ಅಭಿಪ್ರಾಯ / ಸಲಹೆಗಳು

ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-02-2022


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 27/2022 ಕಲಂ: 279, 304 (ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ: 02-02-2022 ರಂದು 3-15 ಪಿ.ಎಮ್ ಕ್ಕೆ ಶ್ರೀ ತಿಮ್ಮಣ್ಣ ತಂದೆ ಅಮರಪ್ಪ ಮಡಿವಾಳ ಸಾಃ ಬುಂಕಲದೊಡ್ಡಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಆನಂದ ಹಾಗು ವೆಂಕಟೇಶ ಅಂತ ಇಬ್ಬರೂ ಗಂಡು ಮಕ್ಕಳಿದ್ದು, ದಿನಾಂಕ: 25/01/2022 ರಂದು ಮುಂಜಾನೆ 7-00 ಗಂಟೆಗೆ ಅವರಿಬ್ಬರೂ ನಮ್ಮ ಮೋಟಾರ ಸೈಕಲ್ ನಂ. ಕೆ.ಎ 36 ಇ.ಎನ್ 9544 ನೇದ್ದರ ಮೇಲೆ ಸುರಪೂರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ಮನೆಕಟ್ಟುವ ಸಲುವಾಗಿ ಕೂಲಿಕೆಲಸಕ್ಕೆ ಹೋಗುತ್ತೇವೆಂದು ಹೇಳಿ ಹೋದರು. ನಂತರ ರಾತ್ರಿ 8-00 ಗಂಟೆಯ ಸುಮಾರಿಗೆ ಇಬ್ಬರೂ ಮೋಟಾರ ಸೈಕಲ್ ಮೇಲೆ ಮನೆಗೆ ಬಂದು, ವೆಂಕಟೇಶನು ನಮಗೆ ತಿಳಿಸಿದ್ದೆನೆಂದರೆ, ನಾವು ಹಾವಿನಾಳ ಗ್ರಾಮದಲ್ಲಿ ಕೆಲಸ ಮಾಡಿ ಸಾಯಂಕಾಲ ಅಲ್ಲಿಂದ ನಾವಿಬ್ಬರೂ ಅಣ್ಣ-ತಮ್ಮಂದಿರು ನಮ್ಮ ಮೋಟಾರ ಸೈಕಲ್ ಮೇಲೆ ಮರಳಿ ಮನೆಗೆ ಬರುತ್ತಿದ್ದಾಗ ನಾನು ಮೋಟಾರ ಸೈಕಲ್ ನಡೆಸಿದ್ದು, ಅಣ್ಣನು ಹಿಂದುಗಡೆ ಕುಳಿತುಕೊಂಡಿದ್ದನು. ನಾವು ಸುರಪೂರ-ಲಿಂಗಸುಗೂರ ಮುಖ್ಯರಸ್ತೆಯ ಮೇಲೆ ತಿಂಥಣಿ ಕಮಾನ ಹತ್ತಿರ ಹೊರಟಿದ್ದಾಗ 6-30 ಪಿ.ಎಮ್ ಸುಮಾರಿಗೆ ಹಿಂದಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಮ್ಮ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದರಿಂದ ನಾವು ಮೋಟಾರ ಸೈಕಲ್ ಸಮೇತ ಡಾಂಬರ ರಸ್ತೆಯ ಮೇಲೆ ಬಿದ್ದೇವು. ನಮಗೆ ಅಪಘಾತ ಪಡಿಸಿದ ಮೋಟಾರ ಸೈಕಲ್ ಸವಾರನು ರಸ್ತೆ ಪಕ್ಕ ಬಿದ್ದನು. ಆಗ ನನಗೆ ಮತ್ತು ಅಪಘಾತಪಡಿಸಿದ ಮೋಟಾರ ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಲಾರದ ಕಾರಣ ಎದ್ದು ಅಣ್ಣನಾದ ಆನಂದನಿಗೆ ಎಬ್ಬಿಸಿ ರಸ್ತೆಯ ಪಕ್ಕದಲ್ಲಿ ಕೂಡಿಸಿ ವಿಚಾರಿಸಲಾಗಿ ತಲೆಗೆ ಭಾರಿ ಒಳಪೆಟ್ಟಾಗಿ ತ್ರಾಸ ಆಗುತ್ತಿರುವ ಬಗ್ಗೆ ತಿಳಿಸಿದನು. ನಮಗೆ ಅಪಘಾತಪಡಿಸಿದ ಮೋಟಾರ ಸೈಕಲ್ ನಂಬರ ಕೆ.