Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-10-2022

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 114/2022 ಕಲಂ: 379 ಐಪಿಸಿ : ಇಂದು ದಿನಾಂಕ: 01/10/2022 ರಂದು 12-30 ಪಿಎಮ್ಕ್ಕೆ ಶ್ರೀ ಮಹ್ಮದ ಸಿದ್ದಿಕಿ ತಂದೆ ಅಬ್ದುಲ್ ಸತ್ತರ್ಸಾಬ ಬಳಗಾರ, ವ:36, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ತುಮಕೂರು ತಾ:ವಡಗೇರಾ ಇದ್ದು ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಸವಾಗಿರುತ್ತೇನೆ. ನಾನು ಮನೆಯಲ್ಲಿ ಮತ್ತು ಓಡಾಡಲು ಇರಲಿ ಅಂತಾ ಒಂದು ಹೀರೋ ಪ್ಯಾಶನ್ ಮೋಟರ್ ಸೈಕಲ್ ನಂ. ಕೆಎ 33 ವೈ 5179 ನೇದನ್ನು 2020 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತೇನೆ. ನನಗೆ ಎರಡು ಮೂರು ದಿವಸಗಳಿಂದ ಆರಾಮ ಇಲ್ಲದ ಕಾರಣ ನಾನು ತುಮಕೂರುನಿಂದ ವಡಗೇರಾ ಪಟ್ಟಣಕ್ಕೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಬಂದರಾಯಿತು ಅಂತಾ ದಿನಾಂಕ: 10/03/2022 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ವಡಗೇರಾ ಪಟ್ಟಣದಲ್ಲಿರುವ ಡಾ:ಜಗದೀಶ ರವರ ಆಸ್ಪತ್ರೆಗೆ ಬಂದು ನನ್ನ ಮೋಟರ ಸೈಕಲ್ ನಂಬರ: ಕೆಎ 33 ವೈ 5179 ನೇದ್ದನನು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಹೊದೇನು. ಆಸ್ಪತ್ರೆಯಲ್ಲಿ ಡಾಕ್ಟರ ಅವರಿಗೆ ತೋರಿಸಿಕೊಂಡು ಮರಳಿ 11-30 ಎಎಮ್ ಸುಮಾರಿಗೆ ಬಂದು ನನ್ನ ಮೋಟರ ಸೈಕಲ್ ನಿಲ್ಲಿಸಿದ ಜಾಗದಲ್ಲಿ ನೋಡಲಾಗಿ ನನ್ನ ಮೋಟರ ಸೈಕಲ್ ಕಾಣಿಸಲಿಲ್ಲ. ಗಾಭರಿಯಾದ ನಾನು ಆಸ್ಪತ್ರೆಯ ಆವರಣದ ಸುತ್ತಾ ಮುತ್ತಾ ಎಲ್ಲಾ ಕಡೆ ಹುಡುಕಾಡಿದ್ದರೂ ನನ್ನ ಮೋಟರ ಸೈಕಲ್ ಸಿಗಲಿಲ್ಲ ನಂತರ ನಾನು ನನ್ನ ಗೆಳೆಯರಾದ ಮರಿಲಿಂಗಪ್ಪ ತಂದೆ ಸಿದ್ದಪ್ಪ ಮತ್ತು ಸಿದ್ದಪ್ಪ ತಂದೆ ಚಂದಪ್ಪ ಕಡೇಚೂರು ಇಬ್ಬರು ಸಾ: ವಡಗೇರಾ ಇವರಿಗೆ ಕರೆದು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ ನನ್ನ ಮೋಟರ ಸೈಕಲ್ ಕಾಣಿಸುತ್ತಿಲ್ಲ. ತಹಶೀಲ್ದಾರ ಕಾರ್ಯಲಯ, ಸಕರ್ಾರಿ ದವಖಾನೆ ಕಡೆ ಸಂಜೆಯ ವರೆಗೂ ಹುಡುಕಾಡಿದರೂ ನನ್ನ ಮೋಟರ ಸೈಕಲ್ ಸಿಗಲಿಲ್ಲ ನಂತರ ಮರುದಿವಸ, ಕೋನಳ್ಳಿ, ಕಂದಳ್ಳಿ, ಕಂಠಿತಾಂಡ, ಬೀರನಕಲ ತಾಂಡ, ಬಸವನಗರ, ಹಾಲಗೇರಾ, ತೇಕರಾಳ ಗೊಂದೆನೂರು, ಕೊಂಕಲ್ ಮುಂತಾದ ಕಡೆ ಹುಡಿಕಾಡಿದರೂ ಕೂಡಾ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 10/03/2022 ರಂದು 10-30 ಎಎಮ್ ದಿಂದ ದಿನಾಂಕ: 10/03/2022 ರಂದು 11:30 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಹೀರೋ ಪ್ಯಾಷನ್ ಮೋಟರ್ ಸೈಕಲ್ ನಂ. ಕೆಎ 33 ವೈ 5179 ಅ:ಕಿ: 35,000/- ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಹೀರೋ ಪ್ಯಾಷನ್ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನನ್ನ ಹೀರೋ ಪ್ಯಾಷನ್ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 114/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನ: 115/2022 ಕಲಂ: 504, 341, 323 ಸಂ 34 ಐಪಿಸಿ : ಇಂದು ದಿನಾಂಕ:01/10/2022 ರಂದು 5-45 ಪಿಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಹಣಮರೆಡ್ಡಿ ಕಕ್ಕಸಗೇರಾ, ವ:22, ಜಾ:ಕಬ್ಬಲಿಗ, ಉ:ಡ್ರೈವರ ಸಾ:ಟಿ. ವಡಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಡ್ರೈವರ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾನು ಮತ್ತು ದೇವಿಂದ್ರಪ್ಪ, ಭೀಮಾಶಂಕರ, ತಾಯಪ್ಪ, ಹೈಯಾಳಪ್ಪ ಮತ್ತು ಶರಣಪ್ಪ ಹೀಗೆ 6 ಜನ ಗಂಡು ಮಕ್ಕಳು ಮತ್ತು ಸುನೀತಾ ಹಾಗೂ ಸಣ್ಣ ಸುನೀತಾ ಅಂತಾ ಇಬ್ಬರೂ ಅಕ್ಕತಂಗಿಯರಿರುತ್ತಾರೆ. ನಾವು ಗಂಡು ಮಕ್ಕಳಿಗೆ ಎಲ್ಲರಿಗೆ ಮದುವೆಯಾಗಿದ್ದು, ಎಲ್ಲರೂ ಬೇರೆ ಬೇರೆಯಾಗಿ ನಮ್ಮ ನಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇವೆ. ಆದರೆ ಹೊಲ ಮನೆಯನ್ನು ಇನ್ನು ಪಾಲು ಮಾಡಿಕೊಂಡಿರುವುದಿಲ್ಲ. ಸದರಿ ನಮ್ಮ ಅಕ್ಕತಂಗಿಯರಿಗೆ ಕೂಡಾ ಲಗ್ನ ಮಾಡಿಕೊಟ್ಟಿರುತ್ತೇವೆ. ಅವರು ಗಂಡನ ಮನೆಯಲ್ಲಿರುತ್ತಾರೆ. ನಾವು ಎಲ್ಲರೂ ಬೇರೆ ಬೇರೆ ಆದರು ನಮ್ಮ ತಂದೆಯು ನಮಗೆ ಹೊಲ ಮನೆ ಪಾಲು ಮಾಡಿಕೊಟ್ಟಿರಲಿಲ್ಲ. ಆಗ ನಾವು ನಮಗೆ ಕುಟುಂಬ ಉಪಜೀವನಕ್ಕೆ ತುಂಬಾ ಕಷ್ಟವಾಗಿದೆ. ನಮ್ಮ ಹೊಲ ಮನೆ ನಮಗೆ ಪಾಲು ಮಾಡಿಕೊಡು ಎಂದು ಹೇಳಿದರೆ ನಮ್ಮ ತಂದೆಯಾದ 1) ಹಣಮರೆಡ್ಡಿ ತಂದೆ ತಿಪ್ಪಣ್ಣ ಕಕ್ಕಸಗೇರಾ ಮತ್ತು ನಮ್ಮ ಅಣ್ಣಂದಿರಾದ 2) ತಾಯಪ್ಪ ತಂದೆ ಹಣಮರೆಡ್ಡಿ ಕಕ್ಕಸಗೇರಾ ಮತ್ತು 3) ದೇವಿಂದ್ರಪ್ಪ ತಂದೆ ಹಣಮರೆಡ್ಡಿ ಕಕ್ಕಸಗೆರಾ ಎಲ್ಲರೂ ಸಾ:ಟಿ. ವಡಗೇರಾ ಈ ಮೂರು ಜನ ಸೇರಿ ಉಳಿದ ನಮಗೆ ನೀವು ಸಾಲ ಕಟ್ಟಬೇಕು ಸಾಲ ಕಟ್ಟಿದರೆ ಮಾತ್ರ ಹೊಲ ಮನೆ ಪಾಲು ಮಾಡಿಕೊಡುತ್ತೇವೆ. ಇಲ್ಲಂದ್ರೆ ಪಾಲು ಕೊಡುವುದಿಲ್ಲ ಮಕ್ಕಳೆ ನೀವು ಏನು ಮಾಡುತ್ತಿರಿ ಮಾಡಿಕೊಳ್ಳಿ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದರು. ಹೀಗಿದ್ದು ದಿನಾಂಕ:19/09/2022 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಹೊಲದ ಕಡೆ ಹೋಗಿ ಟಿ.ವಡಗೇರಾ-ಗುಂಡಗುತರ್ಿ ರೋಡಿನ ಮೇಲೆ ನಮ್ಮೂರ ಅಟೋ ಸ್ಟ್ಯಾಂಡ ಹತ್ತಿರ ಬರುತ್ತಿದ್ದಾಗ ಸದರಿ ನಮ್ಮ ತಂದೆಯಾದ 1) ಹಣಮರೆಡ್ಡಿ ತಂದೆ ತಿಪ್ಪಣ್ಣ ಕಕ್ಕಸಗೇರಾ ಮತ್ತು ನನ್ನ ಅಣ್ಣಂದಿರಾದ 2) ತಾಯಪ್ಪ ತಂದೆ ಹಣಮರೆಡ್ಡಿ ಕಕ್ಕಸಗೇರಾ ಹಾಗೂ 3) ದೇವಿಂದ್ರಪ್ಪ ತಂದೆ ಹಣಮರೆಡ್ಡಿ ಕಕ್ಕಸಗೆರಾ ಎಲ್ಲರೂ ಸಾ:ಟಿ. ವಡಗೇರಾ ಈ ಮೂರು ಜನ ಸೇರಿ ಬಂದವರೆ ನನಗೆ ತಡೆದು ನಿಲ್ಲಿಸಿ, ಈ ಭೊಸುಡಿ ಮಗನ ಸೊಕ್ಕು ಜಾಸ್ತಿಯಾಗಿದೆ ಸಾಲ ಕಟ್ಟು ಅಂದ್ರೆ ಕಟ್ಟುತ್ತಿಲ್ಲ. ಮೇಲಾಗಿ ಹೊಲ ಮನೆ ಪಾಲು ಕೇಳುತ್ತಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಿಯೇ ಬಿಡೋಣ ಎಂದು ಅವಾಚ್ಯ ಬೈದವರೆ ಅವರಲ್ಲಿ ಹಣಮರೆಡ್ಡಿ ಮತ್ತು ದೇವಿಂದ್ರಪ್ಪ ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ತಾಯಪ್ಪನು ಬಂದು ಕೈ ಮುಷ್ಟಿ ಮಾಡಿ ನನ್ನ ಎದೆಗೆ ಗುದ್ದಿ ಒಳಪೆಟ್ಟು ಮಾಡಿದನು. ಹಣಮರೆಡ್ಡಿಯು ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮಣ್ಣಂದಿರಾದ ಹೈಯಾಳಪ್ಪ ತಂದೆ ಹಣಮರೆಡ್ಡಿ ಮತ್ತು ಶರಣಪ್ಪ ತಂದೆ ಹಣಮರೆಡ್ಡಿ ಹಾಗೂ ನಮ್ಮೂರ ಧಮರ್ೇಶ ತಂದೆ ಮಲ್ಲಣ್ಣ ಗಗ್ಗರಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ನಮ್ಮ ತಂದೆ ಮತ್ತು ಅಣ್ಣಂದಿರು ನನ್ನೊಂದಿಗೆ ಜಗಳ ಮಾಡಿರುತ್ತಾರೆ ನಮ್ಮೂರ ಹಿರಿಯರ ಸಮಕ್ಷಮ ರಾಜಿ ಸಂಧಾನ ಮಾಡಿಕೊಂಡರಾಯಿತು ಎಂದು ನಮ್ಮ ಹಿರಿಯರ ಹತ್ತಿರ ಹೋಗಿ ಅವರಿಗೆ ಕರೆಸಿದರೆ ಅವರು ರಾಜಿ ಸಂಧಾನಕ್ಕೆ ಬರದೆ ನಮ್ಮ ಮೇಲೆ ಪೊಲೀಸ್ ಕೇಸ್ ಮಾಡಿರುತ್ತಾರೆ ಎಂದು ನಮಗೆ ಈಗ ಗೊತ್ತಾಗಿದ್ದರಿಂದ ನಾವು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಆಸ್ತಿ ನಮಗೆ ಪಾಲು ಮಾಡಿಕೊಡು ಎಂದರೆ ಪಾಲು ಕೊಡದೆ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹೊಡೆದವರೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 115/2022 ಕಲಂ: 504, 341, 323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 116/2022 ಕಲಂ: 447 ಐಪಿಸಿ : ಇಂದು ದಿನಾಂಕ:01/10/2022 ರಂದು 7-30 ಪಿಎಮ್ ಕ್ಕೆ ಶ್ರೀಮತಿ ತಂಗಮ್ಮಾ ಗಂಡ ದಿ:ಬಸಪ್ಪ ನಾಟೇಕಾರ, ವ:60, ಜಾ:ಹೊಲೆಯ (ಎಸ್.ಸಿ) ಉ:ಹೊಲಮನೆ ಕೆಲಸ ಸಾ:ಕದರಾಪೂರ ಹಾ:ವ:ಕುರುಕುಂದಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ತಂಗಮ್ಮಾ ಗಂಡ ದಿ:ಬಸಪ್ಪ ನಾಟೇಕಾರ, ವ:60, ಜಾ:ಹೊಲೆಯ (ಎಸ್.ಸಿ) ಉ:ಹೊಲಮನೆ ಕೆಲಸ ಸಾ:ಕದರಾಪೂರ ಹಾ:ವ:ಕುರುಕುಂದಾ ತಾ:ವಡಗೇರಾ ನಿವಾಸಿ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ಕದರಾಪೂರ ಸೀಮಾಂತರದಲ್ಲಿ ಜಮೀನು ಸವರ್ೆ ನಂ. 14/2 ವಿಸ್ತೀರ್ಣ 1 ಎಕರೆ 18 ಗುಂಟೆ, ಸವರ್ೆ ನಂ. 21/2 ವಿಸ್ತೀರ್ಣ 1 ಎಕರೆ 16 ಗುಂಟೆ, ಸವರ್ೆ ನಂ. 57/2 ವಿಸ್ತೀರ್ಣ 1 ಎಕರೆ 14 ಗುಂಟೆ ಮತ್ತು ಸವರ್ೆ ನಂ. 57/3 ವಿಸ್ತೀರ್ಣ 1 ಎಕರೆ 16 ಗುಂಟೆ ಹೀಗೆ ಒಟ್ಟು 5 ಎಕರೆ 24 ಗುಂಟೆ ಜಮೀನು ಇರುತ್ತದೆ. ನಾನು ಸದರಿ ಜಮೀನಿನ ಮಾಲಿಕಳು ಮತ್ತು ಕಬ್ಜೆದಾರಳು ಇರುತ್ತೇನೆ. ಸದ್ರಿ ಜಮೀನನ್ನು ಈ ಮುಂಚೆ ನಾನು ನಮ್ಮ ಗ್ರಾಮದ ಯಲ್ಲಪ್ಪ ತಾಯಿ ಪರಮ್ಮಾ ನಾಟೇಕರಾ ಸಾ:ಕದರಾಪೂರ ಈತನಿಗೆ ಲೀಜಿಗೆ ಕೊಟ್ಟಿದ್ದೇನು. ಆದರೆ ಅವನು ಕೆಲ ದಿನಗಳ ವರೆಗೆ ನನಗೆ ಕ್ರಮವಾಗಿ ವರ್ಷವಾರು ಲೀಜು ಕೊಡುತ್ತಾ ಬಂದು ಇತ್ತಿಚ್ಚೆಗೆ ಸರಿಯಾಗಿ ಲೀಜು ಕೊಡದ ಕಾರಣ ನಾನು ಆತನಿಗೆ ಹೊಲ ಲೀಜು ಮಾಡುವುದನ್ನು ಬಿಡಿಸಿ, ಸ್ವತಃ ನಾನೇ ನನ್ನ ಹೊಲವನ್ನು ಬಾಡಿಗೆ ಹಚ್ಚಿ ಉಳುಮೆ ಮಾಡಿಸುತ್ತಾ ಬರುತ್ತಿದ್ದೇನೆ. ಹೀಗಿದ್ದು ದಿನಾಂಕ:29/09/2022 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಹೊಲ ಸವರ್ೆ ನಂ. 57/2 ಮತ್ತು 57/3 ರಲ್ಲಿ ನಾನು ಲೇಬರ ಜನರಾದ 1) ರಂಗಪ್ಪ ತಂದೆ ಹಣಮಂತ ಬ್ಯಾಗಾರ ಸಾ:ಕದರಾಪೂರ, 2) ನಿಂಗಪ್ಪ ತಂದೆ ಹಣಮಪ್ಪ ಗುಂಜನೋರ ಮತ್ತು 3) ಸಾಬಣ್ಣ ತಂದೆ ಹುಲೇಪ್ಪ ಗುಂಜನೋರ ಇಬ್ಬರೂ ಸಾ:ಕುರುಕುಂದಾ ಇವರುಗಳೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸದರಿ ಯಲ್ಲಪ್ಪ ತಾಯಿ ಪರಮ್ಮಾ ನಾಟೇಕಾರ ಸಾ:ಕದರಾಪೂರ ಈತನು ಬಂದು ಈ ಹೊಲ ನಾನು ಮುಂಚೆಯಿಂದ ಲೀಜು ಮಾಡುತ್ತಾ ಬಂದಿರುತ್ತೇನೆ. ನನಗೆ ಲೀಜು ಬಿಡಿಸಿ, ನೀನು ಹೇಗೆ ಸಾಗುವಳಿ ಮಾಡುತ್ತಿ ಅಂತಾ ಅಂದು ನನ್ನ ಮೇಲ್ಕಂಡ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ನಾನು ಕೆಲಸ ಮಾಡುವುದನ್ನು ತಡೆಗಟ್ಟಲು ಬಂದಿರುತ್ತಾನೆ. ಆಗ ನನ್ನ ಹೊಲದಲ್ಲಿ ಕೆಲಸಕ್ಕೆ ಬಂದಿದ್ದ ರಂಗಪ್ಪ, ನಿಂಗಪ್ಪ ಮತ್ತು ಸಾಬಣ್ಣ ಇವರು ಅವನಿಗೆ ಸಮಾಧಾನ ಮಾಡಿ ಬಿಡಿಸಿ ಕಳುಹಿಸಿರುತ್ತಾರೆ. ಆದ್ದರಿಂದ ವಿನಾಕಾರಣ ನನ್ನ ಕಬ್ಜೆಯಲ್ಲಿರುವ ಮೇಲ್ಕಂಡ ಜಮೀನುಗಳಿಗೆ ಬಂದು ನನಗೆ ಲೀಜು ಕೊಡುವುದು ಬಿಟ್ಟು ನೀನು ಹೇಗೆ ಸಾಗುವಳಿ ಮಾಡುತ್ತಿ, ಎಂದು ಅತಿಕ್ರಮಣ ಪ್ರವೇಶ ಮಾಡಿ ನಾನು ಲೇಬರ ಜನರೊಂದಿಗೆ ಕೆಲಸ ಮಾಡುವುದನ್ನು ತಡೆಗಟ್ಟಲು ಪ್ರಯತ್ನಿಸಿದ ಯಲ್ಲಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 116/2022 ಕಲಂ: 447 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 75/2022 (ಮಾನ್ಯ ನ್ಯಾಯಾಲಯದ ಉಲ್ಲೇಖಿತ ಗುನ್ನೆ) ಕಲಂ. 447, 354, 323, 504, 506 ಸಂ. 