ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-08-2022


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ: 279, 338, 304 (ಎ) ಐಪಿಸಿ: ಇಂದು ದಿ: 02/08/2022 ರಂದು 7:45 ಪಿ.ಎಮ್ ಕ್ಕೆ ಸಂತೋಷತಂದೆ ಹಣಮಂತ ಸೂರ್ಯವಂಶಿ ವ|| 42 ವರ್ಷಜಾ|| ಗೊಂದಳಿ ಉ|| ಬಾಂಡೆ ವ್ಯಾಪಾರ ಸಾ|| ತಾಂಬಾತಾ|| ಇಂಡಿ ಜಿ|| ವಿಜಯಪೂರಇವರುಠಾಣೆಗೆ ಹಾಜರಾಗಿಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಬಾಂಡೆ ವ್ಯಾಪಾರ ಮಾಡಿಕೊಂಡುಉಪಜೀವನ ಸಾಗಿಸುತ್ತೇನೆ. ನಾಲತವಾಡದ ಪಾರ್ವತಿ @ ಮರೆಮ್ಮಗಂಡ ಪರಶುರಾಮ ವಾಸ್ಟರ್ಇವರ ಮಗಳಾದ ಮಂಜುಳಾ ಇವಳನ್ನು ನಮ್ಮತಮ್ಮಅನೀಲ್ಈತನಿಗೆಕೊಟ್ಟು ಮದುವೆ ಮಾಡಿದ್ದುಇರುತ್ತದೆ. ಪಾರ್ವತಿ @ ಮರೆಮ್ಮಗಂಡ ಪರಶುರಾಮ ವಾಸ್ಟರ್ಇವರುತನ್ನ ಮಕ್ಕಳೊಂದಿಗೆ 8-10 ವರ್ಷಗಳಿಂದ ವ್ಯಾಪರಕ್ಕೆಂದು ಸುರಪುರದ ದಿವಳಗುಡ್ಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ನನ್ನತಮ್ಮನಾದಅನೀಲ್ತಂದೆ ಹಣಮಂತ ಸೂರ್ಯವಂಶಿ ಈತನಿಗೆ ಸುಮಾರು 7-8 ವರ್ಷಗಳಿಂದ ಮೈಯಲ್ಲಿಆರಾಮಇರದಕಾರಣ ಮನೆಯಲ್ಲಿಯೇಇರುತ್ತಾನೆ. ನನ್ನತಮ್ಮನಿಗೆಇಬ್ಬರು ಹೆಣ್ಣು ಮಕ್ಕಳು 1) ಶೃಷ್ಠಿ 11 ವರ್ಷ, 2) ಅಕ್ಷತಾ 7 ವರ್ಷ ಹಾಗೂ 3) ಭೀಮರಾವ್ 3 ವರ್ಷದಒಬ್ಬಗಂಡು ಮಗ ಇರುತ್ತಾನೆ. ನನ್ನತಮ್ಮಅನೀಲ್ ಮತ್ತುಆತನ ಹೆಂಡತಿ ಮಂಜುಳಾ ಹಾಗೂ ತನ್ನ ಮಕ್ಕಳೊಂದಿಗೆ ತಾಂಬಾದಲ್ಲಿ ವಾಸವಾಗಿರುತ್ತಾರೆ. ನನ್ನತಮ್ಮನ ಮಗಳಾದ ಅಕ್ಷತಾ ಇವಳು 5-6 ತಿಂಗಳದಿಂದ ತನ್ನಅಜ್ಜಿಯ ಮನೆಯಾದ ಸುರಪೂರದ ದಿವಳಗುಡ್ಡದಲ್ಲಿ ಇದ್ದಳು. ಈಗ 5-6 ದಿವಸಗಳಿಂದೆ ನಾಲತವಾಡದಲ್ಲಿ ಅಂಬಾ ಭವಾನಿ ಜಾತ್ರೆಇದ್ದ ಪ್ರಯುಕ್ತಅಕ್ಷತಾ ಮತ್ತುಆಕೆಯಅಜ್ಜಿ ಪಾರ್ವತಿ @ ಮರೆಮ್ಮ ಮತ್ತು ಅವಳ ಮಾವತುಕಾರಾಮತಂದೆ ಪರಶುರಾಮಕೂಡಿಕೊಂಡುತಮ್ಮಟಂಟಂಗೂಡ್ಸ್ ನಂ. ಕೆಎ-32. ಬಿ-9863 ನೇದ್ದನ್ನುತೆಗೆದುಕೊಂಡುಜಾತ್ರೆಗೆ ಹೋಗಿ ಅಲ್ಲಿಯೇಇದ್ದ ಬಗ್ಗೆ ನಮಗೆ ಪೋನ್ ಮೂಲಕ ತಿಳಿಸಿದ್ದರು. ಹೀಗಿದ್ದುಇಂದು ದಿನಾಂಕ: 02/08/2022 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಸುರಪುರದಿಂದ ನಮ್ಮ ಸಂಬಂಧಿಕರಾದ ವೆಂಕಟೇಶತಂದೆತಿಪ್ಪಣ್ಣ ಮತ್ತು ಬುದ್ಧಿವಂತತಂದೆ ಲಕ್ಷ್ಮಣರಾವ್ರವರು ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಬುದ್ಧಿವಂತಇಬ್ಬರುಕೂಡಿಕೊಂಡು ನಮ್ಮ ಮೋ.ಸೈಕಲಗೆ ಪೆಟ್ರೋಲ್ ಹಾಕಿಸುವ ಸಲುವಾಗಿ ಬಾಂಬೆ ಬಸಣ್ಣ ಪೆಟ್ರೋಲ್ ಬಂಕ್ದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಸಾಯಂಕಾಲ 4:45 ಗಂಟೆ ಸುಮಾರಿಗೆರೋಡಿನಕಡೆಗೆ ಬರುತ್ತಿರುವಾಗ ಸುರಪುರ-ಶಹಾಪೂರ ಮುಖ್ಯರಸ್ತೆಯ ಮೇಲೆ ಕುಂಬಾರಪೇಠ ಬೈಪಾಸ್ರೋಡ್ ಮುಖಾಂತರ ದಿವಳಗುಡ್ಡಕ್ಕೆ ಬರಬೇಕೆಂದು ಬಾಂಬೆ ಬಸಣ್ಣ ಪೆಟ್ರೋಲ್ ಬಂಕ್ ಹತ್ತಿರರೋಡಿನ ಮೇಲೆ ಬರುತ್ತಿರುವಾಗ ನಿಮ್ಮ ಅಳಿಯ ತುಕಾರಾಮಈತನುತನ್ನಟಂಟಂ.ಗೂಡ್ಸ್ ನಂ. ಕೆಎ-32. ಬಿ-9863 ನೇದ್ದನ್ನುಅತೀವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದವನೇತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೇಲೆರೋಡಿನ ಮೇಲೆ ಪಲ್ಟಿ ಮಾಡಿದ್ದು, ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿಅಪಘಾತದಲ್ಲಿಅಕ್ಷತಾ ಇವಳಿಗೆ ಹಣೆಯಿಂದತೆಲೆಗೆ ಬಾರೀರಕ್ತಗಾಯವಾಗಿದ್ದು, ಬಲಗಾಲು ಮೊಳಕಾಲಿಗೆ ಬಾರೀರಕ್ತಗಾಯ, ಮೂಗಿನಿಂದ, ಬಾಯಿಂದರಕ್ತ ಸೋರಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು ಮತ್ತು ಪಾರ್ವತಿ @ ಮರೆಮ್ಮ ಇವಳಿಗೆ ತೆಲೆಯ ಹಿಂದೆ ಮತ್ತು ಬಲಗೈ ಹಸ್ತಕ್ಕೆ ಬಾರೀರಕ್ತಗಾಯವಾಗಿದ್ದುಅಲ್ಲಲ್ಲಿ ಒಳಪೆಟ್ಟಾಗಿರುತ್ತವೆ. ತುಕಾರಾಮಈತನಿಗೆಯಾವುದೇ ಗಾಯಗಳಾಗಿರುವದಿಲ್ಲ. ನಂತರ ನಾವು ಅಕ್ಷತಾ ಇವಳ ಮೃತದೇಹ ಮತ್ತುಗಾಯಗೊಂಡ ಪಾರ್ವತಿ @ ಮರೆಮ್ಮಇವರನ್ನುಒಂದು ವಾಹನದಲ್ಲಿ ಹಾಕಿಕೊಂಡು ಸುರಪುರ ಸರಕಾರಿಆಸ್ಪತ್ರಗೆಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಸುರಪುರಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಮತ್ತು ನನ್ನತಮ್ಮಅನೀಲ್ ಹಾಗೂ ನಮ್ಮ ಅಳಿಯ ಪ್ರಕಾಶ ಗೊಂದಳಿ, ಸುಖದೇವ ಬಿಸ್ಸೆ, ರಾಮಚಂದ್ರ ಬಿಸ್ಸೆರವರುಕೂಡಿಕೊಂಡು 7 ಗಂಟೆ ಸುಮಾರಿಗೆ ಸುರಪುರಆಸ್ಪತ್ರೆಗೆ ಬಂದು ನೋಡಲಾಗಿ ಮೃತಅಕ್ಷತಾ ಇವಳಿಗೆ ಈ ಮೇಲಿನಂತೆಅಪಘಾತದಲ್ಲಿ ಗಾಯಗಳಾಗಿ ಮೃತಪಟ್ಟಿದ್ದಳು. ಹಾಗೂ ಪಾರ್ವತಿ @ ಮರೆಮ್ಮ ಇವಳಿಗೆ ಈ ಮೇಲಿನಂತೆಅಪಘಾತದಲ್ಲಿ ಗಾಯಗಳಾಗಿದ್ದರಿಂದ ಹೆಚ್ಚಿನಉಪಚಾರಕುರಿತು ಕಲಬುರಗಿಆಸ್ಪತ್ರೆಗೆಅಂಬುಲೆನ್ಸದಲ್ಲಿ ಹೋಗಿದ್ದ ಬಗ್ಗೆ ಗೊತ್ತಾಗಿರುತ್ತದೆ. ಕಾರಣ ಅಳಿಯನಾದ ತುಕರಾಮತಂದೆ ಪರಶುರಾಮ ವಾಸ್ಟರ್ಈತನುತನ್ನಟಂಟಂಗೂಡ್ಸ್ ನಂ. ಕೆಎ-32. ಬಿ-9863 ನೇದ್ದನ್ನುಅತೀವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು 4:45 ಪಿ.ಎಮ್. ಕ್ಕೆ ಬಾಂಬೆ ಬಸಣ್ಣ ಪೆಟ್ರೋಲ್ ಬಂಕ್ ಮುಂದಿನ ರೋಡಿನ ಮೇಲೆ ಪಲ್ಟಿ ಮಾಡಿದ್ದಿರಿಂದ ಈ ಮೇಲಿನಂತೆಘಟನೆ ಸಂಭವಿಸಿದ್ದು ಇರುತ್ತದೆ. ಕಾರಣ ಸದರಿಅಪಘಾತ ಪಡಿಸಿದ ತುಕಾರಾಮಈತನ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಕೊಟ್ಟಅರ್ಜಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 122/2022 ಕಲಂ: 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.

ಯಾದಗಿರಿ ಮಹಿಳ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ: 498(ಎ),323, 504, 506, ಸಹಿತ 34 ಐ.ಪಿ.ಸಿ ಮತ್ತು 3, 4 ಡಿ.ಪಿ.ಎಕ್ಟ್ : ಇಂದು ದಿನಾಂಕ: 02.08.2022 ರಂದು ಸಂಜೆ 7.30 ಗಂಟೆ ಸುಮಾರಿಗೆ ಪಿರ್ಯಾಧಿ ಶ್ರೀಮತಿ ಬೀಬಿ ಹಾಜರಾ ಅಫಶಾ ಗಂಡ ಅಬ್ದುಲ್ ರಸೀದ್ ವಯಾ-31 ಉ-ಮನೆಕೆಲಸ ಸಾ-ಮಿಲತ್ ನಗರ ಲುಂಬನಿ ಗಾರ್ಡನ ಹತ್ತಿರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಂಶವೇನೆಂದರೆ ನನಗೆ ವಾಡಿ ಪಟ್ಟಣದ ಶೇಖ್ ಜೈನೋದ್ದಿನ್ ರವರ ಮಗನಾದ ಅಬ್ದುಲ್ ರಸೀದ್ ಈತನೊಂದಿಗೆ ದಿನಾಂಕ; 14.07.2017 ರಂದು ಯಾದಗಿರಿಯ ಬೈತುಲ್ ಮಾಹಲ್ ಫಂಕ್ಷನ್ ಹಾಲನಲ್ಲಿ ನಮ್ಮ ಸಮಾಜದ ಸಂಪ್ರಾದಾಯದಂತೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು ಇರುತ್ತದೆ. ಮದುವೆಯಲ್ಲಿ ವರನಿಗೆ ಅಂದರೆ ನನ್ನ ಗಂಡನಿಗೆ 2 ತೊಲೆ ಬಂಗಾರ ಮತ್ತು 51 ಸಾವಿರ ನಗದು ಹಣ ಮತ್ತು ಒಂದು ಹೊಂಡ ಶೈನ್ ಮೋಟಾರ ಸೈಕಲ್ ಹಾಗೂ ಗೃಹ ಬಳಕೆ ಸಾಮಾನುಗಳು ವರದಕ್ಷಿಣೆ ರೂಪದಲ್ಲಿ ನಮ್ಮ ದೊಡ್ಡಪ್ಪನ ಮಗನಾದ ಅಬ್ದುಲ್ ಖದೀರ್ ತಂದೆ ಅಬ್ದುಲ್ ಮಜೀದ್ , ಹಾಗೂ ನಮ್ಮ ಸಮಾಜದವರಾದ ಸೈಯದ್ ಅತ್ತಾರ ತಂದೆ ಸೈಯದ್ ಗೌಸ್ , ಮತ್ತು ಅಹಮದ್ ಸಲೀಮ್ ತಂದೆ ಡಿ.ಎ.ರಹೀಮ್ ರವರ ಸಮಕ್ಷಮದಲ್ಲಿ ನಮ್ಮ ತಂದೆ ತಾಯಿ ಕೊಟ್ಟಿರುತ್ತಾರೆ. ಮದುವೆಯಾಗಿ 1 ತಿಂಗಳು ಮಾತ್ರ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನ್ನ ಗಂಡ ಅಬ್ದುಲ್ ರಸೀದ್ ಇವರು ಕೆಲಸ ಸಲುವಾಗಿ ಕೋಯಿಮತ್ತೂರುಗೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ನನ್ನ ಅತ್ತೆ, ಮಾವ ಭಾವ, ಭಾವನ ಹೆಂಡತಿ ಮೈದುನ್ ಮತ್ತು ಮೈದುನನ ಹೆಂಡತಿ ಇವರೇಲ್ಲರೂ ಸೇರಿ ನನಗೆ ಮದುವೆಯಲ್ಲಿ ನಿಮ್ಮ ತಂದೆ ತಾಯಿ ಕಡಿಮೆ ವರದಕ್ಷಿಣೆ ಕೊಟ್ಟಿದ್ದಾರೆ , ನೀನು ಇನ್ನೂ ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬರಬೇಕು ಅಂತ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡಲು ಶುರು ಮಾಡಿದರು. ನನ್ನ ಗಂಡನಿಗೆ ಪೋನ್ ಮಾಡಿ ವಿಷಯ ತಿಳಿಸಿದರೇ ನಮ್ಮ ಮನೆಯಲ್ಲಿ ನನ್ನ ಕುಟುಂಬದವರು ಹೇಳಿದಂತೆ ಕೇಳು ಇಲ್ಲದಿದ್ದರೇ ನಿನ್ನ ತವರು ಮನೆಗೆ ಹೋಗು ಅಂತ ಹೇಳಿರುತ್ತಾನೆ.ನಂತರ ನನ್ನ ಗಂಡ ಕೋಯಿಮತ್ತೂರುದಿಂದ ವಾಡಿಗೆ ವರ್ಗಾವಣೆಯಾಗಿ ಬಂದು ಎ.ಸಿ.ಸಿ ಸಿಮೆಂಟ್ ಪ್ಯಾಕ್ಟರಿಯಲ್ಲಿ ಎಲೇಕ್ಟ್ರೀಯನ್ ಕೆಲಸ ಮಾಡಿಕೊಂಡು ಇದ್ದನು. ಮನೆಯಲ್ಲಿ ನನ್ನ ಗಂಡ ಅಬ್ದುಲ್ ರಸೀದ್ ತಂದೆ ಜೈನೋದ್ದಿನ್, ಅತ್ತೆ ಮಮತಾಜ್ ಬೇಗಂ ಗಂಡ ಶೇಖ್ ಜೈನೋದ್ದಿನ್ ಮಾವ ಶೇಖ್ ಜೈನೋದ್ದಿನ್ ತಂದೆ ಹುಸೇನ್ , ಭಾವ ಶೇಖ್ ಮೈಹಿಬೂಬ್ ತಂದೆ ಶೇಖ್ ಜೈನೋದ್ದೀನ್, ಆತನ ಹೆಂಡತಿ ಶೇಖ್ ನಾಜ್ಮಿನ್ ಸಲ್ಮಾ , ಮೈದುನ ಅಬ್ದುಲ್ ಹಮೀದ್ ತಂದೆ ಶೇಖ್ ಜೈನೋದ್ದೀನ್ ಹಾಗೂ ಆತನ ಹೆಂಡತಿ ತಬಸುಮ್ ಬೇಗಂ ಇವರೇಲ್ಲರೂ ಸೇರಿ ನನಗೆ ಹೊಟ್ಟೆಗೆ ಸರಿಯಾಗಿ ಊಟಕ್ಕೆ ಕೊಡದೇ ಮನೆಬಂದತೆ ಅವಾಚ್ಯಾ ಶಬ್ದಗಳಿಂದ ರಂಡಿ, ಚಿನಾಲಿ ನೀನು ತವರು ಮನೆಯಿಂದ ಏನು ತಂದಿರುವಿ, ಬೇರೆ ಹುಡುಗಿಗೆ ನನ್ನ ಮಗನಿಗೆ ಮದುವೆ ಮಾಡಿದರೇ 10 ತೊಲೆ ಬಂಗಾರ, 2 ಲಕ್ಷ ರೂ ನಗದು ಹಣ ಕೊಡುತ್ತಿದ್ದರು. ನೀನು