ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03-07-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 85/2021 ಕಲಂ: 504, 341, 323, 506 ಸಂ 34 ಐಪಿಸಿ : ದಿನಾಂಕ:02/07/2021 ರಂದು 5:30 ಪಿಎಮ್ಕ್ಕೆ ಶ್ರೀ ಶರಣಗೌಡ ತಂದೆ ಸಿದ್ದಲಿಂಗಪ್ಪಗೌಡ ಹಿರೇಗೌಡ, ವ:36, ಜಾತಿ: ಲಿಂಗಾಯತರು, ಉ:ಒಕ್ಕಲುತನ ಸಾ:ಗುರುಸಣಗಿ ತಾ:ವಡಗೇರಾ ಇದ್ದು, ಮೇಲ್ಕಂಡ ವಿಳಾಸದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಗುರುಸಣಗಿ ಸೀಮಾಂತರ ಸವರ್ೆ ನಂಬರ 89 ರಲ್ಲಿ 1 ಎಕರೆ 5 ಗುಂಟೆ ಜಮೀನು ಗುರುಸಣಗಿ ಗ್ರಾಮಕ್ಕೆ ಹೊಂದಿಕೊಂಡಿರುತ್ತದೆ. ನಮ್ಮ ಹೊಲದ ಮೇಲೆ ಮಾನ್ಯ ನ್ಯಾಯಲಯ ಶಹಾಪೂರದಲ್ಲಿ ಸಿವಿಲ್ ಕೇಸ ದಾಖಲಾಗಿದ್ದು ಅದರ ಆದೇಶವು ನಮ್ಮ ಪರವಾಗಿದ್ದರಿಂದ ನಮ್ಮ ಜಾಗದಲ್ಲಿ ದಿನಾಂಕ: 29/06/2021 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕಟ್ಟಡ ಕಟ್ಟಲು ಬುನಾದಿ ಕೆಲಸ ಮಾಡುತ್ತಿರುವಾಗ ನಮ್ಮೂರಿನವರಾದ 1) ಚನ್ನಾರೆಡ್ಡಿ ತಂದೆ ಬಸವರಾಜಪ್ಪ ಗೌಡ, 2) ಇಮಾಮಸಾಬ ತಂದೆ ನಬಿಸಾಬ, 3)ಇಪರ್ಾನ ತಂದೆ ಇಮಾಮಸಾಬ್ಪ, ಎಲ್ಲರೂ ಸಾ:ಗುರುಸಣಗಿ ಇವರೆಲ್ಲರೂ ಸೇರಿಕೊಂಡು ನಮ್ಮ ಜಾಗದಲ್ಲಿ ಮನೆ ಕಟ್ಟಲು ಬುನಾದಿ ಕೆಲಸ ಮಾಡುತ್ತಿರುವುದನ್ನು ತಡೆದು ನಿಲ್ಲಿಸಿ ಲ್ಹೇ ಭೊಸುಡಿ ಮಗನೆ ನಮ್ಮ ಜಾಗದಲ್ಲಿ ಬುನಾದಿ ಹಾಕಿ ಮನೆ ಕಟ್ಟುತ್ತೀರಾ ಅಂತಾ ಜಗಳ ತೆಗೆದು ನಿನ್ನ ಸೊಕ್ಕು ಜಾಸ್ತಿಯಾಗಿದೆ ಅದನ್ನ ಮುರಿಯುತ್ತೇವೆ ಸೂಳೆ ಮಗನೆ ಎಂದು ಅವಾಚ್ಯ ಬೈದು ನನಗೆ ಚನ್ನಾರೆಡ್ಡಿ ತಂದೆ ಬಸವರಾಜಪ್ಪಗೌಡ ಮತ್ತು ಇಪರ್ಾನ ತಂದೆ ಇಮಾಮಸಾಬ ಬಳಗಾರ ಇಬ್ಬರೂ ಹಿಡಿದುಕೊಂಡಾಗ ಇಮಾಮಸಾಬ ತಂದೆ ನಬಿಸಾಬ ಈತನು ಕೈಯಿಂದ ಜೋರಾಗಿ ಕಪಾಳಕ್ಕೆ ಹೊಡೆದು ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿ ನೆಲಕ್ಕೆ ಜಾಡಿಸಿ ನೂಕಿದಾಗ ನಾನು ನೆಲದ ಮೇಲೆ ಬಿದ್ದಾಗ ಚನ್ನಾರೆಡ್ಡಿ ತಂದೆ ಬಸವರಾಜಪ್ಪ ಗೌಡ ಮತ್ತು ಇಪರ್ಾನ ತಂದೆ ಇಮಾಮಸಾಬ್ಪ್ಪ ಇಬ್ಬರೂ ಸೇರಿ ಕಾಲಿನಿಂದ ತುಳಿಯುತ್ತಿರುವುದನ್ನು ನೋಡಿದ ನಮ್ಮೂರ ಮಲ್ಲನಗೌಡ ತಂದೆ ಅಮೀನರೆಡ್ಡಿ ಬಸರೆಡ್ಡಿ ಮತ್ತು ಬಸವರಾಜಪ್ಪಗೌಡ ತಂದೆ ತಿಪ್ಪಣ್ಣ ಬೋರಡ್ಡಿ ಇಬ್ಬರೂ ಬಂದು ನಮಗೆ ಹೊಡೆಯುವುದು ಬಿಡಿಸಿಕೊಂಡರು. ಕಾರಣ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಜಾಗದಲ್ಲಿ ಮನೆ ಕಟ್ಟಲು ಬುನಾದಿ ಹಾಕುವ ಕೆಲಸ ತಡೆದು ನಿಲ್ಲಿಸಿ ನನ್ನೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 85/2021 ಕಲಂ: 504, 341, 323, 506 ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಕೊಂಡೇನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 151/2021 ಕಲಂ 420 ಐ.ಪಿ.ಸಿ. : ಇಂದು ದಿನಾಂಕ: 02-07-2021 ರಂದು 4:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಅಜೇಂದ್ರಸ್ವಾಮಿ ಏಕದಂಡಿಗಿಮಠ ವಯ: 54 ವರ್ಷ ಜಾ: ವಿಶ್ವಕರ್ಮ ಉ: ಮನೆಗೆಲಸ ಸಾ: ಗಾಂಧಿಚೌಕ ಶಹಾಪುರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ, ನಮ್ಮದು ಶಹಾಪುರದ ಗಾಂಧಿಚೌಕ ಏರಿಯಾದಲ್ಲಿ ಮಠ ಇದ್ದು ಮಠದಲ್ಲಿ ನಮ್ಮ ಮೈದುನರಾದ ಶ್ರೀ ಕಾಳಹಸ್ತೇಂದ್ರ ಸ್ವಾಮಿಜಿ ರವರು ಮಠಾಧೀಶರಿರುತ್ತಾರೆ ಸದರಿ ಮಠವು ಸಂಸಾರಿಕ ಮಠವಿದ್ದು ನಮ್ಮ ಪರಿವಾರ ಮಠದಲ್ಲೇ ವಾಸವಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ: 01-07-2021 ರಂದು ಮುಂಜಾನೆ ನಮ್ಮ ಪತಿಯಾದ ಅಜೇಂದ್ರಸ್ವಾಮೀಜಿಯವರು, ಮಠಾದೀಶರು ಮತ್ತು ಪರಿವಾರದವರು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮಠದಲ್ಲಿ ನಾನು ಮತ್ತು ನಮ್ಮ ಮಠದ ಅರ್ಚಕರಾದ ಮೌನೇಶ ತಂದೆ ದೇವಿಂದ್ರಪ್ಪ ಬಡಿಗೇರ ಇಬ್ಬರು ಇದ್ದೆವು. ಮನೆಯಲ್ಲಿ ಮುಂಜಾನೆ 9:30 ಗಂಟೆ ಸುಮಾರಿಗೆ ನಾನು ಮತ್ತು ಅರ್ಚಕರು ಉಪಹಾರ ಸೇವಿಸುತ್ತಿದ್ದೆವು ಆ ಸಮಯಕ್ಕೆ ಮುಖ್ಯದ್ವಾರದ ಮೂಲಕ ಯಾರೋ ಒಬ್ಬ ವ್ಯಕ್ತಿ ಸರ ಸರನೆ ಮಠದ ಮಂದಿರದ ಒಳಗೆ ಹೋದನು. ನಾನು ಅರ್ಚಕ ಮೌನೇಶನಿಗೆ ಯಾರೋ ಬಂದಿದ್ದಾರೆ ಪ್ರಸಾದ ಕೊಡು ಎಂದು ಹೇಳಿದೆನು . ನನ್ನ ಉಪಹಾರ ಮುಗಿದಿದ್ದರಿಂದ ನಾನು ಮಂದಿರದ ಕಡೆಗೆ ಹೋದೆನು. ಒಳಗೆ ಬಂದ ವ್ಯಕ್ತಿ ತುಂಬಾ ಶಿಕ್ಷಿತ ವ್ಯಕಿಯಂತೆ ಕಾಣುತ್ತಿದ್ದು ಅವನು ಮಠಕ್ಕೆ ಪರಿಚಯದವನಿರಬೇಕು ಎಂಬಂತೆ ನಾನು ಭಾವಿಸಿದೆನು. ಆ ವ್ಯಕ್ತಿ ಮಂದಿರದ ಒಳಗಡೆ ಹೋಗಿ ಅಲ್ಲಿ ಪ್ರಣಾಮ ಮಾಡಿ ಮರಳಿ ಹೊರಗೆ ಬಂದನು. ಆತನ ಕೈಯಲ್ಲಿ 100 ರೂ. ಮೌಲ್ಯದ ಐದು ನೋಟುಗಳು ಇದ್ದವು. ಆತನು ಮೌನೇಶನಿಗೆ ಮಾತನಾಡಿಸಿ ಅಣ್ಣ ಹೊರಗಡೆ ಹೋಗಿ ಎರಡು ತೆಂಗಿನ ಕಾಯಿ ತೆಗೆದುಕೊಂಡು ಬಾ ಎಂದು ಹೇಳಿ 100/- ರೂ. ಕೊಟ್ಟನು ಅದರಂತೆ ಮೌನೇಶನು ಹೊರಗಡೆ ಹೋದನು .ಆಗ ಆ ವ್ಯಕ್ತಿ ನನಗೆ ಮಾತನಾಡಿಸಿ ಅಮ್ಮಾ ನಾನು ಹೊಸ ಅಂಗಡಿ ಪ್ರಾರಂಭ ಮಾಡುತ್ತಿದ್ದೇನೆ ಈ ಹಣವನ್ನು ಪೂಜೆ ಮಾಡಬೇಕಿದೆ ನೀವು ಗುರುಗಳು ಇದ್ದೀರಿ ನಿಮ್ಮ ಮಾಂಗಲ್ಯ ಸರವನ್ನು ಬಿಚ್ಚಿ ಈ ನನ್ನ ನೋಟುಗಳ ಮೇಲೆ ಇಟ್ಟಲ್ಲಿ ನಾನು ಪೂಜೆ ಮಾಡಿ ನಮಸ್ಕರಿಸಿ ಕೊಡುವೆ ಅದರಿಂದ ನಮಗೆ ಒಳ್ಳೆಯದಾಗುತ್ತದೆ ಎಂದನು. ಆಗ ನಾನು ಆ ರೀತಿ ಮಾಡುವುದಿಲ್ಲ ಅದು ಸರಿಯಲ್ಲ ನಿಮ್ಮ ಹಣವನ್ನು ಮಂದಿರದ ಮೂತರ್ಿಯ ಮುಂದೆ ಇಟ್ಟು ಕೊಡುವೆ ಎಂದು ಹೇಳಿದೆನು ಆದರೂ ಸಹಿತ ಆ ವ್ಯಕ್ತಿ ನನಗೆ ಇಲ್ಲ ತಾಯಿ ನಾನು ಜೈನನಿದ್ದೇನೆ ನಿಮ್ಮ ಮಾಂಗಲ್ಯದ ಸರವನ್ನು ನನ್ನ ಹಣದ ಮೇಲೆ ಇಟ್ಟು ಕೊಟ್ಟಲ್ಲಿ ಮಾತ್ರ ನನಗೆ ಒಳ್ಳೆಯದಾಗುತ್ತದೆ. ಆದ್ದರಿಂದ ಆ ಬಗ್ಗೆ ಅನ್ಯ ಭಾವಿಸಬೇಡಿ ನನಗೆ ಆಶಿವರ್ಾದ ಮಾಡಿ ಎಂದು ಬೇಡಿಕೊಂಡನು ಅದಕ್ಕೆ ನಾನು ನಾನು ಇಲ್ಲಿಯೇ ಇರುತ್ತೇನಲ್ಲಾ ಒಳ್ಳೇಯದಾಗಲಿ ಎಂದು ನನ್ನ ಮಾಂಗಲ್ಯದ ಸರವನ್ನು ಬಿಚ್ಚಿ ಆತನ ಕೈಯಲ್ಲಿ ಕೊಟ್ಟೆನು. ಆಗ ಆ ವ್ಯಕ್ತಿ ನನ್ನ ಮಾಂಗಲ್ಯದ ಸರವನ್ನು ತನ್ನ ಕೈಯಲ್ಲಿನ ನೋಟುಗಳ ಮೇಲೆ ಇಟ್ಟು ಅದಕ್ಕೆ ಕುಂಕುಮ ಹಾಕಿ ನಮಸ್ಕಾರ ಮಾಡಿ ನಂತರ ತನ್ನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕುತ್ತೇನೆ ನೋಡಮ್ಮಾ ಎಂದು ಹೇಳಿದನು. ನಾನು ಆಯ್ತು ಎಂದು ಮೌನೇಶ ಬರುವುದನ್ನು ನೋಡುತ್ತಿದ್ದೆನು. ಆ ಸಮಯದಲ್ಲಿ ನಾನು ಸರಿಯಾಗಿ ನೋಡಲಿಲ್ಲ ಪ್ಲಾಸ್ಟಿಕ್ ಚೀಲವನ್ನು ನಾನು ತೆಗದುಕೊಂಡೆನು. ಆ ವ್ಯಕ್ತಿಯು ನನಗೆ ನಮಸ್ಕಾರ ಮಾಡಿ ಹೋಗಿ ಬರುತ್ತೇನೆ ತಾಯಿ ಎಂದು ಹೊರಗೆ ಹೋದನು. ನಂತರ ನಾನು ಪ್ಲಾಸ್ಟಿಕ್ ಚೀಲವನ್ನು ನೋಡಲಾಗಿ ಅದರಲ್ಲಿ ನನ್ನ ಮಾಂಗಲ್ಯದ ಸರ ಇರಲಿಲ್ಲ್ಲ ನಾನು ಗಾಬರಿಯಾಗಿ ಬಾಗಿಲ ಬಳಿ ಹೋಗುವಷ್ಟರಲ್ಲಿ ಮೌನೇಶನು ಮರಳಿ ಬಂದನು. ಆಗ ನಾನು ಮೌನೇಶ ಈಗ ಬಂದ ವ್ಯಕ್ತಿ ನನ್ನ ಮಾಂಗಲ್ಯ ಸರವನ್ನು ಮೋಸದಿಂದ ತೆಗದುಕೊಂಡು ಹೋಗಿದ್ದಾನೆ. ಅಂತಾ ಗಾಬರಿಯಾಗಿ ಹೇಳಿದನು. ಮೌನೇಶನು ಆ ವ್ಯಕ್ತಿ ನನಗೆ ತೆಂಗಿನ ಕಾಯಿ ತರಲು ಹೇಳಿ ತಾವು ಹೋದರು ನನಗೆ ದಾರಿಯಲ್ಲಿ ಮೊಟಾರ ಸೈಕಲ್ ಮೇಲೆ ಇಬ್ಬರು ಕುಳಿತು ಹೋದರು ನಾನು ಅವರಿಗೆ ಕೇಳಲಾಗಿ ಒಂದು ತಾಸು ಬಿಟ್ಟು ಬರುತ್ತೇನೆೆ ಅಂತಾ ಹೇಳುತ್ತಾ ಹೋದರಲ್ಲಾ ಎಂದು ಹೇಳಿದನು. ಆಗ ಇಬ್ಬರೂ ಗಾಬರಿಯಾಗಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲ ಸದರಿ ವಿಷಯವನ್ನು ನಮ್ಮ ಮನೆಯವರಿಗೆ ಫೋನ ಮಾಡಿ ತಿಳಿಸಿದ್ದು ಅವರು ಮನೆಗೆ ಬಂದ ನಂತರ ಎಲ್ಲಾ ವಿಷಯವನ್ನು ಹೇಳಿದೆನು. ನನ್ನ ಮಾಂಗಲ್ಯ ಸರವು 5 ತೊಲೆ ಬಂಗಾರದಿಂದ ಮಾಡಿದ್ದು ಅದರ ಅ.ಕಿ. 240000/-ರೂ. ಆಗುತ್ತದೆ. ಮನೆಯಲ್ಲಿ ಎಲ್ಲರೂ ಕೂಡಿ ಮಾತನಾಡಿ ಇಂದು ದಿನಾಂಕ: 02-07-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಸದರಿ ಘಟನೆಯು ನಿನ್ನೆ ದಿನಾಂಕ: 01-07-2021 ರಂದು ಮುಂಜಾನೆ 9:30 ಗಂಟೆಯಿಂದ 9:50 ಗಂಟೆಯ ಅವಧಿಯಲ್ಲಿ ನಡೆದಿದೆ. ಆದ್ದರಿಂದ ದಿನಾಂಕ :01-07-2021 ರಂದು 9:30 ಗಂಟೆಗೆ ನಮ್ಮ ಮಠಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ನನ್ನ ಗಮನ ಬೇರೆ ಕಡೆ ಸೆಳೆದು ನನಗೆ ಮೋಸ ಮಾಡಿ ನನ್ನ ಮಾಂಗಲ್ಯ ಸರವನ್ನು ತೆಗದುಕೊಂಡು ಹೋಗಿದ್ದು ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 151/2021 ಕಲಂ 420 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 92/2021 ಕಲಂ: 380 ಐ.ಪಿ.ಸಿ : ಇಂದು ದಿನಾಂಕ: 02.07.2021 ರಂದು 08.15 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಾಬುಸಿಂಗ್ ತಂದೆ ದೇವಿಸಿಂಗ್ ರಜಪೂತ ವಯಾ|| 36 ವರ್ಷ ಜಾ|| ರಜಪೂತ ಉ|| ವ್ಯಾಪಾರ ಸಾ|| ಕೆಂಭಾವಿ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನೆಂದರೆ, ಕೆಂಭಾವಿ ಪಟ್ಟಣದ ಕೀಲಿ ಕಾಂಪ್ಲೆಕ್ಸದಲ್ಲಿ ನಮ್ಮದು ಒಂದು ದೇವಿ ಗಾಮರ್ೇಂಟ್ಸ ಅನ್ನುವ ರೆಡಿಮೇಡ ಬಟ್ಟೆ ಅಂಗಡಿಯಿದ್ದು ಸದರಿ ಅಂಗಡಿಯನ್ನು ಸುಮಾರು 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಸದರಿ ಅಂಗಡಿಯಲ್ಲಿ ನಾನು ಹಾಗು ನಮ್ಮ ಮಗನಾದ ಕುಲದೀಪಸಿಂಗ್ ಇಬ್ಬರು ಇರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 01.07.2021 ರಂದು ಬೆಳಿಗ್ಗೆ 8 ಗಂಟೆಗೆ ನಮ್ಮ ಅಂಗಡಿ ತೆರೆದಿದ್ದು ನಂತರ 09.45 ಗಂಟೆಗೆ ನಾನು ಸ್ವಲ್ಪ ಕೆಲಸದ ಮೇಲೆ ಬಸ್ಸನಿಲ್ದಾಣದ ಕಡೆಗೆ ಹೋಗಿದ್ದು ಅಂಗಡಿಯಲ್ಲಿ ಮಗ ಕುಲದೀಪಸಿಂಗ ಒಬ್ಬನೇ ಇದ್ದಿದ್ದು ಸದರಿಯವನಿಗೆ ನೋಡಿ ವ್ಯಾಪಾರ ಮಾಡು ಕೂಡಲೇ ಬರುತ್ತೇನೆ ಅಂತ ಹೇಳಿ ಹೋದೆನು. ನಂತರ ನಾನು ಮರಳಿ 10 ಗಂಟೆಗೆ ನನ್ನ ಅಂಗಡಿಗೆ ಮರಳಿ ಬಂದಿದ್ದು ಆಗ ನನ್ನ ಮಗನಾದ ಕುಲದೀಪಸಿಂಗ ಈತನು ನನಗೆ ತಿಳಿಸಿದ್ದೇನಂದರೆ ಯಾವನೋ ಒಬ್ಬ ವ್ಯಕ್ತಿ ಬಟ್ಟಿ ಖರೀದಿ ಮಾಡಲು ನಮ್ಮ ಅಂಗಡಿಗೆ ಬಂದು ನಾನು ಬಟ್ಟೆ ತೋರಿಸುತ್ತಿದ್ದಾಗ ನನಗೆ ಯಾಮರಸಿ ನಮ್ಮ ಅಂಗಡಿ ಗಲ್ಲಾದಲ್ಲಿಟ್ಟದ್ದ 50,000/-ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾನೆ ಅಂತ ತಿಳಿಸಿದಾಗ ನಾನು ನಮ್ಮ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ನೋಡಲಾಗಿ ಒಬ್ಬ ಕೆಂಪು ಬಣ್ಣದ ಚೆಕ್ಸ್ ಅಂಗಿ ತೊಟ್ಟ ಅಂದಾಜು 35 ವಯಸ್ಸಿನ ವ್ಯಕ್ತಿ ಪತ್ತೆಯಾಗಿದ್ದು ಆದರೆ ಸದರಿ ವ್ಯಕ್ತಿ ಎಲ್ಲಿಯವನೂ ಹಾಗು ಆತನು ಯಾರು ಅನ್ನುವದು ಗೊತ್ತಾಗಿರುವದಿಲ್ಲ. ಆದರೆ ಸದರಿ ವ್ಯಕ್ತಿಯ ಪತ್ತೆ ಕುರಿತು ನಾನು ಹಾಗು ನನ್ನ ಮಗ ಇಬ್ಬರೂ ಕೂಡಿಕೊಂಡು ಕೆಂಭಾವಿ ತುಂಬಾ ಹುಡುಕಾಡಿದರೂ ಎಲ್ಲಯೂ ಸಿಸಿ ಕ್ಯಾಮರಾದಲ್ಲಿರುವ ಚಹರೆವುಳ್ಳ ವ್ಯಕ್ತಿ ಪತ್ತೆಯಾಗಿಲ್ಲವಾದ್ದರಿಂದ ಇಂದಿನವರೆಗೆ ಹುಡುಕಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ತಂದು