ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-07-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 106/2022 ಕಲಂ: 448, 302ಸಂಗಡ 34 ಐಪಿಸಿ : ದಿನಾಂಕಃ 02-07-2022 ರಂದು 1-00 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಗಾಯತ್ರಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನವರು 4 ಜನ ಅಣ್ಣ-ತಮ್ಮಂದಿರು ಇದ್ದು, ಹಿರಿಯವನು ನನ್ನ ಭಾವ ಶಿವಾನಂದ, ಎರಡನೇಯವನು ನನ್ನ ಗಂಡ ಪಂಪಾಪತಿ ಹಾಗು ನನ್ನ ಮೈದುನದವರ ಹೆಸರು ಕಾಳಪ್ಪ ಮತ್ತು ಗಂಗಾಧರ ಇರುತ್ತದೆ. ನನ್ನ ಗಂಡ ಹಾಗು ಇಬ್ಬರೂ ಮೈದುನದವರು ಸಂಸಾರದಲ್ಲಿಕೂಡಿ ಇದ್ದಾಗ ಮೂವರು ರಂಗಂಪೇಟದಲ್ಲಿ ಸ್ವಂತ ಮನೆ ಕಟ್ಟಿಸಿರುತ್ತಾರೆ. 2012 ನೇ ಸಾಲಿನಲ್ಲಿ ನಾವು ಗಂಡ-ಹೆಂಡತಿ ಬೇರೆಯಾಗಿದ್ದು, ನನ್ನ ಮೈದುನದವರಾದ ಕಾಳಪ್ಪ ಹಾಗು ಗಂಗಾಧರ ಇಬ್ಬರೂ ಕೂಡಿ ಇರುತ್ತಾರೆ. ನಾವು ಬೇರೆ ಆದಾಗಿನಿಂದ ನನ್ನ ಇಬ್ಬರೂ ಮೈದುನದವರು ನನ್ನ ಗಂಡನಿಗೆ ಸೂಳೆ ಮಗನೇ ನೀನು ಚಿಕ್ಕಂದಿನಿಂದ ನಮಗೆ ದುಡಿಸಿಕೊಂಡು ಸರಿಯಾಗಿ ಪಾಲು ಕೊಟ್ಟಿಲ್ಲ. ಗಳಿಸಿದ ಎಲ್ಲಾ ಹಣ ನೀನೆ ಇಟ್ಟುಕೊಂಡು ನಮಗೆ ಕೊಡದೇ ಮೋಸ ಮಾಡಿದ್ದಿಯಾ, ನಮಗೆ ಇನ್ನು ಸರಿಯಾಗು ಹಣ, ಆಸ್ತಿ ಕೊಡಬೇಕು, ಕೊಡಲ್ಲಿಲ್ಲ ಅಂದರೆ ನಿನಗೆ ಕೊಲೆ ಮಾಡುವತನ ಬಿಡುವದಿಲ್ಲ ಅಂತ ತಕರಾರು ಮಾಡುತ್ತ ಬಂದಿರುತ್ತಾರೆ. ಆದರೂ ನನ್ನ ಗಂಡನು ತನ್ನ ತಮ್ಮಂದಿರು ಇರುತ್ತಾರೆ ಅಂತ ಸಹಿಸಿಕೊಂಡು ಬಂದಿದ್ದನು. ಹೀಗಿದ್ದು ಇಂದು ದಿನಾಂಕ: 02/07/2022 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಾವು ಗಂಡ-ಹೆಂಡತಿ ಹಾಗು ನಮ್ಮ ಹಿರಿಯ ಮಗಳಾದ ವೈಷ್ಣವಿ ಮೂವರು ನಮ್ಮ ಮನೆಯಲ್ಲಿದ್ದಾಗ ನನ್ನ ಗಂಡನೊಂದಿಗೆ ವೈಷಮ್ಯ ಬೆಳೆಸಿಕೊಂಡಿರುವ ನನ್ನ ಮೈದುನದವರಾದ 1) ಗಂಗಾಧರ ತಂದೆ ಮಾನಪ್ಪ ಪತ್ತಾರ 2) ಕಾಳಪ್ಪ ತಂದೆ ಮಾನಪ್ಪ ಪತ್ತಾರ ಹಾಗು ನನ್ನ ನೆಗೆಣಿಯವರಾದ 3) ದತ್ತಾಶ್ರೀ @ ಪುಟ್ಟಿ ಗಂಡ ಗಂಗಾಧರ ಪತ್ತಾರ, 4) ಅಂಬಿಕಾ ಗಂಡ ಕಾಳಪ್ಪ ಪತ್ತಾರ ಸಾ: ಪೇಠ ಅಮ್ಮಾಪೂರ ಹಾ.