ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-03-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 32/2022 ಕಲಂ 379 ಐಪಿಸಿ : ದಿನಾಂಕ 02.03.2022 ರಂದು ಸಾಯಂಕಾಲ 5 ಗಂಟೆಗೆ ಸುಭಾಶ ತಂದೆ ಲೋಕ ನಾಯಕ, ವ|| 47 ವರ್ಷ, ಜಾ|| ಲಮಾಣಿ, ಉ|| ಉಪ-ಅಭಿವೃದ್ದಿ ಅಧಿಕಾರಿಗಳು (ಪ್ರಭಾರ), ಕನರ್ಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ಯಾದಗಿರಿ, ಸಾ|| ಖೇಡಾ(ಬಿ), ತಾ|| ಬಸವಕಲ್ಯಾಣ, ಹಾ||ವ|| ಚಿರಂಜೀವಿ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ ಸಾರಾಂಶವೇನೆಂದರೆ, ಕಡೇಚೂರು-ಬಾಡಿಯಾಳ ಸೀಮಾಂತರದಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಕುರಿತು ಕಳೆದ ಸುಮಾರು 4 ವರ್ಷಗಳ ಕೆಳಗೆ ಗೂಡೂರು-ಜೋಳದಡಗಿ ಬ್ರೀಡ್ಜ್ ಕಂ. ಬ್ಯಾರೇಜ್ನಲ್ಲಿ ಸಂಗ್ರಹಿಸಿದ ನೀರನ್ನು ಮೋಟಾರ್ಗಳ ಸಹಾಯದಿಂದ ಪೈಪಲೈನ್ ಮೂಲಕ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ಗೂಡೂರು ಗ್ರಾಮ ಸೀಮಾಂತರದಲ್ಲಿ ಭೀಮಾನದಿ ದಡೆಗೆ 120 ಹೆಚ್.ಪಿ ಸಾಮಾಥ್ರ್ಯದ 3 ನೀರೆತ್ತುವ ಮೋಟಾರ್ಗಳು ಅಳವಡಿಸಿ ಅವುಗಳಿಗೆ ಜೆಸ್ಕಾಂ ಶಾಖೆಯಿಂದ ವಿಧ್ಯುತ್ ಸಂಪರ್ಕ ಅಳವಡಿಸಿ 300 ಕೆ.ವಿ ಎರಡು ಪರಿವರ್ತಕಗಳು (ಟಿ.ಸಿ) ಜೋಡಣೆ ಮಾಡಲಾಗಿತ್ತು. ಬಸಲಿಂಗಪ್ಪ ಗೂಡೂರು ಎಂಬವವರು ಪಂಪ್ ಆಪರೇಟರ್ ಅಂತಾ ಕೆಲಸ ಮಾಡುತ್ತಿದ್ದ. ಹೀಗಿದ್ದು ದಿನಾಂಕ 24.02.2022 ರಂದು ಬೆಳಿಗ್ಗೆ ಬಸಲಿಂಗಪ್ಪ ಪಂಪ್ ಆಪರೇಟರ್ ನನಗೆ ಫೋನ್ಮಾಡಿ ವಿಧ್ಯುತ್ ಟಿ.ಸಿಗಳಲ್ಲಿರುವ ಕ್ವಾಯಿಲ್ ಮತ್ತು ಆಯಿಲ್ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ತಿಳಿಸಿದ್ದ. ನಾನು ಕೂಡಲೇ ಆದಿನ ಮಧ್ಯಾಹ್ನ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿದೆ. ಜೆಸ್ಕಾಂ ಶಾಖೆಯವರು ಅಳವಡಿಸಿದ ಎರಡು ಟಿ.ಸಿಗಳಲ್ಲಿಯ ಕಾಪರ ಕ್ವಾಯಿಲ್ ಮತ್ತು ಆಯಿಲ್ ಇರಲಿಲ್ಲ. ನಾನು ಬಸಲಿಂಗಪ್ಪನಿಗೆ ಯಾರು ಕಳುವು ಮಾಡಿಕೊಂಡು ಹೋಗಿದ್ದಾರೆ ಮತ್ತು ಯಾವಾಗ ಕಳುವಾಗಿದೆ ಅಂತಾ ವಿಚಾರಿಸಿದಾಗ ನಿನ್ನೆರಾತ್ರಿ 8 ಗಂಟೆ ಸುಮಾರಿಗೆ ನಾನು ಪಂಪ್ಹೌಸ್ನಿಂದ ಮನೆಗೆ ಹೋಗಿದ್ದೆ. ಇಂದು ಬೆಳಿಗ್ಗೆ 6 ಗಂಟೆಗೆ ಬಂದಾಗ ಈ ರೀತಿಯಾಗಿದೆ ಅಂತಾ ತಿಳಿಸಿದ. ಯಾರೋ ಕಳ್ಳರು ಗೂಡೂರು ಸೀಮಾಂತರದಲ್ಲಿರುವ ನಮ್ಮ ಇಲಾಖೆಗೆ ಸಂಬಂಧಿಸಿದ ಸುಮಾರು 3.5 ಲಕ್ಷ ರೂಪಾಯಿಗಳು (ಮೂರುವರೆ ಲಕ್ಷ) ಕಿಮ್ಮತ್ತು ಬೆಲೆಬಾಳುವ ಎರಡು ವಿಧ್ಯುತ್ ಟಿ.