ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-09-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 78 (3) ಕೆ.ಪಿ ಯಾಕ್ಟ: ದಿನಾಂಕ:02/09/2022 ರಂದು 12.30 ಪಿ.ಎಮ್ ಕ್ಕೆ, ಶ್ರೀ. ಮಾಣಿಕರೆಡ್ಡಿ ಎಎಸ್ಐ ಹುಣಸಗಿ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:70/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.ನಂತರ ಪಿಎಸ್ಐ ಸಾಹೇಬರು ರವರು 19.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1275/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ 19.45 ಪಿ.ಎಮ್ ಕ್ಕೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತನ ಹೆಸರು ಮರೆಪ್ಪ ತಾಯಿ ಹಣಮವ್ವ ಹರಿಜನ ವಯಾ-45 ವರ್ಷ, ಜಾ:ಪ.ಜಾತಿ (ಹಿಂದೂ ಹೊಲೆಯ) ಉ:ಮಟಕಾ ಬರೆಯುವದು ಸಾ:ಯಡಹಳ್ಳಿ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 02/09/2022 ರಂದು 2:10 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಸುನೀಲ್ ಮೂಲಿಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 02/09/2022 ರಂದು 11:30 ಎಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ದಾಳ ಗ್ರಾಮದ ಕೆಂಚಮ್ಮ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427 ಹಾಗೂ ಬೀಟ್ ಸಿಬ್ಬಂದಿಯಾದ 2) ಬೀರಪ್ಪ ಸಿಪಿಸಿ-195 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಬಸವರಾಜ ತಂದೆ ಸಿದ್ದಣ್ಣ ಎಳಿಮೇಲಿ ವ|| 36 ಜಾ|| ಕುರುಬ ಉ|| ಒಕ್ಕಲುತನ ಸಾ|| ಆಲ್ದಾಳ ತಾ|| ಸುರಪೂರ, 2) ಶ್ರೀ ಲಕ್ಷ್ಮಣ ತಂದೆ ಬಂಗಾರೆಡ್ಡಿ ಕಟ್ಟಿಮನಿ ವ|| 34 ವರ್ಷ ಜಾ|| ಮಾದಿಗ ಉ|| ಕೂಲಿ ಕೆಲಸ ಸಾ|| ಆಲ್ದಾಳ ತಾ|| ಸುರಪುರ ಇವರನ್ನು 12 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0238 ನೇದ್ದರಲ್ಲಿ ಹೊರಟು 12:45 ಪಿ.ಎಮ್ ಕ್ಕೆ ಆಲ್ದಾಳ ಗ್ರಾಮದ ಕೆಂಚಮ್ಮನ ಗುಡಿಯ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಕೆಂಚಮ್ಮ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12:50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಮುದುಕಪ್ಪ ತಂದೆ ಲಾಲಪ್ಪ ಚಿನ್ನಕಾರ ವ|| 25 ವರ್ಷ ಜಾ|| ಹಡಪದ ಉ|| ಕಟಿಂಗ್ ಶಾಪ್ ಸಾ|| ಆಲ್ದಾಳ ತಾ|| ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 920=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12:50 ಪಿ.