ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-11-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 174/2021 ಕಲಂ 341, 323, 324, 325, 504, 506 ಸಂಗಡ 34 ಐಪಿಸಿ. : ನಿನ್ನೆ ದಿನಾಂಕ 01.11.2021 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಗಾಯಾಳು ಸಾಯಪ್ಪ ಗಾಳ ಈತನು ಆರೋಪಿ ಹಣಮಂತ ಗಾಳ ಎಂಬಾತನ ಮನೆಯ ಮುಂದಿನಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ಆರೋಪಿ ಹಣಮಂತ ಗಾಳ ಈತನು ಸಾಯಪ್ಪ ಗಾಳನಿಗೆ ತನ್ನ ಮನೆಯ ಮುಂದೆ ಅಕ್ರಮವಾಗಿ ತಡೆದು ನಿಲ್ಲಿಸಿ ಆತನೊಂದಿಗೆ ಜಗಳಕ್ಕೆ ಬಿದ್ದಾಗ ಫೀರ್ಯಾದಿದಾರಳು ಮತ್ತು ಆಕೆಯ ಮಗನಾದ ಅಶೋಕ ಗಾಳ ಇವರು ಅಲ್ಲಿಗೆ ಹೋಗಿ ಅವರ ಜಗಳವನ್ನು ಬಿಡಿಸುತ್ತಿದ್ದಾಗ ಆರೋಪಿ ಹಣಮಂತನು ಗಾಯಾಳುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಗಾಯಾಳು ಹಣಮಂತ ಗಾಳ ಈತನ ಎಡಗೈ ಕಿರುಬೆಳಿನ ಕೊನೆಯ ಗಣಕಿಯನ್ನು ಬಾಯಿಂದ ಕಡೆದು ಬಾರಿ ರಕ್ತಗಾಯಗೊಳಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ಊರಲ್ಲಿ ಹಿರಿಯರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಇಂದು ದಿನಾಂಕ 02.11.2021 ರಂದು ಬೆಳಿಗ್ಗೆ 10:00 ಗಂಟೆಗೆ ಖುದ್ದಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 174/2021 ಕಲಂ: 341, 323, 324, 325, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 146/2021 ಕಲಂ.457 380 ಐಪಿಸಿ : ಇಂದು ದಿನಾಂಕ 02/11/2021 ರಂದು ಪಿಯರ್ಾದಿ ಸಿದ್ರಾಮರೆಡ್ಡಿ ತಂದೆ ಚೆನ್ನಾರೆಡ್ಡಿ ತಮ್ಮಣ್ಣನವರ ವಯಾ|| 21 ವರ್ಷ ಜಾತಿ|| ಲಿಂಗಾಯತ ರೆಡ್ಡಿ ಉ|| ಒಕ್ಕಲುತನ ಸಾ|| ಮುಸ್ಟೂರು ತಾ|| ಜಿ|| ಯಾದಗಿರಿ ಇವರು ಕೊಟ್ಟ ಅಜರ್ಿ ಸಾರಂಶವೆನಂದರೆ ಸುಮಾರು ವರ್ಷಗಳಿಂದ ನಾನು ಕುಟುಂಬ ಸಮೇತ ಮುಸ್ಟೂರು ಗ್ರಾಮದಲ್ಲಿ ವಾಸವಾಗಿರುತ್ತೇನೆ. ಹೀಗಿರುವಾಗ ನಮ್ಮ ಮನೆಯು ಹೊಸದಾಗಿ ಕಟ್ಟುತ್ತಿರುವದರಿಂದ ನಮ್ಮ ಕುಟುಂಬದವರೆಲ್ಲರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ನಾನು ಮನೆ ಕೆಲಸದ ಉಸ್ತುವಾರಿ ನೊಡಿಕೊಂಡು ಗ್ರಾಮದಲ್ಲಿ ಇರುತ್ತೇನೆ. ಎಂದಿನಂತೆ ದಿನಾಂಕ:-25/10/2021 ರಂದು ಮುಂಜಾನೆ ಎದ್ದು ನಳಕ್ಕೆ ಮೋಟಾರು ಹಚ್ಚಿ ಮನೆಗೆ ನೀರು ಹೊಡೆದು ಮತ್ತು ಮನೆಯಲ್ಲಿ ನೀರು ತುಂಬಿದೆನು. ಸುಮಾರು 03:00 ಗಂಟೆಗೆ ಯಾದಗಿರಿಯಿಂದ ನನಗೆ ನಮ್ಮ ದೊಡ್ಡಪ್ಪ ನವರಾದ ಬಾಪುಗೌಡ ತಮ್ಮಣನವರ್ ಇವರು ಪೋನ್ ಮಾಡಿ ಕೆಲಸವಿದೆ ಯಾದಗಿರಿಗೆ ಬಾ ಎಂದು ಹೇಳಿದರು. ಆದ್ದರಿಂದ ನೀರೆತ್ತುವ ಮೋಟಾರು ಹಾಗೂ ಇತರೆ ಸಾಮಾನುಗಳೆಲ್ಲವುಗಳನ್ನು ಮನೆಯಲ್ಲಿ ಇಟು.್ಟ ಸಾಯಂಕಾಲ 6:00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ಯಾದಗಿರಿಗೆ ಹೋಗಿದ್ದು ರಾತ್ರಿ ತಡವಾದುದರಿಂದ ಯಾದಗಿರಿಯಲ್ಲಿಯ ನಮ್ಮ ದೊಡಪ್ಪ್ಡನವರ ಮನೆಯಲ್ಲಿ ಉಳಿದುಕೋಡಿರುತ್ತೇನೆ. ಮರುದಿನ ದಿನಾಂಕ:- 26/10/2021 ರಂದು ಯಾದಗಿರಿಯಿಂದ ಹೊರಟು ಮುಂಜಾನೆ 08:00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸಾಮಾನುಗಳೆಲ್ಲವು ಚೆಲ್ಲಪಿಲ್ಲಿಯಾಗಿದ್ದವು ಹಾಗೂ ಮನೆಯಲ್ಲಿದ್ದ 01) ಒಂದು 01ಹೆಚ್.ಪಿ ಮೋಟಾರು ಅ.ಕಿ 5000/- ರೂಪಾಯಿ 02) ಒಂದು ಇಲೆಕ್ಟ್ರಿಕಲ್ ಬಲ್ಬ ಅಂದಾಜು ಕಿಮ್ಮತ್ತು 1000/- ರೂಪಾಯಿ 03) ಕಬ್ಬಿಣದ ಹಾರೆ ಅಂದಾಜು ಕಿಮ್ಮತ್ತು 2000/- ರೂಪಾಯಿ ನೆದ್ದವುಗಳು ಮನೆಯಲ್ಲಿ ಇರಲಿಲ್ಲಾ ಮನೆಯ ಸುತ್ತಮುತ್ತ ಮತ್ತು ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ದಿನಾಂಕ :- 02/11/2021 ರಂದು ದೆವಪ್ಪ ತಂದೆ ಸಾಬಣ್ಣ ಬಡಿಗೇರ್ ಇವರ ಮನೆಯಲ್ಲಿ ಮೋಟಾರು ಹಾಗೂ ಯಲ್ಲಪ್ಪ ತಂದೆ ಮಲ್ಲಯ್ಯ ಇವರ ಮನೆಯಲ್ಲಿ ಇಲೆಕ್ಟ್ರಿಕಲ್ ಬಲ್ಬ ಕಂಡುಬಂದಿರುತ್ತದೆ ನಾನು ವಿಚಾರಣೆ ಮಾಡಿದ್ದೆ ಆದಲ್ಲಿ ಅವರು ನನ್ನ ಜೊತೆ ಜಗಳ ಮಾಡುವ ಸಂಭವವಿರುತ್ತದೆ. ಸುತ್ತಮುತ್ತ ಹುಡುಕಾಡಿ ಕಾನೂನಿನ ಬಗ್ಗೆ ತಿಳಿದುಕೊಂಡು ದಿನಾಂಕ 02/11/2021 ರಂದು 6 ಪಿ.ಎಂ ಕ್ಕೆ ತಡವಾಗಿ ಠಾಣೆ ಬಂದು ದೂರು ಸಲ್ಲಿಸಿರುತ್ತೆನೆ ದಯಾಳುಗಳಾದ ತಾವು ನಮ್ಮ ಸಾಮಾನುಗಳನ್ನು ಹುಡುಕಿಕೊಟ್ಟು ಕಳ್ಳತನ ಮಾಡಿದವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಈ ಮೂಲಕ ವಿನಂತಿ ಅದೆ.ಇಂದು ದಿನಾಂಕ 02/11/2021 ರಂದು 6 ಪಿ.ಎಂಕ್ಕೆ ಪಿಯರ್ಾದಿದಾರರಾದ ಸಿದ್ರಾಮರೆಡ್ಡಿ ತಂದೆ ಚೆನ್ನಾರೆಡ್ಡಿ ತಮ್ಮಣ್ಣನವರ ವಯಾ|| 21 ವರ್ಷ ಜಾತಿ|| ಲಿಂಗಾಯತ ರೆಡ್ಡಿ ಉ|| ಒಕ್ಕಲುತನ ಸಾ|| ಮುಸ್ಟೂರು ತಾ|| ಜಿ|| ಯಾದಗಿರಿ ರವರು ಠಾಣಗೆ ಬಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿಯನ್ನು ಹಾಜರು ಪಡಿಸಿದ್ದು ಸದರಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 146/2021 ಕಲಂ 457 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 04-11-2021 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080