ವಃ ರಂಗಂಪೇಟ ಇವರು 4 ಜನರು ನಮ್ಮ ಮನೆಯಲ್ಲಿ ಬಂದವರೇ ಲೇ ಮಗನೇ ನಾವು ಎಷ್ಟು ವರ್ಷಗಳಿಂದ ನಿನ್ನ ಹತ್ತಿರ ಪಾಲು ಕೇಳಿದರೂ, ಸರಿಯಾಗಿ ಗಳಿಕೆ ಹಣ ಕೊಡುತ್ತಿಲ್ಲಾ, ಇವತ್ತು ನಿನಗೆ ಬಿಡುವದಿಲ್ಲ ಮಗನೇ ಅನ್ನುತ್ತ ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೆ ಗಂಗಾಧರ ಹಾಗು ಕಾಳಪ್ಪ ಇಬ್ಬರೂ ತಮ್ಮ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಮಚ್ಚುಗಳಿಂದ ನನ್ನ ಗಂಡನ ಬೆನ್ನು, ಕುತ್ತಿಗೆ, ಕೈ ಹಾಗು ಮೈಮೇಲೆ ಮನಬಂದಂತೆ ಕೊಚ್ಚಿ ಕೊಚ್ಚಿ ಹೊಡೆಯುತ್ತಿದ್ದಾಗ ನಾನು ಮತ್ತು ಬಸವರಾಜ ಇಬ್ಬರೂ ಬಿಡಿಸಲು ಹೋದಾಗ ನೀವು ಬಿಡಿಸಲು ಬಂದರೆ ನಿಮಗೂ ಬಿಡುವದಿಲ್ಲ ನೋಡು ಅಂತ ಹೇಳಿ ಮಚ್ಚು ತೋರಿಸಿದ್ದು, ಅಂಬಿಕಾ ಹಾಗು ದತ್ತಾಶ್ರೀ ಇಬ್ಬರೂ ಬಿಡಬ್ಯಾಡ್ರಿ ಸೂಳಿಮಗನಿಗೆ ಖಲಾಸ ಮಾಡ್ರಿ ಅಂತ ಹೇಳುತ್ತಿದ್ದಾಗ ಗಂಗಧರ ಹಾಗು ಕಾಳಪ್ಪ ಇಬ್ಬರೂ ಪುನಃ ನನ್ನ ಗಂಡನಿಗೆ ಮಚ್ಚುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಕಾರಣ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 106/2022 ಕಲಂ: 448, 302 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 78/2022 ಕಲಂ 379 ಐಪಿಸಿ : ನಾನು ದಿನಾಂಕ 02/07/2022 ರಂದು ಬೆಳಿಗ್ಗೆ 11-00 ಗಂಟೆಗೆಯ ಸುಮಾರಿಗೆ ಯಾದಗಿರಿಯ ಕೋಟರ್್ ಹತ್ತಿರ ಇರುವ ಹೆಚ್.ಡಿ.ಎಫ್.ಸಿ ಬ್ಯಾಂಕಿಗೆ ಬಂದು, ನನ್ನ ಖಾತೆ ನಂ 50200066698240, ನೇದ್ದರಿಂದ ಬೆಳೆಸಾಲ ಮಂಜೂರಾದ ಹಣ 4,00,000/-ರೂ|| ಗಳು ಡ್ರಾ ಮಾಡಿಕೊಂಡು, ಅದರಲ್ಲಿ ನನ್ನ ಖಚರ್ಿಗೆಂದು 50,000/-ರೂ|| ಗಳನ್ನು ತೆಗೆದು ನನ್ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದು, ಉಳಿದ 3,50,000/- ರೂಪಾಯಿಗಳನ್ನು ಒಂದು ಪ್ಲಾಸ್ಟಿಕ್ ಕವರನಲ್ಲಿ ಹಾಕಿಕೊಂಡು ನನ್ನ ಹೊಂಡಾ ಶೈನ್ ಮೋಟರ್ ಸೈಕಲ್ ನಂ ಕೆ.ಎ 32 ಇಡಿ 5114 ನೇದ್ದರ ಬೈಕ್ ಟ್ಯಾಂಕ್ ಕವರನಲ್ಲಿ ಹಣ ಇಟ್ಟುಕೊಂಡೆನು. ನಂತರ ಮುಂದೆ ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ಇರುವ ರಘುವೀರ ಸಾಮೀಲ್ ಕಟ್ಟಿಗೆ ಅಡ್ಡಾದಲ್ಲಿ ಹೋಗಿ ನನ್ನ ಬೈಕ್ ನಿಲ್ಲಿಸಿ, ಒಕ್ಕಲುತನಕ್ಕೆ ಬೇಕಾಗುವ ಸಾಮಾನುಗಳಾದ ಎಡೆ, ಕುಂಟಿ ದಿಂಡುಗಳನ್ನು ಕೇಳಿಕೊಂಡು ಬರುವಷ್ಠರಲ್ಲಿ ಯಾರೋ ನನ್ನ ಬೈಕ್ ಟ್ಯಾಂಕ್ ಕವರನಲ್ಲಿ ಇದ್ದ ಹಣ ನನಗೆ ಗೊತ್ತಿಲ್ಲದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆ ಇಂದು ದಿನಾಂಕ 02/07/2022 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ ನಾನು ನನ್ನ ಗೆಳೆಯರಾದ 1] ಪ್ರದೀಪರೆಡ್ಡಿ ತಂದೆ ಶಿವರೆಡ್ಡಿ ಮಾಲಿ ಪಾಟೀಲ್, 2] ರಾಮರಾಜು ತಂದೆ ವೆಂಕಟರಾಜು ಜಂಪನ ಮತ್ತು 3] ಅಯ್ಯಪ್ಪ ತಂದೆ ದ್ಯಾವಪ್ಪ ಬೇನಿಗಿಡ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿ ನನಗೆ ವಿಚಾರಿಸಿದರು. ನಂತರ ನಾನು ಅಲ್ಲಿ ಸುತ್ತಾ ಮುತ್ತಾ ಯಾರಾದರು ಸಂಶಯ ವ್ಯಕ್ತಿಗಳ ಬಗ್ಗೆ ನೋಡಲಾಗಿ ಯಾವುದೇ ಮಾಹಿತಿ ತಿಳಿಯಲಿಲ್ಲ. ಕಾರಣ ಇಂದು ದಿನಾಂಕ 02/07/2022 ರಂದು ನಾನು ಯಾದಗಿರಿಯ ಕೋಟರ್್ ಎದುರುಗಡೆ ಇರುವ ಹೆಚ್.ಡಿ.ಎಫ್.ಸಿ ಬ್ಯಾಮಕಿಗೆ ಬಂದು ಮಂಜೂರಾದ ಬೆಳೆಸಾಲ ನನ್ನ ಖಾತೆಯಿಂದ 4,00,000/-ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಅದರಲ್ಲಿ 50,000/-ರೂಪಾಯಿಗಳು ಖಚರ್ಿಗೆಂದು ತೆಗೆದುಕೊಂಡು ನನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ಉಳಿದ 3,50,000/- ರೂಪಾಯಿಗಳನ್ನು ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರ ಮೇಲೆ ಇಟ್ಟುಕೊಂಡೆನು. ನಂತರ ಮುಂದೆ ಮುದ್ನಾಳ ಪೆಟ್ರೋಲ್ ಬಂಕ್ ಹತ್ತಿರ ಇರುವ ರಘುವೀರ ಸಾಮೀಲ್ ಕಟ್ಟಿಗೆ ಅಡ್ಡಾದಲ್ಲಿ ಹೋಗಿ ನನ್ನ ಬೈಕ್ ನಿಲ್ಲಿಸಿ, ಮನೆಗೆ ಒಕ್ಕಲುತನಕ್ಕೆ ಬೇಕಾಗುವ ಸಾಮಾನುಗಳಾದ ಎಡೆ, ಕುಂಟಿ ದಿಂಡುಗಳನ್ನು ಕೇಳಿಕೊಂಡು ಬರುವಷ್ಠರಲ್ಲಿ ಯಾರೋ ಕಳ್ಳರು ನನ್ನ ಬೈಕ್ ಟ್ಯಾಂಕ್ ಕವರನಲ್ಲಿ ಇದ್ದ ಹಣ ನನಗೆ ಗೊತ್ತಿಲ್ಲದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಮಾಡಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 78/2022 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನ: 98/2022 ಕಲಂ 379 