ಎಮ್ ದಿಂದ 1:50 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಜರುಗಿಸಬೇಕು ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 130/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 38/2022 ಕಲಂ 279, 338 ಐಪಿಸಿ: ಇಂದು ದಿನಾಂಕ 02/09/2022 ರಂದು ಸಮಯ 10-30 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ನಬೀಲಾಲ್ ತಂದೆ ಅಬ್ದುಲ್ ರಹೀಮ ಚುನ್ನುಮಿಯಾ ಪಾನವಾಲೆ ವಯ;30 ವರ್ಷ, ಜಾ;ಮುಸ್ಲಿಂ, ಉ;ಕಾರ್ ಚಾಲಕ, ಸಾ;ಮದನಪುರ ಗಲ್ಲಿ, ಬಿಲಾಲ್ ಮಜೀದಿ ಹತ್ತಿರ, ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 01/09/2022 ರಂದು ರಾತ್ರಿ 11 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನಮ್ಮ ತಂದೆ-ತಾಯಿಗೆ ಒಟ್ಟು ನಾಲ್ಕು ಜನ ಗಂಡು ಮಕ್ಕಳು ಚಾಂದಸಾಬ್, ಮಹಮದ್ ಜಲಾಲ್, ನಾನು ಮತ್ತು ನನ್ನ ತಮ್ಮ ಮೈನೋದ್ದೀನ್ ಇರುತ್ತೇವೆ. ನನ್ನ ಅಣ್ಣನಾದ ಮಹಮದ್ ಜಲಾಲ್ ವಯ;35 ವರ್ಷ ಈತನು ತನ್ನ ಹೆಂಡತಿ-ಮಕ್ಕಳೊಂದಿಗೆ ಹೈದ್ರಾಬಾದನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡು ಅಲ್ಲಿಯೇ ಇರುತ್ತಾನೆ. 3-4 ದಿವಸಗಳ ಹಿಂದೆ ನಮಗೆ ಮಾತನಾಡಿಸಲು ನನ್ನ ಅಣ್ಣ ಮಹಮದ್ ಜಲಾಲ್ ಈತನು ಹೈದ್ರಾಬಾದನಿಂದ ಯಾದಗಿರಿಗೆ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 01/09/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ಯಾದಗಿರಿಯಿಂದ ಬಸ್ ಮೂಲಕ ಹೈದ್ರಾಬಾದಕ್ಕೆ ಹೋಗಿ ಬರುತ್ತೇನೆಂದು ನಮಗೆಲ್ಲಾ ಮನೆಯಲ್ಲಿ ತಿಳಿಸಿ ಯಾದಗಿರಿಯ ಹಳೆ ಬಸ್ ನಿಲ್ದಾಣಕ್ಕೆ ಹೋಗಿರುತ್ತಾನೆ. ಹೀಗಿದ್ದು ಸ್ವಲ್ಪ ಸಮಯದ ನಂತರ ನನಗೆ ಹಳೆ ಬಸ್ ನಿಲ್ದಾಣದ ಮುಂದೆ ಎಗ್ ರೈಸ್ ಅಂಗಡಿಯವರಾದ ಸಲ್ಮಾನ್ ಎಂಬಾತನು ಪೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಮತ್ತು ನನ್ನ ಸ್ನೇಹಿತನಾದ ಮಹೀಬೂಬ ತಂದೆ ಮಹಮದ್ ಸಾಬ ಟಾಂಗದೋರ ಇಬ್ಬರು ನಮ್ಮ ಎಗ್ ರೈಸ್ ಅಂಗಡಿಯ ಮುಂದೆ ಇದ್ದಾಗ ನಿಮ್ಮ ಅಣ್ಣನಾದ ಮಹಮದ್ ಜಲಾಲ್ ಈತನು ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದಾಗ ನಾವಿಬ್ಬರು ನೋಡುತ್ತಿದ್ದಂತೆ ಶಹಾಪುರ ರಸ್ತೆ ಕಡೆಯಿಂದ ಯಾದಗಿರಿಯ ಸುಭಾಷ್ ವೃತ್ತದ ಕಡೆಗೆ ಹೊರಟಿದ್ದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನಿಮ್ಮ ಅಣ್ಣನಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದು, ನಾವಿಬ್ಬರು ಓಡೋಡಿ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ಅಣ್ಣನಿಗೆ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ಮುರಿದಿದ್ದು, ಬಲಗಾಲಿನ ಮೊಣಕಾಲಿಗೆ ಭಾರೀ ರಕ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಈ ಅಪಘಾತವು ಇಂದು ದಿನಾಂಕ 01/09/2022 ರಂದು ಈಗಷ್ಟೇ 11 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ನಿಮ್ಮ ಅಣ್ಣನಿಗೆ ಅಪಘಾತ ಪಡಿಸಿದ ಕಾರ್ ಮತ್ತು ಅದರ ಚಾಲಕ ಘಟನಾ ಸ್ಥಳದಲ್ಲಿ ಹಾಜರಿದ್ದು ಕಾರ ನಂಬರ ನೋಡಲಾಗಿ ಕೆಎ-33, ಎ-9671 ನೇದ್ದು ಇರುತ್ತದೆ, ಕಾರ್ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕೃಷ್ಣ ತಂದೆ ರಾಜಪ್ಪ ಯದ್ದುಲ್ ವಯ;29 ವರ್ಷ, ಜಾ;ಪ.ಜಾತಿ, ಉ;ಕಾರ್ ಚಾಲಕ, ಸಾ;ಯಲಸತ್ತಿ, ಹಾ;ವ;ಹೊಸಳ್ಳಿ ಕ್ರಾಸ್ ಯಾದಗಿರಿ ಅಂತಾ ತಿಳಿಸಿರುತ್ತಾನೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂದಾಗ ನನಗೆ ಬಂದ ವಿಷಯವನ್ನು ನನ್ನ ತಮ್ಮನಾದ ಮೈನೋದ್ದೀನ್ ಇವರಿಗೆ ತಿಳಿಸಿ ಇಬ್ಬರೂ ಕೂಡಿಕೊಂಡು ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಬಂದು ನೋಡಲಾಗಿ ನನ್ನ ಅಣ್ಣನಿಗೆ ಅಪಘಾತವಾಗಿದ್ದು ನಿಜ ಇರುತ್ತದೆ. ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿರುತ್ತದೆ. ನಮ್ಮ ಅಣ್ಣನಿಗೆ ಅಪಘಾತ ಪಡಿಸಿದ ಕಾರ್ ಮತ್ತು ಚಾಲಕ ಹಾಜರಿರುತ್ತಾನೆ. ನನ್ನ ಅಣ್ಣನಿಗೆ ಉಪಚಾರ ಕುರಿತು ಅಂಬುಲೆನ್ಸ್ ನಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಈ ಘಟನೆಯ ಬಗ್ಗೆ ಹೈದ್ರಾಬಾದನಲ್ಲಿರುವ ನನ್ನ ಅಣ್ಣನ ಹೆಂಡತಿಗೆ ಪೋನ್ ಮಾಡಿ ತಿಳಿಸಿರುತ್ತೇನೆ. ಈ ಘಟನೆಯ ವಿಚಾರಣೆಗಾಗಿ ಆಸ್ಪತ್ರೆಗೆ ಬಂದಿದ್ದ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಪೊಲಿಸರಿಗೆ ನಾಳೆ ಬೆಳಿಗ್ಗೆ ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿ ತಿಳಿಸುವುದಾಗಿ ಹೇಳಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 01/09/2022 ರಂದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಿದ ನಂತರ ನನ್ನ ಅಣ್ಣನಿಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದರಿಂದ ನಾವುಗಳು ರಾಯಚೂರಿನ ಎನ್.ಕೆ.ಭಂಡಾರಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ನನ್ನ ಅಣ್ಣನ ಹೆಂಡತಿಯವರು ಈ ಘಟನೆ ಬಗ್ಗೆ ಪೊಲಿಸ್ ಕೇಸು ಮಾಡಲು ನನಗೆ ತಿಳಿಸಿದ್ದರಿಂದ ಇಂದು ತಡವಾಗಿ ಠಾಣೆಗೆ ಖುದ್ದಾಗಿ ಹಾಜರಾಗಿ ಲಿಖಿತ ದೂರು ನೀಡುತ್ತಿದ್ದು, ನಿನ್ನೆ ದಿನಾಂಕ 01/09/2022 ರಂದು ರಾತ್ರಿ 11 ಪಿ.ಎಂ.