ಎ 41 ಇ.ಕ್ಯೂ 8847 ಇದ್ದು, ಅಪಘಾತಪಡಿಸಿದ ಸವಾರನ ಹೆಸರು ವಿಚಾರಿಸಲಾಗಿ ಬಸವರಾಜ ತಂದೆ ನಿಂಗಣ್ಣ ಸಾ: ಆಲ್ದಾಳ ತಾ: ಸುರಪೂರ ಅಂತ ಹೇಳಿ ಅಲ್ಲಿಂದ ತನ್ನ ಮೋಟಾರ ಸೈಕಲ್ ಸಮೇತ ಹೋದನು. ಅಲ್ಲಿ ಆನಂದ ಅಣ್ಣನು ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಮನೆಗೆ ಹೋಗೋಣಾ ನಡೆ ಅಂತ ಹೇಳಿ ನಮ್ಮ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಮನೆಗೆ ಬಂದಿರುತ್ತೇನೆ ಅಂತ ಹೇಳಿದನು. ಆಗ ಗಾಬರಿಯಾಗಿ ನಾವು ನೋಡಿ ಆನಂದನಿಗೆ ಆಸ್ಪತ್ರೆಗೆ ಹೋಗೋಣಾ ನಡೆ ಅಂತ ಹೇಳಿದಾಗ ಈಗ ನನಗೆ ಸುಸ್ತಾಗಿದೆ, ಮುಂಜಾನೆ ಹೋಗೋಣಾ ಅಂತ ಹೇಳಿ ಮಲಗಿದನು. ಬಳಿಕ ಮರುದಿವಸ ದಿನಾಂಕ: 26/01/2022 ರಂದು ಸಾಯಂಕಾಲ ನನ್ನ ಮಗನು ತಲೆಯಲ್ಲಿ ಬಹಳ ನೋವಾಗುತ್ತಿದೆ ಅಂತ ಹೇಳಲಾರಂಭಿಸಿದರಿಂದ ನಾವು ರಾತ್ರಿ ಒಂದು ಖಾಸಗಿ ಕಾರಿನಲ್ಲಿ ನನ್ನ ಮಗ ಆನಂದನಿಗೆ ಹಾಕಿಕೊಂಡು ರಾಯಚೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೇವು. ಅಲ್ಲಿ ಚಿಕಿತ್ಸೆ ಪಡೆಯುತ್ತ ನನ್ನ ಮಗನು ಕೋಮಾ ಸ್ಥಿತಿಗೆ ಹೋಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ದಿನಾಂಕಃ 27/01/2022 ರಂದು ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಮಿರಜ ಕರೆದುಕೊಂಡು ಹೋಗಿ ಭಾರತಿ ವಿದ್ಯಾಪೀಠ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅಲ್ಲಿ ನನ್ನ ಮಗ ಆನಂದನು ಮಿರಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿ ಆಗದೇ ಇಂದು ದಿನಾಂಕ: 02/02/2022 ರಂದು 8-00 ಎ.ಎಮ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 27/2022 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಯಾದಗಿರಿ ನಗರ ಠಾಣೆ
