ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-06-2022
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 95/2022 ಕಲಂ: 279, 337 ಐಪಿಸಿ ಸಂಗಡ 187 ಐ.ಎಮ್.ವಿ ಯಾಕ್ಟ: ಇಂದು ದಿನಾಂಕ: 02/06/2022 ರಂದು 1-00 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಮರಲಿಂಗಪ್ಪ ತಂದೆ ಹಣಮಂತ ಕಟ್ಟಿಮನಿ ವಯ: 32 ವರ್ಷ ಜಾ: ಪ.ಜಾತಿ(ಹೊಲೆಯ) ಉ: ಕೂಲಿಕೆಲಸ ಸಾ: ಬೆನಕನಹಳ್ಳಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆೆ, ಮೊನ್ನೆ ದಿನಾಂಕ: 31/05/2022 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಶಿವು ವಯಾ: 11 ವರ್ಷ ಇಬ್ಬರೂ ಕೂಡಿ ನಮ್ಮ ಹೊಲಕ್ಕೆ ಹೊಗುವ ಕುರಿತು ನಮ್ಮೂರಿನ ದ್ಯಾವಮ್ಮ ಗುಡಿ ಮುಂದುಗಡೆಯಿಂದ ರಸ್ತೆ ಮೇಲೆ ಕಾಲನಡಿಗೆಯಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮೂರಿನ ಲಚ್ಚಪ್ಪ ತಂದೆ ಯಂಕಪ್ಪ ಪೂಜಾರಿ ಈತನು ತನ್ನ ಮೋಟಾರ ಸೈಕಲ ಮೇಲೆ ಹಿಂದುಗಡೆ ಮಲಕಪ್ಪ ತಂದೆ ಹಣಮಂತ ಗಡ್ಡಿಮನಿ ಈತನಿಗೆ ಕೂಡಿಸಿಕೊಂಡು ತನ್ನ ಮೋಟಾರ ಸೈಕಲ್ ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿದ್ದು, ನನ್ನ ಮಗನು ರಸ್ತೆ ಮೇಲೆ ಬಿದ್ದನು, ಆತನಿಗೆ ಬಲಕಾಲು ಮೋಳಕಾಲಿಗೆ ಒಳಪೆಟ್ಟು ಆಗಿರುತ್ತದೆ. ನನ್ನ ಮಗನಿಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ಓಡಿ ಹೋದ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ:ಕೆ.ಎ-33/ಡಬ್ಲೂ-1817 ನೇದ್ದು ಇರುತ್ತದೆ. ನಂತರ ನನ್ನ ಮಗನಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಹೆಂಡತಿಯಾದ ಲಕ್ಷ್ಮೀ ವಯಾ: 27 ಇಬ್ಬರೂ ಕೂಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ.
ಕಾರಣ ನಾನು ಮತ್ತು ನನ್ನ ಮಗನಾದ ಶಿವು ಇಬ್ಬರೂ ದ್ಯಾವಮ್ಮ ಗುಡಿ ಮುಂದೆ ಕಾಲನಡಿಗೆಯಿಂದ ದ್ಯಾವಮ್ಮ ಗುಡಿ ಮುಂದುಗಡೆಯಿಂದ ರಸ್ತೆ ಮೇಲೆ ಹೊಲಕ್ಕೆ ಹೋಗುವಾಗ ನಮ್ಮೂರಿನ ಲಚ್ಚಪ್ಪ ತಂದೆ ಯಂಕಪ್ಪ ಪೂಜಾರಿ ಈತನ ತನ್ನ ಮೋಟಾರ ಸೈಕಲ್ ನಂ: ಕೆ.ಎ-33/ಡಬ್ಲೂ-1817 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಗನಾದ ಶಿವು ಈತನಿಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿ, ಬಲಕಾಲು ಮೋಳಕಾಲಿಗೆ ಒಳಪೆಟ್ಟು ಮಾಡಿ ಮೋಟಾರ ಸೈಕಲ್ ಸಮೇತ ಓಡಿ ಹೋದ ಲಚ್ಚಪ್ಪ ತಂದೆ ಯಂಕಪ್ಪ ಪೂಜಾರಿ ಸಾ: ಬೆನಕಹಳ್ಳಿ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 95/2022 ಕಲಂ: 279, 337 ಐಪಿಸಿ ಸಂಗಡ 187 ಐ.ಎಮ್.ವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 92/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 02.06.2022 ರಂದು ಸಾಯಂಕಾಲ 5.00 ಗಂಟೆಗೆ ಗಾಜರಕೋಟ್ ಗ್ರಾಮದ ಅಂಬಿಗರ ಚೌಡಯ್ಯ ಮೂತರ್ಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ಸಾಹೇಬರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಾಯಂಕಾಲ 5.30 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 92/2022 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ 323, 324, 498(ಎ), 504, 506 ಐಪಿಸಿ: ಇಂದು ದಿನಾಂಕ:02/06/2022 ರಂದು 11:30 ಎ.ಎಂ. ಕ್ಕೆ ಶ್ರೀಮತಿ ಜಯಶ್ರೀ ಗಂಡ ಅಮರೇಶ ರಾಂಪೂರಕರ್ ವಯಸ್ಸು|| 30 ಜಾ|| ಬೇಡರ ಉ|| ಆಶಾ ಸುಪರವೈಸರ್ ಸುರಪುರ ಸಾ|| ಗದ್ದೆರಾಯನಗುಡಿ ಹತ್ತಿರ ಶಹಾಪುರ ಹಾ.ವ|| ಲಕ್ಷ್ಮೀಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನಂದರೆ, ನನಗೆ ಸುಮಾರು 10 ವರ್ಷಗಳ ಹಿಂದೆ ಶಹಾಪುರ ತಾಲೂಕಿನ ಅಮರೇಶ ತಂದೆ ತಿಮ್ಮಣ್ಣ ರಾಂಪೂರಕರ್ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮ ವೈವಾಹಿಕ ಜೀವನದಲ್ಲಿ ಆರ್ಯನ್ ವಯಸ್ಸು|| 7ವರ್ಷದ ಗಂಡು ಮಗ ಹಾಗೂ ಸಾನ್ವಿ ವಯಸ್ಸು|| 5 ವರ್ಷದ ಮಗಳು ಇರುತ್ತಾಳೆ. ಈಗ ಸುಮಾರು 2 ವರ್ಷದಿಂದ ನನ್ನ ಗಂಡ ಅಮರೇಶ ಈತನು ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದನು. ನಾನು ಮುಂದೆ ಸರಿ ಹೋಗಬಹುದು ಅಂತಾ ತಿಳಿದು ಸುಮ್ಮನಿದ್ದೆನು. ನಾನು ಆಗಾಗ ನನ್ನ ತವರು ಮನೆಯಾದ ಸುರಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮಕ್ಕೆ ಹೋದಾಗ ನನ್ನ ತಂದೆ ಸಂಗನಗೌಡ ಪೊಲಿಸ್ ಪಾಟೀಲ, ತಾಯಿ ಯಂಕಮ್ಮ ಇವರಿಗೆ ಹೇಳಿದಾಗ ಸಂಸಾರದಲ್ಲಿ ಇದು ಇದ್ದಿದೆ ಹೊಂದಿಕೊಂಡು ಹೋಗಬೇಕು ಅಂತಾ ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದರು. ಆದರೂ ಕೂಡ ನನ್ನ ಗಂಡನು ನನಗೆ ಕಿರುಕುಳ ಕೊಡುತ್ತಾ ಬಂದಿದ್ದರಿಂದ ನಾನು ಸುಮಾರು 2 ವರ್ಷಗಳಿಂದ ನನ್ನ ತವರೂರಾದ ಲಕ್ಷ್ಮೀಪುರ ಗ್ರಾಮದಲ್ಲಿ ನನ್ನ ತಂದೆ ತಾಯಿಯ ಬಳಿ ಬಂದು ಇದ್ದೇನು. ಹೀಗಿದ್ದು ದಿನಾಂಕ:30/05/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಯಂಕಮ್ಮ ಇಬ್ಬರೂ ಮನೆಯಲ್ಲಿದ್ದಾಗ ನನ್ನ ಗಂಡನಾದ ಅಮರೇಶ ತಂದೆ ತಿಮ್ಮಣ್ಣ ರಾಂಪೂರಕರ್ ಈತನು ಮನೆಯಲ್ಲಿ ಏಕಾಏಕಿ ಬಂದವನೇ, ಲೇ ಜಯಿ ನೀನು ಇಲ್ಲಿ ಬಂದು ಕುಂತರೆ ನನಗೆ ಯಾರು ಅಡಿಗೆ ಮಾಡಿ ಹಾಕುತ್ತಾರೆ ಸೂಳೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ, ನೀನು ನನಗೆ ಕಿರುಕುಳ ಕೊಟ್ಟಿದ್ದರಿಂದಲೇ ನಾನು ಇಲ್ಲಿಗೆ ಬಂದು ಇದ್ದೇನೆ ನೀನು ಸರಿಯಾಗಿ ನೋಡಿಕೊಂಡಿದ್ದರೆ ನಾನೇಕೆ ಇಲ್ಲಿಗೆ ಬರುತ್ತಿದ್ದೆ ಅಂತ ಅನ್ನುತ್ತಿದ್ದಾಗ, ನನ್ನ ಗಂಡನು ಅಲ್ಲಿಯೇ ಬಿದ್ದ ಒಂದು ಬಡಿಗೆಯಿಂದ ಹಣೆಗೆ ಹೊಡೆದು ತರಚಿದ ರಕ್ತಗಾಯ ಮಾಡಿದನು. ಕೈಯಿಂದ ಬಾಯಿಗೆ ಹೊಡೆದಿದ್ದರಿಂದ ತುಟಿಗಳಿಗೆ ರಕ್ತಗಾಯ ಮಾಡಿ, ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ಆಗ ಅಲ್ಲಿಯೇ ಇದ್ದ ನನ್ನ ತಾಯಿ ಯಂಕಮ್ಮ ಇವಳು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡಳು. ಆಗ ನನ್ನ ಗಂಡನು, ನಿಮ್ಮ ತಾಯಿ ಬಿಡಿಸಿದ್ದಕ್ಕೆ ಇವತ್ತು ಬಿಟ್ಟಿನಿ ಸೂಳಿ ಇಲ್ಲಂದರೆ ನಿನ್ನ ಜೀವ ಹೊಡೆಯದೆ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೋದನು. ನಂತರ ನಾನು ಉಪಚಾರ ಕುರಿತು ಸುರಪುರ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದುಕೊಂಡಿರುತ್ತೇನೆ. ನಂತರ ನಾನು ಮನೆಯಲ್ಲಿ ನನ್ನ ತಂದೆ ತಾಯಿಯವರ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸುಮಾರು 2 ವರ್ಷದಿಂದ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದು, ನನಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿದ ನನ್ನ ಗಂಡನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 84/2022 ಕಲಂ: 498(ಎ), 323, 324, 504, 506 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ 323,447,354, 504, 506 ಸಂ.149 ಐ ಪಿ ಸಿ : ದಿನಾಂಕ: 02.06.2022 ರಂದು 6-30 ಪಿ.ಎಮ್ ಕ್ಕೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೇನೆಂದರೆ ದಿನಾಂಕ 02.06.2022 ರಂದು ಸಾಯಂಕಾಲ 6-30 ಗಂಟೆಗೆ ಶ್ರೀಮತಿ ಹುಸೇನ ಬೀ ಗಂಡ ನಬೀಸಾಬ ವಯ|| 42 ವರ್ಷ, ಜಾ|| ಮುಸ್ಲಿಂ, ಉ|| ಕೂಲಿ ಸಾ|| ಗಡ್ಡೇಸೂಗುರ ತಾ|| ವಡಗೇರಾ ಜಿ|| ಯಾದಗಿರಿ ಇವರು ನೀಡಿದ ದೂರು ಸಾರಾಂಶವೇನೆಂದರೆದಿನಾಂಕ 05.01.2012 ರಂದು ನಾನು ನನ್ನ ತಂದೆ ಖಾಜಾಪೀರ ತಂದೆ ಹುಸೇನಸಾಬ ಇವರ ಹೆಸರಿನಲ್ಲಿರುವ ಜಮೀನು ಸವರ್ೇ ನಂಬರ 473/1 ಅ ರಲ್ಲಿ 150* 55 ಫೀಟ್ ಉದ್ದ ಅಗಲದ ಲಿಂಗೇರಿ ಕಡೆಗೆ ಹೋಗುವ ಡಾಂಬರ ರಸ್ತೆಗೆ ಹೊಂದಿ ಜಾಗವನ್ನು 1,20,000/- ರೂ. ಗಳಿಗೆ ಖರೀದಿ ಮಾಡಿ ಸ್ಟಾಂಪ ಮೇಲೆ ಬರೆಯಿಸಿಕೊಂಡಿರುತ್ತೇನೆ. ಸದರಿ ಖುಲ್ಲಾ ಪ್ಲಾಟ್ ಜಾಗವನ್ನು ಈಗ ನನ್ನ ತಮ್ಮ ಕಾಸೀಂ ಇವನು ಬಳಿಚಕ್ರ ಗ್ರಾಮದ ನರಸಪ್ಪ ತಂದೆ ಹಣಮಂತ ಸಂಜೀವಿನಿ ಇವನಿಗೆ ಮಾರಾಟ ಮಾಡಿರುತ್ತಾನೆ. ನರಸಪ್ಪನು ನಮ್ಮ ಖುಲ್ಲಾ ಪ್ಲಾಟ ಜಾಗದಲ್ಲಿ ಮನೆ ಕಟ್ಟಲು ಕಲ್ಲು ಹಾಕಿ ಕಂಪೌಂಡ ಹಾಕಿರುತ್ತಾನೆ. ನಾನು ದಿನಾಂಕ 21.05.2022 ರಂದು ಬೆಳಿಗ್ಗೆ 11.00 ಗಂಟೆಗೆ ನನ್ನ ಜಾಗೆಗೆ ಹೋದಾಗ ಬಳಿಚಕ್ರ ಗ್ರಾಮದ ನರಸಪ್ಪ ತಂದೆ ಹಣಮಂತ ಸಂಜೀವಿನಿ ಮತ್ತು ಆತನ ಅಳಿಯನಾದ ಸಾಬಪ್ಪ ತಂದೆ ಮಲ್ಲಯ್ಯ ಯಾಗಾಪೂರ, ಕಾಸೀಂ ತಂದೆ ಖಾಜಾಪೀರ ಮತ್ತು ಅಲ್ಲಮ್ಮ ಗಂಡ ಕಾಸೀಂ, ಅಲ್ಲಮ್ಮನವರ ತಾಯಿಯಾದ ರೋಷನ ಬೀ ಈ ಎಲ್ಲರೂ ಕೂಡಿ ಹಲ್ಲೆ ಮಾಡಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ನನ್ನ ಹತ್ತಿರ ಚಿತ್ರೀಕರಣವು ಇದೆ ಈ 5 ಜನ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ನರಸಪ್ಪ ಹಾಗೂ ಅವನ ಸಹಚರರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪ್ರಾಥರ್ಿಸಿಕೊಳ್ಳುತ್ತೇನೆ ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 64/2022 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ: 143, 147, 323, 498ಎ, 504, 506 ಸಂಗಡ 149 ಐಪಿಸಿ ಹಾಗು ಕಲಂ 3 & 4 ಡಿಪಿ ಆಕ್ಟ್ : ಇಂದು ದಿನಾಂಕ 02.06.2022 ರಂದು 7.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಜಯಲಲಿತಾ ಗಂಡ ಕಣರ್ಾ ಶ್ರೀರವಿತೇಜ ವ|| 29ವರ್ಷ ಜಾ|| ಕಾಪು ಉ|| ಮನೆಗೆಲಸ ಸಾ|| ನಂ.8 ನಾಗಾಜರ್ುನ ಕಾಲೋನಿ, ಬಿ.ಎನ್ ರೆಡ್ಡಿ ನಗರ ಹಾಸ್ತಿನಾಪೂರ ತಾ|| ಜಿ|| ಹೈದ್ರಾಬಾದ(ತೆಲಂಗಾಣ) ಹಾ|| ವ|| ಸಾಯಿನಗರ ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನನ್ನ ತವರುಮನೆಯು ಸಾಯಿನಗರ ಕೆಂಭಾವಿ ಪಟ್ಟಣವಾಗಿದ್ದು ನನಗೆ ನಮ್ಮ ತಂದೆ ತಾಯಿಯರು ಮೂರು ವರೆ ವರ್ಷಗಳ ಹಿಂದೆ ಕೆಂಭಾವಿಯ ನಾಗೇಶ್ವರರಾವ ಇವರ ಸಂಬಂಧಿಯಾದ ಹೈದ್ರಾಬಾದ ನಿವಾಸಿಯಾದ ಕಣರ್ಾ ಶ್ರೀರವಿತೇಜ ತಂದೆ ಕಣರ್ಾ ವೆಂಕಟೇಶ್ವರರಾವ ಎಂಬುವವರಿಗೆ ಕೊಟ್ಟು ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರ ಸಮಕ್ಷಮ ಮದುವೆ ಮಾಡಿದ್ದು, ನನ್ನ ಮದುವೆಯಲ್ಲಿ ನನ್ನ ಗಂಡನಿಗೆ ವರದಕ್ಷಿಣೆಯಾಗಿ 20 ತೊಲಿ ಬಂಗಾರ, 10 ಲಕ್ಷ ರೂಪಾಯಿ ಮತ್ತು 25 ತೊಲಿ ಬೆಳ್ಳಿ ಹಾಗೂ ಮನೆ ಬಳಕೆಯ ಸಾಮಾನುಗಳು ನೀಡಿರುತ್ತಾರೆ. ನನ್ನ ಗಂಡನಾದ ಕಣರ್ಾ ಶ್ರೀರವಿತೇಜ ತಂದೆ ಕಣರ್ಾ ವೆಂಕಟೇಶ್ವರರಾವ ಈತನು ಮದುವೆಯಾದ ಬಳಿಕ ಸುಮಾರು 6 ತಿಂಗಳವರೆಗೆ ನನ್ನೊಂದಿಗೆ ಚೆನ್ನಾಗಿ ಸಂಸಾರ ಸಾಗಿಸಿದ್ದು ನಂತರ ದಿನ ಕಳೆದಂತೆ ನನ್ನ ಗಂಡನು ತನ್ನ ತಾಯಿಯಾದ ಕಣರ್ಾ ಜಯಲಕ್ಷ್ಮೀ ಗಂಡ ಕಣರ್ಾ ವೆಂಕಟೇಶ್ವರರಾವ, ಮೈದುನನಾದ ಕಣರ್ಾ ಸಾಯಿಗಣೇಶ ಕಾತರ್ಿಕ ತಂದೆ ಕಣರ್ಾ ವೆಂಕಟೇಶ್ವರರಾವ ಇವರ ಮಾತು ಕೇಳಿ ನೀನು ಸರಿಯಾಗಿಲ್ಲ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ, ನಮ್ಮ ಮನಗೆ ನೀನು ಯೋಗ್ಯಳಲ್ಲ ಮತ್ತು ನೀನು ನಿನ್ನ ತವರು ಮನೆಯಿಂದ ಇನ್ನೂ 5 ಲಕ್ಷ ರೂಪಾಯಿ ಮತ್ತು 10 ತೊಲಿ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳಿದರೂ ತರುತ್ತಿಲ್ಲ ಅಂತಾ ನನಗೆ ಜಗಳ ಮಾಡುತ್ತಾ ಕೈಯಿಂದ ಹೊಡೆಯುತ್ತಾ ಪ್ರತಿ ದಿನ ನನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದನು. ನಾನು ಅದನ್ನು ಸಹಿಸಿಕೊಂಡು 2 ವರ್ಷದ ವರೆಗೆ ಸಂಸಾರ ಸಾಗಿಸಿದೆನು. ಆದರೆ ನಮಗೆ ಮಕ್ಕಳೂ ಕೂಡಾ ಆಗಲಿಲ್ಲ. ನನ್ನ ಗಂಡ ಹಾಗೂ ಅವನ ಸಂಬಂಧಿಕರು ಮತ್ತೆ ನನಗೆ ದಿನೇ ದಿನೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ನನಗೆ ಅವರ ಕಿರುಕುಳ ತಾಳಲಾರದೇ ನಮ್ಮ ತಂದೆಯಾದ ಸತ್ಯನಾರಾಯಣ ತಂದೆ ಮಂದರಾಜು ಗೊತ್ತಪಲ್ಲಿ ಮತ್ತು ತಾಯಿಯಾದ ಮೀನಾಕ್ಷಿ ಗಂಡ ಸತ್ಯನಾರಾಯಣ ಗೊತ್ತಪಲ್ಲಿ ಇವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರಿಂದ ನನಗೆ ನಮ್ಮ ತಂದೆ ತಾಯಿಯರು ಒಂದೂವರೆ ವರ್ಷದ ಹಿಂದೆ ಗಂಡನ ಮನೆಯಿಂದ ತವರುಮನೆಗೆ ಕರೆದುಕೊಂಡು ಬಂದರು. ನಾನು ನನ್ನ ತವರುಮನೆಗೆ ಬಂದು ತಂದೆ ತಾಯಿಯರೊಂದಿಗೆ ಇದ್ದಾಗ ಸುಮಾರು 6 ತಿಂಗಳ ಹಿಂದೆ ಕೆಂಭಾವಿ ಪಟ್ಟಣದ ನಾಗೇಶ್ವರರಾವ ಇವರ ಮನೆಯಲ್ಲಿ ನನ್ನ ಗಂಡನ ಕಡೆಯವರಾದ ಕೃಷ್ಣಾ, ಸೂರ್ಯನಾರಾಯಣ, ಶ್ರೀನಿವಾಸ, ದೊಡ್ಡಬಾಬು, ನಾಗೇಶ್ವರರಾವ ಹಾಗೂ ನನ್ನ ಗಂಡ, ನಮ್ಮ ಅತ್ತೆಯಾದ ಜಯಲಕ್ಷ್ಮೀ ಇವರೆಲ್ಲರೂ ಬಂದು ಪಂಚಾಯತಿ ಮಾಡಿ ಇನ್ನೂ ಒಂದು ತಿಂಗಳು ಬಿಟ್ಟು ಕರೆದುಕೊಂಡು ಹೋಗಿ ಚೆನ್ನಾಗಿ ಇಟ್ಟುಕೊಳ್ಳುತ್ತೇವೆ ಅಂತಾ ಹೇಳಿ ಹೋದರು. ನಂತರ 2 ತಿಂಗಳಾದರೂ ಅವರು ಕರೆದುಕೊಂಡು ಹೋಗಲು ಬರಲಿಲ್ಲ. ಹೀಗಿದ್ದು ದಿನಾಂಕ 15/05/2022 ರಂದು 9.30 ಪಿಎಂ ಸುಮಾರಿಗೆ ಸಾಯಿನಗರದ ನಮ್ಮ ತಂದೆಯವರ ಮನೆಯಲ್ಲಿ ನಾನು, ನನ್ನ ತಂದೆಯಾದ ಸತ್ಯನಾರಾಯಣ, ತಾಯಿಯಾದ ಮೀನಾಕ್ಷಿ ನಾವು ಮೂರೂ ಜನರು ಮಾತನಾಡುತ್ತಾ ಕುಳಿತಿದ್ದಾಗ ನನ್ನ ಗಂಡನಾದ 1)ಶ್ರೀರವಿತೇಜ ತಂದೆ ಕಣರ್ಾ ವೆಂಕಟೇಶ್ವರರಾವ, ಅತ್ತೆಯಾದ 2) ಕಣರ್ಾ ಜಯಲಕ್ಷ್ಮೀ ಗಂಡ ಕಣರ್ಾ ವೆಂಕಟೇಶ್ವರರಾವ, ಮೈದುನನಾದ 3) ಕಣರ್ಾ ಸಾಯಿಗಣೇಶ ಕಾತರ್ಿಕ ತಂದೆ ಕಣರ್ಾ ವೆಂಕಟೇಶ್ವರರಾವ ಹಾಗೂ ನನ್ನ ಗಂಡನ ಸಂಬಂಧಿಕರಾದ 4) ನಾಗಿರೆಡ್ಡಿ ಕೃಷ್ಣಾ, 5)ನರಸಿಂಹರಾವ್ ಚಾಲಿಂಚಮರಿ ಕ್ಯಾಂಪ್, 6)ಸತ್ಯವತಿ ಗಂಡ ನರಸಿಂಹರಾವ್ ಮತ್ತು ಕೆಂಭಾವಿಯ ನಿವಾಸಿಯಾದ 7)ನಾಗೇಶ್ವರರಾವ (ಚಿಕನ್ ರೆಡ್ಡಿ) ಇವರೆಲ್ಲರೂ ಕೂಡಿ ನಾವು ಇದ್ದಲ್ಲಿಗೆ ಬಂದು ನನಗೆ ಏನಲೇ ಸೂಳಿ ನೀನು ಬಂಗಾರ, ಹಣ ತೆಗೆದುಕೊಂಡು ಬಂದರೆ ಮಾತ್ರ ಕರೆದುಕೊಂಡು ಹೋಗುತ್ತೇವೆ ಮತ್ತು ನೀನು ಅವರಿವರ ಜೊತೆ ಮಾತನಾಡುತ್ತಾ ನಮಗೆ ಮಯರ್ಾದೆ ಕಳಿಯುತ್ತಿದಿ ಅಂತಾ ಅಂದಾಗ ನಾನು ಯಾರ ಮುಂದೆ ಏನು ಹೇಳಿದ್ದೇನೆ ಅಂತಾ ಕೇಳಿದಾಗ ಅವರೆಲ್ಲರೂ ಕೂಡಿ ನಿನಗೆ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಮ್ಮ ತಂದೆಯವರು ಯಾರಾದರೂ ಬಂದು ಬಿಡಿಸಿಕೊಳ್ಳಿರಿ ನಮ್ಮ ಮಗಳಿಗೆ ಹೊಡೆಯುತ್ತಿದ್ದಾರೆ ಅಂದಾಗ ನಮ್ಮ ಮನೆಯ ಪಕ್ಕದ ಮನೆಯವರಾದ ಸಾಂಬಶಿವರಾವ್, ಈರಣ್ಣ ದೇಸಾಯಿ, ಎನ್. ಶ್ರೀನಿವಾಸ ಇವರು ಮತ್ತು ನಮ್ಮ ತಂದೆ ತಾಯಿ ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ಇದೊಂದು ಸಲ ಬಿಟ್ಟೀವಿ ಇನ್ನೊಮ್ಮೆ ಕರೆದುಕೊಂಡು ಹೋಗು ಅಂತಾ ಹೇಳಿದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಾನು ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ನನಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು, ದೈಹಿಕ, ಮಾನಸಿಕ ಹಿಂಸೆ ನೀಡಿ, ನಮ್ಮ ತಂದೆ ತಾಯಿಯವರು ನನ್ನ ಮದುವೆಯಲ್ಲಿ ಅವರು ಕೇಳಿದಷ್ಟು ಹಣ, ಬಂಗಾರ ಕೊಟ್ಟರೂ ಇನ್ನೂ ಹೆಚ್ಚಿಗೆ ಹಣ, ಬಂಗಾರ ತೆಗೆದುಕೊಂಡು ಬಾ ಅಂತಾ ವರದಕ್ಷಿಣೆ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡ ಹಾಗೂ ಗಂಡನ ಸಂಬಂಧಿಕರ ಮೇಲೆ ಕ್ರಮ ಜರುಗಿಸಬೇಕು ಅಂತಾ ಇದ್ದ ಅಜರ್ಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ 94/2022 ಕಲಂ: 143, 147, 323, 498ಎ, 504, 506 ಸಂಗಡ 149 ಐಪಿಸಿ ಮತ್ತು ಕಲಂ 3 & 4 ಡಿಪಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ ಮಹಿಳೆ ಕಾಣೆ: ಇಂದು ದಿನಾಂಕ 02/06/2022 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀ ಕಾಶಣ್ಣ ನಾಯಕ ತಂದೆ ಕಿಷ್ಟಪ್ಪ ದೋರೆ ನಾಯಕ ವ|| 25 ಜಾ|| ಬೇಡೆರ ಉ|| ಕೂಲಿ ಸಾ|| ಎಂ, ಕೊಳ್ಳುರ ತಾ|| ಶಹಾಪೂರ. -9535159862ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಮಹಾದೇವಮ್ಮ ಗಂಡ ಕಿಷ್ಟಪ್ಪ ದೋರೆ, ನನ್ನ ಅಣ್ಣನಾದ ನಾರಾಯಣ ತಂದೆ ಕಿಷ್ಟಪ್ಪ ದೋರೆ, ನನ್ನ ತಂಗಿಯಾದ ಛಾಯಾ ತಂದೆ ಕಿಷ್ಟಪ್ಪ ದೋರೆ, ಎಲ್ಲರು ವಾಸವಾಗಿದ್ದು ಇರುತ್ತದೆ ನನ್ನ ತಂಗಿ ಛಾಯಾ ಇವಳು ಪಿ.ಯು.ಸಿ. ಮುಗಿದ ನಂತರ ಮನೆಯಲ್ಲಿ ಇದ್ದಳು. ನಮ್ಮ ಸಮಾಜದ ಮಲ್ಲಿಕಾಜರ್ುನ ತಂದೆ ರಾಮಪ್ಪ ಗಟ್ಟಿ ಸಾ|| ಹೋಸಪೇಟ್ ಈತನು ನಮ್ಮೂರಿಗೆ ತನ್ನ ಅಜ್ಜಿಮನೆಗೆ ಬಂದಾಗ ನನ್ನ ತಂಗಿ ಛಾಯಾಳು ಮಲ್ಲಿಕಾಜರ್ುನ ಈತನೊಂದಿಗೆ ಸಲುಗೆಯಿಂದ ಮಾತನಾಡುವುದು ಮಾಡುತ್ತಿದ್ದನು ನಾವು ಛಾಯಾಳಿಗೆ ಈರೀತಿ ಬೆರೆಯವರೊಂದಿಗೆ ಸಲುಗೆಯಿಂದ ಮಾತನಾಡುವುದು ಸರಿಯಲ್ಲ ಅಂತ ಬುದಿಮಾತು ಹೆಳಿದ್ದೆವು. ಆದರು ನನ್ನ ತಂಗಿ ಛಾಯಾಳು ಮಲಿಕಾಜರ್ುನ ಈತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದಳು.
