Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-11-2022


ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: 80/2022 ಕಲಂ 279, 337, 304(ಎ) ಐ.ಪಿ.ಸಿ ಸಂ 187 ಐಎಮ್ವಿ ಯ್ಯಾಕ್ಟ: ದಿನಾಂಕ: /02/11/2022 ರಂದು ನಸುಕಿನ ಜಾವ ಮೃತ ನಿಂಗಣ್ಣ ಹಾಗು ಗಾಯಾಳುದಾರರಾದ ರುದ್ರಪ್ಪ ಹಾಗು ಗೊಲ್ಲಾಳ ಎಲ್ಲರೂ ಕೂಡಿ ತಮ್ಮ ತಮ್ಮ ಹೊಲದಲ್ಲಿನ ತರಕಾರಿ ಹಾಗು ಮೆಣಸಿನಕಾಯಿಯನ್ನು ಗೋಗಿ ಸಂತೆಗೆ ಒಯ್ದು ಮಾರಾಟ ಮಾಡಿಕೊಂಡು ಬರಲು ಅಣಜಗಿ ಗ್ರಾಮದಿಂದ ಅದೇ ಊರಿನ ಸೂರ್ಯಕಾಂತ @ ಸುರೇಶ ತಂದೆ ಪರಮಣ್ಣಗೌಡ ಪೊಲೀಸ್ ಪಾಟೀಲ ಸಾ:ಅಣಜಗಿ, ತಾ:ಯಡ್ರಾಮಿ ಈತನ ಅಟೋ ಟಂಟಂ ನಂಬರ ಕೆಎ:32, ಬಿ:3238 ನೇದ್ದರಲ್ಲಿ ಗೋಗಿ ಕಡೆಗೆ ಬರುತ್ತಿದ್ದಾಗ 06.00 ಎಎಮ್ ಸುಮಾರಿಗೆ ಹಾರಣಗೇರಾ-ಗೋಗಿ ರೋಡಿನ ಹಾರಣಗೇರಾ ಹಳ್ಳದ ಬ್ರಿಜ್ ಹತ್ತಿರ ಅಟೋ ಚಾಲಕನು ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ರೋಡಿನ ಮೇಲೆ ಬಿದ್ದಂತಹ ತಗ್ಗನ್ನು ತಪ್ಪಿಸಲು ಒಮ್ಮಲೇ ಕಟ್ ಹೊಡೆದಿದ್ದರಿಂದ ಅಟೋ ಪಲ್ಟಿಯಾಗಿರುತ್ತದೆ. ಅಪಘಾತದಿಂದಾಗಿ ಅಟೋದಲ್ಲಿದ್ದ ನಿಂಗಣ್ಣ ಈತನಿಗೆ ಎದೆಗೆ , ಬೆನ್ನಿಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಲ್ಲದೆ ಅಟೋದಲ್ಲಿದ್ದ ರುದ್ರಪ್ಪ ಹಾಗು ಗೊಲ್ಲಾಳಪ್ಪ ಇವರಿಗೆ ಸಾದಾ ಸ್ವರೂಪದ ತರಚಿದ ರಕ್ತಗಾಯ ಹಾಗು ಒಳಪೆಟ್ಟಾಗಿರುತ್ತವೆ. ಅಪಘಾತವಾದ ನಂತರ ನಿಂಗಣ್ಣ ಈತನು ಮೃತಪಟ್ಟಿರುವದನ್ನು ನೋಡಿ ಅಟೋ ಚಾಲಕ ಅಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಅಪಘಾತಕ್ಕೆ ಕಾರಣನಾದ ಅಟೋ ಚಆಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 157/2022, ಕಲಂ, 143, 147, 148, 448, 323, 324, 504, 506. ಸಂ. 149 ಐ. ಪಿ ಸಿ: ಇಂದು ದಿನಾಂಕ: 02-11-2022 ರಂದು ಮದ್ಯಾಹ್ನ 1-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಗಾಯಾಳುದಾರನನ್ನು ವಿಚಾರಿಸಿ ಗಾಯಾಳುದಾರ ಶ್ರೀ ಬುಗ್ಗಯ್ಯ ತಂದೆ ಭೀಮಣ್ಣ ರಾಯನೊರ ವ||65 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ವರ್ಕನಳ್ಳಿ ಈತನು ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಇಂದು ದಿನಾಂಕ: 02-11-2022 ರಂದು ಬೆಳಿಗ್ಗೆ 07-30 ಗಂಟೆಗೆ ಮನೆಯಲ್ಲಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಗುಂಪು ಕಟ್ಟಿಕೊಂಡು ಬಂದು ಮನೆಯಲ್ಲಿ ಅಕ್ರಮ ಪ್ರವೇಶಮಾಡಿ ಅಕ್ರಮ ಪ್ರವೇಶ ಮಾಡಿ ಏ ರಂಡಿ ಮಗನೆ, ಸೂಳೇ ಮಗನೆ, ನಿಂದು