ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-12-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 129/2022 ಕಲಂ 302 ಐಪಿಸಿ : ಇಂದು ದಿನಾಂಕ 01.12.2022 ರಾತ್ರಿ 01.00 ಗಂಟೆಗೆ ಸಾವಿತ್ರಮ್ಮ ಗಂಡ ರಾಮು ಪಲ್ಲೋರ ವಯ|| 28 ವರ್ಷ, ಜಾ|| ಗೊಲ್ಲಾ, ಉ|| ಕೂಲಿಕೆಲಸ ಸಾ|| ಬದ್ದೆಪಲ್ಲಿ ಗ್ರಾಮ ತಾ|| ಗುರುಮಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಬಂದು ಲಿಖಿತ ದೂರು ಸಲ್ಲಿಸಿದ್ದು ದೂರಿನ ಸಾರಾಂಶವೇನೆಂದರೆ, 'ನನ್ನ ತವರೂರು ಶಹಾಪೂರು ತಾಲೂಕಿನ ಗೋಗಿ ಗ್ರಾಮ ಇದ್ದು ಕಳೆದ ಸುಮಾರು ಮೂರು ವರ್ಷಗಳ ಕೆಳಗೆ ನನಗೆ ನನ್ನ ತಂದೆ ತಾಯಿ ಗುರುಮಠಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದ ತಾಯಪ್ಪ ಪಲ್ಲೋರ ಈತನ ದೊಡ್ಡ ಮಗನಾದ ರಾಮು ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ನನ್ನ ಗಂಡ ಮೊದಲಿನಿಂದಲೂ ಕುಡಿತದ ಚಟ ಇದ್ದವನಿದ್ದು ಇತ್ತೀಚಿನ ಒಂದು ವರ್ಷದಿಂದ ವಿಪರೀತವಾಗಿ ಕುಡಿತ ಚಟಕ್ಕೆ ಬಿದ್ದು ನನ್ನೊಟ್ಟಿಗೆ ಕಿರಿಕಿರಿ ಮಾಡಿ ಹೊಡೆಬಡೆ ಮಾಡುತ್ತಾ ಬಂದಿದ್ದಾನೆ. ಸುಮಾರು 9 ತಿಂಗಳ ಹಿಂದೆ ನನಗೆ ಹೆರಿಗೆಯಾಗಿ ಹೆಣ್ಣು ಕೂಸು ಹುಟ್ಟಿದೆ ನನ್ನ ಮಗಳ ಹೆಸರು ತನುಶ್ರೀ ಅಂತಾ ಇದೆ. ಹೀಗಿದ್ದು ನಿನ್ನೆ ದಿನಾಂಕ 30.11.2022 ರಂದು ಬೆಳಗ್ಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ ಇನ್ನೂ ಮನೆಯಲ್ಲೇ ಇದ್ದಿಯಲ್ಲ ಇವತ್ತ ಕೂಲಿಕೆಲಸಕ್ಕೆ ಹೋಗುವುದಿಲ್ಲ ಏನು ಅಂತಾ ನನಗೆ ಕೇಳಿದ್ದ ಅದಕ್ಕೆ ನಾನು ನಿನ್ನೆ ಕೂಲಿಕೆಲಸಕ್ಕೆ ಹೋದಾಗ ಕೂಸು ಬಿಸಿಲಿಗೆ ತಾಳದೆ ದಿನಪೂತರ್ಿ ಅತ್ತಿದ್ದಾಳೆ ನಾನು ಇಂದು ಕೂಲಿಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಹೇಳಿದ್ದೆ. ಅದಕ್ಕೆ ನನ್ನ ಗಂಡ ಕೂಲಿಕೆಲಸಕ್ಕೆ ಹೋಗಲಿಲ್ಲ ಎಂದರೆ ಮನೆಯಂಗ ನಡಿತದ ನಾನು ಕೂಸಿಗೆ ಇಟ್ಟುಕೊಂಡು ಮನೆಯಲ್ಲಿಯೇ ಇರುತ್ತೇನೆ ನೀನು ಕೂಲಿ ಕೆಲಸಕ್ಕೆ ಹೋಗು ಅಂತಾ ನನಗೆ ಸಿಟ್ಟು ಮಾಡಿದ ಅದಕ್ಕೆ ನಾನು ನೀಏನು ಕೂಸನ್ನು ಇಟ್ಟುಕೊಳ್ಳುವದಿಲ್ಲ ನಾನು ಕೂಲಿಗೆ ಹೋಗಲ್ಲಾ ಎಂದಾಗ ನೀನೇನು ಗಂಡು ಕೂಸಿಗೆ ಹಡೆದಂಗ ಮಾಡ್ತಿಯಲ್ಲ ಅದೇನು ಹೆಣ್ಣು ಕೂಸು ಅತ್ರೆ ಅಳಲಿ ನೀನು ಮೊದಲು ಕೂಲಿಕೆಲಸಕ್ಕೆ ಹೋಗು ಅಂತಾ ನನ್ನಲ್ಲಿದ್ದ ನನ್ನ ಮಗಳನ್ನು ಎಳೆದುಕೊಂಡ ನಿರ್ವಯವಿಲ್ಲದೆ ನಾನು ಬುತ್ತಿ ಕಟ್ಟಿಕೊಂಡು ಹತ್ತಿಬಿಡಿಸುವ ಕೂಲಿಕೆಲಸಕ್ಕೆ ನಮ್ಮ ಸಂಬಂದಿಕರಾದ ಶರಣಪ್ಪ ತಂದೆ ಲಕ್ಷ್ಮಣ ಪಲ್ಲೋರ ಇವರ ಹೊಲಕ್ಕೆ ಹೋಗಲು ತಯಾರಾದೆ. ನನ್ನ ಅತ್ತೆ ನರಸಿಂಗಮ್ಮ ಇವಳು ಸಹ ತಾಯಪ್ಪ ಪಲ್ಲೋರ ಇವರ ಹೊಲಕ್ಕೆ ಹತ್ತಿಬಿಡಿಸಲು ಹೋದಳು. ನಂತರ ನಾನು ಶರಣಪ್ಪ ಪಲ್ಲೋರ ಇವರ ಹೊಲಕ್ಕೆ ಹತ್ತಿಬಿಡಿಸಲು ಕೂಲಿಕೆಲಸಕ್ಕೆ ಹೋಗಿದ್ದೆ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ನನ್ನ ಗಂಡ ರಾಮು ಈತನು ನನ್ನಲ್ಲಿಗೆ ಬಂದ. ಕೂಸನ್ನು ಎಲ್ಲಿಬಿಟ್ಟು ಬಂದಿ ಅಂತಾ ನಾನು ನನ್ನ ಗಂಡನಿಗೆ ಕೇಳಿದಾಗ ಕೂಸು ಸತ್ತೋಗಿದೆ ಮನೆ ಸಮೀಪದ ಭೀಮಮ್ಮ ಚೂರಿ ಇವಳಿಗೆ ಕೂಸಿಗೆ ಕೊಟ್ಟು ಬಂದಿದ್ದೇನೆ ಅಂತಾ ಹೇಳಿದ ತಕ್ಷಣ ನನಗೆ ದಿಕ್ಕು ತೋಚದಂಗಾಗಿ ನೆಲದ ಮೇಲೆ ಕುಸಿದುಬಿದ್ದು ಅಳುವಾಗ ನನ್ನೊಟ್ಟಿಗೆ ಹೊಲದಲ್ಲಿ ಹತ್ತಿ ಬಿಡಿಸುತಿದ್ದ ನರಸಮ್ಮ ಗಂಡ ಶರಣಪ್ಪ, ಅಂಜಮ್ಮ ಗಂಡ ಶರಣಪ್ಪ, ಸರೋಜಮ್ಮ ಗಂಡ ಹಣಮಂತ, ಶ್ರೀದೇವಿ ಗಂಡ ತಿಪ್ಪಣ್ಣ, ಶಶಿಕಲಾ ಗಂಡ ಗರಡಪ್ಪ ಹಾಗೂ ಶರಣಪ್ಪ ತಂದೆ ಲಕ್ಷ್ಮಣ ಇವರು ಬಂದು ಏನಾಗ್ಯದ ಅಂತಾ ನನ್ನ ಗಂಡನಿಗೆ ಕೇಳಿದರು. ಅದಕ್ಕೆ ನನ್ನ ಗಂಡ ನನ್ನ ಮಗಳು ತನುಶ್ರೀ ಸತ್ತೋಗಿದ್ದಾಳೆ ಅಂತಾ ತಿಳಿಸಿದಾಗ ಕೂಸು ಹೆಂಗ ಸತ್ತೋಯಿತು ಅಂತಾ ಅವರು ಮತ್ತು ನಾನು ನನ್ನ ಗಂಡನಿಗೆ ಕೇಳಿದೆವು. ಅದಕ್ಕೆ ನನ್ನ ಗಂಡ ತಿಳಿಸಿದ್ದೇನೆಂದರೆ, ಕೂಸು ಮಲಗದೆ ಅಳುತ್ತಾ ನನಗೆ ಸತಾಯಿಸಿದ್ದರಿಂದ ನನಗೆ ಸಿಟ್ಟು ಬಂದು ಅವಳ ಕೊರಳಲ್ಲಿದ್ದ ದಾರಗಳಿಂದಲೆ ಅವಳ ಕುತ್ತಿಗೆ ಬಿಗಿಯಾಗಿ ಎಳೆದು ಮನೆಯಲ್ಲಿಯೇ ಅರ್ಧ ತಾಸು ಮೆದಲು ಸಾಯೊಟ್ಟಿ ನಂತರ ಕೂಸಿನ ಹೆಣ ಭೀಮಮ್ಮ ಚೂರಿ ಇವಳಿಗೆ ಕೊಟ್ಟು ಬಂದಿದ್ದೇನೆ ಅಂತಾ ತಿಳಿಸಿದ. ಕೂಡಲೇ ನಾನು ಮತ್ತು ನನ್ನೊಟ್ಟಿಗೆ ಹತ್ತಿಬಿಡಿಸುತಿದ್ದವರೆಲ್ಲರು ಕೂಡಿ ಭೀಮಮ್ಮಳ ಮನೆಹತ್ತಿರ ಹೋದೆವು ಮುದಿಕಿ ಭೀಮಮ್ಮಳ ತೊಡೆಯಮೇಲೆ ಇದ್ದ ನನ್ನ ಮಗಳು ತನುಶ್ರೀಗೆ ನಾನು ಎತ್ತಿಕೊಂಡು ಮಯ್ಯೆಲ್ಲ ಸವರಿ ನೋಡಿದೆ ನನ್ನ ಮಗಳ ಕುತ್ತಿಗೆ ಕೆಳಭಾಗದಲ್ಲಿ ಅರ್ಧಚಂದ್ರಾಕಾರದ ಗಾಯದ ಗುರುತು ಕಂಡಿತು ನನ್ನಮಗಳ ಕೊರಳಲ್ಲಿದ್ದ ಕೆಂಪು ಮತ್ತು ಬಿಳಿ ಬಣ್ಣದ ದಾರಗಳು ಹಾಗೆ ಇದ್ದವು. ನಾನು ಸತ್ತ ನನ್ನ ಮಗಳನ್ನು ಹೆತ್ತುಕೊಂಡು ನನ್ನ ಮನೆಗೆ ಹೋಗಿ ಅಳುತ್ತಾ ಕುಂತಿದ್ದೆ. ನಮ್ಮ ಮನೆಯ ಪಕ್ಕದವರಿಗೆ ನನ್ನ ತಮ್ಮನ ಮೊಬೈಲ್ ಫೋನ್ ನಂಬರ್ ಹೇಳಿ ಸುದ್ದಿ ತಿಳಿಸುವಂತೆ ಹೇಳಿದ್ದೆ. ಸಾಯಂಕಾಲ ನನ್ನ ತಾಯಿ ನನ್ನ ತಮ್ಮ ಹಾಗೂ ನಮ್ಮ ಸಂಬಂಧಿಕರು ಬದ್ದೆಪಲ್ಲಿಗೆ ಬಂದ ನಂತರ ಅವರಿಗೆ ವಿಷಯ ತಿಳಿಸಿದ್ದೇನೆ. ನನಗೆ ಹೆಣ್ಣು ಕೂಸು ಹುಟ್ಯಾದೆಂಬ ಸಿಟ್ಟಿನಲ್ಲಿ ಮತ್ತು ನಾನು ಕೂಲಿಕೆಲಸಕ್ಕೆ ಹೋಗದೆ ಮನೆಯಲ್ಲೇ ಅವಳನ್ನು ಇಟ್ಟುಕೊಂಡು ಇರುತ್ತೇನೆಂಬ ಅಸೂಯೆದಿಂದ ನನ್ನ ಗಂಡ ಹೆಗಾದರು ಮಾಡಿ ಹೆಣ್ಣು ಕೂಸಾದ ನನ್ನ ಮಗಳಿಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ನಿನ್ನೆ ದಿನಾಂಕ 30.11.2022 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಮಧ್ಯದ ಅವಧಿಯಲ್ಲಿ ಅವಳ ಕುತ್ತಿಗೆಯಲ್ಲಿದ್ದ ತಾಯಿತ ದಾರಗಳಿಂದಲೇ ಕುತ್ತಿಗೆಗೆ ಎಳೆದಿಡಿದು ಉಸಿರುಗಟ್ಟಿಸಿ 9 ತಿಂಗಳ ಪ್ರಾಯದ ನನ್ನ ಮಗಳಾದ ತನುಶ್ರೀಗೆ ನಮ್ಮ ಮನೆಯಲ್ಲಿ ಕೊಲೆಮಾಡಿರುತ್ತಾನೆ. ಕಾರಣ ನನ್ನ ಗಂಡನಾದ ರಾಮು ತಂದೆ ತಾಯಪ್ಪ ಪಲ್ಲೋರ ವಯ|| 32 ವರ್ಷ ಈತನ ವಿರುದ್ದ ಕೊಲೆ ಪ್ರಕರಣ ದಾಖಲಿಸಲು ಕೋರಿದೆ. ಗೋಗಿ ಗ್ರಾಮದಿಂದ ನನ್ನ ತವರು ಮನೆಯವರು ಹಾಗೂ ನಮ್ಮ ಸಂಬಂಧಿಕರು ಬದ್ದೆಪಲ್ಲಿಗೆ ಬಂದ ನಂತರ ನಾನು ಅವರೊಟ್ಟಿಗೆ ಠಾಣೆಗೆ ಬರಲು ತಡವಾಗಿರುತ್ತದೆ.' ಅಂತಾ ಆಪಾದನೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ:143, 147, 341, 323, 324, 504, 506 ಸಂಗಡ 149 ಐಪಿಸಿ : ದಿನಾಂಕ:28/11/2022 ರಂದು ಮದ್ಯಾಯ್ನ 12.00 ಗಂಟೆಗೆ ಫಿರ್ಯಾದಿದಾರನು ತನ್ನ ಹೊಲದಲ್ಲಿ ಸಾಗುವಳಿ ಮಾಡುತ್ತಿದ್ದಾಗ, ಆರೋಪಿತರೆಲ್ಲರೂ ಸೇರಿ ಫಿರ್ಯಾದಿಯ ಹತ್ತಿರ ಬಂದವರೆ, ಫಿರ್ಯಾದಿಯು ಹೊಲದಲ್ಲಿ ಉಳುಮೆ ಮಾಡುವ ಟ್ಯಾಕ್ಟರನ್ನು ನಿಲ್ಲಿಸಿ ಫಿರ್ಯಾದಿಗೆ ಕೆಳಗೆ ಇಳಿ ಬೋಸಡಿ ಸೂಳಿ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಗೆ ಲೇ ಬೋಸುಡಿಕೆ ಹೊಲ ಯಾಕ ಸಾಗುವಳಿ ಮಾಡುತ್ತಿದ್ದಿ ಅಂದಿದ್ದು, ಅದಕ್ಕೆ ಫಿರ್ಯಾದಿಯು ನನ್ನ ಹೊಲ ನಾನು ಸಾಗುವಳಿ ಮಾಡುತ್ತೇನೆ ಏಕೆ ನಿಲ್ಲಿಸಲಿ ಈಗಾಗಲೇ ಒಂದು ಬೆಳೆ ಹಚ್ಚುವದು ನಿಲ್ಲಿಸಿದ್ದಿರಿ, ಹೀಗೆಕೆ ನನಗೆ ತೊಂದರೆ ಕೊಡುತ್ತಿದ್ದಿರಿ, ಜಿಲ್ಲಾಧಿಕಾರಿಗಳಿಗೆ ಬೇಟಿಯಾಗಿದ್ದೇವೆ ನಿಮ್ಮ ಜಮೀನು ನೀವು ಸಾಗುವಳಿ ಮಾಡಿಕೊಂಡು ಬೆಳೆ ಹಚ್ಚಿಕೊಳ್ಳಿರಿ ಎಂದು ಹೇಳಿದ್ದರಿಂದ ಬೆಳೆಯನ್ನು ಹಚ್ಚುತ್ತಿದ್ದೇನೆ ಅಂತಾ ಅಂದಾಗ, ಆರೋಪಿತರೆಲ್ಲರೂ ಇವತ್ತು ಇವನಿಗೆ ಮುಗಿಸಿ ಬಿಡೋಣ ಏನ್ ಕಿತ್ತಿಕೊಳ್ಳುತ್ತಾನ ಕಿತ್ತುಕೊಳ್ಳಿ ಅಂತಾ ಅಂದು ಕಾಲಿನಿಂದ ಒದ್ದು, ಕೈಯಿಂದ ಹೊಡೆದು ಒಳಪೆಟ್ಟು ಮಾಡಿದ್ದು, ಫಿರ್ಯಾದಿಯು ಮೂಚರ್ೆ ಹೋದಾಗ, ಆರೋಪಿತರೆಲ್ಲರೂ ಫಿರ್ಯಾದಿಗೆ ಹೊಡೆಯುವದನ್ನು ಬಿಟ್ಟು ಹೋದ ಬಗ್ಗೆ ಅಪರಾಧ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ: 323, 341, 504, 506 ಸಂಗಡ 34 ಐಪಿಸಿ : ಫಿರ್ಯಾದಿದಾರನು ಇಸ್ಲಾಂಪೂರ ಕ್ರಾಸ್ ಹತ್ತಿರ ಇರುವ ತನ್ನ ಜಾಗದಲ್ಲಿ ಮನೆ ಕಟ್ಟಿಸುತ್ತಿದ್ದು, ಸದರಿ ಜಾಗದ ಹತ್ತಿರ ಆರೋಪಿತರ ಹೊಲವಿದ್ದು, ಫಿರ್ಯಾದಿಯ ಜಾಗದ ಹತ್ತಿರ ಆರೋಪಿತರ ಹೊಲದ ನಡುವೆ 8ಪೀಟ ಸಾರ್ವಜನಿಕರ ಜಾಗವಿದ್ದು,ಾರೋಪಿತರು ಇಲ್ಲಿ ನಿನ್ನ ಜಾಗ ಇಲ್ಲ ಮನೆ ಕಟ್ಟಬೇಡ ಅಂತಾ ತಕರಾರು ಮಾಡುತ್ತಿದ್ದು, ದಿನಾಂಕ:28/11/2022 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಆರೋಪಿತನು ಜಾಗ ಬಿಡದೆ ಟ್ಯಾಕ್ಟರದಿಂದ ಗಳೆ ಹೊಡೆಯುತ್ತಿದ್ದು, ಫಿರ್ಯಾದಿದಾರನು ಆರೋಪಿತರಿಗೆ ನಿಮ್ಮ ಹೊಲ ಆಚೆ ಇದೆ, 8ಪೀಟ್ ಸಾರ್ವಜನಿಕ ರಸ್ತೆ ಇದೆ, ಹೀಗೆ ಸುಮ್ಮನೆ ತಕರಾರು ಮಾಡಿದರೆ ಹೇಗೆ ಅಂತಾ ಅಂದಾಗ, ಅಷ್ಟಕ್ಕೆ ಆರೋಪಿ ನಂ:1ನೇದ್ದವನು ಟ್ಯಾಕ್ಟರ್ ನಿಲ್ಲಿಸಿ ಫಿರ್ಯಾದಿಯ ಹತ್ತಿರ ಹೋಗಿ ಅವನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ, ಮಗನೆ ನಿನ್ನ ಸೊಕ್ಕು ಬಹಳಾಗ್ಯಾದ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಎಲ್ಲದಕ್ಕೆ ಅಡ್ಡ ಬಂದು ನಮಗೆ ಹೊಲ ಉಳಿಮೆ ಮಾಡಲು ಬಿಡುವಲ್ಲಿ ಅಂತಾ ನನಗೆ ಕೈಯಿಂದ ಹೊಡೆದಿದ್ದು, ಅಲ್ಲದೆ ಾರೋಪಿ ನಂ:2 ನೇದ್ದವನು ಸಹ ಓಡಿ ಬಂದು ಫಿರ್ಯಾದಿಗೆ ಕೈಯಿಂದ ಹೊಡೆದಿದ್ದು, ಅಲ್ಲದೆ ಆರೋಪಿತರಿಬ್ಬರೂ ಕೂಡಿ ಫಿರ್ಯಾದಿಗೆ ಹೊಡೆಯುವದನ್ನು ಬಿಟ್ಟು ಜೀವದ ಬೆದರಿಕೆ ಹಾಕುತ್ತಾ ಹೋದ ಅಬಗ್ಗೆ ಅಪರಾಧ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ:. 133/2022 ಕಲಂ: 78(3) ಕೆ.