149 ಐಪಿಸಿ : 1ರಿಂದ 14ರವರೆಗಿನ ಆರೋಪಿತರು ದಿನಾಂಕ:11/05/2022 ರಂದು ಫಿರ್ಯಾದಿಯ ಹೊಲ ಸವರ್ೆ ನಂ:279/1 00.8 ಗುಂಟಾ ಹೊಲದಲ್ಲಿ ತಮಗೆ ಯಾವುದೇ ಅಧಿಕಾರಿ ಇಲ್ಲದೆ ಹೊಲದಲ್ಲಿ ಪ್ರವೇಶ ಮಾಡಿ ಸದರಿ ಜಾಗದಲ್ಲಿ ಜಬರದಸ್ತಿಯಿಂದ ನಾರಾಯಣ ಗುರುಜಿ ಇವರ ಕಟ್ಟೆ ಕಟ್ಟಿದ್ದು, ಫಿರ್ಯಾದಿಯು ಕೇಳಲು ಹೋದರೆ ಸದರಿ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕೈ ಹಿಡಿದು ಎಳೆದಾಡಿ, ಜಿವ ಬೆದರಿಕೆ ಹಾಕಿದ ಬಗ್ಗೆ ಅಪರಾಧ. ಮತ್ತು ಸದರಿ ಗಲಾಟೆಯ ಸಮಯದಲ್ಲಿ ಆರೋಪಿ ನಂ; 15, 16, 17 ನೇದ್ದವರು ಘಟನೆ ಸ್ಥಳಕ್ಕೆ ಬೇಟಿ ನೀಡಿದಾಗ ಆರೋಪಿ ನಂ:1 ರಿಂದ 14ರವರೆಗಿನ ಆರೋಪಿತರ ಪರವಾಗಿ ಮಾತನಾಡಿದ್ದಾರೆ ಅಂತಾ ಫಿರ್ಯಾದಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 169/2022 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960, ಕಲಂ 50 ಟ್ರಾನ್ಸ್ಪೊಟರ್್ ಆಫ್ ಎನಿಮಲ್ ಆಕ್ಟ್ -1978, ಕಲಂ 192(ಎ), 177 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 01/10/2022 ರಂದು ಸಾಯಂಕಾಲ 18-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಬಾಬುರಾವ್ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ, ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 01/10/2022 ರಂದು, ಸಾಯಂಕಾಲ 16-00 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ, ಒಂದು ಐಚರ್ ಟೆಂಪೂ ವಾಹನ ನಂ. ಕೆಎ-28-ಎ-6026 ನೇದ್ದರಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ಜಾನುವಾರುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ದನಗಳನ್ನು ಹಾಕಿಕೊಂಡು ಸಾಗಾಣಿಕೆ ಮಾಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಸಿದ್ರಾಮಯ್ಯ ಪಿ.ಸಿ 258 ಮತ್ತು ಭೀಮನಗೌಡ ಪಿ.ಸಿ 402 ರವರಿಗೆ ಮಾಹಿತಿ ತಿಳಿಸಿ, ಭೀಮನಗೌಡ ಪಿ.ಸಿ 402 ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ ಮೇರೆಗೆ, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1) ಶಿವಕುಮಾರ ತಂ/ ಭೀಮರಾಯ ಶಿರವಾಳ, ವಯ 28 ವರ್ಷ, ಜಾತಿ (ಪ.