ಗುನ್ನೆ ನಂ:19/2022 ಕಲಂ: 143, 341, 323, 504, 506 ಸಂ. 149 ಐಪಿಸಿ : ಇಂದು ದಿನಾಂಕ: 02/02/2022 ರಂದು 3-15 ಪಿಎಂಕ್ಕೆ ಪಿರ್ಯಾದಿ ಹಣಮಂತ್ರಾಯ ತಂದೆ ಬಸವರಾಜಪ್ಪ ವಿಶ್ವಕರ್ಮ ವ;44 ಜಾ; ವಿಶ್ವಕರ್ಮ ಉ; ಒಕ್ಕಲುತನ ಸಾ; ಬೀರನೂರ ತಾ; ಶಹಾಪೂರ ಹಾ.ವ; ಮದನಪೂರಗಲ್ಲಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದರ ಸಾರಾಂಶವೆನೆಂದರೆ, ನನಗೆ ಪರಿಚಯಸ್ಥರಾದ ಮಂಜುಳಾ ಗಂಡ ಮೋನಪ್ಪ ವಿಶ್ವಕರ್ಮ ಸಾ; ಉಳ್ಳಂಡಿಗೇರ ತಾ; ಚಿತ್ತಾಪೂರ ಇವಳು ಯಾದಗಿರಿಯ ಅಜೀಜ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅವಳು, ಅವಳ ಮಕ್ಕಳೊಂದಿಗೆ ವಾಸವಾಗಿದ್ದಳು. ಅವಳಿಗೆ ಸಂಸಾರದ ಅಡಚಣೆಗಾಗಿ ನನ್ನ ಹತ್ತಿರ ಹಣ ಕೇಳುತ್ತಾ ಬರುತ್ತಿರುವಾಗ ನಾನು ಆಗಾಗ ಹಂತ ಹಂತವಾಗಿ ಒಟ್ಟು 2,50,000/-ರೂ. ಗಳನ್ನು ಕೊಟ್ಟಿದ್ದೆನು. ನಂತರ ನಾನು ಅವಳಿಗೆ ನನ್ನ ಹಣ ವಾಪಾಸ್ಸು ಕೊಡುವಂತೆ ಕೇಳಿದಾಗಲೆಲ್ಲಾ ಇವತ್ತೀಲ್ಲಾ ನಾಳೆ ನಿನ್ನ ಹಣ ಕೊಡುತ್ತೇನೆ ಈಗ ನನ್ನಹತ್ತಿರ ಹಣ ಇರುವುದಿಲ್ಲ ಅಂತಾ ಹೇಳುತ್ತಾ ಬರುತ್ತಿದ್ದಳು. ಹಿಗೀದ್ದು ದಿನಾಂಕ; 11/03/2019 ರಂದು ರಾತ್ರಿ 9-50 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಕಾಳಮ್ಮ ಗಂಡ ಹಣಮಂತ್ರಾಯ ಇಬ್ಬರು ಮನೆಯಲ್ಲಿರುವಾಗ 1) ಮಂಜುಳಾ ಗಂಡ ಮೋನಪ್ಪ 2) ಶಶಿಕುಮಾರ ತಂದೆ ಮೋನಪ್ಪ 3) ಮಲ್ಲಿಕಾಜರ್ುನ ತಂದೆ ದೊಡ್ಡಪ್ಪ ಸಾ; ಠಾಣಗುಂದಿ 4) ಮೌನೇಶ ತಂದೆ ಅಣವೀರಪ್ಪ 5) ಸಿದ್ದಪ್ಪ ತಂದೆ ಚೋಳಪ್ಪ ಕಂಬಾರ ಸಾ; ನಾಲವಾರ ಸ್ಟೇಷನ 6) ಮಂಜು ಸಾ; ಕೊಲ್ಲೂರು ರವರು ಕೂಡಿ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಮದೆ ಬಂದವರೇ ಲೇ ಬೊಸಡೀ ಮಗನೇ ಹಣಮ್ಯಾ ಹೊರಗೆ ಬಾರಲೇ ಅಂತಾ ಚಿರಾಡುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಕಾಳಮ್ಮ ಹೊರಗೆ ಬಂದಾಗ ಈ ಮೇಲಿನವರು ಅವಾಚ್ಯವಾಗಿ ಬೈದಾಡುತ್ತಾ ಇರುವಾಗ ನಾನು ಯಾಕೆ ಬೈಯುತ್ತೀರಿ ಅಂತಾ ಅಂದಿದ್ದಕ್ಕೆ ಮಂಜುಳಾ ಇವಳು ನನ್ನ ಹತ್ತಿರ ಹಣ ಇಲ್ಲ ಅಂದರೂ ಕೂಡಾ ಪದೇ ಪದೇ ನಮ್ಮ ಮನೆಗೆ ಬಂದು ಹಣ ಕೇಳುತ್ತಿ ನಾನು