ಐಪಿಸಿ : ಇಂದು ದಿನಾಂಕ: 02-07-2022 ರಂದು ಬೆಳಿಗ್ಗೆ 09-15 ಗಂಟೆಗೆ ಶ್ರಿ ಬಾಪುಗೌಡ ಪಿಐ ಸಾಹೇಬರು ಠಾಣೆಗೆ ಹಾಜರಾಗಿ ಚಾಮನಳ್ಳಿ ಸೀಮಾಂತರದ ಹಳ್ಳದಿಂದ ಕಳ್ಳತನದಿಂದ ಟ್ರ್ಯಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಮಾರಾಟ ಮಾಡಲು ಯಾವುದೆ ಅನುಮತಿ ಮತ್ತು ರಾಜ ಧನ ಸಂದಾಯ ಮಾಡದೆ ಸರಕಾರದ ನೈಸಗರ್ಿಕ ಸಂಪತ್ತಾದ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ಅಕ್ರಮ ಮರಳು ಸಾಗಾಣಿಕೆ ಮಾಡುತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಬಾತ್ಮಿ ಬಂದ ಸ್ಥಳಕ್ಕೆ ಹೋಗುತ್ತಿರುವಾಗ ಬೆಳಿಗ್ಗೆ 07-30 ಗಂಟೆಗೆ ಚಾಮನಳ್ಳಿ ಕಡೆಯಿಂದ ರೋಡ ಮೇಲೆ ಮರಳು ತುಂಬಿದ ಟ್ರ್ಯಾಕ್ಟರ ಬರುವದನ್ನು ಖಚಿತ ಪಡಿಸಿಕೊಂಡು ನಾನು ಪಂಚರ ಸಮಕ್ಷಮ ಮರಳು ತುಂಬಿದ ಟ್ರ್ಯಾಕ್ಟರನ್ನು ಸಿಬ್ಬಂದಿಯವರೊಂದಿಗೆ ದಾಳಿ ಮಾಡುವ ಕಾಲಕ್ಕೆ ಟ್ರ್ಯಾಕ್ಟರ ಚಾಲಕನು ಮರಳು ತುಂಬಿದ ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ನೋಡಲಾಗಿ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ನಂ. ಕೆಎ-33 ಟಿಬಿ-1101 ಅಂತಾ ಇದ್ದು ಅದಕ್ಕೆ ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣದ ಟ್ರ್ಯಾಲಿ ಇದ್ದು ಅದರ ನಂಬರ ಇರುವದಿಲ್ಲ, ಟ್ರ್ಯಾಕ್ಟರದಲ್ಲಿ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತೆಗೆದುಕೊಂಡು ಹೊಗುತಿದ್ದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡಿದ್ದು ಟ್ರ್ಯಾಕ್ಟರ ಮತ್ತು ಪಂಚನಾಮೆ ವರದಿ ಸಂಗಡ ಹಾಜರುಪಡಿಸಿದ ಪಿರ್ಯಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು,


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ. 341,323,324,,504, 506 ಸಂಗಡ 34 ಐ.ಪಿ.