ಪಿ ಎಕ್ಟ 1963 : ಇಂದು ದಿನಾಂಕ:01/12/2022 ರಂದು 1-30 ಪಿಎಮ್ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ಜಪ್ತಿ ಪಂಚನಾಮೆಯೊಂದಿಗೆ ಸರಕಾರಿ ತಫರ್ೆಯಿಂದ ವರದಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 01/12/2022 ರಂದು ಸಮಯ ಬೆಳಗ್ಗೆ 11-00 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ವೇಣುಗೋಪಾಲ ಪಿಸಿ 36, ಸಾಬರಡ್ಡಿ ಪಿಸಿ 290 ಮತ್ತು ಗೋವಿಂದ ಪಿಸಿ 16 ರವರು ಹಾಗೂ ಜೀಪ ಚಾಲಕ ತಾಯಪ್ಪ ಹೆಚ್ಸಿ 79 ರವರು ಪೋಲಿಸ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಬೀಟ್ ಸಂ.01 ರಲ್ಲಿ ಬರುವ ಬೀರನಕಲ್ ತಾಂಡದ ಸೇವಲಾಲ ದೇವಸ್ಥಾನದ ಕಟ್ಟೆಯ ಹತ್ತಿರ ಒಬ್ಬನು ಕುಳಿತುಕೊಂಡು ಅಲ್ಲಿಂದ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ ಎಂದು ಬೀರನಕಲ್ ತಾಂಡ ಬೀಟ್ ಸಿಬ್ಬಂದಿಯವರಾದ ಹಣಮಂತ್ರಾಯ ಹೆಚ್.ಸಿ 36 ರವರು ತಿಳಿಸಿದ ಮೇರೆಗೆ 11:10 ಎಎಮ್ಕ್ಕೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿ ಬಗ್ಗೆ ಮಾಹಿತಿ ತಿಳಿಸಿ, ಸದರಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪಿನಲ್ಲಿ ಕುಳಿತು 11:20 ಎಎಮ್ಕ್ಕೆ ವಡಗೇರಾ ಠಾಣೆಯಿಂದ ಹೊರಟು ಸಮಯ 11:50 ಎಎಮ್ ಸುಮಾರಿಗೆ ಬೀರನಕಲ್ ತಾಂಡ ತಲುಪಿ ಬೀರನಕಲ್ ತಾಂಡದ ಸಜ್ಜಿಬಾಯಿ ಇವರ ಮನೆಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ತಾಂಡದ ಸೇವಲಾಲ ಗುಡಿಯ ಸಾರ್ವಜನಿಕ ಕಟ್ಟೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ದಾರಿ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 12 ಪಿಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಅವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ದೇವಪ್ಪ ತಂದೆ ಧರ್ಮರಾಜ ಚವ್ಹಾಣ ವ:44 ವರ್ಷ ಜಾ:ಲಮ್ಮಾಣಿ ಉ:ಒಕ್ಕಲುತನ ಸಾ:ಬೀರನಕಲ್ ತಾಂಡ ತಾ:ವಡಗೇರಾ ಎಂದು ಹೇಳಿದನು. ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 910/-ರೂ. 3) ಒಂದು ಬಾಲ್ ಪೆನ್ನ ಅ.ಕಿ.00=00 ಹೀಗೆ ಒಟ್ಟು 910/- ರೂ. ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ ಹಣವು ಮಟಕಾ ನಂಬರ ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಘಟನೆ ಸ್ಥಳವು ಬೀರನಕಲ್ ತಾಂಡದ ಸೇವಲಾಲ ಗುಡಿಯ ಕಟ್ಟೆ ಹತ್ತಿರ ಇರುತ್ತದೆ. ಸದರಿ ವಶಕ್ಕೆ ಪಡೆದುಕೊಂಡ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 133/2022 ಕಲಂ: 78(3) ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ ಗುನ್ನೆ ನಂ: 170/2022 ಕಲಂ: 143, 147, 148, 447, 323, 324, 504, 506 ಸಂಗಡ 149 ಐಪಿಸಿ. : ಇಂದು ದಿನಾಂಕ 01.12.2022 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದಲ್ಲಿಯ ಟೀನ್ ಶೇಡ್ನಲ್ಲಿಯ ದನ-ಕರುಗಳ ಸೆಗಣಿ ಬೋಳೆಯಲು ಹೋದಾಗ ನಿನ್ನೆ ದಿನಾಂಕ 30.11.2022 ರ ರಾತ್ರಿ ತಮ್ಮ ಪಕ್ಕದ ಹೊಲದವರಾದ ಆರೋಪಿತರು ತಮ್ಮ ಪೇಚಿಂಗ್ ಕಲುಗಳನ್ನು ಫಿರ್ಯಾದಿದಾರರಿಗೆ ಸೇರಿದ ಹೊಲದಲ್ಲಿ ಹಾಕಿದ್ದನ್ನು ಕಂಡು ಆಕೆ ತಮ್ಮ ಮನೆಗೆ ಹೋಗಿ ವಿಷಯವನ್ನು ತಿಳಿಸಿದ ನಂತರ ಪುನಃ ತನ್ನ ಗಂಡನೊಂದಿಗೆ ಮರಳಿ ಅಲ್ಲಿಗೆ ಬಂದು ನೋಡಿದ್ದು ಸ್ವಲ್ಪ ಹೊತ್ತಿನಲ್ಲಿಯೇ ಸಮಯ ಬೆಳೀಗ್ಗೆ 10:00 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಹೊಲದಲ್ಲಿ ನಿಂತಿದ್ದನ್ನು ಕಂಡ ಫಿರ್ಯಾದಿಯ ಗಂಡನಾದ ಸೂರ್ಯ ರಾಠೋಡ ಇತನು ಆರೊಪಿತರಿಗೆ ತಮ್ಮ ಪೇಚಿಂಗ್ ಕಲ್ಲುಗಳನ್ನು ಅಲ್ಲಿಂದ ತೆಗೆದುಕೊಳ್ಳುವಂತೆ ಹೇಳಿದಕ್ಕೆ ಆರೋಪಿತರು ತಾವು ಪೆಚಿಂಗ್ ಕಲ್ಲುಗಳು ಹಾಕಿದ ಜಾಗವು ತಮ್ಮದೆಂದು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಯೊಂದಿಗೆ ಹಾಗೂ ಆಕೆಯ ಗಂಡನೊಂದಿಗೆ ಜಗಳ ತೆಗೆದು ಅಲ್ಲಿದ್ದ ಕಲ್ಲಿನಿಂದ & ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರರಕಣ ದಾಖಲಾಗಿದ್ದು ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 60/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 01/12/2022 ರಂದು 6-15 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಶೇಕ್ ಮೈಬೂಬ ಎಚ್.