ನಿನಗೆ ಹಣ ಕೊಡುವುದಿಲ್ಲ ಏನು ಮಾಡುತ್ತಿ ಮಾಡು ಅಂತಾ ಅಂದಾಗ ನಾನು ನಾನು ಅವರಿಗೆ, ನಾನು ಕೂಡಾ ಬೇರೆ ಕಡೆಯಿಂದ ಹಣ ತೆಗೆದುಕೊಂಡು ನಿನಗೆ ಕೊಟ್ಟಿರುತ್ತೇನೆ. ನನಗೂ ಕೂಡಾ ಅವರು ಹಣ ಕೊಡುವಂತೆ ಕೇಳುತ್ತಿದ್ದು ನೀನು ಹಣ ಕೊಟ್ಟರೆ ನಾನು ಅವರಿಗೆ ಹಣ ಕೊಡಲು ಸಾಧ್ಯವಾಗುತ್ತದೆ ಅಂತಾ ಅಂದಾಗ ಅವಳು ನಾನು ಯಾವುದೇ ಹಣ ಕೊಡುವುದಿಲ್ಲ ನನ್ನ ಹತ್ತಿರ ಹಣ ಇರುವುದಿಲ್ಲ ಮತ್ತೆ ಮತ್ತೆ ಮನೆಗೆ ಬಂದು ಹಣ ಕೇಳಬೇಡ ಅಂತಾ ಅಂದಿದ್ದಕ್ಕೆ ನಾನು ಅವಳಿಗೆ, ನೀನು ಹಣ ಕೊಡದಿದ್ದರೆ ನಿಮ್ಮ ಮೇಲೆ ಕೇಸು ಮಾಡುತ್ತೇನೆ ಅಂತಾ ಹೇಳಿ ಮನೆಯ ಒಳಗಡೆ ಹೋಗುತ್ತಿರುವಾಗ ಅವರೆಲ್ಲರೂ ನನಗೆ ತಡೆದು ನಿಲ್ಲಿಸಿ, ಲೇ ಸೂಳೆ ಮಗನೇ ನಮ್ಮ ಮೇಲೆ ಕೇಸು ಮಾಡುತ್ತೀನಿ ಅಂತಾ ಹೇಳುತ್ತೀಯಾ ನಿನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ, ಮಂಜುಳಾ ಇವಳು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದಳು. ಶಶಿಕುಮಾರ ಮತ್ತು ಮಲ್ಲಿಕಾಜರ್ುನ ಇವರು ನನಗೆ ಕಾಲಿನಿಂದ ಒದ್ದರು. ಮೌನೇಶ ಮತ್ತು ಸಿದ್ದಪ್ಪ ಇವರು ನನಗೆ ನೆಲಕ್ಕೆ ಹಾಕಿ ಇವತ್ತು ಇವನಿಗೆ ಹಿಗೆ ಬಿಟ್ಟಲ್ಲಿ ಪದೇ ಪದೇ ಮನೆಗೆ ಬಂದು ಹಣ ಕೇಳುತ್ತಾನೆ ಅಂತಾ ಕಾಲಿನಿಂದ ಒದ್ದರು. ಮಂಜು ಈತನು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ ಆಗ ಜಗಳವನ್ನು ನನ್ನ ಹೆಂಡತಿ ಕಾಳಮ್ಮ ಹಾಗೂ ಸಿದ್ರಾಮಪ್ಪ ಬನ್ನಟ್ಟಿ ಮತ್ತು ಮನೆಯ ಅಕ್ಕಪಕ್ಕದವರು ಜಗಳ ಬಿಡಿಸಿದ್ದು ಇರುತ್ತದೆ. ನನಗೆ ಅಷ್ಟೇನು ಪೆಟ್ಟಾಗದೇ ಇದ್ದುದರಿಂದ ನಾನು ಆಸ್ಪತ್ರೆಗೆ ತೋರಿಸಿರುವುದಿಲ್ಲ. ನಂತರ ನಾನು ಈ ಬಗ್ಗೆ ಮನೆಯಲ್ಲಿ ವಿಚಾರಿಸಿದ್ದು ಆಗಿದ್ದಾಯಿತು ಇರಲಿ ಬಿಡು ಅಂತಾ ಸುಮ್ಮನಿದ್ದರು ಕೂಡಾ ಪದೇ ಪದೇ ನನಗೆ ಈ ಮೇಲಿನವರು ತೊಂದರೆ ಕೊಡುತ್ತಿದ್ದು ಆದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಸದರಿಯವರ ಮೇಲೆ ಅಜರ್ಿ ನೀಡುತ್ತಿದ್ದು ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.19/2022 ಕಲಂ. 143, 341, 323, 504, 506 ಸಂ. 