ಸಿ. : ಇಂದು ದಿನಾಂಕ 02-07-2022 ರಂದು 4-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಆಕಾಶ ತಂದೆ ಭದ್ರ್ಯಾ ಚವ್ಹಾಣ ವಯಾ:26 ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ಆಶನಾಳ ತಾಂಡಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ 30-06-2022 ರಂದು ಬೆಳಗ್ಗೆ ನಾನು ಕೋಟರ್ಿಗೆ ಹಾಜರಿ ಹಾಕಿ ನಮ್ಮ ತಾಂಡಾಕ್ಕೆ ಹೋಗಿ ನಮ್ಮ ತಾಯಿ ಹೋಲದಲ್ಲಿದ್ದ ಕಾರಣ ನಮ್ಮ ಹೋಲಕ್ಕೆ ಹೋದೆನು. ನಮ್ಮ ತಾಯಿಯೊಂದಿಗೆ ಮಧ್ಯಾಹ್ನ 3 ಗಂಟೆಗೆ ನಮ್ಮ ಹೋಲದಲ್ಲಿದ್ದಾಗ ಅದೇ ವೇಳೆಗೆ ನನ್ನ ಹೆಂಡತಿಯಾದ 1) ಸುನಿತಾ ಗಂಡ ಆಕಾಶ ಚವ್ಹಾಣ ಇವಳ ತಾಯಿಯಾದ 2) ದೇವಿಬಾಯಿ ಗಂಡ ಮಾನಸಿಂಗ ರಾಠೋಡ ಹಾಗೂ ಅವರ ಸಂಭಂಧಿಕರು ಮತ್ತು ಪಕ್ಕದ ಹೋಲದವರಾದ 3) ಶಂಕರ ತಂದೆ ಮಲ್ಲ್ಯಾ ರಾಠೊಡ ಮತ್ತು 4) ಸುಶೀಲಾಬಾಯಿ ಗಂಡ ಮಲ್ಲ್ಯಾ ರಾಠೊಡ ಈ 4 ಜನರು ಕೂಡಿ ಬಂದವರೇ ನಮ್ಮ ಹೋಲದಲ್ಲಿ ಬಂದವರೇ ನನಗೆ ಅಡ್ಡಗಟ್ಟಿ ಸುತ್ತುವರೆದು ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ಎಲ್ಲರೂ ನನಗೆ ಎಲೇ ಚೀನಾಲಿ ಹಿಜಡಾ ಸೂಳೇ ಮಗನೇ ನೀನು ನಿನ್ನ ಮಕ್ಕಳಿಗೆ ಬಿಟ್ಟು ಎಲ್ಲಿಗೆ ಹೋಗಿದ್ದಿ ಅವರಿಗೆ ಹೊಟ್ಟೆ ಬಟ್ಟೆಗೆ ಯಾರೂ ಖಚರ್ು ಮಾಡಬೇಕು ನಿನ್ನ ಮಕ್ಕಳಿಗೆ ನೀನು ಕರೆದುಕೊಂಡು ಹೋಗು ರಂಡಿ ಮಗನೇ ಅಂತಾ ಅವಾಚ್ಯವಾಗಿ ಬೈಯ್ಯ ಹತ್ತಿದರು. ಆಗ ನಾನು ನನ್ನ ತಾಯಿ ಅವರಿಗೆ ಅವರಿಗೆ ಸಮಾಧಾನ ಮಾಡಿದರೂ ಕೂಡಾ ಅವರಲ್ಲಿ ಒಮ್ಮೇಲೆ ನನ್ನ ಹೆಂಡತಿ ಸುನೀತಾ ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ಎತ್ತಿಕೊಂಡು ನಿನಗೆ ಇನ್ನೂ ಸೊಕ್ಕು ಮುರಿದಿಲ್ಲಾ ಚೋದು ಸೂಳೆ ಮಗನೆ ಅಂತಾ ನನ್ನ ಎಡಗಡೆ ತೆಲೆಗೆ ಹೊಡೆದು ರಕ್ತಗಾಯ ಮಾಡಿದಳು. ಶಂಕರ ತಂದೆ ಮಲ್ಲ್ಯಾ ರಾಠೋಡ ಇತನು ತನ್ನ ಕೈಯ್ಯಲ್ಲಿದ್ದ ಕಟ್ಟಿಗೆ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದನು. ಮತ್ತು ನನ್ನತ್ತೆ ದೇವಿಬಾಯಿ ಗಂಡ ಮಾನಸಿಂಗ ರಾಠೋಡ ಮತ್ತು ಸುಶೀಲಾಬಾಯಿ ಗಂಡ ಮಲ್ಲ್ಯಾ ರಾಠೊಡ ಇವರಿಬ್ಬರೂ ನನಗೆ ಕೈಯಿಂದ ಹೊಡೆದರು. ಆಗ ನಾನು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ 4 ಜನರು ಮನಸ್ಸಿಗೆ ಬಂದ ಹಾಗೆ ನನಗೆ ಕಾಲಿನಿಂದ ಒದ್ದರು. ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2022 ಕಲಂ 341, 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ 379 ಐಪಿಸಿ : ಇಂದು ದಿನಾಂಕ 02.07.2022 ರಂದು ಬೆಳಿಗ್ಗೆ 8.30 ಗಂಟೆಗೆ ವಿಜಯಕುಮಾರ ಪಿ.ಐ ಸಾಹೇಬ ಸೈದಾಪೂರ ಠಾಣೆ ರವರು ಠಾಣೆಗೆ ಬಂದು ಮರಳು ಲೋಡಿದ್ದ 1. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-32-ಡಿ-8504, 2. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-51-ಡಿ-6033, 3. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-32-9505 ಮೂರು ವಾಹನಗಳು ನನ್ನ ತಾಬಕ್ಕೆ ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಸದರಿ ಜ್ಞಾಪನಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ನಾನು ಮೋಹನರೆಡ್ಡಿ ಸಿ.ಹೆಚ್.ಸಿ-151 ಸೈದಾಪೂರ ಠಾಣೆ ಗುನ್ನೆ ಸಂಖ್ಯೆ 82/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನ: 83/2022 ಕಲಂ 379 ಐಪಿಸಿ : ಇಂದು ದಿನಾಂಕ 02.07.2022 ರಂದು ಬೆಳಿಗ್ಗೆ 11 ಗಂಟೆಗೆ ವಿಜಯಕುಮಾರ ಪಿ.ಐ ಸಾಹೇಬ ಸೈದಾಪೂರ ಠಾಣೆ ರವರು ಠಾಣೆಗೆ ಬಂದು ಮರಳು ಲೋಡಿದ್ದ 1. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-32-ಎಎ-0819, 2. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-28-ಡಿ-0920 ಎರಡು ವಾಹನಗಳು ನನ್ನ ತಾಬಕ್ಕೆ ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಸದರಿ ಜ್ಞಾಪನಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ನಾನು ಮೋಹನರೆಡ್ಡಿ ಸಿ.ಹೆಚ್.ಸಿ-151 ಸೈದಾಪೂರ ಠಾಣೆ ಗುನ್ನೆ ಸಂಖ್ಯೆ 83/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 119/2022. ಕಲಂ. 279. 337. ಐ.ಪಿ.ಸಿ. : ಇಂದು ದಿನಾಂಕ: 02/07/2022 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀಮತಿ, ಸರೋಜಾ ಗಂಡ ಮಹಾದೇವ ಬೇವಿನ ಚಿಂಚೋಳಿ ವ|| 38 ಜಾ|| ಗೊಂಡ ಕುರುಬರ ಉ|| ಕೂಲಿ ಸಾ|| ಮಾಸಿಮಡುವು ತಾ|| ಬಾಲ್ಕಿ ಜಿ|| ಭೀದರ ಹಾ|| ವ|| ಹಮಾಲರ ಓಣಿ ಹಳಿಸಗರ ಶಹಾಪೂರ.- 9611850242. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶವೆನೆಂದರೆ. ಶಹಾಪೂರದ ಬಸವೇಶ್ವರ ನಗರದಲ್ಲಿರುವ ಈಶ್ವರ ಗುಡಿಗೆ ಕೆಲಸಕ್ಕೆ ನಾನು ದಿನ ನಿತ್ಯ ಬೆಳಿಗ್ಗಿನಜಾವ ಹೋಗಿ ಬರುತ್ತಿದ್ದೆನು. ದಿನನಿತ್ಯದಂತೆ ದಿನಾಂಕ 19/06/2022 ರಂದು ಬೆಳಿಗ್ಗಿನಜಾವ 5-40 ಗಂಟೆಯ ಸುಮಾರಿಗೆ ನಮ್ಮ ಮನೆಯಿಂದ ನಾನು ಹೋರಟೆನು ಆಗ ನನ್ನ ಗಂಡನಾದ ಮಹಾದೇವ ತಂದೆ ಭೀರಪ್ಪ ಬೇವಿನ ಚಿಂಚೋಳಿ ಈತನು ನಾನು ಬಸವೇಶ್ವರ ಚೌಕ ಕಡೆಗೆ ಬರುತ್ತೆನೆ ಅಂತ ಹೇಳಿದನು, ಆಗ ನಾನು ಮತ್ತು ನನ್ನ ಗಂಡನಾದ ಮಹಾದೇವಪ್ಪ ಇಬ್ಬರು ನಮ್ಮ ಮನೆಯಿಂದ ಹೋರಟೆವು ಇಬ್ಬರು ನಡೆದುಕೊಂಡು ಶಹಾಪೂರ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಕುಂಬಾರ ಪೆಟ್ರೋಲ್ ಪಂಪ ಮುಂದೆ ಬೆಳಿಗ್ಗಿನಜಾವ 5-45 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಹಿಂದೆ ಡಿಕ್ಕಿಪಡಿಸಿ ಅಪಘಾತಮಾಡಿದನು. ಆಗ ನಾನು ನೆಲಕ್ಕೆ ಬಿದ್ದೆನು ಸದರಿ ಅಪಘಾತದಲ್ಲಿ ನನಗೆ ಹಣೆಗೆ, ಮೂಗಿಗೆ, ಬಾಯಿಗೆ ರಕ್ತಗಾಯ, ಎಡಗೈ ಮೋಳಕೈಯಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಆಗ ನನ್ನ ಗಂಡನು ನನಗೆ ನೋಡಿ ವಿಚಾರಿಸಿದನು. ಸದರಿ ಅಪಘಾತ ಮಾಡಿದ ಮೋಟರ್ ಸೈಕಲ್ ನಂಬರ ನೋಡಲಾಗಿ ಅದರ ನಂ ಕೆಎ-33 ಎಸ್-7854 ನೇದ್ದು ಇದು ಅದರ ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಾಘವೇಂದ್ರ ತಂದೆ ನಿಂಗಣ್ಣ ಆಂದೇಲಿ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿ ನನಗೆ ಯಾವುದೆ ಗಾಯವಾಗಿರುವುದಿಲ್ಲಾ ಅಂತ ಹೇಳಿದನು. ಸದರಿ ಅಪಘಾತವು ಕುಂಬಾರ ಪೆಟ್ರೋಲ್ ಪಂಪ ಮುಂದೆ ಬೆಳಿಗ್ಗಿನಜಾವ 5-45 ಗಂಟೆಗೆ ಜರುಗಿರುತ್ತದೆ. ನಂತರ ನಾನು ಮತ್ತು ನನ್ನ ಗಂಡನಾದ ಮಹಾದೇವಪ್ಪ ಇಬ್ಬರು ಕೂಡಿ ನಮ್ಮ ಮನೆಗೆ ಹೋದೆವು. ನಂತರ ನನಗೆ ಬೆನೆ ಜಾಸ್ತಿಯಾಗಿದ್ದರಿಂದ ನನಗೆ ಉಪಚಾರ ಕುರಿತು ನನ್ನ ಗಂಡನಾದ ಮಹಾದೇವಪ್ಪನು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದನು. ನಂತರ ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ನನಗೆ ಅಪಘಾತಮಾಡಿದ ಮೋಟರ್ ಸೈಕಲ್ ನಂಬರ ಕೆಎ-33 ಎಸ್-7854 ನೇದ್ದರ ಚಾಲಕನಾದ ರಾಘವೇಂದ್ರ ತಂದೆ ನಿಂಗಣ್ಣ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 119/2022 ಕಲಂ: 279, 337, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 120/2022 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕಃ 02/07/2022 ರಂದು, ರಾತ್ರಿ 20-15 ಗಂಟೆಗೆ ಫಿಯರ್ಾದಿ ಶ್ರೀಮತಿ ಶಾಕೀರಾ ಬೇಗಂ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 23/06/2022 ರಂದು ಮುಂಜಾನೆಯ ಸುಮಾರಿಗೆ ಫಿಯರ್ಾದಿ ಮತ್ತು ಆಕೆಯ ಗಂಡನಾದ ಮಹ್ಮದ ಗೌಸ್ ಮೊಹಿದ್ದೀನ್ ಖಾಜಿ ಇಬ್ಬರೂ ಕೂಡಿ ತಮ್ಮ ಮೋಟರ್ ಸೈಕಲ್ ನಂ ಕೆಎ-33-ಕೆ-8558 ರ ಮೇಲೆ ಸಗರ(ಬಿ) ಗ್ರಾಮದ ಸೋಫಿಸಾಬ ಸರ್ಮಸ್ತ ದಗರ್ಾಕ್ಕೆ ಹೋಗುತಿದ್ದಾಗ, ಮುಂಜಾನೆ 08-00 ಗಂಟೆಗೆ ಶಹಾಪೂರದ ಹಳೆ ಹೆಚ್.ಡಿ.ಎಫ್.ಸಿ ಬ್ಯಾಂಕ್ ಹತ್ತಿರ ಹೋಗುತಿದ್ದಾಗ, ರೋಡಿನ ಮೇಲೆ ನಾಯಿ ಅಡ್ಡ ಬಂದಿದ್ದರಿಂದ ಮೋಟರ್ ಸೈಕಲ್ ಸವಾರನು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟರ್ ಸೈಕಲ್ ಹಿಡಿತ ತಪ್ಪಿ ಸಿಕ್ಕಿಡ್ಡಾಗಿ ಬಿದ್ದಿದ್ದರಿಂದ ಹಿಂಬದಿಯ ಸವಾರ ಫಿಯರ್ಾದಿಗೆ ಮತ್ತು ಮೋಟರ್ ಸೈಕಲ್ ಸವಾರ ಆರೋಪಿಗೆ ಸಾಧಾ ಮತ್ತು ಭಾರಿಗಾಯಗಳಾಗಿದ್ದು ಇರುತ್ತದೆ. ಇಬ್ಬರೂ ಶಹಾಪೂರದ ಸ್ಪಂದನಾ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಪಡೆದುಕೊಂಡು ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಲ್ಲಿಂದ ಅಂಬುಲೆನ್ಸದಲ್ಲಿ ಕಲಬುರಗಿಗೆ ಹೋಗಿ ಸನ್ ರೈಸ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಅಪಘಾತದಲ್ಲಿ ಫಿಯರ್ಾದಿಯ ಗಂಡನಿಗೆ ಭಾರಿ ಗಾಯಗಳಾಗಿದ್ದರಿಂದ ಅವರು ಇಲ್ಲಿಯವರೆಗೆ ಪ್ರಜ್ಞೆ ಬಂದಿರುವುದಿಲ್ಲ.. ಈ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 120/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 03-07-2022 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080