ಸೂಕ್ಕು ಬಹಳ ಆಗ್ಯಾದ ಹೊಲದಲ್ಲಿ ಪಾಲು ನಿನ್ನ ಮಗಳಿಗೆ ಕೊಡದೆ ನಮಗೆ ಇನ್ನು ಪಾಲು ಬರತದ ಕೊಡು ಅಂದರೆ ಕೊಡಲ್ ಅಂತಿ ಮಗನ ಇವತ್ತು ಯಾಂಗಿದ್ದರು ಒಬ್ಬವನೆ ಸಿಕ್ಕಿದಿ ಇವತ್ತು ನಿನಗ ಒಂದು ಗತಿ ಕಾಣಿಸಿ ಬಿಡುತ್ತೆವೆ ಅಂತ ಅಂದವರೆ ಅವರಲ್ಲಿ ಮರೆಪ್ಪನ್ನು ತನ್ನ ಕೈಲ್ಲಿದ್ದ ಕಟ್ಟಿಗೆಯಿಂದ ಬೀಸಿ ಹೊಡೆದನು ಅದರ ಏಟು ನನ್ನ ಎಡಗಡೆ ಕಣ್ಣಿನ ಹುಬ್ಬಿಗೆ ಬಡೆದು ರಕ್ತ ಗಾಯವಾಗಿದ್ದು, ಅದೇ ಬಡಿಗೆಯಿಂದ ಮತ್ತೆ ಹೊಡೆದಾಗ ನನ್ನ ಎಡಪಕ್ಕೆಗೆ ಹೊಡೆದು ಗುಪ್ತಗಾಯ ಮಾಡಿದನು, ಶಿವಲಿಂಗ, ಭೀಮಶ, ಇವರಿಬ್ಬರು ನನ್ನ ಎರಡು ಕೈಗಳನ್ನು ಹಿಡಿದು ಹಿಂದಕ್ಕೆ ತಿರಿವಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿದ್ದು ಈ ಸೂಳೆ ಮಗನಿಗೆ ಇವತ್ತು ಖಲಾಸ ಮಾಡರಿ ಅಂತ ಹೇಳಿ ಆತನ ಕೈಯಿಂದ ಮತ್ತು ಕಾಲಿನಿಂದ ಮನಬಂದಂತೆ ಹೊದೆಯುತ್ತಿರುವಾಗ ಬಸ್ಯ @ ಬಸವರಾಜ ಇತನು ಕೈಯಲ್ಲಿ ಕಲ್ಲು ತೆಗೆದುಕೊಂಡು ಬಲಗೈಯ ಮಣಿಕಟ್ಟಿ ಹೊಡೆದಿದ್ದರಿಂದ ರಕ್ತಗಾಯ ಮತ್ತು ಗುಪ್ತಗಾಯ ಮಾಡಿದ್ದು ಅಲ್ಲೇ ಇದ್ದ ಸಾಬಯ್ಯ ಮತ್ತು ಆತನ ಹೆಂಡತಿ ಸಾಬವ್ವ ಇಬ್ಬರು ಕೂಡಿಕೊಂಡು ಈ ಸೂಳೆ ಮಗಂದು ಬಹಳ ಆಗ್ಯಾದ ಇವನಿಗೆ ಇವತ್ತು ಜೀವ ಸಹಿತ ಬೀಡುವುದ ಬ್ಯಾಡ ಹೊಡಿರಿ ಸೂಳೆ ಮಗನಿಗೆ ಅಂತ ಆತನ ಕಾಲಿನಿಂದ ಮನಬಂದಂತೆ ಒದ್ದು ತುಳಿದು ಬೆನ್ನಿಗೆ ಮತ್ತು ಹೊಟ್ಟೆಗೆ ಗುಪ್ತಗಾಯ ಮಾಡಿದ್ದು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 190/2022 ಕಲಂ 341, 323, 504, 506 ಸಂಗಡ 34 ಐ.ಪಿ.ಸಿ: ಇಂದು ದಿನಾಂಕ 02/11/2022 ರಂದು ಮಧ್ಯಾಹ್ನ 13-45 ಗಂಟೆಗೆ ಫಿಯರ್ಾದಿ ಶ್ರೀ ದೇವಿಂದ್ರಪ್ಪ ಬಿರಾದಾರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ. , ದಿನಾಂಕ 30/10/2022 ರಂದು ಕಲಬುರಗಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿರಾಟ್ ಸಮಾವೇಶ ಹಮ್ಮಿಕೊಂಡಿದ್ದು, ಬಿಜೆಪಿ ಪಕ್ಷದ ಲೀಡರ್ ಮತ್ತು ಕಾರ್ಯಕರ್ತನಾದ ಭೀಮಾಶಂಕರ ತಂದೆ ಚಂದ್ರಶೇಖರ ಸೂಗುರ ವಯಸ್ಸು 24 ವರ್ಷ ಈತನು, ಫಿಯರ್ಾದಿಯವರ ಹತ್ತಿರ ಬಂದು ಸಮಾವೇಶಕ್ಕೆ ಕಲಬುರಗಿಗೆ ಹೋಗಲು ತಯಾರಾಗಲು ಹೇಳಿದ್ದು, ಆಗ ಫಿಯರ್ಾದಿ ಹೊಲದಲ್ಲಿ ಕೆಲಸವಿದೆ ಹತ್ತಿ ಬಿಡಿಸುವುದಕ್ಕೆ ಬಂದಿದೆ ಮೇಲಾಗಿ ಊರಲ್ಲಿ ಆಳು ಸಿಗ್ತಾಯಿಲ್ಲಾ ನಿವೇ ಹೋಗಿ ಬನ್ನಿ ಅಂತಾ ಹೇಳಿದೆನು. ಅದಕ್ಕೆ ಭೀಮಾಶಂಕರನು ಫಿಯರ್ಾದಿ ಜೊತೆ ಬಾಯಿ ಮಾತಿನ ತಕರಾರು ಮಾಡಿ ಹೋಗಿರುತ್ತಾನೆ. ದಿನಾಂಕ 01/11/2022 ರಂದು ಸಾಯಂಕಾಲ 7-00 ಗಂಟೆಗೆ, ಫಿಯರ್ಾದಿ ತಮ್ಮ ಮನೆಯ ಮುಂದಿನಿಂದ ನಡೆದುಕೊಂಡು ಗ್ರಾಮದ ದ್ಯಾವಮ್ಮಾಯಿ ಗುಡಿಯ ಕಡೆಗೆ ಹೋಗುತಿದ್ದಾಗ, ಬಿಜೆಪಿ ಲೀಡರ್ ಭೀಮಾಶಂಕರ ಮತ್ತು ಅವನ ತಂದೆ ಚಂದ್ರಶೇಖರ ಇಬ್ಬರೂ ಬಂದು, ತನೆಗೆ ತಡೆದು ಏಲೇ ದೇವಿಂದ್ರ್ಯಾ ನಿನೊಬ್ಬ ಬರಲಿಲ್ಲಾ ಅಂದ್ರೆ ಸಮಾವೇಶ ಏನು ನಿಲ್ಲುತ್ತದೇನು ಮಗನೆ ನಾವು ಹ್ಯಾಂಗ್ ಹೋಗಿ ಬಂದೇವು ಅಂತಾ ಅಂದು ಇಬ್ಬರೂ ಕೂಡಿ ಕೈಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಫಿಯರ್ಾದಿಯವರ ಸಾರಾಂಶದ ಮೇಲಿಂದ ಆರೋಪಿತರ ವಿರುದ್ಧ ಠಾಣೆ ಗುನ್ನೆ ನಂ. 190/2022 ಕಲಂ 341, 323, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತದೆ ಅಂತಾ ವಿನಂತಿ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 189/2022. ಕಲಂ. 279.337 338. ಐ.ಪಿ.ಸಿ.: ಇಂದು ದಿನಾಂಕ 02/11/2022 ರಮದು 12.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಇರಫಾನ್ ಪಾಷಾ ತಂದೆ ಅಬ್ದುಲ್ ಲತೀಫ್ ಎಲ್ ಬಿ ವ|| 36 ಜಾ|| ಮುಸ್ಲೀಂ ಉ|| ಕ್ಲೀನರ್ ಸಾ|| ಮನೆ ನಂಬರ 50 ಮೂರನೇ ರಸ್ತೆ ಮುಸ್ಲೀಂ ಬ್ಲಾಕ್ ಹಳೆಯ ಎಮ್ ಸಿ ರಸ್ತೆ ಆಜಾದ್ ನಗರ ಮಂಡ್ಯ ಇವರು ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನಮ್ಮ ಮಾವನವರಾದ ಮಹ್ಮದ್ ಹನೀಫ್ ತಂದೆ ಸಿರಾಜುಲ್ಲಾಖಾನ ಮಹ್ಮದೀಯಾ ಬ್ಲಾಕ್ ಗುತ್ತಲ್ ಕಾಲೋನಿ ಮಂಡ್ಯ ಇವರು ಸಫಿಯುಲ್ಲಾ ತಂದೆ ದಸ್ತಗೀರಸಾಬ ಸಾ|| ಮಂಡ್ಯ ಇವರ ಅಶೊಕ ಲೆಲ್ಯಾಂಡ್ ಲಾರಿ ನಂಬರ ಕೆಎ-35 ಎ-3369 ನೇದ್ದಕ್ಕೆ ಸುಮಾರು ಆರು ತಿಂಗಳಿನಿಂದ ಲಾರಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತಾರೆ. ಅವರ ಜೊತೆಯಲ್ಲಿ ಸದರಿ ಲಾರಿಗೆ ನಾನು ಕ್ಲೀನರ ಆಗಿ ಇದ್ದೆನು. ಹೀಗಿದ್ದು ದಿನಾಂಕ 29.10.2022 ರಂದು ನಮ್ಮ ಲಾರಿಯಲ್ಲಿ ಮಂಡ್ಯದಿಂದ ಎಳೆನೀರು ತುಂಬಿಕೊಂಡು ಕಲಬುಗರ್ಿಯಲ್ಲಿ ಖಾಲಿ ಮಾಡುವ ಕುರಿತು ನಮ್ಮ ಲಾರಿ ನಂಬರ ಕೆಎ-35 ಎ-3369 ನೇದ್ದನ್ನು ತೆಗೆದುಕೊಂಡು ಬರುತ್ತಿದ್ದಾಗ ದಿನಾಂಕ 30.10.2022 ರಂದು ಅಂದಾಜು ರಾತ್ರಿ 6.30 ಗಂಟೆಯ ಸುಮಾರಿಗೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ವಿಬೂತಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ನಮ್ಮ ಲಾರಿ ಚಾಲಕನಾದ ಮಹ್ಮದ್ ಹನೀಫ್ ತಂದೆ ಸಿರಾಜುಲ್ಲಾಖಾನ ಇವರು ಲಾರಿಯನ್ನು ಅತೀ ವೇಗದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರಿನಿಂದ ಒಂದು ಸರಕಾರಿ ಬಸ್ಸ ನೇದ್ದರ ಚಾಲಕನು ಸಹ ತನ್ನ ಬಸ್ಸನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ನಮ್ಮ ಲಾರಿ ಹಾಗು ಬಸ್ಸ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು ಸದರಿ ಅಪಘಾತದಲ್ಲಿ ನಮ್ಮ ಲಾರಿ ಚಾಲಕನಾದ ಮಹ್ಮದ್ ಹನೀಫ್ ತಂದೆ ಸಿರಾಜುಲ್ಲಾಖಾನ ಇವರಿಗೆ ತಲೆಯ ಮೇಲೆ ಹಾಗು ಹಣೆಗೆ ಹರಿದ ಗಾಯವಾಗಿದ್ದು ಅಲ್ಲದೇ ಬಲಗಾಲ ಬಲಗಾಲ ಪಾದದ ಮೇಲೆ ಹಾಗು ಎಡಗಾಲ ಪಾದಕ್ಕೆ ಭಾರೀ ರಕ್ತಗಾಯವಾಗಿ ಕಾಲು ಜಜ್ಜಿದಂತಾಗಿ ಎರಡು ಕಾಲುಗಳು ಮುರಿದಿದ್ದು ಇರುತ್ತದೆ. ಸದರ ಅಪಘಾತದಲ್ಲಿ ನನಗೆ ಯಾವದೇ ಗಾಯಗಳಾಗಿರುವದಿಲ್ಲ. ನಂತರ ನಮ್ಮ ಲಾರಿಗೆ ಅಪಘಾತ ಪಡಿಸಿದ ಬಸ್ಸ ನಂಬರ ನೋಡಲಾಗಿ ಕೆಎ-33 ಎಫ್-0286 ಅಂತ ಇದ್ದು ಅದರ ಚಾಲಕನ ಬಗ್ಗೆ ವಿಚಾರಿಸಲಾಗಿ ಮಹೇಶ ತಂದೆ ಬಾಬುರಾವ್ ಬಸ್ಸ ಡಿಪೋ ಶಹಾಪೂರ ಅಂತ ಗೊತ್ತಾಗಿದ್ದು ಆತನಿಗೂ ಸಹ ಎಡಗಾಲ ಹಿಮ್ಮಡಿಗೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಲಾರಿ ಹಾಗು ಬಸ್ಸ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಎರಡು ವಾಹನಗಳ ಮುಂದಿನ ಭಾಗ ಮೂತರ್ಿಯಾಗಿ ಜಖಂಗೊಂಡಿದ್ದು ಇರುತ್ತದೆ. ನಂತರ ನಮ್ಮ ಲಾರಿ ಚಾಲಕರಾದ ಮಹ್ಮದ್ ಹನೀಫ್ ತಂದೆ ಸಿರಾಜುಲ್ಲಾಖಾನ ಇವರ ಎರಡು ಕಾಲಿನಿಂದ ಭಾರೀ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಬಂದು ಉಪಚಾರ ಪಡಿಸಿ ವೈದ್ಯರು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಹೋಗಲು ತಿಳಿಸಿದ ಮೇರೆಗೆ ಅಂಬ್ಯುಲೆನ್ಸದಲ್ಲಿ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ಮನ್ನೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಸರಕಾರಿ ಬಸ್ಸ ನಂಬರ ಕೆಎ 33 ಎಫ್- 0286 ನೇದ್ದರ ಚಾಲಕ ಮಹೇಶ ತಂದೆ ಬಾಬುರಾವ್ ಹಾಗು ನಮ್ಮ ಲಾರಿ ಚಾಲಕ ಮಹ್ಮದ್ ಹನೀಫ್ ತಂದೆ ಸಿರಾಜುಲ್ಲಾಖಾನ ಇವರಿಬ್ಬರ ಅತೀ ವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಎರಡು ವಾಹನ ಚಾಲಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 189/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ: 143, 147, 148, 341, 323, 324, 504, 506 ಸಂ 149 ಐಪಿಸಿ: ಇಂದು ದಿನಾಂಕ:02.11.2022 ರಂದು 5:15 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ರಾಮನಗೌಡ ತಂದೆ ಭೀಮಣ್ಣ ತೆಳಗಿನಮನಿ ವ-36 ವರ್ಷ ಉ-ಒಕ್ಕಲುತನ ಜಾತಿ-ಹಿಂದೂ ಬೇಡರ ಸಾ-ಬೈಲಕುಂಟಿ ತಾ-ಹುಣಸಗಿ ಜಿ-ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಬಸವರಾಜ ಮತ್ತು ಕುಪೇಂದ್ರ ಅಂತ ಮೂರು ಜನ ಗಂಡು ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆಯಾಗಿರುತ್ತೇವೆ. ನಮ್ಮೂರ ದ್ಯಾಮವ್ವ ಗಂಡ ಬಾಲಗೌಡ ಪೊಲೀಸ್ಪಾಟೀಲ ರವರ ಆಸ್ತಿಯ ವಿಷಯದಲ್ಲಿ ಅವಳ ಮಕ್ಕಳಾಗಬೇಕಾದ ಬಸನಗೌಡ ಮತ್ತು ಅವರ ತಮ್ಮ ಹಣಮಗೌಡ ರವರ ಮಧ್ಯೆ ದ್ಯಾಮವ್ವ ಪೊಲೀಸ್ಪಾಟೀಲ ಇವರ ಆಸ್ತಿಯ ವಿಷಯದಲ್ಲಿ ತಕರಾರು ಇದ್ದು ಈ ಬಗ್ಗೆ ಮೊದಲು ತಮ್ಮ ಠಾಣೆಯಲ್ಲಿ ಕೇಸು ಆಗಿದ್ದು ಅದರ ಸಲುವಾಗಿ ನಾನು ಮತ್ತು ಬಸನಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ರವರು ಜೊತೆಗೆ ತಿರುಗಾಡುವದನ್ನು ಕಂಡು ಹಣಮಗೌಡ ಮತ್ತು ಅವನ ಸಂಬಂಧಿಕರಾದ ಬಾಲಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಹಾಗೂ ಬಸವಂತ್ರಾಯ ತಂದೆ ಶರಣಪ್ಪಗೌಡ ತೆಳಗಿನಮನಿ ರವರು ನನ್ನ ಮೇಲೆ ದ್ವೇಷ ಸಾಧಿಸುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 02.11.2022 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಬಸನಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ರವರು ಕೂಡಿ ನಮ್ಮ ಕೆಲಸದ ನಿಮಿತ್ಯ ಕೊಡೆಕಲ್ಲಕ್ಕೆ ಬರಬೇಕೆಂದು ನನ್ನ ಮೋಟರ್ ಸೈಕಲ್ ಮೇಲೆ ಬರುತ್ತಿರುವಾಗ ಬೊಮ್ಮಗುಡ್ಡ-ರಾಜನಕೊಳುರ ಮುಖ್ಯ ರಸ್ತೆಯ ಮೇಲೆ ರಾಜನಕೊಳೂರ ಗ್ರಾಮದ ಸಂಗನಗೌಡ ಪೊಲೀಸ್ಪಾಟೀಲ ರವರ ನಿಂಬೆ ತೋಟದ ಹತ್ತಿರ ನಾನು ನನ್ನ ಮೋಟರ್ ಸೈಕಲ್ನ್ನು ಸೈಡಿಗೆ ಹಾಕಿ ಪೋನ್ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಮ್ಮೂರ ನನ್ನ ಮೇಲೆ ದ್ವೇಷ ಸಾಧಿಸುತ್ತಾ ಬಂದಿದ್ದ 1) ಬಾಲಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ ಮತ್ತು 2) ಹಣಮಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ಮತ್ತು ನಮ್ಮೂರ ಅವರ ಸಂಬಂಧಿಕರಾದ 3) ಗೋಪಾಲಪ್ಪ ತಂದೆ ಭೀಮರಾಯ ಹರನಾಳ, 4) ಭಿಮರಾಯ ತಂದೆ ಗೋಪಾಲಪ್ಪ ಹರನಾಳ, 5) ಮದನಪ್ಪ ತಂದೆ ಹಣಮಂತ್ರಾಯ ಸಾಲೋಡಗಿ 6) ಶಿವಪ್ಪಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ 7) ದೊಡ್ಡಬಸನಗೌಡ ತಂದೆ ಕೃಷ್ಣಪ್ಪಗೌಡ ಪೊಲೀಸ್ಪಾಟೀಲ 8) ಬಸವಂತ್ರಾಯ ತಂದೆ ಶರಣಪ್ಪ ತೆಳಗಿನಮನಿ ರವರುಗಳು ತಮ್ಮ ಮೋಟರ್ ಸೈಕಲ್ ಮೇಲೆ ರಾಜನಕೊಳೂರದಿಂದ ಬೊಮ್ಮಗುಡ್ಡ ಕಡೆಗೆ ತಮ್ಮ ಗಾಡಿಗಳ ಮೇಲೆ ಬರುತ್ತಿರುವಾಗ ನನ್ನನ್ನು ನೋಡಿದವರೇ ತಮ್ಮ ಗಾಡಿಗಳನ್ನು ನಿಲ್ಲಿಸಿ ಎಲ್ಲರೂ ಕೂಡಿ ಗುಂಪಾಗಿ ನನ್ನ ಹತ್ತಿರ ಬಂದವರೇ ನನಗೆ ಲೇ ಸೂಳಿ ಮಗನೇ ಗೌಡ್ಯಾ ನನ್ನ ಅಣ್ಣ ಬಸನಗೌಡನ ಜಗಳದಲ್ಲಿ ಮಧ್ಯ ಬರುತ್ತಿಯಾ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಅವರಲ್ಲಿಯ ಹಣಮಗೌಡ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು, ಆಗ ಬಾಲಗೌಡನು ಈ ಸೂಳೆ ಮಗನದು ಬಾಳ ಆಗಿದೆ ನಮ್ಮ ಅಣ್ಣತಮ್ಮರ ಮಧ್ಯ ಜಗಳ ಹಚ್ಚುತ್ತಿಯಾ ಅಂತ ತನ್ನ ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದಿದ್ದು, ಗೋಪಾಲಪ್ಪ ಮತ್ತು ಆತನ ಮಗನಾದ ಭೀಮರಾಯ ಇಬ್ಬರೂ ಕೂಡಿ ನನಗೆ ತೆಕ್ಕೆಗೆ ಬಿದ್ದು ಹೊಟ್ಟೆ ಹಾಗೂ ತಲೆಯ ಮೇಲೆ ತಮ್ಮ ಕೈಯಿಂದ ಗುದ್ದಿ ಒಳಪೆಟ್ಟು ಮಾಡಿದ್ದು, ಮದನಪ್ಪ ಮತ್ತು ಶಿವಪ್ಪಗೌಡ ರವರು ನನಗೆ ಈ ಬೋಸಡಿ ಮಗಾ ಗೌಡ್ಯಾನದು ಬಾಳ ಆಗಿದೆ ಇವನಿಗೆ ಜೀವ ಸಹಿತ ಬಿಡಬೇಡಿರಿ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ದೊಡ್ಡಬಸನಗೌಡ ಹಾಗೂ ಬಸವಂತ್ರಾಯ ಇವರಿಬ್ಬರೂ ನನಗೆ ಏನಲೇ ಗೌಡ್ಯಾ ಮಗನೇ ಅಣ್ಣತಮ್ಮಂದಿರ ಮಧ್ಯೆ ಜಗಳ ಹಚ್ಚುತ್ತಿಯಾ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಇಬ್ಬರೂ ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿ ತಮ್ಮ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಎದೆಯ ಮೇಲೆ ಒದ್ದು ತುಳಿದು ಒಳಪೆಟ್ಟು ಮಾಡಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡುತ್ತಿರುವಾಗ ಅದೇ ರಸ್ತೆಯ ಮೇಲಿಂದ ನಮ್ಮೂರ ಕಡೆಗೆ ಬೈಕ್ ಮೇಲೆ ಹೊರಟಿದ್ದ ನಮ್ಮೂರ 1) ಪ್ರಭು ತಂದೆ ಹಣಮಂತ್ರಾಯ ಕೋಳಿಹಾಳ 2) ಪರಶುರಾಮ ತಂದೆ ಹುಲಗಪ್ಪ ದೊಡಮನಿ ಹಾಗೂ ನನ್ನ ಜೊತೆ ಇದ್ದ 3) ಬಸನಗೌಡ ತಂದೆ ಅಂಬ್ರಪ್ಪಗೌಡ ಪೊಲೀಸ್ಪಾಟೀಲ ರವರುಗಳು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಮೇಲೆ ನಮೂದಿಸಿದ ಎಂಟು ಜನರು ನನಗೆ ಬೋಸಡಿ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿದೀ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 08 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತ ಪಿಯರ್ಾದಿಯ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.69/2022 ಕಲಂ: 143, 147, 148, 341, 323, 324, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ:323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ:02.11.2022 ರಂದು 1:00 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ನಿಂಗಪ್ಪ ತಂದೆ ಬಾಲದಂಡಪ್ಪ ಗುಳಬಾಳ ವ:60 ವರ್ಷ ಜಾ:ಹಿಂದೂ ಬೇಡರ ಉ:ಒಕ್ಕಲುತನ ಸಾ:ಏದಲಬಾವಿ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 01.11.2022 