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 18/2022 ಕಲಂ:379 ಐಪಿಸಿ : ದಿನಾಂಕ:02/02/2022 ರಂದು 2-30 ಪಿಎಮ್ ಕ್ಕೆ ಶ್ರೀ ಹರಿಕೃಷ್ಣ ತಂದೆ ಸುಬ್ಬರಾಜ ರೆಡ್ಡಿ, ವ:33, ಜಾತಿ:ಕ್ಷತ್ರೀಯ, ಉ:ನಾಗಜರ್ುನ ಕಂಪನಿಯಲ್ಲಿ ಮ್ಯಾನೇಜರ, ಸಾ:ಮತ್ತುರು ತಾ:ತೀರ್ಥಹಳ್ಳಿ ಜಿ:ಶಿವಮೊಗ್ಗ ಹಾ:ವ:ಬೆಂಡೆಬಂಬಳಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ, ನಾನು ಸುಮಾರು 2 ವರ್ಷಗಳಿಂದ ನಾಗುಜರ್ುನ ಕಂಪನಿಯಲ್ಲಿ ಮ್ಯಾನೇಜರ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯು ಬೆಂಡಬೆಂಬಳಿ ಸೀಮಾಂತರದ ಕೃಷ್ಣನದಿಯ ದಂಡೆಯಲ್ಲಿ ಕವಳೆ ಗದ್ದೆಗಳು ಹೊಂದಿದ್ದು ಇರುತ್ತದೆ. ಸದರಿ ಕವಳೆಮ ಗದ್ದೆಗಳಿಗೆ ನೀರು ಸರಬರಾಜು ಮಾಡಲು ಕೃಷ್ಣನದಿಯ ದಂಡೆಗೆ ಇರುವ ಇ.ಡಿ ರೆಡ್ಡಿಯವರ ಜಮೀನಿನಲ್ಲಿ ನಮ್ಮ ನಾಗಾಜರ್ುನ ಕಂಪನಿಯ ಪಾಯಿಂಟ್ 1 ರಲ್ಲಿ 4 ಮೋಟರ ಪಂಪಸೆಟ್ ಗಳನ್ನು ಅಳವಡಿಸಿದ್ದು ಇರುತ್ತದೆ. ಸದರಿ ಮೋಟರಗಳಿಂದ ಸ್ವಲ್ಪ ಮೇಲ್ಗಡೆ ಮೋಟರ್ ಗಳನ್ನು ಚಾಲು ಮಾಡಲು ಸ್ಟಾಟರ್ ಕೂಡಿಸಿರುತ್ತೇವೆ. ಸದರಿ ನದಿ ತೀರದಲ್ಲಿರುವ ಮೋಟರ್ ದಿಂದ ಸ್ಟಾಟರ ವರೆಗೆ ಕೇಬಲ್ ವೈರಗಳನ್ನು ಹಾಕಿರುತ್ತೇವೆ. ನಮ್ಮಂತೆಯೇ ನಮ್ಮ ಸುತ್ತಮುತ್ತ ಹೊಲಗಳ ಮಾಲಿಕರಾದ ಖಾಜಾಪಟೇಲ್ ತಂದೆ ಇಕ್ಬಾಲಸಾಬ, ಬಾಬು ತಂದೆ ಕೋನಪ್ಪರಾಜು, ಅಬ್ಬಾಸ ಅಲಿ ಮತ್ತು ಜಮಾಲಸಾಬ ತಂದೆ ಇಮಾಮಸಾಬ ಇವರುಗಳು ಕೂಡಾ ಮೋಟರ್ಗಳನ್ನು ಕೂಡಿಸಿ, ಕೇಬಲ್ ಹಾಕಿರುತ್ತಾರೆ. ಸದರಿ ಮೋಟರ್ ಗಳನ್ನು ಚಾಲು ಮಾಡಿ ನಮ್ಮ ಗದ್ದೆಗಳಿಗೆ ನೀರು ಹರಿಸುತ್ತಾ ಬಂದಿರುತ್ತೇವೆ. ಅದರಂತೆ ದಿನಾಂಕ:31/01/2022 ರಂದು ಸಾಯಂಕಾಲದ ವರೆಗೆ ಮೇಲ್ಕಂಡ ಖಾಜಾಪಟೇಲ್, ಬಾಬು, ಅಬ್ಬಾಸ ಅಲಿ ಮತ್ತು ಜಮಾಲಸಾಬ ಎಲ್ಲರೂ ನಮ್ಮ ನಮ್ಮ ಮೋಟರ್ ಗಳನ್ನು ಚಾಲು ಮಾಡಿ, ಗದ್ದೆಗಳಿಗೆ ನೀರು ಹರಿಸಿ, ರಾತ್ರಿ 8 ಗಂಟೆ ಸುಮಾರಿಗೆ ಮೋಟರ್ ಗಳನ್ನು ಬಂದ ಮಾಡಿಕೊಂಡು ಮನೆಗೆ ಹೋಗಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ:01/02/2022 