ಕ್ಕೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಂದೆ ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ಅಣ್ಣ ಮಹಮದ್ ಜಲಾಲ್ ಇವರಿಗೆ ಕಾರ್ ನಂಬರ ಕೆಎ-33, ಎ-9671 ನೇದ್ದರ ಚಾಲಕ ಕೃಷ್ಣ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿಯರ್ಾದಿಯ ಅಜರ್ಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 38/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 105/2022 ಕಲಂ: 379 ಐಪಿಸಿ: ಇಂದು ದಿನಾಂಕ:02/09/2022 ರಂದು 10-30 ಎಎಮ್ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ನಾನು ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇದ್ದು, ಸರಕಾರಿ ತಫರ್ೆಯಿಂದ ಸಲ್ಲಿಸುವ ದೂರು ಏನಂದರೆ ಇಂದು ದಿನಾಂಕ:02/09/2022 ರಂದು ಬೆಳಗ್ಗೆ 08:15 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ವಡಗೇರಾ ಸೀಮಾಂತರದ ಕಂಠಿ ತಾಂಡಾದ ಹಳ್ಳದಿಂದ ಯಾರೋ ಕೆಲವರು ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಿಕೊಂಡು ವಡಗೇರಾ-ಗೊಂದೆನೂರು ರೋಡಿನ ಮೂಲಕ ವಡಗೇರಾ ಕಡೆ ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಮಹೇಂದ್ರ ಪಿಸಿ 254 ವಡಗೇರಾ ಠಾಣೆ ಮತ್ತು ನಾಗರಾಜ ಪಿಸಿ 357 ಯಾದಗಿರಿ ಉಪ-ಅಧೀಕ್ಷಕರ ಕಛೇರಿ ರವರಿಗೆ ಕರೆದುಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಹೊರಟು 9-00 ಎಎಮ್ ಸುಮಾರಿಗೆ ವಡಗೇರಾ-ಗೊಂದೆನೂರು ರೋಡ ದೊಡ್ಡ ಕೆನಾಲ ಹತ್ತಿರ ಹೋಗುತ್ತಿದ್ದಾಗ ವಡಗೇರಾ ಹಳ್ಳದ ಕಡೆಯಿಂದ ಒಂದು ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾವು ಟ್ರ್ಯಾಕ್ಟರ ನಿಲ್ಲಿಸಲು ಹೋದಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ಸದರಿ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟ್ರ್ಯಾಕ್ಟರನ್ನು ನೋಡಲಾಗಿ ಒಂದು ಮಹೇಂದ್ರ ಕೆಂಪು ಬಣ್ಣದ ಟ್ರಾಕ್ಟರ ಇದ್ದು, ನೋಂದಣಿ ಇರುವುದಿಲ್ಲ. ಟ್ರ್ಯಾಕ್ಟರ ಚೆಸ್ಸಿ ನಂ. ಒಃಓಂಆಂಎಘಿಂಊಓಉ01425 ಟ್ರ್ಯಾಕ್ಟರ ಇಂಜನ ನಂ. ಓಊಉ2ಏಃಇ0022 ಇದ್ದು, ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರ್ಯಾಲಿ ಚೆಸ್ಸಿ ನಂ. 002/15-16 ಇದ್ದು, ಟ್ರ್ಯಾಲಿಯಲ್ಲಿ ಬಾಡಿ ಲೇವಲ ಮರಳು ಇರುತ್ತದೆ. ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ಅ:ಕಿ:1,00,000/- ರೂ. ಆಗಬಹುದು. ಟ್ರ್ಯಾಲಿಯಲ್ಲಿಯ ಮರಳಿನ ಅ:ಕಿ: 600/- ರೂ. ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ವಡಗೇರಾ ಹಳ್ಳದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದ್ದು ನೋಡಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿ ಟ್ರ್ಯಾಕ್ಟರನ್ನು ಬೇರೆ ಚಾಲಕನ ಸಹಾಯದಿಂದ ಚಲಾಯಿಸಿಕೊಂಡು 10-30 ಎಎಮ್ ಕ್ಕೆ ಮರಳಿ ಠಾಣೆಗೆ ತಂದು ಕಾನೂನು ಕ್ರಮಕ್ಕಾಗಿ ಈ ದೂರನ್ನು ಸಲ್ಲಿಸಲಾಗಿದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 105/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 106/2022 ಕಲಂ: 379, 511 ಐಪಿಸಿ: ಇಂದು ದಿನಾಂಕ:02/09/2022 ರಂದು 2-30 ಪಿಎಮ್ ಕ್ಕೆ ಶ್ರೀ ರಾಮಣ್ಣ ಪಿ.ಎಸ್.ಐ (ತನಿಖೆ) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ನಾನು ರಾಮಣ್ಣ ಪಿ.ಎಸ್.ಐ (ತನಿಖೆ) ವಡಗೇರಾ ಪೊಲೀಸ್ ಠಾಣೆ ಇದ್ದು, ಸರಕಾರಿ ತಫರ್ೆಯಿಂದ ಸಲ್ಲಿಸುವ ದೂರು ಅಜರ್ಿಯೆನಂದರೆ ಇಂದು ದಿನಾಂಕ:02/09/2022 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ವಡಗೇರಾ ಸೀಮಾಂತರದ ಬಿರನಕಲ್ ಹಳ್ಳದಲ್ಲಿ ಯಾರೋ ಕೆಲವರು ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ಹಣಮಂತ್ರಾಯ ಹೆಚ್.ಸಿ 36 ವಡಗೇರಾ ಠಾಣೆ ಮತ್ತು ನಾಗರಾಜ ಪಿಸಿ 357 ಯಾದಗಿರಿ ಉಪ-ಅಧೀಕ್ಷಕರ ಕಛೇರಿ ರವರಿಗೆ ಸಂಗಡ ಕರೆದುಕೊಂಡು ಗಣೇಶ ಹಬ್ಬದ ಬ/ಬ ಕ್ಕೆ ಕೊಟ್ಟಿರುವ ಸರಕಾರಿ ಜೀಪ ನಂ. ಕೆಎ 33 ಎಮ್ 862 ನೇದ್ದರಲ್ಲಿ ಹೊರಟು 1-30 ಪಿಎಮ್ ಸುಮಾರಿಗೆ ವಡಗೇರಾದ ಬೀರನಕಲ್ ಹಳ್ಳದಲ್ಲಿ ಕೆಲವರು ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬುತ್ತಿರುವಾಗ ನಾನು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿದನ್ನು ನೋಡಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಹಾಗೂ ಲೇಬರ ಜನರು ಮರಳು ತುಂಬುವುದು ಬಿಟ್ಟು ಸಲಿಕೆ, ಪುಟ್ಟಿಗಳ ಸಮೇತ ಟ್ರ್ಯಾಕ್ಟರ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೊದರು. ಸದರಿ ಟ್ರ್ಯಾಕ್ಟರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ನಾವು ಹೋಗಿ ಟ್ರ್ಯಾಕ್ಟರ ನೋಡಲಾಗಿ ಕೆಂಪು ಬಣ್ಣದ ಟ್ರ್ಯಾಕ್ಟರ ಇದ್ದು, ಅದಕ್ಕೆ ನೋಂದಣಿ ನಂ. ಇರುವುದಿಲ್ಲ. ಟ್ರ್ಯಾಕ್ಟರ ಚೆಸ್ಸಿ ನಂ. ಒಃಓಉಂಂಎ1ಇಐಓಒ00092 ಟ್ರ್ಯಾಕ್ಟರ ಇಂಜನ ನಂ. ಓಐಒ5ಓಔಇ0026 ಇದ್ದು, ಟ್ರಾಲಿ ನೀಲಿ ಬಣ್ಣದ್ದು ಇದ್ದು, ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರ್ಯಾಲಿ ಚೆಸ್ಸಿ ನಂ. 