ಸಿಗಳಲ್ಲಿಯ ಕಾಪರ್ ಕ್ವಾಯಿಲ್ ಮತ್ತು ಆಯಿಲನ್ನು ದಿನಾಂಕ 23.02.2022 ರಂದು ರಾತ್ರಿ 8 ಗಂಟೆಯಿಂದ ದಿನಾಂಕ 24.02.2022 ರಂದು ಬೆಳಿಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಾನೂನು ಕ್ರಮ ಜರುಗಿಸಿ ಕಳುವಾದ ಸ್ವತ್ತನ್ನು ಪತ್ತೆಹಚ್ಚಿಕೊಡಲು ಕೋರಿದೆ. ಅಂತಾ ಆಪಾದನೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 33/2022 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ 02/03/2022 ರಂದು, 17-45 ಗಂಟೆಗೆ ಫಿಯರ್ಾದಿ ಶ್ರೀ ಮಹಾಂತೇಶ ತಂದೆ ಶರಣಪ್ಪ ಲಕಶೆಟ್ಟಿ ವಯಸ್ಸು 35 ವರ್ಷ ಜಾತಿ ಹಿಂದೂ ಗಾಣಿಗ, ಉಃ ಒಕ್ಕಲುತನ ಕೆಲಸ ಸಾಃ ದೋರನಹಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 02/03/2022 ರಂದು ಸಗರ(ಬಿ) ಗ್ರಾಮದಲ್ಲಿರುವ ನಮ್ಮ ಸಂಬಂಧಿಕರೊಬ್ಬರು ಮೃತ ಪಟ್ಟಿದ್ದು, ಅವರ ಅಂತ್ಯ ಸಂಸ್ಕಾರ ಕುರಿತು ನಾನು ಮತ್ತು ನಮ್ಮ ಎರಡನೇ ಅಣ್ಣ-ತಮ್ಮಕಿಯಾದ ದೇವಿಂದ್ರಪ್ಪ ತಂದೆ ಸಂಗಣ್ಣ ಲಕಶೆಟ್ಟಿ, ವಯಸ್ಸು 40 ವರ್ಷ, ಇಬ್ಬರೂ ಕೂಡಿ, ಮುಂಜಾನೆ ದೋರನಹಳ್ಳಿ ಗ್ರಾಮದಿಂದ ಮೋಟರ್ ಸೈಕಲ್ ನಂ ಕೆಎ- 36-ಡಬ್ಯೂ- 3450 ನೇದ್ದರ ಮೇಲೆ ಸಗರ(ಬಿ) ಗ್ರಾಮಕ್ಕೆ ಹೋಗಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮಧ್ಯಾಹ್ನದ ಸುಮಾರಿಗೆ ಸಗರ(ಬಿ) ಗ್ರಾಮದಿಂದ ಮರಳಿ ಊರಿಗೆ ಮೋಟರ್ ಸೈಕಲ್ ಮೇಲೆ ಬರುತಿದ್ದೇವು. ಮೋಟರ್ ಸೈಕಲ್ ನಾನು ಚಲಾಯಿಸುತಿದ್ದೇನು. ಹಿಂದುಗಡೆ ದೇವಿಂದ್ರಪ್ಪ ಇವರು ಕುಳಿತುಕೊಂಡಿದ್ದರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹತ್ತಿಗೂಡುರ - ಶಹಾಪೂರ ರೋಡಿನ ಮೇಲೆ ಗೋಲಗೇರಿ ದೊಡ್ಡಿ ಕ್ರಾಸ್ ಹತ್ತಿರ ಬರುತಿದ್ದಾಗ ಹಿಂದಿನಿಂದ ಅಂದರೆ ಹತ್ತಿಗೂಡುರ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಮ್ಮ ಮೋಟರ್ ಸೈಕಲ್ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ನನಗೆ ಸಾಧಾ ಪ್ರಮಾಣದ ಗಾಯಗಳಾಗಿದ್ದು ಮತ್ತು ಹಿಂಬದಿಯ ಸವಾರ ದೇವಿಂದ್ರಪ್ಪ ಇವರಿಗೆ ಭಾರಿ ಗುಪ್ತಗಾಯಗಳಾಗಿತ್ತವೆ ಸದರಿ ಅಪಘಾತಕ್ಕೆ ಕಾರ್ ಚಾಲಕ ವಿನೋದ ತಂದೆ ಸಿದ್ದಣಗೌಡ ಹತ್ತಿಗೂಡುರ, ವಯಸ್ಸು 25 ವರ್ಷ, ಜಾತಿ ಲಿಂಗಾಯತ, ಸಾಃ ಬುಟ್ನಾಳ ತಾಃ ಜೇವಗರ್ಿ, ಈತನು ಕಾರ್ ನಂ. ಕೆಎ-42-ಎಮ್-5734 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿರುತ್ತಾನೆ ಅಂತಾ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 33/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 03-03-2022 11:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080