ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-01-2023ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ : 01/2023 ಕಲಂ 279, 337, 338  ಐಪಿಸಿ: ಇಂದು ದಿನಾಂಕ 02/01/2023 ರಂದು ಬೆಳಿಗ್ಗೆ  9 ಎ.ಎಂ.ಕ್ಕೆ  ಕಲಬುರಗಿ ಯುನೈಟೆಡ್ ಆಸ್ಪತ್ರೆಯಿಂದ  ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ಮಾಹಿತಿ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಚಂದ್ರಶೇಖರ ಎಚ್.ಸಿ-04 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆಯ ನಂತರ, ಗಾಯಾಳು  ಪಿಯರ್ಾದಿ ಶ್ರೀ ರವಿ ತಂದೆ ಗೋಬ್ರ್ಯಾ ರಾಠೋಡ ವಯ;32 ವರ್ಷ, ಉ;ಕೂಲಿ ಕೆಲಸ, ಜಾ;ಲಂಬಾಣಿ, ಸಾ;ಓರುಂಚಾ ತಾಂಡಾ, ತಾ;ಜಿ;ಯಾದಗಿರಿರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 4 ಪಿ.ಎಂ.ಕ್ಕೆ  ಬಂದು ಪಿಯರ್ಾದಿಯ ಹೇಳಿಕೆಯ ಅಸಲು ಪ್ರತಿಯನ್ನು ನನಗೆ ಹಾಜರುಪಡಿಸಿದ್ದು, ಪಿಯರ್ಾದಿಯ  ಹೇಳಿಕೆ  ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನೆ ದಿನಾಂಕ 01/01/2023 ರಂದು ಬೆಳಿಗ್ಗೆ ಸುಮಾರಿಗೆ ನಾನು ನಮ್ಮ ತಾಂಡಾದ ಮಾರುತಿ ತಂದೆ ಗೋಪಾಲ ರಾಠೋಡ ವಯ;28 ವರ್ಷ, ಈತನ  ಮೋಟಾರು ಸೈಕಲ್ ನಂಬರ ಕೆಎ-33, ಕೆ-2713 ನೇದ್ದರ ಮೇಲೆ ನಮ್ಮ ನಮ್ಮ ಕೆಲಸದ ಮೇಲೆ ಬಂದಿದ್ದು ಇರುತ್ತದೆ.  ಹೀಗಿದ್ದು ನಿನ್ನೆ ದಿನಾಂಕ 01/01/2023 ರಂದು ಸಾಯಂಕಾಲ 6 ಪಿ.ಎಂ. ದ ಸುಮಾರಿಗೆ ನಮ್ಮ ನಮ್ಮ ಕೆಲಸಗಳನ್ನು ಮುಗಿಸಿಕೊಂಡು ಅದೇ ಮೋಟಾರು ಸೈಕಲ್ ನಂಬರ ಕೆಎ-33, ಕೆ-2713 ನೇದ್ದರ ಮೇಲೆ ಮರಳಿ ಯಾದಗಿರಿಯಿಂದ ನಮ್ಮ ತಾಂಡಾಕ್ಕೆ ಹೊರಟೆವು, ಮೊಟಾರು ಸೈಕಲನ್ನು ಮಾರುತಿ ಈತನೇ ನಡೆಸಿಕೊಂಡು ಹೊರಟಿದ್ದು, ನಾನು ಮೋಟಾರು ಸೈಕಲ್ ಹಿಂಬದಿ ಸೀಟಿನಲ್ಲಿ ಕುಳಿತಿದ್ದೆನು, ಮಾರ್ಗ ಮದ್ಯೆ ಯಾದಗಿರಿ ನಗರ ದಾಟಿದ ಮೇಲೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮುದ್ನಾಳ ಸೀಮಾಂತರದ ರಾಚೋಟಿ ವೀರಣ್ಣ ಗುಡಿ ಕ್ರಾಸ್ ಹತ್ತಿರ ಸಾಯಂಕಾಲ ಸಮಯ 6-10 ಪಿ.ಎಂ.