ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-09-2021
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 135/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕಃ 02/09/2021 ರಂದು 2-15 ಪಿ.ಎಮ್ ಕ್ಕೆ ಶ್ರೀ ಶಿವರಾಜ ತಂದೆ ನಾಗಪ್ಪ ಹೂಗಾರ ಸಾ: ಬೇವಿನಾಳ ಎಸ್.ಹೆಚ್, ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಚಂದ್ಲಾಪೂರ ಸಿಮಾಂತರದಲ್ಲಿ ನಮ್ಮ ಹೊಲ ಇರುವದರಿಂದ ಚಂದ್ಲಾಪೂರ ಗ್ರಾಮದಲ್ಲಿ ಸಹ ನಾವು ಮನೆ ಮಾಡಿದ್ದು, ನಮ್ಮ ದನಕರುಗಳನ್ನು ಅಲ್ಲೆ ಕಟ್ಟುತ್ತೇವೆ. ದಿನಾಂಕಃ 19/08/2021 ರಂದು ರಾತ್ರಿ ನಾವು ಮನೆಯಲ್ಲಿ ಊಟ ಮಾಡಿದ ಬಳಿಕ ನಾನು ಮತ್ತು ನನ್ನ ತಂದೆಯಾದ ನಾಗಪ್ಪ ತಂದೆ ಶಿವಣ್ಣ ಹೂಗಾರ ವಯಃ 60 ವರ್ಷ ಇಬ್ಬರೂ ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಮುಖ್ಯರಸ್ತೆಯ ಮುಖಾಂತರ ರಸ್ತೆಯ ಎಡಭಾಗದಲ್ಲಿ ನಡೆಯುತ್ತ ಚಂದಲಾಪೂರ ಗ್ರಾಮದಲ್ಲಿರುವ ನಮ್ಮ ಮನೆಗೆ ಮಲಗಲು ಹೊರಟಿದ್ದೇವು. ನಾವು ರಾತ್ರಿ 9-00 ಗಂಟೆಯ ಸುಮಾರಿಗೆ ಬೇವಿನಾಳ ಸಿಮಾಂತರದಲ್ಲಿ ಬರುವ ಸೇತುವೆ ದಾಟಿ ದಖನಿಯವರ ಹೊಲದ ಹತ್ತಿರ ಹೊರಟಿದ್ದಾಗ ಹಿಂದಿನಿಂದ ಅಂದರೆ ಬೇವಿನಾಳ ಕಡೆಯಿಂದ ರಾಜು ತಂದೆ ಹಣಮಂತ ಜಾತಿಃ ಬೇಡರು ಸಾ: ಚಂದ್ಲಾಪೂರ ಇತನು ಮೋಟಾರ ಸೈಕಲ್ ನಂಬರ ಕೆ.ಎ 33 ಕೆ 7435 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ತಂದೆಯವರಿಗೆ ಹಿಂದಿನಿಂದ ಜೋರಾಗಿ ಡಿಕ್ಕಿಪಡಿಸಿ, ಮೋಟಾರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಆತನು ಡಿಕ್ಕಿಹೊಡೆದ ರಭಸಕ್ಕೆ ನಮ್ಮ ತಂದೆಯವರು ಮುಂದೆ ಬೋರಲಾಗಿ ರಸ್ತೆಯ ಮೇಲೆ ಬಿದ್ದರು. ಆಗ ನಾನು ಮತ್ತು ನಮ್ಮೂರಿನ ಮಲ್ಲಿಕಾಜರ್ುನ, ಅಂಬ್ರೇಶ ಹಾಗು ಸುಗೂರ ಗ್ರಾಮದ ರಮೇಶ, ಬಸವರಾಜ ಮತ್ತು ರಾಮಪ್ಪ ಎಲ್ಲರೂ ನೋಡಿ ನಮ್ಮ ತಂದೆಯವರಿಗೆ ಹಾಗು ರಾಜು ಇಬ್ಬರಿಗೆ ಎಬ್ಬಿಸಿದೇವು. ಆಗ ನಮ್ಮ ತಂದೆಯವರಿಗೆ ನೋಡಲಾಗಿ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಮೂಗಿನ ಮೇಲೆ, ಬಾಯಿಗೆ, ಎರಡು ಮೊಣಕೈಗಳಿಗೆ, ಮೊಣಕಾಲುಗಳಿಗೆ ಹಾಗು ಬೆರಳುಗಳಿಗೆ ತರಚಿದ ಗಾಯಗಳಾಗಿ, ಮೂಗು ಮತ್ತು ಕಿವಿಯಿಂದ ರಕ್ತಸ್ರಾವ ಆಗುತ್ತಿತ್ತು. ಆಗ ನಾನು ನನ್ನ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನನ್ನ ಅಣ್ಣ ಹಣಮಂತ್ರಾಯ ಹಾಗು ನನ್ನ ತಾಯಿಯಾದ ಅನ್ನಪೂರ್ಣ ಇಬ್ಬರೂ ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಿದರು. ಆಗ ರಾಜು ಇತನು ತನ್ನ ಮೋ.ಸೈಕಲ್ ಸಮೇತ ಚಂದ್ಲಾಪೂರ ಕಡೆಗೆ ಹೋದನು. ಬಳಿಕ ನಾವು ನಮ್ಮ ತಂದೆಯವರಿಗೆ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಗೆದುಕೊಂಡು ಬಂದು ಪ್ರಥಮೋಪಚಾರ ಮಾಡಿಸಿಕೊಂಡು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಯುನೈಟೆಡ್ ಆಸ್ಪತ್ರೆಯಲ್ಲಿ ನಮ್ಮ ತಂದೆಯವರು ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 02/09/2021 ರಂದು 9-42 ಎ.ಎಮ್ ಕ್ಕೆ ಮೃತಪಟ್ಟಿರುತ್ತಾರೆ. ಆದ್ದರಿಂದ ನಾವು ನಮ್ಮ ತಂದೆಯವರ ಮೃತದೇಹವನ್ನು ಅಲ್ಲಿಂದ ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಶವಾಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ಅಪಘಾತ ಪಡಿಸಿದ ರಾಜು ತಂದೆ ಹಣಮಂತ ಸಾ: ಚಂದ್ಲಾಪೂರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 135/2021 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 136/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕಃ 02/09/2021 ರಂದು 5-15 ಪಿ.ಎಮ್ ಕ್ಕೆ ಶ್ರೀ ಗುರುರಾಜ ತಂದೆ ಚಂದ್ರಕಾಂತ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ನಾನು ಮತ್ತು ನನ್ನ ಅಣ್ಣನಾದ ಶ್ರೀನಿವಾಸ ತಂದೆ ಚಂದ್ರಕಾಂತ ಇನಾಮದಾರ ಇಬ್ಬರೂ ಸುರಪೂರದಿಂದ ಬೈಚಬಾಳ ಗ್ರಾಮಕ್ಕೆ ನಮ್ಮೂರಿನ ಭೀಮನಗೌಡ ತಂದೆ ಹಣಮಂತರಾಯ ಪೊಲೀಸಪಾಟೀಲ್ ಇವರ ಅಟೋರಿಕ್ಷಾ ನಂಬರ ಕೆ.ಎ 33 ಎ 1231 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದಾಗ ಕುಂಬಾರಪೇಟದಿಂದ ಬೈಚಬಾಳ ಕಡೆಗೆ ಹೋಗುವ ರಸ್ತೆಯ ಮೇಲೆ ಅಟೋರಿಕ್ಷಾ ಚಾಲಕನು ತನ್ನ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದಾಗ 4-00 ಪಿ.