ಸಿ-56 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ, ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳು ಮೌನೇಶ ಇವರ ತಂದೆಯಾದ ಪಿಯರ್ಾದಿ ಶ್ರೀ ನಾಗರಾಜ ತಂದೆ ಮಾನಪ್ಪ ವಯ;33 ವರ್ಷ, ಜಾ;ಕಬ್ಬಲಿಗ, ಉ;ಯಾದಗಿರಿ ಸೆಲ್ಸ್ ಟೆಕ್ಸ್ ಆಫೀಸಿನಲ್ಲಿ ಸ್ಟೆನೊ, ಸಾ;ಮಾಚಗುಂಡಾಳ, ತಾ;ಸುರಪುರ, ಜಿ;ಯಾದಗಿರಿ ಹಾ;ವ; ವೀರಭದ್ರೆಶ್ವರ ನಗರ ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಯಾದಗಿರಿ ಸೆಲ್ಸ್ ಟೆಕ್ಸ್ ಆಫೀಸಿನಲ್ಲಿ ಸ್ಟೆನೋ ಅಂತಾ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಮಗನಾದ ಮೌನೇಶ ವಯ;13 ವರ್ಷ ಈತನು ಯಾದಗಿರಿಯ ಡಾನ್ ಬೋಸ್ಕೋ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಮತ್ತು ಮಗಳಾದ ಮಧುಮಿತಾ ವಯ;11 ವರ್ಷ, ವ್ಯಾಸಂಗ ಮಾಡಿಕೊಂಡು ಬಂದಿರುತ್ತಾರೆ. ಇಬ್ಬರು ದಿನಾಲು ಶಾಲೆಗೆ ಆಟೋ ನಂಬರ ಕೆಎ-33, ಬಿ-1466 ನೇದ್ದರಲ್ಲಿ ಹೋಗಿ ಬರುವುದು ಮಾಡುತ್ತಾರೆ, ಆಟೋ ಚಾಲಕ ರವಿ ತಂದೆ ವಿಶ್ವನಾಥ ಚವ್ಹಾಣ ಸಾ;ಗಾಂಧಿನಗರ ತಾಂಡ, ಯಾದಗಿರಿ ಈತನು ಇರುತ್ತಾನೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ 01/12/2022 ರಂದು ಬೆಳಿಗ್ಗೆ ನನ್ನ ಮಗನಾದ ಮೌನೇಶ ಹಾಗೂ ಮಗಳಾದ ಮಧುಮಿತಾ ಇಬ್ಬರು ಆಟೋ ನಂಬರ ಕೆಎ-33, ಬಿ-1466 ನೇದ್ದರ ಚಾಲಕ ರವಿ ಈತನು ನಮ್ಮ ಮನೆಗೆ ಬಂದು ನಮ್ಮ ಮಕ್ಕಳನ್ನು ಡಾನ್ ಬೋಸ್ಕೋ ಶಾಲೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಸಾಯಂಕಾಲ 4-40 ಪಿ.ಎಂ.ಕ್ಕೆ ಆಟೋ ಚಾಲಕ ರವಿ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಸಾಯಂಕಾಲ 4-30 ಪಿ.ಎಂ.ಕ್ಕೆ ಡಾನ್ ಬೊಸ್ಕೋ ಶಾಲೆಯಿಂದ ನನ್ನ ಆಟೋದಲ್ಲಿ ನಿಮ್ಮ ಮಕ್ಕಳಾದ ಮೌನೇಶ ಹಾಗೂ ಮದುಮಿತಾ ಮತ್ತು ನಮ್ಮ ಗಾಂಧಿನಗರದ ಲಲಿತಾ ಗಂಡ ಶಿವರಾಯ ಪವಾರ್ ಇವರಿಗೆ ಕರೆದುಕೊಂಡು ಡಾನ್ ಬೋಸ್ಕೋ ಶಾಲೆ ಕಡೆಯಿಂದ ಯಾದಗಿರಿ ನಗರದ ಕಡೆಗೆ ಬರುವಾಗ ಡಾನ್ ಬೋಸ್ಕೋ ಶಾಲೆ ದಾಟಿದ ನಂತರ ಮುದ್ನಾಳ ಗೌಡರ ಹೊಲದ ಪಕ್ಕದಲ್ಲಿ ಯಾದಗಿರಿ ನಗರಸಭೆ ಕಡೆಗೆ ಹೋಗುವ ಕಚ್ಚಾ ರಸ್ತೆ ಕಡೆಯಿಂದ ಒಬ್ಬ ಬುಲೆರೋ ಜೀಪ್ ಚಾಲಕನು ತನ್ನ ಬುಲೆರೋ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮುಖ್ಯ ರಸ್ತೆಗೆ ಒಮ್ಮೊಲೆ ಅಡ್ಡವಾಗಿ ಬಂದು ನನ್ನ ಆಟೋ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋವು ರಸ್ತೆ ಬದಿಗೆ ಹೋಗಿ ನಿಂತಾಗ ಈ ಅಪಘಾತದಲ್ಲಿ ನನ್ನ ಆಟೋದಲ್ಲಿ ಕುಳಿತಿದ್ದ ನಿಮ್ಮ ಮಗನಿಗೆ ನೋಡಲು ಎರಡು ಕಾಲುಗಳ ತೊಡೆಗಳಿಗೆ ಭಾರೀ ಗುಪ್ತಗಾಯವಾಗಿ ಮುರಿದಂತೆ ಕಂಡು ಬಂದಿರುತ್ತವೆ. ಇನ್ನುಳಿದ ಲಲಿತಾ ಗಂಡ ಶಿವರಾಯ ಪವಾರ್ ಸಾ;ಗಾಂಧಿನಗರ ತಾಂಡ, ಯಾದಗಿರಿ ಈಕೆಗೆ ಎಡಗಾಲಿನ ಮೊಣಕಾಲಿಗೆ ತರಚಿದ ರಕ್ತಗಾಯ ಆಗಿರುತ್ತವೆ. ನಿಮ್ಮ ಮಗಳಿಗೆ ಯಾಔಉದೇ ಗಾಯ, ವಗೈರೆ ಆಗಿಲ್ಲ, ನನಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ನನ್ನ ಆಟೋ ನೇದ್ದಕ್ಕೆ ಅಪಘಾತಪಡಿಸಿದ ಬುಲೆರೋ ಜೀಪ್ ನಂಬರ ನೋಡಲಾಗಿ ಕೆಎ-32, ಎನ್-6241 ನೇದ್ದು ಇರುತ್ತದೆ, ಜೀಪ್ ಚಾಲಕ ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಶಿವಶಂಕರ ಸುಬೇದಾರ ಸಾ;ಶಾಸ್ತ್ರಿ ಚೌಕ್, ಜೇವಗರ್ಿ ಅಂತಾ ತಿಳಿಸಿರುತ್ತಾನೆ, ಈ ಘಟನೆಯು ಇಂದು ದಿನಾಂಕ 01/12/2022 ರಂದು ಸಮಯ 04;40 ಪಿ.ಎಂ.ಕ್ಕೆ ಜರುಗಿರುತ್ತದೆ ನೀವು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂದಾಗ ನನಗೆ ಗಾಬರಿಯಾಗಿ ಈ ವಿಷಯವನ್ನು ನನ್ನ ಹೆಂಡತಿ ಆಶ್ವಿನಿ ಈಕೆಗೆ ತಿಳಿಸಿ ಒಂದು ಖಾಸಗಿ ವಾಹನದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನಗೆ ಈ ಮೇಲೆ ಆಟೋ ಚಾಲಕ ರವಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಆಗ ನಾವುಗಳು ನನ್ನ ಮಗನಿಗೆ ಹಾಗೂ ಲಲಿತಾ ಇವರಿಗೆ ಯಾದಗಿರಿಯ ಖಾಸಗಿ ಆಸ್ಪತ್ರೆಯಾದ ನೀಲಕಂಠ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಇಂದು ದಿನಾಂಕ 01/12/2022 ರಂದು ಸಾಯಂಕಾಲ 4-40 ಪಿ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿಯ ಡಾನ್ ಬೋಸ್ಕೋ ಶಾಲೆಯ ಹತ್ತಿರ ಮುದ್ನಾಳ ಗೌಡರ ಹೊಲದ ಪಕ್ಕದಲ್ಲಿ ಬರುವ ನಗರಸಭೆಗೆ ಹೋಗುವ ಕಚ್ಚಾ ರಸ್ತೆಯ ಹತ್ತಿರ ಮುಖ್ಯ ರಸ್ತೆ ಮೇಲೆ ನನ್ನ ಮಕ್ಕಳು ಕುಳಿತುಕೊಂಡು ಯಾದಗಿರಿ ಕಡೆಗೆ ಬರುತ್ತಿದ್ದ ಆಟೋ ನಂಬರ ಕೆಎ-33, ಬಿ-1466 ನೇದ್ದಕ್ಕೆ ಬುಲೆರೋ ವಾಹನ ನಂಬರ ಕೆಎ-32, ಎನ್-6241 ನೇದ್ದರ ಚಾಲಕ ಬಸವರಾಜ ಈತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಜರುಗಿದ್ದು ಇರುತ್ತದೆ, ಬುಲೆರೋ ಜೀಪ್ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 8-15 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆಯ ಅಸಲು ಪ್ರತಿಯನ್ನು ನನಗೆ ಹಾಜರುಪಡಿಸಿದ್ದು, ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 60/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ ಗುನ್ನೆ ನಂ 167/2022 ಕಲಂ 302, 114 ಸಂಗಡ 34 ಐಪಿಸಿ: ಇಂದು ದಿನಾಂಕ 01/12/2022 ರಂದು 5.00 ಪಿಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಸಾವಿತ್ರಿ ಗಂಡ ರಂಗಯ್ಯ ಗುತ್ತೇದಾರ ವಯಾ|| 45ವರ್ಷ ಜಾ|| ಈಳಗೇರ ಉ|| ಮನೆಗೆಲಸ ಸಾ|| ಇಜೇರಿ ತಾ|| ಜೇವಗರ್ಿ ಜಿ|| ಕಲಬುರಗಿ ಹಾ.ವ|| ಲಕ್ಷ್ಮೀನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನನ್ನ ತವರುಮನೆಯು ಜೇವಗರ್ಿ ತಾಲೂಕಿನ ಮಂದೇವಾಲ ಗ್ರಾಮವಿದ್ದು, ನಮ್ಮ ತಂದೆ ತಾಯಿಯರು ನನಗೆ 20ವರ್ಷಗಳ ಹಿಂದೆ ಸುರಪೂರ ತಾಲೂಕಿನ ಕಾಚಾಪೂರ ಗ್ರಾಮದ ನಾಡಗೌಡ ತಂದೆ ಸಿದ್ದಣ್ಣಗೌಡ ಹಳ್ಳದಮನಿ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ನಾನು ಮತ್ತು ನನ್ನ ಗಂಡನಾದ ನಾಡಗೌಡ ಇಬ್ಬರೂ ಚೆನ್ನಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ನಮಗೆ 3 ಜನ ಮಕ್ಕಳು ಇರುತ್ತಾರೆ. ನನ್ನ ಗಂಡನಾದ ನಾಡಗೌಡ ತಂದೆ ಸಿದ್ದಣ್ಣ ಹಳ್ಳದಮನಿ ವ|| 48ವರ್ಷ ಈತನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದನು, ಅಲ್ಲದೇ ನನ್ನ ಗಂಡನಾದ ನಾಡಗೌಡ ಈತನು ಊರಲ್ಲಿ ನ್ಯಾಯ ಪಂಚಾಯತಿಗಳಲ್ಲಿ ಭಾಗವಹಿಸುತ್ತಿದ್ದನು. ನಮ್ಮೂರ ಮಲ್ಲಣ್ಣ ತೆಳಗಿನಮನಿ ಈತನು ಸುಮಾರು ಎರಡು ತಿಂಗಳ ಹಿಂದೆ ನನ್ನ ಗಂಡನಿಗೆ ನೀನು ಊರಲ್ಲಿ ನ್ಯಾಯಾಪಂಚಾಯತ ಮಾಡುತ್ತಿ ನೀನು ನನ್ನ ಹೆಂಡತಿ ಬಸಮ್ಮಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿ ಮಗನೇ ನಿನಗೆ ಒಂದು ದಿವಸ ಹೊಡೆದು ಖಲಾಸ್ ಮಾಡುತ್ತೇನೆ ಅಂತಾ ನಮ್ಮ ಮನೆಯ ಹತ್ತಿರ ಬಂದು ಒದರಾಡುತ್ತಿದ್ದಾಗ ನನ್ನ ಗಂಡನು ಅವನಿಗೆ ನಿನ್ನ ಹೆಂಡತಿಯೊಂದಿಗೆ ನಾನು ಅನೈತಿಕ ಸಂಬಂಧ ಇಟ್ಟ್ಟುಕೊಂಡಿರುವದಿಲ್ಲಾ ಸುಮ್ಮನೇ ನನ್ನ ಮೇಲೆ ಸಂಶಯ ಪಡಬೇಡ ಅಂತಾ ಹೇಳಿದ್ದನು. ಹೀಗಿದ್ದು ಇಂದು ದಿನಾಂಕ 01/12/2022 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ನಾಡಗೌಡನು ಮನೆಯಲ್ಲಿ ಊಟ ಮಾಡಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೊಲಕ್ಕೆ ಹೋಗಿದ್ದನು. ನಂತರ ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅತ್ತೆಯಾದ ಮಲಕಮ್ಮ ಗಂಡ ಸಿದ್ದಣ್ಣಗೌಡ ಹಳ್ಳದಮನಿ ಇಬ್ಬರೂ ಮನೆಯಲ್ಲಿದ್ದಾಗ ನಮ್ಮ ಹೊಲಕ್ಕೆ ಹತ್ತಿ ಬಿಡಿಸಲು ಹೋದ ನಮ್ಮೂರ ಬಸಮ್ಮ ಗಂಡ ಬಸವಂತ್ರಾಯ ನಡುವಿನಮನಿ ಇವಳು ಓಡುತ್ತಾ ಮನೆಗೆ ಬಂದು ತಿಳಿಸಿದ್ದೇನೆಂದರೆ, ನಮ್ಮೂರ ಮಲ್ಲಣ್ಣ ತೆಳಗಿನಮನಿ, ಶಿವರಾಜ ತೆಳಗಿನಮನಿ ಇವರು ಬಸವರಾಜ ತೆಳಗಿನಮನಿ ಈತನ ಪ್ರಚೋದನೆಯಿಂದ ನಾಡಗೌಡನಿಗೆ ಮತ್ತು ಬಸಮ್ಮಳಿಗೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದ ತಕ್ಷಣ ನಾನು ಮತ್ತು ನಮ್ಮ ಭಾವನಾದ ರಾಜಶೇಖರ ಹಳ್ಳದಮನಿ, ನಮ್ಮ ಮಾವನಾದ ಸಿದ್ದಣ್ಣಗೌಡ ತಂದೆ ಸಾಹೇಬಗೌಡ ಹಳ್ಳದಮನಿ, ನನ್ನ ತಾಯಿಯಾದ ಶಶಿಕಲಾ ಗಂಡ ಶಂಕರಲಿಂಗ ಕೋರಿ, ನಮ್ಮ ಅಕ್ಕಳಾದ ಸುವರ್ಣ ಗಂಡ ರಾಜಶೇಖರ ಹಳ್ಳದಮನಿ ಎಲ್ಲರೂ ಕೂಡಿಕೊಂಡು ನಮ್ಮ ಹತ್ತಿ ಹೊಲದ ಬಾಂದಾರಿನ ಹತ್ತಿರ ಹೋಗಿ ನೋಡಲಾಗಿ ನನ್ನ ಗಂಡನಾದ ನಾಡಗೌಡ ಈತನು ಭಾರೀ ರಕ್ತಗಾಯವಾಗಿ ಸತ್ತು ಬಿದ್ದಿದ್ದನು. ಅವನಿಗೆ ನೋಡಲಾಗಿ ಅವನ ಗದ್ದದ ಕೆಳಗೆ ಭಾರಿ ರಕ್ತಗಾಯ, ಎಡಗಡೆ ಕಣ್ಣಿನ ಮೇಲೆ ತಲೆಗೆ ಭಾರಿ ರಕ್ತಗಾಯವಾಗಿ ಎಡಕಪಾಳಕ್ಕೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿ ಮೃಪಟ್ಟಿದ್ದನು. ಅವನ ಪಕ್ಕದಲ್ಲಿ ನಮ್ಮೂರ ಮಲ್ಲಣ್ಣನ ಹೆಂಡತಿಯಾದ ಬಸಮ್ಮಳು ಮೃತಪಟ್ಟಿದ್ದು, ಅವಳಿಗೆ ನೋಡಲು ಅವಳ ಹಣೆಗೆ ಭಾರಿ ರಕ್ತಗಾಯ ಎಡಕಿವಿಯಿಂದ ರಕ್ತ ಸೋರಿದ್ದು, ಎಡಗಲ್ಲಕ್ಕೆ ಕಂದು ಗಟ್ಟಿದ ಗಾಯವಾಗಿ ಮೃತಪಟ್ಟಿದ್ದಳು. ನಂತರ ನಮಗೆ ಬಂದು ವಿಷಯ ಹೇಳಿದ ಬಸಮ್ಮಳಿಗೆ ವಿಚಾರಿಸಿದಾಗ ನಾನು ಮತ್ತು ಶರಣಮ್ಮ ಗಂಡ ಶರಣಗೌಡ ನಡುವಿನಮನಿ ಇಬ್ಬರೂ ನಿಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದಾಗ ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ನಾಡಗೌಡನು ನಿಮ್ಮ ಹತ್ತಿ ಹೊಲಕ್ಕೆ ಬಂದು