ದ ಸುಮಾರಿಗೆ ನಾನು ನೋಡು ನೋಡುತ್ತಿದ್ದಂತೆ ವಾಡಿ ರಸ್ತೆ ಕಡೆಯಿಂದ ಯಾದಗಿರಿಗೆ ನಮ್ಮ ಎದುರುಗಡೆ ಬರುತ್ತಿದ್ದ ಒಬ್ಬ ಬುಲೆರೋ ಪಿಕಪ್ ಗೂಡ್ಸ್ ವಾಹನ ನೇದ್ದರ ಚಾಲಕನು ತನ್ನ ವಾಹನವನ್ನು ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದಾಗ ಅಪಘಾತದ ರಭಸಕ್ಕೆ ನಾವಿಬ್ಬರು ಮೋಟಾರು ಸೈಕಲ್ ಸಮೇತ ರಸ್ತೆ ಬದಿಗೆ ಬಿದ್ದೆವು, ಸದರಿ ಅಪಘಾತದಲ್ಲಿ ನನಗೆ ತಲೆಗೆ ಒಳಪೆಟ್ಟಾಗಿದ್ದು, ಬಲಗಾಲಿನ ಹಿಮ್ಮಡಿಗೆ ಭಾರೀ ರಕ್ತಗಾಯವಾಗಿ ಮುರಿದಿದ್ದು, ಬಲಗೈ ಮುಂಡಿಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಮೋಟಾರು ಸೈಕಲ್ ನಡೆಸುತ್ತಿದ್ದ ಮಾರುತಿಗೆ ನೋಡಲು ತಲೆಗೆ, ಗದ್ದಕ್ಕೆ,  ಭಾರೀ ರಕ್ತಗಾಯ ಮತ್ತು ಗುಪ್ತಗಾಯ ಹಾಗೂ ಬಲಗಾಲಿನ ತೊಡೆಗೆ ಭಾರೀ ಒಳಪೆಟ್ಟಾಗಿ ಮುರಿದಿದ್ದು, ಎಡಗೈ ಮೊಣಕೈಗೆ ಗುಪ್ತಗಾಯಗಳು ಆಗಿದ್ದು, ಮೂಚರ್ೆ ಹೋಗಿರುತ್ತಾನೆ.  ಆಗ ಈ ರಸ್ತೆ ಮಾರ್ಗವಾಗಿ ಹೊರಟಿದ್ದ ನಮ್ಮ ತಾಂಡಾದ ರಾಮು ತಂದೆ ಗೋಪ್ಯಾ ರಾಠೋಡ ಮತ್ತು ಅನೀಲ್ ತಂದೆ ಬದ್ದು ರಾಠೋಡ ಇವರುಗಳು ಅಪಘಾತವನ್ನು ಕಂಡು ನಮ್ಮ ಹತ್ತಿರ ಬಂದು ಘಟನೆಯ ಬಗ್ಗೆ ವಿಚಾರಿಸಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ಬುಲೆರೋ ಪಿಕಪ್ ಗೂಡ್ಸ್ ಡಿಟಿಡಿಸಿ ಕೊರಿಯರ್ ವಾಹನವಿದ್ದು, ಅದರ ನಂಬರ ನೊಡಲಾಗಿ ಕೆಎ-32, ಡಿ-3842 ಇರುತ್ತದೆ, ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಉಮಾಕಾಂತ ತಂದೆ ಜೀವನರಾವ್ ಸೂರ್ಯವಂಶಿ ಸಾ;ನೆಹರು ಕಾಲನಿ, ಕಲಬುರಗಿ ಅಂತಾ ತಿಳಿಸಿರುತ್ತಾನೆ. ನಾನು ಈ ವಿಷಯವನ್ನು ನನ್ನ ಅಣ್ಣ ದೇವರಾಜನಿಗೆ ಮತ್ತು ಮಾರುತಿ ಅಣ್ಣನಾದ ಜೀತು ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿ ಈಗ ನಾವು ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೊರಟಿದ್ದು ನೀವು ಅಲ್ಲಿಗೆ ಬರ್ರೀ ಅಂತಾ ಹೇಳಿರುತ್ತೇನೆ. ರಾಮು ಮತ್ತು ಅನೀಲ್ ಇಬ್ಬರು ಸೇರಿಕೊಂಡು ನಮ್ಮಿಬ್ಬರಿಗೆ ಒಂದು ಖಾಸಗಿ ಆಟೋದಲ್ಲಿ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದಿರುತ್ತಾರೆ, ಆಸ್ಪತ್ರೆಗೆ ನನ್ನ ಅಣ್ಣ ದೇವರಾಜ ಹಾಗೂ ಜೀತು ಇವರುಗಳು ಬಂದು ನಮಗೆ ವಿಚಾರಿಸಿರುತ್ತಾರೆ. ಆಸ್ಪತ್ರೆಯ ವೈದ್ಯರು ನಮಗೆ ಉಪಚರಿಸಿದ ನಂತರ ತಡಮಾಡದೇ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ರೆಫರ್ ಮಾಡಿರುತ್ತಾರೆ, ನಾವು ನಿನ್ನೆ ರಾತ್ರಿಯೇ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದೇವೆ. ಹೀಗಿದ್ದು ನಿನ್ನೆ  ದಿನಾಂಕ 01/01/2023 ರಂದು ಸಾಯಂಕಾಲ 6-10 ಪಿ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಬರುವ ಮುದ್ನಾಳ ಸೀಮಾಂತರದ ರಾಚೋಟಿ ವೀರಣ್ಣ ಗುಡಿ ಕ್ರಾಸ್ ಹತ್ತಿರ ನಾವು ಹೊರಟಿದ್ದ ಮೊಟಾರು ಸೈಕಲ್ ನಂಬರ ಕೆಎ-33, ಕೆ-2713 ನೇದ್ದಕ್ಕೆ,  ಬುಲೆರೋ ಪಿಕಪ್ ಗೂಡ್ಸ್ ಡಿಟಿಡಿಸಿ ಕೊರಿಯರ್ ವಾಹನ ನಂಬರ ಕೆಎ-32, ಡಿ-3842 ನೇದ್ದರ ಚಾಲಕ ಉಮಾಕಾಂತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಜರುಗಿದ್ದು, ಆತನ ಮೇಲೆ ಕಾನೂನಿನ ಸೂಕ್ತ  ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  01/2023 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.  

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 01/2023: ಕಲಂ: 78(3) ಕೆ.ಪಿ ಆಠ್ಟಿ್: ಇಂದು ದಿನಾಂಕ:02.01.2023 ರಂದು 4:05 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಎಮ್.ಬಿ ಚಿಕ್ಕಣ್ಣನವರ ಸಿಪಿಐ ಹುಣಸಗಿ ವೃತ್ತ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:02.01.2023 ರಂದು 3:15 ಪಿ.ಎಮ್.ಕ್ಕೆ ನಾನು ವೃತ್ತದ ವ್ಯಾಪ್ತಿಯ ಕೊಡೇಕಲ್ಲ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ನನಗೆ ಮಾಹಿತಿ ಬಂದಿದ್ದೇನೆಂದರೆ, ಬೂದಿಹಾಳ ಗ್ರಾಮದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ದಾಳಿ ಮಾಡಿ ಗುನ್ನೆ ನಂ:01/2023 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ. ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ರುದ್ರಗೌಡ ತಂದೆ ಸಿದ್ರಾಮಪ್ಪಗೌಡ ಬಾದೋಡಗಿ ವ:46 ವರ್ಷ ಉ:ಚಾಲಕ ಜಾ:ಲಿಂಗಾಯತ ಸಾ:ಬೂದಿಹಾಳ ತಾ:ಹುಣಸಗಿ ಜಪ್ತು ಪಡಿಸಿಕೊಂಡ ಮುದ್ದೆಮಾಲು.