ಎಮ್ ಸುಮಾರಿಗೆ ನರಸಿಂಗಪೇಟ ದಾಟಿ ಬರುವ ಹೌಸಿಂಗ್ ಬೋರ್ಡ ಕಾಲೋನಿ ಸಮೀಪ ಎದರುಗಡೆಯಿಂದ ಹೊರಟಿದ್ದ ಒಂದು ಬಿಳಿಬಣ್ಣದ ಜೀಪಿಗೆ ಸೈಡ್ ಕೊಡುವ ಸಲುವಾಗಿ ಒಮ್ಮೆಲೆ ಬಲಕ್ಕೆ ತಿರುಗಿಸಿದಾಗ ಅಟೋರಿಕ್ಷಾ ಆತನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಪಲ್ಟಿಯಾಗಿದ್ದರಿಂದ ಒಳಗಡೆ ಕುಳಿತಿದ್ದ ಫಿಯರ್ಾದಿಯ ಅಣ್ಣನಿಗೆ ಹಣೆಯ ಮೇಲೆ, ಎಡಗಣ್ಣಿನ ಹತ್ತಿರ, ಬಾಯಿಯ ಬಲಭಾಗ, ಬಲಮುಂಡಿಗೆ ಬಲಗಣ್ಣಿನ ಪಕ್ಕ, ಎಡಪಕ್ಕಡಿಗೆ, ಎದೆಯ ಮೇಲೆ, ಬೆನ್ನಿಗೆ ರಕ್ತಗಾಯಗಳಾಗಿ, ಮೂಗಿನಿಂದ ರಕ್ತಸ್ರಾವ ಆಗಿ 4-10 ಪಿ.ಎಮ್ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಬಳಿಕ ಚಾಲಕನು ಅಟೋರಿಕ್ಷಾ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 136/2021 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 121/2021 ಕಲಂ 78(3) ಕೆ.ಪಿ. ಆ್ಯಕ್ಟ : ದಿನಾಂಕ 02/09/2021 ರಂದು ಸಾಯಂಕಾಲ 5-00 ಪಿ.ಎಮ್ ಕ್ಕೆ ಆರೋಪಿತನು ಹಳಗೇರಾ ಗ್ರಾಮದಲ್ಲಿ ಇರುವ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಾ ಮಟಕಾ ನಂಬರಗಳು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 600/ರೂ ಮತ್ತು ಒಂದು ಮಟಕಾ, ಒಂದು ಬಾಲ ಪೆನ್ನ ಚೀಟಿ ಜಪ್ತಿ ಮಾಡಿಕೊಂಡಿದ್ದು ಅಂತಾ ಕ್ರಮ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 137/2021, ಕಲಂ. 323,354, 504.506. ಸಂ.149 ಐ ಪಿ ಸಿ : ದಿನಾಂಕ: 02-09-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 26-08-2021 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ನನ್ನ ಮಗಳು ಮನೆಯ ಮುಂದಿನ ನಳದಿಂದ ನೀರು ತರುತ್ತಿರುವಾಗ ಆರೋಪಿತರೆಲ್ಲರು ಕೂಡಿಕೊಂಡು ಬಂದು ಲೇ ಸುಳೆ ಮಗಳೆ ನಿಮ್ಮದು ಸೋಕ್ಕು ಬಹಳ ಆಗಿದೆ ಯಾವಾಗ ನೋಡಿದರು ನಳದ ನೀರಿಗೆ ಜಗಳ ಮಾಡುತ್ತಿರಿ ಬೋಸಡಿ ರಂಡಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳದಾಡಿ ಅವಮಾನ ಮಾಡಿ ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ ಬಗ್ಗೆ.
ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 114/2021 ಕಲಂ: 447, 504, 323 ಸಂ 34 ಐಪಿಸಿ : ದಿನಾಂಕ: 02/09/2021 ರಂದು 2-45 ಪಿಎಮ್ ಕ್ಕೆ ಶ್ರೀ ಚನ್ನಾರೆಡ್ಡಿ ತಂದೆ ಬಸವರಾಜಪ್ಪಗೌಡ ಬಸವರೆಡ್ಡಿ, ವ:62, ಜಾ:ಲಿಂಗಾಯತ, ಉ:ಒಕ್ಕಲುತನ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಹೊಲ ಸವರ್ೆ ನಂ. 113/4 ಮತ್ತು 113/3 ನೇದ್ದರ ಮಾಲಿಕ ಮತ್ತು ಕಬ್ಜೆದಾರನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಅಣ್ಣತಮ್ಮಕೀಯ ಅಮೀನರೆಡ್ಡಿ ತಂದೆ ಸೋಮಪ್ಪ ಬಸರೆಡ್ಡಿ ಮತ್ತು ಅವನ ಮಗ ಮಲ್ಲಣ್ಣಗೌಡ ಹಾಗೂ ಅವರ ಸಂಬಂಧಿಕ ಅಯ್ಯಣ್ಣಗೌಡ ತಂದೆ ಬಸವರಾಜ ಇವರುಗಳು ನನ್ನ ಮೇಲ್ಕಂಡ ಹೊಲದ ಹದ್ದಬಸ್ತನ್ನು ಕೆಡಿಸುವುದು, ನನ್ನ ಹೊಲ ಒತ್ತುವರಿ ಮಾಡುವುದು, ನನ್ನೊಂದಿಗೆ ಜಗಳ ಮಾಡುತ್ತಾ ಬರುತ್ತಿದ್ದಾರೆ. ಆದರೂ ನಾನು ಅವರೊಂದಿಗೆ ಯಾವುದೇ ತಕರಾರು ಮಾಡದೆ ನನ್ನ ಪಾಡಿಗೆ ನಾನು ಹೊಲ ಮನೆ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ:05/08/2021 ರಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ನಾನು ನನ್ನ ಹೊಲ ಸವರ್ೆ ನಂ. 113/3 ಮತ್ತು 113/4 ನೇದ್ದರಲ್ಲಿ ಟ್ರ್ಯಾಕ್ಟರದಿಂದ ಹೊಲ ಉಳುಮೆ ಮಾಡಿಸುತ್ತಿದ್ದಾಗ 1) ಅಮೀನರೆಡ್ಡಿ ತಂದೆ ಸೊಮ್ಮಪ್ಪ ಬಸರೆಡ್ಡಿ, 2) ಮಲ್ಲಣ್ಣಗೌಡ ತಂದೆ ಅಮೀನರೆಡ್ಡಿ ಬಸರೆಡ್ಡಿ ಮತ್ತು 3) ಅಯ್ಯಣ್ಣಗೌಡ ತಂದೆ ಬಸವರಾಜ ಶಾಂತವೀರ ಎಲ್ಲರೂ ಸಾ:ಗುರುಸಣಗಿ ಇವರೆಲ್ಲರೂ ಸೇರಿ ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನ ಹೊಲ ಉಳುಮೆ ಮಾಡುವುದನ್ನು ನಿಲ್ಲಿಸಿ, ನನಗೆ ಅವಾಚ್ಯ ಬೈದು ಅಮೀನರೆಡ್ಡಿ ಮತ್ತು ಅಯ್ಯಣ್ಣಗೌಡ ಇಬ್ಬರೂ ನನಗೆ ಹಿಡಿದುಕೊಂಡಾಗ ಮಲ್ಲಣ್ಣಗೌಡ ಈತನು ಕೈ ಮುಷ್ಠಿ ಮಾಡಿ, ಮುಖಕ್ಕೆ, ಹೊಟ್ಟೆಗೆ ಗುದ್ದಿದ್ದನು. ಮಗನೆ ಈ ಹೊಲ ಉಳುಮೆ ಮಾಡಬೇಡ ಅಂದರು ಉಳುಮೆ ಮಾಡುತ್ತಿದ್ದಿಯಾ ನಿನ್ನ ಸೊಕ್ಕು ಜಾಸ್ತಿಯಾಗಿದೆ ಸೊಕ್ಕು ಮುರಿಯುತ್ತೇವೆ ಎಂದು ಜಗಳ ತೆಗೆದು ಕೈಯಿಂದ ಹೊಡೆದಿರುತ್ತಾರೆ. ಆಗ ಟ್ರ್ಯಾಕ್ಟರ ಚಲಾಯಿಸುತ್ತಿದ್ದ ಅಯ್ಯಪ್ಪ ತಂದೆ ಮರಿಲಿಂಗಪ್ಪ ವಾಗಣಗೇರಿ ಸಾ:ತಡಿಬಿಡಿ ಮತ್ತು ಅಲ್ಲಿಯೇ ಇದ್ದ ನಮ್ಮೂರ ಇಮಾಮಸಾಬ ತಂದೆ ನಬಿಸಾಬ ಬಳಗಾರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 114/2021 ಕಲಂ: 447, 323, 504 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.