ಬಾಜು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸಮ್ಮ ಗಂಡ ಮಲ್ಲಣ್ಣ ತೆಳಗಿನಮನಿ ಇವಳೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಮಲ್ಲಣ್ಣ ತೆಳಗಿನಮನಿ, ಶಿವರಾಜ ತೆಳಗಿನಮನಿ ಮತ್ತು ಬಸವರಾಜ ತೆಳಗಿಮನಿ ಇವರು ಮೂರು ಜನರು ಕೂಡಿಕೊಂಡು ನಾಡಗೌಡನು ಮಾತನಾಡುತ್ತಾ ನಿಂತಿದ್ದ ಜಾಗಕ್ಕೆ ಬಂದು ಮಲ್ಲಣ್ಣನು ಏನಲೇ ನಾಡಗೌಡ ನೀನು ನನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಅಂದವನು ಈಗ ನನ್ನ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಿಯಾ ಬೋಸಡಿ ಮಗನೇ ಅಂತಾ ಅಂದಾಗ ಬಸವರಾಜ ಈತನು ತನ್ನ ಅಣ್ಣನ ಮಗನಾದ ಮಲ್ಲಣ್ಣನಿಗೆ ಮತ್ತು ತನ್ನ ಮಗನಾದ ಶಿವರಾಜನಿಗೆ ಈ ಸೂಳೆ ಮಕ್ಕಳಿಗೆ ಇಬ್ಬರಿಗೂ ಹೊಡೆದು ಖಲಾಸ ಮಾಡ್ರಿ ಬಿಡಬ್ಯಾಡ್ರಿ ನಮ್ಮ ಮನೆಯ ಮಯರ್ಾದೆ ಹಾಳಾಗಿದೆ ಅಂತಾ ಪ್ರಚೋದನೆ ನೀಡಿದಾಗ ಮಲ್ಲಣ್ಣನು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ನಾಡಗೌಡನ ಗದ್ದಕ್ಕೆ ಹೊಡೆದು ಭಾರೀ ರಕ್ತಗಾಯ ಮಾಡಿದಾಗ ಶಿವರಾಜನು ಅಲ್ಲಿಯೇ ಇದ್ದ ಕಲ್ಲಿನಿಂದ ನಾಡಗೌಡನ ಎಡಕಪಾಳಕ್ಕೆ ಮತ್ತು ಎಡಗಣ್ಣಿನ ಮೇಲೆ ತಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದಾಗ ನಾಡಗೌಡನು ಸತ್ತು ಬಿದ್ದನು. ನಂತರ ಮಲ್ಲಣ್ಣನು ತನ್ನ ಹೆಂಡತಿಯಾದ ಬಸಮ್ಮಳಿಗೆ ಹಿಡಿದು ನೆಲಕ್ಕೆ ಕೆಡವಿದಾಗ ಶಿವರಾಜನು ಕಲ್ಲಿನಿಂದ ಅವಳ ತಲೆಯ ಮುಂಭಾಗದಲ್ಲಿ ಹಣೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದಾಗ ಮಲ್ಲಣ್ಣನು ಬಸಮ್ಮಳ ತಲೆಗೆ ಕಲ್ಲಿನಿಂದ ಹೊಡೆದು ಭಾರೀ ಒಳಪೆಟ್ಟು ಮಾಡಿ ಸಾಯಿಸಿದನು. ನಾನು ಮತ್ತು ಶರಣಮ್ಮ ಗಂಡ ಶರಣಗೌಡ ಇಬ್ಬರೂ ನೋಡಿರುತ್ತೇವೆ ಅಂತಾ ತಿಳಿಸಿದಾಗ ನನ್ನ ಗಂಡನಿಗೆ ಮತ್ತು ನಮ್ಮ ಹೊಲದ ಪಕ್ಕದ ಹೊಲದ ನಮ್ಮೂರ ಬಸಮ್ಮಳಿಗೆ ಹೊಡೆದು ಕೊಲೆ ಮಾಡಿದ ಬಗ್ಗೆ ನನಗೆ ಗೊತ್ತಾಯಿತು. ಕಾರಣ ನಮ್ಮೂರ ಮಲ್ಲಣ್ಣ ತಂದೆ ಶರಣಗೌಡ ತೆಳಗಿನಮನಿ ಈತನು ತನ್ನ ಹೆಂಡತಿ ಬಸಮ್ಮ ತೆಳಗಿನಮನಿ ವ|| 32ವರ್ಷ ಇವಳು ನನ್ನ ಗಂಡನಾದ ನಾಡಗೌಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬಗ್ಗೆ ಸಂಶಯಪಟ್ಟು ತನ್ನ ಕಾಕನಾದ ಬಸವರಾಜ ತಂದೆ ನಿಂಗಪ್ಪ ತೆಳಗಿನಮನಿ ಈತನ ಪ್ರಚೋದನೆಯಿಂದ ಮಲ್ಲಣ್ಣ ತಂದೆ ಶರಣಗೌಡ ತೆಳಗಿನಮನಿ ಮತ್ತು ಶಿವರಾಜ ತಂದೆ ಬಸವರಾಜ ತೆಳಗಿನಮನಿ ಇಬ್ಬರೂ ಕೂಡಿಕೊಂಡು ನನ್ನ ಗಂಡನಾದ ನಾಡಗೌಡ ಹಾಗೂ ಬಸಮ್ಮ ತೆಳಗಿನಮನಿ ಇವಳಿಗೆ ಕೊಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 167/2022 ಕಲಂ 302, 114 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 157/2022 ಕಲಂ: 323, 354, 504, 506 ಐಪಿಸಿ : ಇಂದು ದಿನಾಂಕಃ 01/12/2022 ರಂದು 6:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಭೀಮಬಾಯಿ ಗಂಡ ರಾಮಣ್ಣ ಗಡದರ ವಯಾ|| 26 ವರ್ಷ ಜಾ|| ಕಬ್ಬಲಿಗ ಉ|| ಕಾಯಿಪಲ್ಯ ವ್ಯಾಪಾರ ಸಾ|| ರತ್ತಾಳ ತಾ|| ಸುರಪುರ ಇದ್ದು, ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನನಗೆ ಮೂರು ಜನ ಹೆಣ್ಣುಮಕ್ಕಳು ಒಬ್ಬ ಗಂಡು ಮಗು ಹೀಗೆ ಒಟ್ಟು 4 ಜನ ಮಕ್ಕಳಿರುತ್ತಾರೆ. ನಾನು ದಿನಾಲು ಸುರಪುರಕ್ಕೆ ಬಂದು ಕಾಯಿಪಲ್ಯ ವ್ಯಾಪಾರ ಮಾಡಿ ಮರಳಿ ಊರಿಗೆ ಹೋಗುತ್ತೇನೆ. ಅಲ್ಲದೆ ನಮ್ಮದೊಂದು ಟ್ರಾಕ್ಟರ ಇದ್ದು, ಸದರಿ ಟ್ರಾಕ್ಟರನ್ನು ನಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದೆವು. ಹೀಗಿದ್ದು ದಿನಾಂಕ: 28/11/2022 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಊಟ ಮಾಡಿ ನಾನು, ನನ್ನ ಗಂಡ ರಾಮಣ್ಣ ಇಬ್ಬರು ನಮ್ಮ ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ನಮ್ಮೂರ ಚಂದಪ್ಪ ತಂದೆ ಭೀಮಣ್ಣ ತಳವಾರ ಈತನು ನಮ್ಮ ಟ್ರಾಕ್ಟರ ಬಾಜು ಬಂದು ಅಲ್ಲೇ ಬಿದ್ದ ಒಂದು ಕಲ್ಲಿನಿಂದ ನಮ್ಮ ಟ್ರಾಕ್ಟರ ಟೈರಿಗೆ ಹೊಡೆದನು ಆಗ ನಾನು ಯಾಕೆ ನಮ್ಮ ಟ್ರಾಕ್ಟರಗೆ ಹೊಡೆಯುತ್ತಿ ಅಂತ ಅಂದಿದ್ದಕ್ಕೆ ನೀನೇನು ಕೇಳತಿ ಸೂಳೆ, ನೀನು ಊರುರು ತಿರುಗಾಡಿ ಕಾಯಿಪಲ್ಯ ಮಾರಾಕಿ ನನಗೇ ಕೇಳತಿ ಎಷ್ಟು ಸೊಕ್ಕ ಬಂದಾದ ನಿನಗ ಅಂತ ಅನ್ನುತ್ತಾ ನನ್ನ ಬೆನ್ನಿಗೆ ಕೈಯಿಂದ ಹೊಡೆದು, ಸೀರೆ ಸೆರಗು ಎಳೆದು ಅವಮಾನ ಮಾಡುತ್ತಿದ್ದಾಗ ಅಲ್ಲೇ ಇದ್ದ ನನ್ನ ಗಂಡ ರಾಮಣ್ಣ ಹಾಗೂ ನಮ್ಮ ಅಣ್ಣತಮಕಿಯ ಅಂಬಣ್ಣ ತಂದೆ ಮಾನಪ್ಪ ಗಡದರ, ಅಲ್ಲೇ ಹೊರಟಿದ್ದ ಯಲ್ಲಪ್ಪ ತಂದೆ ಭೀಮಣ್ಣ ತೆಲಗಾಣಿ ಎಲ್ಲರು