ದಿನಾಂಕ 31/05/2022 ರಂದು ರಾತ್ರಿ ನಾವೆಲ್ಲರು ನಮ್ಮ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡೆವು. ನಂತರ ದಿನಾಂಕ 1/06/2022 ರಂದು ಬೆಳಗ್ಗಿನಜಾವ 4-30 ಗಂಟೆಯ ಸುಮಾರಿಗೆ ನನ್ನ ತಂಗಿಯು ನನ್ನ ತಾಯಿಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋರಗೆ ಹೋದಳು ನಂತರ ಮನೆಗೆ ಬರಲಿಲ್ಲ. ಆಗ ಊರಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ನಮ್ಮ ಮನೆಯಿಂದ ನನ್ನ ತಂಗಿ ಕಾಣೆಯಾಗಿದ್ದು ಇರುತ್ತದೆ.
ಕಾರಣ ನನ್ ತಂಗಿಯಾದ ಛಾಯಾ ತಂದೆ ಕಿಷ್ಟಪ್ಪ ದೋರೆ ನಾಯಕ ವ|| 22 ಜಾ|| ಬೇಡೆರ ಉ|| ಮನೆಕೆಲಸ ಸಾ|| ಎಂ, ಕೊಳ್ಳುರ ತಾ|| ಶಹಾಪೂರ. ಇವಳು ಕಾಣೆಯಾಗಿದ್ದು ನಮ್ಮ ಸಂಬಂದಿಕರ ಊರುಗಳಿಗೆ ಹೋಗಿ ವಿಚಾರಿಸಿ ಉಡುಕಾಡಿ ಮತ್ತು ನಮ್ಮ ಹಿರಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ.
ಕಾಣೆಯಾದ ನನ್ನ ತಂಗಿಯ ಚಹರೆಪಟ್ಟಿ ಈ ಕೇಳಗಿನಂತೆ ಇರುತ್ತದೆ,
ಹೆಸರು :- ಛಾಯಾ
ವಯಸ್ಸು :- 22 ವರ್ಷಗಳು
ಬಣ್ಣ :- ಸಾದಾರಣ ದುಂಡುಮುಖ ಗೋದಿ ಬಣ್ಣ
ಭಾಷೆ :- ಕನ್ನಡ
ಎತ್ತರ :- ಅಂದಾಜು 5 ಫೀಟ್ ಇದ್ದಾಳೆ
ದರಿಸಿದ ಬಟ್ಟೆ :- ಬೀಳಿಬಣ್ಣ ಟಾಪ್ ಕರಿಬಣ್ಣದ ಪ್ಯಾಂಟ್ (ಚೂಡಿದಾರ)
ಅಂತ ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 96/2022 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ 379 ಐಪಿಸಿ: ಇಂದು ದಿನಾಂಕ: 02.06.2022 ರಂದು ಸಂಜೆ 07:30 ಪಿಎಮ್ಕ್ಕೆ ಪಿಯರ್ಾದಿ ಶ್ರೀ ಮೌನೇಶ ತಂದೆ ಮಲ್ಲಣ್ಣ ನಾಟೇಕಾರ್ ವಯ|| 35 ವರ್ಷ ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಗುತ್ತಿಪೇಠ ಶಹಾಪೂರ ಜಿ|| ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ಮಾನ್ಯರವರಲ್ಲಿ ನಾನು ಮೌನೇಶ ತಂದೆ ಮಲ್ಲಣ್ಣ ನಾಟೇಕಾರ್ ವಯ|| 35 ವರ್ಷ ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಗುತ್ತಿಪೇಠ ಶಹಾಪೂರ ಜಿ|| ಯಾದಗಿರ. ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಾನು ಸುಮಾರು 01 ವರ್ಷದ ಹಿಂದೆ ಶಹಾಪೂರ ನಗರದ ನಮ್ಮ ದೂರದ ಸಂಭಂದಿಕರಾದ ಶ್ರೀ ವೇಂಕಟೇಶ ತಂದೆ ಮಾನಯ್ಯ ಬೋನೇರ್ ಸಾ||ಗಂಗಾನಗರ ಶಹಾಪೂರ ಈತನ ಪಲ್ಸರ್ 150 ಸಿಸಿ ನೇದ್ದನ್ನು 40,000/- ರೂ.ಕೊಟ್ಟು ಖರೀದಿ ಮಾಡಿಕೊಂಡಿದ್ದು ಈ ಮೋಟಾರು ಸೈಕಲನ್ನು ನಾನೇ ಚಲಾಯಿಸಿಕೊಂಡಿರುತ್ತೆನೆ.
