈಕಲ್ ನಂಬರ ಕೆಎ-36, ವಾಯ್-6443 ನೇದ್ದನ್ನು ನಡೆಸಿಕೊಂಡು ಹೊರಟಿದ್ದಾಗ ಕ್ರೂಜರ್ ಜೀಪ್ ನಂಬರ ಕೆಎ-37, ಎಮ್-2190 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೊಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 10-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆಯನ್ನು ಹಾಜರು ಪಡಿಸಿದ್ದು, ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 62/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ:186/2021 ಕಲಂ 279,337,338 ಐಪಿಸಿ : ಇಂದು ದಿನಾಂಕ 01.12.2021 ರಂದು ಬೆಳಿಗ್ಗೆ 10:45 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳುದಾರರು ಕೂಡಿಕೊಂಡು ಆರೋಪಿತನಿಗೆ ಸೇರಿದ ಟ್ರ್ಯಾಕ್ಟರನಲ್ಲಿ ಪೇಚಿಂಗ ಕಲ್ಲುಗಳನ್ನು ಹಾಕಿಕೊಂಡು ಹೊಳಗೋಳ ಗ್ರಾಮದಿಂದ ಮಿನಾಸಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಇಳಿಜಾರಿನಲ್ಲಿ ರಸ್ತೆಯ ತಿರುವಿನಲ್ಲಿ ಒಮ್ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಟ್ರ್ಯಾಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾದಲ್ಲಿ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:186/2021 ಕಲಂ 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 03-12-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080