ಕೂಡಿ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವನು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿ ಸೂಳೆ ಇಲ್ಲದಿದ್ದರೆ ನಿನ್ನ ಜೀವಸಹಿತ ಬಿಡುತ್ತಿರಲಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದನು. ನಂತರ ನನಗೆ ಕೈಯಿಂದ ಹೊಡೆದಿದ್ದರಿಂದ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ ಈ ವಿಷಯದ ಬಗ್ಗೆ ನನ್ನ ಗಂಡನೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಅವಾಚ್ಯವಾಗಿ ಬೈದು, ಅವಮಾನ ಮಾಡಿ, ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಚಂದಪ್ಪ ತಂದೆ ಭೀಮಣ್ಣ ತಳವಾರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 157/2022 ಕಲಂ: 323, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:127/2022 ಕಲಂ. 5, 12 ಕನರ್ಾಟಕ ಜಾನುವಾರು ಹತ್ಯೆ ಪ್ರತಿಭಂಧಕ ಮತ್ತು ಸಂರಕ್ಷಣ ಆಧ್ಯಾದೇಶ ಕಾಯ್ದೆ 2020, ಕಲಂ.11(1) (ಡಿ) ಪ್ರಾಣಿ ಹಿಂಸಾ ನಿಮರ್ೂಲನಾ ಕಾಯ್ದೆ-1960 ಮತ್ತು 192 (ಎ) ಐ.ಎಮ.ವಿ ಕಾಯ್ದೆ : ಪಿರ್ಯಾಧಿ ಸಾರಾಂಶವೆನೆಂದರೆ, ಇಂದು ದಿನಾಂಕ; 01/12/2022 ರಂದು 1-30 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ಭಾತ್ಮಿ ಬಂದಿದ್ದೆನೆಂದರೆ, ಒಂದು ವಾಹನದಲ್ಲಿ ಎತ್ತುಗಳನ್ನು ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಹೋಗಿ 2-45 ಪಿಎಮ್ ಸುಮಾರಿಗೆ ಒಂದು ಅಶೋಕ ಲೈಲ್ಯಾಂಡ್ ದೋಸ್ತ ವಾಹನ ಬಂದಿದ್ದು ಅದರಲ್ಲಿ ಎತ್ತುಗಳನ್ನು ತುಂಬಿಕೊಂಡು ಹೊರಟಿದ್ದು ಅದನ್ನು ಖಚಿತಪಡಿಸಿಕೊಂಡು ವಾಹನವನ್ನು ಹನುಮಾನ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ನಿಲ್ಲಿಸಿ, ವಾಹನದಲ್ಲಿ ಬಿಳಿ ಬಣ್ಣದ ಮೂರು, ಕಂದು ಬಣ್ಣದ ಒಂದು ಒಟ್ಟು ನಾಲ್ಕು ಎತ್ತುಗಳು ಇದ್ದು ಅವುಗಳಿಗೆ ಆಹಾರ ನೀರು ನೀಡದೇ, ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಗ್ಗದಿಂದ ವಾಹನಕ್ಕೆ ಹಿಂಸೆಯಾಗುವ ರೀತಿಯಲ್ಲಿ ಕಟ್ಟಿದ್ದು ಇರುತ್ತದೆ. ವಾಹನದಲ್ಲಿರುವ ಚಾಲಕನಿಗೆ ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು, ಮಹ್ಮದ ಇಜಾಜ ಹುಸೇನ ತಂದೆ ಶಬ್ಬಿರ ಹುಸೇನ ವ: 28 ಜಾತಿ: ಮುಸ್ಲಿಂ ಸಾ: ನಾಯ್ಕಲ್ ತಾ:ಜಿ: ಯಾದಗಿರಿ ಅಂತಾ ತಿಳಿಸಿದ್ದು, ಪಿ.ಎಸ್.ಐ ಸಾಹೇಬರು ಸದರಿಯವನಿಗೆ ಎತ್ತುಗಳನ್ನು ಸಾಗಾಟ ಮಾಡಲು ಪರವಾನಿಗೆ ಪತ್ರ, ಎತ್ತುಗಳ ಖರೀದಿ ಪತ್ರ ಹಾಗೂ ಪಶು ವೈದ್ಯಾಧಿಕಾರಿಗಳು ತಪಾಸಣೆ ಪತ್ರ ನೇದ್ದವುಗಳ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ಯಾವುದೇ ದಾಖಲಾತಿ ಮತ್ತು ಪರವಾನಿಗೆ ಇರುವುದಿಲ್ಲ ನಮ್ಮೂರಿನ ಮಹ್ಮದ ಗೌಸ್ ತಂದೆ ರಶೀದ್ ಚೌದ್ರಿ ಈತನು ನಾಯ್ಕಲ್ ಗ್ರಾಮದಲ್ಲಿ ಈ ಎತ್ತುಗಳನ್ನು ಖರೀದಿಸಿ ನನಗೆ ಯಾದಗಿರಿಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ನಾನು ತೆಗೆದುಕೊಂಡು ಬಂದಿದ್ದು ಇರುತ್ತದೆ ಅಂತಾ ತಿಳಿಸಿದನು ನಂತರ ವಾಹನವನ್ನು ನೋಡಲಾಗಿ ಅಶೋಕ ಲೈಲ್ಯಾಂಡ ದೋಸ್ತ ವಾಹನ ಇದ್ದು ಅದರ ನಂಬರ ಕೆ.ಎ-33, ಬಿ-1797 ನೇದ್ದು ಅ.ಕಿ. 1,00,000/- ರೂ. ಮತ್ತು ಅದರಲ್ಲಿ ಮೂರು ಬಿಳಿ ಬಣ್ಣದ, ಒಂದು ಕಂದು ಬಣ್ಣದ ಎತ್ತುಗಳು ಅ.ಕಿ. 40,000/-ರೂ. ಇದ್ದು ವಾಹನ ಚಾಲಕನಿಗೆ ವಶಕ್ಕೆ ಪಡೆದುಕೊಂಡು ವಾಹನ ಮತ್ತು ಎತ್ತುಗಳನ್ನು ತಾಬೆಗೆ ತೆಗೆದುಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ; 01/12/2022 ರಂದು 2-45 ಪಿಎಮ್ ದಿಂದ 3-45 ಪಿಎಮ್ ದವರೆಗೆ ಕೈಕೊಂಡು 4-00 ಪಿಎಮ್ ಕ್ಕೆ ಠಾಣೆಗೆ ಬಂದಿದ್ದು ಕಾರಣ ಜಾನುವಾರಗನ್ನು ವಧೆ ಮಾಡಲು ಹಿಂಸೆಯಾಗುವ ರೀತಿಯಲ್ಲಿ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ 1) ಮಹ್ಮದ ಇಜಾಜ ಹುಸೇನ ತಂದೆ ಶಬ್ಬಿರ ಹುಸೇನ ವ: 28 ಜಾತಿ: ಮುಸ್ಲಿಂ ಸಾ: ನಾಯ್ಕಲ್ ತಾ:ಜಿ: ಯಾದಗಿರಿ ಹಾಗೂ ಅವುಗಳನ್ನು ವಧೆ ಮಾಡಲು ಖರೀದಿಸಿದ್ದ 2) ಮಹ್ಮದ ಗೌಸ್ ತಂದೆ ರಶೀದ ಚೌದ್ರಿ ಸಾ; ನಾಯ್ಕಲ್ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.127/2022 ಕಲಂ. 5, 12 ಕನರ್ಾಟಕ ಜಾನುವಾರು ಹತ್ಯೆ ಪ್ರತಿಭಂಧಕ ಮತ್ತು ಸಂರಕ್ಷಣ ಆಧ್ಯಾದೇಶ ಕಾಯ್ದೆ 2020, ಕಲಂ.11(1) (ಡಿ) ಪ್ರಾಣಿ ಹಿಂಸಾ ನಿಮರ್ೂಲನಾ ಕಾಯ್ದೆ-1960 ಮತ್ತು 192 (ಎ) ಐ.ಎಮ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 203/2022 ಕಲಂ: 279, 338 ಐ.ಪಿ.