ಹೀಗಿದ್ದು ದಿನಾಂಕ: 25.05.2022 ರಂದು ಬೆಳಗ್ಗೆ 10.00 ಗಂಟೆಗೆ ನನ್ನ ಖಾಸಗಿ ಕೆಲಸದ ನಿಮಿತ್ಯ ನಾನು ಮತ್ತು ನಾಗರಾಜ ತಂದೆ ಗಜಕೋಶ ಸಾ||ವಿಧ್ಯಾನಗರ ಶಹಾಪೂರ ಇಬ್ಬರೂ ಕೂಡಿ ನನ್ನ ಮೋಟಾರು ಸೈಕಲ್ನ್ನು ಶಹಾಪೂರ ನಗರದ ಹಳೆ ಬಸ್ ನಿಲ್ದಾಣ ಮುಂದೆ ನಿಲ್ಲಿಸಿ ನಾವಿಬ್ಬರೂ ಕೂಡಿ ಬಸ್ಸಿಗೆ ಕಲಬುರಗಿಗೆ ಹೋಗಿ ನನ್ನ ಕೆಲಸ ಮುಗಿದ ನಂತರ ಸಾಯಂಕಾಲ 06:00 ಪಿಎಮ್ಕ್ಕೆ ಮರಳಿ ಶಹಾಪೂರಕ್ಕೆ ಬಂದು ಹಳೆ ಬಸ್ ನಿಲ್ದಾಣದ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ನನ್ನ ಮೋಟಾರು ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಾನು ಘಾಬರಿಯಾಗಿ ನಾನು ಮತ್ತು ನಾಗರಾಜ ಇಬ್ಬರೂ ಕೂಡಿ ಬಸ್ ನಿಲ್ದಾಣದ ಸುತ್ತ-ಮುತ್ತ ಹುಡುಕಾಡಲಾಗಿ ನನ್ನ ಮೋಟಾರು ಸೈಕಲ್ ಸಿಗಲಿಲ್ಲ. ನಾನು ಮೋಟಾರು ಸೈಕಲ್ನ್ನು ವೆಂಕಟೇಶ ಬೋನೇರ್ ಈತನಿಂದ ಖರೀದಿ ಮಾಡಿದ ನಂತರ ನನ್ನ ಹೆಸರಿಗೆ ಮೋಟಾರು ಸೈಕಲ್ ನೋಂದಣಿಯನ್ನು ಮಾಡಿಕೊಂಡಿರುವುದಿಲ್ಲ. ಇನ್ನೂ ಮೋಟಾರು ಸೈಕಲ್ ವೆಂಕಟೇಶ ಬೋನೇರ್ ಈತನ ಹೆಸರಿನಲ್ಲೆ ಇರುತ್ತದೆ. ನಾನು ಮತ್ತು ವೆಂಕಟೇಶ ಬೋನೇರ್ ಇಬ್ಬರೂ ಸಂಬಂದಿಕರಿದ್ದರಿಂದ ಆಮೇಲೆ ನೊಂದಣಿ ಮಾಡಿಸಿಕೊಂಡರಾಯ್ತು ಅಂತಾ ಹಾಗೇಯೇ ಬಿಟ್ಟಿರುತ್ತೆನೆ. ನನ್ನ ಪಲ್ಸರ್ ಮೋಟಾರು ಸೈಕಲ್ ಚಸ್ಸಿ ನಂ. ಒಆ2ಆಊಆಊಚಚಖಿಅಉ37764 ಹಾಗೂ ಇಂಜಿನ್ ನಂ. ಆಊಉಗಿಖಿಉ25487 ಅಂತಾ ಇರುತ್ತದೆ. ಪಲ್ಸರ್ ಮೋಟಾರು ಸೈಕಲ್ನ ಅ.ಕಿ 40,000/- ರೂ. ಆಗುತ್ತದೆ. ದಿನಾಂಕ: 25.05.2022 ರಿಂದ ಇಲ್ಲಿಯವರೆಗೆ ಶಹಾಪೂರ ನಗರದಲ್ಲಿ ಮತ್ತು ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಮೋಟಾರು ಸೈಕಲನ್ನು ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಆದ್ದರಿಂದ ಇಂದು ದಿನಾಂಕ:02.06.2022 ರಂದು ರಾತ್ರಿ 07:30 ಪಿಎಮ್ಕ್ಕೆ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.
ದಿನಾಂಕ: 25.05.2022 ರಂದು ಬೆಳಗ್ಗೆ 10.00 ಗಂಟೆಗೆ ನನ್ನ ಖಾಸಗಿ ಕೆಲಸದ ನಿಮಿತ್ಯ ನಾನು ಮತ್ತು ನಾಗರಾಜ ತಂದೆ ಗಜಕೋಶ ಸಾ||ವಿಧ್ಯಾನಗರ ಶಹಾಪೂರ ಇಬ್ಬರೂ ಕೂಡಿ ನನ್ನ ಮೋಟಾರು ಸೈಕಲ್ನ್ನು ಶಹಾಪೂರ ನಗರದ ಹಳೆ ಬಸ್ ನಿಲ್ದಾಣ ಮುಂದೆ ನಿಲ್ಲಿಸಿ ನಾವಿಬ್ಬರೂ ಕೂಡಿ ಬಸ್ಸಿಗೆ ಕಲಬುರಗಿಗೆ ಹೋಗಿ ನನ್ನ ಕೆಲಸ ಮುಗಿದ ನಂತರ ಸಾಯಂಕಾಲ 06:00 ಪಿಎಮ್ಕ್ಕೆ ಮರಳಿ ಶಹಾಪೂರಕ್ಕೆ ಬಂದು ಹಳೆ ಬಸ್ ನಿಲ್ದಾಣದಲ್ಲಿ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ನನ್ನ ಮೋಟಾರು ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕಳ್ಳತನ ಮಾಡಿಕೊಂಡು ಹೋದ ವಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತ ಸಲ್ಲಿಸಿದ ಅಜರ್ಿ ಸಾರಾಂದ ಮೇಲಿಂದ ಠಾಣಾ ಗುನ್ನೆ ನಂ: 97/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.