ಜಾತಿ) ಮಾದಿಗ, ಉಃ ಶ್ರೀರಾಮ ಸೇನೆ ತಾಲೂಕಾ ಅಧ್ಯಕ್ಷಕರು ಸಾಃ ಚಾಮುಂಡೇಶ್ವರಿ ನಗರ ಶಹಾಪೂರ 2) ಶ್ರೀ ವೆಂಕಟೇಶ್ಸಿಂಗ್ ತಂದೆ ಉದಯಸಿಂಗ್ ರಜಪೂತ, ವಯಸ್ಸು 21 ವರ್ಷ, ಜಾತಿ ರಜಪೂತ, ಉಃ ಶ್ರೀರಾಮ್ ಸೇನೆ ಕಾರ್ಯಕರ್ತ ಸಾಃ ಆನೆಗುಂದಿ ಓಣಿ ಶಹಾಪೂರ. ರವರನ್ನು ಸಾಯಂಕಾಲ 16-15 ಗಂಟೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ಮೇಲ್ಕಂಡ ಮಾಹಿತಿ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಸದರಿಯವರು ಒಪ್ಪಿಕೊಂಡರು. ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-0316 ನೇದ್ದರಲ್ಲಿ ನಾನು ಮತ್ತು ಸಿದ್ರಾಮಯ್ಯ ಪಿ.ಸಿ 258, ಭೀಮನಗೌಡ ಪಿ.ಸಿ 402 ಹಾಗೂ ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ಮತ್ತು ಇಬ್ಬರೂ ಪಂಚರನ್ನು ಜೀಪ್ನಲ್ಲಿ ಕರೆದುಕೊಂಡು ಚಾಂದ ಪೆಟ್ರೋಲ್ ಪಂಪ್ ಹತ್ತಿರ ಹೋಗಿ ನಿಂತಿದ್ದಾಗ, ಸಾಯಂಕಾಲ 16-30 ಗಂಟೆಗೆ ವಿಭೂತಿಹಳ್ಳಿ ಕಡೆಯಿಂದ ಒಂದು ಐಚರ್ ಟೆಂಪೂ ವಾಹನ ನಂ. ಕೆಎ-28-ಎ-6026 ನೇದ್ದು ಬಂದಿದ್ದು, ಸದರಿ ವಾಹನವು ರೋಡಿನ ಬದಿಗೆ ಹಾಕಿ, ವಾಹನ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ಶ್ರೀಶೈಲ್ ತಂದೆ ಶಿವಯೋಗೆಪ್ಪ ಸಾಲೋಟಗಿ, ವಯಸ್ಸು 22 ವರ್ಷ, ಜಾತಿ ಪಂಚಮಸಾಲಿ, ಉಃ ಡ್ರೈವರ್ ಕೆಲಸ, ಸಾಃ ಚಟ್ರಕಿ ತಾಃ ಸಿಂದಗಿ, ಜಿಃ ವಿಜಯಪೂರ ಅಂತಾ ಹೇಳಿದನು. ಸದರಿಯವನಿಗೆ ವಾಹನದಲ್ಲಿ ಏನು ಇದೆ ಅಂತಾ ಕೇಳಿದಾಗ ದನಗಳು ಇರುತ್ತವೆ ಅಂತಾ ಹೇಳಿದನು. ಐಚರ್ ವಾಹನದಲ್ಲಿ ಜಾನುವಾರಗಳನ್ನು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿದ್ದರೆ ದಾಖಲಾತಿ ಹಾಜರ ಪಡಿಸುವಂತೆ ಮತ್ತು ದನಗಳು ಎಲ್ಲಿ ಖರೀದಿ ಮಾಡಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗುತಿದ್ದಿರಿ, ಜಾನುವಾರುಗಳಿಗೆ ಸಂಬಂಧಿಸಿದ ಖರೀದಿಯ ದಾಖಲಾತಿ ಹಾಜರ ಪಡಿಸಲು ಹೇಳಿದಾಗ, ಯಾವುದೇ ದಾಖಲೆಗಳು ಇರುವುದಿಲ್ಲ ಅಂತಾ ಹೇಳಿದನು. ಜಾನುವಾರಗಳು ಇಂದು ದಿನಾಂಕ 01/10/2022 ರಂದು ದೇವದುರ್ಗ ಸಂತೆಗೆ ವಿವಿಧ ಗ್ರಾಮಗಳಿಂದ ಬಂದಿದ್ದ ಹಳ್ಳಿಯ ಜನರಿಂದ ಖರೀದಿ ಮಾಡಿಕೊಂಡು ಬೇರೆ ಕಡೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದೇನೆ ಅಂತಾ ಹೇಳಿದ ಮೇರೆಗೆ, ಸದರಿ ವಾಹನದಲ್ಲಿದ್ದ ಜಾನುವಾರಗಳು ಕೆಳಗಡೆ ಇಳಿಸಿ ಪರಿಶೀಲನೆ ಮಾಡಲು ಸೂಕ್ತವಾದ ಸ್ಥಳವಿಲ್ಲದ ಕಾರಣ ಸದರಿ ವಾಹನ ಚಾಲಕನೊಂದಿಗೆ ಶ್ರೀ ವಿಶ್ವಮಾತಾ ಗುರುಕುಲ ಗೋಶಾಲೆ, ಭಾರತೀಯ ಗೋವಂಶ ಸಂರಕ್ಷಣಾ ಸಂಸ್ಥೆ ನಂದಿ ಬೆಟ್ಟ ಶಹಾಪೂರಕ್ಕೆ ಹೋಗಿ, ಜಾನುವಾರಗಳಿಗೆ ತೊಂದರೆ ಯಾಗಬಾರದು ಅಂತ ವಾಹನದಿಂದ ಜಾನುವಾರಗಳನ್ನು ಇಳಿಸಿಕೊಂಡು ಇಬ್ಬರೂ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ 3 ಹೊರಿಗಳು, ಅಂ.ಕಿ 50,000-00 ರೂಪಾಯಿ. 6 ಎತ್ತುಗಳು ಅಂ.ಕಿ 60,000-00 ರೂಪಾಯಿ ಮತ್ತು 2 ಎಮ್ಮೆಗಳು ಅಂ.ಕಿ 30,000-00, 1 ಆಕಳು ಅಂ.ಕಿ 10,000-00 ರೂಪಾಯಿ ಈ ರೀತಿ ಇದ್ದು, ಸದರಿ ಜಾನುವಾರುಗಳು ಇಕ್ಕಟ್ಟಾದ ಸ್ಥಳದಲ್ಲಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ವಾಹನದಲ್ಲಿ ಹಾಕಿಕೊಂಡು ಸಾಗಿಸುತಿದ್ದ ಬಗ್ಗೆ ಕಂಡು ಬಂದಿರುತ್ತದೆ. ಕೆಲವೊಂದು ಜಾನುವಾರುಗಳ ಕಾಲಿಗೆ, ಹೊಟ್ಟೆಗೆ, ಬಾಲಕ್ಕೆ ತರಚಿದ ಗಾಯಗಳಾಗಿರುತ್ತವೆ. ಮೇಲ್ಕಂಡ ಜಾನುವಾರಗಳು ಮತ್ತು ಐಚರ್ ವಾಹನ ನಂ ಕೆಎ-28-ಎ-6026 ಅಂ.ಕಿ 2 ಲಕ್ಷ ರೂಪಾಯಿ ವಾಹನವನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 16-45 ಗಂಟೆಯಿಂದ 17-45 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು, ಪುನಃ ಜಾನುವಾರಗಳನ್ನು ವಾಹನದಲ್ಲಿ ಹತ್ತಿಸಿಕೊಂಡು ವಾಹನ ಸಮೇತ ಮರಳಿ ಪೊಲೀಸ್ ಠಾಣೆಗೆ ಬಂದು, ಠಾಣೆಯಲ್ಲಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ, ಸಾಯಂಕಾಲ 18-30 ಗಂಟೆಗೆ ಮೂಲ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 169/2022 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960, ಕಲಂ 50 ಟ್ರಾನ್ಸ್ಪೊಟರ್್ ಆಫ್ ಎನಿಮಲ್ ಆಕ್ಟ್ -1978, ಕಲಂ 192(ಎ), 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ

Last Updated: 03-10-2022 10:41 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080