ಏನು ತಂದಿಲ್ಲಾ ಅಂತ ಬೈಯುತ್ತಿದ್ದರು. ಇಡೀ ದಿನ ನನಗೆ ಕತ್ತೆ ದುಡಿಸಿದಂತೆ ದುಡಿಸಿಕೊಂಡು ರಾತ್ರಿ ಊಟಕ್ಕೆ ಸರಿಯಾಗಿ ಕೊಡುತ್ತಿರಲಿಲ್ಲಾ. ಮತ್ತು ನೀನು ನಮಗೆ ಅಡುಗೆ ಮಾಡಿ ಹಾಕುವುದು ಬೇಡ, ನಾವೇ ಮಾಡಿಕೊಳ್ಳುತ್ತೇವೆ ನಿನಗೆ ಸರಿಯಾಗಿ ಅಡುಗೆ ಮಾಡಲು ಕೂಡ ಬರುವುದಿಲ್ಲ ಹಾಗೂ ನೀನು ನಮ್ಮ ಮನೆಗೆ ಸರಿಯಾದ ಸೊಸೆ ಅಲ್ಲಾ ಅಂತ ಬೈದು ಹೊಡೆಬಡೆ ಮಾಡುತ್ತಿದ್ದರು. ನನ್ನ ಗಂಡ ಅಬ್ದುಲ್ ರಸೀದ್ ಈತನು ತನ್ನ ತಂದೆ ತಾಯಿ ಮತ್ತು ಅತ್ತಿಗೆಯರ ಮಾತು ಕೇಳಿ ನನಗೆ ಹೊಡೆಬಡೆ ಮಾಡುತ್ತಿದ್ದನು. ಇಷ್ಟೇಲ್ಲಾ ಆದರೂ ನಾನು ಸಹಿಸಿಕೊಂಡು ಬಂದಿರುತ್ತೇನೆ. ನಾನು ತವರು ಮನೆಗೆ ಬಂದಾಗ ನನ್ನ ಗಂಡನ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ನನ್ನ ತಂದೆ ಅಬ್ದುಲ್ ಹಮೀದ್ , ತಾಯಿ ನಜರೀನ್ ಖಾತೂನ್ ಹಾಗೂ ನನ್ನ ಅಣ್ಣನಾದ ಎಂ.ಡಿ ಅಬ್ದುಲ್ ರಹೆಮಾನ್ ಇವರಿಗೆ ನನ್ನ ಗಂಡ ಮತ್ತು ಗಂಡನ ಮನೆಯವರು ಇನ್ನೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರೇ ನಮ್ಮ ಮನೆಗೆ ಬರಬೇಡ ಅಂತ ಹೇಳಿ ಕಳುಹಿಸಿರುತ್ತಾರೆ ಅಂತ ವಿಷಯ ತಿಳಿಸಿದಾಗ ನನ್ನ ತಂದೆ ತಾಯಿಯವರು ಮತ್ತು ಸಮಾಜದವರಾದ ಆರೀಫ್ ಅಹಮದ್ ತಂದೆ ಶಬ್ಬೀರ್ ಪಟೇಲ್ , ಫಹೀದ್ ತಂದೆ ಖಾಜಾ ಹುಸೇನ್ ಮತ್ತು ಅಹಮದ್ ಸಲೀಮ್ ತಂದೆ ಡಿ.ಎ.ರಹೀಮ್ ಇವರೇಲ್ಲರೂ ಕೂಡಿ ನನ್ನ ಗಂಡ ಮತ್ತು ಗಂಡನ ಮನೆಯವರನ್ನು ಯಾದಗಿರಿಗೆ ಕರೆಯಿಸಿ ಈ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ನನಗೆ ಚೆನ್ನಾಗಿ ನೋಡಿಕೊಳ್ಳಲು ಬುದ್ದಿ ಮಾತು ಹೇಳಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಸ್ವಲ್ಪ ದಿನ ಚೆನ್ನಾಗಿ ನೋಡಿಕೊಂಡು ಪುನಃ ಅದೇ ರೀತಿ ನನ್ನ ಗಂಡ ಮತ್ತು ಗಂಡನ ಮನೆಯವರು ನಿನ್ನತವರು ಮನೆಯಿಂದ ಇನ್ನೂ 10 ತೊಲೆ ಬಂಗಾರ 5 ಲಕ್ಷ ರೂ ತೆಗೆದುಕೊಂಡು ಬಾ ನಾವು ಮನೆ ಕಟ್ಟುತ್ತಿದ್ದೇವೆ ಅಂತ ಹೇಳಿ ನನಗೆ ದಿನಾಲು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡುತ್ತಿದ್ದರು.ನಂತರ ನಾನು ಮೊದಲನೆ ಮಗುವಿಗೆ ಗರ್ಭೀಣಿಯಾಗಿದ್ದು, ನನಗೆ ಒಂದು ಹೆಣ್ಣು ಮಗು ಜನಿಸಿದ್ದು, ಆಕೆಯ ಹೆಸರು ಆಯಿಶಾ ಮೊಹಮದಿ ಅಂತ ಹೆಸರು ಇಟ್ಟಿದ್ದು, ನನ್ನ ಮಗಳನ್ನು ನೋಡಲು ಕೂಡ ನನ್ನ ಗಂಡ ಮತ್ತು ಗಂಡನ ಮನೆಯವರು ಬಂದಿರಲಿಲ್ಲಾ. ಹೆರಿಗೆಯಾದ 3 ತಿಂಗಳಲ್ಲಿ ನನ್ನ ಗಂಡ ಅಬ್ದುಲ್ ರಸೀದ್ ಇವರು ನಮ್ಮ ಮನೆಗೆ ಬಂದು ಗಲಾಟೆ ಮಾಡಿ ನನ್ನನ್ನು ವಾಡಿಗೆ ಕರೆದುಕೊಂಡು ಹೋಗಿರುತ್ತಾರೆ. ಪುನಃ ಅದೇ ರೀತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ನನ್ನ ಮಗಳಿಗೆ ಬರು ಬರುತ್ತಾ ಆಕೆಯ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಅವಳಿಗೆ ದವಾಖಾನೆಗೆ ತೋರಿಸಲು ಹಣವನ್ನು ನನ್ನ ಗಂಡ ಮತ್ತು ಆತನ ಮನೆಯವರು ಕೊಡುತ್ತಿರಲಿಲ್ಲಾ. ಇದೇ ರೀತಿ ಸುಮಾರು 5 ವರ್ಷಗಳ ವರಗೆ ಅವರು ಕೊಡುತ್ತಿದ್ದ ಕಿರುಕುಳವನ್ನು ನಾನು ಸಹಿಸಿಕೊಂಡು ಬಂದಿರುತ್ತೇನೆ. ನನಗೆ ಮದುವೆಯಲ್ಲಿ ಹಾಕಿದ ಬಂಗಾರ ಮತ್ತು ಬೆಳ್ಳಿಯ ಸಾಮನುಗಳು ನನಗೆ ಕೊಡದೇ ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾರೆ. ನನ್ನ ಗಂಡ ಅಬ್ದುಲ್ ರಸೀದ್ ಈತನು ರಮಜಾನ್ ಹಬ್ಬಕ್ಕೆ ಅಂತ ನನ್ನ ತವರು ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದನ್ನು. ದಿನಾಂಕ: 26.05.2022 ರಂದು ನನ್ನ ಗಂಡ ನಮ್ಮ ಮನೆಗೆ ಬಂದು ನನಗೆ ಹೊಡೆಬಡೆ ಮಾಡಿ ನೀನು ನನ್ನ ಸಂಗಡ ಬರಬೇಕು ಇಲ್ಲ ಅಂದರೆ ನಾನು ನಿನಗೆ ವಿಚೇದನೆ ಕೊಟ್ಟು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಹೋಗಿದ್ದನು. ನನ್ನ ಗಂಡ ಮತ್ತು ಅವರ ಮನೆಯವರು ಕೊಡುತ್ತಿದ್ದ ಕಿರುಕುಳದಿಂದ ಬೇಸತ್ತು ನಾನು ನನ್ನ ಮಗಳೊಂದಿಗೆ ತವರು ಮನೆಯಲ್ಲಿ ಇದ್ದೇನು. ನನ್ನ ಮಗಳಿಗೆ ದಿನೇ ದಿನೇ ಆರೋಗ್ಯ ಹದಗೆಡುತ್ತಿದ್ದರಿಂದ ಅವಳಿಗೆ ಅಸ್ಪತ್ರೆಗೆ ತೋರಿಸಲು ಒಂದು ನೈಯಾ ಪೈಸಾನು ಇಲ್ಲಿಯವರಗೆ ಕೊಟ್ಟಿರುವುದಿಲ್ಲ ನನ್ನ ತವರು ಮನೆಯವರೇ ಹಣ ಖರ್ಚು ಮಾಡಿರುತ್ತಾರೆ. ದಿನಾಂಕ: 05.07.2022 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಗಂಡನ ಮನೆಯವರು ಲುಂಬಿನ್ ಗಾರ್ಡನ ಹತ್ತಿರ ಇರುವ ನಮ್ಮ ಮನೆಗೆ ಬಂದು ನನಗೆ ಮನಬಂಧತೆ ಬೈದು ನೀನು ನಿನ್ನ ತವರು ಮನೆಯಿಂದ 10 ತೊಲೆ ಬಂಗಾರ ಮತ್ತು 5 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತ ಹೇಳಿದರೆ ನೀನು ಇಲ್ಲಿಯೇ ಕುಳಿತ್ತಿದ್ದಿ, ಅಂತ ಗಲಾಟೆ ಮಾಡಿ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನನ್ನ ತಂದೆ , ಮತ್ತು ನನ್ನ ಅಣ್ಣ ಬಿಡಿಸಿರುತ್ತಾರೆ. ನೀನು ನಮ್ಮ ಸಂಗಡ ಬರದೇ ಇದ್ದರೇ ನಮ್ಮ ಮಗನಿಗೆ ಇನ್ನೋಂದು ಮದುವೆ ಮಾಡುತ್ತೇವೆಂದು ಧಮಕಿ ಹಾಕಿ ನೀನು ವಾಡಿಗೆ ಬಾ ನಿನಗೆ ಜೀವ ಸಮೇತ ಬಿಡಲ್ಲಾ ಅಂತ ಪ್ರಾಣ ಬೆದರಿಕೆ ಹಾಕಿ ಕಿರುಕುಳ ನೀಡಿ ನಮ್ಮ ತಂದೆ ತಾಯಿ ಹಾಗೂ ನನ್ನ ಅಣ್ಣನಿಗೂ ಬೈದು ಹೋಗಿತ್ತಾರೆ. ಈ ರೀತಿ ನನಗೆ ಮದುವೆಯಾದಗಿನಿಂದ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ನನ್ನ ಗಂಡ 1] ಅಬ್ದುಲ್ ರಸೀದ್ ತಂದೆ ಶೇಖ್ ಜೈನೋದ್ದಿನ್ ಅತ್ತೆಯಾದ 2] ಮುಮತಾಜ್ ಬೇಗಂ ಗಂಡ ಶೇಖ್ ಜೈನೋದ್ದಿನ್ , ಮಾವನಾದ 3] ಶೇಖ್ ಜೈನೋದ್ದಿನ್ ತಂದೆ ಹುಸೇನ್ , ಭಾವನಾದ 4] ಶೇಖ್ ಮೈಹಿಬೂಬ್ ತಂದೆ ಶೇಖ್ ಜೈನೋದ್ದಿನ್ , ನೆಗೆಣಿಯಾದ 5] ಶೇಖ್ ನಾಜ್ಮಿನ್ ಸಲ್ಮಾ ಗಂಡ ಶೇಖ್ ಜೈನೋದ್ದಿನ್ , ಮೈದುನನಾದ 6] ಅಬ್ದುಲ್ ಹಮೀದ್ ತಂದೆ ಶೇಖ್ ಜೈನೋದ್ದಿನ್ ಮತ್ತು ಆತನ ಹೆಂಡತಿ ನೆಗೆಣಿಯಾದ 7] ತಬಸುಮ್ ಬೇಗಂ ಗಂಡ ಅಬ್ದುಲ್ ಹಮೀದ್ ರವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ: 43/2022 ಕಲಂ: 498(ಎ), 323, 504, 506+, ಸಂ/149 ಐ.ಪಿ.ಸಿ ಮತ್ತು ಕಲಂ: 3, 4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 126/2022 ಕಲಂ: 457, 380 ಐ.ಪಿ.ಸಿ: ಇಂದು ದಿನಾಂಕ 02/08/2022 ರಂದು 8.30 ಪಿಎಂ ಕ್ಕೆ ಅಜರ್ಿದಾರರಾದ ನರಸಪ್ಪ ತಂದೆ ಭೀಮಪ್ಪ ಗುಡ್ಲಾ ವ|| 28ವರ್ಷ ಉ|| ನಿಸಾ ಸೆಕ್ಯೂರಿಟಿ ಸುಪರವೈಸರ್ ಸಾ|| ಮಾದ್ವಾರ ತಾ|| ಗುರುಮಿಠಕಲ್ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಾನು ಸುಮಾರು 2ವರ್ಷದಿಂದ ಸೆಕ್ಯೂರಿಟಿ ಸುಪರವೈಸರ್ ಅಂತ ಕೆಲಸ ಮಾಡುತ್ತಿದ್ದೇನೆ. ದಿನಾಂಕ 29/07/2022 ರಂದು ಬೆಳಿಗ್ಗೆ 9.00 ಗಂಟೆಗೆ ಸೈಟ್ ಟೆಕನಿಷನ್ ಸೂಗಪ್ಪ ತಂದೆ ಗುರುನಾಥ ಸಾ|| ಖಾನಾಪೂರ(ಎಸ್.