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮತ್ತು ನನ್ನ ಮಗನಾದ ಸಾಬಣ್ಣ ರವರು ನಮ್ಮ ಹೊಟೇಲ್ದಲ್ಲಿದ್ದಾಗ ಹೊಸೂರಪೈದೊಡ್ಡಿ ಗ್ರಾಮದ 1) ಮಾನಪ್ಪ ತಂದೆ ಶಿವಪ್ಪ ಹೊಸೂರ ವ: 45 ಮತ್ತು ಆತನ ಮಕ್ಕಳಾದ 2) ನಂದಪ್ಪ ತಂದೆ ಮಾನಪ್ಪ ಹೊಸೂರ ವ:28 ಮತ್ತು 3) ಚಂದ್ರಶೇಖರ ತಂದೆ ಮಾನಪ್ಪ ಹೊಸೂರ ವ:20 ಹಾಗೂ ಮಾನಪ್ಪ ತಮ್ಮನಾದ 4) ಭೀಮಣ್ಣ ತಂದೆ ಶಿವಪ್ಪ ಹೊಸೂರ ವ:40 ರವರುಗಳು ನಮ್ಮ ಹೋಟೆಲ್ ಹತ್ತಿರ ಬಂದವರೇ ನನಗೆ ಸೂಳೆ ಮಗನೇ ನಿನ್ನದು ಬಹಳ ಆಗಿದೆ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಅಂದವರೆ, ಅವರಲ್ಲಿಯ 1) ಮಾನಪ್ಪ ತಂದೆ ಶಿವಪ್ಪ ಹೊಸೂರ ಇತನು ನನಗೆ ಲೇ ನಿಂಗ್ಯಾ ಸೂಳಿ ಮಗನೇ ನಮ್ಮ ಖುಲ್ಲಾ ಜಾಗೆಯಲ್ಲಿ ಯಾಕೆ ಶೆಡ್ ಹಾಕಿ ಅಂತ ಅಂದವನೇ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಸೊಂಟದ ಮೇಲೆ ಮತ್ತು ಡುಬ್ಬದ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ನಂತರ ಮಾನಪ್ಪನ ಮಗನಾದ ಚಂದ್ರಶೇಖರ ಇತನು ನನ್ನ ಬಲಗಾಲ ತೊಡೆಗೆ ತನ್ನ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದ್ದು, ನಂದಪ್ಪ ಇತನು ತನ್ನ ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದಿದ್ದು ಆಗ ಭೀಮಣ್ಣ ಇತನು ನನಗೆ ಈ ಸೂಳಿ ಮಗನದು ಬಾಳ ಆಗಿದೆ ಅಂತ ತನ್ನ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು ಆಗ ನನ್ನ ಮಗನಾದ ಸಾಬಣ್ಣನು ಬಡಿಸಲಿಕ್ಕೆ ಬಂದಾಗ ಅವರೆಲ್ಲರೂ ನನ್ನ ಮಗನಿಗೆ ಏನಲೇ ರಂಡಿ ಮಗನೇ ಬಿಡಿಸಲಿಕ್ಕೆ ಬಂದಿಯಾ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡ ಹತ್ತಿದಾಗ ಅಲ್ಲಿಯೇ ನಮ್ಮ ಹೋಟೆಲ್ ಹತ್ತಿರ ಇದ್ದ ನಮ್ಮೂರ 1) ಭೀಮನಗೌಡ ತಂದೆ ಹಣಮಂತ್ರಾಯಗೌಡ ಪೊಲೀಸ್ಪಾಟೀಲ 2) ಹುಲಗಪ್ಪ ತಂದೆ ಅಯ್ಯಪ್ಪ ಗುರಿಕಾರ 3) ನಂದಪ್ಪ ತಂದೆ ಬಸಪ್ಪ ಹರಿಜನ 4) ಭೀಮಣ್ಣ ತಂದೆ ಹುಲಗಪ್ಪ ಗುಳಬಾಳ ರವರುಗಳು ನೋಡಿ ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ನಮಗೆ ಸೂಳಿ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಇನ್ನೊಂದು ಸಲ ಈ ಜಾಗದಲ್ಲಿ ಶೆಡ್ ಹಾಕಿದರೆೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಂತರ ನಾನು ಈ ಬಗ್ಗೆ ನಮ್ಮ ಮನೆಯಲ್ಲಿ ಮತ್ತು ಊರ ಹಿರಿಯರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ಈ ಜಗಳದಲ್ಲಿ ನನಗೆ ಒಳಪೆಟ್ಟುಗಳಾಗಿದ್ದು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಮತ್ತು ನನಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:68/2022 ಕಲಂ: 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ: 341, 323, 504, 506, 109 ಸಂ 34 ಐಪಿಸಿ: ಇಂದು ದಿ: 02/11/2022 ರಂದು 12 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಬಾಬು ತಂದೆ ಷಣ್ಮ್ಮುಖಪ್ಪ ರಾಠೋಡ ವಯಾ|| 40 ಜಾ|| ಲಂಬಾಣಿ ಉ|| ಗೌಂಡಿಕೆಲಸ ಸಾ|| ಹುಣಸಗಿ ತಾಂಡಾ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ಜಮೀನು ಸವರ್ೇ ನಂ 215 ವಿಸ್ತೀರ್ಣ 1 ಎಕರೆ ವಿಷಯದಲ್ಲಿ ನಮಗು ಮತ್ತು ನಮ್ಮೂರಿನ ಸುಬಾಶ್ಚಂದ್ರ ತಂದೆ ಶಾಂತವೀರಪ್ಪ ಇವರ ಮದ್ಯ ಕೋಟರ್ಿನಲ್ಲಿ ಸಿವಿಲ್ ವ್ಯಾಜ್ಯ ನಡೆದಿದ್ದು, ಕೋರ್ಟ ಒಎಸ್ ನಂ. 356/2018 ನೇದ್ದರ ಸಾಕ್ಷಿ ವಿಚಾರಣೆ ಕುರಿತು ದಿನಾಂಕ: 21/10/2022 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಕಾಕನಾದ ತಿಪ್ಪಣ್ಣ, ನಮ್ಮ ಕಾಕನ ಮಗನಾದ ಲಾಲು ತಂದೆ ಗೋಪಿಲಾಲ ರಾಠೋಡ ಮೂವರು ಕೂಡಿಕೊಂಡು ಸುರಪುರ ನ್ಯಾಯಾಲಯಕ್ಕೆ ಬಂದಿದ್ದೆವು. ಆಗ ಕೋಟರ್ಿನಲ್ಲಿ ಯಾರೋ ವಕೀಲರು ತೀರಿಕೊಂಡಿರುತ್ತಾರೆ ಅಂತ ಕಾರ್ಯಕಲಾಪಗಳು ಇರದ ಕಾರಣ ಮುಂದಿನ ಮುದ್ದತ್ತು ತಿಳಿಸುತ್ತೇನೆ ಅಂತ ನಮ್ಮ ವಕೀಲರು ಹೇಳಿದ್ದರಿಂದ ನಾವು ಮದ್ಯಾಹ್ನ 12.55 ಗಂಟೆ ಸುಮಾರಿಗೆ ಲಕ್ಷ್ಮೀ ಗುಡಿ ಹತ್ತಿರ ಇದ್ದಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ನಮ್ಮಲ್ಲಿಗೆ ಬಂದು ನನಗೆ ತಡೆದು ಆ ಮೂರು ಜನರು ಡಾಕ್ಟರ ಸುಬಾಶ್ಚಂದ್ರ ಇವರ ಮೇಲೆ ಕೇಸ್ ಮಾಡತೀರೆನಲೆ ಮಗನೆ ಅಂತ ನನ್ನ ಸಂಗಡ ತಕರಾರು ಮಾಡಿ ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅವರು ಯಾರೂ ನನಗೆ ಪರಿಚಯ ಇರುವದಿಲ್ಲ. ಡಾಕ್ಟರ ಸುಬಾಶ್ಚಂದ್ರ ಈತನು ಕೋರ್ಟ ಕೇಸ್ ವಾಪಸ್ ತೆಗೆದುಕೊಳ್ಳಬಹುದು ಅಂತ ಬೇರೆಯವರಿಗೆ ಪ್ರಚೋದನೆ ನೀಡಿ ನಮ್ಮ ಸಂಗಡ ಜಗಳ ಮಾಡಲು ಕಳುಹಿಸಿಕೊಟ್ಟಿರಬಹುದು ಅಂತ ಸಂಶಯವಿದ್ದು, ಈ ಬಗ್ಗೆ ನಾವು ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಸೂಕ್ತ ಕ್ರಮ ಕೈಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕು ಅಂತ ವಿನಂತಿ. ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 142/2022 ಕಲಂ: 341, 323, 504, 506, 109 ಐಪಿಸಿ ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡೆನು.

Last Updated: 03-11-2022 10:48 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080