24/12-13 ಇರುತ್ತದೆ. ಟ್ರ್ಯಾಲಿಯಲ್ಲಿ ಅಂದಾಜು 8-10 ಪುಟ್ಟಿ ಮರಳು ಇರುತ್ತದೆ. ಸದರಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ಅ:ಕಿ:1,00,000/- ರೂ. ಆಗಬಹುದು. ಟ್ರ್ಯಾಲಿಯಲ್ಲಿಯ ಮರಳಿನ ಅ:ಕಿ: 00 ರೂ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ವಡಗೇರಾದ ಬೀರನಕಲ್ ಹಳ್ಳದಿಂದ ಮರಳು ತುಂಬಲು ಪ್ರಯತ್ನ ಮಾಡುತ್ತಿದ್ದಾಗ ನಾವು ಹೋಗಿ ದಾಳಿ ಮಾಡಿದ್ದು, ನೋಡಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿ ಟ್ರ್ಯಾಕ್ಟರನ್ನು ಬೇರೆ ಚಾಲಕನ ಸಹಾಯದಿಂದ ಚಲಾಯಿಸಿಕೊಂಡು 2-30 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕಾನೂನು ಕ್ರಮಕ್ಕಾಗಿ ಈ ದೂರನ್ನು ಸಲ್ಲಿಸಲಾಗಿದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 106/2022 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ. 02/09/2022 ರಂದು 5-40 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 02/09/2022 ರಂದು 3-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಯಾದಗಿರಿ-ಹೊಸಳ್ಳಿ ರಸ್ತೆಯ ವಿಜಯಸ್ವಾಮಿ ಇತನ ಅಂಗಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ವಿಠೋಬಾ ಎ.ಎಸ್.ಐ, ನಿಂಗಪ್ಪ ಪಿಸಿ-261, ಸಾಬರೆಡ್ಡಿ ಪಿಸಿ-379 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 4-20 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ರಾಮನಾಥ ತಂದೆ ನಾಗನಾಥ ದಿಲ್ಲಿಕರ್ ವ; 38 ಜಾ; ಮರಾಠ ಉ; ವ್ಯಾಪಾರ ಸಾ; ಅಜೀಜ ಕಾಲೋನಿ ಯಾದಗಿರಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 1700/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 02/09/2022 ರಂದು 4-20 ಪಿಎಂ ದಿಂದ 5-20 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 5-40 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.100/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ: 279, 337, 338 ಐಪಿಸಿ:ದಿನಾಂಕ 31/08/2022 ರಂದು ಬಿ.ಎಮ್ ಆಸ್ಪತ್ರೆ ವಿಜಯಪೂರದಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಎಮ್.ಎಲ್.ಸಿ ವಿಚಾರಣೆ ಕುರಿತು ಠಾಣೆಯ ತಿರುಪತಿ ಹೆಚ್.ಸಿ 140 ರವರಿಗೆ ಕಳುಹಿಸಿದ್ದು ಸದರಿ ಹೆಚ್.ಸಿ 140 ರವರು ಬಿ.