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಖಾಜಾಪಟೇಲ್ ತಂದೆ ಇಕ್ಬಾಲ್ ಪಟೇಲ್ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ನಮ್ಮ ಕವಳೆ ಗದ್ದೆಗೆ ನೀರು ಚಾಲು ಮಾಡಲು ಹೊದರೆ ನನ್ನ ಮೋಟರ್ ಚಾಲು ಆಗಲಿಲ್ಲ. ಆಗ ನಾನು ಸರಿಯಾಗಿ ನೋಡಿದಾಗ ನನ್ನ ಸ್ಟಾಟರದಿಂದ ಮೋಟರ್ ಗೆ ಹೋಗಿರುವ ಕೇಬಲ್ ಅನ್ನು ಯಾರೋ ಕಳ್ಳರು ಸ್ಟಾಟರ ಸಮೀಪ ಕತ್ತಿರಿಸಿಕೊಂಡು ಹೋಗಿದ್ದರು. ಅದರಂತೆ ಆಜುಬಾಜು ಇರುವ ಮೋಟರಗಳನ್ನು ನೋಡಿದೆನು. ಸುಮಾರು 10 ಮೋಟರ್ ಗಳ ಕೇಬಲ್ ಗಳನ್ನು ಕತ್ತರಿಸಿಕೊಂಡು ಕಳುವು ಮಾಡಿಕೊಂಡು ಹೋಗಿರುವುದು ಕಂಡುಬರುತ್ತಿದೆ ಎಂದು ಹೇಳಿದನು. ಆಗ ನಾನು ಮತ್ತು ಬಾಬು, ಅಬ್ಬಾಸ ಅಲಿ ಮತ್ತು ಜಮಾಲಸಾಬ ಎಲ್ಲರೂ ಹೋಗಿ ನೋಡಿದಾಗ ನಮ್ಮ 4 ಮೋಟರ್ ಗಳ ಅಂದಾಜು 200 ಮಿಟರ್ ಉದ್ದದ ಕೇಬಲ್ ಅದೇ ರೀತಿ ಖಾಜಾಪಟೇಲ್, ಬಾಬು, ಅಬ್ಬಾಸ ಅಲಿ ಮತ್ತು ಜಮಾಲ ಇವರ ತಲಾ 1 ಮೋಟರಗಳ ಅಂದಾಜು 50 ಮೀಟರ ದಂತೆ 200 ಮೀಟರ್ ಹೀಗೆ ಒಟ್ಟು ಅಂದಾಜು 400 ಮೀಟರ ಉದ್ದದ ಕೇಬಲ್ ಅ:ಕಿ:1,00,000/- ರೂ. ಬೆಲೆ ಬಾಳುವುದನ್ನು ದಿನಾಂಕ:31/01/2022 ರಂದು 8 ಪಿಎಮ್ ದಿಂದ ದಿನಾಂಕ:01/02/2022 ರಂದು 7 ಎಎಮ್ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಸದರಿ ಕಳ್ಳರನ್ನು ಪತ್ತೆ ಮಾಡಿ ಕಳುವು ಮಾಡಿರುವ ನಮ್ಮ ಮೇಲ್ಕಂಡ ರೈತರ ಕೆಬಲಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 18/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 23/2022 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ದಿನಾಂಕ: 02.02.2022 ರಂದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿನಾದ ನರೇಶ ತಂದೆ ಬಾಲುಗೌಡ ಕಲಾಲ ಗ್ರಾಮ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹೆಂಡ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ಸಾಹೇಬರು ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಓಡಿ ಹೋಗಿದ್ದು ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ 40 ಲೀಟರ ಹೆಂಡ ಮತ್ತು ನಗದು ಹಣ ರೂ 690=00 ಗಳನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಸದರಿ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 10/2022 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 02/02/2022 ರಂದು 06.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 02/02/2022 ರಂದು ಕಕ್ಕಸಗೇರಾ ಗ್ರಾಮದ ಪಂಚಾಯತಿಯ ಕಟ್ಟಡದ ಮುಂದೆ ರೊಡಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಸೈಯದ ತಂದೆ ಗಫೂರಸಾಬ ಮುಲ್ಲಾ ವಯಾ:30 ವರ್ಷ ಉ: ಕೂಲಿ ಜಾ: ಮುಸ್ಲಿಂ ಸಾ: ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 05.10 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1480/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ್ ಠಾಣೆ
ಗಗುನ್ನೆ ನಂ: 11/2022 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 02/02/2022 ರಂದು 07.50 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗಪ್ಪ ಪಿಎಸ್ಐ ತನಿಖೆ ಗೋಗಿ ಪೊಲೀಸ್ ಠಾಣೆ. ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 02/02/2022 ರಂದು ಕಕ್ಕಸಗೇರಾ ಗ್ರಾಮದ ವನದುಗರ್ಾ ಕ್ರಾಸ್ ರೊಡಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ರಮೇಶ ತಂದೆ ದೇವಿಂದ್ರಪ್ಪ ಗುತ್ತೇದಾರ ವಯಾ:22 ವರ್ಷ ಉ: ಕೂಲಿ ಜಾ: ಇಳಿಗೇರ ಸಾ: ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 05.30 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1250/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 03-02-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080