ಸಿ : ಇಂದು ದಿನಾಂಕ: 01/12/2022 ರಂದು ರಾತ್ರಿ 9 ಗಂಟೆಗೆ ಪಿರ್ಯಾದಿ ಅಜರ್ಿದಾರರಾದ ಶ್ರೀ ಅಂಬಣ್ಣ ತಂದೆ ಹಣಮಂತ ದೊಡಮನಿ ವ|| 23 ಜಾ|| ಹಿಂದು ಹೊಲೆಯ ಉ: ಕೂಲಿಕೆಲಸ ಸಾ: ಸಾವೂರ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ, ನಮ್ಮ ತಂದೆ ತಾಯಿಗೆ ನಾವೂ ಒಟ್ಟು ಐದು ಜನ ಗಂಡು ಮಕ್ಕಳಿದ್ದು ಅವರಲ್ಲಿ ನಮ್ಮ ಅಣ್ಣನಾದ ರಾಮಪ್ಪ ತಂದೆ ಹಣಮಂತ ದೊಡಮನಿ ವ|| 25 ಈತನು ಕೂಲಿಕೆಲಸ ಮಾಡಿಕೊಂಡು ಇರುತ್ತಾನೆ. ನಾವೆಲ್ಲರೂ ಎಲ್ಲಿಗಾದರೂ ಹೋಗುವ ಸಲುವಾಗಿ ನಮ್ಮ ತಮ್ಮನಾದ ನಾಗರಾಜ ತಂದೆ ಹಣಮಂತ ದೊಡಮನಿ ಈತನ ಹೆಸರಿನಲ್ಲಿ ಒಂದು ಹೋಂಡಾ ಶೈನ ಮೋಟರ ಸೈಕಲ ಖರೀದಿ ಮಾಡಿದ್ದು ಇರುತ್ತದೆ. ಸದರಿ ಮೋಟರ ಸೈಕಲ ನಂಬರ ಕೆಎ-33 ಇಬಿ-4173 ಅಂತಾ ಇರುತ್ತದೆ. ಹೀಗಿದ್ದು ದಿನಾಂಕ 30/11/2022 ರಮದು ಮುಂಜಾನೆ 11 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ರಾಮಪ್ಪ ತಂದೆ ಹಣಮಂತ ದೊಡಮನಿ ಈತನು ನಮ್ಮ ಮೋಟರ ಸೈಕಲ ನಂಬರ ಕೆಎ- 33 ಇಬಿ-4173 ನೇದ್ದನ್ನು ತೆಗೆದುಕೊಂಡು ಕಿರಾಣಿ ಮಾಲು ಖರೀದಿಗೆಂದು ಶಹಾಪೂರಕ್ಕೆ ಹೋದನು. ನಂತರ ನಾನು ಹಾಗು ನಮ್ಮ ಮಾವನವರಾದ ಮಲ್ಲೇಶಿ ದೊಡಮನಿ ಇಬ್ಬರೂ ಕೂಡಿಕೊಂಡು ಕೆಲಸದ ನಿಮಿತ್ಯ ಹತ್ತಿಗುಡೂರ ಗ್ರಾಮಕ್ಕೆ ಬಂದು ಹತ್ತಿಗುಡೂರ ಗ್ರಾಮದ ಬಸ್ಸ ನಿಲ್ದಾಣದ ಮುಂದೆ ಇರುವ ಹೋಟಲದಲ್ಲಿ ಮಲ್ಲಪ್ಪ ತಂದೆ ಸಿದ್ದಪ್ಪ ಚಿಕ್ಕಮೇಟಿ ಹೀಗೆ ನಾವೂ ಮೂರು ಜನರು ಚಹಾ ಕುಡಿಯುತ್ತಾ ಕುಳಿತ್ತಿದ್ದೆವು. ಅಂದಾಜು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಹತ್ತಿಗುಡುರ ಬಸ್ಸ ನಿಲ್ದಾಣದ ಮುಂದಿನ ರೋಡಿನಲ್ಲಿ ಒಂದು ಬಸ್ಸ ಒಂದು ಮೋಟರ ಸೈಕಲಗೆ ಡಿಕ್ಕಿಯಾಗಿದ್ದು ಕೂಡಲೆ ಚಹಾ ಕುಡಿಯುತ್ತಾ ಕುಳಿತಿದ್ದ ನಾವೂ ಮೂರು ಜನರು ಓಡಿ ಹೋಗಿ ನೋಡಲಾಗಿ ಅಪಘಾತಕ್ಕೀಡಾದವನು ನಮ್ಮ ಅಣ್ಣನಾದ ರಾಮಪ್ಪ ತಂದೆ ಹಣಮಂತ ದೊಡಮನಿ ಈತನೇ ಆಗಿದ್ದು ಆತನಿಗೆ ಎಬ್ಬಿಸಿ ನೋಡಲಾಗಿ ಆತನಿಗೆ ಬಲಭುಜಕ್ಕೆ ಹಾಗು ಬಲಗೈ ಮೊಳಕೈ ಹತ್ತಿರ ಭಾರೀ ರಕ್ತಗಾಯವಾಗಿ ಕೈ ಮುರಿದು ಭಾರೀ ರಕ್ತಸ್ರಾವವಾಗುತ್ತಿತ್ತು. ಅಲ್ಲದೇ ನಮ್ಮ ಅಣ್ಣನ ಮೋಟರ ಸೈಕಲ ನಂಬರ ಕೆಎ-33 ಇಬಿ-4173 ನೇದ್ದರ ಮುಂದಿನ ಭಾಗ ಪೂತರ್ಿಯಾಗಿ ಜಖಂಗೊಡಿತ್ತು. ನಮ್ಮ ಅಣ್ಣನಿಗೆ ಅಪಘಾತ ಪಡಿಸಿದ ಸರಕಾರಿ ಬಸ್ಸ ಅಲ್ಲಿಯೇ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-33 ಎಫ್- 0534 ಅಂತ ಇತ್ತು. ನಂತರ ನಮ್ಮ ಅಣ್ಣನಿಗೆ ಅಪಘಾತ ಪಡಿಸಿ ಅಲ್ಲಿಯೇ ನಿಂತಿದ್ದ ಬಸ್ಸ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಅಶೋಕ ತಂದೆ ಧನಸಿಂಗ್ ಜಾದವ್ ಬಸ್ಸ ಡಿಪೋ ಸುರಪೂರ ಅಂತ ತಿಳಿಸಿದನು. ನಂತರ ಅಪಘಾತವಾದ ಬಗ್ಗೆ ನಾನು ನಮ್ಮ ಅಣ್ಣನಾದ ರಾಮಪ್ಪ ಈತನಿಗೆ ವಿಚಾರಿಸಲಾಗಿ ತಾನು ತನ್ನಷ್ಟಕ್ಕೆ ರೋಡಿನ ಎಡಮಗ್ಗಲಿಗೆ ಬರುತ್ತಿದ್ದಾಗ ನನ್ನ ಹಿಂದಿನಿಂದ ಬಂದ ಬಸ್ಸ ಚಾಲಕನು ತನ್ನ ಬಸ್ಸನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಹತ್ತಿಗುಡುರ ಬಸ್ಸ ನಿಲ್ದಾಣದಲ್ಲಿ ಒಳಗೆ ಹೋಗುವ ಉದ್ದೇಶದಿಂದ ಎಡಮಗ್ಗಲಿನಲ್ಲಿದ್ದ ನನ್ನ ಮೋಟರ ಸೈಕಲನ್ನು ನೋಡದೇ ಒಮ್ಮಲೇ ತನ್ನ ಬಸ್ಸನ್ನು ಎಡಭಾಗಕ್ಕೆ ತೆಗೆದುಕೊಂಡಿದ್ದರಿಂದ ಆ ಬಸ್ಸ ನನ್ನ ಮೋಟರ ಸೈಕಲಗೆ ಡಿಕ್ಕಿಯಾಗಿ ನಾನು ಹಾಗು ಮೋಟರ ಸೈಕಲ ಸಮೇತ ಬಸ್ಸಿನ ಹಿಂದಿನ ಗಾಲಿಯಲ್ಲಿ ಬಿದ್ದು ನನಗೆ ಬಲಗೈ ಭುಜಕ್ಕೆ ಹಾಗು ಬಲಗೈ ಮೋಳಕೈ ಹತ್ತಿರ ಭಾರೀ ರಕ್ತಗಾಯವಾಗಿ ಕೈ ಮುರಿದಿರುತ್ತದೆ ಅಂತ ತಿಳಿಸಿದಾಗ ಕೂಡಲೇ ನಾನು ಹಾಗು ನನ್ನ ಜೊತೆಯಲ್ಲಿದ್ದ ನಮ್ಮ ಮಾವನವರಾದ ಮಲ್ಲೇಶಿ ದೊಡಮನಿ ಮತ್ತು ಮಲ್ಲಪ್ಪ ಚಿಕ್ಕಮೇಟಿ ನಾವೂ ಮೂರು ಜನರು ಸೇರಿ ನಮ್ಮ ಅಣ್ಣನಾದ ರಾಮಪ್ಪ ಈತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಹೋಗಿ ಉಪಚಾರ ಪಡಿಸಿದ್ದು ಅಲ್ಲಿ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನಾವೂ ಮೂರು ಜನರು ಸೇರಿ ನಮ್ಮ ಅಣ್ಣನಾದ ರಾಮಪ್ಪ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಮಾಡಿಸಿ ಇಂದು ತಡವಾಗಿ ತಮ್ಮ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ನಮ್ಮ ಅಣ್ಣನಿಗೆ ಅಪಘಾತ ಪಡಿಸಿದ ಬಸ್ಸ ನಂಬರ ಕೆಎ-33 ಎಫ್- 0534 ನೇದ್ದರ ಚಾಲಕ ಅಶೋಕ ಜಾದವ ಬಸ್ಸ ಡಿಪೋ ಸುರಪೂರ ಈತನ ವಿರುದ್ದ ಸೂಕ್ತ ಕಾನೂನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 203/2022 ಕಲಂ: 279, 3 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

ಇತ್ತೀಚಿನ ನವೀಕರಣ​ : 02-12-2022 11:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080