ಕೆ) ಮೊ.ನಂ 7760983358 ಇವರು ಮೇಲಿನ ನಮೂದಿಸಿದ ಸೈಟಗೆ ಭೇಟಿಕೊಟ್ಟು ತಿಳಿಸಿದ್ದೇನೆಂದರೆ, ಕೆಂಭಾವಿ ಗ್ರಾಮದಲ್ಲಿರುವ ಇಂಡಸ್ ಐಡಿ ನಂ 1046828 ಮತ್ತು ಸೈಟ ಐಡಿ ನಂ ಏಒಃಊಗಿ ನೇದ್ದರಲ್ಲಿಯ ಶೆಲ್ಟರ್ ಬೀಗ ಮುರಿದು ಯಾರೋ ಕಳ್ಳರು ಶೆಲ್ಟರನ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ರ್ಯಾಕನಲ್ಲಿ ಇಟ್ಟಿದ್ದ 24 ಬ್ಯಾಟರಿ ಬ್ಯಾಂಕ ಶೆಲಗಳನ್ನು ನಟಬೋಲ್ಟ ನಿಂದ ಬಿಚ್ಚಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಸೈಟ ಕಳೆದ 13/07/2022 ರಿಂದ ಸೈಟ ಸ್ವಿಚ್ ಆಫ್ ಆಗಿರುತ್ತದೆ. ನಾನು ಈ ಮೊದಲು ಅಂದರೆ ದಿನಾಂಕ 26/07/2022 ರಂದು ನೋಡಿದಾಗ ಶೆಲಗಳು ಇದ್ದವು ಅಂತ ಟೆಕನಿಷನ್ ತಿಳಿಸಿದನು. ನಾನು ದಿನಾಂಕ 29/07/2022 ರಂದು ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಬಂದು ಸೈಟ ನೋಡಿ ಪರಿಶೀಲಿಸಲಾಗಿ ಶೆಲ್ಟರನ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಯಾರೋ ಕಳ್ಳರು ರ್ಯಾಕನಲ್ಲಿ ಅಳವಡಿಸಿದ 24 ಶೆಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆ ದಿನಾಂಕ 28/07/2022 ಮತ್ತು 29/07/2022 ರ ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 4.00 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರಬಹುದು. ಸದರಿ 24 ಬ್ಯಾಟರಿ ಬ್ಯಾಂಕ ಶೆಲಗಳ ಅಂದಾಜು ಕಿಮ್ಮತ್ತು 80000/- ರೂ. ಗಳಾಗಬಹುದು. ಕಾರಣ ಈ ವಿಷಯದಲ್ಲಿ ಮಾನ್ಯರವರು ಕಾನೂನು ಪ್ರಕಾರ ಕ್ರಮ ಕೈಗೊಂಡು ಕಳವು ಆಗಿರುವ 24 ಶೆಲಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 126/2022 ಕಲಂ 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ:143, 323, 109, 498(ಎ), 494, 355, 504, 506 ಸಂ.149 ಐಪಿಸಿ: ಫಿರ್ಯಾದಿಯು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದರ ಸಾರಾಂಶವೆನೆಂದರೇ, ಈಗೆ 6 ವರ್ಷಗಳ ಹಿಂದೆ ನನ್ನ ತಂದೆಯ ತಂಗಿಯ ಮಗನಾದ ಕಾಮನಟಗಿ ಗ್ರಾಮದ ರಮೇಶ ತಂದೆ ಕಂಠೆಪ್ಪ ಹೊಸಕೇರಿ ಈತನೊಂದಿಗೆ ನನಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮಗೆ 2ಜನ ಹೆಣ್ಣು ಮಕ್ಕಳು ಇರುತ್ತಾರೆ. ಮದುವೆಯಾದ 3ವರ್ಷಗಳ ವರೆಗೆ ನನಗೆ ಸರಿಯಾಗಿ ಇಟ್ಟುಕೊಂಡು ನಂತರ ನನಗೆ ನನ್ನ ಅತ್ತೆ ಕರಿಯಮ್ಮ, ಮಾವ ಕಂಠೆಪ್ಪ, ಬಾವ ಪ್ರಕಾಶ & ನಾದಿನಿಯಾದ ಲಕ್ಷ್ಮೀ ಹಾಗೂ ನನ್ನ ಗಂಡ ಕೂಡಿ ನನಗೆ, ನಿನಗೆ ಗಂಡು ಮಕ್ಕಳಾಗಿಲ್ಲ. ಬರೆ ಹೆಣ್ಣು ಮಕ್ಕಳನ್ನು ಹಡೆಯುತ್ತಿ ಅಂತಾ ಕಿರುಕುಳ ಕೊಡುವದು & ನನ್ನ ಗಂಡನಿಗೆ ಇಲ್ಲದ್ದು ಹೇಳಿ ನನ್ನ ಅತ್ತೆ ಮಾವ ಬಾವ, ನಾದಿನಿ ಕೂಡಿ ಹೊಡೆಬಡೆ ಮಾಡಿಸುವದು ಮಾಡಲು ಪ್ರಾರಂಬಿಸಿದ್ದು, ಆದರೂ ಸಹ ನಾನು ನನ್ನ ಗಂಡನು ನನ್ನ ಸೋದರ ಅತ್ತೆಯ ಮಗನು ಅಂತಾ ಸುಮ್ಮನಿರುತ್ತಿದ್ದೆನು. ನಂತರ ಈಗೆ 1ವರ್ಷದ ಹಿಂದೆ ನನಗೆ ನನ್ನ ಅತ್ತೆ ಕರಿಯಮ್ಮ ಗಂಡ ಕಂಠೆಪ್ಪ, ಮಾವ ಕಂಠೆಪ್ಪ ತಂದೆ ನಾಗಪ್ಪ, ಬಾವ ಪ್ರಕಾಶ ತಂದೆ ಕಂಠೆಪ್ಪ & ನಾದಿನಿಯಾದ ಲಕ್ಷ್ಮೀ ಗಂಡ ಅಶೋಕ ಕುರಿ ಇವಳಿಗೆ ಕೊಳಿಹಾಳ ಗ್ರಾಮಕ್ಕೆ ಕೊಟ್ಟಿದ್ದು, ಇವಳು ಸಹ ಬಂದಿದ್ದು ಅಲ್ಲದೆ ನನ್ನ ತಂದೆಯ ತಾಯಿಯಾದ (ಅಜ್ಜಿ) ನೀಂಗಮ್ಮ ಗಂಡ ಮುದಿಗೌಡ ಹಸನಕಲ್ ಸಾ:ಇರಕಲ್ ಹಾಗೂ ರಾಜಶೇಖರ ತಂದೆ ಮುದಿಗೌಡ ಸಾ:ಇರಕಲ್, ಶೇಖಪ್ಪ ತಂದೆ ಜಟ್ಟೆಪ್ಪ ಸಾ:ಕಾಮನಟಗಿ ಹಾ:ವ:ಗೊರಬಾಳ ತಾ:ಲಿಂಗಸೂಗುರ ಎಲ್ಲರೂ ಕೂಡಿ ನನ್ನ ಗಂಡನಿಗೆ ಇಲ್ಲ ಸಲ್ಲದ್ದು ಹೇಳಿ ಹೊಡೆಬಡೆ ಮಾಡಿಸಿದ್ದು, ನಂತರ ಮರುದಿನ ನಮ್ಮೂರಿನಿಂದ ನನ್ನ ತಾಯಿ-ತಂದೆಗೆ ಕರೆಯಿಸಿದ್ದು, ಊರಲ್ಲಿ ನ್ಯಾಯ ಪಂಚಾಯತಿ ಮಾಡಿದ್ದು, ಆ ಸಮಯದಲ್ಲಿ ನಮ್ಮೂರಿನ ಮಲ್ಲಣ್ಣ ತಂದೆ ರಾಮಣ್ಣ ದೇಸಾಯಿ, ತಿಪ್ಪಣ್ಣ ತಂದೆ ಭೀಮರಾಯ ಬರಿಗಲ್, ಜಟ್ಟೆಪ್ಪ ತಂದೆ ನಾಗಪ್ಪ ಹೊಸಕೇರಿ, ಹಾಗೂ ಬಲಶೆಟ್ಟಿಹಾಳದ ಟಿಪ್ಪು ಸುಲ್ತಾನ ಇವರೆಲ್ಲರೂ ಕೂಡಿ ನ್ಯಾಯ ಪಂಚಾಯತಿ ಮಾಡಿ ನನ್ನ ಗಂಡ & ಅತ್ತೆ ಮಾವ ಬಾವ ನಾದಿನಿ ಇವರಿಗೆ ತಿಳಿಸಿ ಹೇಳಿದ್ದು, ಅಲ್ಲದೆ ನನಗೆ ಹೊಲದಲ್ಲಿ ಮನೆಯಲ್ಲಿ ಸಮನಾಗಿ ಪಾಲು ಕೊಡಲು ತಿಳಿಸಿದ್ದು ಅದಕ್ಕೆ ಎಲ್ಲರೂ ಒಪ್ಪಿದ್ದು ಇರುತ್ತದೆ. ನಂತರ ನನಗೆ ಯಾವುದೇ ಹೊಲ ವಗೈರೆ ಕೊಡದೆ ಮತ್ತೆ ನನ್ನೊಂದಿಗೆ ಜಗಳ ತೆಗೆದು ದಿನಾಂಕ:20/05/2021 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಮೇಲ್ಕಂಡ ಜನರು ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲದೆ ಅತ್ತೆ, ಮಾವ, ಬಾವ, ಇವರು ನನ್ನ ತಲೆಯ ಕೂದಲು ಹಿಡಿದು ಎಳೆದಾಡಿದ್ದು, ನನ್ನ ನಾದಿನಿಯಾದ ಲಕ್ಷ್ಮೀ ಇವಳು ಚಪ್ಪಲಿಯಿಂದ ಹೊಡೆದಿದ್ದು ಇರುತ್ತದೆ. ಹಾಗೂ ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದಾಡುವದು ಮಾಡಿದ್ದು ಮತ್ತು ನೀನು ಇಲ್ಲಿದ್ದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ನನಗೆ ಜೀವ ಬೆದರಿಕೆ ಹಾಕಿದ್ದರಿಂದ ಅವರ ಕಿರುಕುಳ ತಾಳದೆ ಅವರಿಗೆ ಅಂಜಿ ನಾನು ಈಗ ಒಂದು ವರ್ಷದ ಹಿಂದೆ ಅಂದರೆ ದಿನಾಂಕ:21/05/2021 ರಂದು ಬೆಳಿಗ್ಗೆ ಎದ್ದು ನಾನು ನನ್ನ ತವರು ಮನೆಯಾದ ಇರಕಲ್ಗೆ ನನ್ನ ಮಕ್ಕಳೊಂದಿಗೆ ಹೋಗಿದ್ದು ಇರುತ್ತದೆ. ನನ್ನ ಗಂಡನಿಗೆ ಈಗೆ 20-25 ದಿವಸಗಳ ಹಿಂದೆ ಅಂದರೆ 6, 7-07-2022 ರಂದು ನನ್ನ ಅತ್ತೆ ಮಾವ ಭಾವ & ನಮ್ಮ ನಾದಿನಿಯಾದ ಲಕ್ಷ್ಮೀ ಗಂಡ ಅಶೋಕ ಕುರಿ ಸಾ:ಕೊಳಿಹಾಳ ನನ್ನ ಬಾವ ಪ್ರಕಾಶ ಈತನ ಹೆಂಡತಿಯ ತವರು ಮನೆ ಯಡಿಯಾಪೂರ ಗ್ರಾಮ ಇದ್ದು, ನೆಗೆಣಿಯ ಅಣ್ಣನಾದ ಸಿದ್ದಪ್ಪ ತಂದೆ ಗದಿಗೆಪ್ಪ, ಮಲ್ಲಣ್ಣ ತಂದೆ ಗದಿಗೆಪ್ಪ ಸಾ:ಇಬ್ಬರೂ ಯಡಿಯಾಪುರ ಇವರೆಲ್ಲರೂ ಕೂಡಿ ಯಡಿಯಾಪೂರದ ಹೆಣ್ಣು ತೆಗೆದು ನನ್ನ ಗಂಡನಿಗೆ 2 ನೇ ಮದುವೆ ಮಾಡಿದ್ದು ಗೊತ್ತಾಗಿದ್ದು ಇರುತ್ತದೆ. ಕಾರಣ ನನಗೆ ಗಂಡು ಮಕ್ಕಳು ಆಗಿರುವದಿಲ್ಲ ಅಂತಾ ಮಾನಸಿಕವಾಗಿ & ದೈಹಿಕವಾಗಿ ಹಿಂಸೆ ಕೊಟ್ಟು ಹೊಡೆಬಡೆ ಮಾಡಿದ್ದು, ನಾನು ನನ್ನ ತವರು ಮನೆಗೆ ಹೋದಾಗ ನನ್ನ ಗಂಡನಿಗೆ 2ನೇ ಮದುವೆ ಮಾಡಿದ ಮಾವ ಕಂಠೆಪ್ಪ ತಂದೆ ನಾಗಪ್ಪ ಹೊಸಕೇರಿ, ಅತ್ತೆ ಕರೆಮ್ಮ ಗಂಡ ಕಂಠೆಪ್ಪ ಹೊಸಕೇರಿ, ಬಾವ ಪ್ರಕಾಶ ತಂದೆ ಕಂಠೆಪ್ಪ ಹೊಸಕೇರಿ, ನಾದಿನಿ ಲಕ್ಷ್ಮೀ ಗಂಡ ಅಶೋಕ ಕುರಿ, ಮತ್ತು ಯಡಿಯಾಪೂರದ ಸಿದ್ದಪ್ಪ ತಂದೆ ಗದಿಗೆಪ್ಪ, ಮಲ್ಲಣ್ಣ ತಂದೆ ಗದಿಗೆಪ್ಪ ಇವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.



ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ 379 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನಾನು ಕಳೆದ 10-12 ವರ್ಷಗಳಿಂದ ಯಾದಗಿರಿಯ ಅಂಕಿತ ಆಸ್ಪತ್ರೆಯಲ್ಲಿ ದವಾಖಾನೆಯ ಉಸ್ತುವಾರನಾಗಿ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ವೈದ್ಯರಾದ ವೈಜನಾಥ ತಂದೆ ಈಶ್ವರಪ್ಪ ದುಗ್ಗಾಣಿಕರ್ ಇವರ ಹೆಸರಿನ ಮೇಲೆ ಒಂದು ಹೊಂಡಾ ಡ್ರೀಮ್ ಮೋಟರ್ ಸೈಕಲ್ ನಂ ಏಂ 33 ಕಿ 0654 ಅಂತಾ ಇದ್ದು, ಅದರ ಇಟಿರಟಿಜ ಓಠ-ಎಅ58ಇಃ81288739, ಅಊಂಖಖಖ ಓಔ-ಒಇ4ಎಅ583ಇಆ8290307, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 35,000/-ರೂ|| ಗಳು ಈ ಮೋಟರ್ ಸೈಕಲ್ ದವಾಖಾನೆ ಕೆಲಸಕ್ಕೆಂದು ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ನಾನು ದಿನಾಂಕ 28/07/2022 ರಂದು ನಮ್ಮ ಗೆಳೆಯ ಉದಯಕುಮಾರ ತಂದೆ ಕೃಷ್ಣಪ್ಪ ಇವರ ಹುಟ್ಟು ಹಬ್ಬ ಇದ್ದ ಕಾರಣ ಈ ಮೇಲೆ ನಮೂದು ಮಾಡಿದ ಮೋಟರ್ ಸೈಕಲ್ ತೆಗೆದುಕೊಂಡು ರಾತ್ರಿ 10-00 ಗಂಟೆಗೆ ಚಿರಂಜೀವಿ ನಗರದಲ್ಲಿ ಇರುವ ನನ್ನ ಗೆಳೆಯನ ಮನೆಗೆ ಹೋಗಿ ಅವರ ಮನೆ ಮುಂದೆ ನನ್ನ ಮೋಟರ್ ಸೈಕಲ್ ನಿಲ್ಲಿಸಿ ಅವರ ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 29/07/2022 ರಂದು ಬೆಳಿಗ್ಗೆ 07-00 ಗಂಟೆಗೆ ನಾನು ನನ್ನ ಗೆಳೆಯ ಉದಯಕುಮಾರ ಇಬ್ಬರು ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಮನೆಯ ಅಕ್ಕ ಪಕ್ಕದಲ್ಲಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಅಲ್ಲಿ ಅಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 91/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 92/2022 ಕಲಂ 379 ಐಪಿಸಿ: ಫಿಯರ್ಾದಿ ಸಾರಾಂಶವೇನೆಂದರೆ, ನಾನು ಹುಲಕಲ್ ಗ್ರಾಮದ ಬಸಪ್ಪ ತಂದೆ ಹಣಮಂತ ಇವರ ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಏಂ 33 ಖ 9937, ಇಟಿರಟಿಜ ಓಠ-ಊಂ10ಇಖಿಈಊಆ13666, ಅಊಂಖಖಖ ಓಔ-ಒಃಐಊಂ10ಃಎಈಊಆ13415, ಅಂತಾ ಇದ್ದದ್ದು ನಾನು 02 ವರ್ಷಗಳ ಹಿಂದೆ ಖರೀದಿ ಮಾಡಿದ್ದು ಇನ್ನೂ ನನ್ನ ಹೆಸರಿಗೆ ನೊಂದಣಿ ಮಾಡಿಕೊಂಡಿರುವುದಿಲ್ಲ. ಈ ಮೋಟರ್ ಸೈಕಲ್ ಈಗ ಸದ್ಯ ನಾನು ಮೋಟರ್ ಸೈಕಲ್ ಉಪಯೋಗ ಮಾಡುತ್ತಿದ್ದೆನು. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 25,000/-ರೂ|| ಗಳು. ಹೀಗಿದ್ದು ನಾನು ದಿನಾಂಕ 02/07/2022 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಪ್ರತಿ ನಿತ್ಯದಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿ, ಮನೆಯಲ್ಲಿ ಉಳಿದುಕೊಂಡಿದ್ದು, ದಿನಾಂಕ 03/07/2022 ರಂದು ಬೆಳಿಗ್ಗೆ 09-00 ಗಂಟೆಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನನ್ನ ಗೆಳೆಯನಾದ ಮಂಜುನಾಥ ತಂದೆ ಶಂಕ್ರೆಪ್ಪ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಇಬ್ಬರು ಕೂಡಿ ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಅಲ್ಲಿ ಅಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 92/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 03-08-2022 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080