1)    ನಗದು ಹಣ=7520/- ರೂ
2)    ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 01/2023 ಕಲಂ 341, 323, 504, 506 ಐಪಿಸಿ  : ಇಂದು ದಿನಾಂಕ: 02.01.2023 ರಂದು ಸಾಯಂಕಾಲ 4.30 ಗಂಟೆಗೆ ಸುರೇಶ ತಂದೆ ಯಂಕಪ್ಪ ಕಾಳಬೆಳಗುಂದಿ ವಯ|| 26 ವರ್ಷ, ಜಾ|| ವೀರಶೈವ ಲಿಂಗಾಯತ ಉ|| ಒಕ್ಕಲುತನ ಸಾ|| ಸಾವೂರ ಗ್ರಾಮ ಈತನು ಠಾಣೆಗೆ ಬಂದು ಹಾಜರುಪಡಿಸಿದ ಗಣಕೀಕೃತ ದೂರು ಸಾರಾಂಶವೇನೆಂದರೆ. ನಮ್ಮ ಜಮೀನು ಹತ್ತಿರ ಇರುವ ನಮ್ಮೂರಿನ ಕುಲಕಣರ್ಿ ಇವರ ಜಾಗದಲ್ಲಿ ನಾವು ಈಗ ಸುಮಾರು ವರ್ಷಗಳಿಂಗ ತಿಪ್ಪೆಗುಂಡಿ ಹಾಕಿಕೊಂಡು ಬಂದಿದ್ದೇವೆ. ಆದರೆ ದಿನಾಂಕ: 28.12.2022 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಸದರಿ ನಮ್ಮೂರಿನ ಕುಲಕಣರ್ಿ ಇವರ ತಿಪ್ಪೆ ಜಾಗದಲ್ಲಿ ಮೊರಂ ಹಾಕುತಿದ್ದಾಗ ನಮ್ಮೂರಿನ 1. ಬಸ್ಸಪ್ಪ ತಂದೆ ಚೋಳಪ್ಪ ಪೊಲೀಸ್ ಪಾಟೀಲ್, ವ|| 55 ವರ್ಷ, ಜಾ|| ವೀರಶೈವ ಲಿಂಗಾಯತ, ಉ|| ಒಕ್ಕಲುತನ, ಸಾ|| ಸಾವೂರು ಗ್ರಾಮ.  ಇವನು ಅಲ್ಲಿಗೆ ಬಂದು ನನಗೆ ಏ ಬೋಸಡಿ ಮಗನೆ ನಿನಗೆ ಇಲ್ಲಿ ಮೊರಂ ಹಾಕಿಸು ಅಂತಾ ಯಾರು ಹೇಳಿದ್ದು ಈ ಜಾಗ ಏನ್ ನಿಮ್ಮಪ್ಪಂದು ಏನು ಅಂತಾ ಅವಾಚ್ಯವಾಗಿ ಬೈದು ಬಸ್ಸಪ್ಪ ತಂದೆ ಚೋಳಪ್ಪ ಈತನು ನನ್ನ ಎದೆಮೇಲೆ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಅಲ್ಲಿಂದ ತಪ್ಪಸಿಕೊಂಡು ಹೋಗುತಿದ್ದಾಗ ನನಗೆ ಅಡ್ಡಗಟ್ಟಿ ನಿಂತು ತಡೆದು ಕೈ ಮುಷ್ಠಿಮಾಡಿ ಹೊಟ್ಟೆಗೆ ಬೆನ್ನಿಗೆ ಹೊಡೆಬಡೆ ಮಾಡಿದ್ದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿದ್ದು ನೀನೇನಾದರೂ ಊರಲ್ಲಿ ಅಡ್ವಾನ್ಸ್ ಮಾಡಿದರೆ ನಿನ್ನನ್ನು ಇದೇ ತಿಪ್ಪೆಯಲ್ಲಿ ತೆಗ್ಗುತೋಡಿ ಹೂಣುತ್ತೇನೆ ಸೂಳೆಮಮಗನೆ ಅಂತಾ ಜೀವಬೆದರಿಕೆ ಹಾಕಿರುತ್ತಾನೆ. ನನಗೆ ಹೊಡೆಯುವ ಸುದ್ದಿ ಗೊತ್ತಾಗಿ ನನ್ನ ತಾಯಿ ವಿಜಯಲಕ್ಷ್ಮಿ ಮತ್ತು ನನ್ನ ಅತ್ತಿಗೆ ಸುಶೀಲಮ್ಮ ಇವರು ಬಂದು ಮತ್ತು ಅಲ್ಲಿದ್ದ ವೆಂಕಟರಾಯ ತಂದೆ ಮರೆಪ್ಪ ದೇಸಾಯಿ, ಶಾಂತಮ್ಮ ಹರಿಜನ, ಸಿದ್ದಪ್ಪ ತಂದೆ ನಿಂಗಪ್ಪ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು. ಸದರಿ ನನಗೆ ಹೊಡೆಬಡೆ ಮಾಡಿದ ವ್ಯಕ್ತಿ ಊರಲ್ಲಿ ಬಲಾಡ್ಯನಿದ್ದು ಅವನಿಗೆ ಅಂಜಿ ನಾನು ಕೇಸು ಮಾಡಲಿಲ್ಲ ಸದ್ಯ ನನಗೆ ಊರಲ್ಲಿ ತಿರುಗಾಡುವುದು ಭಯವಾಗುತಿದ್ದು ನಾನು ಎಲ್ಲಿಯಾದರು ಕಂಡಲ್ಲಿ ನನಗೆ ಅಡ್ಡ ನಿಲ್ಲುವುದು ಬೆದರಿಸುವುದು ಮಾಡುತಿರುವುದರಿಂದ ರಕ್ಷಣೆಯಿಲ್ಲದಂತೆ ಆಗಿರುತ್ತದೆ.  ಕಾರಣ ದಿನಾಂಕ: 28.12.2022 ರಂದು ತಿಪ್ಪೆಗುಂಡಿಯಲ್ಲಿ ಮೊರಂ ಹಾಕುವಾಗ ನನಗೆ ತಡೆದು ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನೆಯಲ್ಲಿ ವಿಚಾರಣೆ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ಇಂದು ದೂರು ನೀಡಿರುತ್ತೇನೆ ಅಂತಾ ದೂರು ಸಾರಾಂಶ ಇರುತ್ತದೆ


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 ?ಲಂ 454, 380, 295 ಐಪಿಸಿ    : ಇಂದು ದಿನಾಂಕ 02.01.2023 ರಂದು ಸಾಯಂಕಾಲ 5.40 ಗಂಟೆಗೆ ಮೌನೇಶ ತಂದೆ ಮಲ್ಲಣ್ಣ ವಿಶ್ವಕರ್ಮ, ವ|| 53 ವರ್ಷ, ಜಾ|| ವಿಶ್ವಕರ್ಮ, ಉ|| ದೇವಸ್ಥಾನದ ಪೂಜಾರಿ, ಸಾ|| ಬಾಲಚೇಡ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿರುತ್ತಾರೆ. ದೂರಿನ ಸಾರಾಂಶವೇನೆಂದರೆ, ನಾನು ಈಗ ಸುಮಾರು 30 ವರ್ಷದಿಂದ ದೇವಸ್ಥಾನ ಪೂಜೆ ಮಾಡಿಕೊಂಡು ಬಂದಿರುತ್ತೇನೆ. ದಿನಾಂಕ 02.01.2023 ರಂದು ಬೆಳಿಗ್ಗೆ ನಾನು ಮಾರೆಮ್ಮ ಗುಡಿಗೆ ಹೋಗಿ ಪೂಜೆ ಮಾಡಿಕೊಂಡು ಮನೆಗೆ ಬಂದಿದ್ದೆ. ಮಧ್ಯಾಹ್ನ ಸಮಯದಲ್ಲಿ ನಮ್ಮೂರಿನ ಲಕ್ಷ್ಮಣ ತಂದೆ ಹಣಮಂತ ದುಖಾನ ಇವರು ನನಗೆ ಫೋನಮಾಡಿ ತಿಳಿಸಿದ್ದೇನೆಂದರೆ, ಯಾರೋ ಒಬ್ಬ ವ್ಯಕ್ತಿ ನಮ್ಮೂರಿನ ಮಾರೆಮ್ಮ ದೇವಿಯ ಗುಡಿಯಲ್ಲಿನ ಮೂತರ್ಿಗಳ ಮೇಲಿನ ಆಭರಣಗಳು ಕಳುವು ಮಾಡಿಕೊಂಡು ಮೂತರ್ಿಗಳಿಗೆ ಬೆಂಕಿ ಹಚ್ಚಿದ್ದಾನೆ ನಾನು ಅವನಿಗೆ ಹಿಡಿದುಕೊಂಡು ಕೂಡಿಸಿದ್ದೇನೆ ಬೇಗ ಬಾ ಅಂತಾ ತಿಳಿಸಿದ್ದ. ಕೂಡಲೇ ನಾನು ಮತ್ತು ನಮ್ಮೂರಿನ ಇನ್ನಿತರರು ಕೂಡಿ ಗುಡಿಯತ್ತಿರ ಹೋದಾಗ ನಮ್ಮೂರಿನ ಲಕ್ಷ್ಮಣ ತಂದೆ ಹಣಮಂತ ಮತ್ತು ಶಂಕ್ರಪ್ಪ ಬ್ಯಾಗರ ಇವರಿಬ್ಬರೂ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು ಕುಂತಿದ್ದರು. ಸದರಿಯವನಿಗೆ ವಿಚಾರಿಸಿದಾಗ ತನ್ನೆಸರು ಪ್ರೇಮಕುಮಾರ ತಂದೆ ಭೀಮರಾಯ ದೊಡ್ಡಮನಿ, ವ|| 35 ವರ್ಷ, ಜಾ|| ಕ್ರಿಶ್ಚಿಯನ್, ಸಾ|| ಹುಲಕಲ್ (ಜೆ) ಗ್ರಾಮ ಅಂತಾ ತಿಳಿಸಿದನು. ಸದರಿಯವನಿಗೆ ಚೆಕ್ ಮಾಡಿದಾಗ ನಮ್ಮೂರಿನ ಗ್ರಾಮದೇವತೆ ಮೂತರ್ಿಗಳ ಮೈಮೇಲಿನ ಆಭರಣಗಳು ಅವನ ಜೇಬಿನಲ್ಲಿದ್ದವು. ಮತ್ತು ಸದರಿ ದೇವಸ್ಥಾನದ ಮೂತರ್ಿಗಳಿಗೆ ಬೆಂಕಿ ಹಚ್ಚಿದ ಬಗ್ಗೆ ಒಪ್ಪಿಕೊಂಡನು. ಅವನು ಕ್ರೈಸ್ತ ಧರ್ಮದನಿದ್ದು ಹಿಂದು ದೇವತೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಸುಟ್ಟಿದ್ದೇನೆ ಅಂತಾ ಹೇಳಿದನು. ತಾನೇ ದೇವತೆಗಳ ಮೂತರ್ಿ ಸುಟ್ಟಿದ್ದು ನಿಜವಿರುತ್ತದೆ ಅಂತಾ ಒಪ್ಪಿಕೊಂಡಿರುತ್ತಾನೆ. ಪ್ರೇಮಕುಮಾರ ತನ್ನ ಕೊರಳಲ್ಲಿ ಏಸು ಶಿಲುಬೆ ಧರಿಸಿರುತ್ತಾನೆ. ಸದರಿ ವ್ಯಕ್ತಿಯು ಹಿಂದೂ ಧರ್ಮ ವಿರೋಧಿ ಚಟುವಟಿಕೆಯನ್ನು ಮಾಡಿದ್ದಾನೆ. ನಮ್ಮೂರಿನ ನಾರಾಯಣ ತಂದೆ ಬಾಲಪ್ಪ ತೋರಣತಿಪ್ಪ ಈತನು ಸೈದಾಪೂರ ಪೊಲೀಸರಿಗೆ ಕರೆಮಾಡಿ ಸ್ಥಳಕ್ಕೆ ಕರೆಸಿದ್ದರಿಂದ ಸದರಿಯವನಿಗೆ ಪೊಲೀಸರ ವಶಕ್ಕೆ ನೀಡಿ ಅವರಿಂದಲೇ ನಾನು ಮತ್ತು ನಮ್ಮೂರಿನ ಮುಖಂಡರು ಸೈದಾಪೂರಕ್ಕೆ ಬಂದಿರುತ್ತೇವೆ.   