ಎಮ್ ಆಸ್ಪತ್ರೆಗೆ ದಿನಾಂಕ 01/09/2022 ರಂದು ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಾಗಪ್ಪ ತಂದೆ ಗೂಳಪ್ಪ ಚಿಕ್ಕಮಲ್ಲಾ ವ|| 58ವರ್ಷ ಜಾ|| ತಳವಾರ ಉ|| ಒಕ್ಕಲುತನ ಸಾ|| ಹದನೂರ ತಾ|| ಸುರಪೂರ ಇವರ ಹೇಳಿಕೆ ಪಡೆದುಕೊಂಡು ಇಂದು ದಿನಾಂಕ 02/09/2022 ರಂದು 11.00 ಎಎಂ ಕ್ಕೆ ಠಾಣೆಗೆ ಬಂದು ಸದರಿ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದು ಹೇಳಿಕೆಯ ಸಾರಾಂಶವೇನೆಂದರೆ, ನಾನು ನಾಗಪ್ಪ ತಂದೆ ಗೂಳಪ್ಪ ಚಿಕ್ಕಮಲ್ಲಾ ಸಾ|| ಹದನೂರ ಇದ್ದು ದಿನಾಂಕ 30/08/2022 ರಂದು ನಾನು ಹಾಗೂ ನಮ್ಮ ಅಳಿಯನಾದ ದೇವಪ್ಪ ತಂದೆ ಗುರಪ್ಪ ಮಕಾಶಿ ವ|| 32 ಸಾ|| ದರ್ಶನಾಪೂರ ಇಬ್ಬರೂ ಕೂಡಿಕೊಂಡು ರಾತ್ರಿ ಊಟ ಮಾಡಿ ದೇವಪ್ಪನ ಮಹಿಂದ್ರಾ ಮೋಟಾರ ಸೈಕಲ್ ನಂ ಕೆಎ 32 ಇಎಫ್ 4014 ನೇದ್ದರ ಮೇಲೆ ಮಲ್ಲಾ ಸರಕಾರಿ ಆಸ್ಪತ್ರೆ ಎದುರಿಗೆ ಇರುವ ನಮ್ಮ ಹೊಲದಲ್ಲಿರುವ ಶೆಡಗೆ ಮಲಗಿಕೊಳ್ಳಲು ಆಸ್ಪತ್ರೆ ಮುಂದೆ ಶಹಾಪೂರ ಸಿಂದಗಿ ಮುಖ್ಯ ರಸ್ತೆಯ ಮೇಲೆ ಹೋಗುತ್ತಿರುವಾಗ ರಾತ್ರಿ 8.45 ಪಿಎಂ ಸುಮಾರಿಗೆ ಎದುರಿನಿಂದ ಕಾರು ನಂ ಕೆಎ 05 ಎಂಜೆ 3063 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ಸೈಕಲ್ ಮೋಟಾರಗೆ ಜೋರಾಗಿ ಡಕ್ಕಿಪಡಿಸಿದನು. ಅದರಿಂದ ನಾನು ಮತ್ತು ದೇವಪ್ಪ ಇಬ್ಬರೂ ಕೆಳಗೆ ಬಿದ್ದಿದ್ದು ನನಗೆ ಅಪಘಾತದಿಂದಾಗಿ ಬಲಗಾಲಿನ ಮೊಳಕಾಲ ಕೆಳಗೆ ಕಾಲು ಮುರಿದಿದ್ದು, ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು ಮತ್ತು ಎಡಮುಡ್ಡಿಗೆ ಭಾರೋ ಒಳಪೆಟ್ಟಾಗಿರುತ್ತದೆ. ನಾವು ಹೋಗುತ್ತಿದ್ದ ಸೈಕಲ್ ಮೋಟಾರ ನಡೆಸುತ್ತಿದ್ದ ದೇವಪ್ಪನಿಗೆ ಬಲಗಾಲಿನ ತೊಡೆಯ ಚಪ್ಪಿಯ ಹತ್ತಿರ ಎಲುಬು ಮುರಿದಂತೆ ಆಗಿದ್ದು ಎಡಗಡೆ ಗದ್ದಕ್ಕೆ ಹಾಗೂ ಎಡಗಡೆ ಹಣೆಗೆ ರಕ್ತಗಾಯವಾಗಿದ್ದು ಎಡಭುಜಕ್ಕೆ ಭಾರೀ ಒಳಪೆಟ್ಟು ಗಾಯವಾಗಿರುತ್ತದೆ. ನಮಗೆ ಅಪಘಾತಪಡಿಸಿದ ಕಾರಿನ ಚಾಲಕನು ಅಲ್ಲಿಯೇ ಇದ್ದು ಅವನ ಹೆಸರು ತಿಳಿದುಕೊಳ್ಳಲಾಗಿ ನಮ್ಮೂರ ರಾಶಪ್ಪ ತಂದೆ ಗೋಪಾಲಪ್ಪ ದೊರಿ ಸಾ|| ಹದನೂರ ಇರುತ್ತದೆ. ನಂತರ ನಮ್ಮ ಊರಿನ ಜನರ ಸಹಾಯದಿಂದ ಮಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಉಪಚಾರ ಕುರಿತು ಬಿ.ಎಮ್ ಆಸ್ಪತ್ರೆ ವಿಜಯಪೂರಕ್ಕೆ ಬಂದು ಸೇರಿಕೆ ಆಗಿದ್ದು ಇರುತ್ತದೆ. ಕಾರಣ ದಿನಾಂಕ 30/08/2022 ರಂದು 8.45 ಪಿಎಂ ಸುಮಾರಿಗೆ ನಾನು ಹಾಗೂ ನನ್ನ ಅಳಿಯನಾದ ದೇವಪ್ಪ ಇಬ್ಬರೂ ಕೂಡಿಕೊಂಡು ಸೈಕಲ್ ಮೋಟಾರ ನಂ ಕೆಎ 32 ಇಎಫ್ 4014 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಕಾರು ನಂ ಕೆಎ 05 ಎಂಜೆ 3063 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿ ಗಾಯಗೊಳಿಸಿದ್ದು ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 137/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 03-09-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080