ಹಾಜರಪಡಿಸಿದ್ದು ಕಾರಣ ದಿನಾಂಕ 01.07.2021 ರಂದು ಬೆಳಿಗ್ಗೆ 09.45 ಗಂಟೆಗೆ ನಮ್ಮ ಮಗ ಒಬ್ಬನೇ ಅಂಗಡಿಯಲ್ಲಿ ಇರುವದನ್ನು ಗಮನಿಸಿದ ಯಾವನೋ ಒಬ್ಬ ವ್ಯಕ್ತಿ ನಮ್ಮ ಗಲ್ಲಾದಲ್ಲಿಟ್ಟಿದ್ದ 50,000/-ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದು ಕಾರಣ ಸದರಿ ಕಳ್ಳನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:92/2021 ಕಲಂ: 380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 47/2021 ಕಲಂ 78 (3) ಕೆ.ಪಿ ಯಾಕ್ಟ : ದಿನಾಂಕ:02/07/2021 ರಂದು 16.15 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಜ್ಜಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:47/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ
ನಂತರಪಿಎಸ್ಐ(ಕಾ.ಸು) ಹುಣಸಗಿಪೊಲೀಸ್ಠಾಣೆರವರು ಸಾಯಂಕಾಲ 18.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1440/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ಗುರಣ್ಣ ತಂದೆ ಬಸಪ್ಪ ಸುರಪುರ ವಯ-45 ವರ್ಷ ಜಾ:ಲಿಂಗಾಯತ ಉ:ಮಟಕಾ ಬರೆಯುವದು ಸಾ:ವಜ್ಜಲ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 95/2021 ಕಲಂ 32, 34 ಕೆ.ಇ ಎಕ್ಟ : ಇಂದು ದಿನಾಂಕ 02-07-2021 ರಂದು 6 ಪಿ.ಎಂ ಕ್ಕೆ ಆರೋಪಿತಳು ಅರಕೇರಾ (ಬಿ) ಗ್ರಾಮದ ತನ್ನ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಅಂತಾ ಯಾದಗಿರಿ ಇ.ಆರ್.ಎಸ್.ಎಸ್ (112) ಸಿಬ್ಬಂಧಿಯರಿಂದ ಫಿರ್ಯಾಧಿದಾರರು ಖಚಿತ ಮಾಹಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತಳಿಂದ ಒಟ್ಟು 5907/- ರೂಪಾಯಿ ಕಿಮ್ಮತ್ತಿನ ನಾಲ್ಕು ನಮೂನೆಯ ಮಧ್ಯವನ್ನು ಜಪ್ತಿಪಡಿಸಿಕೊಂಡು ವರದಿ ಹಾಜರುಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 03-07-2021 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080