ಪ್ರೇಮಕುಮಾರ ತಂದೆ ಭೀಮರಾಯ ದೊಡ್ಡಮನಿ, ವ|| 35 ವರ್ಷ, ಜಾ|| ಕ್ರಿಶ್ಚಿಯನ್, ಸಾ|| ಹುಲಕಲ್ (ಜೆ) ಗ್ರಾಮ, ತಾ|| ವಡಿಗೇರಾ ಈತನು ಕಳ್ಳತನ ಮಾಡುವ ಮತ್ತು ಹಿಂದು ದೇವತೆಗಳನ್ನು ಅಪಮಾನ ಮಾಡುವ ಉದ್ದೇಶದಿಂದ ಇಂದು ದಿನಾಂಕ 02.01.2023 ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ನಮ್ಮೂರು ಹೊರವಲಯದಲ್ಲಿದ್ದ ಗ್ರಾಮದೇವತೆ ಮಾರೆಮ್ಮ ಗುಡಿಗೆ ಹೊಂಚುಹಾಕಿ ಬೀಗ ಮುರಿದು ಗೃಹಾತಿಕ್ರಮಣ ಮಾಡಿ ಗುಡಿಯಲ್ಲಿದ್ದ ಮೂತರ್ಿಗಳ ಮೈಮೇಲಿದ್ದ ಸುಮಾರು 40 ಸಾವಿರ ರೂಪಾಯಿ ಬೆಲೆಬಾಳುವ ತಾಳಿ, ತಾಳಿ ಗುಂಡುಗಳು, ಬೆಳ್ಳಿಕಾಲುಂಗುರ ಆಭರಣಗಳು ಕಳುವು ಮಾಡಿರುತ್ತಾನೆ. ಅಲ್ಲದೆ ಹಿಂದು ದೇವತೆಗಳಿಗೆ ಅಪಮಾನ ಮಾಡುವ ದುರುದ್ದೇಶದಿಂದ ಕಟ್ಟಿಗೆಯ ಮೂತರ್ಿಗಳಿಗೆ ಬೆಂಕಿಹಚ್ಚಿ ದ್ವಂಸ ಮಾಡಿರುತ್ತಾನೆ. ಕಾರಣ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 01/2023 ಕಲಂ: 323, 324, 504, 506 ಐಪಿಸಿ: ಇಂದು ದಿನಾಂಕ 02.01.2023 ರಂದು ಸಮಯ ಸಂಜೆ 7:30 ಗಂಟೆಗೆ ಫಿರ್ಯಾದಿದಾರಳು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 30.12.2022 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ತನ್ನ ಗಂಡನು ಫೀರ್ಯಾದಿಯ ತಾಯಿಯು ತಮ್ಮ ಸಾಮಾನುಗಳನ್ನು ತಗೊಂಡು ಹೋಗಿದ್ದಕ್ಕೆ ಕೋಪಮಾಡಿಕೊಂಡು ಕೊಡದಿಂದ, ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕಿವಿಗೆ ಅಲ್ಲಲ್ಲಿ ರಕ್ತಗಾಯಗೊಳಿಸಿದ್ದು ಆ ಬಗ್ಗೆ ಫಿರ್ಯಾದಿಯು ದವಾಖಾನೆಗೆ ತೋರಿಸಿಕೊಂಡು ವಿಚಾರ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.
 

ಇತ್ತೀಚಿನ ನವೀಕರಣ​ : 05-01-2023 11:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080